ಹುತಾತ್ಮರ ದಿನ

ಜನವರಿ ೩೦,೧೯೪೮ - ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ .ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.

     ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.      ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. ೧೮೬೯ ಅಕ್ಟೋಬರ್ ೨ ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿ ಯೋಗಿಯಾಗಿ ಬದಲಾದವರು. ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿದೆ.        ೧೯೪೮ ಜನವರಿ ೩೦ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ 


Tags:

ಜನವರಿ ೩೦

🔥 Trending searches on Wiki ಕನ್ನಡ:

ಭಾರತದ ಸರ್ವೋಚ್ಛ ನ್ಯಾಯಾಲಯರಸ(ಕಾವ್ಯಮೀಮಾಂಸೆ)ರಾಜ್‌ಕುಮಾರ್ರಚಿತಾ ರಾಮ್ಕಪ್ಪೆಚಿಪ್ಪುಚಾಣಕ್ಯಮಂಜಮ್ಮ ಜೋಗತಿವಿಜಯಪುರದಯಾನಂದ ಸರಸ್ವತಿಜಲ ಮಾಲಿನ್ಯಕರಡಿಮಂಕುತಿಮ್ಮನ ಕಗ್ಗಶನಿ (ಗ್ರಹ)ಕದಂಬ ಮನೆತನಚಾಮರಾಜನಗರಮಹೇಂದ್ರ ಸಿಂಗ್ ಧೋನಿಕರ್ನಾಟಕ ಸ್ವಾತಂತ್ರ್ಯ ಚಳವಳಿಮೂಲಭೂತ ಕರ್ತವ್ಯಗಳುಭ್ರಷ್ಟಾಚಾರಕನ್ನಡದಲ್ಲಿ ಸಾಂಗತ್ಯಕಾವ್ಯದ್ವಿರುಕ್ತಿವಿರಾಟ್ ಕೊಹ್ಲಿಡಿ.ವಿ.ಗುಂಡಪ್ಪಅವರ್ಗೀಯ ವ್ಯಂಜನಹನುಮ ಜಯಂತಿಭಾಮಿನೀ ಷಟ್ಪದಿಬಿಳಿಗಿರಿರಂಗನ ಬೆಟ್ಟಕದಂಬ ರಾಜವಂಶತ. ರಾ. ಸುಬ್ಬರಾಯಯುಗಾದಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಸುಧಾರಾಣಿಕನ್ನಡ ಗುಣಿತಾಕ್ಷರಗಳುಕುಮಾರವ್ಯಾಸಕನಕಪುರಅಸಹಕಾರ ಚಳುವಳಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಅಲಾವುದ್ದೀನ್ ಖಿಲ್ಜಿಕಲೆಭಾವನಾ(ನಟಿ-ಭಾವನಾ ರಾಮಣ್ಣ)ಚಿಕ್ಕಬಳ್ಳಾಪುರಬರವಣಿಗೆಕಲಿಯುಗಮಾದಿಗಹಸ್ತ ಮೈಥುನಕೇಶಿರಾಜಕರ್ನಾಟಕದ ಸಂಸ್ಕೃತಿಅನುಪಮಾ ನಿರಂಜನಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದಲ್ಲಿ ಬಡತನಗ್ರಾಮ ದೇವತೆಕಾನೂನುಶ್ಚುತ್ವ ಸಂಧಿಪ್ರಾಥಮಿಕ ಶಿಕ್ಷಣಸವದತ್ತಿಜ್ಯೋತಿಷ ಶಾಸ್ತ್ರಚುನಾವಣೆಸುಮಲತಾಕಾವ್ಯಮೀಮಾಂಸೆಮಾನಸಿಕ ಆರೋಗ್ಯಉಗ್ರಾಣಆತ್ಮರತಿ (ನಾರ್ಸಿಸಿಸಮ್‌)ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನತೇಜಸ್ವಿ ಸೂರ್ಯಆವರ್ತ ಕೋಷ್ಟಕಮುದ್ದಣಅಡೋಲ್ಫ್ ಹಿಟ್ಲರ್ಬೊಜ್ಜುಸ್ವಾತಂತ್ರ್ಯನಾಮಪದಭಾಷೆರಾಷ್ಟ್ರೀಯ ಶಿಕ್ಷಣ ನೀತಿನದಿಹೊಯ್ಸಳಋಷಿಪಶ್ಚಿಮ ಘಟ್ಟಗಳುವಿಜಯದಾಸರುಸೋಮನಾಥಪುರ🡆 More