ಬೀದರ್ ಕೋಟೆ

ಬೀದರ್ ಕೋಟೆ (Urdu قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ.

ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ. ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.

ಬೀದರ್ ಕೋಟೆ
ಬೀದರ್ ಇದರ ಭಾಗ
ಬೀದರ್, ಭಾರತ image = ಬೀದರ್ ಕೋಟೆ
ಬೀದರ್ ಕೋಟೆ
ಬೀದರ್ ಕೋಟೆ ಪ್ರವೇಶದ್ವಾರದ ವಿಹಂಗಮ ನೋಟ
ಬೀದರ್ ಕೋಟೆ is located in Karnataka
ಬೀದರ್ ಕೋಟೆ
ಬೀದರ್ ಕೋಟೆ
ನಿರ್ದೇಶಾಂಕಗಳು(17°55′19″N 77°31′25″E / 17.9219°N 77.5236°E / 17.9219; 77.5236)[೧]
ಶೈಲಿಕೋಟೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಭಗ್ನಾವಶೇಷಗಳು
ಸ್ಥಳದ ಇತಿಹಾಸ
ಕಟ್ಟಿದ್ದು15ನೇ ಸತಮಾನ
ಕಟ್ಟಿದವರು ಬಹ್‌ಮನಿ ಸಂಸ್ಥಾನದ ಬಹ್‌ಮನ್ ಅಲಾ-ಉದ್-ದಿನ್ 1424 ರಲ್ಲಿ ಕಟ್ಟಿದ್ದು
ಸಾಮಗ್ರಿಗಳುಗ್ರಾನೈಟ್‌ಗಳು ಮತ್ತು ಲೈಮ್ ಮೋರ್ಟಾರ್
ಬೀದರ್ ಕೋಟೆ
ಬೀದರ್ ಕೋಟೆ, ಕರ್ನಾಟಕ
ಬೀದರ್ ಕೋಟೆ
ತಖ್ತ್ ಮಹಲ್, ಬೀದರ್ ಕೋಟೆ
ಬೀದರ್ ಕೋಟೆ
ಸೋಲ್ಹಾ ಖಾಂಬ ಮಸೀದಿ
ಬೀದರ್ ಕೋಟೆ
ದೀವಾನ್-ಇ-ಅಮ್
ಬೀದರ್ ಕೋಟೆ
ದೀವಾನ್-ಇ-ಅಮ್ ಪಳೆಯುಳಿಕೆಗಳು
ಬೀದರ್ ಕೋಟೆ
ರಂಗೀನ್ ಮಹಲ್ ಮುಂಭಾಗದ ನೋಟ
ಬೀದರ್ ಕೋಟೆ
ರಂಗೀನ್ ಮಹಲ್ ಮೇಲ್ಭಾಗದ ನೋಟ

ಭೂ ವಿವರಣೆ

ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ. ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, 22 miles (35 km) ಉದ್ದ ಮತ್ತು 12 miles (19 km) ಅಗಲದಷ್ಟು ವಿಶಾಲವಾಗಿದೆ. ಒಟ್ಟಾರೆ 12 square miles (31 km2) ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. ಕಲ್ಯಾಣಿ ಚಾಲುಕ್ಯರ  ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ 40 miles (64 km) ದೂರದಲ್ಲಿದೆ.

ನದಿ ವ್ಯವಸ್ಥೆ

ಬೀದರ್ ನಗರ ಮತ್ತು ಜಿಲ್ಲೆಯನ್ನು ಆವರಿಸಿಕೊಂಡಿರುವ ಸುತ್ತಮುತ್ತಲಿನ ಭೂಪ್ರದೇಶ ಕಾರಂಜ ನದಿ, ಗೋದಾವರಿ ನದಿಯ ಮುಖ್ಯ ಉಪನದಿಯಾದ ಮಂಜಿರದ ಕಾಲುವೆಗಳಿಂದ ಸುತ್ತುವರಿಯಲ್ಪಟ್ಟಿದೆ .

ಹವಾಮಾನ

ಹವಾಮಾನ ವರ್ಷಪೂರ ಹಿತಕರವಾಗಿರುತ್ತದೆ, ಬೇಸಿಗೆಯ ತಿಂಗಳುಗಳಾದ ಏಪ್ರಿಲ್ ಮತ್ತು ಮೇಗಳಲ್ಲಿಯೂ ಕೂಡ, ತೀಕ್ಷ್ಣ ಮತ್ತು ಇದ್ದಕ್ಕಿದಂತೆ ಬೀಳುವ ಗುಡುಗು ಮಳೆಯಿಂದ ಇಡೀ ಪ್ರದೇಶ ತಣ್ಣಗಾಗುತ್ತದೆ. ಜೂನ್ ಪ್ರಾರಂಭದಲ್ಲಿ ಉತ್ತರ-ಪಶ್ಚಿಮದ ಮಾನ್ಸೂನ್ ಇಡೀ ಪ್ರದೇಶದ ಹಿತಕರ ವಾತಾವರಣವನ್ನು ಆವರಿಸಿಕೊಳ್ಳುತ್ತದೆ. ಚಳಿಗಾಲ ಕೂಡ ಆಪ್ಯಾಯಮಾನವಾಗಿರುತ್ತದೆ. ನಗರ ಮತ್ತು ಕಣ್ಣಳತೆಯ ಸುತ್ತಲಿನ ಹಳ್ಳಿಗಳು ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ದಂತಕತೆಗಳನ್ನು ಹೊಂದಿವೆ.

ಸ್ಮಾರಕಗಳು

  • ಬಹಮನಿ ರಾಜಮನೆತನವು ಡೆಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ಕತ್ತಲಾಯಿತು. ಈ ಸಂದರ್ಭದಲ್ಲಿ ಕಟ್ಟಲಾದ ಕೆಲವು ಮಹತ್ವವಾದ ಸ್ಮಾರಕಗಳ ಪಟ್ಟಿ ಇಲ್ಲಿದೆ. ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿ ಪಡೆದಿತ್ತು .
ಬೀದರ್ ಕೋಟೆ 
ಬೀದರ್ ಕೋಟೆ, ಕರ್ನಾಟಕ
  • ಡೆಕ್ಕನ್ ಪ್ರಸ್ತಭೂಮಿಯ ಒಂದು ಅಂಚಿನಲ್ಲಿ ಸ್ಥಾಪಿತವಾಗಿರುವ ಬೀದರ್ ಕೋಟೆಯು ಚೌಕೊನಾಕಾರದಲ್ಲಿ ಕಟ್ಟಲಾಗಿದೆ, ಈ ಕೋಟೆಯ ಸುತ್ತಳತೆ 0.75 miles (1.21 km) ಉದ್ದ ಮತ್ತು 0.5 miles (0.80 km)ಅಗಲವಾಗಿದೆ. ಕೋಟೆಯ ಕೆಲವು ಪಾರ್ಶ್ವಗಳು ಹಾಳಾಗಿದ್ದರೂ ಸಹ ಬೀದರ್ ಕೋಟೆಯ ಆಕರ್ಷಣೆ ಇಂದಿಗೂ ಸಹ ಕುಂದಿಲ್ಲ. ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ.
  • ಬೀದರ್ ಕೋಟೆಯು ಏಳು ದ್ವಾರಗಳನ್ನು ಹೊಂದಿದೆ. ಮುಖ್ಯ ದ್ವಾರವು ಪರ್ಷಿಯನ್ ವಾಸ್ತುಶಿಲ್ಪ ಮಾದರಿಯಂತೆ ಕಟ್ಟಲಾಗಿದೆ. 'ಗುಂಬದ್ ದರ್ವಾಜ' ಎಂಬ ದ್ವಾರವು ಪರ್ಷಿಯನ್ ವಾಸ್ತುಶಿಲ್ಪದ ಮಾದರಿಯನ್ನು ಅನುಸರಿಸಿ ನಿರ್ಮಿಸಲಾಗಿದೆ. ಬೀದರ್ ಕೋಟೆಯಾ ಒಳ ಬರಲು ಬಳಸುವ ಮತ್ತೊಂದು ದ್ವಾರ 'ಶೇರ್ಜ ದರ್ವಾಜಾ". ಈ ದ್ವಾರದ ಹೊರ ಕವಚದ ಮೇಲೆ ಎರಡು ಹುಲಿಗಳನ್ನು ಕೆತ್ತಲಾಗಿದೆ.
  • ಶಿಯಾ ಸಮುದಾಯದ ನಂಬಿಕೆಯ ಪ್ರಕಾರ ಹುಲಿಯು ವಿಜಯದ ಸಂಕೇತವಾಗಿದೆ ಮತ್ತು ಮುಸ್ಲಿಂ ಸಮುದಾಯದ ನಾಯಕರಾದ [[::en:Ali ibn Abi Talib|ಅಲಿ]]ಯವರ ಪ್ರತೀಕವಾಗಿದೆ. ಈ ಹುಲಿಗಳ ಲಾಂಛನವು ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿತ್ತು .
  • ಈ ಕೋಟೆಯಲ್ಲಿರುವ ಇತರ ದ್ವಾರಗಳೆಂದರೆ, ದಕ್ಷಿಣದಲ್ಲಿರುವ "ಫತೇಹ್ ದರ್ವಾಜ"ವು ಅಷ್ಟಾಕಾರದ ಸ್ಥಂಭಗಳು ಮತ್ತು ಕೀಲು ಸೇತುವೆಯನ್ನು ಹೊಂದಿದೆ. ಪೂರ್ವದಲ್ಲಿ "ತಾಲ್ಘಾಟ್ ದರ್ವಾಜ", "ಡೆಲ್ಲಿ ದರ್ವಾಜ" ಮತ್ತು "ಮಾಂಡು ದರ್ವಾಜ" ಗಳಿವೆ. ಈ ಕೋಟೆಯ ಪ್ರವೇಶದ್ವಾರದಲ್ಲಿ ಬೃಹತ್ ತೋಪೊಂದನ್ನು "ಮುಂಡ ಬುರುಜ್ "ನಿಲ್ಲಿಸಲಾಗಿದೆ.
  • ಬಹಮನಿ ಸುಲ್ತಾನರು ಸಸ್ಸಾನಿಯನ್ ರಾಜಮನೆತನದ ಲಾಂಛನಗಳನ್ನು ತಮ್ಮ ಆಳ್ವಿಕೆಯ ಕಾಲದಲ್ಲಿ ಅಳವಡಿಸಿಕೊಂಡರು ಎಂದು ಭಾವಿಸಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸಸ್ಸಾನಿಯನ್ ರಾಜಮನೆತನದ ಲಾಂಛನಗಳಾದ ಕಿರೀಟದ ಚಿಹ್ನೆ ಮತ್ತು ಅರ್ಧಚಂದ್ರಾಕೃತಿಯ ಚಿಹ್ನೆಗಳನ್ನು ಬಹಮನಿ ರಾಜಮನೆತನದ ಕಟ್ಟಡಗಳ ಮೇಲೆ ಕಾಣಬಹುದಾಗಿದೆ.

ತಖ್ತ್ ಮಹಲ್

ಬೀದರ್ ಕೋಟೆ 
ತಖ್ತ್ ಮಹಲ್, ಬೀದರ್ ಕೋಟೆ

ತಖ್ತ್ ಮಹಲ್ ಬೀದರ ಕೋಟೆಯೋಳಗಿರುವ ಅನೇಕ ಅರಮನೆ ಸಮೂಹಗಳಲ್ಲಿ ಒಂದಾಗಿದೆ. ಈ ಅರಮನೆಯು ರಾಜ ಮನೆತನದ ನಿವಾಸಕ್ಕೆಂದು ಬಳಸಲಾಗುತ್ತಿತ್ತು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅರಮನೆಯ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದರೂ ಸಹ ಅರಮನೆಯ ಒಳಗೆ ಮತ್ತು ಹೊರಗೆ ಓಡಾಡಲು ಅನುಕೂಲವಾಗುವಂತೆ ಬೇರೆ ಬೇರೆ ದಿಕ್ಕಿನಲ್ಲಿ ಸಣ್ಣ ಪ್ರವೇಶ ದ್ವಾರಗಳಿವೆ. ಈ ಅರಮನೆಯನ್ನು ರಾಜಗೃಹವೆಂದು ಕರೆಯಲಾಗುತ್ತಿತ್ತು.

ಇತಿಹಾಸ

  • ತಖ್ತ್ ಮಹಲ್ಅರಮನೆಯನ್ನು ಬಹಮನಿ ಸುಲ್ತಾನನಾದ ಅಹಮದ್ ಷಾ ಬಹಮನಿ 1426-1432 ಅವಧಿಯಲ್ಲಿ ನಡುವೆ ನಿರ್ಮಿಸಿದನು. ತಖ್ತ್ ಮಹಲ್ ಬೀದರ್ ಕೋಟೆಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಅರಮನೆಯ ಪ್ರಾಂಗಣವನ್ನು ಆಡಳಿತಗಾರರು ಖಾಸಗಿ ದರ್ಬಾರ್ ಮತ್ತು ಚರ್ಚೆಗಳಿಗಾಗಿ ವ್ಯಾಪಕವಾಗಿ ಬಳಸಿದರು. ಕಟ್ಟಡದ ರಚನೆಯು ಸಂಕೀರ್ಣ ವಾಸ್ತುಶೈಲಿಯದ್ದಾಗಿದೆ.
  • ತಖ್ತ್ ಮಹಲಿನ ದರ್ಬಾರ್ ಸಭಾಂಗಣವನ್ನು ವಿವಿಧ ಸಮಾರಂಭಗಳಿಗಾಗಿ ಮತ್ತು ಬೀದರ್ ಅರಸರ ಪ್ರಮುಖ ಕಾರ್ಯಕ್ರಮಗಳಿಗಾಗಿ ಉಪಯೋಗಿಸುತ್ತಿದ್ದರು. ಬಹಮನಿ ಸುಲ್ತಾನರ ಬೀದರ್ ಸಾಮ್ರಾಜ್ಯದ ಅನುಸ್ಥಾಪನ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳು ಇಲ್ಲಿ ನಡೆದಿವೆ. ಪ್ರಸ್ತುತ ಕಾಲದಲ್ಲಿ ಬೀದರ್ ಕೋಟೆಯ ಕಮಾನುಗಳು ಮಾತ್ರ ಸುಸ್ಥಿತಿಯಲ್ಲಿವೆ.
  • ಈ ಅರಮನೆಯ ಒಳಗಿನ ಗುಮ್ಮಟ ತನ್ನ ವಿಸ್ತಾರ ಮತ್ತು ವಿಸ್ತೀರ್ಣದಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಹಲಿನ ಒಳಗೆ ನಿರ್ಮಿಸಲಾಗಿರುವ ಕೋಣೆಗಳನ್ನು ರಾಜಮನೆತನದವರ ಖಾಸಗಿ ನಿವಾಸಕ್ಕಾಗಿ ಬಳಸಲಾಗುತ್ತಿತ್ತು.
ಬೀದರ್ ಕೋಟೆ 
ತಖ್ತ್ ಮಹಲ್ ಒಳಗಡೆ

ಪ್ರವೇಶ

ಬೀದರ್ ರಸ್ತೆ, ರೈಲು ಮತ್ತು ವಾಯು ಸಾರಿಗೆಗಳಿಂದ ಉತ್ತಮವಾಗಿ ಸಂಪರ್ಕಿತಗೊಂಡಿದೆ. ಬೀದರ್ ನಗರ ಬೆಂಗಳೂರಿನಿಂದ ದಕ್ಷಿಣಕ್ಕೆ 740 kilometres (460 mi) ದೂರ NH 7ನಲ್ಲಿ 116 kilometres (72 mi) ಗುಲ್ಬರ್ಗದ ನೈರುತ್ಯಕ್ಕೆ ಮತ್ತು 130 kilometres (81 mi)  NH 9 ನಲ್ಲಿ ಹೈದರಬಾದ್‌ನಿಂದ ಸಂಪರ್ಕಹೊಂದಿದೆ.

ವಿಮಾನ ನಿಲ್ದಾಣ

ಬೀದರ್ ಕೋಟೆಗೆ ಪ್ರವೇಶ

ಬೀದರ್ ಕೋಟೆ ಹೈದರಾಬಾದ್ ನಿಂದ ೧೧೫ ಕಿ.ಮಿ ದೂರದಲ್ಲಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ

ದ ಡರ್ಟಿ ಪಿಕ್ಚರ್, ೨೦೧೧ರ ಬಾಲಿವುಡ್ ಹಿಟ್ ಸಿನೆಮಾದ ಇಶ್ಕ್ ಸುಫಿಯಾನ ಹಾಡು ಬೀದರ್ ಕೋಟೆಯಲ್ಲಿ ಚಿತ್ರಿಸಲ್ಪಟ್ಟಿದೆ. ವಿದ್ಯಾ ಬಾಲನ್ ಮತ್ತು ಇಮ್ರಾನ್ ಹಶ್ಮಿ ಈ ಹಾಡಿನ ಚಿತ್ರೀಕರಣದಲ್ಲಿದ್ದಾರೆ.

ಬೀದರ್ ಕೋಟೆ ಒಳಗಿನ ಸ್ಮಾರಕಗಳು

ಇವನ್ನೂ ನೋಡಿ

ಬಾಹ್ಯ ಕೊಂಡಿಗಳು

ಚಿತ್ರಗಳು

ಉಲ್ಲೇಖಗಳು

Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.

Tags:

ಬೀದರ್ ಕೋಟೆ ಭೂ ವಿವರಣೆಬೀದರ್ ಕೋಟೆ ಸ್ಮಾರಕಗಳುಬೀದರ್ ಕೋಟೆ ಇತಿಹಾಸಬೀದರ್ ಕೋಟೆ ಪ್ರವೇಶಬೀದರ್ ಕೋಟೆ ಜನಪ್ರಿಯ ಸಂಸ್ಕೃತಿಯಲ್ಲಿಬೀದರ್ ಕೋಟೆ ಒಳಗಿನ ಸ್ಮಾರಕಗಳುಬೀದರ್ ಕೋಟೆ ಇವನ್ನೂ ನೋಡಿಬೀದರ್ ಕೋಟೆ ಬಾಹ್ಯ ಕೊಂಡಿಗಳುಬೀದರ್ ಕೋಟೆ ಚಿತ್ರಗಳುಬೀದರ್ ಕೋಟೆ ಉಲ್ಲೇಖಗಳುಬೀದರ್ ಕೋಟೆಉರ್ದು

🔥 Trending searches on Wiki ಕನ್ನಡ:

ಮಡಿವಾಳ ಮಾಚಿದೇವಹಸ್ತ ಮೈಥುನಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಬಾಬು ಜಗಜೀವನ ರಾಮ್ಜಾಹೀರಾತುಭಾರತೀಯ ಮೂಲಭೂತ ಹಕ್ಕುಗಳುವಾಯು ಮಾಲಿನ್ಯಕಪ್ಪೆ ಅರಭಟ್ಟಮಂಗಳಮುಖಿಚಂದ್ರಶೇಖರ ಕಂಬಾರಆಪ್ತಮಿತ್ರಬಂಗಾರದ ಮನುಷ್ಯ (ಚಲನಚಿತ್ರ)ಶಿಲೀಂಧ್ರಚಂದನಾ ಅನಂತಕೃಷ್ಣನೈಸರ್ಗಿಕ ಸಂಪನ್ಮೂಲಭಾರತದ ಸಂವಿಧಾನ ರಚನಾ ಸಭೆಮಲ್ಲಿಗೆಹೃದಯಾಘಾತಕರ್ನಾಟಕತಿಗಣೆಶ್ರೀನಿವಾಸ ರಾಮಾನುಜನ್ಮಂಗಳೂರುಸೌಂದರ್ಯ (ಚಿತ್ರನಟಿ)ರಾಗಿವಿಕಿಪೀಡಿಯಕರ್ಣವ್ಯಂಜನಮೋಡ ಬಿತ್ತನೆಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ತಾಪಮಾನಜಾತ್ಯತೀತತೆಯೋಗ ಮತ್ತು ಅಧ್ಯಾತ್ಮಎಚ್.ಎಸ್.ವೆಂಕಟೇಶಮೂರ್ತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಖ್ಯಾತ ಕರ್ನಾಟಕ ವೃತ್ತಲಕ್ಷ್ಮಣಋಗ್ವೇದಹನುಮ ಜಯಂತಿಜ್ಞಾನಪೀಠ ಪ್ರಶಸ್ತಿಬಿ. ಆರ್. ಅಂಬೇಡ್ಕರ್ರಹಮತ್ ತರೀಕೆರೆಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಹುರುಳಿಸನ್ನತಿತ್ರಿವೇಣಿಕೆ.ವಿ.ಸುಬ್ಬಣ್ಣಅಂಬರೀಶ್ಭಾರತದಲ್ಲಿ ತುರ್ತು ಪರಿಸ್ಥಿತಿರನ್ನಕನ್ನಡ ಸಾಹಿತ್ಯಮಂತ್ರಾಲಯವೇಗೋತ್ಕರ್ಷದ್ರಾವಿಡ ಭಾಷೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಡಿ.ಎಸ್.ಕರ್ಕಿಕನ್ನಡ ಕಾಗುಣಿತಭಾರತೀಯ ಶಾಸ್ತ್ರೀಯ ನೃತ್ಯಜಿ.ಪಿ.ರಾಜರತ್ನಂಬೆಂಗಳೂರು ಗ್ರಾಮಾಂತರ ಜಿಲ್ಲೆಕಲ್ಯಾಣಿವಿರಾಟ್ ಕೊಹ್ಲಿಭೀಮಸೇನಜಾಗತಿಕ ತಾಪಮಾನಆದಿ ಶಂಕರದೆಹಲಿಮಧುಮೇಹಪ್ರೇಮಾತೆಂಗಿನಕಾಯಿ ಮರವೃದ್ಧಿ ಸಂಧಿಮಾನವ ಹಕ್ಕುಗಳುಭ್ರಷ್ಟಾಚಾರಕನ್ನಡ ಛಂದಸ್ಸುಗಣೇಶಸಮಾಜ🡆 More