ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು

ಮಧ್ವಮತದ ಪ್ರಕಾರ ,ತ್ರಿಗುಣಗಳ ಪರಿಣಾಮವೇ ಜಗತ್ತು .

ಪೀಠಿಕೆ

    ಜಗತ್ತು
    ಜಗತ್ತಿನ ಅಸ್ತಿತ್ವ -ಭಾರತೀಯ ದರ್ಶನಗಳಲ್ಲಿ
    ಜಗತ್ತು-ಅಸ್ತಿತ್ವ-ಅದು ಸತ್ಯವೇ-ಮಿಥ್ಯವೇ?
    ದರ್ಶನಗಳಲ್ಲಿ ಪ್ರಧಾನವಾಗಿ ಚರ್ಚಿಸಲಾಗಿರುವ ತತ್ವಗಳಲ್ಲಿ ‘ಜಗತ್ತು‘ ಒಂದು . ಜಗತ್ತು -ಸತ್ಯವೇ- ಮಿಥ್ಯವೇ ? ಜೀವ , ಜಗತ್ತು .ಈಶ್ವರ ಇವುಗಳ ಸಂಬಂಧವೇನೆಂಬುದು -ಭಾರತೀಯ ದರ್ಶನಗಳಲ್ಲಿ -ಮುಖ್ಯ ಚರ್ಚೆ.

ದರ್ಶನಗಳಲ್ಲಿ ಜಗತ್ತು

      ಚಾರ್ವಾಕ ದರ್ಶನ
    ಚಾರ್ವಾಕ ದರ್ಶನದ ಪ್ರಕಾರ ಜಗತ್ತು ಸತ್ಯ ಪೃಥಿವೀ ,ಜಲ, ತೇಜಸ್ಸು ಮತ್ತು ವಾಯು ಇವು ನಾಲ್ಕು ಭೂತಗಳ (೪ ಮೂಲ ತತ್ವಗಳು) ಮಿಶ್ರಣ ಸಮಷ್ಟಿ (ಒಟ್ಟಾದ ದೊಡ್ಡ ರೂಪವೇ ಸಮಷ್ಟಿ -ವ್ಯಷ್ಟಿ ಚಿಕ್ಕ ರೂಪ) ವೇ ಜಗತ್ತು. ಐದನೆಯ ತತ್ವವೆಂದು ಹೇಳುವ ಆಕಾಶವು ಚರ್ವಾಕರ ಪ್ರಕಾರ ತತ್ವವೇ ಅಲ್ಲ . ಜಗತ್ತಿನ ಉತ್ಪತ್ತಿ ರಹಸ್ಯ ತಿಳಿಯಲು ಅಸಾಧ್ಯ . ಕಾರ್ಯ-ಕಾರಣವಾದ ವ್ಯರ್ಥ.
      ಜೈನರ ಜಗತ್ತು
    ಜೈನರ ಜಗತ್ತು ಮೂಲ ಅಣುರೂಪೀ ವಸ್ತುಗಳು ಎಂದರೆ ಪುದ್ಗಲದಿಂದಾಗಿದೆ (ಜೈನ ಧರ್ಮ). ಅಣುಗಳ ಸಂಘಾತದಿಂದ ನಮ್ಮ ಶರೀರ , ಮನಸ್ಸು , ಜಗತ್ತಿನ ಎಲ್ಲಾವಸ್ತುಗಳೂ ಆಗಿವೆ. ಅವರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ಅನೇಕಾಂತ ವಾದ , ಸ್ಯಾದ್ವಾದ ದ ಪ್ರಕಾರ ಯಾವ ವಾದವೂ ಕೊನೆಯಲ್ಲ- ಎಲ್ಲಾ ವಾದದಲ್ಲೂ ಸತ್ಯವಿರುವ ಸಾಧ್ಯತೆ ಇದೆ.
      ಬೌದ್ಧ ದರ್ಶನ ಮತ್ತು ಜಗತ್ತು
    ಬೌದ್ಧರು ನಾಲ್ಕು ವಿಧವಾದ ವಾದವನ್ನಿಟ್ಟಿದ್ದಾರೆ.--ಜಗತ್ತಿನ ವಿಚಾರದಲ್ಲಿ ಅವರಲ್ಲಿ ಅಭಿಪ್ರಾಯ ಬೇಧವಿದೆ.
  • ೧. ಶೂನ್ಯವಾದಿಗಳು ಜಗತ್ತಿಗೆ ಅಸ್ತಿತ್ವವೇ ಇಲ್ಲ ಎನ್ನುತ್ತಾರೆ .
  • ೨. ಯೋಗಾಚಾರದವರು ವಿಜ್ಞಾನವೊಂದೇ ಸತ್ಯ ಉಳಿದುದೆಲ್ಲಾ ಅಸತ್ಯವೆನ್ನುತ್ತಾರೆ .
  • ೩. ಸೌತ್ರಾಂತಿಕರು ಮತ್ತು ೪. (ಸ್ವಲ್ಪ ಅಭಿಪ್ರಾಯ ಬೇಧದಲ್ಲಿ) ವೈಭಾಷಿಕರು ಜಗತ್ತಿನ ಸತ್ಯತೆಯನ್ನೊಪ್ಪುತ್ತಾರೆ. ಅದು ಅಣು ಸಂಘಾತವೆನ್ನುತ್ತಾರೆ . ಇವರು ಸಂಘಾತವಾದಿಗಳು.
      ಸಾಂಖ್ಯ ಮತ್ತು ಯೋಗ ದರ್ಶನಗಳು
    ಸಾಂಖ್ಯ ಮತ್ತು ಯೋಗ ದರ್ಶನಗಳು ಸತ್ವ ರಜಸ್ತಮೋ ಗುಣಗಳಿಂದ ಕೂಡಿದ ಪ್ರಕೃತಿಯೇ ಜಗತ್ತಿಗೆ ಕಾರಣೀ ಗುಣಗಳು ಸಮಾವಸ್ಥೆಯಲ್ಲಿ ಇದ್ದರೆ ಏನೂ ಇರದು . ಅವು ಏರುಪೇರಾದಾಗ ಜಗತ್ತು ತೋರಿಕೊಳ್ಳುವುದು . ಪುರುಷನ (ಚೈತನ್ಯ) ಸಾನ್ನಿಧ್ಯದಿಂದ ಪ್ರಕೃತಿಯು ಪರಿಣಾಮಗೊಳ್ಳುವುದೆನ್ನುತ್ತಾರೆ.
    ಯೋಗ ದರ್ಶನವು ಜಗತ್ತಿಗೆ ಈಶ್ವರನು ನಿಮಿತ್ತ ಕಾರಣವೆನ್ನುತ್ತದೆ ಆದ್ದರಿಂದ ಇದನ್ನು ಸೇಶ್ವರ ಸಾಂಖ್ಯವೆನ್ನುತ್ತಾರೆ .
      ನ್ಯಾಯ ವೈಶೇಷಿಕ
    ನ್ಯಾಯ ವೈಶೇಷಿಕ ದರ್ಶನಗಳು ಜಗತ್ತಿಗೆ ಅಣುಗಳು ಕಾರಣವೆನ್ನುತ್ತವೆ . ದ್ವಣುಕ, ತ್ರ್ಯಣುಕಗಳಾಗಿ ಜಗತ್ತು ಉಂಟಾಗಿದೆ ಎನ್ನುತ್ತಾರೆ. ಅಣುಗಳ ಚಲನೆ ಜೋಡಣೆಗೆ “ಅದೃಷ್ಟವು“ ಪ್ರೇರಕವೆಂದು ಪ್ರಾಚೀನರು ಹೇಳಿದರೆ, ನಚಿತರದವರು ಈಶ್ವರನು ನಿಮಿತ್ತ ಕಾರಣವೆಂದೂ ,ಪರಮಾಣುಗಳು ಉಪಾದಾನ ಕಾರಣವೆನ್ನುತ್ತಾರೆ .
      ಪೂರ್ವಮೀಮಾಂಸ
    ಪೂರ್ವ ಮೀಮಾಂಸವು ಜಗತ್ತು ಅನಾದಿ ಎನ್ನುತ್ತದೆ. ಸೃಷ್ಟಿ ಸ್ಥತಿ ಲಯಗಳನ್ನು ಒಪ್ಪುವುದಿಲ್ಲ , ಕರ್ಮಗಳು ಫಲಕೊಡಲು ಪ್ರಾರಂಭವಾಗುವಾಗ ಅಣು ಸಂಯೋಗದಿಂದ ಜೀವಿಗಳು ಹುಟ್ಟುತ್ತವೆ, ಕರ್ಮಫಲ ಸಮಾಪ್ತಿಯೊಂದಿಗೆ ನಾಶವೂ ಆಗುತ್ತವೆ . ಜಗತ್ತು ಸತ್ಯ . ಹಾಗೆಯೇ ಅತೀಂದ್ರಿಯ ವಾದ , ಸ್ವರ್ಗ, ನರಕ , ಅದೃಷ್ಟ , -ವೇದಗಳು ಇವೆಲ್ಲಾ ಸತ್ಯ ಎನ್ನುತ್ತದೆ.
      ಅದ್ವೈತ ದರ್ಶನ
    ಅದ್ವೈತ ದರ್ಶನದ ಪ್ರಕಾರ ಜಗತ್ತು ಮಿಥ್ಯ - ಪರಿವರ್ತನಶೀಲ ಕೇವಲ ತೋರಿಕೆ ; ನಿರ್ಗುಣಬ್ರಹ್ಮ ನಿಂದ -ಮಾಯೆಯಿಂದ/ ಅವಿದ್ಯೆಯಿಂದ ಕೂಡಿದ ಈಶ್ವರನೇ ಜಗತ್ತಿಗೆ ನಿಮಿತ್ತ ಕಾರಣ ; ಆದರೆ ಜಗತ್ತು ವ್ಯವಹಾರಿಕವಾಗಿ ಸತ್ಯ . ಬ್ರಹ್ಮವು -ಜಗತ್ತಲ್ಲ; ಜಗತ್ತು ಬ್ರಹ್ಮವೇ .
      ವಿಶಿಷ್ಟಾದ್ವೈತ
    ವಿಶಿಷ್ಟಾದ್ವೈತದಲ್ಲಿ ಜಗತ್ತು ಸತ್ಯ - ಪರಮಾತ್ಮನ ಲೀಲೆ . ಎಲ್ಲದಕ್ಕೂ ಅವನೇ ನಿಮಿತ್ತ ಮತ್ತು ಉಪಾದಾನ ಕಾರಣ. ಜಗತ್ತು ಚೇತನ ಮತ್ತು ಅಚೇತನದಿಂದಾಗಿದೆ. ಆದರೆ ಪಂಚ ಭೂತಗಳು ಪಂಚೀಕರಣ ರೀತಿಯಲ್ಲಿ ಸೇರಿ ಜಗತ್ತಾಗಿದೆ. ಅದರಲ್ಲಿ ಪೂರ್ಣವಾಗಿ ಎಲ್ಲೆಲ್ಲೂ ಈಶ್ವರ ವ್ಯಾಪಿಸಿದ್ದಾನೆ.
      ದ್ವೈತ

ಪ್ರಕೃತಿಯು ಉಪಾದಾನ ಕಾರಣ. ಎಲ್ಲವೂ ಈಶ್ವರನ ಅಧೀನ . ಈಶ್ವರನು ನಿಮಿತ್ತ ಕಾರಣ . ಈ ಜಗತ್ತು ಸತ್ಯ ಹಾಗೂ ನಿತ್ಯ.

      ನಿಂಬಾರ್ಕ
    ನಿಂಬಾರ್ಕರು ಮಧ್ವ ಮತವನ್ನು ಒಪ್ಪಿದರೂ , ಈಶ್ವರನು ಜಗತ್ತಿಗೆ ನಿಮಿತ್ತ ಹಾಗೂ ಉಪಾದಾನ ಕಾರಣ ಎನ್ನುತ್ತಾರೆ .ಈಶ್ವರನಿಗೂ ಜಗತ್ತಿಗೂ ಬೇಧಾಬೇಧವಿದೆ ; ಸೂರ್ಯ ಮತ್ತು ರಶ್ಮಿಯಂತೆ ಎನ್ನುವುದು ಅವರ ಅಭಿಪ್ರಾಯ ಸಿದ್ಧಾಂತ.
      ವಲ್ಲಭಾಚಾರ್ಯರು
    ವಲ್ಲಭರು ಜಗತ್ತನ್ನು ಪರಬ್ರಹ್ಮನ ಸೃಷ್ಟಿ ಎನ್ನುತ್ತಾರೆ. ಜಗತ್ತು ಸತ್ಯ ಹಾಗೂ ಈಶ್ವರನಿಂದ ಬೇರೆ ಅಲ್ಲ. ಈಶ್ವರನು ಲೀಲಾರ್ಥವಾಗಿ ಜಗತ್ತನ್ನು ಸೃಷ್ಟಿಸಿದ್ದಾನೆ.. ಜಗತ್ತು ಬ್ರಹ್ಮನ ಸತ್ ಸ್ವರೂಪ , ಚಿತ್ ಆನಂದ ಸ್ವರೂಪಗಳು ಅದರಲ್ಲಿ ಸುಪ್ತವಾಗಿವೆ. ಆದರೆ ಅವನೇ ಜಗತ್ತಾದರೂ ,ಅವನಲ್ಲಿ ಬದಲಾವಣೆ ಇಲ್ಲ. ಅದು ಅವಿಕೃತ ಪರಿಣಾಮ. ಅನು ಜಗತ್ತಿಗೆ ನಿಮಿತ್ತ ಹಾಗೂ ಉಪಾದಾನ ಕಾರಣನಾಗಿದ್ದಾನೆ .
      ಚೈತನ್ಯರು
    ಚೈತನ್ಯರ ಅಚಿಂತ್ಯ ಬೇಧಾಬೇಧದ ಪ್ರಕಾರ -ಜಗತ್ತು ಸತ್ಯ; ಬ್ರಹ್ಮನು ಮಾಯಾಶಕ್ತಿಯ ಸಹಾಯದಿಂದ ಜಗತ್ತನ್ನು ಸೃಷ್ಟಿಸುತ್ತಾನೆ . ಅದರಲ್ಲಿ ಗುಣ, ಮಾಯೆ ಬ್ರಹ್ಮನ ಅಂಗ .ಜೀವ- ಮಾಯೆ ಜೀವರುಗಳಿಗೆ ಸ್ವ ಸ್ವರೂಪ ವಿಸ್ಮೃತಿಯನ್ಮ್ನಂಟುಮಾಡುತ್ತವೆ.
      ಶೈವ ದರ್ಶನ
    ಶೈವ ದರ್ಶನದಲ್ಲಿ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ , ಶಿವನು ಕೇವಲ ನಿಮಿತ್ತ ಕಾರಣ. ಜಗತ್ತು ಶಿವನ ಮಾಯೆ ಆಥವಾ ಶಿವನ ಶಕ್ತಿ ಕಾರಣವಾಗಿದೆ.
    ಕಾಶ್ಮೀರ ಶೈವರಲ್ಲಿ , ಶಿವನ ಇಚ್ಛಾಶಕ್ತಿಯೇ ಜಗತ್ತಿಗೆ ಕಾರಣ .ಜಗತ್ತು (ಪ್ರಕೃತಿ ) ಶಿವನ ದೇಹವಿದ್ದಂತೆ. ಪ್ರತಿಯೊಂದು ವಸ್ತುವೂ ಶಿವನ ಸಚ್ಚಾ ರೂಪ -ಎಂದರೆ ಶವನ ಮತ್ತೊಂದು ರೂಪ. ಶಿವ ಮತ್ತು ಜಗತ್ತು ಬೇರೆಯಲ್ಲ - ಜಗತ್ತು ತೋರಿಕೆ ಮಾತ್ರಾ . ಜಗತ್ತಿಗೆ ಮಾಯೆ ಅಥವಾ ಶಿವನ ಶಕ್ತಿ ಉಪಾದಾನ ಕಾರಣವಾಗಿದೆ. ಜಗತ್ತು ಜೀವನಿಗೆ ಬಂಧನಕಾರಿಯಾದುದರಿಂದ ಅದನ್ನು “ಪಾಶವೆಂದು ಕರೆಲಾಗಿದೆ.
    ಪಾಶುಪತ ಶೈವರಲ್ಲಿ ಕರ್ಮನಿರಪೇಕ್ಷನಾದ ಶಿವನೇ ಸೃಷ್ಟಿಗೆ ಕಾರಣನಾದರೆ , ಪ್ರತ್ಯಭಿಜ್ಞಾನ ದರ್ಶನ (ಕಾಶ್ಮೀರ ಶೈವ) ದಲ್ಲಿ ಅವನ ಇಚ್ಛಾ ಶಕ್ತಿ ಸೃಷ್ಟಿಗೆ ಕಾರಣ.

ಉಪಸಂಹಾರ

    ಭಾರತದಲ್ಲಿ ಇಷ್ಟು ಬಗೆಯ ವಿಚಾರ ಬೇಧವಿದ್ದರೂ , ಅನೇಕರು ಜ್ಞಾನಿಗಳೆಂದು ತಮ್ಮ ದರ್ಶನಗಳನ್ನು ಪ್ರತಿಪಾದಿಸಿದರೂ ಹಿಂಸಾತ್ಮಕ ಪ್ರತಿಭಟನೆಗಳಿಲ್ಲದೆ ಈ ಸಾವಿರಾರು ವರ್ಷದಿಂದ ಸಹಬಾಳ್ವೆ ನಡೆಸಿದ್ದಾರೆ. ಪ್ರತಿಯೊಬ್ಬ ದಾರ್ಶನಿಕರೂ ತಾವು ಸತ್ಯವನ್ನು ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ .ಮಧ್ವರು ತಾವು ಹನುಮನ ಅವತಾರವೆಂದು ಹೇಳಿಕೊಂಡರೆ , ಚೈತನ್ಯರು ತಾವು ಶ್ರೀಕೃಷ್ಣನ ಅವತಾರವೆಂದು ಹೇಳಿಕೊಂಡಿದ್ದಾರೆ . ಆದರೆ ಸತ್ಯವೇನೆಂಬುದು ನಿಗೂಢವಾಗಿಯೇ ಇದೆ.

ಆಧಾರ

೧. ವಿಕಿಪೀಡಿಯಾ ತತ್ವ ಶಾಸ್ತ್ರದ ಫೈಲುಗಳು ೨. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]

ನೋಡಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಗೀತೆ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು-- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ

ಉಲ್ಲೇಖ

Tags:

ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ಪೀಠಿಕೆಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ದರ್ಶನಗಳಲ್ಲಿ ಜಗತ್ತುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ಉಪಸಂಹಾರಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ಆಧಾರಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ನೋಡಿಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು ಉಲ್ಲೇಖಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಂತಿಮ ಸಂಸ್ಕಾರವಾಣಿಜ್ಯ(ವ್ಯಾಪಾರ)ಕರ್ನಾಟಕ ವಿಧಾನ ಪರಿಷತ್ಪ್ರಜಾವಾಣಿಎಚ್. ಜಿ. ದತ್ತಾತ್ರೇಯರಾಷ್ಟ್ರೀಯ ಭದ್ರತಾ ಪಡೆಅಕ್ಬರ್ಮೈಸೂರು ದಸರಾದಕ್ಷಿಣ ಭಾರತದ ಪಕ್ಷಿಗಳ ಪಟ್ಟಿಭಾರತೀಯ ಅಂಚೆ ಸೇವೆಮೈಸೂರು ಚಿತ್ರಕಲೆವಿಭಕ್ತಿ ಪ್ರತ್ಯಯಗಳುಸರ್ವಜ್ಞಕಾಮಾಕ್ಯ ದೇವಾಲಯನಂಜನಗೂಡುಕನ್ನಡ ಕಾಗುಣಿತಕರ್ಬೂಜಉತ್ತರ ಕರ್ನಾಟಕಅಲಂಕಾರಶಾಲೆಧರ್ಮಭಾರತ ರತ್ನಆಸ್ಟ್ರೇಲಿಯಗೋವಿಂದ ಪೈಕುಕ್ಕೆ ಸುಬ್ರಹ್ಮಣ್ಯ ದೇವಾಲಯಆದಿಪುರಾಣರಾಯಚೂರು ಜಿಲ್ಲೆಗುರು (ಗ್ರಹ)ಮಹಿಳೆ ಮತ್ತು ಭಾರತಚೇಳು, ವೃಶ್ಚಿಕಬಾಹುಬಲಿಪರಿಪೂರ್ಣ ಪೈಪೋಟಿತೆಂಗಿನಕಾಯಿ ಮರಹನುಮ ಜಯಂತಿನಾಗವರ್ಮ-೧ಕುಷ್ಠರೋಗಕನ್ನಡ ಸಾಹಿತ್ಯ ಪ್ರಕಾರಗಳುಶಿಶುನಾಳ ಶರೀಫರುಆರತಿಜ್ಯೋತಿಬಾ ಫುಲೆಮದುವೆಕ್ಷಯಬೈರಾಗಿ (ಚಲನಚಿತ್ರ)ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಆಟಿಸಂಹುಬ್ಬಳ್ಳಿಗ್ರಂಥ ಸಂಪಾದನೆಕುಮಾರವ್ಯಾಸಪಿ.ಲಂಕೇಶ್ಸ್ತ್ರೀಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕನ್ನಡ ಜಾನಪದಪನ್ನೇರಳೆಚಂದ್ರಯಾನ-೩ಕನ್ನಡಪ್ರಭಕೊರೋನಾವೈರಸ್ವ್ಯಾಪಾರಗರ್ಭಧಾರಣೆಆಂಗ್ಲ ಭಾಷೆಕನ್ನಡ ರಂಗಭೂಮಿಬೀದರ್ಛತ್ರಪತಿ ಶಿವಾಜಿಭಾಮಿನೀ ಷಟ್ಪದಿಕಿರುಧಾನ್ಯಗಳುಸೂರ್ಯ (ದೇವ)ಆಯುರ್ವೇದಕನ್ನಡ ವಿಶ್ವವಿದ್ಯಾಲಯಭಾರತದ ಚುನಾವಣಾ ಆಯೋಗಕರ್ನಾಟಕ ಹೈ ಕೋರ್ಟ್ಸಾನೆಟ್ಕರ್ನಾಟಕದಲ್ಲಿ ವನ್ಯಜೀವಿಧಾಮಗಳುಒಂದನೆಯ ಮಹಾಯುದ್ಧ🡆 More