ಸಸ್ಯಾಹಾರಿಗಳು

ಸಸ್ಯಾಹಾರಿ ಪ್ರಾಣಿಗಳು ಅಂಗರಚನಾರೀತ್ಯ ಮತ್ತು ಶಾರೀರಿಕವಾಗಿ ಸಸ್ಯದ ಎಲೆಗಳನ್ನು ತಿಂದು ಜೀವಿಸಲು ಹೊಂದಿಕೊಂಡಿವೆ.

ತಮ್ಮ ಸಸ್ಯಾಹಾರದ ಪರಿಣಾಮವಾಗಿ, ಸಸ್ಯಾಹಾರಿ ಪ್ರಾಣಿಗಳು ಸಾಮಾನ್ಯವಾಗಿ ಅರದಂತೆ ಉಜ್ಜಲು ಅಥವಾ ರುಬ್ಬಲು ಅಳವಡಿಕೆಯಾಗಿರುವ ಬಾಯಿಯ ಭಾಗಗಳನ್ನು ಹೊಂದಿವೆ. ಕುದುರೆಗಳು ಮತ್ತು ಇತರ ಸಸ್ಯಾಹಾರಿಗಳು ಹುಲ್ಲು, ಮರದ ತೊಗಟೆ, ಮತ್ತು ಇತರ ಕಠಿಣ ಸಸ್ಯ ವಸ್ತುಗಳನ್ನು ರುಬ್ಬಲು ಹೊಂದಿಕೊಂಡಿರುವ ವ್ಯಾಪಕ ಚಪ್ಪಟೆ ಹಲ್ಲುಗಳನ್ನು ಹೊಂದಿವೆ.

ಸಸ್ಯಾಹಾರಿಗಳು
ಸಸ್ಯಾಹಾರಿ ಜಿಂಕೆಗಳು.

ವ್ಯಾಖ್ಯಾನ ಮತ್ತು ಸಂಬಂಧಿಸಿದ ಶಬ್ದಗಳು

ಸಸ್ಯಹಾರಿ ಜೀವಿಗಳು ಪ್ರಮುಖವಾಗಿ ಸಸ್ಯಗಳು ತಯಾರಿಸಿದ ಆಹಾರವನ್ನು ತಿನ್ನುತ್ತವೆ. ಇವು ಸಸ್ಯಗಳು, ಪಾಚಿ, ದ್ಯುತಿಸಂಶ್ಲೇಷಣೆ ಮಾಡುವ ಬ್ಯಾಕ್ಟೀರಿಯಾದಂತಹ ಸ್ವಯಂಪೋಷಕಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ ಸಸ್ಯಗಳನ್ನು ತಿನ್ನುವ ಪ್ರಾಣಿಗಳಿಗೆ ಪ್ರಾಥಮಿಕ ವ್ಯಯಕಾರಿಗಳು ಎಂದು ಕರೆಯಲಾಗುತ್ತದೆ. ಜೀವಂತ ಸಸ್ಯಗಳು ತಿನ್ನುವ ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ಪ್ರೋಟಿಸ್ಟ್‌ಗಳನ್ನು ಸಾಮಾನ್ಯವಾಗಿ ಸಸ್ಯಗಳ ರೋಗಕಾರಕಗಳು (ಸಸ್ಯ ರೋಗಗಳು) ಎಂದು ಕರೆಯಲಾಗುತ್ತದೆ ಮತ್ತು ಸತ್ತ ಸಸ್ಯಗಳನ್ನು ತಿನ್ನುವ ಸೂಕ್ಷ್ಮಜೀವಿಗಳನ್ನು ಮೃತಪೋಷಕಗಳು ಎನ್ನುತ್ತಾರೆ. ಇತರ ಸಸ್ಯಗಳ ದೇಹದಿಂದ ಪೋಷಣೆ ಪಡೆಯುವ ಹೂಬಿಡುವ ಸಸ್ಯಗಳನ್ನು ಸಾಮಾನ್ಯವಾಗಿ ಪರಾವಲಂಬಿ ಸಸ್ಯಗಳು ಎಂದು ಕರೆಯಲಾಗುತ್ತದೆ. ಅನುಭೋಗದಲ್ಲಿ ಯಾವುದೇ ಪ್ರತ್ಯೇಕ ನಿರ್ಣಾಯಕ ಪರಿಸರ ವಿಜ್ಞಾನದ ವರ್ಗೀಕರಣ ಇಲ್ಲ. ಪ್ರತಿ ಪಠ್ಯಪುಸ್ತಕ ಈ ವಿಷಯದ ಮೇಲೆ ತನ್ನದೇ ವ್ಯತ್ಯಾಸಗಳನ್ನು ಹೊಂದಿದೆ.

ಸಸ್ಯಾಹಾರಿಗಳ ವಿಕಾಸ

ಭೂವಿಜ್ಞಾನ ಕಾಲದಲ್ಲಿ ಸಸ್ಯಾಹಾರಿಗಳ ಬಗ್ಗೆ ತಿಳಿವಳಿಕೆ ಮೂರು ಮೂಲಗಳಿಂದ ದೊರೆಯುತ್ತದೆ: ಪಳೆಯುಳಿಕೆಯಾದ ಸಸ್ಯಗಳು (ಇವು ರಕ್ಷಣೆಯ (ಉದಾಹರಣೆಗೆ ಮುಳ್ಳುಗಳು) ಅಥವಾ ಸಸ್ಯಾಹಾರ ಸಂಬಂಧಿತ ಹಾನಿಯ ಸಾಕ್ಷ್ಯಗಳನ್ನು ಸಂರಕ್ಷಿಸಿಕೊಂಡಿರಬಹುದು); ಪಳೆಯುಳಿಕೆಯಾದ ಪ್ರಾಣಿ ಮಲದಲ್ಲಿ ಸಸ್ಯ ಅವಶೇಷಗಳ ವೀಕ್ಷಣೆ; ಮತ್ತು ಸಸ್ಯಾಹಾರಿ ಬಾಯಿ ಭಾಗಗಳ ನಿರ್ಮಾಣದಿಂದ.

ಸಸ್ಯಾಹಾರವು ಮೀಸೋಜ಼ೋಯಿಕ್ ವಿದ್ಯಮಾನವೆಂದು ದೀರ್ಘಕಾಲದಿಂದ ಭಾವಿಸಲಾಗಿತ್ತಾದರೂ, ಮೊದಲ ಭೂ ಸಸ್ಯಗಳ ವಿಕಸನದ ನಂತರ ಇಪತ್ತು ದಶಲಕ್ಷ ವರ್ಷಗಳಿಗಿಂತ ಕಡಿಮೆ ಸಮಯದಲ್ಲಿ ಸಂಧಿಪದಿಗಳು ಸಸ್ಯಗಳನ್ನು ಸೇವಿಸುತ್ತಿದ್ದವು ಎಂದು ಪಳೆಯುಳಿಕೆಗಳು ತೋರಿಸಿಕೊಟ್ಟಿವೆ. ಮುಂಚಿನ ಡಿವೋನಿಯನ್ ಸಸ್ಯಗಳ ಬೀಜಕಗಳನ್ನು ಕೀಟಗಳು ಸೇವಿಸುತ್ತಿದ್ದವು ಮತ್ತು ಜೀವಿಗಳು "ಚುಚ್ಚಿ ಹೀರು" ತಂತ್ರವನ್ನು ಬಳಸಿ ಸಸ್ಯಗಳನ್ನು ಸೇವಿಸುತ್ತಿದ್ದವು ಎಂಬುದಕ್ಕೆ ರೈನಿ ಚೆರ್ಟ್ ಸಾಕ್ಷ್ಯವನ್ನು ಒದಗಿಸುತ್ತದೆ.

ಸಸ್ಯಾಹಾರಿಗಳು 
ಕೀಟ ಸಸ್ಯಾಹಾರಿತ್ವದ ಸಾಕ್ಷ್ಯವನ್ನು ನೀಡುವ ಒಂದು ಪಳೆಯುಳಿಕೆ ವೈಬರ್ನಮ್ ಲೆಸ್ಕರೂ ಎಲೆ

ಮುಂದಿನ 75 ದಶಲಕ್ಷ ವರ್ಷಗಳ ಅವಧಿಯಲ್ಲಿ, ಸಸ್ಯಗಳು ಬೇರುಗಳು ಮತ್ತು ಬೀಜಗಳಂತಹ ಹೆಚ್ಚು ಸಂಕೀರ್ಣ ಅಂಗಗಳ ಸಮೂಹವನ್ನು ವಿಕಸಿಸಿಕೊಂಡವು. ಮಧ್ಯ-ಅಂತ್ಯ ಮಿಸ್ಸಿಸ್ಸಿಪ್ಪಿಯನ್ ಕಲ್ಪದವರೆಗೆ, ಅಂದರೆ 330.9 ಮಿಲಿಯನ್ ವರ್ಷಗಳ ಹಿಂದಿನವರೆಗೆ, ಯಾವುದೇ ಜೀವಿಯನ್ನು ಆಹಾರವಾಗಿ ಸೇವಿಸಿದ್ದಕ್ಕೆ ಯಾವುದೇ ಪುರಾವೆ ಇಲ್ಲ. ಪ್ರತಿ ಅಂಗ ವಿಕಸನಗೊಂಡ ಸಮಯ ಮತ್ತು ಅವುಗಳನ್ನು ಸೇವಿಸಲು ವಿಕಸನಗೊಳ್ಳಲು ಜೀವಿಗಳಿಗೆ ಬೇಕಾದ ಸಮಯದ ನಡುವೆ 50 ರಿಂದ 100 ದಶಲಕ್ಷ ವರ್ಷಗಳ ಅಂತರವಿತ್ತು; ಈ ಅವಧಿಯಲ್ಲಿ ಆಮ್ಲಜನಕ ಕಡಿಮೆ ಮಟ್ಟದಲ್ಲಿ ಇದ್ದದ್ದು ಕಾರಣವಿರಬಹುದು. ಇದು ವಿಕಸನವನ್ನು ತಡೆಹಿಡಿದಿರಬಹುದು. ಅವುಗಳ ಸಂಧಿಪದಿ ಸ್ಥಾನಮಾನಕ್ಕಿಂತ ಹೆಚ್ಚಾಗಿ, ಈ ಆರಂಭಿಕ ಸಸ್ಯಾಹಾರಿಗಳ ಗುರುತು ಅನಿಶ್ಚಿತವಾಗಿದೆ. ಆರಂಭಿಕ ಪರ್ಮಿಯನ್ ಕಲ್ಪದಲ್ಲಿ ರಂಧ್ರ ಸೇವನೆ ಮತ್ತು ಎಲುಬುಗೂಡನ್ನಾಗಿಸುವ ಪ್ರಕ್ರಿಯೆ ದಾಖಲಿತವಾಗಿದೆ. ಮೇಲ್ಮೈ ದ್ರವ ಸೇವನೆ ಆ ಅವಧಿಯ ಅಂತ್ಯದಲ್ಲಿ ವಿಕಸನವಾಯಿತು.

ಚತುಷ್ಪಾದಿಗಳಲ್ಲಿ, ಅಂದರೆ ನಾಲ್ಕು ಅವಯವಗಳುಳ್ಳ ಭೂಮಿಜ ಕಶೇರುಕಗಳಲ್ಲಿ, ಸಸ್ಯಾಹಾರಿತ್ವವು ಅರ್ವಾಚೀನ ಕಾರ್ಬೋನಿಫೆರೆಸ್ ಅವಧಿಯಲ್ಲಿ ಅಭಿವೃದ್ಧಿಯಾಯಿತು (೩೦೭ - ೨೯೯ ಮಿಲಿಯನ್ ವರ್ಷಗಳ ಹಿಂದೆ). ಆರಂಭಿಕ ಚತುಷ್ಪಾದಿಗಳು ದೊಡ್ಡ ಉಭಯಚರ ಮತ್ಸ್ಯಾಹಾರಿಗಳಾಗಿದ್ದವು. ಉಭಯಚರಗಳು ಮೀನು ಮತ್ತು ಕೀಟಗಳನ್ನು ತಿನ್ನುವುದು ಮುಂದುವರೆದಿತ್ತು. ಕೆಲವು ಸರೀಸೃಪಗಳು ಚತುಷ್ಪಾದಿಗಳು (ಮಾಂಸಹಾರಿತ್ವ) ಮತ್ತು ಸಸ್ಯಗಳು (ಸಸ್ಯಾಹಾರಿತ್ವ), ಈ ಎರಡು ಆಹಾರ ಬಗೆಗಳನ್ನು ತಿನ್ನಲು ಪ್ರಾರಂಭಿಸಿದವು. ಮಧ್ಯಮ ಮತ್ತು ದೊಡ್ಡ ಚತುಷ್ಪಾದಿಗಳಿಗೆ ಕೀಟಾಹಾರಿತ್ವದಿಂದ ಮಾಂಸಾಹಾರಿತ್ವವು ಸ್ವಾಭಾವಿಕ ಪರಿವರ್ತನೆಯಾಗಿತ್ತು. ಇದಕ್ಕೆ ಕನಿಷ್ಠ ರೂಪಾಂತರ ಬೇಕಾಗಿತ್ತು. ಇದಕ್ಕೆ ವಿರುಧ್ದವಾಗಿ, ಬಹಳವಾಗಿ ನಾರಿನಂಶವುಳ್ಳ ಸಸ್ಯ ವಸ್ತುಗಳನ್ನು ತಿನ್ನಲು ಹೊಂದಿಕೆಗಳ ಸಂಕೀರ್ಣವಾದ ಸಮೂಹ ಅಗತ್ಯವಾಗಿತ್ತು.

ಸಂಧಿಪದಿಗಳು ಸಸ್ಯಾಹಾರಿತ್ವವನ್ನು ನಾಲ್ಕು ಹಂತಗಳಲ್ಲಿ ವಿಕಸಿಸಿಕೊಂಡವು. ಬದಲಾಗುವ ಸಸ್ಯ ಸಮುದಾಯಗಳಿಗೆ ಪ್ರತಿಕ್ರಿಯೆಯಾಗಿ ಅದಕ್ಕೆ ತಮ್ಮ ಮಾರ್ಗವನ್ನು ಬದಲಿಸಿಕೊಂಡವು. ಸಸ್ಯಾಹಾರಿ ಚತುಷ್ಪಾದಿಗಳು ತಮ್ಮ ದವಡೆಗಳ ಪಳೆಯುಳಿಕೆ ದಾಖಲೆಗಳಲ್ಲಿ ಸರಿಸುಮಾರು ೩೦೦ ದಶಲಕ್ಷ ವರ್ಷಗಳ ಹಿಂದೆ, ಪರ್ಮಿಯೋ- ಕಾರ್ಬೋನಿಫೆರಸ್ ಗಡಿಯ ಹತ್ತಿರ ಮೊದಲು ಕಾಣಿಸಿಕೊಂಡವು. ಮೇಲಿನ ದವಡೆಯ ಹಲ್ಲುಗಳು ಕೆಳಗಿನ ದವಡೆಯ ಹಲ್ಲುಗಳ ಸಂಪರ್ಕಕ್ಕೆ ಬರುವ ಪ್ರಕ್ರಿಯೆ, ಅಂದರೆ ದಂತ ಮುಚ್ಚುವಿಕೆಯು ಅವುಗಳ ಸಸ್ಯಾಹಾರಿತ್ವದ ಅತ್ಯಂತ ಆರಂಭದ ಸಾಕ್ಷ್ಯ ಎನ್ನಲಾಗಿದೆ. ದಂತ ಮುಚ್ಚುವಿಕೆಯ ವಿಕಸನವು ಸಸ್ಯ ಆಹಾರ ಸಂಸ್ಕರಣದಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಯಿತು. ಇದು ಹಲ್ಲು ಸವೆತದ ಮಾದರಿಗಳನ್ನು ಆಧರಿಸಿದ ಸೇವನೆಯ ಕಾರ್ಯತಂತ್ರಗಳ ಬಗ್ಗೆ ಸಾಕ್ಷ್ಯವನ್ನು ಒದಗಿಸುತ್ತದೆ. ಹಲ್ಲು ಮತ್ತು ದವಡೆಯ ರೂಪವಿಜ್ಞಾನದ ಜಾತಿವಿಕಾಸ ಚೌಕಟ್ಟುಗಳ ಪರೀಕ್ಷೆಯು ಬಹಿರಂಗಪಡಿಸಿದ್ದೇನೆಂದರೆ ಸಸ್ಯಾಹಾರಿ ಚತುಷ್ಪಾದಿಗಳ ಹಲವು ವಂಶಾವಳಿಗಳಲ್ಲಿ ದಂತ ಮುಚ್ಚುವಿಕೆಯು ಸ್ವತಂತ್ರವಾಗಿ ಅಭಿವೃದ್ಧಿಯಾಯಿತು. ಈ ವಿಕಾಸ ಮತ್ತು ಹರಡುವಿಕೆ ವಿವಿಧ ವಂಶಾವಳಿಗಳೊಳಗೆ ಏಕಕಾಲದಲ್ಲಿ ಸಂಭವಿಸಿತು ಎಂದು ಇದು ಸೂಚಿಸುತ್ತದೆ.

ಆಹಾರ ಸರಪಳಿ

ಆಹಾರಿ ಸರಪಳಿಯಲ್ಲಿ ಸಸ್ಯಾಹಾರಿಗಳು ಪ್ರಮುಖ ಕೊಂಡಿಯನ್ನು ರೂಪಿಸುತ್ತವೆ ಏಕೆಂದರೆ ಅವು ಸಸ್ಯಗಳು ದ್ಯುತಿ ಸಂಶ್ಲೇಷಣೆ ಮೂಲಕ ಉತ್ಪಾದಿಸಿದ ಕಾರ್ಬೋಹೈಡ್ರೇಟ್‍ಗಳನ್ನು ಜೀರ್ಣಿಸಲು ಸಸ್ಯಗಳನ್ನು ಸೇವಿಸುತ್ತವೆ. ಪ್ರತಿಯಾಗಿ, ಇದೇ ಕಾರಣಕ್ಕಾಗಿ ಮಾಂಸಾಹಾರಿಗಳು ಸಸ್ಯಾಹಾರಿಗಳನ್ನು ತಿನ್ನುತ್ತವೆ. ಸರ್ವಭಕ್ಷಕಗಳು ತಮ್ಮ ಪೋಷಕಾಂಶಗಳನ್ನು ಸಸ್ಯಗಳು ಅಥವಾ ಪ್ರಾಣಿಗಳಿಂದ ಪಡೆಯಬಲ್ಲವು.

ಸೇವನೆಯ ತಂತ್ರಗಳು

ಸಸ್ಯಾಹಾರಿಗಳ ಎರಡು ಸೇವನೆಯ ತಂತ್ರಗಳೆಂದರೆ ಮೇಯುವುದು (ಉದಾ. ಹಸುಗಳು) ಮತ್ತು ಕಿತ್ತು ತಿನ್ನುವುದು (ಉದಾ. ಮೂಸ್). ಆದರೂ ಸೇವನೆಯ ತಂತ್ರದ ನಿಖರವಾದ ಅರ್ಥ ಬರಹಗಾರರ ಮೇಲೆ ಅವಲಂಬಿಸಿರುತ್ತದೆ. ಅನೇಕ ಲೇಖಕರು ಒಪ್ಪುವುದೇನೆಂದರೆ ಮೇಯುವ ಪ್ರಾಣಿಯ ಗ್ರಾಸ ಕನಿಷ್ಠ ಪಕ್ಷ ೯೦% ಹುಲ್ಲಾಗಿರಬೇಕು ಮತ್ತು ಕಿತ್ತು ತಿನ್ನುವ ಪ್ರಾಣಿಯ ಗ್ರಾಸ ಕನಿಷ್ಠ ಪಕ್ಷ ೯೦% ಮರದ ಎಲೆಗಳು ಮತ್ತು ಸಣ್ಣ ರೆಂಬೆಗಳಾಗಿರಬೇಕು. ನಡುವಿನ ಸೇವನೆಯ ತಂತ್ರವನ್ನು ಮಿಶ್ರ-ಸೇವನೆ ಎಂದು ಕರೆಯಲಾಗುತ್ತದೆ. ಮೇವಿನಿಂದ ಶಕ್ತಿ ಪಡೆಯಲು ತಮ್ಮ ದಿನದ ಅಗತ್ಯತೆಯಲ್ಲಿ ಭಿನ್ನ ದೇಹ ರಾಶಿಯ ಸಸ್ಯಾಹಾರಿಗಳು ತಮ್ಮ ಆಹಾರವನ್ನು ಆರಿಸಿಕೊಳ್ಳುವಲ್ಲಿ ಆಯ್ಕೆ ಮಾಡಬಹುದು. ಋತು ಅಥವಾ ಆಹಾರ ಲಭ್ಯತೆಯನ್ನು ಅವಲಂಬಿಸಿ ಸಸ್ಯಾಹಾರಿಗಳು ತಮ್ಮ ಆಹಾರದ ಮೂಲವನ್ನು ಆಯ್ದುಕೊಳ್ಳಬಹುದು. ಅದರಲ್ಲಿ ಸಹ ಅವುಗಳು ಮೊದಲು ಉತ್ತಮ ಗುಣಮಟ್ಟದ ಮೇವನ್ನು ಸೇವಿಸುತ್ತವೆ ನಂತರ ಕಡಿಮೆ ಗುಣಮಟ್ಟದ ಮೇವನ್ನು ಸೇವಿಸುತ್ತವೆ. ಸಸ್ಯಾಹಾರಿಗಳು ಮತ್ತು ಅವುಗಳ ಆಹಾರದ ನಡುವೆ ಸಂಬಂಧವನ್ನು ತಿಳಿದುಕೊಳ್ಳಲು ಹಲವಾರು ಸಿದ್ಧಾಂತಗಳನ್ನು ನಿರೂಪಿಸಲಾಗಿದೆ. ಅವುಗಳೆಂದರೆ ಕ್ಲೀಬರ್‌ನ ನಿಯಮ, ಹಾಲಿಂಗ್‍ನ ಡಿಸ್ಕ್ ಈಕ್ವೇಶನ್ ಮತ್ತು ಮಾರ್ಜಿನಲ್ ವ್ಯಾಲ್ಯು ಪ್ರಮೇಯ.

ಕ್ಲೀಬರ್ಸ್ ನಿಯಮವು ಪ್ರಾಣಿಯ ಗಾತ್ರ ಮತ್ತು ಅದರ ಸೇವನೆಯ ತಂತ್ರದ ನಡುವಿನ ಸಂಬಂಧವನ್ನು ವಿವರಿಸುತ್ತದೆ. ಅಂದರೆ ದೊಡ್ಡ ಪ್ರಾಣಿಗಳು ತಲಾ ಏಕಮಾನ ತೂಕಕ್ಕೆ ಕಡಿಮೆ ಆಹಾರವನ್ನು ಸೇವಿಸಬೇಕಾಗುತ್ತದೆ ಹಾಗೂ ಸಣ್ಣ ಪ್ರಾಣಿಗಳು ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕಾಗುತ್ತದೆ.

ಸಸ್ಯಾಹಾರಿಗಳು ನಾನಾತರಹದ ಸೇವನೆಯ ತಂತ್ರಗಳನ್ನು ಬಳಸಿಕೊಳ್ಳುತ್ತವೆ. ಎಲ್ಲ ಸಸ್ಯಹಾರಿಗಳು ಒಂದೇ ತಂತ್ರವನ್ನು ಪಾಲಿಸುವುದಿಲ್ಲ. ಅವುಗಳು ಬೇರೆ ಬೇರೆ ತರಹದ ಸೇವನೆಯ ತಂತ್ರವನ್ನು ಬಳಸಿಕೊಂಡು ಎಲ್ಲ ತರಹದ ಸಸ್ಯಗಳನ್ನು ತಿನ್ನುತ್ತವೆ.

ಸೇವನೆಯ ಕಾರ್ಯತಂತ್ರ ಆಹಾರ ಉದಾಹರಣೆಗಳು
ಆಲ್ಗಿವೋರ್‌‍ಗಳು ಪಾಚಿ ಸಮುದ್ರ ಮೃದ್ವಂಗಿ
ನೆಕ್ಟರಿವೋರ್‌ಗಳು ಮಕರಂದ ಜೇನು ಪಾಸಮ್‍ಗಳು
ಪಾಲಿನಿವೋರ್‌ಗಳು ಪರಾಗ ಜೇನುಹುಳುಗಳು

ಸಸ್ಯಗಳು ಪ್ರದರ್ಶಿಸುವ ಅಸಂಖ್ಯಾತ ರಕ್ಷಣಾ ಸಾಧನಗಳು ಹೇಳುವುದೇನೆಂದರೆ ಈ ರಕ್ಷಣಾ ಸಾಧನಗಳನ್ನು ಜಯಿಸಿ ಆಹಾರವನ್ನು ಪಡೆಯಲು ಅವುಗಳ ಸಸ್ಯಾಹಾರಿಗಳಿಗೆ ವಿವಿಧ ಕೌಶಲಗಳು ಬೇಕಾಗುತ್ತದೆ. ಇವು ತಮ್ಮ ಸೇವನೆಯನ್ನು ಮತ್ತು ಆತಿಥೇಯ ಸಸ್ಯದ ಬಳಕೆಯನ್ನು ಹೆಚ್ಚಿಸಲು ಸಸ್ಯಾಹಾರಿಗಳಿಗೆ ಅನುವು ಮಾಡಿಕೊಡುತ್ತದೆ.

ಉಲ್ಲೇಖಗಳು

Tags:

ಸಸ್ಯಾಹಾರಿಗಳು ವ್ಯಾಖ್ಯಾನ ಮತ್ತು ಸಂಬಂಧಿಸಿದ ಶಬ್ದಗಳುಸಸ್ಯಾಹಾರಿಗಳು ಸಸ್ಯಾಹಾರಿಗಳ ವಿಕಾಸಸಸ್ಯಾಹಾರಿಗಳು ಆಹಾರ ಸರಪಳಿಸಸ್ಯಾಹಾರಿಗಳು ಸೇವನೆಯ ತಂತ್ರಗಳುಸಸ್ಯಾಹಾರಿಗಳು ಉಲ್ಲೇಖಗಳುಸಸ್ಯಾಹಾರಿಗಳುಎಲೆಕುದುರೆತೊಗಟೆಪೊಯೇಸಿಯಿಪ್ರಾಣಿಮರಸಸ್ಯಹಲ್ಲು

🔥 Trending searches on Wiki ಕನ್ನಡ:

ದೀಪಾವಳಿಗಿರೀಶ್ ಕಾರ್ನಾಡ್ದೇವರ ದಾಸಿಮಯ್ಯಬೌದ್ಧ ಧರ್ಮಮಹಾಕವಿ ರನ್ನನ ಗದಾಯುದ್ಧಸ್ಟಾರ್‌ಬಕ್ಸ್‌‌ಪ್ರಾಥಮಿಕ ಶಾಲೆಹಳೇಬೀಡುತೆಂಗಿನಕಾಯಿ ಮರಭಾರತದ ರಾಷ್ಟ್ರೀಯ ಉದ್ಯಾನಗಳುಚಂದ್ರಶೇಖರ ಕಂಬಾರಕೂಡಲ ಸಂಗಮಭೂತಾರಾಧನೆಕೆಂಪು ಕೋಟೆಬಾಳೆ ಹಣ್ಣುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಸಾರಾ ಅಬೂಬಕ್ಕರ್ತ್ರಿಪದಿಪಟ್ಟದಕಲ್ಲುಸೈನ್ಯರಕ್ತಪಿಶಾಚಿಸಂಸ್ಕೃತ ಸಂಧಿಅಂತರ್ಜಲಪ್ರಜಾವಾಣಿಆಸನ (ಯೋಗ)ಸಿಂಹಕೆ.ವಿ.ಸುಬ್ಬಣ್ಣಭಾರತದ ಬುಡಕಟ್ಟು ಜನಾಂಗಗಳುಮಹಮದ್ ಬಿನ್ ತುಘಲಕ್ನಾರುಬಟ್ಟೆತುಮಕೂರುಚುನಾವಣಾ ಬಾಂಡ್ಅರ್ಥಶಾಸ್ತ್ರಅಲಂಕಾರಪು. ತಿ. ನರಸಿಂಹಾಚಾರ್ಲಿಪಿಸಾಂಗತ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ತೀ. ನಂ. ಶ್ರೀಕಂಠಯ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಹಾಲುಯೇಸು ಕ್ರಿಸ್ತನೇಮಕಾತಿಆದಿ ಶಂಕರಹೆಚ್.ಡಿ.ದೇವೇಗೌಡಟೈಗರ್ ಪ್ರಭಾಕರ್ಕಾಮಸೂತ್ರಯು.ಆರ್.ಅನಂತಮೂರ್ತಿಭಾರತದ ಸಂವಿಧಾನನದಿಸ್ನೇಹಿತರು (ಚಲನಚಿತ್ರ)ದ್ವಿರುಕ್ತಿಸಂಯುಕ್ತ ಅರಬ್ ಸಂಸ್ಥಾನ ಕ್ರಿಕೆಟ್ ತಂಡವೀರಗಾಸೆಭಾರತೀಯ ಧರ್ಮಗಳುದಶಾವತಾರಶ್ರೀವಿಜಯಭಾರತೀಯ ಜನತಾ ಪಕ್ಷದಿಕ್ಕುಕಬ್ಬುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಅಂತಾರಾಷ್ಟ್ರೀಯ ಸಂಬಂಧಗಳುಒಬ್ಬಟ್ಟುಗಂಗ (ರಾಜಮನೆತನ)ಕುಂಟೆ ಬಿಲ್ಲೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿಜಯನಗರ ಸಾಮ್ರಾಜ್ಯಕರ್ನಾಟಕದ ಜಾನಪದ ಕಲೆಗಳುಸತಿ ಪದ್ಧತಿಅಶ್ವತ್ಥಾಮಪ್ಲೇಟೊಕರ್ನಾಟಕದ ಆರ್ಥಿಕ ಪ್ರಗತಿಕಂಸಾಳೆಛಂದಸ್ಸುಬಸವರಾಜ ಕಟ್ಟೀಮನಿಭಾರತೀಯ ಭೂಸೇನೆ🡆 More