ಆಮದು

ಆಮದು ಎಂದರೆ ಒಂದು ಬಾಹ್ಯ ಮೂಲದಿಂದ, ವಿಶೇಷವಾಗಿ ರಾಷ್ಟ್ರೀಯ ಗಡಿಯಾಚೆಯಿಂದ ಒಂದು ಅಧಿಕಾರ ವ್ಯಾಪ್ತಿಯಲ್ಲಿ ತಂದ ಸರಕು.

ಸರಕನ್ನು ತರುವ ವ್ಯಕ್ತಿ/ಸಂಸ್ಥೆಯನ್ನು ಆಮದುದಾರ ಎಂದು ಕರೆಯಲಾಗುತ್ತದೆ. ಪಡೆದುಕೊಂಡ ದೇಶದಲ್ಲಿನ ಆಮದು ಕಳುಹಿಸುವ ದೇಶದ ರಫ್ತು ಆಗಿರುತ್ತದೆ. ಆಮದು ಮತ್ತು ರಫ್ತು ಅಂತಾರಾಷ್ಟ್ರೀಯ ವ್ಯಾಪಾರದ ನಿರ್ಣಾಯಕ ಹಣಕಾಸು ವ್ಯವಹಾರಗಳಾಗಿವೆ.

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ, ಸರಕುಗಳ ಆಮದು ಮತ್ತು ರಫ್ತು ಸೀಮಾಸುಂಕ ಅಧಿಕಾರಿಗಳ ಆಮದು ಪ್ರಮಾಣ ಮತ್ತು ಆಜ್ಞೆಗಳಿಂದ ಸೀಮಿತವಾಗಿರುತ್ತವೆ. ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳು ಸರಕುಗಳ ಮೇಲೆ ಸುಂಕ (ತೆರಿಗೆ) ವಿಧಿಸಬಹುದು. ಜೊತೆಗೆ, ಸರಕುಗಳ ಆಮದು ಮತ್ತು ರಫ್ತು ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳ ನಡುವಿನ ವ್ಯಾಪಾರ ಒಪ್ಪಂದಗಳಿಗೆ ಒಳಪಟ್ಟಿರುತ್ತವೆ.

ಆಮದಿನ ವಿಧಗಳು

ಆಮದಿನ ಎರಡು ಮೂಲಭೂತ ವಿಧಗಳಿವೆ:

  1. ಕೈಗಾರಿಕಾ ಮತ್ತು ಗ್ರಾಹಕ ಸರಕುಗಳು
  2. ಮಧ್ಯಂತರ ಸರಕು ಮತ್ತು ಸೇವೆಗಳು

ಸ್ಥಳೀಯ ಮಾರುಕಟ್ಟೆಗೆ ಪೂರೈಕೆಮಾಡಲು ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ಪಾದನೆಯಾದ ಪೈಪೋಟಿಯ ಸರಕುಗಳಿಗಿಂತ ಅಗ್ಗದ ಬೆಲೆ ಮತ್ತು ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುತ್ತವೆ. ಕಂಪನಿಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತವೆ.

ಆಮದುದಾರರ ಮೂರು ವಿಶಾಲ ವಿಧಗಳಿವೆ:

  1. ವಿಶ್ವದ ಯಾವುದೇ ಉತ್ಪನ್ನವನ್ನು ಆಮದು ಮಾಡಿ ಮಾರಾಟ ಮಾಡಲು ಹುಡುಕುತ್ತಿರುವವರು.
  2. ತಮ್ಮ ಉತ್ಪನ್ನಗಳನ್ನು ಅತ್ಯಂತ ಅಗ್ಗದ ಬೆಲೆಗೆ ತರಿಸಿಕೊಳ್ಳಲು ವಿದೇಶಿ ಮೂಲಗಳನ್ನು ಹುಡುಕುತ್ತಿರುವವರು.
  3. ತಮ್ಮ ಜಾಗತಿಕ ಸರಬರಾಜು ಸರಪಳಿಯ ಭಾಗವಾಗಿ ವಿದೇಶಿ ಮೂಲಗಳನ್ನು ಬಳಸುತ್ತಿರುವವರು.

ನೇರ ಆಮದು ಪದವು ಪ್ರಮುಖ ಚಿಲ್ಲರೆ ವ್ಯಾಪಾರಸಂಸ್ಥೆ (ಉದಾ. ವಾಲ್‍ಮಾರ್ಟ್) ಮತ್ತು ಸಾಗರೋತ್ತರ ಉತ್ಪಾದಕವನ್ನು ಒಳಗೊಂಡ ವ್ಯಾಪಾರ ಆಮದಿನ ಒಂದು ಪ್ರಕಾರವನ್ನು ಸೂಚಿಸುತ್ತದೆ. ಚಿಲ್ಲರೆ ವ್ಯಾಪಾರಸಂಸ್ಥೆಯು ಸಾಮಾನ್ಯವಾಗಿ ಸಾಗರೋತ್ತರದಲ್ಲಿ ತಯಾರಿಸಬಹುದಾದ, ಸ್ಥಳೀಯ ಕಂಪನಿಗಳು ವಿನ್ಯಾಸಮಾಡಿದ ಉತ್ಪನ್ನಗಳನ್ನು ಖರೀದಿಸುತ್ತದೆ. ನೇರ ಆಮದು ಯೋಜನೆಯಲ್ಲಿ, ಚಿಲ್ಲರೆ ವ್ಯಾಪಾರಸಂಸ್ಥೆಯು ಸ್ಥಳೀಯ ಪೂರೈಕೆದಾರನನ್ನು ತಪ್ಪಿಸಿ/ಕಡೆಗಣಿಸಿ ಅಂತಿಮ ಉತ್ಪನ್ನವನ್ನು ನೇರವಾಗಿ ಉತ್ಪಾದಕರಿಂದ ಖರೀದಿಸುತ್ತದೆ. ಇದರಿಂದ ಸಂಭಾವ್ಯವಾಗಿ ವರ್ಧಿತ ವೆಚ್ಚ ಉಳಿತಾಯವಾಗುತ್ತದೆ. ಹಲವುವೇಳೆ ಉತ್ಪನ್ನಗಳ ವಿವರದ ಪಟ್ಟಿಗಳಲ್ಲಿ ವಿಭಜಿಸಲಾದ, ಆಮದುಗಳ ಮೌಲ್ಯದ ಮೇಲಿನ ಮಾಹಿತಿ ಮತ್ತು ಅವುಗಳ ಪ್ರಮಾಣಗಳು, ಅಂತರಸರ್ಕಾರಿ ಸಂಸ್ಥೆಗಳ ಅಂಕಿಅಂಶಗಳ ಸೇವೆಗಳು, ರಾಷ್ಟ್ರಗಳನ್ನು ಮೀರಿದ ಅಂಕಿಅಂಶ ಸಂಸ್ಥೆಗಳು (ಉದಾ. ಯೂರೋಸ್ಟಾಟ್) ಮತ್ತು ರಾಷ್ಟ್ರೀಯ ಅಂಕಿಅಂಶ ಸಂಸ್ಥೆಗಳು ಪ್ರಕಟಿಸಿದ ಅಂತಾರಾಷ್ಟ್ರೀಯ ವ್ಯಾಪಾರದ ಮೇಲಿನ ಅಂಕಿಅಂಶ ಸಂಗ್ರಹಣದಲ್ಲಿ ಲಭ್ಯವಿರುತ್ತವೆ.

Tags:

🔥 Trending searches on Wiki ಕನ್ನಡ:

ಮುಖ್ಯ ಪುಟಧಾನ್ಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕನಕದಾಸರುಭಾರತೀಯ ಶಾಸ್ತ್ರೀಯ ನೃತ್ಯಸಾರ್ವಜನಿಕ ಹಣಕಾಸುಕನ್ನಡದಲ್ಲಿ ಕಾದಂಬರಿ ಸಾಹಿತ್ಯಕರ್ಮಧಾರಯ ಸಮಾಸಅಯೋಧ್ಯೆಲೋಹಭಾರತದ ಸಂವಿಧಾನ ರಚನಾ ಸಭೆಕಬಡ್ಡಿಸಮುದ್ರಪ್ರಬಂಧ ರಚನೆಊಟನಿರಂಜನಝೊಮ್ಯಾಟೊಗೋಕಾಕ್ ಚಳುವಳಿಕರ್ನಾಟಕ ವಿಧಾನ ಪರಿಷತ್ಭಾರತ ಬಿಟ್ಟು ತೊಲಗಿ ಚಳುವಳಿಅದ್ವೈತಕರ್ನಾಟಕ ರಾಜ್ಯ ಮಹಿಳಾ ಆಯೋಗಸಂವತ್ಸರಗಳುದಶಾವತಾರಅರವಿಂದ ಘೋಷ್ಟೈಗರ್ ಪ್ರಭಾಕರ್ವಚನ ಸಾಹಿತ್ಯಭಗತ್ ಸಿಂಗ್ಮದುವೆಸಾರಜನಕಕೃತಕ ಬುದ್ಧಿಮತ್ತೆಚಂದ್ರಕನ್ನಡದಲ್ಲಿ ಸಣ್ಣ ಕಥೆಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅವರ್ಗೀಯ ವ್ಯಂಜನಡಿ.ವಿ.ಗುಂಡಪ್ಪಚೋಳ ವಂಶಬಾದಾಮಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಉಗುರುಸಾಮಾಜಿಕ ಸಮಸ್ಯೆಗಳುಹಿಪಪಾಟಮಸ್ವೆಂಕಟೇಶ್ವರ ದೇವಸ್ಥಾನಕನ್ನಡ ಅಕ್ಷರಮಾಲೆಜಿಪುಣಅಂಬಿಗರ ಚೌಡಯ್ಯತ. ರಾ. ಸುಬ್ಬರಾಯಭಾಷೆಶ್ರೀಶೈಲಮಾನವನ ವಿಕಾಸಭಾರತ ಸಂವಿಧಾನದ ಪೀಠಿಕೆಉಪನಯನಬಸವಲಿಂಗ ಪಟ್ಟದೇವರುವಿಮರ್ಶೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಓಂ (ಚಲನಚಿತ್ರ)ಭಾರತದ ತ್ರಿವರ್ಣ ಧ್ವಜಕದಂಬ ಮನೆತನಖ್ಯಾತ ಕರ್ನಾಟಕ ವೃತ್ತಅಕ್ಷಾಂಶ ಮತ್ತು ರೇಖಾಂಶಭಾರತದಲ್ಲಿ ಬಡತನಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತದಲ್ಲಿನ ಜಾತಿ ಪದ್ದತಿಭಾರತದ ವಿಶ್ವ ಪರಂಪರೆಯ ತಾಣಗಳುಜೋಡು ನುಡಿಗಟ್ಟುರೈತಕರ್ನಾಟಕ ಪೊಲೀಸ್ಭಾರತದ ರಾಷ್ಟ್ರಪತಿಗಳ ಪಟ್ಟಿಬಿದಿರುನುಡಿಗಟ್ಟುಹಿಂದೂ ಮಾಸಗಳುಚಾಲುಕ್ಯಕಬ್ಬು🡆 More