ಪಕ್ಷ

ಪಕ್ಷ ಶಬ್ದವು ಹಿಂದೂ ಚಾಂದ್ರಮಾನ ಪಂಚಾಂಗದ ಒಂದು ತಿಂಗಳಿನಲ್ಲಿ ಎರಡುವಾರದ ಅವಧಿ ಅಥವಾ ಒಂದು ಚಾಂದ್ರಹಂತವನ್ನು ಸೂಚಿಸುತ್ತದೆ.

ಈ ಶಬ್ದದ ಅರ್ಥ ಅಕ್ಷರಶಃ ಪಕ್ಕ ಅಥವಾ ಬದಿ ಎಂದು. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಹಿಂದೂ ಪಂಚಾಂಗದಲ್ಲಿ ಒಂದು ಚಾಂದ್ರಮಾಸವು ಎರಡು ಪಕ್ಷಗಳನ್ನು ಹೊಂದಿರುತ್ತದೆ ಮತ್ತು ಅಮಾವಾಸ್ಯೆಯೊಂದಿಗೆ ಆರಂಭವಾಗುತ್ತದೆ. ಚಾಂದ್ರದಿನಗಳನ್ನು ತಿಥಿಗಳು ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ತಿಂಗಳು ೩೦ ತಿಥಿಗಳನ್ನು ಹೊಂದಿರುತ್ತದೆ. ಒಂದು ತಿಥಿಯ ಅವಧಿ 20 – 27 ಗಂಟೆಗಳ ನಡುವೆ ಬದಲಾಗಬಹುದು. ಒಂದು ಪಕ್ಷವು ೧೫ ತಿಥಿಗಳನ್ನು ಹೊಂದಿರುತ್ತದೆ. ಇವನ್ನು ಚಂದ್ರನ ೧೨ ಡಿಗ್ರಿ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ನಡುವಿನ ಮೊದಲ ಪಕ್ಷವನ್ನು "ಗೌರ ಪಕ್ಷ" ಅಥವಾ ಶುಕ್ಲ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಪ್ರಕಾಶಮಾನವಾಗುತ್ತ ಹೋಗುವ ಅವಧಿ. ತಿಂಗಳ ಎರಡನೇ ಪಕ್ಷವನ್ನು "ಕೃಷ್ಣ ಪಕ್ಷ" ಅಥವಾ ವದ್ಯ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಮಬ್ಬಾಗುತ್ತ ಹೋಗುವ ಅವಧಿ. ನಿಮಚ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಕೃಷ್ಣಪಕ್ಷದ ಮೊದಲ ದಿನದಿಂದ ಆರಂಭಿಸಿದರೆ ಗುಜರಾತ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಶುಕ್ಲಪಕ್ಷದ ಮೊದಲ ದಿನದಿಂದ ಆರಂಭಿಸುತ್ತದೆ.

ಶುಕ್ಲ ಒಂದು ಸಂಸ್ಕೃತ ಶಬ್ದ. ಇದರರ್ಥ "ಬಿಳಿ". ಈ ಪಕ್ಷವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಅಸ್ತಿತ್ವದ ಪ್ರತಿ ಸಮತಲದ ಬೆಳವಣಿಗೆ ಅಥವಾ ವಿಸ್ತರಣೆಗೆ ಅನುಕೂಲಕರವಾಗಿರುತ್ತದೆ.

ಈ ಅವಧಿಯಲ್ಲಿ ಅಸಂಖ್ಯಾತ ಹಬ್ಬಗಳನ್ನು ಆಚರಿಸಲಾಗುತ್ತದೆ, ಉದಾಹರಣೆಗೆ ನವರಾತ್ರಿ ಹಬ್ಬ, ತುಂಬಾ ಮುಖ್ಯವಾಗಿ ಚೈತ್ರ ನವರಾತ್ರಿ ಮತ್ತು ಆಶ್ವಯುಜ ನವರಾತ್ರಿ.

ದಿನ
ತಿಥಿ
ಹಬ್ಬ ಮಾಸ
೧ನೇ ದಿನ ಪಾಡ್ಯ
ಬಲಿ ಪ್ರತಿಪದ, ಗೋವರ್ಧನ ಪೂಜೆ ಕಾರ್ತಿಕ
೨ನೇ ದಿನ ಬಿದಿಗೆ ಭಾಯಿ ಬೀಜ್
ಕಾರ್ತಿಕ
೩ನೇ ದಿನ ತದಿಗೆ ತೀಜ್
ಭಾದ್ರಪದ
೩ನೇ ದಿನ ತದಿಗೆ ಅಕ್ಷಯ ತೃತೀಯಾ ವೈಶಾಖ
೪ನೇ ದಿನ ಚತುರ್ಥಿ
ಗಣೇಶ ಚತುರ್ಥಿ ಭಾದ್ರಪದ
೪ನೇ ದಿನ ಚತುರ್ಥಿ ಗಣೇಶ ಜಯಂತಿ ಮಾಘ
೫ನೇ ದಿನ ಪಂಚಮಿ
ನುವಾಖಾಯ್ ಭಾದ್ರಪದ
೫ನೇ ದಿನ ಪಂಚಮಿ ವಿವಾಹ ಪಂಚಮಿ ಮಾರ್ಗಶಿರ
೬ನೇ ದಿನ ಷಷ್ಠಿ
ಶೀತಲ ಷಷ್ಠಿ ಜ್ಯೇಷ್ಠ
೯ನೇ ದಿನ ನವಮಿ
ರಾಮ ನವಮಿ ಚೈತ್ರ
೧೦ನೇ ದಿನ ದಶಮಿ ವಿಜಯದಶಮಿ ಆಶ್ವಯುಜ
೧೧ನೇ ದಿನ ಏಕಾದಶಿ ಶಯನೀ ಏಕಾದಶಿ ಆಷಾಢ
೧೧ನೇ ದಿನ ಏಕಾದಶಿ ವೈಕುಂಠ ಏಕಾದಶಿ ಮಾರ್ಗಶಿರ
೧೪ನೇ ದಿನ ಚತುರ್ದಶಿ
ಸಂವತ್ಸರಿ
ಭಾದ್ರಪದ
೧೫ನೇ ದಿನ
ಹುಣ್ಣಿಮೆ ಗುರು ಪೂರ್ಣಿಮೆ ಆಷಾಢ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಎಸ್.ನಿಜಲಿಂಗಪ್ಪಜೀತ ಪದ್ಧತಿಗುಪ್ತಗಾಮಿನಿ (ಧಾರಾವಾಹಿ)ಪೂರ್ಣಚಂದ್ರ ತೇಜಸ್ವಿಕರ್ನಾಟಕ ಯುದ್ಧಗಳುಭಾರತೀಯ ಮೂಲಭೂತ ಹಕ್ಕುಗಳುಯಕ್ಷಗಾನಮುಮ್ಮಡಿ ಕೃಷ್ಣರಾಜ ಒಡೆಯರುಕೆಂಪೇಗೌಡ (ಚಲನಚಿತ್ರ)ಜಾತ್ಯತೀತತೆಗೌತಮಿಪುತ್ರ ಶಾತಕರ್ಣಿಕನ್ನಡ ರಾಜ್ಯೋತ್ಸವಶಿವಮೊಗ್ಗಶಾತವಾಹನರುಸಾಮ್ರಾಟ್ ಅಶೋಕಭಾರತದ ಸ್ವಾತಂತ್ರ್ಯ ದಿನಾಚರಣೆಕಾದಂಬರಿಕದಂಬ ರಾಜವಂಶವಿಕ್ರಮಾರ್ಜುನ ವಿಜಯಅಭಯಾರಣ್ಯಗಳುಆಂಡಯ್ಯಚಂದ್ರಹರ್ಡೇಕರ ಮಂಜಪ್ಪಮಲೈ ಮಹದೇಶ್ವರ ಬೆಟ್ಟಕ್ರೀಡೆಗಳುಕುಡಿಯುವ ನೀರುಅಲಿಪ್ತ ಚಳುವಳಿಟೊಮೇಟೊಯುವರತ್ನ (ಚಲನಚಿತ್ರ)ಊಟಭಾರತೀಯ ನಾಗರಿಕ ಸೇವೆಗಳುಭಾರತೀಯ ಅಂಚೆ ಸೇವೆಅಲಾವುದ್ದೀನ್ ಖಿಲ್ಜಿಸರ್ವಜ್ಞಯಜಮಾನ (ಚಲನಚಿತ್ರ)ಶಬ್ದಮೈಟೋಕಾಂಡ್ರಿಯನ್ರೆವರೆಂಡ್ ಎಫ್ ಕಿಟ್ಟೆಲ್ಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆತಲಕಾಡುಕೇಂದ್ರಾಡಳಿತ ಪ್ರದೇಶಗಳುಜೇನು ಹುಳುಶಬ್ದಮಣಿದರ್ಪಣಶ್ಯೆಕ್ಷಣಿಕ ತಂತ್ರಜ್ಞಾನಜೀನ್-ಜಾಕ್ವೆಸ್ ರೂಸೋಅಭಯ ಸಿಂಹಚದುರಂಗ (ಆಟ)ಎರಡನೇ ಮಹಾಯುದ್ಧಇರ್ಫಾನ್ ಪಠಾಣ್ಸಾಲುಮರದ ತಿಮ್ಮಕ್ಕನವಣೆಸಸ್ಯಸರ್ಕಾರೇತರ ಸಂಸ್ಥೆಕೈಗಾರಿಕೆಗಳ ಸ್ಥಾನೀಕರಣ೨೦೧೬ ಬೇಸಿಗೆ ಒಲಿಂಪಿಕ್ಸ್ಇಂಟೆಲ್ಪ್ಯಾರಾಸಿಟಮಾಲ್ಸೂಳೆಕೆರೆ (ಶಾಂತಿ ಸಾಗರ)ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪವಿಸ್ಕೊನ್‌ಸಿನ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಗ್ರಹಕುಂಡಲಿಅರಿಸ್ಟಾಟಲ್‌ಮೈಸೂರುಸಂಗೊಳ್ಳಿ ರಾಯಣ್ಣಅತೀಶ ದೀಪಂಕರಮಾಧ್ಯಮಯೋಗಪಿತ್ತಕೋಶಭಾರತದ ರಾಜಕೀಯ ಪಕ್ಷಗಳುಸಮಾಜಕರ್ನಾಟಕದ ಸಂಸ್ಕೃತಿಭಾರತದ ಸಂವಿಧಾನ ರಚನಾ ಸಭೆಗಗನಯಾತ್ರಿಪ್ಲಾಸಿ ಕದನದುಂಡು ಮೇಜಿನ ಸಭೆ(ಭಾರತ)ಜಾಹೀರಾತು🡆 More