ಮರಿಯಪ್ಪ ನಾಟೇಕರ್

'ಮರಿಯಪ್ಪ ನಾಟೇಕರ್' ಗುಲ್ಬರ್ಗಾ ನಗರದ ಮದರ್ ಇಂಡಿಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಯುವ ಪ್ರತಿಭೆ.

ಒಬ್ಬ ಒಳ್ಳೆಯ ಕವಿ, ಕಥೆಗಾರ ಹಾಗು ಲೇಖಕರಾಗಿ ಪ್ರಸಿದ್ಧರಾಗಿದ್ದಾರೆ. ಹಲವು ಕಾವ್ಯ ಸ್ಪರ್ಧೆಗಳ ನಿರ್ಣಾಯಕರಾಗಿ ಕನ್ನಡ ಸಾಹಿತ್ಯ ಪರಿಷತ್ತು (ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ) ರಾಗಿ ೬ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ಬಾಲ್ಯ , ಪರಿವಾರ

ನಾಟೇಕರ್, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲುಕಿನ 'ವಡಗೇರಾ' ಗ್ರಾಮದ ವಾಸಿ ತಂದೆ, ವೀರಪ್ಪ ನಾಟೇಕರ್, ತಾಯಿ ,ನಿಂಗಮ್ಮ ನಾಟೇಕರ್. 'ಮುಂಬಯಿ ನಗರದ ದಿ. ಎನ್. ನಗರದ ಮ. ನ. ಪ. ಕನ್ನಡ ಶಾಲೆ'ಯಲ್ಲಿ ೬ ವರ್ಷ ಶಿಕ್ಷಕರಾಗಿ ದುಡಿದಿದ್ದಾರೆ.

ಬರಹಗಳು

  • ಇತಿಹಾಸ ಮರೆತವರು (ಕಾವ್ಯ ಸಂಕಲನ)
  • ಬದುಕು ಕರಗುವ ಮುನ್ನ (ಕಾವ್ಯ ಸಂಕಲನ)
  • ಸುಗತ ಸಂವಾದ (ಕಾವ್ಯ ಸಂಕಲನ)
  • ಅಂಬಲಿ (ಕಥಾ ಸಂಕಲನ)

ಸಾಹಿತ್ಯ ಸಮ್ಮೇಳನಗಳ ಆಯೋಜಕ

  • ೭೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
  • ೪ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಮುಂಬಯಿ, ಸೊಲ್ಲಾಪುರ, ಗುಲ್ಬರ್ಗಾ, ದೆಹಲಿ ಮುಂತಾದ ನಗರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ನೂರಾರು ಕವಿ ಗೋಷ್ಠಿ ಗಳಲ್ಲಿ ಕವನವಾಚನ ಮಾಡಿದ್ದಾರೆ.

ಪ್ರತಿಭಾ ಪುರಸ್ಕಾರಗಳು

  • ಸಂಕ್ರಮಣ ಪತ್ರಿಕೆಯ ಕಾವ್ಯ ಪುರಸ್ಕಾರ
  • ನಾಟೇಕರ್ ರಚಿಸಿದ ೮ ಕವಿತೆಗಳು ವಿವಿಧ ಕಾವ್ಯ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಕ್ಕೆ ಅರ್ಹತೆಗಳಿಸಿವೆ.

ನಾಟಕರಚನೆ ಹಾಗೂ ಅಭಿನಯದಲ್ಲಿ ಆಸಕ್ತ

ಡಾ. 'ಭರತ್ ಕುಮಾರ್ ಪೊಲಿಪು' ಹಾಗು 'ವಿಮಲಾ ಭಟ್,' ಮುಂತಾದವರ ನಿರ್ದೇಶನಗಳಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ದಲಿತ ಸಮುದಾಯದ ಜಾಗೃತಿಗೆ, ಕಿರುನಾಟಕಗಳನ್ನೂ ರಚಿಸಿ, ನಿರ್ದೇಶಿಸಿ, ಅವುಗಳಲ್ಲಿ ನಟಿಸಿಯೂ ಇದ್ದಾರೆ.

ಪಿ.ಎಚ್.ಡಿ. ಪದವಿ(೨೦೧೩)

'ಮರಿಯಪ್ಪ ನಾಟೇಕರ್,' 'ದ. ರಾ. ಬೇಂದ್ರೆಯವರ ಸಮಗ್ರ ನಾಟಕಗಳು-ಒಂದು ಅಧ್ಯಯನ' ಎನ್ನುವ ಮಹಾ ಪ್ರಬಂಧ ಮಂಡಿಸಿ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡದಲ್ಲಿ ಡಾಕ್ಟರೇಟ್ ಪದವಿಗಳಿಸಿದರು. ಇವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥರಾದ, ಡಾ. ಜಿ. ಎನ್. ಉಪಾಧ್ಯ ರವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸಮಾಡುತಿದ್ದರು.

Tags:

ಮರಿಯಪ್ಪ ನಾಟೇಕರ್ ಬಾಲ್ಯ , ಪರಿವಾರಮರಿಯಪ್ಪ ನಾಟೇಕರ್ ಬರಹಗಳುಮರಿಯಪ್ಪ ನಾಟೇಕರ್ ಸಾಹಿತ್ಯ ಸಮ್ಮೇಳನಗಳ ಆಯೋಜಕಮರಿಯಪ್ಪ ನಾಟೇಕರ್ ಪ್ರತಿಭಾ ಪುರಸ್ಕಾರಗಳುಮರಿಯಪ್ಪ ನಾಟೇಕರ್ ನಾಟಕರಚನೆ ಹಾಗೂ ಅಭಿನಯದಲ್ಲಿ ಆಸಕ್ತಮರಿಯಪ್ಪ ನಾಟೇಕರ್ ಪಿ.ಎಚ್.ಡಿ. ಪದವಿ(೨೦೧೩)ಮರಿಯಪ್ಪ ನಾಟೇಕರ್

🔥 Trending searches on Wiki ಕನ್ನಡ:

ಯೋಗಸಾರಜನಕವಿಮೆಹರಿಹರ (ಕವಿ)ನದಿಕೇಸರಿ (ಬಣ್ಣ)ಭೀಷ್ಮಶ್ರೀಶೈಲರಾಧಿಕಾ ಕುಮಾರಸ್ವಾಮಿಮಂಗಳೂರುಭಾರತ ಸರ್ಕಾರಅಂಬಿಗರ ಚೌಡಯ್ಯಇಮ್ಮಡಿ ಪುಲಿಕೇಶಿಕೊಡಗಿನ ಗೌರಮ್ಮಮೌರ್ಯ ಸಾಮ್ರಾಜ್ಯತಿಂಗಳುಇಸ್ಲಾಂ ಧರ್ಮಪ್ರಬಂಧಕರಗಐಹೊಳೆಬಾದಾಮಿ ಗುಹಾಲಯಗಳುಕನ್ನಡ ಬರಹಗಾರ್ತಿಯರುವಿಜಯಾ ದಬ್ಬೆವಿಷ್ಣುವರ್ಧನ್ (ನಟ)ನರೇಂದ್ರ ಮೋದಿಭಾರತದ ಆರ್ಥಿಕ ವ್ಯವಸ್ಥೆರೈತಕನ್ನಡ ಸಾಹಿತ್ಯಶ್ಚುತ್ವ ಸಂಧಿರಾಜಸ್ಥಾನ್ ರಾಯಲ್ಸ್ಶನಿ (ಗ್ರಹ)ವಿಜ್ಞಾನಎಲಾನ್ ಮಸ್ಕ್ಸಹೃದಯಅಷ್ಟ ಮಠಗಳುಸ್ವಾತಂತ್ರ್ಯಗಾದೆ ಮಾತುಕಲೆಭಾರತ ಸಂವಿಧಾನದ ಪೀಠಿಕೆಶ್ರೀರಂಗಪಟ್ಟಣವಿಧಾನ ಸಭೆಕರ್ನಾಟಕದ ಜಿಲ್ಲೆಗಳುಸಾಲುಮರದ ತಿಮ್ಮಕ್ಕಕೇಸರಿಪರೀಕ್ಷೆಸ್ತ್ರೀಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಎರಡನೇ ಮಹಾಯುದ್ಧಲಕ್ಷ್ಮಿಉತ್ಪಾದನೆಯ ವೆಚ್ಚಕಲ್ಯಾಣ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗಾದೆಕಾನೂನುಕುರಿಮಾನವನ ವಿಕಾಸಕನ್ನಡ ಅಭಿವೃದ್ಧಿ ಪ್ರಾಧಿಕಾರಚಾಣಕ್ಯನೈಸರ್ಗಿಕ ಸಂಪನ್ಮೂಲಮಾನಸಿಕ ಆರೋಗ್ಯಸರ್ವೆಪಲ್ಲಿ ರಾಧಾಕೃಷ್ಣನ್ಭೂಮಿಕರ್ನಾಟಕದ ಶಾಸನಗಳುಚಂದ್ರಗುಪ್ತ ಮೌರ್ಯಕನ್ನಡ ವ್ಯಾಕರಣನುಡಿಗಟ್ಟುಅಕ್ಷಾಂಶ ಮತ್ತು ರೇಖಾಂಶಉಗ್ರಾಣವಿಜಯನಗರಕನ್ನಡದ ಉಪಭಾಷೆಗಳುಸುಮಲತಾಇಮ್ಮಡಿ ಪುಲಕೇಶಿಪಾಂಡವರುವ್ಯಂಜನಹಣ್ಣು🡆 More