ಮೋಹಿನಿ

ಮೋಹಿನಿ ಪುರಾಣಗಳಿಂದ ಹಿಡಿದು ಜನಪದ ಕಥೆಗಳವರೆಗೂ ಪ್ರಸ್ತಾವಗೊಂಡಿರುವ ಒಂದು ಸ್ತ್ರೀ ಪಾತ್ರ.

ಪುರಾಣಗಳಲ್ಲಿ ಎರಡು ಪ್ರಸಂಗಗಳು ಅತ್ಯಂತ ಪ್ರಸಿದ್ಧವಾಗಿವೆ. ಒಂದು ಕಥೆಯ ಪ್ರಕಾರ ಸಮುದ್ರ ಮಥನದ ಫಲಾವಾಗಿ ಉದ್ಭವಿಸಿದ ಅಮೃತವನ್ನು ಹಂಚಿಕೊಳ್ಳುವಾಗ ಸುರಾಸುರರಿಗೆ ಜಗಳ ಅರಂಭವಾಯಿತು. ಆ ಸಂದರ್ಭದಲ್ಲಿ ಅವೃತವನ್ನೆಲ್ಲ ದೈತ್ಯರು ತೆಗೆದುಕೊಂಡು ಹೋದರು. ಆಗ ವಿಷ್ಣು ದೈತ್ಯರನ್ನು ಮರುಳುಗೊಳಿಸುವ ತಂತ್ರ ಹೂಡಬೇಕಾಗಿಬಂತು. ಆತ ಮೋಹಿನಿಯ ವೇಷ ಧರಿಸಿ ದೈತ್ಯರನ್ನು ಮೋಹದಿಂದ ವಂಚಿಸಿ ದೇವತೆಗಳಿಗೆ ಅಮೃತಪಾನ ಮಾಡಿಸಿದ. ಇನ್ನೊಂದು ಕಥೆಯ ಪ್ರಕಾರ ಭಸ್ಮಾಸುರನಿಗೆ ಶಿವಕೊಟ್ಟ ವರದಿಂದ ಶಿವನನ್ನೂ ತನ್ನನ್ನೂ ಪಾರುಮಾಡಿಕೊಳ್ಳಲು ವಿಷ್ಣು ಮೋಹಿನಿ ಅವತಾರ ಧರಿಸಬೇಕಾಯಿತು. ಭಸ್ಮಾಸುರ ಭಸ್ಮವಾದ ವಿಷಯವನ್ನು ತಿಳಿಸಲು ಮೋಹಿನಿ ರೂಪದ ವಿಷ್ಣು ಶಿವನ ಬಳಿಗೆ ಬಂದಾಗ ಸ್ತ್ರೀರೂಪಿಯಾದ ವಿಷ್ಣುವನ್ನು ಶಿವ ಮೋಹಿಸಿ ಅಲಿಂಗಿಸಿಕೊಳ್ಳಲು, ಕಾಪಾಲಿಮತದ ಭೈರವ ಹುಟ್ಟಿದನೆಂಬ ಕಥೆಯಿದೆ. (ಈ ಪೌರಾಣಿಕ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡದ್ದು ಕೇರಳದ ಮೋಹಿನಿ ಅಟ್ಟಂ. ಕೇರಳದ ಪ್ರಸಿದ್ಧ ಕಲೆಗಳಲ್ಲಿ ಕಥಕ್ಕಳಿ ಪುರುಷ ಪ್ರಧಾನವಾದ ನೃತ್ಯ ಪ್ರಕಾರವಾದರೆ ಮೋಹಿನಿ ಅಟ್ಟಂ ಸ್ತ್ರೀಯರು ಮಾತ್ರ ಅಭಿನಯಸುವ ನೃತ್ಯ ಕಲೆಯಾಗಿದೆ).

ಮೋಹಿನಿ
ಮೋಹಿನಿ ಭಸ್ಮಾಸುರ

ಮೋಹಿನಿ ಒಂದು ಕಾಲ್ಪನಿಕ ಪಾತ್ರವೂ ಹೌದು. ಮೋಹಿನಿ ಎಂಬ ಪದಕ್ಕೆ ವೀಕ್ಷಕನ ಮನಸ್ಸನ್ನು ಸೂರೆಗೈಯುವ ತರುಣಿ ಎಂಬ ಅರ್ಥವೂ ಇದೆ. ಜನಪದದಲ್ಲಿ ಮೋಹಿನಿಯ ಕಲ್ಪನೆ ವಿಶಿಷ್ಟ ಬಗೆಯದು. ಅತಿಯಾದ ಆಸೆಯನ್ನು ಇಟ್ಟುಕೊಂಡು ಸತ್ತ ತರುಣಿ ಅಥವಾ ಹೆಂಗಸು ತರುಣರನ್ನು ಮೋಹಿನಿಯಾಗಿ ಕಾಡುತ್ತಾಳೆ ಎಂಬ ನಂಬಿಕೆ ಜನಪದದಲ್ಲಿದೆ. ಅನೇಕ ವೇಳೆ ಮೋಹಿನಿಯನ್ನು ದೆವ್ವ ಎಂಬ ಅರ್ಥದಲ್ಲಿಯೂ ಕರೆಯುವುದುಂಟು. ಮೋಹಿನಿ ಯಾರ ಮೇಲೆ ಬೇಕಾದರೂ ಯಾವಾಗ ಬೇಕಾದರೂ ಬರಬಹುದು. ಆದರೆ ಸಾಮಾನ್ಯವಾಗಿ ತನಗೆ ಮೋಸಮಾಡಿ ವಂಚಿಸಿದವರ ಮೇಲೆ ಮೋಹಿನಿ ಬಂದು ಕಾಡುತ್ತಾಳೆ ಎಂಬ ನಂಬಿಕೆಯೇ ಹೆಚ್ಚು. ಅಂತಹ ಮೋಹಿನಿಯ ಕಾಟದಿಂದ ಪಾರಾಗಲು ಜನಪದರು ಅನೇಕ ಅಡೆತಡೆಗಳನ್ನು ಮಾಡುವುದೂ ಮಂತ್ರವಾದಿಗಳ ಮೊರೆ ಹೋಗುವುದೂ ಉಂಟು.

ಉಲ್ಲೇಖಗಳು

  • Pattanaik, Devdutt (2001). The man who was a woman and other queer tales of Hindu lore. Routledge. ISBN 978-1-56023-181-3.
  • Vanita, Ruth; Kidwai, Saleem (2001). Same-sex love in India: readings from literature and history. Palgrave Macmillan. ISBN 978-0-312-29324-6.
  • Goudriaan, Teun (1978). "The Māyā of the Gods: Mohini". Māyā divine and human. Motilal Banarsidass Publ. pp. 41–49. ISBN 978-81-208-2389-1.
  • Doniger, Wendy (1999). Splitting the difference: gender and myth in ancient Greece and India. London: University of Chicago Press. ISBN 978-0-226-15641-5.
  • Hiltebeitel, Alf (1988). "Aravan's Sacrifice". The Cult of Draupadi : Mythologies: from Gingee to Kuruksetra. Vol. 1. University of Chicago Press. ISBN 978-0-226-34046-3.
  • Swami Parmeshwaranand (2004). Encyclopaedia Of The Saivism. Vol. 1. Sarup & Sons. ISBN 978-81-7625-427-4.
ಮೋಹಿನಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕಾಂತಾರ (ಚಲನಚಿತ್ರ)ಅಂತರರಾಷ್ಟ್ರೀಯ ಸಂಘಟನೆಗಳುಶಬರಿವಡ್ಡಾರಾಧನೆನಿರುದ್ಯೋಗಬೆಳಗಾವಿವಿಷ್ಣುಜಿ.ಪಿ.ರಾಜರತ್ನಂಭಾರತೀಯ ಸಂಸ್ಕೃತಿಸುಧಾ ಮೂರ್ತಿಸಂಸ್ಕಾರಭಾರತದ ಮುಖ್ಯ ನ್ಯಾಯಾಧೀಶರುಚಂದ್ರಗುಪ್ತ ಮೌರ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜ್ಞಾನಪೀಠ ಪ್ರಶಸ್ತಿಧೃತರಾಷ್ಟ್ರಏಡ್ಸ್ ರೋಗಶಾಂತಲಾ ದೇವಿಸಂಸದೀಯ ವ್ಯವಸ್ಥೆಧರ್ಮಶ್ರೀ ರಾಘವೇಂದ್ರ ಸ್ವಾಮಿಗಳುಕುರುಶತಮಾನಮಣ್ಣಿನ ಸಂರಕ್ಷಣೆಮತದಾನಅಂತರಜಾಲಕನ್ನಡದಲ್ಲಿ ಕಾದಂಬರಿ ಸಾಹಿತ್ಯರಾಷ್ಟ್ರೀಯ ಶಿಕ್ಷಣ ನೀತಿಭಕ್ತಿ ಚಳುವಳಿಮಾನವ ಸಂಪನ್ಮೂಲ ನಿರ್ವಹಣೆಪ್ರಬಂಧ ರಚನೆಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಮೈಸೂರು ಸಂಸ್ಥಾನದೇವತಾರ್ಚನ ವಿಧಿಭಾರತೀಯ ಕಾವ್ಯ ಮೀಮಾಂಸೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಾಲುಮರದ ತಿಮ್ಮಕ್ಕಸಂಪತ್ತಿಗೆ ಸವಾಲ್ಮಹಾಕವಿ ರನ್ನನ ಗದಾಯುದ್ಧಬಾವಲಿಭಾರತದ ವಾಯುಗುಣಬೌದ್ಧ ಧರ್ಮಭಾರತದ ಮುಖ್ಯಮಂತ್ರಿಗಳುಕಾರ್ಯಾಂಗಭಾರತದ ಉಪ ರಾಷ್ಟ್ರಪತಿಗಳ ಪಟ್ಟಿರಾಗಿವಿಜಯನಗರ ಸಾಮ್ರಾಜ್ಯಕರ್ಮಧಾರಯ ಸಮಾಸಮೂಲಭೂತ ಕರ್ತವ್ಯಗಳುಶಿಶುನಾಳ ಶರೀಫರುಪುಟ್ಟರಾಜ ಗವಾಯಿಭದ್ರಾವತಿಮೈಗ್ರೇನ್‌ (ಅರೆತಲೆ ನೋವು)ವೆಂಕಟೇಶ್ವರ ದೇವಸ್ಥಾನಭಾರತದಲ್ಲಿನ ಶಿಕ್ಷಣಲಕ್ಷ್ಮಿಕನ್ನಡಪ್ರಭಭಗತ್ ಸಿಂಗ್ಸುಭಾಷ್ ಚಂದ್ರ ಬೋಸ್ಮ್ಯಾಕ್ಸ್ ವೆಬರ್ಸಿದ್ದಲಿಂಗಯ್ಯ (ಕವಿ)ಕರಡಿಕುರಿಹಿಂದೂ ಧರ್ಮದೂರದರ್ಶನಸಾರಾ ಅಬೂಬಕ್ಕರ್ಸಂಸ್ಕೃತಿಬೀಚಿರಾಜಸ್ಥಾನ್ ರಾಯಲ್ಸ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಬ್ಯಾಂಕ್ರಕ್ತಪಶ್ಚಿಮ ಬಂಗಾಳಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕವಿರಾಜಮಾರ್ಗ🡆 More