ಮೊಲ

ಮೊಲವು ಮ್ಯಾಮೇಲಿಯ ವರ್ಗದ ಲ್ಯಾಗೊಮಾರ್ಫ ಗಣದ ಲೆಪೊರಿಡೀ ಕುಟುಂಬಕ್ಕೆ ಸೇರಿದ ಲೀಪಸ್ ಜಾತಿಯ ಪ್ರಾಣಿ (ಹೇರ್).

ಕುಂದಿಲಿಗಳಿಗೆ ಹತ್ತಿರ ಸಂಬಂಧಿ. ಮೊಲಕ್ಕೆ ಕುಂದಿಲಿಗೂ ಹಲವಾರು ಹೊರ ವ್ಯತ್ಯಾಸಗಳುಂಟು.

ಮೊಲಗಳು
ಮೊಲ
ಕುರುಚಲು ಪೊದೆಯ ಮೊಲ (ಲೀಪಸ್ ಸ್ಯಾಕ್ಸಾಟಿಲಿಸ್)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಲ್ಯಾಗೊಮಾರ್ಫ಼ಾ
ಕುಟುಂಬ: ಲೆಪೊರಿಡೀ
ಕುಲ: ಲೀಪಸ್
Linnaeus, 1758
Type species
ಪರ್ವತದ ಮೊಲ (ಲೀಪಸ್ ಟಿಮಿಡಸ್)
Linnaeus, 1758
ಪ್ರಭೇದಗಳು

ಪಠ್ಯ ನೋಡಿ

ವ್ಯಾಪ್ತಿ

ಲೀಪಸ್ ಜಾತಿಯಲ್ಲಿ ಸುಮಾರು 26 ಪ್ರಭೇದಗಳಿದ್ದು ಇವು ಯೂರೇಷ್ಯ, ಏಷ್ಯದ ಬಹುಭಾಗ, ಆಫ್ರಿಕ, ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುವುವು. ದಕ್ಷಿಣ ಅಮೆರಿಕ, ಆಸ್ಟ್ರೇಲಿಯ, ನ್ಯೂಜ಼ೀಲೆಂಡಗಳಲ್ಲಿ ಇವನ್ನು ಬೇರೆಡೆಯಿಂದ ತಂದು ಬಿಡಲಾಗಿದ್ದು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುತ್ತವೆ.

ಮುಖ್ಯ ಪ್ರಭೇದಗಳು

ಈ ಪ್ರಭೇದಗಳ ಪೈಕಿ ಮುಖ್ಯವಾದವು ಲೀ. ಅಮೆರಿಕಾನಸ್ (ಉತ್ತರ ಅಮೆರಿಕದ ಉತ್ತರ ಭಾಗ), ಲೀ. ಯುರೋಪಿಯಸ್ (ಯುರೋಪ್), ಲೀ. ಆರ್ಕ್ಟಿಕಸ್ (ಉತ್ತರ ಧ್ರುವಪ್ರದೇಶ), ಲೀ. ನೈಗ್ರಿಕಾಲಿಸ್ (ಭಾರತ).

ಭಾರತದ ಮೊಲ

ಭಾರತದಲ್ಲಿ ಸಿಕ್ಕುವ ಮೊಲಕ್ಕೆ ಬ್ಲಾಕ್-ನೇಪ್‍ಡ್ ಹೇರ್ ಅಥವಾ ಇಂಡಿಯನ್ ಹೇರ್ ಎಂಬ ಹೆಸರುಂಟು. ಇದರಲ್ಲಿ ಸುಮಾರು 7 ವಿಭಿನ್ನ ಬಗೆಗಳಿದ್ದು ದೇಹದ ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುವುವು. ಇವುಗಳ ಸರಾಸರಿ ಉದ್ದ 40-50 ಸೆಂ.ಮೀ; ತೂಕ 1.8-3.6 ಕೆ.ಜಿ. ಕತ್ತಿನ ಮೇಲೆ ಅಂದರೆ ಕಿವಿಯಿಂದ ಹಿಡಿದು ಭುಜದವರೆಗೆ ಕಗ್ಗಂದು ಇಲ್ಲವೆ ಕಪ್ಪು ಬಣ್ಣದ ಗುರುತು ಇದೆ. ಬಾಲದ ಮೇಲ್ಮೈ ಕೂಡ ಕಪ್ಪು; ಬಾಲದ ಉದ್ದ ಸುಮಾರು 10 ಸೆಂ.ಮೀ. ಮುಂಗಾಲುಗಳು ಚಿಕ್ಕವು; ಇವುಗಳಲ್ಲಿ ತಲಾ 5 ಬೆರಳುಗಳಿವೆ. ಹಿಂಗಾಲುಗಳು ಬಲು ಉದ್ದ; ಇವುಗಳಲ್ಲಿ ತಲಾ 4 ಬೆರಳುಗಳಿವೆ. ಮೊಲದ ಕಿವಿ ಕುಂದಿಲಿಯದಕ್ಕಿಂತ ತುಂಬ ಉದ್ದ.

ಆಹಾರ

ಮೊಲಗಳು ಸಸ್ಯಾಹಾರಿಗಳು. ಮೈದಾನ ಪ್ರದೇಶದ ಹುಲ್ಲುಗಾವಲುಗಳು ಇವುಗಳ ಮೆಚ್ಚಿನ ನೆಲೆ. ಹಳ್ಳಿಗಳ ಕೃಷಿಭೂಮಿಗಳ ಸನಿಹದಲ್ಲೂ ವಾಸಿಸುತ್ತವೆ. ಕೆಲವೊಮ್ಮೆ ಹಳ್ಳಿರಸ್ತೆಗಳಿಗೂ ಮನೆತೋಟಗಳಿಗೂ ಬರುವುದುಂಟು. ಸಾಧಾರಣವಾಗಿ ನಿಶಾಚಾರಿಗಳಾದ ಇವು ಸಂಜೆ ವೇಳೆ ತಮ್ಮ ನೆಲೆಗಳಿಂದ ಹೊರಬಂದು ಹುಲ್ಲಿನ ಎಳೆಚಿಗುರು ಮುಂತಾದನ್ನು ತಿನ್ನುತ್ತವೆ. ಅದರೆ ಹಲವಾರು ಸಲ ಹಗಲಿನಲ್ಲೂ ಆಹಾರಾನ್ವೇಷಣೆಯಲ್ಲಿ ತೊಡಗುವುದುಂಟು.

ಸ್ವಭಾವ

ಸಾಮಾನ್ಯವಾಗಿ ಹಗಲಿನಲ್ಲಿ ಪೊದೆಗಳಲ್ಲೂ ಹುಲ್ಲು ತೆಂಡೆಗಳಲ್ಲೋ ಅಡಗಿದ್ದು ತಮ್ಮ ಸಹಜ ವೈರಿಗಳಾದ ನರಿ, ಮುಂಗಸಿ, ಕಾಡುಬೆಕ್ಕು ಮುಂತಾದವುಗಳಿಂದ ರಕ್ಷಣೆ ಪಡೆಯುತ್ತವೆ. ಇವುಗಳ ಮೈಬಣ್ಣ ವಾಸಸ್ಥಳಗಳ ಹಿನ್ನಲೆಯೊಂದಿಗೆ ಚೆನ್ನಾಗಿ ಹೊಂದುಕೊಳ್ಳುವುದರಿಂದ ಸುಲಭವಾಗಿ ಕಣ್ಣಿಗೆ ಬೀಳವು. ಅಲ್ಲದೆ ವೈರಿಯೊ ಮನುಷ್ಯರೊ ತುಂಬ ಹತ್ತಿರ ಬರುವವರೆಗೂ ಚಲಿಸದೆ ಅಡಗಿದ್ದು ಕೊನೆಯ ಗಳಿಗೆಯಲ್ಲಿ ಚಂಗನೆ ನೆಗೆದು ಓಡಿ ಹೋಗುವುವು. ಇದರಿಂದಾಗಿ ಇವನ್ನು ಹಿಡಿಯುವುದು ಕಷ್ಟ. ಕೊಂಚ ದೂರ ಓಡಿ ಬಳಿಕ ಹಿಂಗಾಲಿನ ಮೇಲೆ ನಿಂತು ಹಿಂದಕ್ಕೆ ತಿರುಗಿ ನೋಡುವುದು ಇವುಗಳ ಸ್ವಭಾವ.

ಸಂತಾನೋತ್ಪತ್ತಿ

ಮೊಲ ವರ್ಷವಿಡೀ ಮರಿಗಳನ್ನು ಹಾಕುತ್ತದೆ. ಒಂದು ಸಲಿಗೆ ಒಂದು ಇಲ್ಲವೆ ಎರಡು ಮರಿಗಳು ಹುಟ್ಟುತ್ತವೆ. ಕುಂದಿಲಿಯ ಮರಿಗಳಂತಲ್ಲದೆ ಮೊಲದ ಮರಿಗಳು ಹುಟ್ಟುವಾಗಲೇ ಮೈತುಂಬ ಕೂದಲನ್ನು ತೆರೆದಿರುವ ಕಣ್ಣುಗಳನ್ನೂ ಪಡೆದಿರುವುವು.

ಮೊಲದ ಮಾಂಸ ರುಚಿಕರವಾದ್ದರಿಂದ ಇದನ್ನು ಬೇಟೆಯಾಡುವುದಿದೆ.

ಉಲ್ಲೇಖಗಳು

ಹೆಚ್ಚಿನ ಓದಿಗೆ

ಹೊರಗಿನ ಕೊಂಡಿಗಳು

ಮೊಲ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮೊಲ ವ್ಯಾಪ್ತಿಮೊಲ ಮುಖ್ಯ ಪ್ರಭೇದಗಳುಮೊಲ ಭಾರತದ ಮೊಲ ಆಹಾರಮೊಲ ಸ್ವಭಾವಮೊಲ ಸಂತಾನೋತ್ಪತ್ತಿಮೊಲ ಉಲ್ಲೇಖಗಳುಮೊಲ ಹೆಚ್ಚಿನ ಓದಿಗೆಮೊಲ ಹೊರಗಿನ ಕೊಂಡಿಗಳುಮೊಲ

🔥 Trending searches on Wiki ಕನ್ನಡ:

ಪರಿಮಾಣ ವಾಚಕಗಳುಟೊಮೇಟೊವಾಲ್ಮೀಕಿಮೈಸೂರು ಅರಮನೆಕೈಗಾರಿಕೆಗಳುಭಾರತದ ಸ್ವಾತಂತ್ರ್ಯ ದಿನಾಚರಣೆದುಂಡು ಮೇಜಿನ ಸಭೆ(ಭಾರತ)ಭಾರತದಲ್ಲಿ ಬಡತನಬೇಸಿಗೆಗಂಗ (ರಾಜಮನೆತನ)ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರವಿಚಂದ್ರನ್ಬೌದ್ಧ ಧರ್ಮಕನ್ನಡ ಸಾಹಿತ್ಯ ಸಮ್ಮೇಳನವಾಣಿಜ್ಯ ಬ್ಯಾಂಕ್ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದೇವಸ್ಥಾನಮತದಾನಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರವಿಧಾನ ಪರಿಷತ್ತುಯೂನಿಲಿವರ್ಕ್ರಿಸ್ಟಿಯಾನೋ ರೊನಾಲ್ಡೊಪ್ಲೇಟೊಸೂರ್ಯವ್ಯೂಹದ ಗ್ರಹಗಳುನೈಸರ್ಗಿಕ ವಿಕೋಪಗಗನಯಾತ್ರಿಉದ್ಯಮಿಸಿ. ಎನ್. ಆರ್. ರಾವ್ಕರ್ನಾಟಕದ ಶಾಸನಗಳುಸರ್ವೆಪಲ್ಲಿ ರಾಧಾಕೃಷ್ಣನ್ಜಾಗತೀಕರಣಶುಕ್ರಇರ್ಫಾನ್ ಪಠಾಣ್ಪುನೀತ್ ರಾಜ್‍ಕುಮಾರ್ಪೌರತ್ವಹೊಯ್ಸಳಪಂಜೆ ಮಂಗೇಶರಾಯ್ಎತ್ತಿನಹೊಳೆಯ ತಿರುವು ಯೋಜನೆತುಂಬೆಗಿಡಹಸ್ತ ಮೈಥುನಲೆಕ್ಕ ಪರಿಶೋಧನೆ೨೦೧೬ ಬೇಸಿಗೆ ಒಲಿಂಪಿಕ್ಸ್ಪ್ರೀತಿಖಾಸಗೀಕರಣಕೆಂಪುರಾವಣದೇವನೂರು ಮಹಾದೇವರಾಮನರೇಂದ್ರ ಮೋದಿಮೈಟೋಕಾಂಡ್ರಿಯನ್ಸಾಮ್ರಾಟ್ ಅಶೋಕಭಗವದ್ಗೀತೆದಿಕ್ಸೂಚಿಗದ್ದಕಟ್ಟುಹೆಚ್.ಡಿ.ಕುಮಾರಸ್ವಾಮಿ1947-1948 ರ ಇಂಡೋ-ಪಾಕಿಸ್ತಾನ ಯುದ್ಧಜೈನ ಧರ್ಮ ಇತಿಹಾಸಓಂ ನಮಃ ಶಿವಾಯಮೇರಿ ಕೋಮ್ಕನ್ನಡ ಅಕ್ಷರಮಾಲೆಸಸ್ಯಪರ್ಯಾಯ ದ್ವೀಪಪ್ರಜಾಪ್ರಭುತ್ವವರ್ಣಾಶ್ರಮ ಪದ್ಧತಿಸರ್ವಜ್ಞಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕನ್ನಡ ಅಂಕಿ-ಸಂಖ್ಯೆಗಳುಪ್ರೇಮಾಭಾರತದಲ್ಲಿ ಮೀಸಲಾತಿರಾಯಲ್ ಚಾಲೆಂಜರ್ಸ್ ಬೆಂಗಳೂರುಬುಡಕಟ್ಟುಪರಿಸರ ರಕ್ಷಣೆಏಷ್ಯನ್ ಕ್ರೀಡಾಕೂಟಭೂತಾರಾಧನೆಅಂತಿಮ ಸಂಸ್ಕಾರಪ್ಯಾರಾಸಿಟಮಾಲ್🡆 More