ಪಂಚವಾರ್ಷಿಕ ಯೋಜನೆಗಳು

ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಒಂದು ನಿಶ್ಚಿತ ಕಾಲಾವಧಿಯಲ್ಲಿ ನಿಗದಿಯಾದ ಅಭಿವೃದ್ಧಿಯನ್ನು ಸಾಧಿಸುವ ದೃಷ್ಟಿಯಿಂದ ಸಂಪನ್ಮೂಲಗಳನ್ನು ಗೊತ್ತಾದ ರೀತಿಯಲ್ಲಿ ಬಳಸುವಂತೆ ರೂಪಿಸಿ ಕೈಗೊಳ್ಳುವ ಕ್ರಮವೇ ಸ್ಥೂಲವಾಗಿ ಯೋಜನೆಯನ್ನುವುದಾದರೆ, ಈ ದೀರ್ಘಕಾಲಿಕ ಅಭಿವೃದ್ಧಿಯನ್ನು ಐದೈದು ವರ್ಷಗಳ ಮಜಲುಗಳನ್ನಾಗಿ ವಿಂಗಡಿಸಿ ಆಯಾ ಮಜಲು ಅಥವಾ ಅವಧಿಯಲ್ಲಿ ದೊರಕುವ ಸಂಪನ್ಮೂಲಗಳು, ಸಾಧಿಸಬೇಕಾದ ಅಭಿವೃದ್ಧಿ ಮುಂತಾದವನ್ನು ನಿರೂಪಿಸುವ ಕಾರ್ಯಕ್ರಮವೇ ಪಂಚವಾರ್ಷಿಕ ಯೋಜನೆ.

ಪಂಚವಾರ್ಷಿಕ ಯೋಜನೆಗಳನ್ನು ಮೊಟ್ಟಮೊದಲಿಗೆ ಜಾರಿಗೆ ತಂದ ದೇಶ ಸೋವಿಯೆತ್ ಒಕ್ಕೂಟ. ಅದರ ಪ್ರಥಮ ಪಂಚವಾರ್ಷಿಕ ಯೋಜನೆ 1928ರಲ್ಲೂ ಎರಡನೆಯದು 1933ರಲ್ಲೂ ಆರಂಭವಾದವು. ಮುಂದೆ ಎರಡನೆಯ ಮಹಾಯುದ್ಧ ಈ ಕಾರ್ಯಕ್ಕೆ ಅಡ್ಡ ಬಂತು. ಯುದ್ಧಾನಂತರ 1959ರಿಂದ ಮತ್ತೆ ಅಲ್ಲಿ ಯೋಜನಾಬದ್ಧ ಅಭಿವೃದ್ಧಿಕಾರ್ಯ ಮುಂದುವರಿಯಿತು. ಚೀನ ಜನತಾ ಗಣರಾಜ್ಯದಲ್ಲೂ ಪಂಚವಾರ್ಷಿಕ ಯೋಜನೆಗಳ ಸರಣಿ ಈ ಕಾಲದಲ್ಲಿ ಆರಂಭವಾಯಿತು.

ಮೊಟ್ಟ ಮೊದಲಿಗೆ ಸಮಾಜವಾದಿ ರಾಷ್ಟ್ರಗಳು ಆರ್ಥಿಕ ಅಭಿವೃದ್ಧಿ ಯೋಜನೆಗಳ ಮಾರ್ಗವನ್ನು ಅನುಸರಿಸಿದುವಾದರೂ ನಿರುಪಾಧಿಕ ಆರ್ಥಿಕ ನೀತಿಯನ್ನು ಪಾಲಿಸಿಕೊಂಡು ಬಂದ ಬಂಡವಾಳವಾದಿ ರಾಷ್ಟ್ರಗಳೂ ಈಗ ಯೋಜನೆಗಳನ್ನು ಜಾರಿಗೆ ತರುತ್ತಿವೆ. ನಿರುಪಾಧಿಕ ಆರ್ಥಿಕ ನೀತಿಯ ಮೇಲಿನ ನಂಬಿಕೆಯ ಸಡಲಿಕೆ, ಎರಡನೆಯ ಮಹಾಯುದ್ಧದ ಅನಂತರ ಉದ್ಭವಿಸಿದ ಆರ್ಥಿಕ ಸಮಸ್ಯೆಗಳನ್ನು ಸುಯೋಜಿತ ರೀತಿಯಲ್ಲಿ ಎದುರಿಸಬೇಕೆಂದು ಬೆಳೆದು ಬಂದ ಭಾವನೆ-ಇವು ಇದಕ್ಕೆ ಕಾರಣ. ಹಿಂದುಳಿದ ರಾಷ್ಟ್ರಗಳೂ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದೃಷ್ಟಿಯಿಂದ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಅನುಸರಿಸುತ್ತವೆ.

ಆರ್ಥಿಕ ಅಭಿವೃದ್ಧಿಯನ್ನು ಆರಂಭಿಸಬೇಕಾದರೆ ಮುಖ್ಯವಾಗಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ವೃದ್ಧಿ ಹೊಂದಬೇಕು. ಇವುಗಳ ಬೆಳೆವಣಿಗೆಯನ್ನು ಉತ್ತೇಜಿಸುವಂಥ ರಸ್ತೆ, ರೈಲುಮಾರ್ಗ, ವಿದ್ಯುತ್ ಉತ್ಪಾದನೆ, ವಿದ್ಯೆ, ತರಬೇತು ಹಾಗೂ ಹಣಕಾಸು ಸಂಸ್ಥೆಗಳು ಅತ್ಯಾವಶ್ಯಕ. ಈ ಅಗತ್ಯಗಳನ್ನು ಖಾಸಗಿ ಯತ್ನಶೀಲತೆಯಿಂದ ಒದಗಿಸಲು ಸಾಧ್ಯವಿಲ್ಲದ ಕಾರಣ ಇವನ್ನು ಸರ್ಕಾರ ಒದಗಿಸಬೇಕೆಂಬ ಭಾವನೆ ಬೆಳೆದುಬಂದು ಈ ಕಾರ್ಯವನ್ನು ಸರ್ಕಾರ ಯೋಜನಾಬದ್ಧವಾಗಿ ಕೈಗೊಳ್ಳಬೇಕೆಂಬುದು ಮನದಟ್ಟಾಯಿತು.

ಭಾರತದಲ್ಲಿ

ಭಾರತದಲ್ಲಿ 1951ರಿಂದ ಇದುವರೆಗೆ ಒಂಭತ್ತು ಪಂಚವಾರ್ಷಿಕ ಯೋಜನೆಗಳು ಮುಕ್ತಾಯಗೊಂಡಿದ್ದು ಪ್ರಸ್ತುತ ಹತ್ತನೇ ಪಂಚವಾರ್ಷಿಕ ಯೋಜನೆ ಅನುಷ್ಠಾನಗೊಳ್ಳುತ್ತದೆ. ಭಾರತದ ಪಂಚವಾರ್ಷಿಕ ಯೋಜನೆಗಳ ಧ್ಯೇಯಗಳು ಮುಖ್ಯವಾಗಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಜೀವನಮಟ್ಟವನ್ನು ಯುಕ್ತದರದಲ್ಲಿ ಏರಿಸುವುದು. ಆರ್ಥಿಕತೆಯ ಬೆಳೆವಣಿಗೆ ಸ್ವಯಂಚಾಲಿತವಾಗುವಂತೆ ವಿನಿಯೋಜನೆಯ ಪ್ರಮಾಣವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿತಲ್ಲದೆ ವಿವಿಧ ಕ್ಷೇತ್ರಗಳ ಬೆಳೆವಣಿಗೆಯಿಂದ ಆರ್ಥಿಕತೆಯಲ್ಲಿ ಅಸಮತೋಲವುಂಟಾಗದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಯಿತು. ಜನಬಲ ಅಧಿಕವಿರುವ ಭಾರತೀಯ ಆರ್ಥಿಕತೆಯಲ್ಲಿ ಕಾರ್ಮಿಕ ಪ್ರಧಾನ ಉತ್ಪಾದನ ತಂತ್ರಗಳನ್ನು ಅನುಸರಿಸಲಾಗಿದೆ. ಅಂತರರಾಷ್ಟ್ರೀಯ ಪೈಪೋಟಿಯನ್ನು ಎದುರಿಸುವ ಸಲುವಾಗಿ ರಫ್ತು ಕ್ಷೇತ್ರಗಳಲ್ಲಿ ಬಂಡವಾಳ ಪ್ರಧಾನ ಉತ್ಪಾದನ ತಂತ್ರವನ್ನು ಉತ್ತೇಜಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಉತ್ಪಾದನ ಸಾಮಥ್ರ್ಯಕ್ಕೆ ಅನುಗುಣವಾಗಿ ವೇತನದ ಏರಿಕೆ ಇರಬೇಕು, ಬೆಲೆ ಏರಿಕೆಯ ತೀವ್ರತೆಯನ್ನು ತಡೆಗಟ್ಟಬೇಕು ಹಾಗೂ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವರಮಾನ ಹಂಚಿಕೆ ಇರಬೇಕು ಎಂಬ ನಿರ್ದೇಶನಗಳು ಯೋಜನಾ ವರದಿಗಳಲ್ಲಿ ಕಂಡುಬಂದರೂ ಒಂದು ಸಮಗ್ರವಾದ ವೇತನ, ವರಮಾನ ಮತ್ತು ಬೆಲೆ ನೀತಿ ಇನ್ನೂ ರೂಪಿತವಾಗಿಲ್ಲ. ಭಾರತ ಸರ್ಕಾರ ಮಿಶ್ರ ಆರ್ಥಿಕ ನೀತಿಯನ್ನು ಪಾಲಿಸಿಕೊಂಡು ಬಂದಿರುವುದರಿಂದ ಯೋಜನಕಾರ್ಯ ಗತಿಯ ನಿರ್ಣಯಗಳನ್ನು ನಿಯಂತ್ರಣ ಹಾಗೂ ಉತ್ತೇಜನ-ಈ ಎರಡೂ ಕ್ರಮಗಳನ್ನನುಸರಿಸಿ ಕೈಗೊಳ್ಳಲಾಗುತ್ತಿದೆ. 1990ರ ದಶಕದಲ್ಲಿ ಆರ್ಥಿಕ ಸುಧಾರಣೆ ಪ್ರಾರಂಭವಾದ ಮೇಲೆ ಉದಾರೀಕರಣ ಮತ್ತು ಖಾಸಗೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು ಆರ್ಥಿಕಯೋಜನೆಗಳಿಗೆ ಹಿಂದೆ ಇದ್ದಷ್ಟು ಪ್ರಾಮುಖ್ಯ ಇಲ್ಲವಾದರೂ ಯೋಜಿತ ಅಭಿವೃದ್ಧಿಯ ಮಾರ್ಗವನ್ನು ಮುಂದುವರಿಸಲಾಗುತ್ತಿದೆ. ಆದರೆ ನಿಯಂತ್ರಣಕ್ಕಿಂತ ಉತ್ತೇಜನಕ್ಕೆ ಪ್ರಾಧಾನ್ಯನೀಡಬೇಕೆಂಬ ಅಭಿಪ್ರಾಯಕ್ಕೆ ಮನ್ನಣೆ ದೊರಕಿದೆ ಹಾಗೂ ನಿರ್ದೇಶಾರ್ಥ ಯೋಜನಾ ವಿಧಾನದ ಕಡೆಗೆ ಹೆಚ್ಚಿನ ಒಲವು ಕಂಡುಬರುತ್ತಿದೆ.

ಭಾರತೀಯ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಇತ್ತೀಚೆಗೆ ಆಚರಣೆಗೆ ತರಲಾಗಿದ್ದ ನವೀನತೆ ಎಂದರೆ ಆವರ್ತ ಯೋಜನಾ ಪರಿಕಲ್ಪನೆ. ಯೋಜನಾತಂತ್ರದ ಮುಖ್ಯವಾದ ಒಂದು ಅಂಶವೆಂದರೆ ಅಭಿವೃದ್ಧಿಯ ಕಾಲಾವಧಿ ಪಥ. ಸಾಮಾನ್ಯವಾಗಿ ಯೋಜನಾ ಆಯೋಗ ಬಡತನ ನೀಗಿಸುವ ಅಥವಾ ನಿರುದ್ಯೋಗವನ್ನು ತೊಡೆಯುವ ದೀರ್ಘಾವಧಿ ಧ್ಯೇಯಗಳನ್ನು ಸಾಧಿಸುವ 15,20 ಅಥವಾ 25 ವರ್ಷಗಳ ಸಮ್‍ದರ್ಶ ಯೋಜನೆಗಳನ್ನು (ಪರ್ ಸ್ಪೆಕ್ಟಿವ್ ಪ್ಲಾನ್) ರಚಿಸುವುದು ವಾಡಿಕೆ. ಇಂಥ ದೀರ್ಘಾವಧಿ ಧ್ಯೇಯಗಳನ್ನು ಹಂತಹಂತವಾಗಿ ಸಾಧಿಸುವ ದೃಷ್ಟಿಯಿಂದ ಸಮ್‍ದರ್ಶ ಯೋಜನೆಗಳನ್ನು ಪಂಚವಾರ್ಷಿಕ ಯೋಜನೆಗಳನ್ನಾಗಿಯೂ ಪ್ರತಿ ಪಂಚವಾರ್ಷಿಕ ಯೋಜನೆಯನ್ನೂ ವಾರ್ಷಿಕ ಯೋಜನೆಗಳನ್ನಾಗಿಯೂ ವಿಭಾಗಿಸಿಕೊಳ್ಳಲಾಗುವುದು. ಆದರೆ ಅವಧಿ ಮಧ್ಯದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳ ಕಾರಣ ಸಮ್‍ದರ್ಶ ಯೋಜನೆಯಲ್ಲಿ ನಮೂದಿಸಿರುವಂತೆ ದೀರ್ಘಾವಧಿ ಗುರಿಗಳನ್ನು ಯೋಜನೆಯ ಅವಧಿಯಲ್ಲಿಯೇ ಸಾಧಿಸಲು ಸಾಧ್ಯವಾಗದಿರಬಹುದು. ಅಂಥ ಸಂದರ್ಭದಲ್ಲಿ ಸಮ್‍ದರ್ಶ ಯೋಜನೆಯ ಕಾಲಾವಧಿಯನ್ನೇ ಬದಲಿಸಬೇಕಾಗಬಹುದು. ಇಲ್ಲವೇ ವಿನಿಯೋಜನೆಯ ಗಾತ್ರ ಹಾಗೂ ಅದರ ಮಾದರಿಯನ್ನೇ ಬದಲಿಸಬೇಕಾಗಬಹುದು. ಸಮ್‍ದರ್ಶ ಯೋಜನೆಯಲ್ಲಿ ಈ ಬಗೆಯ ಬದಲಿಕೆಗಳನ್ನು ಸಾಧ್ಯಪಡಿಸುವ ದೃಷ್ಟಿಯಿಂದ ಆವರ್ತ ಯೋಜನಾ ತಂತ್ರವನ್ನು ಅನುಸರಿಸಲಾಯಿತು. ಈ ವ್ಯವಸ್ಥೆಯ ಪ್ರಕಾರ ಪ್ರತಿ ವರ್ಷಾಂತ್ಯದಲ್ಲೂ ಹೊಸದಾಗಿ ಬೆಳಕಿಗೆ ಬಂದ ಬದಲಾವಣೆಗಳನ್ನು ಕುರಿತ ಅಂಕಿ-ಅಂಶಗಳ ಆಧಾರದ ಮೇಲೆ ದೀರ್ಘಾವಧಿ ಗುರಿಗಳನ್ನು ಪುನರ್‍ಪರಿಶೀಲಿಸಿ ಬೇರೆಬೇರೆ ಅವಧಿಗಳ ಯೋಜನೆಗಳನ್ನು ಮತ್ತೆ ರೂಪಿಸಿಕೊಳ್ಳಲಾಗುವುದೆಂದು ಹೇಳಲಾಗಿತ್ತು. ಹೀಗಾಗಿ ಆವರ್ತ ಯೋಜನಾ ವ್ಯವಸ್ಥೆಯಲ್ಲಿ ಪ್ರತಿವರ್ಷವೂ ಮೂರು ಯೋಜನೆಗಳನ್ನು ರೂಪಿಸಬೇಕಾಗುತ್ತಿತ್ತು. ಒಂದನೆಯದು ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದ ವಾರ್ಷಿಕ ಯೋಜನೆ, ಎರಡನೆಯದು ಹೊಸ ಪಂಚವಾರ್ಷಿಕ ಯೋಜನೆ, ಮೂರನೆಯದು ಹೊಸ ಸಮ್‍ದರ್ಶ ಯೋಜನೆ. ಜನತಾ ಪಕ್ಷದ ಸರ್ಕಾರ ಜಾರಿಗೆ ತಂದ ಸಮ್‍ದರ್ಶ ಯೋಜನೆಯನ್ನು ಅನಂತರ (1980) ಬಂದ ಸರ್ಕಾರ ಕೈಬಿಟ್ಟು ಮೊದಲನೆಯ ಯೋಜನಾ ವಿಧಾನವನ್ನೇ ಮತ್ತೆ ಅನುಸರಿಸತೊಡಗಿದೆ.

ಪಂಚವಾರ್ಷಿಕ ಯೋಜನೆಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕನ್ನಡ ಗುಣಿತಾಕ್ಷರಗಳುರಾವಣಕನ್ನಡದಲ್ಲಿ ಸಾಂಗತ್ಯಕಾವ್ಯಆಂಡಯ್ಯಮಾನಸಿಕ ಆರೋಗ್ಯರಚಿತಾ ರಾಮ್ಬ್ಲಾಗ್ಅರಣ್ಯನಾಶಎರಡನೇ ಮಹಾಯುದ್ಧಲೋಕಸಭೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ಜನಸಂಖ್ಯೆಯ ಬೆಳವಣಿಗೆರವೀಂದ್ರನಾಥ ಠಾಗೋರ್ಖಾಸಗೀಕರಣಭಾರತೀಯ ಅಂಚೆ ಸೇವೆಕುಂಬಳಕಾಯಿಪಂಚ ವಾರ್ಷಿಕ ಯೋಜನೆಗಳುಅಕ್ಷಾಂಶ ಮತ್ತು ರೇಖಾಂಶವಿಜ್ಞಾನಸಿಂಧೂತಟದ ನಾಗರೀಕತೆದ್ವಿರುಕ್ತಿಭಾರತೀಯ ಮೂಲಭೂತ ಹಕ್ಕುಗಳುಬಿದಿರುಬಿ. ಆರ್. ಅಂಬೇಡ್ಕರ್ಎಕರೆಜಾಹೀರಾತುಬಾಳೆ ಹಣ್ಣುಹಂಪೆಪಂಚಾಂಗಮಹಾವೀರ ಜಯಂತಿಅಶೋಕನ ಶಾಸನಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕನ್ನಡದಲ್ಲಿ ಮಹಿಳಾ ಸಾಹಿತ್ಯವ್ಯವಸಾಯಕರಡಿಪ್ಲಾಸ್ಟಿಕ್ಭಾರತದ ಸಂವಿಧಾನ ರಚನಾ ಸಭೆಭತ್ತಕರ್ನಾಟಕದ ಆರ್ಥಿಕ ಪ್ರಗತಿಬಾವಲಿಜಿ.ಎಸ್.ಶಿವರುದ್ರಪ್ಪಹರಿಶ್ಚಂದ್ರಭಾಷಾಂತರಮಾಧ್ಯಮರಾಷ್ಟ್ರೀಯ ಉತ್ಪನ್ನಕನ್ನಡದಲ್ಲಿ ವಚನ ಸಾಹಿತ್ಯಟಿ.ಪಿ.ಕೈಲಾಸಂಬಾಲಕಾರ್ಮಿಕಮಯೂರಶರ್ಮಜೈನ ಧರ್ಮಪುರಂದರದಾಸನಯಸೇನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡ ಸಾಹಿತ್ಯಮೈಸೂರು ದಸರಾಗ್ರಂಥ ಸಂಪಾದನೆಹೂವು1935ರ ಭಾರತ ಸರ್ಕಾರ ಕಾಯಿದೆಮಹಿಳೆ ಮತ್ತು ಭಾರತಅಂಶಗಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬಾರ್ಲಿಕುರುಬಕರ್ಣಭಾರತದ ಸಂವಿಧಾನಕೊಡಗುಜನಪದ ಕಲೆಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿನಾಮಪದಮೋಕ್ಷಗುಂಡಂ ವಿಶ್ವೇಶ್ವರಯ್ಯಆನೆಜಪಾನ್ಪೊನ್ನನಾಗರೀಕತೆಆಯುರ್ವೇದತಮ್ಮಟ ಕಲ್ಲು ಶಾಸನ🡆 More