ಹ್ಯಾರಿ ಪಾಟರ್

ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್‌‍ ರ ಫ್ಯಾಂಟಸಿ ಕಾದಂಬರಿಯ ಏಳು ಪುಸ್ತಕಗಳ ಸರಣಿ.

ಈ ಪುಸ್ತಕಗಳು ಹಾಗ್ವರ್ಟ್ಸ್‌ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೀಸ್ಲೆ ಮತ್ತು ಹರ್ಮೈನಿ ಗ್ರೇಂಜರ್‌‌‌ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಮತ್ತು ಮಾಂತ್ರಿಕರಲ್ಲದ ಜನರನ್ನು (ಮಗ್ಗಲ್ಸ್‌) ತನ್ನ ಆಳ್ವಿಕೆಗೆ ಸ್ವಾಧೀನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಪೋಷಕರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್‌ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ. ಈ ಸರಣಿಗಳನ್ನಾಧರಿಸಿ ಹಲವು ಯಶಸ್ವಿ ವೀಡಿಯೊ ಗೇಮ್‌ಗಳು ಮತ್ತು ಇತರ ಮಾರಾಟ ಸರಕುಗಳನ್ನು ನಿರ್ಮಿಸಲಾಗಿದೆ.

ಮೊದಲ ಕಾದಂಬರಿ ಹ್ಯಾರಿ ಪಾಟರ್ ಆಂಡ್ ದ ಫಿಲಾಸಫರ್ಸ್ ಸ್ಟೋನ್ , ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನ‌ನಲ್ಲಿ ಅದನ್ನು ಹ್ಯಾರಿ ಪಾಟರ್ ಆಂಡ್ ದ ಸಾರ್ಸರರ್ಸ್ ಸ್ಟೋನ್ ಎಂದು ಹೆಸರಿಸಲಾಯಿತು, 1997ರಲ್ಲಿ ಬಿಡುಗಡೆಯಾದ ನಂತರದಿಂದ ಈ ಪುಸ್ತಕ ತೀವ್ರ ಜನಪ್ರಿಯತೆ, ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಜೂನ್ 2008ರ ಲೆಕ್ಕದಂತೆ, ಈ ಪುಸ್ತಕದ ಸರಣಿಗಳು 450 ಮಿಲಿಯನ್ ಪ್ರತಿಗಳಿಗಿಂತ ಅಧಿಕವಾಗಿ ಮಾರಾಟವಾಗಿವೆ ಮತ್ತು 67 ಭಾಷೆಗಳಲ್ಲಿ ಅನುವಾದಗೊಂಡಿವೆ ಮತ್ತು ಕೊನೆಯ ನಾಲ್ಕು ಪುಸ್ತಕಗಳು ಸತತವಾಗಿ "ಇತಿಹಾಸದಲ್ಲೇ ಅತಿ ಶೀಘ್ರವಾಗಿ ಮಾರಾಟವಾದ ಪುಸ್ತಕಗಳು" ಎಂಬ ದಾಖಲೆಯನ್ನು ಸ್ಥಾಪಿಸಿವೆ.

ಈ ಪುಸ್ತಕಗಳ ಇಂಗ್ಲೀಷ್ -ಭಾಷೆಯ ಆವೃತ್ತಿಗಳು ಯುನೈಟೆಡ್ ಕಿಂಗ್‌ಡಂನಲ್ಲಿ ಬ್ಲೂಮ್ಸ್‌ಬರಿ , ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸೊಶಿಯಲಿಸ್ಟಿಕ್ ಪ್ರೆಸ್, ಆಸ್ಟ್ರೇಲಿಯಾದಲ್ಲಿ ಆಲನ್ & ಅನ್‌ವಿನ್, ಮತ್ತು ಕೆನೆಡಾದಲ್ಲಿ ರೈನ್‌ಕೋಸ್ಟ್ ಬುಕ್ಸ್ ನವರು ಪ್ರಕಟಿಸುತ್ತಿದ್ದಾರೆ. ವಾರ್ನರ್ ಬ್ರದರ್ಸ್ ಸಂಸ್ಥೆಯು ಈ ಏಳೂ ಪುಸ್ತಕಗಳನ್ನು ಆಧರಿಸಿದ ಚಲನಚಿತ್ರಗಳ ಒಂದು ಸರಣಿಯನ್ನು ನಿರ್ಮಿಸಿದೆ. ಈ ಸರಣಿಗಳಿಂದಾಗಿ ಅನೇಕ ಮಾರಾಟದ ಸರಕುಗಳು ಪ್ರಾರಂಭಗೊಂಡವು ಮತ್ತು ಇದರಿಂದಾಗಿ ಹ್ಯಾರಿಪಾಟರ್ ಬ್ರಾಂಡ್‌ ನ ಮೌಲ್ಯ £15 ಬಿಲಿಯನ್ ಗೆ ಏರಿತು.

ಕಥಾವಸ್ತು

ಈ ಕಾದಂಬರಿಗಳು ತನ್ನ ಹನ್ನೊಂದನೆ ವಯಸ್ಸಿನಲ್ಲಿ ತಾನೊಬ್ಬ ಮಾಂತ್ರಿಕ ಎಂದು ಕಂಡುಕೊಳ್ಳುವ ಒಬ್ಬ ಅನಾಥ, ಹ್ಯಾರಿ ಪಾಟರ್ ನ ಸುತ್ತ ಸುತ್ತುತ್ತವೆ. ಮಾಂತ್ರಿಕ ಶಕ್ತಿ ಜನ್ಮತಃ ಬರುವುದು, ಆದರೆ ಮಾಂತ್ರಿಕ ಜಗತ್ತಿನಲ್ಲಿ ಸಫಲವಾಗಲು ಅವಶ್ಯಕವಾದ ಮಾಯಗಾರಿಕೆಯ ಕೌಶ್ಯಲಗಳನ್ನು ಕಲಿಯುವ ಕಾರಣದಿಂದ ಮಕ್ಕಳನ್ನು ಮಾಂತ್ರಿಕ ವಿದ್ಯೆಯ ಶಾಲೆಗೆ ಕಳಿಸಲಾಗುತ್ತದೆ. ಹಾಗ್ವರ್ಟ್ಸ್‌ನ ಮಾಟ ಮತ್ತು ಮಾಂತ್ರಿಕ ವಿದ್ಯೆ ಶಾಲೆ ಎಂಬ ಬೋರ್ಡಿಂಗ್ ಶಾಲೆಗೆ ಹಾಜರಾಗಲು ಹ್ಯಾರಿಯನ್ನು ಆಹ್ವಾನಿಸಲಾಗುತ್ತದೆ. ಒಂದೊಂದು ಪುಸ್ತಕವೂ ಹ್ಯಾರಿಯ ಜೀವನದ ಒಂದು ವರ್ಷದ ಘಟನೆಗಳ ದಾಖಲೆ ಮತ್ತ್ತುಹೆಚ್ಚಿನವು ಹಾಗ್ವರ್ಟ್ಸ್‌ನಲ್ಲಿ ಜರುಗಿದ ಘಟನೆಗಳನ್ನು ಕಾಲಾನುಕ್ರಮವಾಗಿ ದಾಖಲಿಸುತ್ತದೆ. ಹ್ಯಾರಿ ತನ್ನ ಹದಿಹರೆಯದ ವರ್ಷಗಳಲ್ಲಿ ಅನೇಕ ಹೋರಾಟವನ್ನು ಎದುರಿಸುತ್ತಾನೆ, ಮತ್ತು ಆ ಮೂಲಕ ಹಲವು ಮಾಂತ್ರಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆಡಚಣೆಗಳಿಂದ ಹೊರಬರುವುದನ್ನು ಆತ ಕಲಿತುಕೊಳ್ಳುತಾನೆ.

ಮಾಂತ್ರಿಕ ಜಗತ್ತು

ಹ್ಯಾರಿ ಮಗುವಾಗಿದ್ದಾಗ ಜನಾಂಗದ ಶುದ್ಧತೆಯ ಕುರಿತು ಭ್ರಮೆಯನ್ನು ಬೆಳೆಸಿಕೊಂಡ ಲಾರ್ಡ್ ವೊಲ್ಡೆಮೊರ್ಟ್ ಎಂಬ ಕಪ್ಪು ಮಾಂತ್ರಿಕನು ಅವನ ಹೆತ್ತವರನ್ನು ಕೊಲ್ಲುವುದನ್ನು ನೋಡಿದನು, ಅದನ್ನು ಪೂರ್ತಿ ಸರಣಿಯಲ್ಲಿ ಹಿನ್ನೊಟಗಳ ಮುಖಾಂತರ ಬಹಿರಂಗಪಡಿಸಲಾಗುತ್ತದೆ. ಲಾರ್ಡ್ ವೊಲ್ಡೆಮೊರ್ಟ್ ಹ್ಯಾರಿಯನ್ನು ಕೊಲ್ಲುವ ಪ್ರಯತ್ನಗಳನ್ನು ಪುನಃ ಪುನಃ ಮಾಡುತ್ತಾನೆ, ಆದರೆ ಅದರ ಕಾರಣಗಳು ತಕ್ಷಣ ಬಹಿರಂಗಗೊಳ್ಳುವುದಿಲ್ಲ. ವೊಲ್ಡೆಮೊರ್ಟ್ ಹೋರನೋಟಕ್ಕೆ ಸಾಯುತ್ತಾನೆ ಮತ್ತು ದಾಳಿಯ ಕುರುಹಾಗಿ ಹಣೆಯ ಮೇಲೆ ಒಂದು ಮಿಂಚಿನ ಆಕಾರದ ಕಲೆಯೊಂದಿಗೆ ಹ್ಯಾರಿ ಬದುಕಿ ಉಳಿಯುತ್ತಾನೆ. ವೊಲ್ಡೆಮೊರ್ಟ್‌ನ ಭಯದ ಆಳ್ವಿಕೆಯಲ್ಲಿಯೂ ಬದುಕಿ ಉಳಿದ ಹ್ಯಾರಿ, ನಂತರದಲ್ಲಿ ಮಾಂತ್ರಿಕ ಜಗತ್ತಿನ ಜೀವಂತ ದಂತಕಥೆಯಾಗುತ್ತಾನೆ. ಆದರೆ, ಅವನ ಆಶ್ರಯದಾತ ಮಾಂತ್ರಿಕ ಅಲ್ಬಸ್ ಡಮ್ಬ್‌ಲೆಡೊರೆನ ಆದೇಶದಂತೆ ಅನಾಥ ಹ್ಯಾರಿಯನ್ನು ಅವನ ಅಪ್ರಿಯ ಮಗ್ಗಲ್ (ಮಾಂತ್ರಿಕನಲ್ಲದ) ಸಂಬಂಧಿಕರ ಮನೆಯಲ್ಲಿ ಇರಿಸಲಾಗುತ್ತದೆ, ಅವರು ಹ್ಯಾರಿಯನ್ನು ಸುರಕ್ಷಿತವಾಗಿ ಕಾಪಾಡುತ್ತಾರೆ, ಅದರೆ ಅವರಿಗೆ ಹ್ಯಾರಿಯ ಆತನ ಜನ್ಮರಹಸ್ಯದ ಕುರಿತು ಬಗ್ಗೆ ಏನೂ ಗೊತ್ತಿರುವುದಿಲ್ಲ.

ಸರಣಿಯ ಮೊದಲ ಕಾದಂಬರಿ, ಹ್ಯಾರಿ ಪಾಟರ್ ಮತ್ತು ದಿ ಫಿಲಾಸಫರ್ಸ್ ಸ್ಟೋನ್ , ಹ್ಯಾರಿಯ ಹನ್ನೊಂದನೆ ಹುಟ್ಟುಹಬ್ಬದ ಆಸುಪಾಸಿನಿಂದ ಪ್ರಾರಂಭವಾಗುತ್ತದೆ. ಅರ್ಧ-ರಾಕ್ಷಸ ರುಬೆಯುಸ್ ಹಾಗ್ರಿಡ್ ಹ್ಯಾರಿಯ ಇತಿಹಾಸವನ್ನು ಬಹಿರಂಗಪಡಿಸುತ್ತಾನೆ ಮತ್ತು ಅವನನ್ನು ಮಾಂತ್ರಿಕ ಜಗತ್ತಿಗೆ ಪರಿಚಯಿಸುತ್ತಾನೆ. ಜೆ. ಕೆ. ರೌಲಿಂಗ್ ಈ ಕಾದಂಬರಿಗಳಲ್ಲಿ ವಾಸ್ತವ ಪ್ರಪಂಚದಿಂದ ಸಂಪೂರ್ಣವಾಗಿ ಬೇರೆ ಮತ್ತು ವಾಸ್ತವ ಪ್ರಪಂಚಕ್ಕೆ ನಿಕಟವಾಗಿ ಸಂಬಂಧಿಸಿದ ಎರಡು ಪ್ರಪಂಚವನ್ನು ಸೃಷ್ಟಿಸಿದ್ದಾರೆ. ನಾರ್ನಿಯಾದ ಕಲ್ಪಾನಿಕ ಜಗತ್ತು ಒಂದು ಪರ್ಯಾಯ ವಿಶ್ವವಾಗಿದೆ ಮತ್ತು ಲಾರ್ಡ್‌ ಅಫ್ ರಿಂಗ್ಸ್‌‌‌ನ ಮಿಡಲ್- ಅರ್ಥ್ ಒಂದು ಪುರಾಣ ಗತಕಾಲದ ಕುರಿತು ತೋರಿಸುತ್ತದೆ. ಆದರೆ, ಹ್ಯಾರಿ ಪಾಟರ್ ನ ಮಾಂತ್ರಿಕ ಜಗತ್ತು ವಾಸ್ತವಿಕ ಜಗತ್ತಿನ ಜೊತೆ ಜೊತೆಯಲೇ ಅಸ್ತಿತ್ವದಲ್ಲಿರುತ್ತದೆ ಮತ್ತು ಮಾಂತ್ರಿಕವಲ್ಲದ ಜಗತ್ತಿನ ವಸ್ತುಗಳನ್ನು ಹೋಲುವ ಮಾಂತ್ರಿಕ ಅಂಶಗಳನ್ನು ಹೊಂದಿದೆ. ಅದರ ಹಲವು ಸಂಘಗಳು ಮತ್ತು ಸಂಸ್ಥೆಗಳು ವಾಸ್ತವ ಜಗತ್ತಿನಲ್ಲಿ ಗುರುತಿಸಬಹುದಾದವುಗಳಾಗಿವೆ. ಉದಾಹರೆಣೆಗೆ ಲಂಡನ್. ಇದು ಛಿದ್ರಗೊಂಡ ರಹಸ್ಯ ಬೀದಿಗಳು, ನೋಡಿಕೊಳ್ಳದ ಮತ್ತು ಪುರಾತನ ಪಬ್‌ಗಳು, ಹಳ್ಳಿಗಳ ಒಂಟಿ ಭವನಗಳು, ಭೂಮಿಗಳು ಮತ್ತು ಜನಸಂಪರ್ಕವಿಲ್ಲದ ಕೋಟೆಗಳನ್ನು ಹೊಂದಿದೆ. ಇವು ಮಾಂತ್ರಿಕವಲ್ಲದ ಜನರಾದ ಮಗ್ಗಲ್‌ರಿಗೆ ಅಗೋಚರವಾಗಿ ಉಳಿದಿರುತ್ತವೆ.

ಹಾಗ್ರಿಡ್‌ನ ಸಹಾಯದಿಂದ ಹ್ಯಾರಿಯು ಹಾಗ್ವರ್ಟ್‌ನಲ್ಲಿ ತನ್ನ ಮೊದಲ ವರ್ಷದ ಶಿಕ್ಷಣಕ್ಕೆ ತಯಾರಿ ಮಾಡಿಕೊಳ್ಳುತಾನೆ ಮತ್ತು ಶಿಕ್ಷಣವನ್ನು ಕೈಗೊಳ್ಳುತ್ತಾನೆ. ಹ್ಯಾರಿ ಮಾಂತ್ರಿಕ ಜಗತ್ತನ್ನು ಅನ್ವೇಷಿಸಲು ಪ್ರಾರಂಬಿಸಿದ ಹಾಗೆಲ್ಲಾ ಸರಣಿಗಳಲ್ಲಿ ಬಳಸಿದ ಪ್ರಾಥಮಿಕ ಸ್ಥಳಗಳನ್ನು ಓದುಗರಿಗೆ ಈ ಕಾದಂಬರಿ ಪರಿಚಯಿಸುತ್ತದೆ. ಇಲ್ಲಿ ಹ್ಯಾರಿ ಕಾದಂಬರಿಯ ಪ್ರಮುಖ ಪಾತ್ರಗಳನ್ನು ಭೇಟಿ ಆಗುತ್ತಾನೆ ಮತ್ತು ಇಲ್ಲಿಯೇ ಅವನ ಅಪ್ತ ಸ್ನೇಹಿತರನ್ನು ಪಡೆಯುತ್ತಾನೆ: ಮೊದಲನೆಯದಾಗಿ ಒಂದು ಪುರಾತನ, ದೊಡ್ಡ, ಸಂತೋಷದಿಂದ ಕೂಡಿದ, ಅದರೆ ನಿರ್ದಯಿ ಮಾಂತ್ರಿಕ ಮನೆತನದ ಹಾಸ್ಯ ಪ್ರಿಯ ಸದಸ್ಯನಾದ ರಾನ್ ವಿಸ್ಲೆ; ಮತ್ತು ಸದಾ ಪುಸ್ತಕದ ಬೆನ್ನುಹತ್ತಿರುವ ಮಾಟಗಾತಿ ಹರ್ಮಿಯೋನೆ ಗ್ರೇಂಜರ್. ಇವಳು ಮಾಂತ್ರಿಕ ವಂಶಕ್ಕೆ ಸೇರಿದವಳಾಗಿರುವುದಿಲ್ಲ. ಹ್ಯಾರಿಯು ಇಲ್ಲಿಯೇ ತನ್ನನ್ನು ಅತ್ಯಂತ ಆಳವಾಗಿ ದ್ವೇಶಿಸುವ ಆ ಶಾಲೆಯ ಪೋಶನ್ಸ್ ಮಾಸ್ಟರ್ ಸೆವೆರಸ್ ಸ್ನೇಪ್‌ನನ್ನೂ ಭೇಟಿ ಮಾಡುತ್ತಾನೆ.ಅಮರತ್ವದ ಶೋಧನೆಯಲ್ಲಿದ್ದ ಮತ್ತು ಫಿಲಾಸಫರ್‍ನ ಸ್ಟೋನ್ ಶಕ್ತಿಯನ್ನು ಪಡೆಯಲು ಹಂಬಲಿಸುತ್ತಿದ್ದ ಲಾರ್ಡ್ ವೊಲ್ಡೆಮೊರ್ಟ್‌ನ ಜೊತೆ ಹ್ಯಾರಿಯ ಎರಡನೆ ಮುಖಾಮುಖಿಯೊಂದಿಗೆ ಕಥೆ ಮುಕ್ತಾಯವಾಗುತ್ತದೆ.

ಹಾಗ್ವರ್ಟ್‌ನಲ್ಲಿ ಹ್ಯಾರಿಯ ಎರಡನೆ ವರ್ಷದ ಬಗ್ಗೆ ಹ್ಯಾರಿ ಪಾಟರ್ ಮತ್ತು ದಿ ಚೇಂಬರ್ ಅಫ್ ಸೀಕ್ರೆಟ್ಸ್‌ ನಲ್ಲಿ ವರ್ಣಿಸುವ ಮೂಲಕ ಸರಣಿ ಮುಂದುವರಿಯುತ್ತದೆ. ಅವನು ಮತ್ತು ಅವನ ಸ್ನೇಹಿತರು ತಮ್ಮ ಶಾಲೆಯಲ್ಲಿ ಆ ಸಮಯದಲ್ಲಿ ನಡೆಯುವ ಅಪಶಕುನದ ಘಟನೆಗಳಿಗೆ ಸಂಬಂಧವಿರುವಂತಹ 50-ವರ್ಷ-ಹಳೆಯ ಒಂದು ರಹಸ್ಯದ ತನಿಖೆಯನ್ನು ಮಾಡುತ್ತಾರೆ. ಆ ಮೂಲಕ ಈ ಕಾದಂಬರಿ ಹಾಗ್ವರ್ಟ್‌ನ ಇತಿಹಾಸಕ್ಕೆ ಸಾಗುತ್ತದೆ ಮತ್ತು ಒಂದು ಪುರಾತನ ದುಷ್ಟ ಭೂತದ ಅಡಗುದಾಣವಾದ "ಛೆಂಬರ್ ಅಫ್ ಸೀಕ್ರೆಟ್ಸ್‌"ನ ಕುರಿತು ಇರುವ ಒಂದು ದಂತಕತೆಯನ್ನು ಹೇಳುತ್ತದೆ. ಹ್ಯಾರಿ ಮೊದಲ ಬಾರಿಗೆ ಮಾಂತ್ರಿಕ ಜಗತ್ತಿನಲ್ಲಿ ಜನಾಂಗೀಯ ಪಕ್ಷಪಾತದ ಅಸ್ತಿತ್ವವನ್ನು ಅರಿತುಕೊಳ್ಳುತ್ತಾನೆ, ಮತ್ತು ವೊಲ್ಡೆಮೊರ್ಟ್‌ನ ಭಯದ ಸಾಮ್ರಾಜ್ಯವು ಸಾಮಾನ್ಯ ಜನರಿಂದ ಮಾಂತ್ರಿಕರಾಗಿ ಬದಲಾದವರ ಮೇಲೆ ನಿರ್ದೇಶಿತವಾದುದನ್ನು ಕಂಡುಕೊಳ್ಳುತ್ತಾನೆ. ಹ್ಯಾರಿ, ತಾನು ಹಾವಿನ ಭಾಷೆಯನ್ನು ಸಹ ಮಾತನಾಡಬಲ್ಲ ಎಂದು ತಿಳಿದು ಕೊಂಡಾಗ ತಾನೇ ಚಕಿತನಾಗುತ್ತಾನೆ. ಹಾವಿನ ಭಾಷೆಯನ್ನು ಪಾರ್ಸೆಲ್‌ಟಂಗ್ ಎನ್ನುತ್ತಾರೆ. ಇದು ಒಂದು ಅಪರೂಪದ ಸಾಮರ್ಥ್ಯ. ಇದನ್ನು ಯಾವಾಗಲೂ ಕತ್ತಲ ಕೌಶಲ್ಯಗಳಿಗೆ ಸಮ ಎಂದು ಪರಿಗಣಿಸಲಾಗುತ್ತದೆ. ಹ್ಯಾರಿಯು ವೊಲ್ಡೆಮೊರ್ಟ್‌ ತನ್ನ ಒಂದು ಡೈರಿಯಲ್ಲಿ ರಕ್ಷಿಸಿಟ್ಟಿದ್ದ ಅತ್ಮದ ಒಂದು ಭಾಗವನ್ನು ನಾಶಮಾಡುವ ಮೂಲಕ ರಾನ್‌ನ ಕಿರಿಯ ಸಹೋದರಿ ಗಿನ್ನಿ ವಿಸ್ಲೆಯ ಜೀವವನ್ನು ಉಳಿಸುವುದರೊಂದಿಗೆ ಈ ಕಾದಂಬರಿ ಮುಕ್ತಾಯವಾಗುತ್ತದೆ. ( ಅದರೂ ಹ್ಯಾರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ಇದು ಸರಣಿಯ ಮುಂದಿನ ಭಾಗದಲ್ಲಿ ತಿಳಿಯುತ್ತದೆ). ಒಬ್ಬರ ಅತ್ಮದ ಒಂದು ಭಾಗವನ್ನು ಯಾವುದಾದರೂ ಒಂದು ವಸ್ತುಗಳ ಒಳಗೆ ಸಂರಕ್ಷಿಸುವ ಪರಿಕಲ್ಪನೆಯನ್ನು ಅಧಿಕೃತವಾಗಿ ಆರನೇ ಕಾದಂಬರಿಯಲ್ಲಿ ಪರಿಚಯಿಸಲಾಗುತ್ತದೆ. ಆ ಪರಿಕಲ್ಪನೆಗೆ ಹೊರ‍್ಕ್ರುಕ್ಸ್ ಎಂದು ಹೆಸರಿಸಲಾಗಿದೆ.

ಮೂರನೆ ಕಾದಂಬರಿ, ಹ್ಯಾರಿ ಪಾಟರ್ ಮತ್ತು ಪ್ರಿಸನರ್ ಅಫ್ ಅಜ್ಕಾಬಾನ್ , ಹ್ಯಾರಿಯ ಶಿಕ್ಷಣದ ಮೂರನೆ ವರ್ಷವನ್ನು ಒಳಗೊಂಡಿದೆ. ಈ ಸರಣಿಯಲ್ಲಿ ವೊಲ್ಡೆಮೊರ್ಟ್‌ನನ್ನು ಚಿತ್ರಿಸದ ಏಕ ಮಾತ್ರ ಪುಸ್ತಕ ಇದು. ಬದಲಿಗೆ ಹ್ಯಾರಿಯ ಹೆತ್ತವರ ಕೊಲೆಯಲ್ಲಿ ಭಾಗಿಯಾಗಿದ್ದ ಎಂದು ನಂಬಲಾದ ಒಬ್ಬ ತಪ್ಪಿಸಿಕೊಂಡ ಕೊಲೆಗಾರ ಸಿರಿಯಸ್ ಬ್ಲಾಕ್ ಹ್ಯಾರಿಯ ಮೇಲೆ ಇವನು ಲಕ್ಷ್ಯವಿಟ್ಟಿದ್ದಾನೆ ಎಂಬ ವಿಷಯದ ಕುರಿತು ಹ್ಯಾರಿ ಈ ಕಾದಂಬರಿಯಲ್ಲಿ ವ್ಯವಹರಿಸುತ್ತಾನೆ. ಹಾಗ್ವರ್ಟ್‌ ಶಾಲೆಯನ್ನು ರಕ್ಷಿಸುತ್ತಿರುವಂತೆ ತೋರಿಕೆಯ ನಟನೆ ಮಾಡುವ ಡಿಮೆಂಟರ್‌— ಅಂದರೆ ಮಾನವನ ಆತ್ಮವನ್ನು ಕಬಳಿಸುವ ಶಕ್ತಿಯಿರುವ ಕತ್ತಲ ಜೀವಿಗಳು — ಗಳೊಡನೆ ವ್ಯವಹರಿಸಲು ಕಷ್ಟಪಡುತ್ತಿರುವಾಗ ಆತ ರೇಮಸ್ ಲುಪಿನ್‌ನನ್ನು ಭೇಟಿ ಮಾಡುತ್ತಾನೆ. ಲುಪಿನ್ ಕತ್ತಲ ಗುಟ್ಟುಗಳನ್ನು ಅರಿತಿರುವ ಆದರೆ ಕತ್ತಲ ಕೌಶಲಗಳ ವಿರುದ್ಧ ರಕ್ಷಕ. ಲುಪಿನ್ ಹ್ಯಾರಿಗೆ ಅತ್ಮರಕ್ಷಣೆಯ ತಂತ್ರಗಳನ್ನು ಕಲಿಸುತ್ತಾನೆ. ಅವನ ವಯಸ್ಸಿನ ಇತರರು ತೋರಿಸುವ ಜಾದೂವಿಗಿಂತ ಮೇಲ್ಮಟ್ಟದ್ದನ್ನು ಹೇಳಿಕೊಡುತ್ತಾನೆ.ಲುಪಿನ್ ಮತ್ತು ಬ್ಲಾಕ್ ಇಬ್ಬರೂ ಸಹ ತನ್ನ ತಂದೆಯ ಅಪ್ತ ಸ್ನೇಹಿತರಾಗಿದ್ದರು ಮತ್ತು ಅವರ ನಾಲ್ಕನೆಯ ಸ್ನೇಹಿತ ಪಿಟರ್ ಪೆಟ್ಟಿಗ್ರೆವ್‌ನ ಬ್ಲಾಕ್‌ನ ಮೇಲೆ ಮಸಲತ್ತು ಮಾಡುತ್ತಾನೆ ಎಂದು ಹ್ಯಾರಿ ತಿಳಿದುಕೊಳ್ಳುತಾನೆ.

ವೊಲ್ಡೆಮೊರ್ಟ್‌‌ನ ಪುನರಾಗಮನ

ಹ್ಯಾರಿಯ ನಾಲ್ಕನೆ ವರ್ಷದ ಶಾಲಾ ಜೀವನವನ್ನು ಹ್ಯಾರಿ ಪಾಟರ್ ಮತ್ತು ದಿ ಗೋಬ್ಲೆಟ್ ಅಫ್ ಫೈರ್‌ ನಲ್ಲಿ ವಿವರಿಸಲಾಗಿದ್ದು, ಈ ಅವಧಿಯಲ್ಲಿ ಹ್ಯಾರಿ ಒಲ್ಲದ ಮನಸ್ಸಿನಿಂದ ಟ್ರೈವಿಜಾರ್ಡ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೆ. ಇದು ಯುವ ವಿದೇಶಿ ಸಂದರ್ಶಿತ ಶಾಲೆಗಳ ಮಾಟಗಾರ್ತಿಯರನ್ನು ಮತ್ತು ಮಾಂತ್ರಿಕರಿಂದ ಕೂಡಿದ ಒಂದು ಅಪಾಯಕರ ಮಾಂತ್ರಿಕ ಸ್ಪರ್ಧೆ.

ಹ್ಯಾರಿ ಯಾರು ತನ್ನನ್ನು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಒತ್ತಾಯ ಮಾಡಿದ್ದವರು ಮತ್ತು ಏಕೆ ಎಂದು ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡುತ್ತಾನೆ. ಪಂದ್ಯಾವಳಿ ಪೂರ್ತಿ ನಿಗೂಢ ಕೌಶಲ್ಯಗಳ ವಿರುದ್ಧದ ಅತ್ಮರಕ್ಷಣೆಯ ಶಿಕ್ಷಕನಾದ ಪ್ರೊಫೆಸರ್ ಅಲಾಸ್ಟರ್ ಮೂಡಿ ಅತಂಕಗೊಂಡ ಹ್ಯಾರಿಗೆ ಮಾರ್ಗದರ್ಶನ ಮಾಡುತ್ತಾನೆ. ಮಕ್ಕಳು ಬೆಳೆಯುತ್ತಿರುವ ಹಾಗೆ, ಈ ನಿಗೂಢತೆಯು ಬಿಡಿಸಿಕೊಳ್ಳುವ ಹಂತವು ಈ ಸರಣಿಯಲ್ಲಿನ ಊಹೆ ಮತ್ತು ಅನಿಶ್ಚಿತತೆಯಿಂದ ಹೊರಗೆ ಬಂದು ನೇರ ಸಂಘರ್ಷಕ್ಕೆ ಕರೆದೊಯ್ಯುತ್ತದೆ. ವೊಲ್ಡೆಮೊರ್ಟ್‌ ಮತ್ತೆ ಜೀವಂತವಾಗುವುದರೊಂದಿಗೆ ಮತ್ತು ಒಬ್ಬ ವಿದ್ಯಾರ್ಥಿಯ (ಸೆರ್ಡಿಕ್ ಡಿಗ್ಗೊರಿ) ಸಾವಿನೊಂದಿಗೆ ಈ ಕಾದಂಬರಿ ಮುಕ್ತಾಯವಾಗುತ್ತದೆ.

ಐದನೆಯ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಅರ್ಡರ್ ಅಫ್ ಫೀನಿಕ್ಸ್‌ ನಲ್ಲಿ ಹೊಸದಾಗಿ ಮತ್ತೆ ರೂಪಗೊಂಡ ವೊಲ್ಡೆಮೊರ್ಟ್‌ನನ್ನು ಹ್ಯಾರಿ ಎದುರಿಸುತ್ತಾನೆ. ವೊಲ್ಡೆಮೊರ್ಟ್ ಪುನಃ ಕಾಣಿಸಿಕೊಂಡುದರ ಪರಿಣಾಮವಾಗಿ, ಡಂಬಲ್‌ಡೋರ್ ಅರ್ಡರ್ ಅಫ್ ದಿ ಫೀನಿಕ್ಸ್‌ಗೆ ಪುನಃ ಚಾಲನೆ ನೀಡುತ್ತಾನೆ. ಇದು ಸಿರಿಯಸ್ ಬ್ಲಾಕ್‌ನ ಮನೆಯಿಂದ ಕೆಲಸ ಮಾಡುವ ಒಂದು ರಹಸ್ಯ ಸಂಸ್ಥೆಯಾಗಿದ್ದು, ಇದರ ಮುಖ್ಯ ಉದ್ದೇಶ ವೊಲ್ಡೆಮೊರ್ಟ್‌ ಸೇವಕರನ್ನು ಸೋಲಿಸುವುದು ಮತ್ತು ಹ್ಯಾರಿಯನ್ನು ಸೇರಿದಂತೆ ವೊಲ್ಡೆಮೊರ್ಟ್‌ ಶತ್ರುಗಳನ್ನು ರಕ್ಷಿಸುವುದು. ಇದರಲ್ಲಿ ಹ್ಯಾರಿ ನಂಬುವ ಹಲವು ವಯಸ್ಕರು ಇರುತ್ತಾರೆ. ಅವರುಗಳು ರೇಮಸ್ ಲುಪಿನ್, ಸಿರಿಯಸ್ ಬ್ಲಾಕ್ ಮತ್ತು ವಿಸ್ಲೆ ಕುಟುಂಬದ ಸದಸ್ಯರು, ಕೆಲವು ಅಶ್ಚರ್ಯಕರ ಸದಸ್ಯರು ಸಹ ಇರುತ್ತಾರೆ. ಕಥೆಯಲ್ಲಿ ಒಳ್ಳೆಯ ಮತ್ತು ಕತ್ತಲ ಪಾತ್ರಗಳು ಅಷ್ಟು ಸ್ಪಷ್ಟವಾಗಿರುವುದಿಲ್ಲ. ವೊಲ್ಡೆಮೊರ್ಟ್‌ನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಹ್ಯಾರಿಯ ವಿವರಣೆಯ ಹೊರತಾಗಿಯೂ, ಮಿನಿಸ್ಟ್ರಿ ಅಫ್ ಮ್ಯಾಜಿಕ್ ಮತ್ತು ಮಾಂತ್ರಿಕ ಜಗತ್ತು ಮತ್ತು ಹಲವು ಇತರರು ವೊಲ್ಡೆಮೊರ್ಟ್‌ನ ಪುನರಾಗಮನವನ್ನು ನಂಬಲು ನಿರಾಕರಿಸುತ್ತಾರೆ.

ರಾಜಕೀಯವಾಗಿ ಸರಿ ಎಂಬ ಪಠ್ಯವನ್ನು ಕಡ್ಡಾಯ ಮಾಡುವ ಪ್ರಯತ್ನದಲ್ಲಿ ಮಿನಿಸ್ಟ್ರಿ ಅಫ್ ಮ್ಯಾಜಿಕ್ ಡೊಲೊರೆಸ್ ಅಮ್‌ಬ್ರಿಡ್ಜ್‌ನ್ನು ಪ್ರಮುಖ ಶೋಧಕಿಯಾಗಿ ನೇಮಕ ಮಾಡುತ್ತದೆ. ಅವಳು ಶಾಲೆಯನ್ನು ಸರ್ವಾಧಿಕಾರಿಯ ಆಳ್ವಿಕೆಗೆ ಬದಲಾಯಿಸುತ್ತಾಳೆ ಮತ್ತು ವಿದ್ಯಾರ್ಥಿಗಳು ಕತ್ತಲ ಜಾದೂವಿನ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವ ದಾರಿಗಳನ್ನು ಕಲಿಯಲು ಅವಕಾಶ ಮಾಡಿಕೊಡಲು ನಿರಾಕರಿಸುತ್ತಾಳೆ. ನಿಗೂಢ ಕೌಶಲ್ಯಗಳ ವಿರುದ್ಧ ಹೋರಾಡಲು ಹೆಚ್ಚಿನ ದರ್ಜೆಯ ಚತುರತೆಯನ್ನು ಕಲಿಸುವ ಒಂದು ರಹಸ್ಯ ಅಧ್ಯಯನ ಗುಂಪನ್ನು ಹ್ಯಾರಿ ಸ್ಥಾಪಿಸುತ್ತಾನೆ. ಇದು ಅವನ ಸಹಪಾಠಿಗಳಿಗೆ ಹ್ಯಾರಿ ಕಲಿತ ಹೆಚ್ಚಿನ ದರ್ಜೆಯ ಚತುರತೆಯನ್ನು ಕಲಿಸುತ್ತದೆ. ಈ ಕಾದಂಬರಿಯಲ್ಲಿ ಹ್ಯಾರಿಗೆ ನಾಜೂಕಾದ ಯುವ ಮಾಟಗಾತಿ ಲೂನಾ ಲವ್‌ಗುಡ್‌ನ ಪರಿಚಯವಾಗುತ್ತದೆ. ಅವಳು ಪಿತೂರಿಯ ಸಿದ್ದಾಂತವನ್ನು ನಂಬುವ ಪ್ರವೃತ್ತಿಯನ್ನು ಹೊಂದಿರುತ್ತಾಳೆ. ಹ್ಯಾರಿ ಮತ್ತು ವೊಲ್ಡೆಮೊರ್ಟ್‌‌ಗೆ ಸಂಬಂಧಿಸಿದ ಒಂದು ಭವಿಷ್ಯವಾಣಿ ಬಹಿರಂಗಗೊಳ್ಳುತ್ತದೆ, ಅವನು ಮತ್ತು ಲೊಲ್ಡೆಮೊರ್ಟ್ ಒಂದು ದುಃಖಪೂರಿತ ಸಂಬಂಧವನ್ನು ಹೊಂದಿರುವುದಾಗಿ ಹ್ಯಾರಿ ಕಂಡುಕೊಳ್ಳುತ್ತಾನೆ. ವೊಲ್ಡೆಮೊರ್ಟ್‌ನ ಕೆಲವು ಕ್ರಿಯೆಗಳನ್ನು ಟೆಲಿಪತಿಯ ಮೂಲಕ ಹ್ಯಾರಿಗೆ ನೋಡುವ ಅವಕಾಶ ಸಿಗುತ್ತದೆ. ಕಾದಂಬರಿಯ ಮುಕ್ತಾಯದಲ್ಲಿ ಹ್ಯಾರಿ ಮತ್ತು ಅವನ ಗೆಳೆಯರು ವೊಲ್ಡೆಮೊರ್ಟ್‌ನ ಡೆತ್ ಈಟರ್ಸ್‌‌ಗಳ ವಿರುದ್ಧ ಹೋರಾಡುತ್ತಾರೆ, ಅದರಲ್ಲಿ ಶ್ರೀಮಂತ ಮತ್ತು ದುರಾಹಂಕಾರಿ ಮಾಲ್ಫಾಯ್ ಕುಟುಂಬವು ಸೇರಿರುತ್ತದೆ. ಆರ್ಡರ್ ಅಫ್ ದಿ ಫೀನಿಕ್ಸ್‌ನ ಸದಸ್ಯರು ಸಮಯಕ್ಕೆ ಸರಿಯಾಗಿ ತಲುಪಿದ ಕಾರಣ ಮಕ್ಕಳ ಜೀವ ರಕ್ಷಿಸಲು ಸಾಧ್ಯವಾಗುತ್ತದೆ, ಮತ್ತು ಡೆತ್ ಈಟರ್‌ಗಳನ್ನು ವಶಪಡಿಸಿಕೊಳ್ಳಲು ಮತ್ತು ಬಂಧಿಸಲು ಅವಕಾಶವಾಗುತ್ತದೆ.

ಅವರ ಆರನೇ ವರ್ಷದಲ್ಲಿ, ಅಂದರೆ ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್‌ ನಲ್ಲಿ, ಹ್ಯಾರಿ ಮತ್ತು ಅವನ ಬೆಂಬಲಿಗರು OWL-ದರ್ಜೆಗಳನ್ನು ಉತ್ತೀರ್ಣರಾಗುತ್ತಾರೆ, ಮತ್ತು ಅವರು NEWT ಕೋರ್ಸ್‌ಗಳಲ್ಲಿ ಪರಿಣಿತಿ ಪಡೆಯಲು ಪ್ರಾರಂಭಿಸುತ್ತಾರೆ. ಇನ್ನೊಂದು ಮಾಂತ್ರಿಕ ಯುದ್ಧವನ್ನು ವೊಲ್ಡೆಮೊರ್ಟ್ ಮುನ್ನಡೆಸುತ್ತಾನೆ. ಆ ಯುದ್ಧ ಎಷ್ಟು ಕ್ರೂರವಾಗಿರುತ್ತದೆಂದರೆ ಅದರ ಪರಿಣಾಮಗಳನ್ನು ಸಾಮಾನ್ಯ ಜನರು ಸಹ ಗುರುತಿಸುತ್ತಾರೆ. ಹಾಗ್ವರ್ಟ್‌ನ ಆ ಆಪತ್ತಿನಿಂದ ಹ್ಯಾರಿ ಮತ್ತು ಅವನ ಗೆಳೆಯರು ಪರಸ್ಪರ ರಕ್ಷಿಸಲ್ಪಟ್ಟರೂ ಕೂಡಾ, ಅದರೂ ಅವರು ಹದಿಹರೆಯದ ಆ ಎಲ್ಲಾ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಈ ಕಾದಂಬರಿಯ ಪ್ರಾರಂಭದಲ್ಲಿ, ಹಾಫ್-ಬ್ಲಡ್ ಪ್ರಿನ್ಸ್ ಎಂಬ ನಿಗೂಢ ಬರಹಗಾರ ಬರೆದ ಹಳೆಯ ಔಷಧ ಪಠ್ಯಪುಸ್ತಕದ ಒಂದು ಭಾಗವನ್ನು ಓದುವಾಗ ಆಕಸ್ಮಿಕವಾಗಿ ಓದುತ್ತಾನೆ, ಅದು ನಿಗೂಢ ಬರಹಗಾರರ ಟಿಪ್ಪಣಿ ಮತ್ತು ಶಿಫಾರಾಸುಗಳನ್ನು ಹೊಂದಿರುವ ಪುಸ್ತಕ. ಪುಸ್ತಕದಲ್ಲಿರುವ ಕಿರುದಾರಿಗಳು ಹ್ಯಾರಿಗೆ ಆ ಔಷಧಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ, ಪರಿಣಾಮವಾಗಿ ಹ್ಯಾರಿ ಅನಾಮಧೇಯ ಬರಹಗಾರರ ಶಬ್ದಾರ್ಥಗಳನ್ನು ಅನುಮಾನಿಸಲು ಕಲಿತ. ಹ್ಯಾರಿ ಅಲ್ಬಸ್ ಡಂಬಲ್‌ಡೋರ್ ನಿಂದ ಖಾಸಗಿ ಪಾಠವನ್ನು ಸಹ ಹೇಳಿಸಿಕೊಳ್ಳಲು ಪ್ರಾರಂಭಿಸಿದ, ಅವನು ಹ್ಯಾರಿಗೆ ವೊಲ್ಡೆಮೊರ್ಟ್‌ನ ಗತಜೀವನಕ್ಕೆ ಸಂಬಂಧಿಸಿದ ನೆನಪುಗಳನ್ನು ತೋರಿಸುತ್ತಾನೆ. ಇದು ವೊಲ್ಡೆಮೊರ್ಟ್‌ನ ಅತ್ಮದ ಚೂರುಗಳು ಹಾರ್‌ಕ್ರುಕ್ಸ್‌‌‌‌‌‌ನ ಸರಣಿಗಳಲ್ಲಿರುವುದನ್ನು ಬಹಿರಂಗಪಡಿಸುತ್ತದೆ, ಹಾರ್‌ಕ್ರುಕ್ಸ್‌ ಅಂದರೆ ಬೇರೆ ಬೇರೆ ಜಾಗದಲ್ಲಿ ಬಚ್ಚಿಟ್ಟ ಮಾಟಮಾಡಿದ ಕೆಟ್ಟ ವಸ್ತುಗಳು. ಹ್ಯಾರಿಯ ಪ್ರದರ್ಶನಪ್ರಿಯ ಎದುರಾಳಿ ಡ್ರಕೊ ಮಾಲ್ಫಾಯ್, ಡಂಬಲ್‌ಡೋರ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಾನೆ ಮತ್ತು ಪ್ರೊಫೆಸರ್ ಸ್ನಾಪೆಯಿಂದ ಡಂಬಲ್‌ಡೋರ್ ಕೊಲ್ಪಡುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಈ ಸರಣಿಯ ಕೊನೆ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಡೆತ್‌ಲಿ ಹ್ಯಾಲೋಸ್ ನೇರವಾಗಿ ಆರನೇ ಪುಸ್ತಕದ ನಂತರದ ಘಟನೆಗಳಿಂದ ಪ್ರಾರಂಭವಾಗುತ್ತದೆ. ವೊಲ್ಡೆಮಾರ್ಟ್ ಅಧಿಕಾರದ ತುತ್ತತುದಿಯನ್ನು ತಲುಪುತ್ತಾನೆ ಮತ್ತು ಮಿನಿಸ್ಟ್ರಿ ಅಫ್ ಮ್ಯಾಜಿಕ್‌ನ ಮೇಲೆ ಪೂರ್ಣ ಹಿಡಿತವನ್ನು ಹೊಂದುತ್ತಾನೆ. ವೊಲ್ಡೆಮೊರ್ಟ್‌ನ ಉಳಿದ ಹಾರ್‌ಕ್ರುಕ್ಸ್‌‌‌‌‌ಗಳನ್ನು ಹುಡುಕಲು ಮತ್ತು ನಾಶಮಾಡಲು ಹ್ಯಾರಿ, ರಾನ್ ಮತ್ತು ಹರ್ಮಿಯೋನೆ ಶಾಲೆಯಿಂದ ಹೋರಬೀಳುತ್ತಾರೆ. ಅವರ ರಕ್ಷಣೆಯ ಜೊತೆಗೆ ಅವರ ಗೆಳೆಯರ ಮತ್ತು ಕುಟುಂಬದವರ ರಕ್ಷಣೆಗಾಗಿ ಅವರು ಒಲ್ಲದ ಮನಸ್ಸಿನಿಂದ ಏಕಾಂತಕ್ಕೆ ಸಾಗುತ್ತಾರೆ.ಅವರು ಹಾರ್‌ಕ್ರುಕ್ಸ್‌‌‌‌‌ಗಳನ್ನು ಹುಡುಕುವಾಗ ಮೂವರು ಡಂಬಲ್‌ಡೋರ್ ನ ಗತಜೀವನದ ಬಗ್ಗೆ ತಿಳಿದು ಕೊಳ್ಳುತ್ತಾರೆ. ಹಾಗೆಯೇ ಸ್ನಾಪೆಯ ನಿಜವಾದ ಉದ್ದೇಶಗಳನ್ನು ಸಹ.

ಈ ಪುಸ್ತಕ ಹಾಗ್ವರ್ಟ್‌ನ ಯುದ್ಧದೊಂದಿಗೆ ಮುಕ್ತಾಯವಾಗುತ್ತದೆ.ಹ್ಯಾರಿ,ರಾನ್, ಮತ್ತು ಹರ್ಮಿಯೋನೆ, ಅರ್ಡರ್ ಅಫ್ ದಿ ಫೀನಿಕ್ಸ್‌ನ ಸದಸ್ಯರು ಮತ್ತು ಹಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವೊಲ್ಡೆಮೊರ್ಟ್, ಅವನ ಡೆತ್ ಈಟರ್‌ಗಳು ಮತ್ತು ಬೇರೆ ಮಾಂತ್ರಿಕ ಜೀವಿಗಳಿಂದ ಹಾಗ್ವರ್ಟ್‌ನ್ನು ರಕ್ಷಿಸಲು ಜೊತೆಗೆ ಸೇರುತ್ತಾರೆ. ಹಲವು ಪ್ರಮುಖ ಪಾತ್ರಗಳನ್ನು ಯುದ್ಧದ ಮೊದಲ ಭಾಗದಲ್ಲೇ ಕೊಲ್ಲಲಾಗುತ್ತದೆ ಮತ್ತು ವೊಲ್ಡೆಮೊರ್ಟ್ ಹ್ಯಾರಿಯನ್ನು ಕೊಲ್ಲುವ ಉದ್ದೇಶದಿಂದ ಯುದ್ಧವನ್ನು ಮುಂದುವರಿಸುತ್ತಾನೆ. ಬದುಕುಳಿದವರನ್ನು ರಕ್ಷಿಸುವ ಪ್ರಯತ್ನದಲ್ಲಿ ಹ್ಯಾರಿ ಶರಣಾಗುತ್ತಾನೆ, ಅದರೆ ಹಲವು ಹಾಗ್ವರ್ಟ್‌ನ ವಿದ್ಯಾರ್ಥಿಗಳ ಹೆತ್ತವರು,ಹತ್ತಿರದ ಹಳ್ಳಿ ಹಾಗ್ಸ್‌ಮೀಡ್‌ನ ನಿವಾಸಿಗಳು ಮತ್ತು ಅವರ ಮಾಂತ್ರಿಕ ಜೀವಿಗಳು ಅರ್ಡರ್ ಅಫ್ ದಿ ಫೀನಿಕ್ಸ್‌ನ್ನು ಬಲಪಡಿಸಲು ಮುಂದಾಗುತ್ತಾರೆ, ಇದರಿಂದ ಯುದ್ಧ ಮುಂದುವರಿಯುತ್ತದೆ. ಕೊನೆಯ ಹಾರ್‌ಕ್ರುಕ್ಸ್‌‌‌‌‌ನ್ನು ನಾಶಮಾಡಿದಾಗ ಅಂತಿಮವಾಗಿ ಹ್ಯಾರಿ ವೊಲ್ಡೆಮೊರ್ಟ್‌ನನ್ನು ಎದುರಿಸುತ್ತಾನೆ. ಹ್ಯಾರಿ ಡಾರ್ಕ್ ಲಾರ್ಡ್‌ ವೊಲ್ಡೆಮೊರ್ಟ್‌ಗೆ ತಪ್ಪೊಪ್ಪಿಗೆಗೆ ಒಂದು ಅವಕಾಶವನ್ನು ಕೊಡುತ್ತಾನೆ, ಅದರೆ ವೊಲ್ಡೆಮೊರ್ಟ್ ಇದನ್ನು ಕಡೆಗಣಿಸುತ್ತಾನೆ ಮತ್ತು ಹ್ಯಾರಿಯನ್ನು ಕೊಲ್ಲುವ ಕೊನೆ ಪ್ರಯತ್ನ ಮಾಡುತ್ತಾನೆ. ಆದರೆ, ಹ್ಯಾರಿಯ ಕೈಯಿಂದಲೇ ವೊಲ್ಡೆಮೊರ್ಟ್‌ನ ಸಾವು ಸಂಭವಿಸುತ್ತದೆ. ಪಾತ್ರಗಳ ಜೀವನ ಮತ್ತು ಮಾಂತ್ರಿಕ ಜಗತ್ತಿನ ಮೇಲೆ ಇದರ ಪರಿಣಾಮಗಳನ್ನು ಉಪಸಂಹಾರದಲ್ಲಿ ವಿವರಿಸಲಾಗುತ್ತದೆ.

ಪೂರಕ ಕೃತಿಗಳು

ವಿವಿಧ ಧರ್ಮಾರ್ಥ ಸಂಸ್ಥೆಗಳಿಗಾಗಿ ರೌಲಿಂಗ್ ಹ್ಯಾರಿ ಪಾಟರ್ ಯುನಿವರ್ಸ್‌ ನ್ನು ಹಲವು ಸಣ್ಣ ಪುಸ್ತಕಗಳಾಗಿ ವೃದ್ಧಿಪಡಿಸಿ ಸೃಷ್ಟಿಸಿದ್ದಾರೆ. 2001ರಲ್ಲಿ, ಅವರು ಫೆಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈಂಡ್ ದೆಮ್ (ಹಾಗ್ವರ್ಟ್‌ನ ಪಠ್ಯಪುಸ್ತಕ) ಮತ್ತು ಕ್ವಿಡ್ಡಿಚ್ ಥ್ರೂ ದಿ ಏಜಸ್ (ಹ್ಯಾರಿ ವಿನೋದಕ್ಕಾಗಿ ಓದುವ ಪುಸ್ತಕ) ಪುಸ್ತಕಗಳನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕಗಳ ಮುಂದುವರಿದ ಮಾರಾಟದಿಂದ ಕಾಮಿಕ್ ರಿಲೀಫ್ ಧರ್ಮಾರ್ಥ ಸಂಸ್ಥೆಗೆ ಪ್ರಯೋಜನವಾಯಿತು. 2007ರಲ್ಲಿ, ರೌಲಿಂಗ್ ದಿ ಟೇಲ್ಸ್ ಆಫ್ ಬೀಡಲ್ ದಿ ಬರ್ಡ್ ಕೈ ಬರಹದ ಏಳು ಪ್ರತಿಗಳನ್ನು ರಚಿಸಿದರು, ಇದು ಒಂದು ಕಲ್ಪಿತ ಭ್ರಮಾಚಿತ್ರದ ಕಥೆಗಳ ಸಂಗ್ರಹ. ಕೊನೆಯ ಕಾದಂಬರಿಯಲ್ಲಿ ಇದನ್ನು ಚಿತ್ರಿಸಲಾಗಿದೆ. ಇದರಲ್ಲಿ ಒಂದನ್ನು ಬಡ ರಾಷ್ಟಗಳ ಮಾನಸಿಕ ಅಸ್ತವ್ಯಸ್ತ ಮಕ್ಕಳ ನಿಧಿ ಸಂಸ್ಥೆಯಾದ ಚಿಲ್ಡ್ರನ್ ಹೈ ಲೆವೆಲ್ ಗ್ರೂಪ್‌ಗೆ ಹಣ ಸಂಗ್ರಹ ಮಾಡಲು ಹರಾಜು ಹಾಕಲಾಯಿತು. ಅಂತರಾಷ್ಟೀಯ ಮಟ್ಟದಲ್ಲಿ 4 ಡಿಸೆಂಬರ್ 2008ರಂದು ಈ ಪುಸ್ತಕವನ್ನು ಪ್ರಕಟಿಸಲಾಯಿತು. ಪುಸ್ತಕ ಮಾರಾಟಗಾರ ವಾಟರ‍್‍ಸ್ಟೋನ್‌ ರವರು 2008ರಲ್ಲಿ ಏರ್ಪಡಿಸಿದ ಧನ ಸಂಗ್ರಹದ ಒಂದು ಭಾಗವಾಗಿ ರೌಲಿಂಗ್ ಅವರು 800-ಪದದ ಪೂರ್ವಕತೆಗಳನ್ನು ಸಹ ಬರೆದಿದ್ದಾರೆ.

ಸ್ವರೂಪ ಮತ್ತು ಪ್ರಕಾರ

ಹ್ಯಾರಿ ಪಾಟರ್ ಕಾದಂಬರಿಗಳು ಕಲ್ಪಿತ ಸಾಹಿತ್ಯ ಪ್ರಕಾರದ ಅಡಿಯಲ್ಲಿ ಬರುತ್ತವೆ, ಆದರೂ ಇವು ಅನೇಕ ಕೋನಗಳಲ್ಲಿ ನೋಡಿದಾಗ ಬೈಲ್‌ಡಂಗ್ಸ್‌ರೋಮನ್ಸ್ ಅಥವಾ ವೈಯಕ್ತಿಕ ಬೆಳವಣಿಗೆಯ ಕಾದಂಬರಿ ಪ್ರಕಾರಗಳಿಗೆ ಸೇರುತ್ತದೆ. ಇವುಗಳನ್ನು ಬ್ರಿಟಿಷ್ ಮಕ್ಕಳ ಬೋರ್ಡಿಂಗ್ ಶಾಲೆ ಪ್ರಕಾರದ ಭಾಗವೆಂದು ಪರಿಗಣಿಸಲಾಗುತ್ತದೆ. ಈ ಪ್ರಕಾರದಲ್ಲಿ ಎನಿಡ್ ಬ್ಲೈಟನ್ನ ಮಲೋರಿ ಟವರ್ಸ್ , ಸೇಂ. ಕ್ಲಾರೆ ಮತ್ತು ನಾಟಿಯೆಸ್ಟ್ ಗರ್ಲ್ ಸರಣಿಗಳು, ಮತ್ತು ಫ್ಶ್ರೇಣಿ ರಿಚರ್ಡ್ಸ್‌ನ ಬಿಲ್ಲಿ ಬಂಟರ್ ಕಾದಂಬರಿಗಳು. ಆ ಶೈಲಿಯ ಕಾದಂಬರಿಗಳುಹ್ಯಾರಿ ಪಾಟರ್ ನ ಹಾಗ್ವರ್ಟ್ಸ್್ನು ಒಳಗೊಂಡಿದೆ, ಕಾದಂಬರಿಯ ಬ್ರಿಟಿಷ್ ಬೋರ್ಡಿಂಗ್ ಮಾಂತ್ರಿಕ ಶಾಲೆ, ಜಾದೂವಿನ ಉಪಯೋಗಗಳು ಇಲ್ಲಿನ ಪಠ್ಯ ಇವುಗಳನ್ನು ಕಾಣಬಹುದು. ಈ ಅರ್ಥದಲ್ಲಿ ಇವುಗಳು "ಥಾಮಸ್ ಹ್ಯೂಜಸ್ನ ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್ ಮತ್ತು ಬೇರೆ ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಬ್ರಿಟಿಷ್ ಪಬ್ಲಿಕ್ ಸ್ಕೂಲ್ಲೈಫ್ ಕಾದಂಬರಿಯ ವಂಶದ ನೇರ ಸಾಲಿನಲ್ಲಿವೆ". ಅವುಗಳು ಸ್ಟಿಫನ್ ಕಿಂಗ್ ನ ಮಾತಿನಲ್ಲಿ, "ಚತುರತೆಯುಳ್ಳ ನಿಗೂಢ ಕತೆಗಳಾಗಿವೆ",[76] ಮತ್ತು ಶೇರ್ಲಾಕ್ ಹೊಮ್ಸ್‌‌‌ನ-ಶೈಲಿಯ ನಿಗೂಢ ಸಾಹಸ ಪ್ರಕಾರದಲ್ಲಿ ರಚಿಸಲ್ಪಟ್ಟಿವೆ. ಕಥೆಗಳು ಮೂರನೆ ವ್ಯಕ್ತಿಯ ಸೀಮಿತವಾದ ದೃಷ್ಟಿಕೋನದಲ್ಲಿ ಕೆಲವೇ ಕೆಲವು ವಿನಾಯಿತಿಯೊಂದಿಗೆ ಹೇಳಲಾಗಿವೆ. ( ಉದಾಹರಣೆಗೆ ಫಿಲಾಸಫರ್ಸ್ಸ್ ಸ್ಟೋನ್ ಮತ್ತು ಡೆತ್‌ಲಿ ಹ್ಯಾಲೋಸ್ ನ ಮುಕ್ತಪಾತ್ರಗಳು ಮತ್ತು ಹಾಫ್-ಬ್ಲಡ್ ಪ್ರಿನ್ಸ್‌ ನ ಮೊದಲ ಎರಡು ಪಾತ್ರಗಳು)

ಪ್ರತಿ ಪುಸ್ತಕದ ಮಧ್ಯದಲ್ಲಿ, ಹ್ಯಾರಿ ತನಗೆ ಎದುರಾಗುವ ತೊಂದರೆಗಳ ಜೊತೆ ಹೋರಾಡುತ್ತಾನೆ, ಅವುಗಳನ್ನು ಪರಿಹರಿಸುವಾಗ ಯಾವಾಗಲೂ ಶಾಲೆಯ ಕೆಲವು ನಿಯಮಗಳನ್ನು ಉಲ್ಲಂಘಿಸುತ್ತಾನೆ, ಸಿಕ್ಕಿ ಹಾಕಿಕೊಂಡ ಸಂದರ್ಭದಲ್ಲಿ ಹಾಗ್ವರ್ಟ್ಸ್‌ನ ಕಾಯಿದೆಗಳು ನಿಯಮ ಪಾಲನೆಯ ಶಿಕ್ಷೆಯನ್ನು ವಿಧಿಸುತ್ತವೆ (ಹ್ಯಾರಿ ಪಾಟರ್ ಪುಸ್ತಕವು ಬೋರ್ಡಿಂಗ್ ಶಾಲೆ ಉಪ-ಪ್ರಕಾರದಲ್ಲಿ ಹಲವು ಪೂರ್ವ ನಿದರ್ಶನಗಳನ್ನು ಪಾಲಿಸುತ್ತದೆ). ಅದರೆ, ಕಥೆಗಳು ಅಂತಿಮ ಘಟ್ಟವನ್ನು ಶಾಲೆಯ ಬೇಸಿಗೆ ಅವಧಿಯಲ್ಲಿ ತಲುಪುತ್ತವೆ, ಅಂತಿಮ ಪರೀಕ್ಷೆಯ ಅಸುಪಾಸು ಅಥವಾ ನಂತರದಲ್ಲಿ, ಘಟನೆಗಳು ಎಲ್ಲೆ ಮೀರಿ ವೃದ್ಧಿಸಿದ್ದಾಗ ಶಾಲೆಯಲ್ಲಿ ಜಗಳವಾಡುವುದು ಮತ್ತು ಹೋರಾಡುವುದನ್ನು ಕಾಣುತ್ತೇವೆ, ಹ್ಯಾರಿ ಒಂದೇ ವೊಲ್ಡೆಮೊರ್ಟ್ ಅಥವಾ ಅವನ ಸರಣಿ ಬೆಂಬಲಿಗರಾದ ಡೆತ್ ಈಟರ್ಸ್‌ನ್ನ್ನು ಎದುರಿಸಬೇಕಾಗುತ್ತದೆ. ಸರಣಿ ಮುಂದುವರೆದ ಹಾಗೆ ಹೋರಾಟ ಸಾವು ಹಾಗೂ ಬದುಕಿನ ವಿಷಯವಾಗುತ್ತದೆ, ಮತ್ತು ಕೊನೆಯ ನಾಲ್ಕು ಪುಸ್ತಕಗಳಲ್ಲಿ ಪ್ರತೀಬಾರಿ ಒಂದು ಅಥವಾ ಹೆಚ್ಚು ಪಾತ್ರಗಳನ್ನು ಕೊಲ್ಲಲಾಗುತ್ತದೆ. ಹ್ಯಾರಿ ತನ್ನ ಮುಖ್ಯ ಶಿಕ್ಷಕ ಮತ್ತು ಮಾರ್ಗದರ್ಶಿ ಅಲ್ಬಸ್ ಡಂಬಲ್‌ಡೋರ್ ಜೊತೆ ವಿವರಣೆ ಮತ್ತು ಚರ್ಚೆಯ ಮೂಲಕ ಪ್ರಮುಖವಾದ ಪಾಠಗಳನ್ನು ಕಲಿಯುತ್ತಾನೆ.

ಕೊನೆಯ ಕಾದಂಬರಿ ಹ್ಯಾರಿ ಪಾಟರ್ ಅಂಡ್ ದಿ ಡೆತ್‌ಲಿ ಹ್ಯಾಲೋಸ್ ನಲ್ಲಿ ಹ್ಯಾರಿ ಮತ್ತು ಅವನ ಗೆಳೆಯರು ಅವರ ಹೆಚ್ಚಿನ ಸಮಯವನ್ನು ಹಾಗ್ವೆರ್ಟ್‌ನಿಂದ ದೂರ ಕಳೆಯುತ್ತಾರೆ ಮತ್ತು ಡೆನ್ಯೂಮಾಂಟ್‌‌ನಲ್ಲಿ ವೊಲ್ಡೆಮೊರ್ಟ್‌ನನ್ನು ಎದುರಿಸಲು ಮಾತ್ರ ಅಲ್ಲಿಗೆ ಮರಳುತ್ತಾರೆ. ಬಿಲ್ಡಂಗ್ಸ್‌ರೊಮನ್ ಶೈಲಿಯನ್ನು ಮುಗಿಸುವಾಗ, ಈ ಭಾಗದಲ್ಲಿ ಹ್ಯಾರಿ ಕಳೆದ ವರ್ಷದ ಶಾಲೆಯ ವಿದ್ಯಾರ್ಥಿಯಾಗಿದ್ದ ಅವಕಾಶವನ್ನು ಕಳೆದುಕೊಂಡು, ಹ್ಯಾರಿ ವಯಸ್ಸಿಗೆ ಮುನ್ನ ದೊಡ್ಡವನಾಗಬೇಕಾಗುತ್ತದೆ ಮತ್ತು ಪ್ರೌಢನ ರೀತಿಯಲ್ಲಿ ಅಭಿನಯಿಸಬೇಕಾಗುತ್ತದೆ, ಅವನ ನಿರ್ಧಾರದ ಮೇಲೆ ವಯಸ್ಕರನ್ನು ಸೇರಿ ಎಲ್ಲರೂ ಅವಲಂಬಿತರಾಗಿರುತ್ತಾರೆ.

ಮೂಲ ವಿಷಯಗಳು

ರೌಲಿಂಗ್‌ರ ಪ್ರಕಾರ, "ಸರಣಿಯಲ್ಲಿನ ಪ್ರಮುಖ ವಿಷಯ ಸಾವು: ನನ್ನ ಪುಸ್ತಕಗಳಲ್ಲಿ ಸಾವಿನ ಬಗ್ಗೆ ವ್ಯಾಪಕವಾಗಿ ಇದೆ ಅವು ಹ್ಯಾರಿಯ ಹೆತ್ತವರ ಸಾವಿನೊಂದಿಗೆ ಪ್ರಾರಂಭವಾಗುತ್ತದೆ.ವೊಲ್ಡೆಮೊರ್ಟ್‌ನ ಸಾವನ್ನು ಜಯಸುವ ಗೀಳು ಮತ್ತು ಯಾವುದೇ ಬೆಲೆಯಲ್ಲಿ ಅಮರತ್ವದ ಶೋದನೆ ಅವುಗಳಲ್ಲಿ ಇವೆ. ನಾನು ಅದರಿಂದ ವೊಲ್ಡೆಮೊರ್ಟ್ ಸಾವನ್ನು ಏಕೆ ಜಯಿಸಲು ಬಯುಸುತ್ತಾನೆ ಎಂದು ಅರ್ಥ ಮಾಡಿಕೊಂಡಿದ್ದೇನೆ, ನಾವುಗಳು ಅದಕ್ಕೆ ಹೆದರುತ್ತೇವೆ."

ಶಿಕ್ಷಣಕ್ಕೆ ಸಂಬಂಧಿಸಿದವರು ಮತ್ತು ಪತ್ರಕರ್ತರು ಪುಸ್ತಕಗಳಲ್ಲಿನ ವಿಷಯಕ್ಕೆ ಸಂಬಂಧಿಸಿದ ಹಲವು ಬೇರೆ ಬೇರೆ ವ್ಯಾಖಾನಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ಬೇರೆಯವುಗಳಿಗಿಂತ ತುಂಬಾ ಜಟಿಲವಾಗಿದೆ ಮತ್ತು ಕೆಲವು ರಾಜಕೀಯ ಉಪಪಠ್ಯಗಳನ್ನು ಒಳಗೊಂಡಿದೆ. ವಿಷಯಗಳು ಯಾವುದೆಂದರೆ, ಸಾಧಾರಣತೆ, ದಬ್ಬಾಳಿಕೆ, ಉಳಿಯುವಿಕೆ ಮತ್ತು ವಿಚಿತ್ರವಾದ ಹೇರಿಕೆಗಳನ್ನು ವ್ಯಾಪಕವಾಗಿ ಸರಣಿಗಳ ತುಂಬಾ ಪರಿಗಣಿಸಲಾಗಿದೆ. ಅದೇರೀತಿ, ಒಬ್ಬನ ಹದಿಹರಯದ ಕತೆ ಮತ್ತು ಅದರಲ್ಲಿಯೇ ಅತ್ಯಂತ ನೋವಿನ ಸತ್ವಪರೀಕ್ಷೆಗಳನ್ನು ಎದುರಿಸುವುದು, ಮತ್ತು ಅವುಗಳನ್ನು ಒಪ್ಪಿಕೊಳ್ಳುವುದೂ ಸಹಾ ಈ ಕತೆಗಳ ಮೂಲವಿಷಯಗಳಲ್ಲಿ ಒಂದಾಗಿದೆ. ಈ ಪುಸ್ತಕಗಳಲ್ಲಿ "ತಾಳ್ಮೆಗಾಗಿ ದೀರ್ಘವಾದ ವಾದವಿವಾದ, ಮತಾಂಧತೆಯ ಕೊನೆಗಾಗಿ ವಿಸ್ತಾರವಾದ ಕೋರಿಕೆಯನ್ನು ಹೊಂದಿದೆ" ಮತ್ತು "ಅಧಿಕಾರವನ್ನು ಪ್ರಶ್ನಿಸುವಿಕೆ ಮತ್ತು... ಪ್ರತಿಷ್ಠಾಪನೆ ಅಥವಾ ಪತ್ರಿಕೆಗಳು ಹೇಳುವುದನ್ನು ನಿಜ ಎಂದು ಭಾವಿಸಬೇಕಾಗಿಲ್ಲ ಎಂಬ ಸಂದೇಶವನ್ನು ಸಹ ಸಾರುತ್ತದೆ". ಎಂದು ರೌಲಿಂಗ್ ಹೇಳುತ್ತಾರೆ.

ಜೊತೆಗೆ ಪುಸ್ತಕಗಳು ಇನ್ನೂ ಹಲವು ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಬಹುದಾಗಿದೆ, ಅವುಗಳೆಂದರೆ ಅಧಿಕಾರ/ಅಧಿಕಾರದ ದುರ್ಬಳಕೆ, ಪ್ರೀತಿ, ಪಕ್ಷಪಾತ ಮತ್ತು ಮುಕ್ತ ಆಯ್ಕೆ, ಜೆ.ಕೆ .ರೌಲಿಂಗ್ ಹೇಳುವ ಪ್ರಕಾರ, "ಅವುಗಳು ಇಡಿ ಕಥೆಯಲ್ಲಿ ಆಳವಾಗಿ ನೆಲೆಸಿವೆ". ಲೇಖಕರು ಇಂತಹ ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿ ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನಕ್ಕಿಂತ ಅವುಗಳ ಜೈವಿಕ ಬೆಳವಣಿಗೆಯನ್ನು ಇಷ್ಟಪಡುತ್ತೇನೆಂದು ಹೇಳುತ್ತಾರೆ. ಇದರೊಡನೆ ಸದಾ ಇರುವ ಮೂಲವಿಷಯವೆಂದರೆ ಹದಿಹರಯ. ಇದನ್ನು ಕಥೆಯಲ್ಲಿ ವಿವರಿಸುವಾಗ ಲೇಖಕಿ ರೌಲಿಂಗ್ ತನ್ನ ಪಾತ್ರಗಳ ಲೈಂಗಿಕತೆಯನ್ನು ನೈಜವಾಗಿ ನಿರೂಪಿಸಿದ್ದಾರೆ, ಹಾಗೂ ಅವರೇ ಹೇಳುವ ಪ್ರಕಾರ, ಹ್ಯಾರಿಯನ್ನು "ಯವ್ವನ-ಪೂರ್ವದ ಅವಸ್ಥೆಯಲ್ಲಿಯೇ ತಟಸ್ಥನಾಗಿ ಉಳಿಯುವಂತೆ ಮಾಡುವುದಿಲ್ಲ". ರೌಲಿಂಗ್ ತನಗೆ "ಕತೆಗಳಲ್ಲಿ ನೈತಿಕತೆಯ ಪ್ರಾಧಾನ್ಯತೆಯು ತುಂಬ ಸುಲಭಗ್ರಾಹ್ಯವಾಗಿದೆ" ಎಂದು ಹೇಳಿದ್ದಾರೆ. ಯಾವುದು ಸರಿ ಮತ್ತು ಯಾವುದು ಸುಲಭದ ನಡುವಿನ ಆಯ್ಕೆ ಅವರಿಗೆ ಮುಖ್ಯವಾಗಿತ್ತು, ಏಕೆಂದರೆ ಹಾಗೆಯೇ ನಿರಂಕುಶ ಪ್ರಭುತ್ವ ಶುರುವಾಗಿದ್ದು, ಮನುಷ್ಯರು ಜಡರಾಗಿ ಸುಲಭ ದಾರಿಯ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ತಕ್ಷಣ ಆಳವಾದ ತೊಂದರೆಯಲ್ಲಿ ಅವರು ಸಿಲುಕುತ್ತಾರೆ.

ಮೂಲಗಳು ಮತ್ತು ಪ್ರಕಾಶನದ ಇತಿಹಾಸ

1990ರಲ್ಲಿ, ಜೆ. ಕೆ. ರೌಲಿಂಗ್ ಮ್ಯಾಂಚೆಸ್ಟರ್ ನಿಂದ ಲಂಡನ್‌ಗೆ ತುಂಬಿದ ರೈಲಿನಲ್ಲಿ ಹೋಗುವಾಗ ತಕ್ಷಣ ಅವರ ತಲೆಯಲ್ಲಿ ಹ್ಯಾರಿ ಪಾಟರ್ ಕಾದಂಬರಿಯ ಯೋಚನೆ ಬಂತು.ರೌಲಿಂಗ್ ಅವರ ಅನುಭವದ ಕುರಿತು ಅವರ ವೆಬ್‌ಸೈಟ್‌‌‌‌‌‌‌‌‌‌‌‌‌‌‌‌‌‌ನಲ್ಲಿ ಹೇಳುತ್ತಾರೆ:

"I had been writing almost continuously since the age of six but I had never been so excited about an idea before. I simply sat and thought, for four (delayed train) hours, and all the details bubbled up in my brain, and this scrawny, black-haired, bespectacled boy who did not know he was a wizard became more and more real to me."

1995ರಲ್ಲಿ ರೌಲಿಂಗ್ ಹ್ಯಾರಿ ಪಾಟರ್ ಅಂಡ್ ದಿ ಫಿಲೊಸೊಫರ್ಸ್ ಸ್ಟೋನ್ ಬರೆದು ಮುಗಿಸಿದ್ದರು ಮತ್ತು ಕೈಬರಹದ ಪ್ರತಿಯನ್ನು ಹಲವು ನಿರೀಕ್ಷಿತ ಮಧ್ಯವರ್ತಿಗಳಿಗೆ ಕಳುಹಿಸಿದ್ದರು. ಅವರು ಪ್ರಯತ್ನಿಸಿದ ಎರಡನೆ ಮಧ್ಯವರ್ತಿ ಕ್ರಿಸ್ಟೊಫರ್ ಲಿಟಲ್ ರೌಲಿಂಗ್‌ರನ್ನು ಪ್ರತಿನಿಧಿಸಲು ಒಪ್ಪಿಕೊಂಡರು ಮತ್ತು ಹಸ್ತಪ್ರತಿಯನ್ನು ಬ್ಲೂಮ್ಸ್‌ಬರಿಗೆ ಕಳುಹಿಸಿದರು. ಈ ಮೊದಲು ಎಂಟು ಜನ ಪ್ರಕಾಶಕರು ಫಿಲೊಸೊಫರ್ಸ್ ಸ್ಟೋನ್‌‌ ನ್ನು ತಿರಸ್ಕರಿಸಿದ್ದರು ಆದರೆ ಬ್ಲೂಮ್ಸ್‌ಬರಿ ಆ ಪುಸ್ತಕದ ಪ್ರಕಟಣೆಗಾಗಿ ರೌಲಿಂಗ್‌ಗೆ £2,500 ಮುಂಗಡ ಹಣವನ್ನು ಕೊಟ್ಟರು. ತಾನು ಹ್ಯಾರಿ ಪಾಟರ್ ಬರೆಯಲು ಶುರು ಮಾಡಿದಾಗ ಯಾವುದೇ ವಯಸ್ಸಿನ ಗುಂಪಿಗೆ ಸೀಮಿತವಾಗಿರಲಿಲ್ಲ ಎಂದು ರೌಲಿಂಗ್ ಹೇಳುತ್ತಾರೆ. ಅವರ ಹೇಳಿಕೆಯ ಹೊರತಾಗಿಯೂ ಪ್ರಕಾಶಕರು ಪ್ರಾರಂಭದಲ್ಲೇ ಒಂಬತ್ತರಿಂದ ಹನ್ನೊಂದು ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಟ್ಟು ಕೊಂಡರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪ್ರಕಾಶಕರು ರೌಲಿಂಗ್‌ಗೆ ಒಂದು ಹೆಚ್ಚು ಲಿಂಗ-ತಟಸ್ಥ ಪೆನ್ ನೇಮ್‌ನ್ನು ಆರಿಸಿಕೊಳ್ಳಲು ಕೇಳಿಕೊಂಡರು. ಆ ರೀತಿ ಮಾಡುವುದರಿಂದ ಈ ವಯಸ್ಸಿನ ಪುರುಷ ಸದಸ್ಯರನ್ನು ಹೆಚ್ಚು ಆಕರ್ಷಿಸಬಹುದು, ಮಹಿಳೆ ಲೇಖಕಿ ಎಂದು ತಿಳಿದರೆ ಅವರು ಕಾದಂಬರಿ ಓದಲು ಆಸಕ್ತಿ ತೋರುವುದಿಲ್ಲ ಎಂಬ ಭಯದಿಂದ ಪೆನ್‌ನೇಮ್ ಆಳವಡಿಸಿಕೊಳ್ಳಲು ಕೇಳಿದರು. ಆದರೆ ಆಕೆ ಜೆ.ಕೆ.ರೌಲಿಂಗ್ (Joanne Kathleen Rowling) ಎಂಬ ಹೆಸರನ್ನು ಆರಿಸಿಕೊಂಡರು. ಲೇಖಕರಿಗೆ ಯಾವುದೇ ಮಧ್ಯ ಹೆಸರಿಲ್ಲದ ಕಾರಣ ಅವರು ತಮ್ಮ ಅಜ್ಜಿಯ ಹೆಸರನ್ನು ಮಧ್ಯ ಹೆಸರಾಗಿ ಮಾಡಿಕೊಂಡರು.

30 ಜೂನ್ 1997ರಂದು, ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಪುಸ್ತಕವು ಬ್ಲೂಮ್ಸ್‌ಬರಿ ಪ್ರಕಾಶನದಿಂದ ಪ್ರಕಟವಾಯಿತು. ಇವರು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹ್ಯಾರಿ ಪಾಟರ್ ಸರಣಿಯ ಎಲ್ಲಾ ಪುಸ್ತಕಗಳ ಪ್ರಕಾಶಕರು. ಅಮೇರಿಕಾ ಸಂಯುಕ್ತ ಸಂಸ್ಥಾನ‌ದಲ್ಲಿ 1 ಸೆಪ್ಟೆಂಬರ್, 1998ರಂದು ಹ್ಯಾರಿ ಪಾಟರ್ ಅಂಡ್ ದಿ ಸೊರ್ಸರರ್ಸ್ ಸ್ಟೋನ್ ಸ್ಕೊಲಾಸ್ಟಿಕ್ ಪ್ರಕಾಶನದವರು ಬಿಡುಗಡೆ ಮಾಡಿದರು. ಆವರೆಗೆ ಅನಾಮದೇಯ ಲೇಖಕರಾಗಿದ್ದ ರೌಲಿಂಗ್‌, ಪುಸ್ತಕದ ಅಮೆರಿಕದ ಹಕ್ಕುಗಳಿಗಾಗಿ US$105,000 ಹಣವನ್ನು ಸ್ವೀಕರಿಸಿದರು. ಮಕ್ಕಳ ಪುಸ್ತಕಗಳಿಗಾಗಿ ಇಷ್ಟು ಹಣವನ್ನು ಗಳಿಸಿದ ಘಟನೆ ಹಿಂದೆಂದೂ ನಡೆದಿರಲಿಲ್ಲ. ಅಮೆರಿಕದ ಓದುಗರು ಫಿಲಾಸೊಫೆರ್ಸ್ ಸ್ಟೋನ್ ಎಂಬ ಪದವನ್ನು ಮಾಂತ್ರಿಕ ವಿಷಯದ ಜೊತೆ ಒಪ್ಪಿಕೊಳ್ಳುವುದಿಲ್ಲ ಎಂಬ ಭಯದಿಂದ, (ಫಿಲಾಸೊಫೆರ್ ಸ್ಟೋನ್ ಪದ ರಸವಿದ್ಯೆಗೆ ಸೇರಿದ್ದಾದರೂ) ಅಮೆರಿಕದ ಮಾರುಕಟ್ಟೆಗಾಗಿ ಪುಸ್ತಕಕ್ಕೆ ಹ್ಯಾರಿ ಪಾಟರ್ ಅಂಡ್ ಸೊರ್ಸರರ್ಸ್ ಸ್ಟೋನ್ ಎಂಬ ಹೆಸರನ್ನು ಬದಲಾಯಿಸಬೇಕು ಎಂದು ಸೂಚಿಸಿತು.

ಎರಡನೆ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಆಫ್ ಸೀಕ್ರೆಟ್ಸ್ , UKಯಲ್ಲಿ 2 ಜುಲೈ 1998ರಂದು ಮತ್ತು USನಲ್ಲಿ 2 ಜೂನ್, 1999ರಂದು ಪ್ರಕಟಿಸಲಾಯಿತು. ಒಂದು ವರ್ಷದ ನಂತರ ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್ UKಯಲ್ಲಿ 8 ಜುಲೈ 1999 ಮತ್ತುe USನಲ್ಲಿ 8 ಸೆಪ್ಟೆಂಬರ್ 1999ರಂದು ಪ್ರಕಟವಾಯಿತು. ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಆಫ್ ಫೈರ್ 8 ಜುಲೈ 2000ರಂದು ಒಂದೇ ಸಮಯದಲ್ಲಿ ಬ್ಲೂಮ್ಸ್‌ಬರಿ ಮತ್ತುಸ್ಕೂಲಾಸ್ಟಿಕ್ ಪ್ರಕಾಶನದಿಂದ ಪ್ರಕಟಿಸಲ್ಪಟ್ಟಿತು. ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಈ ಸರಣಿಯ ಅತಿ ದೊಡ್ಡ ಪುಸ್ತಕವಾಗಿದ್ದು, UK ಅವೃತ್ತಿಯಲ್ಲಿ 766 ಪುಟಗಳನ್ನು ಮತ್ತು 870 ಪುಟಗಳನ್ನು US ಅವೃತ್ತಿಯಲ್ಲಿ ಹೊಂದಿದೆ. ಈ ಪುಸ್ತಕವು ಪ್ರಪಂಚದಾದ್ಯಂತ ಇಂಗ್ಲೀಷ್‌ನಲ್ಲಿ 21 ಜೂನ್ 2003ರಂದು ಪ್ರಕಟಿಸಲಾಯಿತು. ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್‌ನ್ನು 16 ಜುಲೈ 2005ರಂದು ಪ್ರಕಟಿಸಲಾಯಿತು, ಮತ್ತು ಪ್ರಪಂಚದಾದ್ಯಂತ ಇದು ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ 9 ಮಿಲಿಯನ್ ಪ್ರತಿಗಳು ಮಾರಾಟವಾದವು. ಏಳನೆ ಮತ್ತು ಅತಿಂಮ ಕಾದಂಬರಿ, ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲ್ಲ್ಲೊಸ್ ,1 ಜುಲೈ 2007ರಂದು ಪ್ರಕಟಗೊಂಡಿತು. ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ, 2.7 ಮಿಲಿಯನ್ ಪ್ರತಿಗಳು UKಯಲ್ಲಿ ಮತ್ತು 8.3 ಮಿಲಿಯನ್ ಪ್ರತಿಗಳು USನಲ್ಲಿ ಮಾರಾಟವಾದವು.

ಅನುವಾದಗಳು

ಈ ಸರಣಿಗಳು 67 ಭಾಷೆಗೆ ಅನುವಾದಗೊಂಡಿದೆ, ಇದು ರೌಲಿಂಗ್‌ ಅವರನ್ನು ಇತಿಹಾಸದಲ್ಲಿ ಅತಿ ಹೆಚ್ಚು ಅನುವಾದಗೊಂಡ ಲೇಖಕರ ಸಾಲಿಗೆ ಸೇರಿಸುತ್ತದೆ. ಈ ಪುಸ್ತಕ ಮೊದಲು ಅನುವಾದಗೊಂಡಿದ್ದು ಅಮೆರಿಕದ ಇಂಗ್ಲೀಷ್‌‌ನಲ್ಲಿ. ಏಕೆಂದರೆ, ಈ ಪುಸ್ತಕದಲ್ಲಿನ ಹಲವು ಪದಗಳು ಮತ್ತು ಪಾತ್ರಗಳು, ಉಪಯೋಗಿಸಿದ ಪರಿಕಲ್ಪನೆಗಳು ಅಮೆರಿಕದ ಯುವ ಜನರನ್ನು ತಪ್ಪು ಅರ್ಥ ಕೊಡುವಂತಿದ್ದವು. ಜೊತೆಗೆ, ಪುಸ್ತಕಗಳು ವಿಭಿನ್ನವಾದ ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳೆಂದರೆ ಉಕ್ರೆನಿಯನ್, ಅರೇಬಿಕ್ , ಉರ್ದು , ಹಿಂದಿ , ಬೆಂಗಾಳಿ, ವೆಲ್ಶ್, ಆಫ್ರಿಕಾನ್ಸ್, ಲಾಟ್ವಿಯನ್ ಮತ್ತು ವಿಯೆಟ್ನಾಮೀಸ್. ಮೊದಲ ಸಂಪುಟ ಲ್ಯಾಟಿನ್ ಭಾಷೆಗೆ ಮತ್ತು ಪುರಾತನ ಗ್ರೀಕ್ ಭಾಷೆಗೂ ಸಹ ಅನುವಾದಗೊಂಡಿದೆ. 3ನೇ ಶತಮಾನದ ಹೆಲಿಯೋಡೋರಸ್ ಆಫ್ ಎಮೇಸಾ ಕಾದಂಬರಿಗಳ ನಂತರ ಈ ಪುಸ್ತಕದ ಅನುವಾದವು ಪುರಾತನ ಗ್ರೀಕ್‌ನ ಇತಿಹಾಸದಲ್ಲಿ ಅತಿ ಉದ್ದನೆಯ ಅನುವಾದವಾಗಿದೆ.

ಹ್ಯಾರಿ ಪಾಟರ್‌ ನ ಅನುವಾದದ ಕೆಲಸಕ್ಕಾಗಿ ಕೆಲವು ಪ್ರಸಿದ್ದ ಲೇಖಕರನ್ನು ಗೊತ್ತು ಮಾಡಲಾಗಿತ್ತು. ಉದಾಹರಣೆಗೆ ವಿಕ್ಟರ್ ಗೊಲಿಶೆವ್. ಇವರು ಐದನೇ ಪುಸ್ತಕವನ್ನು ರಷ್ಯನ್ ಭಾಷೆಗೆ ಅನುವಾದ ಮಾಡಿದರು. ಎರಡರಿಂದ ಏಳನೇ ಪುಸ್ತಕಗಳವರೆಗೆ ಟರ್ಕಿ ಭಾಷೆಗೆ ಅನುವಾದವನ್ನು ಸೆವಿನ್ ಒಕೆಯ್ ಕೈಗೊಂಡರು. ಅವರು ಪ್ರಸಿದ್ಧ ಸಾಹಿತ್ಯ ವಿಮರ್ಶಕ ಮತ್ತು ಸಾಂಸ್ಕೃತಿಕ ವ್ಯಾಖ್ಯಾನಕಾರ. ರಹಸ್ಯವನ್ನು ಕಾಪಾಡುವ ಕಾರಣದಿಂದ ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕಗಳು ಬಿಡುಗಡೆಯಾದ ನಂತರವಷ್ಟೇ ಬೇರೆ ಭಾಷೆಗೆ ಅನುವಾದಿಸಲು ಪ್ರಾರಂಭ ಮಾಡಬೇಕು. ಹಾಗಾಗಿ ಅನುವಾದಗೊಂಡ ಪುಸ್ತಕಗಳು ಸಿಗಲು ಕೆಲವು ತಿಂಗಳು ವಿಳಂಬವಾಗುತ್ತದೆ. ಹೀಗಾಗಿ, ಇಂಗ್ಲೀಷ್ ಮಾತನಾಡದ ದೇಶಗಳಲ್ಲಿನ ಓದುಗರ ಕುತೂಹಲವನ್ನು ತಣಿಸುವ ಸಲುವಾಗಿ ಇಂಗ್ಲೀಷ್ ಅವತರಣಿಕೆ ಪುಸ್ತಕಗಳು ಮಾರಾಟವಾಗುವಂತಾಯಿತು. ಈ ರೀತಿ ಕೋಲಾಹಲ ಐದನೇ ಪುಸ್ತಕದ ಬಿಡುಗಡೆ ಸಮಯದಲ್ಲೂ ಉಂಟುಯಾಯಿತು. ಇದರಿಂದ ಐದನೇ ಪುಸ್ತಕದ ಇಂಗ್ಲೀಷ್ ಅವೃತ್ತಿಯು ಫ್ರಾನ್ಸ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಇಂಗ್ಲೀಷ್ ಭಾಷೆಯ ಪುಸ್ತಕವಾಗಿದೆ.

ಸರಣಿಯ ಮುಕ್ತಾಯ

"ನಾನು ನನ್ನ ಹ್ಯಾರಿ ಪಾಟರ್ ಸರಣಿಯ ಅಂತಿಮ ಪುಸ್ತಕವನ್ನು 2006ರಲ್ಲಿ ಬರೆಯುತ್ತೇನೆ" ಎಂದು ಡಿಸೆಂಬರ್ 2005ರಲ್ಲಿ ರೌಲಿಂಗ್ ತಮ್ಮ ವೆಬ್‌ಸೈಟ್‌‌‌‌‌‌‌‌‌‌‌‌‌‌‌‌‌ನಲ್ಲಿ ಹೇಳಿದ್ದಾರೆ. ನಂತರ ಅವರು ತಮ್ಮ ಆನ್‌ಲೈನ್ ಡೈರಿಯಲ್ಲಿ ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್‌‍‍ ನ ಬೆಳವಣಿಗೆಯ ಘಟನೆಗಳನ್ನು ಕಾಲಾಕ್ರಮವಾಗಿ ನವೀಕರಣ ಮಾಡುತ್ತಿದ್ದರು, ಜೊತೆಗೆ ಪುಸ್ತಕದ ಬಿಡುಗಡೆಯ ದಿನಾಂಕವನ್ನು 21 ಜುಲೈ 2007 ಎಂದು ಸಹ ನಮೂದಿಸಿದ್ದರು. ಪುಸ್ತಕವು 11 ಜನವರಿ 2007ರಂದೇ ಎಡಿನ್‌ಬರ್ಗ್‌ನ ಬಾಲ್ಮೊರಲ್ ಹೋಟಲ್‌ನಲ್ಲಿ ಬರೆದು ಮುಗಿಯಿತು. ಅಲ್ಲಿ ಅವರು ಹರ್ಮಿಸ್‌‌ನ ಅಮೃತಶಿಲೆಯ ಮೂರ್ತಿಯ ಹಿಂದೆ ಈ ಸಂದೇಶವನ್ನು ಗೀಚಿದರು: "ಜೆ.ಕೆ.ರೌಲಿಂಗ್ ಹ್ಯಾರಿ ಪಾಟರ್ ಆಂಡ್ ಡೆತ್ಲಿ ಹ್ಯಾಲೊಸ್‌‌ ನ್ನು ಈ ರೂಮ್‌ನಲ್ಲಿ (652) 11 ಜನವರಿ 2007ರಂದು ಬರೆದು ಮುಗಿಸಿದರು".

ಸ್ವತಃ ರೌಲಿಂಗ್ ಅವರೇ ಹೇಳಿದ ಹಾಗೆ, ಅಂತಿಮ ಪುಸ್ತಕಕದ ಕೊನೆ ಭಾಗವು (ಉಪಸಂಹಾರ)"ಸುಮಾರು 1990ರಷ್ಟರಲ್ಲೇ" ಬರೆದು ಮುಗಿದಿತ್ತು. ರೌಲಿಂಗ್ ಅವರು ಜೂನ್ 2006ರಂದು ಬ್ರಿಟಿಷ್ ಟಾಕ್ ಶೋ ರಿಚರ್ಡ್ & ಜೂಡಿ ನಲ್ಲಿ ಹೀಗೆ ಘೋಷಿಸಿದರು: "ಒಂದು ಪಾತ್ರದ ಮರಣದಂಡನೆಯನ್ನು ಮುಂದೂಡುವ ಕಾರಣದಿಂದ, ಮತ್ತು ಮೊದಲು ಬದುಕಿದ ಎರಡು ಪಾತ್ರಗಳು ಕಥೆಯಲ್ಲಿ ನಂತರ ಸಾಯುವುದರಿಂದಾಗಿ ಕಾದಂಬರಿಯ ಆ ಭಾಗವನ್ನು ಬದಲಾಯಿಸಲಾಯಿತು." 28 ಮಾರ್ಚ್ 2007ರಂದು, ಬ್ಲೂಮ್ಸ್‌ಬರಿ ಮಕ್ಕಳ ಮತ್ತು ವಯಸ್ಕರ ಆವೃತ್ತಿಯ ಮತ್ತು ಸ್ಕೊಲಾಸ್ಟಿಕ್ ಆವೃತ್ತಿಯ ರಕ್ಷಾಪುಟಗಳನ್ನು ಬಿಡುಗಡೆ ಮಾಡಲಾಯಿತು.

ಸಾಧನೆಗಳು

ಸಾಂಸ್ಕೃತಿಕ ಪ್ರಭಾವ

ಹ್ಯಾರಿ ಪಾಟರ್ 
ಪಾಟರ್ ಆಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ ಬಿಡುಗಡೆಗೆ ಮಧ್ಯರಾತ್ರಿ ಜನಸಮೂಹ ನ್ಯೂಯಾರ್ಕ್, ಡೆಲವೆರ್ ನ ಒಂದು ಬಾರ್ಡರ್ಸ್ ಅಂಗಡಿಯ ಹೊರಗೆ ಕಾಯುತ್ತಿದ್ದರು.

ಈ ಸರಣಿಯ ಅಭಿಮಾನಿಗಳು ಸರಣಿಯ ಹೊಸ ಬಿಡುಗಡೆಗಾಗಿ ಕಾತುರಾಗಿದ್ದರು. ಪ್ರಪಂಚದ ಎಲ್ಲಾ ಕಡೆ ಪುಸ್ತಕ ಮಳಿಗೆಗಳು ಮಧ್ಯರಾತ್ರಿ ಪುಸ್ತಕ ಬಿಡುಗಡೆಯ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರಾರಂಭಿಸಿದ್ದರು. ಈ ರೀತಿಯ ಆಚರಣೆ 2000 ರ ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಅಫ್ ಫೈರ್‍ನ ಪ್ರಕಟಣೆಯೊಂದಿಗೆ ಪ್ರಾರಂಭವಾಯಿತು. ಈ ಸಮಯದಲ್ಲಿ ಅಣಕು ಮಾಡುವುದು, ಆಟಗಳು, ಮುಖಕ್ಕೆ ಬಣ್ಣ ಹಚ್ಚುವುದು ಮತ್ತು ಹಲವು ಮನೋರಂಜನೆಗಳಂತಹ ಆ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳು ಹ್ಯಾರಿ ಪಾಟರ್ ಅಭಿಮಾನಿಗಳಲ್ಲಿ ಜನಪ್ರಿಯತೆ ಗಳಿಸಿದೆ ಮತ್ತು ಅಭಿಮಾನಿಗಳನ್ನು ಅಕರ್ಷಿಸುವಲ್ಲಿ ಮತ್ತು ಪುಸ್ತಕದ ಮಾರಾಟದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ಗಳಿಸಿದೆ. ಹ್ಯಾರಿ ಪಾಟರ್ ಆಂಡ್ ಹಾಫ್-ಬ್ಲಡ್ ಪ್ರಿನ್ಸ್ ಪುಸ್ತಕವು ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಪ್ರಾರಂಭದ 10.8 ಮಿಲಿಯನ್ ಪ್ರತಿಗಳಲ್ಲಿ ಸುಮಾರು ಒಂಬತ್ತು ಮಿಲಿಯನ್ ಪ್ರತಿಗಳು ಮಾರಾಟವಾಗಿದೆ. ಈ ಸರಣಿಯು ಪ್ರೌಢ ಅಭಿಮಾನಿ ಓದುಗರನ್ನು ಒಂದುಗೂಡಿಸಿದ್ದರಿಂದಾಗಿ ಪ್ರತೀ ಹ್ಯಾರಿ ಪಾಟರ್ ಪುಸ್ತಕದ ಎರಡು ಅವೃತ್ತಿಯ ಬಿಡುಗಡೆ ಮಾಡಲಾಯಿತು. ಪುಸ್ತಕದ ಬರಹ ಒಂದೇ ಇದ್ದರೂ ಆವೃತ್ತಿಯ ರಕ್ಷಾಪುಟಗಳನ್ನು ಮಕ್ಕಳನ್ನು ಮತ್ತು ವಯಸ್ಕರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬೇರೆ ಬೇರೆಯಾಗಿ ರಚಿಸಲಾಗಿದೆ. ಬ್ಲಾಗ್,ಪೋಡ್‌ಕ್ಯಾಸ್ಟ್ ಮತ್ತು ಅಭಿಮಾನಿಗಳ ಸೈಟ್‌ನಲ್ಲಿ ಭೇಟಿ ಮಾಡುವುದಲ್ಲದೇ,ಹ್ಯಾರಿ ಪಾಟರ್‌ ನ ಉತ್ಕೃಷ್ಟವಾದ ಅಭಿಮಾನಿಗಳು ಹ್ಯಾರಿ ಪಾಟರ್ ವಿಚಾರಗೋಷ್ಠಿಯಲ್ಲಿ ಭೇಟಿ ಮಾಡಬಹುದು. ಮಗ್ಗಲ್ ಪದವು ಹ್ಯಾರಿ ಪಾಟರ್ ಅನ್ನು ಮೀರಿ ಹರಡಿದೆ. ಹಲವು ಗುಂಪುಗಳು ಒಬ್ಬ ವ್ಯಕ್ತಿಗೆ ಯಾವುದೋ ಒಂದು ಕೌಶಲ್ಯ ಇಲ್ಲದಿರುವುದು ಅಥವಾ ಅದರ ಬಗ್ಗೆ ಅಜ್ಞಾನ ಇರುವುದನ್ನು ಸೂಚಿಸಿ ಕರೆಯಲು ಈ ಪದವನ್ನು ಬಳಸುತ್ತಾರೆ. 2003ರಲ್ಲಿ, ಮಗ್ಗಲ್ ಪದವು ವ್ಯಾಖ್ಯಾನದೊಂದಿಗೆ ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿ ಸೇರಿಸಲ್ಪಟ್ಟಿದೆ. ಹ್ಯಾರಿ ಪಾಟರ್ ಅಭಿಮಾನಿಗಳು ದಿನನಿತ್ಯ, ಅಭಿಮಾನಿ ಬಳಗದಲ್ಲಿನ ಇತ್ತೀಚಿನ ಚರ್ಚೆಯ ಬಗ್ಗೆ ತಿಳಿಯಲು ವಾರಕ್ಕೊಮ್ಮೆಯಂತೆ ಪೋಡ್‌ಕ್ಯಾಸ್ಟ್‌ನ್ನು ಬಳಸುತ್ತಾರೆ. ಐಟ್ಯೂನ್‌ನ ಪೋಡ್‌ಕ್ಯಾಸ್ಟ್ ರಾಂಕಿಂಗ್‌ನಲ್ಲಿ ಮಗ್ಗಲ್‌ಕಾಸ್ಟ್ ಮತ್ತು ಪಾಟರ‍್ಕಾಸ್ಟ್ ಎರಡೂ ಸಹ ಮೊದಲ ಸ್ಥಾನವನ್ನು ತಲುಪಿವೆ ಮತ್ತು ಅವುಗಳನ್ನು ಮೊದಲ 50 ನೆಚ್ಚಿನ ಪೋಡ್‌ಕ್ಯಾಸ್ಟ್‌ಗಳಲ್ಲಿ ಒಂದು ಎಂದು ಜನಾಭಿಪ್ರಾಯ ನೀಡಿದ್ದಾರೆ.

ಚಲನಚಿತ್ರ ಮತ್ತು ಪುಸ್ತಕದ ಯಶಸ್ಸಿನ ನಂತರ, ವಿಜಾರ್ಡಿಂಗ್ ವರ್ಲ್ಡ್ ಅಫ್ ಹ್ಯಾರಿ ಪಾಟರ್‌ನಲ್ಲಿ ಹ್ಯಾರಿ ಪಾಟರ್ ಅಂಡ್ ದಿ ಫಾರ್ಬಿಡನ್ ಜರ್ನಿ ಎಂಬ ಹೈ-ಟೆಕ್ ಸವಾರಿಯನ್ನು ಪ್ರಾರಂಭ ಮಾಡುವುದಾಗಿ ಯುನಿವರ್ಸಲ್ 2009ರಲ್ಲಿ ಘೋಷಿಸಿತು. ವಿಜಾರ್ಡಿಂಗ್ ವರ್ಲ್ಡ್ ಅಫ್ ಹ್ಯಾರಿ ಪಾಟರ್ ಒಂದು ಹೊಸ ವಿಷಯಾಧರಿತ ಪಾರ್ಕ್ ಇದಾಗಿದ್ದು, 2010ರ ವಸಂತ ಋತುವಿನಲ್ಲಿ ಯುನಿವರ್ಸಲ್ ಓರ್ಲ್ಯಾಂಡೋ ರೆಸಾರ್ಟ್‌ನಲ್ಲಿ ಪ್ರಾರಂಭವಾಗಲಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

ಹ್ಯಾರಿ ಪಾಟರ್‌ನ ಆರಂಭಿಕ ಪ್ರಕಟಣೆಯಿಂದ ಅತಿಥೇಯ ಪ್ರಶಸ್ತಿಗಳ ಜೊತೆಗೆ ನಾಲ್ಕು ವಿಟೇಕರ್ ಪ್ಲಾಟಿನಂ ಬುಕ್ ಪ್ರಶಸ್ತಿಯನ್ನು (ಎಲ್ಲವನ್ನೂ 2001ರಲ್ಲಿ ಕೊಡಲಾಯಿತು) ಪಡೆದುಕೊಂಡಿದೆ. ಮೂರು ನೆಸ್ಲೆ ಸ್ಮಾರ್ಟಿಸ್ ಬುಕ್ ಪ್ರೈಜ್‌ಗಳು(1997–1999), ಎರಡು ಸ್ಕಾಟಿಶ್ ಆರ್ಟ್ಸ್ ಕೌನ್ಸಿಲ್ ಬುಕ್ ಅವಾರ್ಡ್‌ಗಳು(1999 ಮತ್ತು 2001), ಪ್ರಾರಂಭದ ವಿ‍ಟ್‌ಬ್ರೆಡ್ ಚಿಲ್ಡ್ರೆನ್ ಬುಕ್ ಅಫ್ ದಿ ಇಯರ್ ಅವಾರ್ಡ್ (1999), WHಸ್ಮಿತ್ ಬುಕ್ ಅಫ್ ದಿ ಇಯರ್( 2006 ) ಈ ಸರಣಿ ಪಡೆದುಕೊಂಡ ಇತರ ಪ್ರಶಸ್ತಿಗಳಾಗಿವೆ. 2000ರಲ್ಲಿ, ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್, ಹ್ಯೂಗೋ ಅವಾರ್ಡ್ಸ್ ಗೆ ಉತ್ತಮ ಕಾದಂಬರಿ ವಿಭಾಗದಲ್ಲಿ ನಾಮಕರಣಗೊಂಡಿತ್ತು, ಅದರೆ ಅದೇ ಪ್ರಶಸ್ತಿಯನ್ನು 2001ರಲ್ಲಿ, ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಆಫ್ ಫೈರ್ ಗೆದ್ದು ಕೊಂಡಿತು. ಈ ಪುಸ್ತಕಗಳಿಗೆ ಸಂದ ಇನ್ನಿತರ ಗೌರವಗಳೆಂದರೆ, ಕಾರ್ನೆಗೀ ಮೆಡಲ್ ಗೆ (1997)ಶಿಫಾರಸು, ಗಾರ್ಡಿಯನ್ ಚಿಲ್ಡನ್ಸ್ ಅವಾರ್ಡ್(1998) ನ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಎಡಿಟರ್ಸ್ ಚಾಯ್ಸ್, ಮತ್ತು ಅಮೆರಿಕನ್ ಲೈಬ್ರರಿ ಅಸೋಸಿಯೇಷನ್‌ಗಳು ಇದನ್ನು ಗಮನ ಸೆಳೆಯುವ ಪುಸ್ತಕಗಳ ಪಟ್ಟಿಗೆ ಸೇರ್ಪಡೆ ಮಾಡಿವೆ. ದಿ ನ್ಯೂಯಾರ್ಕ್ ಟೈಮ್ಸ್ , ಚಿಕಾಗೋ ಪಬ್ಲಿಕ್ ಲೈಬ್ರರಿ, ಮತ್ತು ಪಬ್ಲಿಷರ್ಸ್ ವೀಕ್ಲಿ‌ ಗಳ ಉತ್ತಮ ಪುಸ್ತಕದ ಪಟ್ಟಿಯಲ್ಲಿ ಸಹಾ ಇದನ್ನು ಸೇರಿಸಲಾಗಿತ್ತು.

ವಾಣಿಜ್ಯ ಯಶಸ್ಸು

ಹ್ಯಾರಿ ಪಾಟರ್ ಸರಣಿಯ ಜನಪ್ರಿಯತೆ, ರೌಲಿಂಗ್‌ ಅವರಿಗೆ, ಅವರ ಪ್ರಕಾಶಕರಿಗೆ ಮತ್ತು ಇತರೆ ಹ್ಯಾರಿ ಪಾಟರ್‍ಗೆ ಸಂಬಂಧಿಸಿದ ಪರವಾನಿಗೆದಾರರಿಗೆ ಗಣನೀಯ ಪ್ರಮಾಣದ ಆರ್ಥಿಕ ಯಶಸ್ಸನ್ನು ತಂದು ಕೊಟ್ಟಿತು. ಈ ಯಶಸ್ಸು ರೌಲಿಂಗ್ ಅವರನ್ನು ಮೊಟ್ಟ ಮೊದಲ ಮತ್ತು ಏಕೈಕ ಬಿಲಿಯನಿಯರ್ ಲೇಖಕರನಾಗಿ ಮಾಡಿತು. ಪುಸ್ತಕಗಳು ಪ್ರಪಂಚದೆಲ್ಲೆಡೆ 400 ಮಿಲಿಯನ್ ಪ್ರತಿಗಳಿಗಿಂತ ಹೆಚ್ಚಾಗಿ ಮಾರಾಟವಾಗಿವೆ ಮತ್ತು ಈ ಯಶಸ್ಸು ವಾರ್ನೆರ್ ಬ್ರದರ್ಸ್‌ರ ನಿರ್ಮಾಣದ ಜನಪ್ರಿಯ ಚಲನಚಿತ್ರ ರೂಪಾಂತರಗಳಿಗೆ ದಾರಿಯಾಯಿತು ಮತ್ತು ಅವುಗಳು ಅತ್ಯಂತ ಯಶಸ್ಸನ್ನು ಗಳಿಸಿದವು. ಮೊದಲಿಗೆ ಹ್ಯಾರಿ ಪಾಟರ್ ಆಂಡ್ ದಿ ಫಿಲಾಸಫರ್ಸ್ ಸ್ಟೋನ್ ಚಲನಚಿತ್ರ ಹಣದುಬ್ಬರ-ಸರಿದೂಗಿಸಲಾರದ ಸರ್ವಕಾಲಿಕ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯಲ್ಲಿ ಐದನೆ ಸ್ಥಾನವನ್ನು ಗಳಿಸಿದೆ ಮತ್ತು ಉಳಿದ ಐದು ಹ್ಯಾರಿ ಪಾಟರ್ ಚಲನಚಿತ್ರಗಳು ಪ್ರತಿಯೊದು ಮೊದಲ 25 ಶ್ರೇಣಿಗಳಲ್ಲಿ ಸ್ಥಾನಗಳಿಸಿದೆ. ಈ ಚಲನಚಿತ್ರಗಳು ಎಂಟು ವಿಡಿಯೊ ಗೇಮ್‌ಗಳನ್ನು ತಯಾರಿಸಿವೆ ಮತ್ತು 400ಕ್ಕಿಂತ ಹೆಚ್ಚು ಹೆಚ್ಚುವರಿ ಹ್ಯಾರಿ ಪಾಟರ್ ವಸ್ತುಗಳ ಪರವಾನಗಿಗೆ ನಾಂದಿಯಾಗಿವೆ,(ಒಂದು iPod ಸಹ ಸೇರಿದೆ) 2005ರ ಪ್ರಕಾರ ಹ್ಯಾರಿ ಪಾಟರ್ ಬ್ರಾಂಡಿನ ವಸ್ತುಗಳು US$ 4 ಬಿಲಿಯನ್ ಬೆಲೆಬಾಳುತ್ತವೆ ಎಂದು ಅಂದಾಜು ಮಾಡಲಾಗಿದೆ ಮತ್ತು ಜೆ.ಕೆ.ರೌಲಿಂಗ್ ಅವರನ್ನು ಓರ್ವ US ಡಾಲರ್ ಬಿಲಿಯೆನೆರ್ ಆಗಿಸಿವೆ. ಕೆಲವು ವರದಿಗಳು ರೌಲಿಂಗ್ ಅವರನ್ನು ರಾಣಿ ಎಲಿಜಿಬೆಥ್ IIಗಿಂತ ಶ್ರೀಮಂತೆ ಎಂದು ಹೇಳುತ್ತವೆ. ಅದರೆ, ರೌಲಿಂಗ್ ವರದಿಯನ್ನು ಸುಳ್ಳು ಎಂದು ಹೇಳಿದ್ದಾರೆ.

ಹ್ಯಾರಿ ಪಾಟರ್ ಪುಸ್ತಕಗಳ ಅತೀವ ಬೇಡಿಕೆ ನ್ಯೂಯಾರ್ಕ್ ಟೈಮ್ಸ್‌‌ ಗೆ ಪ್ರತ್ಯೇಕವಾಗಿ ಅತಿ ಹೆಚ್ಚು ಮಾರಾಟವಾಗುವ ಮಕ್ಕಳ ಸಾಹಿತ್ಯದ ಪಟ್ಟಿಯನ್ನು ಬಿಡುಗಡೆ 2000ರಲ್ಲಿ ಮಾಡಲು ಪ್ರೇರೆಪಿಸಿತ್ತು, ಹ್ಯಾರಿ ಪಾಟರ್ ಆಂಡ್ ದಿ ಗೋಬ್ಲೆಟ್ ಅಫ್ ಫೈರ್‌ ಪುಸ್ತಕದ ಬಿಡುಗಡೆಗಿಂತ ಸ್ವಲ್ಪ ಮುಂಚೆ ಈ ಪಟ್ಟಿಯನ್ನು ಬಿಡುಗಡೆ ಮಾಡಿತು. ಜೂನ್ 24 2000 ರಷ್ಟರಲ್ಲಿ, ರೌಲಿಂಗ್ ಪುಸ್ತಕಗಳು ಆ ಪಟ್ಟಿಯಲ್ಲಿ ಸತತ 79 ವಾರಗಳು ಸ್ಥಾನಗಳಿಸಿದ್ದವು, ಮೊದಲ ಮೂರು ಕಾದಂಬರಿಗಳು ಉತ್ತಮ ಮಾರಾಟವಾಗುವ ದಪ್ಪ ರಕ್ಷಾಪುಟದ ಪುಸ್ತಕಗಳ ಪಟ್ಟಿಯಲ್ಲಿದ್ದವು. ಡೆತ್ಲಿ ಹ್ಯಾಲೊಸ್ ಅದರ ಮುಂಗಡ-ಕೊರಿಕೆಯ ದಾಖಲೆಯನ್ನು ಮುರಿಯಿತು ಎಂದು ಬಾರ್ನೆಸ್ & ನೊಬೆಲ್ ಏಪ್ರಿಲ್ 12 2007ರಂದು ಘೋಷಿಸಿದ್ದರು. 500,000ಕ್ಕಿಂತ ಹೆಚ್ಚು ಪ್ರತಿಗಳನ್ನು ಅದರ ಸೈಟ್ ಮೂಲಕ ಮುಂಗಡವಾಗಿ ಕೋರಲಾಗಿತ್ತು. 9,000 FedEx ಟ್ರಕ್‌ಗಳನ್ನು ಗೋಬ್ಲೆಟ್ ಆಫ್ ಫೈರ್ , ಪುಸ್ತಕದ ಬಿಡುಗಡೆಗೆ ಪುಸ್ತಕ ಸಾಗಿಸುವ ಉದ್ದೇಶಕಾಗಿ ಮಾತ್ರ ಬಳಸಲಾಗಿತ್ತು. Amazon.com ಮತ್ತು ಬರ್ನೆಸ್ & ನೊಬಲ್ ಸೇರಿ, ಆ ಪುಸ್ತಕದ 700,000ಕ್ಕಿಂತ ಹೆಚ್ಚಿನ ಪ್ರತಿಗಳನ್ನು ಮುಂಗಡವಾಗಿ ಮಾರಾಟ ಮಾಡಿದರು. ಅಮೇರಿಕಾ ಸಂಯುಕ್ತ ಸಂಸ್ಥಾನ‌ದಲ್ಲಿ, 3.8 ಮಿಲಿಯನ್ ಪ್ರತಿಗಳು ಆರಂಭದಲ್ಲಿ ಮುದ್ರಣಗೊಂಡವು. ಈ ಆಂಕಿ ಅಂಶಗಳ ದಾಖಲೆಯನ್ನು ಹ್ಯಾರಿ ಪಾಟರ್ ಆಂಡ್ ದಿ ಆರ್ಡರ್ ಅಫ್ ದಿ ಫಿನಿಕ್ಸ್‌ ನ 8.5 ಮಿಲಿಯನ್ ಪ್ರತಿಗಳ ಮಾರಾಟದೊಂದಿಗೆ ಮುರಿಯಿತು, ನಂತರ ಆ ದಾಖಲೆಯು ಹಾಫ್-ಬ್ಲಡ್ ಪ್ರಿನ್ಸ್‌ ನ 10.8 ಮಿಲಿಯನ್ ಪ್ರತಿಗಳ ಮಾರಾಟದೊಂದಿಗೆ ಚೆಲ್ಲಾಪಿಲ್ಲಿಯಾಯಿತು. ಪ್ರಿನ್ಸ್‌ ನ 6.9 ಮಿಲಿಯನ್ ಪ್ರತಿಗಳು U.S.ನಲ್ಲಿ ಪುಸ್ತಕ ಬಿಡುಗಡೆಯಾದ ಮೊದಲ 24 ಗಂಟೆಗಳ ಒಳಗೆ ಮಾರಾಟವಾದವು; ಯುನೈಟೆಡ್ ಕಿಂಗ್‌ಡಂನಲ್ಲಿ ಎರಡು ಮಿಲಿಯನ್ ಪ್ರತಿಗಳಿಗಿಂತ ಹೆಚ್ಚಾಗಿ ಮೊದಲ ದಿನವೇ ಮಾರಾಟವಾಯಿತು. U.S.ನಲ್ಲಿ ಡೆತ್ಲಿ ಹ್ಯಾಲೊಸ್ ನ 12 ಮಿಲಿಯನ್ ಪ್ರತಿಗಳು ಆರಂಭದಲ್ಲಿ ಮುದ್ರಣಗೊಂಡವು, ಮತ್ತು ಒಂದು ಮಿಲಿಯನ್‌ಗಿಂತ ಹೆಚ್ಚು ಪ್ರತಿಗಳನ್ನು ಮುಂಗಡವಾಗಿ ಅಮೆಜಾನ್ ಮತ್ತು ಬರ್ನೆಸ್ & ನೊಬೆಲ್ ಮೂಲಕ ಕೋರಲಾಗಿತ್ತು.

ವಿರ್ಮಶೆ, ಹೊಗಳಿಕೆ ಮತ್ತು ವಿವಾದ

ಸಾಹಿತ್ಯ ವಿಮರ್ಶೆ

ಹ್ಯಾರಿ ಪಾಟರ್ 
ಏಳು ಹ್ಯಾರಿ ಪಾಟರ್ ಪುಸ್ತಕಗಳ ಬ್ರಿಟಿಷ್ ಅವೃತ್ತಿ

ಹ್ಯಾರಿ ಪಾಟರ್ ಅದರ ಮುಂಚಿನ ಪ್ರಾರಂಭದಲ್ಲಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್‌ ನ ಮೊದಲ ಸಂಚಿಕೆಯ ಪ್ರಕಟಣೆಯು ಸ್ಕಾಟಿಷ್ ಪತ್ರಿಕೆಗಳ ಗಮನವನ್ನು ಸೆಳೆಯಿತು. ದಿ ಸ್ಕಾಟ್ಸ್‌ಮ್ಯಾನ್ ಪತ್ರಿಕೆಯು, "ಈ ಪುಸ್ತಕವು ಶ್ರೇಷ್ಠ ಗ್ರಂಥದಲ್ಲಿರಬಹುದಾದ ಎಲ್ಲವನ್ನೂ ಅದು ಹೊಂದಿದೆ" ಎಂದು ಹೇಳಿದೆ, ಮತ್ತು ದಿ ಗ್ಲಾಸ್ಗೊವ್ ಹೆರಾಲ್ಡ್ ಈ ಪುಸ್ತಕವನ್ನು "ಜಾದೂ ಸತ್ವ" ಎಂದು ಕರೆದಿದೆ. ಇದನ್ನು ವಿಮರ್ಶಿಸುವಲ್ಲಿ ಇಂಗ್ಲೀಷ್ ವಾರ್ತಾಪತ್ರಿಕೆಗಳು ಸಹಾ ಸ್ಕಾಟಿಶ್ ಪತ್ರಿಕೆಗಳೊಡನೆ ಸೇರಿಕೊಂಡವು. ಒಂದಕ್ಕಿಂತ ಹೆಚ್ಚು ಪತ್ರಿಕೆಗಳು ಹ್ಯಾರಿ ಪಾಟರ್ ಪುಸ್ತಕವನ್ನು ರೊಲ್ಡ್ ದಾಹಲ್ ಅವರ ಕೃತಿಗೆ ಹೋಲಿಸಿದವು. ದಿ ಮೇಲ್ ಆನ್ ಸಂಡೇ ಇದನ್ನು "ರೊಲ್ಡ್ ದಹಲ್ ನಂತರದ ಅತೀ ಕಾಲ್ಪನಿಕ ರಂಗಪ್ರವೇಶ" ಎಂದು ಹೇಳಿದೆ, ಈ ಅಭಿಪ್ರಾಯಕ್ಕೆ ದಿ ಸಂಡೇ ಟೈಮ್ಸ್ ದನಿಗೂಡಿಸಿತು. ("ಈ ಬಾರಿ ದಾಹಲ್ ಗೆ ಹೊಲಿಸಿದ್ದುದು ನ್ಯಾಯವಾಗಿದೆ"), ದಿ ಗಾರ್ಡಿಯನ್ ಪತ್ರಿಕೆ ಇದನ್ನು "ಒಂದು ಸೃಜನಶೀಲ ಬುದ್ಧಿ ಚಮತ್ಕಾರದಿಂದ ಎತ್ತಿ ಹಿಡಿಯಲ್ಪಟ್ಟ ಶ್ರೀಮಂತ ರಚನೆಯ ಕಾದಂಬರಿ" ಎಂದು ಕರೆದಿದೆ.

ನಂತರ ಉರ್ಸುಲಾ ಲೇ ಗುಯಿನ್ ಹೀಗೆ ಹೇಳಿದ್ದಾರೆ:

    "ನಾನು ಇದರ ಬಗ್ಗೆ ಶ್ರೇಷ್ಠ ಅಭಿಪ್ರಾಯವನ್ನು ಹೊಂದಿಲ್ಲ."ಅಷ್ಟು ಜನ ವಯಸ್ಕ ವಿಮರ್ಶಕರು ಮೊದಲ ಹ್ಯಾರಿ ಪಾಟರ್ ಪುಸ್ತಕದ "ವಿಸ್ಮಯಕಾರಿಯಾದ ನೂತನತೆಯ ಬಗ್ಗೆ ಹೇಳುತ್ತಿರುವಾಗ, ಯಾವುದರ ಬಗ್ಗೆ ಈ ಅತಿಯಾದ ಸಡಗರ ಎಂಬುದನ್ನು ಕಂಡುಕೊಳ್ಳಲು ನಾನೂ ಆ ಪುಸ್ತಕವನ್ನು ಓದಿದೆ. ಮತ್ತು ನನಗೆ ಒಂದು ರೀತಿ ಗೊಂದಲ ಉಳಿಯಿತು. ಇದು ಒಂದು ಮಕ್ಕಳ ಅತಿರೇಕದ ಕಲ್ಪನೆ ಮಿಶ್ರಿತ ಜೀವಂತ ಕಾದಂಬರಿ. ಆ ವಯಸ್ಸಿನ ಗುಂಪಿಗೆ ಒಳ್ಳೆಯ ತಿನಿಸು. ಅದರೆ ಶೈಲಿಯಲ್ಲಿ ಸಾಮಾನ್ಯ, ಕಲ್ಪನಾತ್ಮಕವಾಗಿ ನಿಷ್ಪನ್ನವಾದದ್ದಾಗಿದೆ ಮತ್ತು ನೈತಿಕವಾಗಿ ನಿಕೃಷ್ಟ-ಸ್ಪೂರ್ತಿಯನ್ನು ಹೊಂದಿದೆ."

ಐದನೆ ಪುಸ್ತಕ ಹ್ಯಾರಿ ಪಾಟರ್ ಆಂಡ್ ದಿ ಆರ್ಡರ್ ಅಫ್ ದಿ ಫಿನಿಕ್ಸ್ ಬಿಡುಗಡೆಯಾಗುವ ವೇಳೆಗೆ ಹಲವು ಸಾಹಿತ್ಯ ವಿದ್ವಾಂಸರಿಂದ ತೀಕ್ಷ್ಣ ವಿಮರ್ಶೆಗಳು ಈ ಪುಸ್ತಕಗಳ ಮೇಲೆ ಬರಲಾರಂಭಿಸಿದ್ದವು. ಯಾಲೆ ಪ್ರೊಫೆಸರ್, ಸಾಹಿತ್ಯ ವಿದ್ವಾಂಸ ಮತ್ತು ವಿಮರ್ಶಕ ಹೆರಾಲ್ಡ್ ಬ್ಲೂಮ್‌ ಅವರು ಸಾಹಿತ್ಯ ಗುಣಗಳು ಎಂಬ ಪುಸ್ತಕದ ವಿಮರ್ಶೆಗಳನ್ನು ಪ್ರಕಟಿಸಿದ್ದರು. ಅದರಲ್ಲಿ "ರೌಲಿಂಗ್‌ರ ಬುದ್ಧಿಶಕ್ತಿಯನ್ನು ಸವಕಲು ಮಾತುಗಳು ಮತ್ತು ನಿರ್ಜೀವ ರೂಪಕಾಲಂಕಾರಗಳು ಎಷ್ಟು ನಿರ್ಣಯಿಸುತ್ತವೆ ಎಂದರೆ, ಅವರು ಬೇರೆ ಯಾವುದೇ ಬರವಣಿಗೆಯ ಶೈಲಿಯನ್ನು ಹೊಂದಿಲ್ಲ" ಎಂದು ಹೇಳುತ್ತಾರೆ." ಎ.ಎಸ್.ಬ್ಯಾಟ್ ನ್ಯೂಯಾರ್ಕ್ ಟೈಮ್ಸ್‌‌ ನ ತಮ್ಮ op-ed ಪುಟದ ಲೇಖನದಲ್ಲಿ "ರೌಲಿಂಗ್ ಪ್ರಪಂಚವನ್ನು ಎಲ್ಲಾ ರೀತಿಯ ಮಕ್ಕಳ ಸಾಹಿತ್ಯದ ನಿಷ್ಪನ್ನ ಅಲಂಕಾರ ಸಂಕೇತಗಳಿಂದ ಮಾಡಿದ ತೇಪೆ ಕೆಲಸದ, ಅಪ್ರಧಾನವಾದ ಜಗತ್ತು ....... ಇದು ದೂರದರ್ಶನದ ಕಾರ್ಟೂನ್‌ಗಳು, ಮತ್ತು ಉತ್ಪ್ರೇಕ್ಷಿಸಿದ ಧಾರಾವಾಹಿಗಳ, ರಿಯಾಲಿಟಿ ಟಿವಿ ಮತ್ತು ಜನಪ್ರಿಯ ವ್ಯಕ್ತಿಗಳ ಗಾಳಿಸುದ್ದಿಗಳ ಕನ್ನಡಿಯಾಗಿದೆ. ಇದು ಜಗತ್ತಿನ ಕಾಡು ಹರಟೆಗಳಿಗೆ ಮಾತ್ರ ತಮ್ಮ ಕಲ್ಪನಾಶಕ್ತಿ ಸೀಮಿತವಾಗಿರುವ ಜನರಿಗೆ ಬರೆದ ಹಾಗಿದೆ" ಎಂದು ಹೇಳುತ್ತಾರೆ.

ವಿಮರ್ಶಕ ಅಂಥೋನಿ ಹೋಲ್ಡೆನ್ ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್ ಪುಸ್ತಕವನ್ನು 1999 ವಿಟ್‌ಬ್ರೆಡ್ ಅವಾರ್ಡ್ಸ್‌ಗೆ ನಿರ್ಣಯ ಮಾಡುವಾಗಿನ ತಮ್ಮ ಅನುಭವವನ್ನು ದಿ ಅಬ್ಸರ್ವರ್‌ ನಲ್ಲಿ ಬರೆಯುತ್ತಾರೆ. ಒಟ್ಟಿನಲ್ಲಿ ಅವರ ಅಭಿಪ್ರಾಯ ಋಣಾತ್ಮಕವಾಗಿದೆ- "ಪಾಟರ್ ಸಾಹಸದ ಕಥೆಯು ಅಗತ್ಯವಾಗಿ ಅಧಿಕಾರ ಧೋರಣೆಯಿಂದ ನೋಡುತ್ತದೆ, ಅತಿಯಾದ ಸಂಪ್ರದಾಯವಾದಿತನವನ್ನು ತೋರಿಸುತ್ತದೆ, ಗತಕಾಲದ ಬ್ರಿಟನ್‌ನ ಕುರಿತು ಹತಾಶೆಯಾಗುವಷ್ಟು ನೆನಪಿಸಿಕೊಳ್ಳುತ್ತದೆ. ಈ ಪುಸ್ತಕಗಳದ್ದು ದಾರಿಹೋಕರ ವ್ಯಾಕರಣಬದ್ಧವಲ್ಲದ ಗದ್ಯ ಶೈಲಿ"’ ಎಂದು ಹೇಳುತ್ತಾರೆ.

ಇದಕ್ಕೆ ವಿರುದ್ಧವಾಗಿ, ಲೇಖಕ ಫೇ ವೆಲ್ಡನ್,"ಈ ಸರಣಿ ಕವಿಗಳು ಯಾವುದಕ್ಕೆ ಆಶಿಸುತ್ತಿದ್ದರೋ ಅದಲ್ಲ" ಎಂದು ಒಪ್ಪಿಕೊಳ್ಳುತ್ತಾರೆ, "ಅದರೆ ಇದು ಪದ್ಯ ಅಲ್ಲ, ಇದು ಓದುವಂತದ್ದು, ಮಾರಾಟವಾಗಬಲ್ಲದು, ದಿನನಿತ್ಯ, ಉಪಯುಕ್ತ ಗದ್ಯ" ಎಂದು ಹೇಳುತ್ತಾರೆ. ಸಾಹಿತ್ಯ ವಿಮರ್ಶಕ ಎ.ಎನ್.ವಿಲ್ಸನ್ ಹ್ಯಾರಿ ಪಾಟರ್ ಸರಣಿಯನ್ನು ದಿ ಟೈಮ್ಸ್‌ ನಲ್ಲಿ ಹೊಗಳಿದ್ದಾರೆ, " JK ಯವರಲ್ಲಿರುವ ಡಿಕೆನ್ಸಿಯನ್ ಸಾಮರ್ಥ್ಯ ಹೆಚ್ಚು ಲೇಖಕರಲ್ಲಿ ಇಲ್ಲ, ಅದೇನೆಂದರೆ ಪುಟಗಳನ್ನು ತಿರುಗಿಸುವಂತೆ ಮಾಡುವ, ಬಹಿರಂಗವಾಗಿ ಅಳಿಸುವ, ಕಣ್ಣೀರು ಸಿಡಿಸುವ ಮತ್ತು ಕೆಲವು ಪುಟಗಳ ನಂತರ ಒಳ್ಳೆ ಜೋಕ್‌ಗಳಿಗೆ ನಗುವಂತೆ ಮಾಡುವ... ನಾವು ಒಂದು ದಶಕ ಜೀವನದಲ್ಲಿ ಇಲ್ಲಿಯವರೆಗೆ ಬರೆದ ಅತ್ಯಂತ ಜೀವಂತವಾಗಿರುವ, ತಮಾಷೆಯ, ಭಯ ಹುಟ್ಟಿಸುವ ಮತ್ತು ಅತಿ ಹೆಚ್ಚು ಚಾಲನೆಯಲ್ಲಿರುವ ಮಕ್ಕಳ ಪುಸ್ತಕಗಳ ಪ್ರಕಟನೆಯ ಕಾಲದಲ್ಲಿ ಬದುಕಿದ್ದೇವೆ" ಎಂದು ಹೇಳುತ್ತಾರೆ. ಮೂಲತಃ ಚಲನಚಿತ್ರ ವಿಮರ್ಶಕ Salon.comನ ಚಾರ್ಲ್ಸ್ ಟೈಲರ್ ಬೈಟ್ಟ್‌ನ ವಿಮರ್ಶೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಂಡನು. ಅವನು ರೌಲಿಂಗ್ ರ ಬರವಣಿಗೆಯಲ್ಲಿ ನಮಗೆ ಭರವಸೆ ನೀಡುವ ಸಾಧಾರಣ ಕೃತಿಯೆಡೆಗೆ ಕರೆದೊಯ್ಯುವ ಮತ್ತು ಬಾಧಿಸುವ ಕಲೆಯ ಸಂಕೀರ್ಣತೆಯಿಂದ ದೂರಕ್ಕೆ ಒಯ್ಯುವ ತುಡಿತಗಳ ಒಂದು ಪ್ರಸ್ತುತವಾದ ಸಾಂಸ್ಕೃತಿಕ ಸಂಗತಿ- ಹದಿವಯಸ್ಸಿನದು- ಇರಬಹುದು ಎಂಬುದನ್ನು ಒಪ್ಪಕೊಳ್ಳುತ್ತಾನಾದರೂ, ಅವರ ಬರವಣಿಗೆಯಲ್ಲಿ ಗಂಭೀರವಾದ ಸಾಹಿತ್ಯದ ಗುಣ ದ ಅಭಾವವಿದೆ ಮತ್ತು ಆ ಪುಸ್ತಕಗಳು ಬಾಲ್ಯಜೀವನದ ಆಶ್ವಾಸನೆಯೇ ಅವುಗಳ ಗೆಲುವಿಗೆ ಕಾರಣ ಎಂದು ತಾನೇ ಹೇಳಿಕೊಳ್ಳುವ ಲೇಖಕಿಯ ಮಾತುಗಳನ್ನು ನಿರಾಕರಿಸುತ್ತಾನೆ. ಪುಸ್ತಕಗಳಲ್ಲಿ ಒಬ್ಬ ಸಹಪಾರಿ ಮತ್ತು ಅಪ್ತಸ್ನೇಹಿತನ ಕೊಲೆ ಮತ್ತು ಮಾನಸಿಕ ಗಾಯಗಳು ಮತ್ತು ಸಾಮಾಜಿಕ ಪ್ರತ್ಯೇಕತೆದ ಉಂಟುಮಾಡುವ ಗಾಢವಾಗುವ ಅಂಧಕಾರದ ಜಗತ್ತಿನ ನಿಗೂಢತೆಯ ಕುರಿತು ಟೇಲರ್ ಒತ್ತುಕೊಟ್ಟು ಮಾತನಾಡುತ್ತಾನೆ. ಪ್ರಕಟವಾದ ಏಳು ಪುಸ್ತಕಗಳಲ್ಲಿ ಅತಿ ಲಘು ಜೀವಾಳದ ಪುಸ್ತಕ ಎಂದು ಹೇಳಲ್ಪಡುವ ಫಿಲಾಸಫರ್ಸ್ ಸ್ಟೋನ್ ಸರಣಿಯ ಗೆಲುವನ್ನು ಉತ್ತೇಜಿಸಿತು ಎಂದು ಬೈಟ್ ಹೇಳುವ ಬಾಲ್ಯ ಜೀವನದ ಭರವಸೆಗಳನ್ನು ಒಡೆದುಹಾಕುತ್ತದೆ ಎಂದು ಟೈಲರ್ ವಾದಿಸುತ್ತಾನೆ: ಉದಾಹರಣೆಗೆ, ಈ ಪುಸ್ತಕ ಜೋಡಿ ಕೊಲೆಯೊಂದಿಗೆ ಪ್ರಾರಂಭವಾಗುತ್ತದೆ.

ಈ ಸರಣಿಯನ್ನು ಸ್ಟೀಫನ್ ಕಿಂಗ್ ಇದೊಂದು "ಉನ್ನತವಾದ ಪ್ರತಿಭೆಯಿಂದ ಮಾತ್ರ ಸಾಧ್ಯವಾಗುವ ಅದ್ಭುತ ಕಾರ್ಯವಾಗಿದೆ" ಎಂದು ಹೇಳಿದ್ದಾರೆ, "ರೌಲಿಂಗ್‌ರ ಬರವಣಿಗೆಯಲ್ಲಿನ ಶ್ಲೇಷ ಚಮತ್ಕಾರ ಮತ್ತು ಸದಾ ಸಿದ್ಧವಾದ ಹಾಸ್ಯಪ್ರಜ್ಞೆ" ಇವುಗಳು "ಗಮನಾರ್ಹವಾದವು" ಎಂದು ಘೋಷಿಸಿದ್ದಾರೆ. ಆದರೆ, ಈ ಕತೆಯು "ಉತ್ತಮ"ವಾಗಿದ್ದರೂ, ಎಲ್ಲಾ ಏಳು ಕಾದಂಬರಿಗಳಲ್ಲಿ ಪ್ರಾರಂಭದಲ್ಲಿ ಬರುವ, ಹ್ಯಾರಿಯು ಆತನ ಅಸಹನೀಯವಾದ ಸಂಬಂಧಿಗಳೊಡನೆ ಅವರ ಮನೆಯಲ್ಲಿರುವುದನ್ನು ಕಲ್ಪನೆ ಮಾಡಿಕೊಳ್ಳುವುದು ತನಗೆ ಕಷ್ಟವಾಯಿತು ಎನ್ನುತ್ತಾನೆ. ಕಿಂಗ್ "ರೌಲಿಂಗ್‌ಳಿಗೆ ಇಷ್ಟವಾಗದ ಯಾವುದೇ ಕ್ರಿಯಾವಿಶೇಷಣ ಅವಳಿಗೆ ಸಿಗಲೇ ಇಲ್ಲ!" ಎಂದು ತಮಾಶೆ ಮಾಡುತ್ತಾನೆ. ಅಷ್ಟೇ ಅಲ್ಲದೇ ಆತ, "ಸಮಯದ ಪರೀಕ್ಷೆಯನ್ನು ಮೀರಿ ಹ್ಯಾರಿ ಪಾಟರ್ ಸರಣಿ ಬದುಕುತ್ತದೆ ಮತ್ತು ಕೇವಲ ಅತ್ಯಂತ ಶ್ರೇಷ್ಠ ಪುಸ್ತಕಗಳನ್ನು ಇಡುವಲ್ಲಿ ಈ ಪುಸ್ತಕಗಳೂ ಇರುತ್ತವೆ; ಹ್ಯಾರಿ ಅಲಿಸ್, ಹಕ್, ಫ್ರೇಡೊ, ಮತ್ತು ಡೊರಥಿ ಯಂತಹ ಪುಸ್ತಕಗಳ ಸಾಲಿನಲ್ಲಿ ನಿಲ್ಲುತ್ತಾನೆ. ಇದು ಕೇವಲ ಒಂದು ದಶಕಕ್ಕಾಗಿ ಅಲ್ಲ, ಆದರೆ ಮುಂದಿನ ಯುಗಕ್ಕಾಗಿ ಇರುತ್ತವೆ", ಎಂದು ಹೇಳಿದ್ದಾನೆ.

ಸಾಮಾಜಿಕ ಪ್ರಭಾವ

ಅವರ ಅಭಿಮಾನಿ ಬಳಗಕ್ಕೆ ಸಾಮಾಜಿಕ, ನೈತಿಕ ಮತ್ತು ರಾಜಕೀಯ ಪ್ರೇರಣೆಯನ್ನು ನೀಡಿದ ಕಾರಣಕ್ಕಾಗಿ, ಸರಣಿಯ ಕುರಿತಂತೆ ಸಾಂಸ್ಕೃತಿಕ ಮಿಶ್ರ ಅಭಿಪ್ರಾಯಗಳನ್ನು ಗಮನಿಸಿ "ಟೈಮ್" ಮ್ಯಾಗಜಿನ್ ರೌಲಿಂಗ್ ಅವರನ್ನು ಅದರ 2007ರ ವರ್ಷದ ವ್ಯಕ್ತಿ ಪ್ರಶಸ್ತಿಯ ರನ್ನರ್ ಅಪ್ ಎಂದು ಘೊಷಿಸಿತ್ತು. ಜುಲೈ 2007 ರಲ್ಲಿ ವಾಷಿಂಗ್ಟನ್ ಪೊಸ್ಟ್ ಪತ್ರಿಕೆಯ ಪುಸ್ತಕ ವಿಮರ್ಶಕ ರಾನ್ ಚಾರ್ಲ್ಸ್ ಪಾಟರ್ ಸರಣಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಕರು ಓದುತ್ತಾರೆ. ಕೆಲವು ಬೇರೆ ಪುಸ್ತಕಗಳು ಸಾಂಸ್ಕೃತಿಕವಾಗಿ ಬೆಳೆಯದಿರುವಿಕೆಯನ್ನು ಪ್ರತಿನಿಧಿಸಬಹುದು ಮತ್ತು ವಿಷಯ ಕೆಟ್ಟದರ ವಿರುದ್ಧ ಒಳ್ಳೆಯದು ಎಂಬ ಸರಳವಾದ ಕಲ್ಪನೆಯ ಕತೆ ಬಾಲಿಶವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆತ ರೌಲಿಂಗ್‌ರಿಂದ "ಯಾವುದೇ ತಪ್ಪಾಗಿಲ್ಲವಾದರೂ", ನಂತರದ ಪುಸ್ತಕಗಳ ಪ್ರಕಟನೆಯಿಂದ ಉಂಟಾದ ಸಾಂಸ್ಕೃತಿಕ ಮತ್ತು ವಾಣಿಜ್ಯಿಕ "ಸನ್ನಿ"ಯು, ಮಕ್ಕಳನ್ನು ಮತ್ತು ಪ್ರೌಢರನ್ನು ಪ್ರತೀ ಪುಸ್ತಕ ಬಿಡುಗಡೆಯು ರಂಗಸ್ಥಳದಲ್ಲಿನ ಅಬ್ಬರದಂತೆ ಉಂಟಾಗುವುದನ್ನು ನಿರೀಕ್ಷಿಸುವಂತೆ ಮಾಡಿಬಿಡುತ್ತದೆ. ಇಂತಹ ಒಂದು ಸಮೂಹ ಮಾಧ್ಯಮ ದಂತಹ ಅನುಭವ ಈ ಮೊದಲಿನ ಯಾವ ಪುಸ್ತಕದಿಂದಲೂ ಉಂಟಾಗಿರಲಿಲ್ಲ" ಎಂದು ಹೇಳುತ್ತಾನೆ.

ಈ ಪುಸ್ತಕಗಳು ಮಕ್ಕಳನ್ನು ಬೇರೆ ಪುಸ್ತಕಗಳನ್ನು ಓದುವುದಕ್ಕಿಂತ ಹೆಚ್ಚಾಗಿ ಇದನ್ನು ಓದಲು ಪ್ರೇರೇಪಿಸುವ ಮೂಲಕ ಅಕ್ಷರಜ್ಞಾನವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ, ಎಂದು ಲೈಬ್ರರಿಯನ್ ನ್ಯಾನ್ಸಿ ನ್ಯಾಪ್ ಗುರುತಿಸುತ್ತಾರೆ. ಈ ಪುಸ್ತಕಗಳ ಪ್ರೇರೇಪಿಸುವ ಸಾಮರ್ಥ್ಯಗಳನ್ನು ಒಪ್ಪಿಕೊಳ್ಳುವ ಡೈಯಾನೆ ಪೆನ್ರಾಡ್, ಪುಸ್ತಕಗಳು ಸಾಧಾರಣ ಮನೊರಂಜನೆಯ ಜೊತೆಗೆ "ಹೈಬ್ರೋ ಸಾಹಿತ್ಯ ಕಾದಂಬರಿಯ ಲಕ್ಷಣಗಳನ್ನು ಹೊಂದಿವೆ" ಎಂದು ಹೊಗಳುತ್ತಾರೆ. ಅದರೆ ಪುಸ್ತಕದ ಬಿಡುಗಡೆಯ ಜೊತೆಗೆ ಬರುವ ಯಥೇಚ್ಛವಾದ ವಾಣಿಜ್ಯ ಸರಕುಗಳ ತಬ್ಬಿಬ್ಬುಗೊಳಿಸುವ ಪ್ರಭಾವಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.

ಚಿಕಿತ್ಸಕ ಬೋಧನೆಯಲ್ಲಿ ಯಾವುದನ್ನು ನಿಯಂತ್ರಿಸುವುದು ಮತ್ತು ಯಾವುದನ್ನು ಅನುಕರಿಸುವುದು ಎಂದು ಉದಾಹರಿಸಲು ಸ್ನೇಪೆ ಮತ್ತು ಕ್ವಿಡ್ಡಿಚ್ ಕೊಚ್ ಮ್ಯಾಡಮ್ ಹೂಚ್‍ನ ಬೋಧನಾ ವಿಧಾನವನ್ನು ಜೆನ್ನಿಫರ್ ಕಾನ್‌ ಉಪಯೋಗಿಸಿದ್ದರು. ಮತ್ತು ಜೊಯ್ಸ್ ಫಿಲ್ಡ್ಸ್ ಹೀಗೆ ಬರೆಯುತ್ತಾರೆ, ಒಂದು ಮಾದರಿಯ ಮೊದಲನೇ ವರ್ಷದ ಸಾಮಾಜಶಾಸ್ತ್ರ ತರಗತಿಯಲ್ಲಿನ ಐದು ಪ್ರಮುಖ ವಿಷಯಗಳಲ್ಲಿ ನಾಲ್ಕನ್ನು ಈ ಪುಸ್ತಕ ವಿವರಿಸುತ್ತದೆ: ಸಾಮಾಜಿಕ ಪರಿಕಲ್ಪನೆಗಳಾದ ಸಂಸ್ಕೃತಿ, ಸಮಾಜ ಮತ್ತು ಸಾಮಾಜಿಕರಣ; ಮತ್ತು ಸ್ಥರೀಕರಣ ಮತ್ತು ಸಾಮಾಜಿಕ ಅಸಮಾನತೆ; ಸಾಮಾಜಿಕ ಸಂಸ್ಥೆಗಳು ಮತ್ತು ಸಾಮಾಜಿಕ ಸಿದ್ಧಾಂತಗಳನ್ನು ಒಳಗೊಂಡಿದೆ.

25 ಜುಲೈ 2007ರ ಕ್ರಿಶ್ಚಿಯನ್ ಸೈನ್ಸ್ ಮಾನಿಟರ‍್ನ ಲ್ಲಿ ಜೆನ್ನಿ ಸಾಯೆರ್ ಹೀಗೆ ಬರೆಯುತ್ತಾರೆ, ಪುಸ್ತಕಗಳು "ವಾಣಿಜ್ಯಿಕವಾಗಿ ಕಥೆ ಹೇಳುವ ಪ್ರಕಾರ ಮತ್ತು ಪಾಶ್ಚಿಮಾತ್ಯ ಸಮಾಜದಲ್ಲಿನ ತೊಂದರೆ ಉಂಟುಮಾಡುವ ಪ್ರವೃತ್ತಿಯನ್ನು ಪ್ರತಿನಿಧಿಸುತ್ತವೆ." ಆ ಕಥೆಗಳಲ್ಲಿ "ಹೆಚ್ಚಿನ ನೈತಿಕ ಕೇಂದ್ರಬಿಂದು ಇಂದಿನ ಪಾಪ್ ಸಂಸ್ಕೃತಿಯಿಂದಾಗಿ ಕಣ್ಮರೆಯಾಗುತ್ತಿದೆ... 10 ವರ್ಷಗಳ ನಂತರ, 4,195 ಪುಟಗಳು ಮತ್ತು 375 ಮಿಲಿಯನ್ ಪ್ರತಿಗಳು ಇರುವ ಜೆ.ಕೆ.ರೌಲಿಂಗ್‌‍ಳ ಎತ್ತರದ ಸಾಧನೆಯಲ್ಲಿ ಹೆಚ್ಚಾಗಿ ಎಲ್ಲಾ ಶ್ರೇಷ್ಠ ಮಕ್ಕಳ ಸಾಹಿತ್ಯದಲ್ಲಿರುವ ’ನಾಯಕನ ನೈತಿಕ ಪ್ರಯಾಣ’ದಂತಹ ಅತ್ಯಂತ ಮೂಲಾಧಾರವಾದ ತಳಹದಿಯು ಇಲ್ಲದಿರುವುದು ಕಂಡುಬರುತ್ತದೆ". ಹ್ಯಾರಿ ಪಾಟರ್ "ನ್ಯಾಯವಾದ ಹೋರಾಟ"ವನ್ನು ಎದುರಿಸುವುದಿಲ್ಲ ಅಥವಾ ಯಾವುದೇ ನೈತಿಕ ಬೆಳವಣಿಗೆಗೆ ಒಳಗಾಗುವುದಿಲ್ಲ,ಮತ್ತು ಹಾಗೆಯೇ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬ ಮಾರ್ಗದರ್ಶನವಿಲ್ಲ, ಎಂದು ಸಾಯೆರ್ ವಾದಿಸುತ್ತಾರೆ. ಎಮಿಲಿ ಗ್ರಿಸಿಂಗರ್ ಹ್ಯಾರಿಯ ಮೊದಲ ಭಾಗವನ್ನು ಪ್ಲಾಟ್‍ಫಾರ್ಮ್ 9¾ ನ ಮೂಲಕ ಶ್ರದ್ಧೆ ಮತ್ತು ವಿಶ್ವಾಸದ ಬಳಕೆ ಎಂಬುದಾಗಿ ವಿವರಿಸುತ್ತಾರೆ. ಮತ್ತು ಅವನು ಸಾರ್ಟಿಂಗ್ ಹ್ಯಾಟನ್ನು ಎದುರುಗೊಳ್ಳುವುದು, ಹ್ಯಾರಿಯು ತನ್ನ ಆಯ್ಕೆಯ ಮೂಲಕ ತಾನು ರೂಪುಗೊಳ್ಳುವುದಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದು ಎಂದು ಹೇಳುತ್ತಾರೆ."ತೀವ್ರವಾದ ಜಾದೂವಿನ" ಮೂಲಕ ಅತ್ಮ-ಸಮರ್ಪಣೆ ಮಾಡಿಕೊಂಡ ಹ್ಯಾರಿಯ ತಾಯಿ ಸರಣಿಯುದ್ದಕ್ಕೂ ಮಗನನ್ನು ರಕ್ಷಿಸುವುದು ಮತ್ತು ಆಧಿಕಾರ-ದಾಹಿ ವೊಲ್ಡೆಮೊರ್ಟ್ ಇದನ್ನು ಅರ್ಥಮಾಡಿಕೊಳ್ಳಲು ವಿಫಲನಾಗುವುದು ಸಹ ಆಕೆ ಗಮನಿಸಿದ್ದಾರೆ.

ಸ್ಲೇಟ್ ಮ್ಯಾಗಜಿನ್ ನಲ್ಲಿ 8 ನವೆಂಬರ್ 2002ರಂದು ಪ್ರಕಟವಾದ ಲೇಖನದಲ್ಲಿ, ಕ್ರಿಸ್ ಸ್ಯೂಲ್ಲೆನ್‌ಟ್ರೋಪ್ ಅವರು ಪಾಟರ್ ನ ಹೆಚ್ಚಿನ ಗೆಲುವಿಗೆ ಆತನ ಸ್ನೇಹಿತರು ಮತ್ತು ಸಂಬಂಧಿಗಳು ಆತನಿಗೆ ನೀಡುವ ಉಡುಗೊರೆಗಳ ಮೇಳೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ".

ರೌಲಿಂಗ್ ತನ್ನ ಕಾದಂಬರಿಯಲ್ಲಿ ಮಂತ್ರವಿದ್ಯೆಯ ಕೌಶಲ್ಯದ ಸಾಮರ್ಥ್ಯ "ನೀನು ಯಾವುದಕ್ಕಾಗಿ ಹುಟ್ಟಿದ್ದೀಯೊ ಎಂಬುದೇ ಹೊರತು, ನೀನು ಏನನ್ನು ಸಾಧಿಸಬಲ್ಲೆ ಎಂಬುದಲ್ಲ" ಎಂಬುದನ್ನು ಗುರುತಿಸುತ್ತಾ, ಸ್ಯೂಲ್ಲೆನ್‌ಟ್ರೋಪ್, "ಡಂಬಲ್‌ಡೋರ್‌ನ ಸಿದ್ಧಾಂತದ ಪ್ರಕಾರ "ನಾವು ನಿಜವಾಗಿ ಏನು ಎಂದು ತೋರಿಸುವುದು ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ನಮ್ಮ ಆಯ್ಕೆ" ಎಂಬುದು ಬೂಟಾಟಿಕೆಯದಾಗುತ್ತದೆ, "ಡಂಬಲ್‌ಡೋರ್ ನಡೆಸುವ ಶಾಲೆ ಬೇರೆ ಎಲ್ಲದಕ್ಕಿಂತ ಮಿಗಿಲಾಗಿ ಸ್ವಾಭಾವಿಕವಾದ ಹುಟ್ಟು ಸಾಮರ್ಥ್ಯಕ್ಕೆ ಮಹತ್ವ ನೀಡುತ್ತದೆ" ಎಂದು ಸ್ಲೇಟ್ ಮ್ಯಾಗಜಿನ್‌ನಲ್ಲಿ ಬರೆಯುತ್ತಾರೆ. ಕ್ರಿಸ್ಟೊಫರ್ ಹಿಚೆನ್ಸ್ ಅವರು ಆಗಸ್ಟ್ 12, 2007ರ ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ದಿ ಡೆತ್ಲಿ ಹ್ಯಾಲೊಸ್ ಪುಸ್ತಕವನ್ನು ವಿಮರ್ಶಿಸುತ್ತಾ, ರೌಲಿಂಗ್‌ ಅವರು ಆ ಮೊದಲಿನ ಸಾಹಿತ್ಯದ "ಶ್ರೀಮಂತಿಕೆ ಮತ್ತು ವರ್ಗ ಮತ್ತು ಒಣಜಂಬದ ಕನಸುಗಳೊಂದಿಗೆ ಬಂಧಿಸಲಾದ" ಕತೆಗಳ ಸರಪಣಿಗಳನ್ನು ಕಳಚಿ, ಹುರುಪಿನ ಪ್ರಜಾಪ್ರಭುತ್ವ ಮತ್ತು ವೈವಿಧ್ಯದ ಜಗತ್ತನ್ನು ಸೃಷ್ಟಿಮಾಡಿದ್ದಾರೆ ಎಂದು ಹೊಗಳುತ್ತಾರೆ.

ವಿವಾದಗಳು

ಈ ಪುಸ್ತಕಗಳು ಹಲವು ಕಾನೂನಿನ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಪುಸ್ತಕದಲ್ಲಿರುವ ಜಾದೂ ಮಕ್ಕಳಲ್ಲಿ ಮಾಟಮಂತ್ರದ ವಿದ್ಯೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅಮೆರಿಕನ್ ಕ್ರಿಶ್ಚಿಯನ್ ಗುಂಪುಗಳು ಆರೋಪಿಸಿದ್ದವು. ಇನ್ನೂ ಕೆಲವು ಕೃತಿಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಕ್ರಮಭಂಗದ ವಿವಾದಗಳನ್ನು ಎದುರಿಸಿತ್ತು. ಈ ಸರಣಿಯ ಜನಪ್ರಿಯತೆ ಮತ್ತು ಹೆಚ್ಚಿನ ಮಾರುಕಟ್ಟೆ ಮೌಲ್ಯದಿಂದ ರೌಲಿಂಗ್, ಅವರ ಪ್ರಕಾಶಕರು, ಮತ್ತು ಚಲನಚಿತ್ರ ಹಂಚಿಕೆದಾರರಾದ ವಾರ್ನರ್ ಬ್ರದರ್ಸ್ ತಮ್ಮ ಕೃತಿಸ್ವಾಮ್ಯವನ್ನು ರಕ್ಷಿಸಿಕೊಳ್ಳಲು ಕಾನೂನಿನ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಹ್ಯಾರಿ ಪಾಟರ್ ನ ಡೊಮೈನ್‌ ಹೆಸರುಾನ್ಸಿ ಸ್ಟೌಫೆರ್ ಮಾಡಿದ ರೌಲಿಂಗ್ ಕೃತಿಚೌರ್ಯ ಮಾಡಿದ್ದಾರೆ ಎಂಬ ಆರೋಪದ ವಿರುದ್ಧ ದಾವೆ ಹೂಡಲಾಯಿತು. ಹಲವು ಧಾರ್ಮಿಕ ಮಡಿವಂತರು ಈ ಪುಸ್ತಕಗಳು ಮಾಂತ್ರಿಕ ವಿದ್ಯೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಹಾಗಾಗಿ ಅವುಗಳು ಮಕ್ಕಳಿಗೆ ಸೂಕ್ತವಲ್ಲ ಎಂದು ದೂರಿದ್ದಾರೆ. ಹಾಗೆಯೇ ಹಲವು ವಿಮರ್ಶಕರು ಈ ಪುಸ್ತಕಗಳು ಹಲವು ರಾಜಕೀಯ ಕಾರ್ಯಸೂಚಿಗಳನ್ನು ಬೆಂಬಲಿಸುತ್ತವೆ ಎಂದು ಟೀಕಿಸಿದ್ದಾರೆ.

ಪುಸ್ತಕಗಳು ಸಾಹಿತ್ಯ ಮತ್ತು ಪ್ರಕಾಶನ ಜಗತ್ತುಗಳಲ್ಲಿ ಸಹ ವಿವಾದಗಳನ್ನು ಎಬ್ಬಿಸಿವೆ. 1997 ರಿಂದ 1998ರವರೆಗೆ, ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಹೆಚ್ಚು ಕಮ್ಮಿ ಎಲ್ಲಾ UK ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಮಕ್ಕಳು ಆ ಪ್ರಶಸ್ತಿಗಳ ತೀರ್ಪುಗಾರರಾಗಿದ್ದರು, ಮಕ್ಕಳ ಪುಸ್ತಕಗಳೆಡೆ ವಿಚಾರಶಕ್ತಿಯ ಒಣಜಂಬದ ಕಾರಣದಿಂದಾಗಿ ಯಾವುದೇ ಮಕ್ಕಳ ಪ್ರಶಸಿಯನ್ನು ವಯಸ್ಕರು ತೀರ್ಮಾನಿಸಿಲ್ಲ, ಎಂದು ಸ್ಯಾಡ್ರಾ ಬೆಕೆಟ್ ತಿಳಿಸಿದರು. 1999ರಲ್ಲಿ ಮೊದಲ ಬಾರಿಗೆ ಮಕ್ಕಳ ವಿಭಾಗದಲ್ಲಿ ವಿಟ್‍ಬ್ರೆಡ್ ಬುಕ್ ಆಫ್ ದಿ ಇಯರ್ ಅವಾರ್ಡ್ ವಿಜೆತ ಪುಸ್ತಕ ಮುಖ್ಯ ವಿಭಾಗದ ಪ್ರಶಸ್ತಿಯ ಅಂತಿಮ ಪಟ್ಟಿಯನ್ನು ಪ್ರವೇಶಿಸಿತು, ಮತ್ತು ಒರ್ವ ತೀರ್ಪುಗಾರರು ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್ ಪುಸ್ತಕಕ್ಕೆ ಪ್ರಶಸ್ತಿ ಘೋಷಿಸಿದರೆ ರಾಜಿನಾಮೆ ನೀಡುವುದಾಗಿ ಬೆದರಿಸಿದರು. ಹಾಗಾಗಿ ಹ್ಯಾರಿ ಪಾಟರ್ ಪುಸ್ತಕವು ಪದ್ಯಗಳ ಬಹುಮಾನ ವಿಜೇತ ಪುಸ್ತಕದ ಅತಿ ಸಮೀಪದಲ್ಲಿ ಹಿಂದೆ ಉಳಿದು ಎರಡನೆ ಸ್ಥಾನ ಗಳಿಸಿತು. ಪ್ರಶಸ್ತಿ ವಿಜೇತ ಪುಸ್ತಕವು ಸೀಮಸ್ ಹೀನಿಯ ಅಗ್ಲೋ-ಸ್ಯಾಕ್ಸನ್ ಮಹಾಕಾವ್ಯ Beowulf ದ ಅನುವಾದ.

2000 ರಲ್ಲಿ, ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಅಫ್ ಫೈರ್ ಪುಸ್ತಕದ ಪ್ರಕಟನೆಯ ಸ್ವಲ್ಪ ಮುನ್ನ, ಮೊದಲ ಮೂರು ಹ್ಯಾರಿ ಪಾಟರ್ ನ್ಯೂಯಾರ್ಕ್ ಟೈಮ್ಸ್ ಉತ್ತಮ-ಮಾರಾಟವಾಗುವ ಕಾದಂಬರಿಗಳ ಪಟ್ಟಿಯಲ್ಲಿ ಆಗ್ರ ಸ್ಥಾನಗಳಿಸಿದ್ದವು ಮತ್ತು ಪ್ರವೇಶಗಳ ಒಟ್ಟು ಪುಸ್ತಕಗಳಲ್ಲಿ ಮೂರನೇ ಒಂದು ಭಾಗ ಮಕ್ಕಳ ಪುಸ್ತಕವಾಗಿದ್ದವು. ಕಾದಂಬರಿ ಮತ್ತು ಕಾದಂಬರಿಯಲ್ಲದ ಪುಸ್ತಕಗಳೆರಡನ್ನು ಸೇರಿಸಿ ಈ ಪತ್ರಿಕೆ ಒಂದು ಹೊಸ ಮಕ್ಕಳ ವಿಭಾಗವನ್ನು ಪ್ರಾರಂಭಿಸಿತು, ಮತ್ತು ಪ್ರಾರಂಭದಲ್ಲಿ ಹಾರ್ಡ್‌ಬ್ಯಾಕ್ ಪುಸ್ತಕಗಳ ವ್ಯಾಪಾರಗಳನ್ನು ಮಾತ್ರ ಗಣಿಸಿತು. ಇದನ್ನು ಪ್ರಕಾಶರು ಮತ್ತು ಪುಸ್ತಕ ಮಾರಾಟಗಾರರು ಬೊಂಬಲಿಸಿದರು. 2004ರಲ್ಲಿ ನ್ಯೂಯಾರ್ಕ್ ಟೈಮ್ಸ್ ಮಕ್ಕಳ ಪಟ್ಟಿಯನ್ನು ಮತ್ತೆ ವಿಭಾಗಿಸಿತು, ಅದರೂ ಸಹ ಹ್ಯಾರಿ ಪಾಟರ್ ಪುಸ್ತಕ ಸರಣಿಯ ಮತ್ತು ಪ್ರತ್ಯೇಕ ವಿಭಾಗದಲ್ಲಿ ಪ್ರಾಬಲ್ಯತೆ ತೊರಿಸಿದ್ದವು. ಆನಂತರ ಹ್ಯಾರಿ ಪಾಟರ್ ಪುಸ್ತಕಗಳನ್ನು ಪ್ರತ್ಯೇಕ ವಿಭಾಗದಿಂದ ತೆಗೆಯಲಾಯಿತು. 2000ರಲ್ಲಿನ ಈ ಪ್ರತ್ಯೇಕಗೊಳಿಸುವಿಕೆಯು ಟೀಕೆ, ಹೊಗಳಿಕೆ ಮತ್ತು ಈ ಕ್ರಿಯೆಯ ಅನೂಕೂಲ ಮತ್ತು ಅನಾನೂಕೂಲಗಳನ್ನು ಪ್ರತಿನಿಧಿಸುವ ಕೆಲವು ಅಭಿಪ್ರಾಯಗಳನ್ನು ಗಳಿಸಿತು.ಟೈಮ್‌ ಇದೇ ಸೂತ್ರವನ್ನು ಬಳಿಸಿ, 1964ರಲ್ಲಿ ಸಹಾ ಬೀಟಲ್ಸ್ "ಮಾಪ್-ಟಾಪ್ಸ್" ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಿಸಿದಾಗ ಬಿಲ್‌ಬೊರ್ಡ್‌ ಪ್ರತ್ಯೇಕ ಪಟ್ಟಿಯನ್ನು ಸೃಷ್ಟಿಸಬಹುದಾಗಿತ್ತು, ಮತ್ತು ಹೂ ವಾಂಟ್ಸ್ ಟು ಬಿ ಮಿಲಿಯೆನೆರ್? ರೇಟಿಂಗ್‌ ನಲ್ಲಿ ಪ್ರಾಬಲ್ಯ ಸಾಧಿಸಿದಾಗ ನೀಲ್ಸನ್ ಅವರು ಪ್ರತ್ಯೇಕ ಗೇಮ್-ಶೋ ಪಟ್ಟಿಯನ್ನು ಸೃಷ್ಟಿಸಬಹುದಾಗಿತ್ತು ಎಂದುಟೈಮ್ಸ್ ಸೂಚಿಸಿತು.

ಚಲನಚಿತ್ರಗಳು

ಮೊದಲ ನಾಲ್ಕು ಹ್ಯಾರಿ ಪಾಟರ್ ಪುಸ್ತಕಗಳ ಚಲನಚಿತ್ರದ ಹಕ್ಕನ್ನು ರೌಲಿಂಗ್ 1998ರಲ್ಲಿ ವಾರ್ನರ್ ಬ್ರದರ್ಸ್‌ಗೆ £1 ಮಿಲಿಯನ್‌ಗೆ ($1,982,900) ಮಾರಾಟ ಮಾಡಿದರು. ಚಲನಚಿತ್ರದ ಪ್ರಮುಖ ಪಾತ್ರಗಳನ್ನು ಬ್ರಿಟಿಷರಿಗೆ ನೀಡಬೇಕೆಂದು ರೌಲಿಂಗ್ ಕೇಳಿಕೊಂಡರು, ಅದರೂ ಹಲವು ಐರಿಷ್ ನಟರನ್ನು ಸೇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಉದಾಹರಣೆಗೆ, ದಿವಂಗತ ರಿಚರ್ಡ್ ಹ್ಯಾರಿಸ್ ಡಂಬಲ್‌ಡೋರ್ ಆಗಿ ಮತ್ತು ಪುಸ್ತಕದಲ್ಲಿರುವ ಹಾಗೆ ಚಿತ್ರಿಸಲು ಈ ಪಾತ್ರಗಳಿಗೆ ಈ ನಟರೇ ತಕ್ಕವರಾದ ಕಾರಣದಿಂದ ಪ್ರೆಂಚ್ ಮತ್ತು ಪೂರ್ವ ಯೂರೋಪಿಯನ್ ನಟರಿಗೆ ಹ್ಯಾರಿ ಪಾಟರ್ ಆಂಡ್ ದಿ ಗೋಬ್ಲೆಟ್ ಅಫ್ ಫೈರ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. [[ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ (ಚಲನಚಿತ್ರ)|ಹ್ಯಾರಿ ಪಾಟರ್ ಆಂಡ್ ಫಿಲಾಸಫರ್ಸ್’ಸ್ ಸ್ಟೋನ್]] ಚಲನಚಿತ್ರಕ್ಕೆ ಸ್ಟೀವನ್ ಸ್ಪಿಲ್‌ಬರ್ಗ್, ಟೆರ್ರಿ ಗಿಲ್ಲಿಯಮ್, ಜೊನ್ಯಾಥನ್ ಡೆಮ್ಮೆ,ಮತ್ತು ಅಲನ್ ಪಾರ್ಕರ್ ಮುಂತಾದವ ಹಲವು ನಿರ್ದೇಶಕರನ್ನು ಪರಿಗಣಿಸಲಾಯಿತು. ನಂತರ 28 ಮಾರ್ಚ್, 2000 ರಲ್ಲಿ ಕ್ರಿಸ್ ಕೊಲಂಬಸ್‌ನನ್ನು ನಿರ್ದೇಶಕನನ್ನಾಗಿ ನೇಮಿಸಲಾಯಿತು. ( "ಹ್ಯಾರಿ ಪಾಟರ್ ಅಂಡ್ ದಿ ಸೊರ್ಸೆರರ್ಸ್ ಸ್ಟೋನ್ " ಎಂದು ಅಮೇರಿಕಾ ಸಂಯುಕ್ತ ಸಂಸ್ಥಾನ‌ನಲ್ಲಿ ಹೆಸರಿಡಲಾಯಿತು) ವಾರ್ನೆರ್ ಬ್ರದರ್ಸ್ ಜೊತೆಯಲ್ಲಿ, ಕ್ರಿಸ್ ಕೊಲಂಬಸ್‌ನ ಬೇರೆ ಕೆಲಸಗಳ ಆಧಾರದ ಮೇಲೆ ಆತನನ್ನು ನಿರ್ದೇಶಕನಾಗಿ ಆಯ್ಕೆ ಮಾಡಿಕೊಂಡರು. ಅವರು ನಿರ್ದೇಶಿಸಿದ ಕುಟುಂಬ ಚಲನಚಿತ್ರಗಳಾದ ಹೊಮ್ ಅಲೋನ್ ಮತ್ತು ಮಿಸೆಸ್.ಡೌಟ್‍ಫೈರ್ ಗಳ ಪ್ರಭಾವ ವಾರ್ನೆರ್ ಬ್ರದರ್ಸ್‌ ನ ಆಯ್ಕೆಗೆ ಕಾರಣ. ವ್ಯಾಪಕವಾದ ನಟವರ್ಗದ ನಂತರ, ಚಲನಚಿತ್ರ ಅಕ್ಟೋಬರ್ 2000ರಲ್ಲಿ ಪ್ರಾರಂಭವಾಯಿತು, ಲೀವ್ಸ್‌ಡೆನ್ ಫಿಲಂ ಸ್ಟುಡಿಯೊಗಳುಮತ್ತು ಲಂಡನ್‌ನಲ್ಲಿ ಇದನ್ನು ಚಿತ್ರಿಕರಿಸಲಾಯಿತು. ಈ ಚಲನಚಿತ್ರದ ತಯಾರಿಕೆ ಜುಲೈ 2001ರಲ್ಲಿ ಮುಕ್ತಾಯವಾಯಿತು.ಫಿಲಾಸಫರ್ಸ್ ಸ್ಟೋನ್ 14 ನವೆಂಬರ್, 2001ರಂದು ಬಿಡುಗಡೆಯಾಯಿತು.ಫಿಲಾಸಫರ್ಸ್ ಸ್ಟೋನ್‍ನ ಬಿಡುಗಡೆಯ ಮೂರು ದಿನ ನಂತರ, ಹ್ಯಾರಿ ಪಾಟರ್ ಅಂಡ್ ದಿ ಚೇಂಬರ್ ಆಫ್ ಸೀಕ್ರೆಟ್ಸ್‌ ಚಲನಚಿತ್ರದ ತಯಾರಿಕೆ ಪ್ರಾರಂಭವಾಯಿತು, ಇದನ್ನೂ ಸಹ ಕೊಲಂಬಸ್ ನಿರ್ದೇಶಿಸಲು ಪ್ರಾರಂಭಿಸಿದರು, ಮತ್ತು 2002 ಬೇಸಿಗೆಯಲ್ಲಿ ಮುಗಿಸಿದರು.ಈ ಚಲನಚಿತ್ರ 15 ನವೆಂಬರ್ 2002 ರಂದು ಬಿಡುಗಡೆಯಾಯಿತು.

ಕ್ರಿಸ್ ಕೊಲಂಬಸ್ ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್‌ ಚಲನಚಿತ್ರವನ್ನು ನಿರ್ದೇಶಿಸಲು ನಿರಾಕರಿಸಿದರು, ಮತ್ತು ಕೇವಲ ನಿರ್ಮಾಪಕನಾಗಿ ಮಾತ್ರ ಉಳಿದರು. ಮೆಕ್ಸಿಕನ್ ನಿರ್ದೇಶಕ ಆಲ್ಫೊನ್ಸೋ ಕೌರಾನ್ ಆ ಕೆಲಸವನ್ನು ಕೈಗೆತ್ತಿಕೊಂಡರು, ಮತ್ತು 2003ರಲ್ಲಿ ಚಿತ್ರಿಸಿದ ನಂತರ, 4 ಜೂನ್ 2004ರಂದು ಚಲನಚಿತ್ರ ಬಿಡುಗಡೆಯಾಯಿತು. ಮೂರನೆ ಚಲನಚಿತ್ರ ಬಿಡುಗಡೆಯಾಗುವ ಮೊದಲೇ ನಾಲ್ಕನೆ ಚಲನಚಿತ್ರದ ತಯಾರಿಕೆ ಪ್ರಾರಂಭವಾದ ಕಾರಣ,ಮೈಕ್ ನೆವೆಲ್‌ರನ್ನು ಹ್ಯಾರಿ ಪಾಟರ್ ಅಂಡ್ ದಿ ಗೋಬ್ಲೆಟ್ ಆಫ್ ಫೈರ್ ಚಿತ್ರದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು, ಅದು 18 ನವೆಂಬರ್ 2005 ರಂದು ಬಿಡುಗಡೆಯಾಯಿತು. ನೆವೆಲ್ ಮುಂದಿನ ಚಲನಚಿತ್ರ ನಿರ್ದೇಶಿಸಲು ನಿರಾಕರಿಸಿದರು ಮತ್ತು ಬ್ರಿಟಿಷ್ ದೂರದರ್ಶನದ ನಿರ್ದೇಶಕ ಡೆವಿಡ್ ಯೇಟ್ಸ್‌‌ನನ್ನು ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಚಲನಚಿತ್ರಕ್ಕೆ ಆರಿಸಲಾಯಿತು. ಅದರ ಚಿತ್ರೀಕರಣ ಜನವರಿ 2006ರಲ್ಲಿ ಪ್ರಾರಂಭವಾಯಿತು, ಮತ್ತು 11 ಜುಲೈ, 2007 ರಂದು ತೆರೆಕಂಡಿತು. ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ ಚಲನಚಿತ್ರವನ್ನೂ ಸಹ ಯೇಟ್ಸ್ ನಿರ್ದೇಶಿಸಿದರು. ಅದು 15 ಜುಲೈ 2009ರಂದು ಬಿಡುಗಡೆಯಾಯಿತು. ಸರಣಿಯ ಅಂತಿಮ ಕಂತು ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲೊಸ್ ಎರಡು ಭಾಗಗಳಲ್ಲಿ ಚಲನಚಿತ್ರಗೊಳ್ಳುವುದು, ಚಲನಚಿತ್ರದ ಮೊದಲ ಭಾಗ ನವೆಂಬರ್ 2010 ಮತ್ತು ಎರಡನೆ ಭಾಗ ಜುಲೈ 2011ರಲ್ಲಿ ಬಿಡುಗಡೆಯಾಗುವುದು ಎಂದು ಮಾರ್ಚ್ 2008ರಲ್ಲಿ ವಾರ್ನೆರ್ ಬ್ರದರ್ಸ್ ಘೋಷಿಸಿತು. ಯೇಟ್ಸ್‌ ನಿರ್ದೇಶನಕ್ಕೆ ಮರಳುವುದರೊಂದಿಗೆ ಎರಡೂ ಭಾಗಗಳ ಚಲನಚಿತ್ರ ತಯಾರಿಕೆ ಸಾಗಿದೆ.ಗಲ್ಲಾಪೆಟ್ಟಿಗೆಯಲ್ಲಿ ಹ್ಯಾರಿ ಪಾಟರ್ ಚಲನಚಿತ್ರಗಳು ಮೊದಲ ಸ್ಥಾನವನ್ನು ಗಳಿಸಿವೆ, ಪ್ರಪಂಚದ ಎಲ್ಲಾ ಕಡೆ 15 ಅತಿ ಹೆಚ್ಚು-ಗಳಿಸುವ ಚಲನಚಿತ್ರಗಳ ಪಟ್ಟಿಯಲ್ಲಿ ಆರರಲ್ಲಿ ಐದನೇ ಸ್ಥಾನವನ್ನು ಗಳಿಸಿದೆ.

ಅಭಿಮಾನಿಗಳಲ್ಲಿ ಈ ಚಲನಚಿತ್ರಗಳ ಬಗ್ಗೆ ಅಭಿಪ್ರಾಯಗಳು ವಿಭಿನ್ನವಾಗಿವೆ. ಒಂದು ಗುಂಪು ಮೊದಲ ಎರಡು ಚಲನಚಿತ್ರಗಳ ಹಾಗೆ ವಿಶ್ವಾಸದ ದೃಷ್ಠಿಯನ್ನು ಇಷ್ಟಪಡುತ್ತಾರೆ, ಮತ್ತು ಇನ್ನೊಂದು ಗುಂಪು, ನಂತರ ಚಲನಚಿತ್ರಗಳ ಹಾಗೆ ಹೆಚ್ಚು ಶೈಲೀಕರಿಸಿದ ಪಾತ್ರ-ನಿರ್ದೇಶಿತ ದೃಷ್ಠಿಯನ್ನು ಇಷ್ಟಪಡುತ್ತಾರೆ. ರೌಲಿಂಗ್ ನಿರಂತರವಾಗಿ ಚಲನಚಿತ್ರಗಳಿಗೆ ಒತ್ತಾಸೆಯಾಗಿದ್ದಾರೆ ಮತ್ತು ಅದರ ಆರ್ಹತೆಯನ್ನು ನಿರ್ಣಯಿಸುತ್ತಾರೆ. ಅವರ ಪ್ರಕಾರ ಆರ್ಡರ್ ಅಫ್ ದಿ ಫೀನಿಕ್ಸ್ ಸರಣಿಯ "ಇದುವರೆಗಿನ ಒಂದು ಅತ್ಯುತ್ತಮ" ಚಲನಚಿತ್ರವಾಗಿದೆ. ಒಂದು ಪುಸ್ತಕ ಚಲನಚಿತ್ರವಾಗಿ ಬದಲಾವಣೆ ಹೊಂದುವಾಗಿನ ಬದಲಾವಣೆಗಳ ಬಗ್ಗೆ ಅವರು ತಮ್ಮ ವೆಬ್‌ಸೈಟ್‌‌‌‌‌‌‌‌‌‌‌‌‌‌‌‌‌‌ನಲ್ಲಿ ಹೀಗೆ ಬರೆಯುತ್ತಾರೆ: "ನನ್ನ ಕಥೆಯಲ್ಲಿರುವ ಎಲ್ಲವನ್ನೂ ನಾಲ್ಕು ಗಂಟೆಯ ಒಂದು ಚಲನಚಿತ್ರದಲ್ಲಿ ಒಟ್ಟುಗೂಡಿಸುವುದು ಸಹಜವಾಗಿ ಅಸಾಧ್ಯ. ನಿಸ್ಸಂದೇಹವಾಗಿ ಕಾದಂಬರಿಗಳಿಗೆ ಇಲ್ಲದ ಪರಿಮಿತಿ ಚಲನಚಿತ್ರಗಳಿವೆ. ಚಲನಚಿತ್ರದಲ್ಲಿ ಸಮಯ ಮತ್ತು ಬಂಡವಾಳದ ನಿರ್ಬಂಧಗಳಿರುತ್ತವೆ; ನಾನು ನನ್ನ ಸಂವಹನೆ ಮತ್ತು ನನ್ನ ಓದುಗರ ಕಲ್ಪನೆಗಳ ಮೇಲೆ ಮಾತ್ರ ಅವಲಂಬಿತವಾಗಿ ಯಾವುದೇ ವಸ್ತುಗಳ ನೆರವಿಲ್ಲದೆ ದಿಗ್ಭ್ರಮೆಗೊಳಿಸುವ ಪರಿಣಾಮಗಳನ್ನು ಸೃಷ್ಟಿಸಬಹುದು".

ಆಡಿಯೋ ಪುಸ್ತಕಗಳು

ಎಲ್ಲಾ ಹ್ಯಾರಿ ಪಾಟರ್ ಪುಸ್ತಕಗಳು ಸಂಕ್ಷೇಪಗೊಳ್ಳದ ಆಡಿಯೋ ಪುಸ್ತಕಗಳಾಗಿ ಬಿಡುಗಡೆಯಾಗಿದೆ. UK ಅವೃತ್ತಿಯನ್ನು ಸ್ಟಿಫನ್ ಫ್ರೈ ಮತ್ತು US ಅವೃತ್ತಿಯನ್ನು ಜಿಮ್ ಡೇಲ್ ವಾಚಿಸಿದ್ದಾರೆ.ಡೇಲ್ DVDಗಳ ವಿಶೇಷ ಲಕ್ಷಣದ ಡಿಸ್ಕ್‌ನ ನಿರೂಪಕ ಸಹ ಆಗಿದ್ದಾರೆ.

ಆಕರಗಳು

ಹೊರಗಿನ ಕೊಂಡಿಗಳು

ಹ್ಯಾರಿ ಪಾಟರ್ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಹ್ಯಾರಿ ಪಾಟರ್]]

Tags:

ಹ್ಯಾರಿ ಪಾಟರ್ ಕಥಾವಸ್ತುಹ್ಯಾರಿ ಪಾಟರ್ ಸ್ವರೂಪ ಮತ್ತು ಪ್ರಕಾರಹ್ಯಾರಿ ಪಾಟರ್ ಮೂಲ ವಿಷಯಗಳುಹ್ಯಾರಿ ಪಾಟರ್ ಮೂಲಗಳು ಮತ್ತು ಪ್ರಕಾಶನದ ಇತಿಹಾಸಹ್ಯಾರಿ ಪಾಟರ್ ಸಾಧನೆಗಳುಹ್ಯಾರಿ ಪಾಟರ್ ವಿರ್ಮಶೆ, ಹೊಗಳಿಕೆ ಮತ್ತು ವಿವಾದಹ್ಯಾರಿ ಪಾಟರ್ ಚಲನಚಿತ್ರಗಳುಹ್ಯಾರಿ ಪಾಟರ್ ಆಡಿಯೋ ಪುಸ್ತಕಗಳುಹ್ಯಾರಿ ಪಾಟರ್ ಆಕರಗಳುಹ್ಯಾರಿ ಪಾಟರ್ ಹೊರಗಿನ ಕೊಂಡಿಗಳುಹ್ಯಾರಿ ಪಾಟರ್ಜೆ.ಕೆ.ರೌಲಿಂಗ್

🔥 Trending searches on Wiki ಕನ್ನಡ:

ಗಿರೀಶ್ ಕಾರ್ನಾಡ್ಶಿಕ್ಷಣಚಿನ್ನದಶರಥಕುಂ.ವೀರಭದ್ರಪ್ಪಪ್ರಾಥಮಿಕ ಶಾಲೆರಚಿತಾ ರಾಮ್ಮೂಲಧಾತುಗಳ ಪಟ್ಟಿವಿಭಕ್ತಿ ಪ್ರತ್ಯಯಗಳುಭಾರತದಲ್ಲಿನ ಜಾತಿ ಪದ್ದತಿಮಂಟೇಸ್ವಾಮಿರಾಜಕೀಯ ವಿಜ್ಞಾನಶಿರ್ಡಿ ಸಾಯಿ ಬಾಬಾಗೋವಿಂದ ಪೈಪ್ರಬಂಧ ರಚನೆಒಲಂಪಿಕ್ ಕ್ರೀಡಾಕೂಟವೆಂಕಟೇಶ್ವರಆಹಾರಮಾಸಕರ್ನಾಟಕದ ತಾಲೂಕುಗಳುಭಾರತದ ರಾಷ್ಟ್ರಪತಿಗಳ ಪಟ್ಟಿಪ್ರಶಸ್ತಿಗಳುಪುನೀತ್ ರಾಜ್‍ಕುಮಾರ್ಬೆಸಗರಹಳ್ಳಿ ರಾಮಣ್ಣಸತ್ಯಂಮಾನವ ಸಂಪನ್ಮೂಲಗಳುಬ್ಯಾಂಕ್ಏಡ್ಸ್ ರೋಗಫ.ಗು.ಹಳಕಟ್ಟಿದೆಹಲಿ ಸುಲ್ತಾನರುಮಹೇಂದ್ರ ಸಿಂಗ್ ಧೋನಿಅಯ್ಯಪ್ಪಸಹಕಾರಿ ಸಂಘಗಳುಮೇಯರ್ ಮುತ್ತಣ್ಣಪೊನ್ನಮಾನವನ ಪಚನ ವ್ಯವಸ್ಥೆದಾಸ ಸಾಹಿತ್ಯಹಿಂದೂ ಮಾಸಗಳುಋತುಎಳ್ಳೆಣ್ಣೆಹಾವು ಕಡಿತಕಾವ್ಯಮೀಮಾಂಸೆಕರ್ನಾಟಕದ ಇತಿಹಾಸಬಾಹುಬಲಿಆಹಾರ ಸರಪಳಿರಸ(ಕಾವ್ಯಮೀಮಾಂಸೆ)ಕಿತ್ತೂರು ಚೆನ್ನಮ್ಮಬಾಳೆ ಹಣ್ಣುಬಾಲ ಗಂಗಾಧರ ತಿಲಕಭಾರತೀಯ ಕಾವ್ಯ ಮೀಮಾಂಸೆಉದಾರವಾದಅಶೋಕ್ವೈದೇಹಿಸಂಸ್ಕಾರಜಿಪುಣರಾವಣಶಿವಕುಮಾರ ಸ್ವಾಮಿಜಿ.ಪಿ.ರಾಜರತ್ನಂದೇವಸ್ಥಾನಸರ್ಪ ಸುತ್ತುಭಾರತದ ವಿಜ್ಞಾನಿಗಳುಮೂಲಧಾತುಹಾ.ಮಾ.ನಾಯಕದಾನ ಶಾಸನಪ್ರೇಮಾರಗಳೆಬರಗೂರು ರಾಮಚಂದ್ರಪ್ಪನವೋದಯಮಂಡಲ ಹಾವುದಸರಾವ್ಯವಸಾಯವಿಶ್ವ ವ್ಯಾಪಾರ ಸಂಸ್ಥೆಭಾಮಿನೀ ಷಟ್ಪದಿಚಂದ್ರಯಾನ-೩ಗರ್ಭಧಾರಣೆರಜಪೂತಝಾನ್ಸಿ🡆 More