ನೀಲಂ ಸಂಜೀವ ರೆಡ್ಡಿ

ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.

ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ. ಇವರು ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ ರಲ್ಲಿ ಸಾರಿಗೆ. ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾ ಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚುಗೆಯನ್ನು ಗಳಿಸಿದರು.. 

ನೀಲಂ ಸಂಜೀವ ರೆಡ್ಡಿ
ನೀಲಂ ಸಂಜೀವ ರೆಡ್ಡಿ
ನೀಲಂ ಸಂಜೀವ ರೆಡ್ಡಿ
ಜನ್ಮ ದಿನಾಂಕ: ೧೮ ಮೇ ೧೯೧೩
ನಿಧನರಾದ ದಿನಾಂಕ: ೧ ಜೂನ್ ೧೯೯೬
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೬ನೇ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೧೯೭೭
ಅಧಿಕಾರ ತ್ಯಜಿಸಿದ ದಿನಾಂಕ: ೨೫ ಜುಲೈ ೧೯೮೨
ಪೂರ್ವಾಧಿಕಾರಿ: ಫಕ್ರುದ್ದೀನ್ ಅಲಿ ಅಹ್ಮದ್
ಮಧ್ಯಾಂತರ ಪೂರ್ವಾಧಿಕಾರಿ: ಬಿ ಡಿ ಜತ್ತಿ
ಉತ್ತರಾಧಿಕಾರಿ: ಜೈಲ್ ಸಿಂಗ್

1969 ರಲ್ಲಿ, ಅಂದಿನ ಭಾರತದ ರಾಷ್ಟ್ರಪತಿಯಾದ ಡಾ.ಜಾಕೀರ್ ಹುಸೇನರ ಸಾವಿನ ನಂತರ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರಿಸಲಾಯಿತು. ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ಹುದ್ದೆಗಾಗಿ ಸ್ಪರ್ಧಿಸುವಾಗ, ಸದ್ಯ ಇರುವ ಹುದ್ದೆಯ ಲಾಭ ಪಡೆಯಬಾರದೆಂದು ತಮ್ಮ ಲೋಕಸಭಾ ಸಭಾಪತಿ ಪದವಿಗೆ ಚುನಾವಣೆಯ ಮೊದಲೇ ರಾಜೀನಾಮೆ ಕೊಟ್ಟರು. ಆದರೆ ಇಂದಿರಾ ಗಾಂಧಿ, ಸಂಜೀವ ರೆಡ್ಡಿ ತನ್ನ ಮಾತಿನಂತೆ ನಡೆಯದ ತುಂಬಾ ಸ್ವತಂತ್ರ ಮನೋಭಾವದ ವ್ಯಕ್ತಿ ಎಂದು ತಿಳಿದು, ಪಕ್ಷದ ಮತದಾರರನ್ನು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳುವ ಬದಲು, ತಮ್ಮ ಆತ್ಮ ಸಾಕ್ಷಿಯ ಪ್ರಕಾರ ಮತದಾನ ಮಾಡಲು ಅವಕಾಶ ನೀಡುವ ನಿಲುವು ತೆಗೆದುಕೊಂಡರು. ಇದರ ಅರ್ಥ ವಾಸ್ತವವಾಗಿ ವಿ.ವಿ.ಗಿರಿ ಅವರಿಗೆ ತನ್ನ ಬೆಂಬಲವನ್ನು ಸೂಚಿಸುವುದಾಗಿತ್ತು. ಆ ಸಂದರ್ಭದಲ್ಲಿ ಸಂಜೀವ ರೆಡ್ಡಿ ಚುನಾವಣೆಯಲ್ಲಿ ಸೋತರು. ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿ ತಮ್ಮ ತಂದೆಯ ಉದ್ಯೋಗವಾದ ಕೃಷಿಯಲ್ಲಿ ತೊಡಗಿದರು.

ಅವರು ೧೯೭೫ ರಲ್ಲಿ ಶ್ರೀ ಜಯಪ್ರಕಾಶ್ ನಾರಾಯಣ್ ಜೊತೆಗೆ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದರು. ಮಾರ್ಚ್ ೧೯೭೭ ರಲ್ಲಿ, ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಆಂಧ್ರ ಪ್ರದೇಶದ ನಂದ್ಯಾಲ ಕ್ಷೇತ್ರದಿಂದ ಲೋಕ ಸಭೆಗೆ ಸ್ಪರ್ಧಿಸಿದರು. ಅವರು ಆಂಧ್ರ ಪ್ರದೇಶದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು ಸರ್ವಾನುಮತ ದಿಂದ ೨೬ ಮಾರ್ಚ್ ೧೯೭೭ ರಂದು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಅವರನ್ನು ಈವರೆಗೆ ಭಾರತೀಯ ಸಂಸತ್ತಿನ ಲೋಕಸಭೆ ಕಂಡ ಅತ್ಯುತ್ತಮ ಸ್ಪೀಕರ್ ಎಂದು ಬಣ್ಣಿಸಲಾಗಿದೆ.

ಅವರು ಜುಲೈ ೧೯೭೭ ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿಯೂ ಭಾರತದ ಈವರೆಗಿನ ಇತಿಹಾಸದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿಯೂ ಹೌದು.

ಅವರು ೧೯೯೬ ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡರು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಆಂಧ್ರ ಪ್ರದೇಶಭಾರತದ ರಾಷ್ಟ್ರಪತಿ೧೯೭೭೧೯೮೨

🔥 Trending searches on Wiki ಕನ್ನಡ:

ಶತಮಾನಗ್ರಾಮ ಪಂಚಾಯತಿಆದಿಪುರಾಣಭಾರತೀಯ ಮೂಲಭೂತ ಹಕ್ಕುಗಳುಹಲ್ಮಿಡಿನಾಡ ಗೀತೆಸಾಗುವಾನಿಅಕ್ಬರ್ಗಿರೀಶ್ ಕಾರ್ನಾಡ್ವಾಣಿಜ್ಯ(ವ್ಯಾಪಾರ)ಸಂಸ್ಕೃತಭಾರತದ ಸಂವಿಧಾನ ರಚನಾ ಸಭೆಮೌರ್ಯ ಸಾಮ್ರಾಜ್ಯರಾಜಕೀಯ ಪಕ್ಷವ್ಯವಸಾಯಹಸ್ತಪ್ರತಿಹಸಿರುವರ್ಗೀಯ ವ್ಯಂಜನಚಿಲ್ಲರೆ ವ್ಯಾಪಾರತಿಂಥಿಣಿ ಮೌನೇಶ್ವರಜಾಗತೀಕರಣಶಿಕ್ಷಣಯು.ಆರ್.ಅನಂತಮೂರ್ತಿಬಾರ್ಲಿಕರ್ನಾಟಕದ ಜಿಲ್ಲೆಗಳುಕುಂಬಳಕಾಯಿವ್ಯಾಪಾರಕರ್ನಾಟಕದ ಇತಿಹಾಸಭಾಷಾಂತರದಯಾನಂದ ಸರಸ್ವತಿಮಲೈ ಮಹದೇಶ್ವರ ಬೆಟ್ಟರೈತಹಾ.ಮಾ.ನಾಯಕಕಲ್ಯಾಣ ಕರ್ನಾಟಕಸ್ತ್ರೀಕುಕ್ಕೆ ಸುಬ್ರಹ್ಮಣ್ಯ ದೇವಾಲಯಮೆಂತೆಬೆಸಗರಹಳ್ಳಿ ರಾಮಣ್ಣಗರ್ಭಪಾತಮಂಗಳೂರುಕನ್ನಡ ಚಂಪು ಸಾಹಿತ್ಯಪಶ್ಚಿಮ ಘಟ್ಟಗಳುಚಂದ್ರಯಾನ-೩ಭಾರತ ರತ್ನಕಾರ್ಮಿಕರ ದಿನಾಚರಣೆಹಣಕಾಸುಕುರುಬಭಾರತದ ಸ್ವಾತಂತ್ರ್ಯ ದಿನಾಚರಣೆಸುದೀಪ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕನ್ನಡದಲ್ಲಿ ನವ್ಯಕಾವ್ಯಜೋಳರಾಷ್ಟ್ರೀಯ ಸೇವಾ ಯೋಜನೆಹುಲಿಒಡೆಯರ ಕಾಲದ ಕನ್ನಡ ಸಾಹಿತ್ಯವಿಷ್ಣುವರ್ಧನ್ (ನಟ)ಮೊದಲನೇ ಅಮೋಘವರ್ಷಕರ್ನಾಟಕದ ಆರ್ಥಿಕ ಪ್ರಗತಿಪು. ತಿ. ನರಸಿಂಹಾಚಾರ್ಬ್ಲಾಗ್ಕರ್ನಾಟಕದ ಅಣೆಕಟ್ಟುಗಳುಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಉಗ್ರಾಣಉದಯವಾಣಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಆರೋಗ್ಯಒಡೆಯರ್ಸಂಯುಕ್ತ ರಾಷ್ಟ್ರ ಸಂಸ್ಥೆನುಗ್ಗೆಕಾಯಿತೇಜಸ್ವಿ ಸೂರ್ಯತೆಂಗಿನಕಾಯಿ ಮರವಿಜಯ ಕರ್ನಾಟಕಮಂತ್ರಾಲಯನುಡಿಗಟ್ಟುನಾರಾಯಣಿ ಸೇನಾ🡆 More