ಏಣಿ

ಏಣಿಯು(ladder) ಲಂಬ ಅಥವಾ ಬಾಗಿದ ಮೆಟ್ಟಿಲುಗಳ ಸಮೂಹ.

ಎರಡು ಬಗೆಯ ಏಣಿಗಳಿವೆ: ಬಾಗದ ಏಣಿಗಳು - ಇವು ಸ್ವತಃ ಆಧಾರವಾಗಿರುತ್ತವೆ ಅಥವಾ ಇವನ್ನು ಗೋಡೆಯಂತಹ ಲಂಬ ಮೇಲ್ಮೈಗೆ ವಾಲಿಸಿ ಇಡಬಹುದು, ಇನ್ನೊಂದು ಬಗೆಯೆಂದರೆ ಸುತ್ತಿಕೊಳ್ಳಬಲ್ಲ ಏಣಿಗಳು, ಉದಾಹರಣೆಗೆ ಹಗ್ಗ ಅಥವಾ ಅಲ್ಯುಮಿನಿಯಂನಿಂದ ತಯಾರಿಸಿದಂಥವು. ಇವನ್ನು ಮೇಲಿನಿಂದ ಜೋತು ಬಿಡಬಹುದು. ಒಂದು ಬಾಗದ ಏಣಿಯ ಲಂಬ ಅಂಗಗಳನ್ನು ಲಂಬತೊಲೆಗಳು/ದೂಲಗಳು ಅಥವಾ ಲಂಬಕಂಬಿಗಳು ಅಥವಾ ಲಂಬಪಟ್ಟಿಗಳು ಎಂದು ಕರೆಯಲಾಗುತ್ತದೆ. ಬಾಗದ ಏಣಿಗಳನ್ನು ಸಾಮಾನ್ಯವಾಗಿ ಸಾಗಿಸಬಹುದು, ಆದರೆ ಕೆಲವು ಬಗೆಗಳು ಒಂದು ರಚನೆ, ಕಟ್ಟಡ, ಅಥವಾ ಉಪಕರಣಕ್ಕೆ ಶಾಶ್ವತವಾಗಿ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಸಾಮಾನ್ಯವಾಗಿ ಲೋಹ, ಕಟ್ಟಿಗೆ, ಅಥವಾ ನಾರುಗಾಜಿನಿಂದ ತಯಾರಿಸಲಾಗುತ್ತದೆ, ಆದರೆ ಗಟ್ಟಿಯಾದ ಪ್ಲಾಸ್ಟಿಕ್‍ನಿಂದ ತಯಾರಿಸಿದ ಏಣಿಗಳು ಪರಿಚಿತವಿವೆ.

ಏಣಿ

ಬಾಗದ ಏಣಿಗಳು ಅನೇಕ ರೂಪಗಳಲ್ಲಿ ಲಭ್ಯವಿವೆ. ಜೋಡಿಸಿದ ಏಣಿಯಲ್ಲಿ ಎರಡು ಪಾರ್ಶ್ವದ ಅಂಗಗಳನ್ನು ಹಲವಾರು ಮೆಟ್ಟಿಲುಗಳಿಂದ ಜೋಡಿಸಲಾಗಿರುತ್ತದೆ; ಇವನ್ನು ರಚನೆಗೆ ಲಗತ್ತಿಸಲಾಗಿರುತ್ತದೆ ಮತ್ತು ಯಾವುದೇ ಚಲಿಸುವ ಭಾಗಗಳಿರುವುದಿಲ್ಲ. ವಿಸ್ತರಣಾ ಏಣಿ ಅಥವಾ ದೂರದರ್ಶಕ ಏಣಿ - ಇದು ಒಂದು ಸ್ಥಿರ ಏಣಿಯಾಗಿದ್ದು, ಅನುಕೂಲಕರ ಸಂಗ್ರಹಣೆಗಾಗಿ ಇದನ್ನು ಎರಡು ಅಥವಾ ಹೆಚ್ಚು ಲಂಬಗಳಾಗಿ ವಿಭಜಿಸಲಾಗಿರುತ್ತದೆ; ಶೇಖರಣೆಗಾಗಿ ಲಂಬಗಳನ್ನು ಒಟ್ಟಾಗಿ ಜಾರಿಸಬಹುದು ಅಥವಾ ಏಣಿಯ ಉದ್ದವನ್ನು ವಿಸ್ತರಿಸಲು ಬೇರೆಯಾಗುವಂತೆ ಜಾರಿಸಬಹುದು; ಏಣಿಯನ್ನು ಸುಲಭವಾಗಿ ವಿಸ್ತರಿಸಲು ರಾಟೆ ವ್ಯವಸ್ಥೆಯನ್ನು ಜೋಡಿಸಬಹುದು. ಹೀಗೆ ಇದನ್ನು ನೆಲದ ಮೇಲಿರುವ ನಿರ್ವಾಹಕನು ನಿಭಾಯಿಸಬಹುದು. ಕೆಲಸವಾದ ನಂತರ ಏಣಿಯನ್ನು ಅದರ ಜಾಗದಲ್ಲಿ ಬಿಗಿಣಿಗಳು ಮತ್ತು ತಡೆಗೂಟಗಳನ್ನು ಬಳಸಿ ಬೀಗ ಹಾಕಿ ಇಡಬಹುದು. ಅಗ್ನಿಶಾಮಕ ಸೇವೆಯ ೬೫ ಅಡಿ, ೫೦ ಅಡಿ, ಮತ್ತು ಕೆಲವು ೩೫ ಅಡಿಯ ವಿಸ್ತರಣಾ ಏಣಿಗಳು ಏರಿಸುವುದು, ಆಧಾರ ಗೂಟ ಒದಗಿಸುವಲ್ಲಿ, ವಿಸ್ತರಿಸುವಲ್ಲಿ, ಸ್ಥಾಪಿಸುವಲ್ಲಿ, ಹಿಂತೆಗೆದುಕೊಳ್ಳುವಲ್ಲಿ ಮತ್ತು ಕೆಳಗಿಳಿಸುವಲ್ಲಿ ನೆರವಾಗಲು ಬ್ಯಾಂಗರ್ ಕೋಲುಗಳು, ನಿಲ್ಲು ಕೋಲುಗಳನ್ನು ಬಳಸುತ್ತವೆ. ಇದಕ್ಕೆ ಕಾರಣ ಅದರ ಭಾರದ ತೂಕ. ಕ್ರಿಸ್ಮಸ್ ಮರ ಏಣಿ - ಧುಮುಕುವವರಿಗೆ ಒಂದು ಬಗೆಯ ಹತ್ತುವ ಏಣಿಯಾಗಿದೆ. ಇದು ಒಂದು ಒಂಟಿ ಕೇಂದ್ರ ಲಂಬಪಟ್ಟಿಯನ್ನು ಹೊಂದಿರುತ್ತದೆ ಮತ್ತು ಧುಮುಕುವವನಿಗೆ ಈಜುರೆಕ್ಕೆಗಳನ್ನು ಧರಿಸಿಯೇ ಏಣಿಯನ್ನು ಹತ್ತುವ ಸಲುವಾಗಿ ಅನುಮತಿ ನೀಡಲು ಪಾರ್ಶ್ವಗಳಲ್ಲಿ ತೆರೆದಿರುತ್ತದೆ. ಸೇತುವೆ ಏಣಿ - ಇಳಿವಿನಿಂದ ಬೇರ್ಪಟ್ಟ ಎರಡು ಬಿಂದುಗಳ ನಡುವೆ ಸಾಗುಮಾರ್ಗವಾಗಿ ಕಾರ್ಯನಿರ್ವಹಿಸಲು ಅಡ್ಡವಾಗಿ ಇರಿಸಲಾದ ಒಂದು ಬಗೆಯ ಏಣಿ. ದಾಳಿ ಏಣಿ - ಗೋಡೆಗಳನ್ನು ಏರಲು ಮತ್ತು ಕಂದಕಗಳನ್ನು ದಾಟಲು ನೆರವಾಗಲು ಮುತ್ತಿಗೆ ಯುದ್ಧದಲ್ಲಿ ಇದನ್ನು ಬಳಸಲಾಗುತ್ತದೆ. ಮೇಲಟ್ಟದ ಏಣಿ - ಮೇಲಟ್ಟ ಅಥವಾ ಮೇಲಂತಸ್ತಿಗೆ ಪ್ರವೇಶ ನೀಡಲು ಒಳತಾರಸಿಯಿಂದ ಕೆಳಗೆ ಎಳೆಯಲಾಗುತ್ತದೆ.

Tags:

🔥 Trending searches on Wiki ಕನ್ನಡ:

ಕಾವ್ಯಮೀಮಾಂಸೆತೇಜಸ್ವಿ ಸೂರ್ಯಜೀವವೈವಿಧ್ಯಹಳೆಗನ್ನಡಭಾರತೀಯ ಕಾವ್ಯ ಮೀಮಾಂಸೆಬಾಹುಬಲಿಚದುರಂಗದ ನಿಯಮಗಳುಚಾಮರಾಜನಗರಜಶ್ತ್ವ ಸಂಧಿಮುಪ್ಪಿನ ಷಡಕ್ಷರಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಜಯದಾಸರುಆಯುರ್ವೇದಧರ್ಮಸ್ಥಳದ್ವಾರಕೀಶ್ಭಾರತೀಯ ಜನತಾ ಪಕ್ಷಕರ್ನಾಟಕದ ಶಾಸನಗಳುದೇವತಾರ್ಚನ ವಿಧಿಧೃತರಾಷ್ಟ್ರನೀನಾದೆ ನಾ (ಕನ್ನಡ ಧಾರಾವಾಹಿ)ಮಾಟ - ಮಂತ್ರನಾಡ ಗೀತೆಕನ್ನಡದಲ್ಲಿ ವಚನ ಸಾಹಿತ್ಯಅದ್ವೈತಭ್ರಷ್ಟಾಚಾರಹವಾಮಾನಝಾನ್ಸಿ ರಾಣಿ ಲಕ್ಷ್ಮೀಬಾಯಿವೆಂಕಟೇಶ್ವರ ದೇವಸ್ಥಾನಕನ್ನಡ ಸಂಧಿಕ್ರಿಯಾಪದಹೊಯ್ಸಳ ವಾಸ್ತುಶಿಲ್ಪಕರ್ನಾಟಕದ ನದಿಗಳುಹದಿಹರೆಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಡ್ಡಾರಾಧನೆಕೊ. ಚನ್ನಬಸಪ್ಪಮಹಾಕವಿ ರನ್ನನ ಗದಾಯುದ್ಧಬಸವಲಿಂಗ ಪಟ್ಟದೇವರುವಾಟ್ಸ್ ಆಪ್ ಮೆಸ್ಸೆಂಜರ್ಕಲ್ಯಾಣ ಕರ್ನಾಟಕಕೇಂದ್ರಾಡಳಿತ ಪ್ರದೇಶಗಳುಸೂರತ್ಒಂದನೆಯ ಮಹಾಯುದ್ಧಅರ್ಜುನಕವಲುಕಾರ್ಮಿಕರ ದಿನಾಚರಣೆನಾಲ್ವಡಿ ಕೃಷ್ಣರಾಜ ಒಡೆಯರುಶಿಶುನಾಳ ಶರೀಫರುಝೊಮ್ಯಾಟೊರೋಮನ್ ಸಾಮ್ರಾಜ್ಯವೃದ್ಧಿ ಸಂಧಿತಾಜ್ ಮಹಲ್ಧಾನ್ಯಭಾರತದ ಸರ್ವೋಚ್ಛ ನ್ಯಾಯಾಲಯಸ್ತ್ರೀವಾದಕುಮಾರವ್ಯಾಸಕೆ. ಅಣ್ಣಾಮಲೈರಾಮ ಮಂದಿರ, ಅಯೋಧ್ಯೆಐಹೊಳೆವೇದಯೋಗ ಮತ್ತು ಅಧ್ಯಾತ್ಮಬರಗೂರು ರಾಮಚಂದ್ರಪ್ಪಓಂ (ಚಲನಚಿತ್ರ)ಮಹಾಭಾರತಬಿದಿರುನಿರುದ್ಯೋಗಕುವೆಂಪುರವೀಂದ್ರನಾಥ ಠಾಗೋರ್ದ.ರಾ.ಬೇಂದ್ರೆರಾಜಸ್ಥಾನ್ ರಾಯಲ್ಸ್ಭತ್ತಕನ್ನಡ ಗುಣಿತಾಕ್ಷರಗಳುಪ್ರಹ್ಲಾದ ಜೋಶಿಮೈಸೂರುಭಾರತದ ರಾಷ್ಟ್ರಪತಿಚೆನ್ನಕೇಶವ ದೇವಾಲಯ, ಬೇಲೂರು🡆 More