ಮೈತ್ರಿ ರಾಧೇಶ್

'ಕುಮಾರಿ.

ಮೈತ್ರಿ ರಾಧೇಶ್', ಮುಂಬೈನ ಉಪನಗರ, 'ಚೆಂಬೂರಿನ ಸ್ವಾಮಿ ವಿವೇಕಾನಂದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ'. 'ಮೈಸೂರ್ ಅಸೋಸಿಯೇಷನ್ ನ ವಿದುಷಿ','ಶ್ಯಾಮಲಾ ರಾಧೇಶ್' ಮತ್ತು 'ರಾಧೇಶ್' ದಂಪತಿಗಳ ಪ್ರೀತಿಯ ಪುತ್ರಿ. ಮೈತ್ರಿ,ತಾಯಿಯವರಿಂದ ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾಳೆ.

ಚಿತ್ರ:Kum. Maitri.jpg
ಕು.ಮೈತ್ರಿ ರಾಧೇಶ್,ನೃತ್ಯರಂಗಪ್ರವೇಶ ಸಮಾರಂಭದ ದಿನ'

ರಂಗಪ್ರವೇಶ ನೃತ್ಯ ಕಾರ್ಯಕ್ರಮ

ಮೈಸೂರ್ ಅಸೋಸಿಯೇಷನ್, ಮುಂಬೈನಲ್ಲಿ ಜರುಗಿದ 'ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ'ದಲ್ಲಿ ಕು.ಮೈತ್ರಿರಾಧೇಶ್,ಆಹ್ವಾನಿತ ನೃತ್ಯಾಸಕ್ತರ ಸಮ್ಮುಖದಲ್ಲಿ ಸುಮಾರು ೨ ತಾಸು ನಾಟ್ಯಮಾಡಿ,ಸಭಿಕರನ್ನು ರಂಜಿಸಿದಳು. ಕುಮಾರಿ ಮೈತ್ರಿ,'ಶ್ರೀ ರಂಜಿನಿ ಕಲಾನಿಲಯ'ದಲ್ಲಿ, 'ಗುರು ಜ್ಯೋತಿ ಮೋಹನ್' ರವರ ಬಳಿ ಭಾರತ ನಾಟ್ಯ ಕಲಿತಳು. ಮೈತ್ರಿ, ಭರತ ನಾಟ್ಯದ ಕಲಿಕಾ ಹಂತದಲ್ಲೇ ಈಗಾಗಲೇ ಅನೇಕ ಕಡೆ 'ಸೋಲೋ' ಮತ್ತು 'ಸಮೂಹ ನೃತ್ಯ ಕಾರ್ಯಕ್ರಮ' ಕೊಟ್ಟಿದ್ದಾಳೆ. ರಂಗಪ್ರವೇಶ ಕಾರ್ಯಕ್ರಮ, 'ಗಣೇಶ ಶರಣಂ' ವಂದನೆಯಿಂದ 'ನೃತ್ಯ ಪ್ರಸ್ತುತಿ'ಆರಂಭವಾಯಿತು. ಪೂರ್ವಾರ್ಧದಲ್ಲಿ 'ಜತಿಸ್ವರಂ', 'ದೇವರನಾಮ','ದಾರುವರ್ಣಂ,' ಮಧ್ಯಾಂತರದ ಬಳಿಕ,'ಶಿವಸ್ತುತಿ','ಕಾವ್ಯ','ತಿಲ್ಲಾನ' ಪ್ರಸ್ತುತಿಪಡಿಸಿದ ಬಳಿಕ,ಕೊನೆಯಲ್ಲಿ ಮಂಗಳದೊಂದಿಗೆ ಸಂಪನ್ನವಾಯಿತು. ನೃತ್ಯ-ಪ್ರದರ್ಶನದಲ್ಲಿ 'ಕನ್ನಡ ಕಾವ್ಯಗಳಿಗೆ ನೃತ್ಯ ಸಂಯೋಜನೆ ಮಾಡಿ ಪ್ರಸ್ತುತಪಡಿಸಿದ ಸುಮಾರು ೨ ತಾಸುಗಳ ಕಾರ್ಯಕ್ರಮ, ಸಭೆಯಲ್ಲಿ ನೆರಿದಿದ್ದ ನೃತ್ಯಪ್ರಿಯರಿಗೆ ಬಹಳ ಮೆಚ್ಚುಗೆಯಾಯಿತು. ಲಾಲಿತ್ಯ ಪೂರ್ಣ ಹೆಜ್ಜೆಗತಿ, ಭಾವನೆಗಳ ಸ್ಪಷ್ಟವಾದ ಅಭಿನಯ,ಶಾರೀರಿಕವಾಗಿ ಕಾಯ್ದುಕೊಂಡ ನಿಖರತೆ, ಉತ್ಸಾಹಭರಿತ ಚಲನೆ, ಮೊದಲಾದ ನೃತ್ಯದ ಮಜಲುಗಳಿಂದ ಕೆಲವು ಕ್ಲಿಷ್ಟಕರವಾದ ನೃತ್ಯ ಪ್ರಕಾರಗಳನ್ನು ಕು.ಮೈತ್ರಿ,ಸಲೀಸಾಗಿ ಪ್ರದರ್ಶಿಸಿದಳು.

ಹಿಮ್ಮೇಳದ ನಟ್ಟುವಾಂಗದಲ್ಲಿ

ಮೈತ್ರಿ ರಾಧೇಶ್ 
'ಗಣೇಶ ವಿಸರ್ಜನಾ ಮಹೋತ್ಸವದಂದು,ಕು.ಮೈತ್ರಿ ದೇವರನಾಮ ಹಾಡುತ್ತಿರುವುದು'

ಹಿಮ್ಮೇಳದ ನಟ್ಟುವಾಂಗದಲ್ಲಿ,

  • ಗುರು, ಶ್ರೀಮತಿ, ಜ್ಯೋತಿ ಮೋಹನ್,
  • ಗಾಯನದಲ್ಲಿ ಏನ್.ಏನ್.ಶಿವಪ್ರಸಾದ್,
  • ಮೃದಂಗದಲ್ಲಿ ಎಸ್.ಶಂಕರ ನಾರಾಯಣನ್,
  • ವಾಯಲಿನ್ ನಲ್ಲಿ ಮಂಗಳಾ ವೈದ್ಯನಾಥನ್,

ಹಾಜರಿದ್ದು ಕಾರ್ಯಕ್ರಮವನ್ನು ಸುಲಲಿತವಾಗಿ ನಡೆಸಿಕೊಟ್ಟರು.

ಗೀತಾಪಾರಾಯಣಾಸಕ್ತೆ

ಕುಮಾರಿ ಮೈತ್ರಿ,'ಗೀತಾಪಾರಾಯಣ'ದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾಳೆ.ಮೈಸೂರ್ ಅಸೋಸಿಯೇಷನ್, ಮುಂಬೈನ 'ವಾರ್ಷಿಕ ಗಣಪತಿ ಮಹೋತ್ಸವ'ದಲ್ಲಿ ಕು.ಮೈತ್ರಿ,ಭಕ್ತಿಗೀತೆಗಳ ಹಾಡುಗಾರಿಕೆಯಲ್ಲೂ ಭಾಗವಹಿಸುತ್ತಿದ್ದಾಳೆ.

ಸನ್.೨೦೧೩ ರಲ್ಲಿ

ಚಿತ್ರ:Belli bayalu, 24052013 002.JPG
'ಶ್ರೀಮತಿ.ರಮಾ ವಸಂತ್, ಹಾಗೂ ಕು.ಮೈತ್ರಿ ರಾಧೇಶ್'

ಮೇ, ೨೪ ರಂದು, 'ಮುಂಬೈನ ಮೈಸೂರ್ ಅಸೋಸಿಯೇಷನ್' ನಡೆಸಿಕೊಟ್ಟ 'ಬೆಳ್ಳಿ ಬೈಲು' ಎಂಬ ನಾಟಕ ಕಾರ್ಯಕ್ರಮದಲ್ಲಿ 'ಬೆಳ್ಳಿ' ಎಂಬ ದಿಟ್ಟ ಹಳ್ಳಿ ಹುಡುಗಿಯಪಾತ್ರ ನಿರ್ವಹಿಸಿ, ಕು.ಮೈತ್ರಿ,ಕನ್ನಡ ಅಭಿಮಾನಿಗಳ ಪ್ರೀತಿಗೆ ಪಾತ್ರಳಾದಳು. ಈ ನಾಟಕದ ಕರ್ತೃ,ನಿರ್ದೇಶನ,ಡಾ.ಬಿ.ಆರ್.ಮಂಜುನಾಥ್ ರವರದು.ಸನ್.೨೦೧೩ ರ ಜೂನ್ ೧ ನೆಯ ಮತ್ತು ೩ ನೆಯ ತಾರೀಖಿನಂದು, ಬೆಂಗಳೂರಿನಲ್ಲಿ' ರವೀಂದ್ರ ಕಲಾಕ್ಷೇತ್ರ', ಮತ್ತು 'ಎಚ್.ಎನ್.ವೇದಿಕೆ'ಯಲ್ಲಿ 'ಬೆಳ್ಳಿಬೈಲು' ನಾಟಕವನ್ನು ಪ್ರದರ್ಶಿಸಲಾಯಿತು.

Tags:

ಮೈತ್ರಿ ರಾಧೇಶ್ ರಂಗಪ್ರವೇಶ ನೃತ್ಯ ಕಾರ್ಯಕ್ರಮಮೈತ್ರಿ ರಾಧೇಶ್ ಹಿಮ್ಮೇಳದ ನಟ್ಟುವಾಂಗದಲ್ಲಿಮೈತ್ರಿ ರಾಧೇಶ್ ಗೀತಾಪಾರಾಯಣಾಸಕ್ತೆಮೈತ್ರಿ ರಾಧೇಶ್ ಸನ್.೨೦೧೩ ರಲ್ಲಿಮೈತ್ರಿ ರಾಧೇಶ್

🔥 Trending searches on Wiki ಕನ್ನಡ:

ಮಂಗಳ (ಗ್ರಹ)ಅಸಹಕಾರ ಚಳುವಳಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಮಲೈ ಮಹದೇಶ್ವರ ಬೆಟ್ಟಫ.ಗು.ಹಳಕಟ್ಟಿಲೀಲಾವತಿಜಿ.ಪಿ.ರಾಜರತ್ನಂಕೊರೋನಾವೈರಸ್ಗ್ರಾಮ ಪಂಚಾಯತಿರಾಷ್ಟ್ರಕವಿಸವರ್ಣದೀರ್ಘ ಸಂಧಿತುಂಗಾಸಂಸದೀಯ ವ್ಯವಸ್ಥೆಸ್ತ್ರೀಶಾಂತಲಾ ದೇವಿಭಾರತಶಿವರಾಜ್‍ಕುಮಾರ್ (ನಟ)ಕೈಗಾರಿಕೆಗಳುಶನಿಮಂಗಳೂರುಆದಿ ಶಂಕರಆದಿ ಕರ್ನಾಟಕವಾಯು ಮಾಲಿನ್ಯಬಯಲಾಟರಾಜಸ್ಥಾನ್ ರಾಯಲ್ಸ್ಸ್ವರಚಾಮರಾಜನಗರವಿತ್ತೀಯ ನೀತಿಗದ್ದಕಟ್ಟುಮಹಾಜನಪದಗಳುಚಿನ್ನರಕ್ಷಾ ಬಂಧನಕರ್ನಾಟಕವಾಲ್ಮೀಕಿದ್ವಾರಕೀಶ್ಕಲ್ಲಂಗಡಿಕೌರವರುವಸ್ತುಸಂಗ್ರಹಾಲಯಹಿಂದೂ ಧರ್ಮರಾಮನಗರಚಿಕ್ಕಮಗಳೂರುಬ್ರಾಹ್ಮಣಭಾರತದ ಸಂಗೀತವಚನ ಸಾಹಿತ್ಯಶ್ರೀ ರಾಮ ನವಮಿಆಯ್ದಕ್ಕಿ ಲಕ್ಕಮ್ಮಪಂಚತಂತ್ರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚಿತ್ರದುರ್ಗಕಡಲೆಸೋಮನಾಥಪುರಸವದತ್ತಿಹಣಬೀಚಿದಾಸ ಸಾಹಿತ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹೊಯ್ಸಳ ವಾಸ್ತುಶಿಲ್ಪಹರ್ಡೇಕರ ಮಂಜಪ್ಪರವಿಚಂದ್ರನ್ಕೃಷ್ಣರಾಜಸಾಗರಹುಣಸೆದ.ರಾ.ಬೇಂದ್ರೆಭಾರತದ ರಾಷ್ಟ್ರಗೀತೆಎಂ. ಎಂ. ಕಲಬುರ್ಗಿಕರ್ನಾಟಕ ಲೋಕಸೇವಾ ಆಯೋಗಭಾರತದ ಸರ್ವೋಚ್ಛ ನ್ಯಾಯಾಲಯಶ್ಚುತ್ವ ಸಂಧಿಸುದೀಪ್ಮೈಸೂರುಭಾರತದ ಸ್ವಾತಂತ್ರ್ಯ ದಿನಾಚರಣೆಮಯೂರಶರ್ಮಸೂತ್ರದ ಗೊಂಬೆಯಾಟಮಾನವ ಸಂಪನ್ಮೂಲ ನಿರ್ವಹಣೆಕರ್ಣಾಟಕ ಸಂಗೀತಧರ್ಮಸ್ಥಳಎಚ್.ಎಸ್.ಶಿವಪ್ರಕಾಶ್ಎಸ್.ಎಲ್. ಭೈರಪ್ಪಮಹಮದ್ ಬಿನ್ ತುಘಲಕ್🡆 More