ಕರಿಶ್ಮಾ ಕಪೂರ್

ಕರಿಶ್ಮಾ ಕಪೂರ್ (ಹಿಂದಿ:करिश्मा कपूर, 1974 ರ ಜೂನ್ 25 ರಂದು ಜನನ), ಲೊಲೊ ಎಂಬ ಮುದ್ದಿನ ಉಪನಾಮದಿಂದ ಕರೆಯಲ್ಪಡುವ ಇವರು, ಬಾಲಿವುಡ್ ನ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿಯಾಗಿದ್ದಾರೆ.

Karisma Kapoor
ಕರಿಶ್ಮಾ ಕಪೂರ್
Karisma Kapoor at the Nokia 14th Annual Star Screen Awards (2008).
Born
Karishma Kapoor

(1974-06-25) ೨೫ ಜೂನ್ ೧೯೭೪ (ವಯಸ್ಸು ೪೯)
Other namesLolo
OccupationActress
Years active1991-2003
SpouseSanjay Kapur (2003-present)

1991 ರಲ್ಲಿ ಮೊದಲ ಬಾರಿಗೆ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಕಪೂರ್ ಅವರ ಪೀಳಿಗೆಯ ಅತ್ಯಂತ ಪ್ರಸಿದ್ಧ ನಟಿಯಾದರು. ಕಪೂರ್ ರವರ ವೃತ್ತಿಜೀವನದ ಸಂದರ್ಭದಲ್ಲಿ, ವಾಣಿಜ್ಯದ ದೃಷ್ಟಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ವಿಯಾದ ಅನೇಕ ಚಿತ್ರಗಳ ಭಾಗವಾಗಿದ್ದರು. ಇವುಗಳಲ್ಲಿ ರಾಜಾ ಹಿಂದುಸ್ತಾನಿ ಅತ್ಯಂತ ಪ್ರಮುಖವಾಗಿದೆ. ಇದು ವಾಣಿಜ್ಯವಾಗಿ ಅತ್ಯಂತ ಹೆಚ್ಚು ಯಶಸ್ಸನ್ನು ಸಾಧಿಸಿದ ಚಿತ್ರವಾಗಿದ್ದು, ಕಪೂರ್ ಗೆ ಅವರ ಮೊದಲನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ದಿಲ್ ತೋ ಪಾಗಲ್ ಹೈ (1997) ಚಲನಚಿತ್ರಕ್ಕಾಗಿ ಅವರು ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಷಕ ನಟಿಗೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಫಿಜಾ (2000) ಮತ್ತು ಜುಬೇದಾ (2001) ದಂತಹ ಕಲಾತ್ಮಕ ಚಲನಚಿತ್ರ ಗಳಲ್ಲಿ ತಮ್ಮ ಅಭಿನಯದ ಮೂಲಕ ವಿಮರ್ಶಕರನ್ನು ಮತ್ತು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು. ಅಲ್ಲದೇ ಇವುಗಳಿಗಾಗಿ ಅವರು ಫಿಲ್ಮ್ ಫೇರ್ ಚಲನಚಿತ್ರೋತ್ಸವದ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟಿ (ವಿಮರ್ಶಕರ) ಪ್ರಶಸ್ತಿಗಳನ್ನು ಗಳಿಸಿದರು. 2003 ರಲ್ಲಿ ಕಪೂರ್, ಸಿನಿಮಾ ರಂಗದಿಂದ ವಿರಾಮ ತೆಗೆದುಕೊಂಡರು.

ಆರಂಭಿಕ ಜೀವನ

ಕಪೂರ್, 1970 ರ ಮತ್ತು 80 ರ ಹೊತ್ತಿನ ಅತ್ಯಂತ ಪ್ರಸಿದ್ಧ ನಟರಾದ ರಣಧೀರ್ ಕಪೂರ್ ಮತ್ತು ನಟಿ ಬಬಿತಾ ರವರ ಪುತ್ರಿಯಾಗಿ ಮುಂಬಯಿನಲ್ಲಿ ಜನಿಸಿದರು. ಇವರು, ನಟ ಮತ್ತು ಚಲನಚಿತ್ರ ತಯಾರಕ ರಾಜ್ ಕಪೂರ್ ರವರ ಮೊಮ್ಮಗಳಾಗಿದ್ದು, ನಟ ಪೃಥ್ವಿರಾಜ್ ಕಪೂರ್ ರವರ ಮರಿ ಮೊಮ್ಮಗಳಾಗಿದ್ದಾರೆ. ಅಲ್ಲದೇ ಕರೀನಾ ಕಪೂರ್ ನ ಸಹೋದರಿಯಾಗಿದ್ದು, ರಿಷಿ ಕಪೂರ್ ರವರ ಸೋದರರ ಮಗಳಾಗಿದ್ದಾರೆ. ಕಪೂರ್ ಆರನೇ ತರಗತಿಯವರೆಗೂ ಮುಂಬಯಿ ನ ಕ್ಯಾಥೆಡ್ರಲ್ ಅಂಡ್ ಜಾನ್ ಕಾನೋನ್ ಸ್ಕೂಲ್ ನಲ್ಲಿ ಓದಿದರು.

ವೃತ್ತಿಜೀವನ

ಕಪೂರ್ ಮೊಟ್ಟ ಮೊದಲನೆಯ ಬಾರಿಗೆ 1991 ರ ಪ್ರೇಮ್ ಖೈದಿ ಚಲನಚಿತ್ರದಲ್ಲಿ ಅಭಿನಯಿಸಿದರು. ಇದು ಅರೆ ಜನಪ್ರಿಯತೆಯನ್ನು ಕಂಡಿತು. 1992-1996 ರ ವರೆಗೆ ತೆರೆಕಂಡ ಅವರ ಅನೇಕ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹಣಗಳಿಸಲು ವಿಫಲವಾದವು. ಆದರೂ ಜಿಗರ್ (1992), ಅನಾರಿ (1993), ರಾಜಾ ಬಾಬು (1994), ಕೂಲಿ ನಂ. 1 (1995), ಸಾಜನ್ ಚಲೇ ಸಸುರಾಲ್ (1996) ಮತ್ತು ಜೀತ್ (1996) ನಂತಹ ಚಿತ್ರಗಳಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಕಂಡಿದ್ದಾರೆ.

1996 ರಲ್ಲಿ ಕಪೂರ್, ಧರ್ಮೇಶ್ ದರ್ಶನ್ ರವರ ರಾಜಾ ಹಿಂದುಸ್ತಾನಿ ಚಲನಚಿತ್ರದಲ್ಲಿ ನಾಯಕರಾಗಿದ್ದ ಅಮೀರ್ ಖಾನ್ ರವರ ಎದುರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಆ ವರ್ಷದಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಗಿದೆ. ಅಲ್ಲದೇ ಇದಕ್ಕಾಗಿ ಅವರ ಮೊದಲನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಅನಂತರದ ವರ್ಷದಲ್ಲಿ ಅವರು ಯಶ್ ಚೋಪ್ರಾ ರವರ ಅತ್ಯಂತ ಜನಪ್ರಿಯ ದಿಲ್ ತೋ ಪಾಗಲ್ ಹೈ ಚಲನಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮತ್ತು ಅತ್ಯುತ್ತಮ ಪೋಷಕ ನಟಿಗೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದರು. ಈ ಚಲನಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಮಾಧುರಿ ದೀಕ್ಷಿತ್ ರವರ ಎದುರು ಪೋಷಕ ನಟಿ ಪಾತ್ರ ನಿರ್ವಹಿಸಿದ್ದರು.

ಕಪೂರ್ 1998 ರಲ್ಲಿ ಚಲನಚಿತ್ರರಂಗದಿಂದ ಒಂದು ವರ್ಷಗಳ ಕಾಲ ವಿರಾಮ ತೆಗೆದುಕೊಂಡರು. 1999 ರಲ್ಲಿ ವರ್ಷದ ಯಶಸ್ವಿ ಚಿತ್ರಗಳ ಭಾಗವಾದುದ್ದಕ್ಕೆ ಹೆಮ್ಮೆ ಪಡುವುದರೊಂದಿಗೆ ಪುನಃ ಯಶಸ್ಸಿನತ್ತ ಮರಳಿದರು. ಕಪೂರ್ ನಾಲ್ಕು ಯಶಸ್ವಿ ಚಲನಚಿತ್ರದ ನಾಯಕಿಯಾದರು. ಡೇವಿಡ್ ಧವನ್ ರವರ ಹಾಸ್ಯ ಪ್ರಧಾನ ಚಿತ್ರ ಬೀವಿ ನಂ.1 ನಲ್ಲಿ ಸಲ್ಮಾನ್ ಖಾನ್ ನ ಎದುರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ವರ್ಷದ ಅತ್ಯಂತ ಯಶಸ್ವಿ ಚಿತ್ರವಾಯಿತು. ಹಾಸ್ಯ ಪ್ರಧಾನ ಚಿತ್ರವೊಂದು ಯಶಸ್ವಿಯಾಗಿದ್ದಕ್ಕೆ ಹೆಮ್ಮೆ ಪಡುವುದರೊಂದಿಗೆ, ಅವರು ಡೇವಿಡ್ ಧವನ್ ರ ಮತ್ತೊಂದು ಚಿತ್ರ ಹಸೀನಾ ಮಾನ್ ಜಾಯೇಗಿ ಯಲ್ಲಿ ಅಭಿನಯಿಸಿದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಹಣ ಗಳಿಸಿತು.

ಕಪೂರ್, ಮೊದಲ ಬಾರಿಗೆ ರಾಜಶ್ರೀ ಪ್ರೋಡಕ್ಷನ್ಸ್ ಬ್ಯಾನರ್ ನೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ Hum Saath-Saath Hain: We Stand United ಚಲನಚಿತ್ರದಲ್ಲಿ ಅಭಿನಯಿಸಿದರು. ಇದು ಕೂಡ ಯಶಸ್ವಿಯಾಯಿತು. ಅಕ್ಷಯ್ ಕುಮಾರ್, ಎದುರು ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಜಾನ್ವರ್ , ಅಂತಿಮವಾಗಿ ತೆರೆಕಂಡ ಇವರ ಚಲನಚಿತ್ರವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಸಾಧನೆ ಅವರನ್ನು ವರ್ಷದ ಅತ್ಯಂತ ಯಶಸ್ವಿ ನಟಿಯನ್ನಾಗಿಸಿತು.

ಖಾಲೀದ್ ಮೊಹಮದ್ ರವರ ಫಿಜಾ ಚಿತ್ರದ ಅಭಿನಯಕ್ಕಾಗಿ 2000 ದ ಇಸವಿಯಲ್ಲಿ ಅವರ ಎರಡನೆಯ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದರು. ಈ ಚಲನಚಿತ್ರದಲ್ಲಿನ ಅವರ ಭಾವನಾತ್ಮಕ ಅಭಿನಯದಿಂದಾಗಿ ಪ್ರೇಕ್ಷಕರನ್ನು ಮತ್ತು ವಿಮರ್ಶಕರನ್ನು ಅಚ್ಚರಿಗೊಳಿಸುವ ಮೂಲಕ ಅತ್ಯಂತ ಪ್ರಶಂಸೆಗೆ ಪಾತ್ರರಾದರು. ಜುಬೇದಾ (2001)ಚಲನಚಿತ್ರದ ಅವರ ಅಭಿನಯಕ್ಕಾಗಿ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರು. ಅಲ್ಲದೇ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಕೂಡ ಪಡೆದರು. ಶಕ್ತಿ- ದಿ ಪವರ್ (2002) ಚಲನಚಿತ್ರದಲ್ಲಿ ಅವರ ಅಭಿನಯವನ್ನು ಅತ್ಯಧಿಕವೆನ್ನುವಂತೆ ಪ್ರಶಂಸಿಸಲಾಯಿತು. ಅಲ್ಲದೇ ಇದು ಅತ್ಯುತ್ತಮ ನಟಿ ವರ್ಗದಲ್ಲಿ ಅನೇಕ ನಾಮನಿರ್ದೇಶನಗಳನ್ನು ತಂದುಕೊಟ್ಟಿತು.

2003 ರಲ್ಲಿ ಕರಿಶ್ಮಾ: ಅ ಮಿರಾಕಲ್ ಆಫ್ ಡೆಸ್ಟಿನಿ ಎಂಬ ದೂರದರ್ಶನದ ಸರಣಿಯ ನಾಯಕಿ ಪಾತ್ರದಲ್ಲಿ ಅಭಿನಯಿಸಿದರು. 2003 ರಲ್ಲಿ ತೆರೆಕಂಡ ಬಾಜ್: ಅ ಬರ್ಡ್ ಇನ್ ಡೇಂಜರ್ ಚಲನಚಿತ್ರದ ನಂತರ ಸಂಪೂರ್ಣವಾಗಿ ನಟನೆಯಿಂದ ಮೂರು ವರ್ಷಗಳ ವರೆಗೆ ವಿರಾಮ ತೆಗೆದುಕೊಂಡರು.

ತಡವಾಗಿ ತೆರೆಕಂಡ ಮೇರೆ ಜೀವನ್ ಸಾಥಿ (2006) ಇವರ ಇತ್ತೀಚಿನ ಚಿತ್ರವಾಗಿದ್ದು, ಈ ಚಲನಚಿತ್ರದಲ್ಲಿ ಖಳ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

2008 ರ ಅಕ್ಟೋಬರ್ ನಲ್ಲಿ, ಅರ್ಜುನ್ ರಾಂಪಾಲ್ ಮತ್ತು ನಿರ್ದೇಶಕಿ/ನೃತ್ಯ ವ್ಯವಸ್ಥಾಪಕಿ ಫರಾ ಖಾನ್ ರವರೊಂದಿಗೆ, ಕಪೂರ್ ನಾಚ್ ಬಲಿಯೇ 4 ಎಂಬ ನೃತ್ಯ ಪ್ರದರ್ಶನದ ತೀರ್ಪುಗಾರರಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು.

ವೈಯಕ್ತಿಕ ಜೀವನ

ಕರಿಶ್ಮಾ ಕಪೂರ್ 
ಅರೆನ್ ಪೋಲೋ ಕಪ್ ಪಂದ್ಯದ(2008) ಸಂದರ್ಭದಲ್ಲಿ ಪತಿ ಸಂಜಯ್ ಕಪೂರ್ ನೊಂದಿಗಿರುವ ಕರಿಶ್ಮಾ ಕಪೂರ್.

ಕರಿಶ್ಮಾ ರವರಿಗೆ ಅಭಿಷೇಕ್ ಬಚ್ಚನ್ ನೊಂದಿಗೆ ನಿಶ್ಚಿತಾರ್ಥವಾಗಿತ್ತು. ಈ ನಿಶ್ಚಿತಾರ್ಥವನ್ನು 2002 ರ ಅಕ್ಟೋಬರ್ ನಲ್ಲಿ ಅಭಿಷೇಕ್ ನ ತಂದೆಯಾದ ಅಮಿತಾಭ್ ಬಚ್ಚನ್ ರವರ 60 ನೇ ಹುಟ್ಟುಹಬ್ಬದಂದು ಪ್ರಕಟಿಸಲಾಯಿತು. ನಾಲ್ಕು ತಿಂಗಳ ನಂತರ 2003 ರ ಫೆಬ್ರವರಿ ತಿಂಗಳಿನಲ್ಲಿ ಈ ನಿಶ್ಚಿತಾರ್ಥ ಮುರಿದು ಬಿತ್ತು. 2003 ರ ಅಕ್ಟೋಬರ್ 29 ರಂದು ಅವರು ಕೈಗಾರಿಕೋದ್ಯಮಿ ಮತ್ತು Sixt ಇಂಡಿಯಾ CEO ಆದ ಸಂಜಯ್ ಕಪೂರ್ ರವರನ್ನು ಮದುವೆಯಾದರು. ಕಪೂರ್ ಸಂಪ್ರದಾಯದಂತೆ ಕರಿಶ್ಮಾ ತಮ್ಮ ಅಜ್ಜನ ಮನೆಯಲ್ಲಿ ಮದುವೆಯಾದರು.(ದಿವಗಂತ ರಾಜ್ ಕಪೂರ್): R K ಕಾಟೇಜ್. ಅನಂತರ ಅರ್ಧ ಗಂಟೆ ಕಾಲಾವಧಿಯ ಸಿಖ್ ಮದುವೆಯ ಸಂಪ್ರದಾಯವನ್ನು ಪೂರೈಸಿದರು. ಇವರಿಗೆ ಸಮೈರಾ ಎಂಬ ಒಬ್ಬ ಪುತ್ರಿಯಿದ್ದು, ಇವಳು 2005 ರ ಮಾರ್ಚ್ 11 ರಂದು ಜನಿಸಿದಳು. ಅವರ ಪುತ್ರಿಯ ಜನನದ ನಂತರ ವೈವಾಹಿಕ ಸಂಬಂಧದಲ್ಲಿ ಗಮನಾರ್ಹ ಬಿರುಕು ಉಂಟಾಯಿತು. ಅನಂತರ ಅದನ್ನು ಸರಿಪಡಿಸಿಕೊಂಡರು. 2010 ರ ಮಾರ್ಚ್ 12 ರಂದು ಅವರು ಕಿಯಾನ್ ರಾಜ್ ಕಪೂರ್ ಎಂಬ ಎರಡನೆಯ ಗಂಡು ಮಗುವಿಗೆ ಜನ್ಮ ನೀಡಿದರು.

ಚಲನಚಿತ್ರಗಳ ಪಟ್ಟಿ

ಜಾಗೃತಿ ಶಾಲು ನಿಶ್ಚಯ್‌ಜಿಗರ್ಸಂಗ್ರಾಮ್‌ ಮಧು ಶಕ್ತಿಮಾನ್ ಪ್ರಿಯಾ ಧನ್ ವಾನ್ಅಂದಾಜ್ ಜಯಾ ಅಂದಾಜ್‌ ಅಪ್ನಾ ಅಪ್ನಾ ಕರೀಶ್ಮಾ/ರವೀನಾ ಯೆಹ್ ದಿಲ್ಲಗಿಸುಹಾಗ್ ಪೂಜಾ ಮೇಘಾ ಮೇಘಾ ಕೃಷ್ಣ ರಶ್ಮಿ ಜೀತ್‌ ಕಾಜಲ್ ರಕ್ಷಕ್ಅಜಯ್‌ಮೃತ್ಯುದಾತದಿಲ್‌ ತೋ ಪಾಗಲ್‌ ಹೈ ನಿಶಾ ಬೀವಿ ನಂ.1ಚಲ್‌ ಮೆರೆ ಭಾಯ್‌ ಸಪ್ನ ಶಕ್ತಿ ನಂದಿನಿ ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1991 ಪ್ರೇಮ್ ಖೈದಿ ನೀಲಿಮ
1994 ಪೋಲಿಸ್ ಅಧಿಕಾರಿ ಬಿಜ್ಲಿ
ಪಾಯಲ್
ಸಪ್ನೆ ಸಾಜನ್ ಕೆ

ಜ್ಯೋತಿ

ದೀದರ್ ಸಪ್ನ ಸಕ್ಸೇನಾ
ಸುಮನ್
1994 ಅನಾರಿ ರಾಜನಂದಿನಿ
ಮುಕಾಬ್ಲಾ ಕರಿಶ್ಮಾ
ಅಂಜಲಿ ಚೋಪ್ರಾ
1994 ಪ್ರೇಮ್ ಶಕ್ತಿ ಗೌರಿ/ಕರಿಶ್ಮಾ
ರಾಜಾ ಬಾಬು ಮಧೂ
ದುಲಾರ

ಪ್ರಿಯಾ

ಖುದ್ದಾರ್

ಪೂಜಾ

ಗೌರವ ನಟಿ

Aatish: Feel the Fire

ಪೂಜಾ

ಗೋಪಿ ಕಿಶನ್ ಬರ್ಖಾ
1995 ಜವಾಬ್
ಮೈದಾನ್-ಇ-ಜಂಗ್ ತುಳಸಿ
ಕೂಲಿ ನಂ. 1

ಮಾಲತಿ

1994 ಪಪ್ಪಿ ಗುಡಿಯಾ ಕರಿಶ್ಮಾ
ಸಾಜನ್ ಚಲೇ ಸಸುರಾಲ್

ಪೂಜಾ

ಬಾಲ್ ಬ್ರಹ್ಮಚಾರಿ ಆಶಾ ರಾಣಾ
ಸಪೂತ್

ಪೂಜಾ

ರಾಜಾ ಹಿಂದುಸ್ತಾನಿ ಆರತಿ ಸೆಹಗಲ್

ವಿಜೇತೆ , ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ

ಸುಮನ್ ಸಿನ್ಹ್
ಮನೋರಮ
1994

ಜುಡ್ವಾ ಮಾಲಾ

ಹಿರೋ ನಂ. 1 ಮೀನ ನಾಥ್
ಲಹು ಕೇ ದೊ ರಂಗ್ ಹೀನಾ
ರೇಣು
ವಿಜೇತೆ , ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ವಿಜೇತೆ , ಅತ್ಯುತ್ತಮ ಪೋಷಕ ನಟಿಗೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1994 ಸಿಲ್ ಸಿಲಾ ಹೇ ಪ್ಯಾರ್ ಕಾ ವಾಂಶಿಕಾ ಮಾಥೂರ್
ಪೂಜಾ ಮೆಹರಾ

ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ

ಹಸೀನಾ ಮಾನ್ ಜಾಯೇಗಿ ರಿತು ವರ್ಮಾ
Hum Saath-Saath Hain: We Stand United

ಸಪ್ನ

ಜಾನ್ವರ್

ಸಪ್ನ

1994

ದುಲ್ಹನ್‌ ಹಮ್‌ ಲೆ ಜಾಯೆಂಗೆ ಸಪ್ನ

ಹಮ್ ತೊ ಮೊಹಬತ್ ಕರೇಗಾ ಗೀತಾ ಕಪೂರ್
ಫಿಜಾ ಫಿಜಾ

ವಿಜೇತೆ , ಫಿಲ್ಮ್‌ಫೇರ್‌ ಅತ್ಯುತ್ತಮ ನಟಿ ಪ್ರಶಸ್ತಿ

ಶಿಕಾರಿ ರಾಜೇಶ್ವರಿ ರಾವಲ್
1999

ಜುಬೇದ ಜುಬೇದ

ವಿಜೇತೆ , ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ವಿಮರ್ಶಕರ ಪ್ರಶಸ್ತಿ
ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ಆಶಿಕ್

ಪೂಜಾ

Ek Rishtaa: The Bond of Love ನಿಶಾ ಥಾಪರ್
1994 ಹಾ ಮೈನೆ ಭಿ ಪ್ಯಾರ್ ಕಿಯಾ ಪೂಜಾ ಕಶ್ಯಪ್
ರಿಷ್ತೆ ಕೋಮಲ್ ಸಿಂಗ್
ಕರಿಶ್ಮಾ: ಅ ಮಿರಾಕಲ್ ಆಫ್ ಅ ಡೆಸ್ಟಿನಿ ದೇವಯಾನಿ (TV ಸರಣಿ)
2003 Baaz: A Bird in Danger ನೇಹಾ ಚೋಪ್ರಾ
2006 ಮೇರೆ ಜೀವನ್ ಸಾಥಿ

ನತಾಶ

2007

ಓಂ ಶಾಂತಿ ಓಂ

ಸ್ವತಃ ಅವರೇ

ದೀವಾನಗೀ ದೀವಾನಗೀ ಹಾಡಿನಲ್ಲಿ ಗೌರವ ನಟಿಯಾಗಿ

1995

ಜಮಾನತ್ ಕಾಜೋಲ್ ತಡವಾಗಿದೆ

ಕೋಡೀಸ್ವರನ್

ತಮಿಳು ಚಲನಚಿತ್ರ
ಗೌರವ ನಟಿಯಾಗಿ

ಇವನ್ನೂ ಗಮನಿಸಿ

  • ಭಾರತೀಯ ಚಲನಚಿತ್ರ ನಟಿಯರ ಪಟ್ಟಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಕರಿಶ್ಮಾ ಕಪೂರ್ ಆರಂಭಿಕ ಜೀವನಕರಿಶ್ಮಾ ಕಪೂರ್ ವೃತ್ತಿಜೀವನಕರಿಶ್ಮಾ ಕಪೂರ್ ವೈಯಕ್ತಿಕ ಜೀವನಕರಿಶ್ಮಾ ಕಪೂರ್ ಚಲನಚಿತ್ರಗಳ ಪಟ್ಟಿಕರಿಶ್ಮಾ ಕಪೂರ್ ಇವನ್ನೂ ಗಮನಿಸಿಕರಿಶ್ಮಾ ಕಪೂರ್ ಉಲ್ಲೇಖಗಳುಕರಿಶ್ಮಾ ಕಪೂರ್ ಬಾಹ್ಯ ಕೊಂಡಿಗಳುಕರಿಶ್ಮಾ ಕಪೂರ್ಬಾಲಿವುಡ್ಭಾರತಹಿಂದಿ ಭಾಷೆ

🔥 Trending searches on Wiki ಕನ್ನಡ:

ಶಿವರಾಮ ಕಾರಂತಸಮಾಜ ವಿಜ್ಞಾನಸಂಯುಕ್ತ ಕರ್ನಾಟಕಹೊಯ್ಸಳ ವಿಷ್ಣುವರ್ಧನನಾಲ್ವಡಿ ಕೃಷ್ಣರಾಜ ಒಡೆಯರುವಾಸ್ತುಶಾಸ್ತ್ರಜಾಗತಿಕ ತಾಪಮಾನರಾಜ್‌ಕುಮಾರ್ನಾಟಕಗುಣ ಸಂಧಿಹಲಸುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಏಡ್ಸ್ ರೋಗಕೆ. ಎಸ್. ನರಸಿಂಹಸ್ವಾಮಿಮೋಕ್ಷಗುಂಡಂ ವಿಶ್ವೇಶ್ವರಯ್ಯಚಂಡಮಾರುತಹೆಚ್.ಡಿ.ಕುಮಾರಸ್ವಾಮಿಕೆಂಪು ಕೋಟೆಪೊನ್ನಕಾಂತಾರ (ಚಲನಚಿತ್ರ)ಅರ್ಜುನಶ್ರೀಕೃಷ್ಣದೇವರಾಯರಾಷ್ಟ್ರೀಯ ಸ್ವಯಂಸೇವಕ ಸಂಘಅಂಬಿಗರ ಚೌಡಯ್ಯವಿಕ್ರಮಾರ್ಜುನ ವಿಜಯಮೈಸೂರು ಸಂಸ್ಥಾನಟೈಗರ್ ಪ್ರಭಾಕರ್ಮಂಗಳ (ಗ್ರಹ)ಎಸ್.ಎಲ್. ಭೈರಪ್ಪಪ್ರಬಂಧಹನುಮ ಜಯಂತಿದಾವಣಗೆರೆಸ್ವರರಹಮತ್ ತರೀಕೆರೆಗೌತಮಿಪುತ್ರ ಶಾತಕರ್ಣಿಕಾದಂಬರಿಕ್ಷತ್ರಿಯಅಲ್ಲಮ ಪ್ರಭುಶುಕ್ರವಾಲ್ಮೀಕಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾಷಾ ವಿಜ್ಞಾನನಾಗಚಂದ್ರಮರಭಾರತೀಯ ಶಾಸ್ತ್ರೀಯ ಸಂಗೀತಚೆಲ್ಲಿದ ರಕ್ತಕುವೆಂಪುರಾಜೇಶ್ ಕುಮಾರ್ (ಏರ್ ಮಾರ್ಷಲ್)ಕರಗಕನ್ನಡ ಸಾಹಿತ್ಯ ಪರಿಷತ್ತುಭಾರತದ ಉಪ ರಾಷ್ಟ್ರಪತಿಕಂಪ್ಯೂಟರ್ಭಾರತದ ಸಂವಿಧಾನ ರಚನಾ ಸಭೆಜಲ ಮಾಲಿನ್ಯಅಮೇರಿಕ ಸಂಯುಕ್ತ ಸಂಸ್ಥಾನದೂರದರ್ಶನಶಿಲೀಂಧ್ರನಾಗವರ್ಮ-೧ಗಾದೆಭಾರತೀಯ ಸ್ಟೇಟ್ ಬ್ಯಾಂಕ್ತಾಪಮಾನಸಂಭೋಗದೆಹಲಿನಾಕುತಂತಿಚೋಮನ ದುಡಿಸೌರಮಂಡಲನಿರ್ವಹಣೆ ಪರಿಚಯಮುಟ್ಟುಅಲೆಕ್ಸಾಂಡರ್ರಾಜ್ಯಸಭೆನೀರುಬಸವೇಶ್ವರಮಾನವ ಸಂಪನ್ಮೂಲ ನಿರ್ವಹಣೆಪಟ್ಟದಕಲ್ಲುಕನಕದಾಸರುಫ.ಗು.ಹಳಕಟ್ಟಿಮಳೆಕವಿಗಳ ಕಾವ್ಯನಾಮಭಾರತೀಯ ರಿಸರ್ವ್ ಬ್ಯಾಂಕ್🡆 More