ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು.

ಕರ್ನಾಟಕ ಪಠ್ಯಪುಸ್ತಕ ಸಂಘವು ಕರ್ನಾಟಕ ಸರ್ಕಾರ ಅನುಮೋದಿಸಿದ ಶಾಲಾ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಒಂದು ಅಂಗ ಸಂಸ್ಥೆಯೆಂದು ಘೋಷಿಸಲ್ಪಟ್ಟಿದೆ .

ಇತಿಹಾಸ

ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 2006 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಘವು ಸರ್ಕಾರಿ ಆದೇಶ ಸಂಖ್ಯೆ ಇಡಿ 95 ಡಿಜಿಒ 2005, ಬೆಂಗಳೂರು ದಿನಾಂಕ 04.01.2006 ರ ಅನ್ವಯ . ಇದನ್ನು ಸಂಘದ ರೂಪದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂಬ ಕೆ. ಪಿ .ಸುರೇಂದ್ರನಾಥ ಸಮಿತಿ ಶಿಫಾರಸ್ಸಿನಂತೆ ರಚಿಸಲಾಗಿದೆ. ಸಂಘಗಳ ನೊಂದಣಿ ಕಾಯಿದೆ 1966 ರ ಪ್ರಕಾರ ಸಂಘವನ್ನು ದಿನಾಂಕ 12.05.2006 ರಂದು ನೊಂದಾಯಿಸಲಾಗಿದೆ. ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನೂಕೂಲವಾಗಿದೆ .

ನೂತನ ಪಠ್ಯಕ್ರಮದೆಡೆಗೆ - ನೂತನ ಪಠ್ಯಪುಸ್ತಕಗಳು

ಕರ್ನಾಟಕ ಸರ್ಕಾರವು ಓಅಈ 2005 ಮಾಡಿರುವ ಶಿಫಾರಸುಗಳ ಆಧಾರದಲ್ಲಿ ಕರ್ನಾಟಕ ಸರ್ಕಾರವು ಏಅಈ 2007 ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದೆ. ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ, ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು, ಮಕ್ಕಳು ಸಂತಸದಿಂದ ಕಲಿಯುವುದು, ಕಲಿಕೆ ಪಠ್ಯಪುಸ್ತಕ ಕೇಂದ್ರಿಕೃತವಾಗದಂತೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪ್ರೇರಕವಾಗುವುದು, ಮತ್ತು ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವಂತಹ ಎನ್‍ಸಿಎಫ್ ನ ಅಂಶಗಳನ್ನಾಧರಿಸಿ ನೂತನ ಪಠ್ಯಪುಸ್ತಕಗಳನ್ನು ತಯಾರಿಸಲಾಗುತ್ತದೆ .

ಪಠ್ಯಪುಸ್ತಕಗಳ ರಚನೆಯು ಬಹುಹಂತಗಳ ಕಾರ್ಯ

ಪಠ್ಯಪುಸ್ತಕಗಳನ್ನು ವಿವಿಧ 12 ಭಾಷೆಗಳಲ್ಲಿ ತಯಾರಿಸಲಾಗುತ್ತದೆ. ರಚನೆಯ ನಂತರ ಈ ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲಾ ಡಯಟ್ ಹಾಗೂ ಸಿಟಿಇಗಳಿಗೆ ಕಳುಹಿಸಿ ಶಿಕ್ಷಣ ತಜ್ಞರಿಂದ, ಶಿಕ್ಷಕರುಗಳಿಂದ ಮತ್ತು ಪೋಷಕರಿಂದ ಸಲಹೆಗಳನ್ನು ಪಡೆಯಲಾಗುತ್ತದೆ. ಕರ್ನಾಟಕ ಸರ್ಕಾರ ನೇಮಿಸುವ ವಿವಿಧ ವಿಷಯದಲ್ಲಿ ತಜ್ಞರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಸಹ ಕೂಲಂಕುಷವಾಗಿ ಪರಿಶೀಲಿಸಿ ನೀಡುವ ವರದಿಯ ಅಂಶಗಳನ್ನೂ ಸೇರಿಸಿ ಪಠ್ಯಪುಸ್ತಕಗಳನ್ನು ಅಂತಿಮವಾಗಿ ಪರಿಷ್ಕರಿಸಲಾಗುವುದು.

ವಿಶಾಲ ವ್ಯಾಪ್ತಿ

ಕರ್ನಾಟಕದಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿಗಳ ಮಕ್ಕಳಿಗೆ ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯು ಸಂಘದ್ದಾಗಿದೆ. ಪಠ್ಯಪುಸ್ತಕಗಳನ್ನು ಉಚಿತ ಹಾಗೂ ಮಾರಾಟ ಎಂಬ ಎರಡು ವಿಭಾಗಗಳಲ್ಲಿ ಮುದ್ರಿಸಲಾಗುತ್ತದೆ. ಎಲ್ಲಾ ಉಚಿತ ಪಠ್ಯಪುಸ್ತಕಗಳು ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿವೆ. ಈ ಪಠ್ಯಪುಸ್ತಕಗಳನ್ನು 12 ಭಾಷೆಗಳಲ್ಲಿ ಹಾಗೂ 7 ಮಾಧ್ಯಮಗಳಲ್ಲಿ ತಯಾರಿಸಲಾಗುತ್ತಿದೆ. ಸಂಘವು ಸುಮಾರು 358 ಶೀರ್ಷಿಕೆಗಳನ್ನು ತಯಾರಿಸಿ, ಮುದ್ರಿಸುತ್ತದೆ.

ವಿಸ್ತ್ರುತ ಚಟುವಟಿಕೆಗಳು

ಸರ್ವ ಶಿಕ್ಷಣ ಅಭಿಯಾನವು ಕರ್ನಾಟಕ ರಾಜ್ಯದ ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಖರ್ಚನ್ನು ಭರಿಸುತ್ತದೆ. 2011-12 ನೇ ಸಾಲಿನಿಂದ ಅನುದಾನಿತ ಶಾಲೆಗಳ 9 ಮತ್ತು 10 ನೇ ತರಗತಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಭಾಷೆಗಳು, ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕಗಳನ್ನು ಸಹ ಸಂಘವು ಮುದ್ರಿಸುತ್ತದೆ. ಸರ್ವ ಶಿಕ್ಷಣ ಅಭಿಯಾನದ ನೂತನ ಯೋಜನೆಯಡಿಯಲ್ಲಿ ಪಠ್ಯಪುಸ್ತಕಗಳಿಗೆ ಪೂರಕವಾಗಿ ಅಭ್ಯಾಸ ಪುಸ್ತಕಗಳನ್ನು ಹಾಗೂ ಶಿಕ್ಷಕರಿಗೆ ಸಂಪನ್ಮೂಲ ಪುಸ್ತಕಗಳನ್ನು ಕೂಡಾ ಸಂಘವು ತಯಾರಿಸಿ, ಮುದ್ರಿಸುತ್ತಿದೆ.

ಮುದ್ರಣ

ಈ ಪಠ್ಯಪುಸ್ತಕಗಳ ಮುದ್ರಣದಲ್ಲಿ ಪ್ರಮಾಣೀಕರಿಸಿದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಂಘವು ಕೆಟಿಟಿಪಿ ಕಾಯಿದೆಯನ್ನು ಅನುಸರಿಸಿ, ರಾಜ್ಯದ ಎಲ್ಲಾ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುದ್ರಿತ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲು ರಾಷ್ಟ್ರ ಮಟ್ಟದ ಟೆಂಡರ್‍ನ್ನು ಕರೆಯಲಾಗುತ್ತದೆ. ಅರ್ಹ ಮುದ್ರಕರು ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಕೆಟಿಟಿಪಿ ಕಾಯಿದೆಯಲ್ಲಿರುವ ನಿಯಮಗಳನ್ನು ಅನುಸರಿಸಿ ಹಾಗೂ ಸಾಮಥ್ರ್ಯ ಮತ್ತು ದರಗಳನ್ನಾಧರಿಸಿ ಭಾಗವಹಿಸಿರುವ ಬಿಡ್‍ದಾರರಲ್ಲಿ ಅರ್ಹ ಮುದ್ರಕರನ್ನು ಸಂಘವು ಪಾರದರ್ಶಕ ವಿಧಾನವನ್ನು ಅನುಸರಿಸಿ ಗುರುತಿಸುತ್ತದೆ.

ಸಮರ್ಪಕ ವಿತರಣಾ ವಿಧಾನದಿಂದ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವುದು

ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ.ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ ಅಂಶಗಳನ್ನು ಜಿಲ್ಲೆಗಳ ಉಪನಿರ್ದೇಶಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಇದರ ಪ್ರಕಾರ ಪಠ್ಯಪುಸ್ತಕಗಳನ್ನು ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಸಲಾಗುವುದು.

ಪಠ್ಯಪುಸ್ತಕ ವೆಬ್ಸೈಟ್ ನಲ್ಲಿ

ಒಂದರಿಂದ ಹತ್ತನೇ ತರಗತಿ ಶಾಲಾ ಪಠ್ಯಪುಸ್ತಕ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಎಲ್ಲಾ ಪಠ್ಯಪುಸ್ತಕಗಳು ಪಿಡಿಎಫ್ ರೂಪದಲ್ಲಿ ಆನ್-ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ 8ne taragaitisciencebook .

ಅಂತರ್ಜಾಲ ತಾಣ

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಇತಿಹಾಸಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ನೂತನ ಪಠ್ಯಕ್ರಮದೆಡೆಗೆ - ನೂತನ ಪಠ್ಯಪುಸ್ತಕಗಳುಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಪಠ್ಯಪುಸ್ತಕಗಳ ರಚನೆಯು ಬಹುಹಂತಗಳ ಕಾರ್ಯಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ವಿಶಾಲ ವ್ಯಾಪ್ತಿಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ವಿಸ್ತ್ರುತ ಚಟುವಟಿಕೆಗಳುಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಮುದ್ರಣಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಸಮರ್ಪಕ ವಿತರಣಾ ವಿಧಾನದಿಂದ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವುದುಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಪಠ್ಯಪುಸ್ತಕ ವೆಬ್ಸೈಟ್ ನಲ್ಲಿಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಅಂತರ್ಜಾಲ ತಾಣಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಬಾಹ್ಯ ಸಂಪರ್ಕಗಳುಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು. ಉಲ್ಲೇಖಗಳುಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು.ಕರ್ನಾಟಕ ಸರ್ಕಾರ

🔥 Trending searches on Wiki ಕನ್ನಡ:

ಶಿವಮೈಸೂರುಬೆಳ್ಳುಳ್ಳಿಸಿಂಧನೂರುಹಿಪಪಾಟಮಸ್ಜಯಮಾಲಾವಿಷ್ಣುವರ್ಧನ್ (ನಟ)ಸಮಾಜ ವಿಜ್ಞಾನಅಂಶಗಣರೋಸ್‌ಮರಿಕನ್ನಡ ಸಾಹಿತ್ಯ ಪ್ರಕಾರಗಳುಜ್ಞಾನಪೀಠ ಪ್ರಶಸ್ತಿವಿಧಾನ ಸಭೆಅರವಿಂದ ಘೋಷ್ಆಯುರ್ವೇದಋಗ್ವೇದಕರ್ನಾಟಕ ವಿಧಾನ ಸಭೆಕನ್ನಡದಲ್ಲಿ ಕಾವ್ಯ ಮಿಮಾಂಸೆಕರ್ಬೂಜಸಾರಾ ಅಬೂಬಕ್ಕರ್ಪರಿಸರ ಕಾನೂನುವಚನಕಾರರ ಅಂಕಿತ ನಾಮಗಳುಸಂಗೊಳ್ಳಿ ರಾಯಣ್ಣಪಾಲಕ್ಭಾರತದ ಸಂವಿಧಾನದ ೩೭೦ನೇ ವಿಧಿಪಂಪಚ.ಸರ್ವಮಂಗಳಧಾನ್ಯಕಾಳಿ ನದಿಗರ್ಭಧಾರಣೆಊಟಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಬುಡಕಟ್ಟುಲೋಹಗಣರಾಜ್ಯೋತ್ಸವ (ಭಾರತ)ಯೂಟ್ಯೂಬ್‌ನುಡಿಗಟ್ಟುದಿವ್ಯಾಂಕಾ ತ್ರಿಪಾಠಿತ್ರಿಪದಿರಾಯಲ್ ಚಾಲೆಂಜರ್ಸ್ ಬೆಂಗಳೂರುಕೃಷ್ಣಭಾರತೀಯ ಭಾಷೆಗಳುನಾಟಕಬಾಲ್ಯ ವಿವಾಹಗುಡುಗುವಿಮರ್ಶೆಕುರುಬವಿಜಯನಗರ ಸಾಮ್ರಾಜ್ಯಯಮಕುಂಬಳಕಾಯಿಮಂಗಳಮುಖಿಸವರ್ಣದೀರ್ಘ ಸಂಧಿದ್ವಿಗು ಸಮಾಸವಿನಾಯಕ ಕೃಷ್ಣ ಗೋಕಾಕಎಸ್.ಎಲ್. ಭೈರಪ್ಪಭಾರತೀಯ ಅಂಚೆ ಸೇವೆಜಾಗತಿಕ ತಾಪಮಾನಸತ್ಯ (ಕನ್ನಡ ಧಾರಾವಾಹಿ)ಭಾರತದ ಸ್ವಾತಂತ್ರ್ಯ ದಿನಾಚರಣೆಖಾಸಗೀಕರಣಗೂಗಲ್ಕರಗ (ಹಬ್ಬ)ಭೂಮಿದೂರದರ್ಶನಕನ್ನಡಕುರುಇನ್ಸ್ಟಾಗ್ರಾಮ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಸಾರ್ವಜನಿಕ ಹಣಕಾಸುಪಂಜೆ ಮಂಗೇಶರಾಯ್ಬಹಮನಿ ಸುಲ್ತಾನರುಕಿತ್ತೂರು ಚೆನ್ನಮ್ಮಸಂಖ್ಯಾಶಾಸ್ತ್ರಶಿವರಾಮ ಕಾರಂತಮೂಲಧಾತುಗಳ ಪಟ್ಟಿಸೂರ್ಯವಂಶ (ಚಲನಚಿತ್ರ)ಬಿಳಿಗಿರಿರಂಗನ ಬೆಟ್ಟವಿಶ್ವ ಪರಿಸರ ದಿನಕಾರವಾರ🡆 More