ಗಿರಿ

ಗಿರಿ ಯವರ ಪೂರ್ಣ ಹೆಸರು 'ಡಾ.ಮಹಾಬಲಗಿರಿ ಎನ್.ಹೆಗ್ಡೆ'.

ಡಾ.ಗಿರಿ

ಮಲೆನಾಡಿನವರಾದ ಗಿರಿ ಹೆಗ್ಡೆ, ಸಾಗರದ ಹತ್ತಿರದ ಗೋಟಗಾರು ಎಂಬ ಹಳ್ಳಿಯಲ್ಲಿ ಬೆಳೆದವರು. ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಸದ್ಯಕ್ಕೆ ಇವರು ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾದ ಕ್ಲೋವಿಸ್ ಎಂಬ ಪಟ್ಟಣದಲ್ಲಿ ನೆಲೆಸಿದ್ದಾರೆ.

ಶಿಕ್ಷಣ ಮತ್ತು ಸಾಧನೆ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ಎಂ.ಎ ಪದವಿ ಪಡೆದ ಇವರು, ನಂತರ ಬೆಂಗಳೂರು ವಿಶ್ವವಿದ್ಯಾಲಯದ ಡಿ.ಎಂ. ಎಸ್.ಪಿ ಮಾಡಿ (ಈಗಿನ ನಿಮ್ಹಾನ್ಸ್ ನಲ್ಲಿ), ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಕೆಲ ಕಾಲ ಅಧ್ಯಾಪಕರಾಗಿದ್ದರು. ನಂತರ ೧೯೭೦ರಲ್ಲಿ ಅಮೇರಿಕಾಕ್ಕೆ ತೆರಳಿ ಸದರ್ನ್ ಇಲನಾಯ್ ವಿಶ್ವವಿದ್ಯಾಲಯದಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಪಡೆದು ಆ ದೇಶದಲ್ಲೇ ನೆಲೆಸಿದರು.

ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿ, Outstanding Professor ಎಂಬ ಮನ್ನಣೆಗೆ ಪಾತ್ರರಾಗಿ, ಸದ್ಯಕ್ಕೆ ನಿವೃತ್ತಿಯಾಗಿದ್ದಾರೆ. ಡಾ.ಗಿರಿ ಹೆಗ್ಡೆ ವಿಮರ್ಶಕರ ಮೆಚ್ಚಿಗೆಗೆ ಪಾತ್ರವಾದ, ಪ್ರಪಂಚದಾದ್ಯಂತ ಬಳಸಲ್ಪಡುತ್ತಿರುವ, ೨೫ ಕ್ಕೂ ಹೆಚ್ಚು ಇಂಗ್ಲೀಷ್ ಭಾಷೆಯಲ್ಲಿ ಬರೆದ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಲೇಖಕರು. ಅಷ್ಟೇ ಸಂಖ್ಯೆಯ, ಬೇರೆ ಬೇರೆ ತಜ್ಞರು ಬರೆದ ಪುಸ್ತಕಗಳ ಸಂಪಾದಕರು.

ಅನೇಕ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳ ಮತ್ತು ಪುಸ್ತಕ ಪ್ರಕಾಶಕರ ಸಂಪಾದಕೀಯ ಮಂಡಳಿಗಳ ಸದಸ್ಯರು ಕೂಡ. ತಮ್ಮ ಕ್ಷೇತ್ರದಲ್ಲಿ ಸಂಶೋಧನೆ, ಪರಿಣತಿ ಮತ್ತು ಪ್ರಕಟಣೆಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಮತ್ತು ಅನೇಕ ಬಗೆಯ ಮನ್ನಣೆ ಪಡೆದವರು. ಗಿರಿಯವರು ಪ್ರಪಂಚದಾದ್ಯಂತ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದಾರೆ ಮತ್ತು ಈಗಲೂ ನೀಡುತ್ತಿದ್ದಾರೆ.

ಸಾಹಿತ್ಯ

ಕನ್ನಡ ಸಾರಸ್ವತ ಲೋಕದಲ್ಲಿ ಗಿರಿಯವರನ್ನು, "ಗತಿ ಸ್ಥಿತಿ"ಯ ಗಿರಿ ಎಂದೇ ಇನ್ನೂ ಗುರುತಿಸುತ್ತಾರೆ ಹಾಗು ಪರಿಚಯಿಸುತ್ತಾರೆ. ಗಿರಿಯವರು ಕನ್ನಡದಲ್ಲಿ "ವರ್ತನ ಚಿಕಿತ್ಸೆ" ಎಂಬ ಪುಸ್ತಕ ಬರೆದಿದಲ್ಲದೇ, "ಅಪ ಸಾಮಾನ್ಯ ಮನೋವಿಜ್ಞಾನ" ಎಂಬ ಪುಸ್ತಕದ ಕನ್ನಡ ಭಾಷಾಂತರಕಾರರು. ಈ ಎರಡೂ ಪುಸ್ತಕಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿತ್ತು.

ಕೃತಿಗಳು

ಕಾದಂಬರಿಗಳು

  • ಗತಿ ಸ್ಥಿತಿ
  • ಕಂಡದ್ದು ಕಾಣದ್ದು
  • ಕಾಫ್ಕಾನ ರೂಪಾಂತರ

ಕಥೆಗಳು

  • ಡೊಂಕು
  • ನನಗೂ ಮದುವೆ
  • ಕಪ್ಪುಮಣ್ಣು ಬಿಳಿಹೂವು
  • ಈಸು ಬಿದ್ದವರು
  • ಬಿಚ್ಚದ ಗಂಟು
  • ಅರೆಕೂರು ೨೦೪೦
  • ಚಾವ್ಡ ನನ್ನ ಚಪಾತಿ ದೇವರು
  • ಚಂಪ ಮತ್ತು ಚಂದ್ರ
  • ಮಗಳಿಂದ ಕಲಿತವರು

ಇತರೆ ಕೃತಿಗಳು

  • ವರ್ತನ ಚಿಕಿತ್ಸೆ
  • ಅಪಸಾಮಾನ್ಯ ಮನೋವಿಜ್ಞಾನ

ಬಾಹ್ಯ ಕೊಂಡಿಗಳು

ಗಿರಿಯವರ ವೆಬ್ ವಿಳಾಸ Archived 2013-07-06 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಗಿರಿ ಡಾ.ಗಿರಿ ಶಿಕ್ಷಣ ಮತ್ತು ಸಾಧನೆಗಿರಿ ಸಾಹಿತ್ಯಗಿರಿ ಕೃತಿಗಳುಗಿರಿ ಬಾಹ್ಯ ಕೊಂಡಿಗಳುಗಿರಿ

🔥 Trending searches on Wiki ಕನ್ನಡ:

ಗಣಗಲೆ ಹೂಬಾಲ ಗಂಗಾಧರ ತಿಲಕಚಿಕ್ಕಮಗಳೂರುಭಾರತದ ಸಂವಿಧಾನ ರಚನಾ ಸಭೆಭಾರತದ ಉಪ ರಾಷ್ಟ್ರಪತಿಭೂತಾರಾಧನೆಭಾರತದಲ್ಲಿನ ಚುನಾವಣೆಗಳುಸಂಧಿನದಿಕನಕದಾಸರುಒಗಟುದಕ್ಷಿಣ ಭಾರತದ ಇತಿಹಾಸಕನ್ನಡ ಕಾಗುಣಿತಕೊಪ್ಪಳಬ್ಯಾಂಕಿಂಗ್ ವ್ಯವಸ್ಥೆಕೇಂದ್ರಾಡಳಿತ ಪ್ರದೇಶಗಳುಸಿ. ಆರ್. ಚಂದ್ರಶೇಖರ್ಉಪ್ಪು ನೇರಳೆನುಡಿ (ತಂತ್ರಾಂಶ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಜೂಲಿಯಸ್ ಸೀಜರ್ಎಸ್. ಜಾನಕಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಸಾಮಾಜಿಕ ಸಮಸ್ಯೆಗಳುವೀರಗಾಸೆತ್ರಿಪದಿಜನಪದ ಕಲೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಏಡ್ಸ್ ರೋಗಕನ್ನಡದಲ್ಲಿ ಗದ್ಯ ಸಾಹಿತ್ಯಕೃಷಿಕನ್ನಡ ಸಾಹಿತ್ಯ ಪ್ರಕಾರಗಳುಶ್ರವಣಬೆಳಗೊಳಸವದತ್ತಿದೇವನೂರು ಮಹಾದೇವಭಾರತದ ಬುಡಕಟ್ಟು ಜನಾಂಗಗಳುಹನುಮ ಜಯಂತಿಭಾರತದ ಸ್ವಾತಂತ್ರ್ಯ ದಿನಾಚರಣೆಕದಂಬ ರಾಜವಂಶರಂಗಭೂಮಿಗರ್ಭಪಾತಭೂಕಂಪಕಪ್ಪೆ ಅರಭಟ್ಟರಚಿತಾ ರಾಮ್ಡಿ.ಕೆ ಶಿವಕುಮಾರ್ರಾಯಚೂರು ಜಿಲ್ಲೆರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣರಾಧಿಕಾ ಗುಪ್ತಾಭಾರತಜನ್ನಕುಟುಂಬಭಾರತದಲ್ಲಿನ ಶಿಕ್ಷಣಭಾರತದ ಚುನಾವಣಾ ಆಯೋಗಯುಗಾದಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ್ವಂದ್ವ ಸಮಾಸಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಸೀಬೆಸೂರ್ಯ (ದೇವ)ನುಗ್ಗೆಕಾಯಿಡಾಪ್ಲರ್ ಪರಿಣಾಮಪೂರ್ಣಚಂದ್ರ ತೇಜಸ್ವಿಕನ್ನಡ ಕಾವ್ಯಕರ್ನಾಟಕಬಿ.ಜಯಶ್ರೀಜವಾಹರ‌ಲಾಲ್ ನೆಹರುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕರ್ನಾಟಕ ಸರ್ಕಾರಪಾಕಿಸ್ತಾನವಿಜಯ ಕರ್ನಾಟಕಚಂದ್ರಯಾನ-೩ಹನುಮಾನ್ ಚಾಲೀಸಹುಲಿಸುರಪುರದ ವೆಂಕಟಪ್ಪನಾಯಕಸಾಮ್ರಾಟ್ ಅಶೋಕಚದುರಂಗದ ನಿಯಮಗಳುಉಪನಯನಜ್ಞಾನಪೀಠ ಪ್ರಶಸ್ತಿ🡆 More