ಹುಟ್ಟುವಳಿ

ಅರ್ಥಶಾಸ್ತ್ರದಲ್ಲಿ ಹುಟ್ಟುವಳಿ ಎಂದರೆ ಒಂದು ಸಂಸ್ಥೆ, ಉದ್ದಿಮೆ, ಅಥವಾ ದೇಶವು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಉತ್ಪಾದಿಸಿದ ಸರಕುಗಳು ಅಥವಾ ಸೇವೆಗಳ ಪ್ರಮಾಣ.

ಇದನ್ನು ವ್ಯಯಮಾಡಬಹುದು ಅಥವಾ ಮುಂದಿನ ಉತ್ಪಾದನೆಗಾಗಿ ಬಳಸಬಹುದು. ಬೃಹದರ್ಥಶಾಸ್ತ್ರದ ಕ್ಷೇತ್ರದಲ್ಲಿ ರಾಷ್ಟ್ರೀಯ ಹುಟ್ಟುವಳಿಯ ಪರಿಕಲ್ಪನೆಯು ಬಹಳ ಅತ್ಯಗತ್ಯವಾಗಿದೆ. ಒಂದು ದೇಶವನ್ನು ಶ್ರೀಮಂತವಾಗಿಸುವುದು ರಾಷ್ಟ್ರೀಯ ಹುಟ್ಟುವಳಿ ಹೊರತು ದೊಡ್ಡ ಪ್ರಮಾಣದ ಹಣವಲ್ಲ.

ಬೇರೆಡೆ ಮಾರಾಟಕ್ಕೆ ಅಥವಾ ಬಳಕೆಗೆ ಲಭ್ಯವಿರುವ ಉತ್ಪನ್ನ ಅಥವಾ ಸೇವೆಯನ್ನು ಉತ್ಪಾದಿಸಲು ಹೂಡುವಳಿಗಳನ್ನು ಬಳಸಿದ ಒಂದು ಆರ್ಥಿಕ ಪ್ರಕ್ರಿಯಯ ಪರಿಣಾಮವೇ ಹುಟ್ಟುವಳಿ. ಉತ್ಪಾದನೆಯ ವಿಷಯದಲ್ಲಿ, ನಿವ್ವಳ ಹುಟ್ಟುವಳಿ ಎಂದರೆ ಉತ್ಪಾದನಾ ಪ್ರಕ್ರಿಯೆಯಿಂದ ಹುಟ್ಟುವಳಿಯಾದರೆ ಸೊನ್ನೆಗಿಂತ ಹೆಚ್ಚಾದ ಪ್ರಮಾಣವಾಗಿರುತ್ತದೆ ಮತ್ತು ಉತ್ಪಾದನಾ ಪ್ರಕ್ರಿಯೆಗೆ ಹೂಡೂವಳಿಯಾದರೆ ಸೊನ್ನೆಗಿಂತ ಕಡಿಮೆ ಪ್ರಮಾಣವಾಗಿರುತ್ತದೆ. ಹುಟ್ಟುವಳಿಯನ್ನು ಅಳೆಯುವ ಹಲವಾರು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತದೆ.

ಜಿಡಿಪಿಯನ್ನು (ಒಟ್ಟು ದೇಶೀಯ ಉತ್ಪನ್ನ) ಗಣನೆ ಮಾಡುವುದು ರಾಷ್ಟ್ರೀಯ ಹುಟ್ಟುವಳಿಯ ಅತ್ಯಂತ ಜನಪ್ರಿಯ ಪರಿಮಾಣವಾಗಿದೆ. ಈ ವಿಧಾನವನ್ನು ಬಳಸುವಲ್ಲಿನ ಮುಖ್ಯ ಸವಾಲೆಂದರೆ ಅದೇ ಉತ್ಪನ್ನವನ್ನು ಒಂದಕ್ಕಿಂತ ಹೆಚ್ಚು ಸಲ ಎಣಿಸುವುದನ್ನು ಹೇಗೆ ತಪ್ಪಿಸುವುದು ಎಂದು. ತಾರ್ಕಿಕವಾಗಿ, ಒಟ್ಟು ಹುಟ್ಟುವಳಿಯು ದೇಶದಲ್ಲಿ ಉತ್ಪಾದಿಸಲಾದ ಎಲ್ಲ ಸರಕುಗಳು ಮತ್ತು ಸೇವೆಗಳ ಮೌಲ್ಯಕ್ಕೆ ಸಮವಾಗಿರಬೇಕು, ಆದರೆ ಪ್ರತಿಯೊಂದು ಸರಕು ಮತ್ತು ಸೇವೆಯನ್ನು ಎಣಿಸುವಲ್ಲಿ, ವಾಸ್ತವವಾಗಿ ಒಬ್ಬರು ಅಂತಿಮವಾಗಿ ಅದೇ ಹುಟ್ಟುವಳಿಯನ್ನು ಉತ್ಪಾದನೆಯ ಬಹು ಹಂತಗಳಲ್ಲಿ ಮತ್ತೆ ಮತ್ತೆ ಎಣಿಸುತ್ತಾರೆ. ಕೇವಲ ಮೌಲ್ಯ ಸಂವರ್ಧನೆಯನ್ನು ಪರಿಗಣಿಸುವುದು ಅತಿ ಎಣಿಕೆಯ ಸಮಸ್ಯೆಯನ್ನು ನಿಭಾಯಿಸುವ ಒಂದು ರೀತಿಯಾಗಿದೆ. ಮೌಲ್ಯ ಸಂವರ್ಧನೆ ಎಂದರೆ ಉತ್ಪಾದನೆಯ ಪ್ರತಿ ಹಂತದಲ್ಲಿ ಸೃಷ್ಟಿಯಾದ ಹೊಸ ಹೊಟ್ಟುವಳಿ.

ಇದರ ಉದಾಹರಣೆಯೆಂದರೆ, ಉಡುಪು ಸಾಮಗ್ರಿಯನ್ನು ೫೦೦ ರೂಪಾಯಿಗಳಿಗೆ ಖರೀದಿಸಿದ ಉಡುಪು ತಯಾರಕನನ್ನು ತೆಗೆದುಕೊಳ್ಳಬಹುದು. ನಂತರ ಇವನು ಅದನ್ನು ಹೊಲೆದು ಉಡುಪಿನ ಮೇಲೆ ಅಂತಿಮ ರೂಪಗಳನ್ನು ಕೊಟ್ಟನು. ನಂತರ ಅವನು ಆ ಉಡುಪನ್ನು ೮೦೦ ರೂಪಾಯಿಗಳಿಗೆ (ಉಡುಪನ್ನು ಸಿದ್ಧಗೊಳಿಸುವಲ್ಲಿ ಅವನ ವೆಚ್ಚ ೧೫೦ ರೂಪಾಯಿಗಳಾಯಿತು) ಮಾರಾಟ ಮಾಡಿದನು. ಆಗ ಅವನು ೮೦೦ ರೂಪಾಯಿ ಮೌಲ್ಯದ ಹುಟ್ಟುವಳಿಯನ್ನು ಉತ್ಪಾದಿಸಿದನು ಎನ್ನುವ ಬದಲು ಅವನು ಉಡುಪಿಗೆ ೧೫೦ ರೂಪಾಯಿ ಮೌಲ್ಯದ ಹುಟ್ಟುವಳಿಯನ್ನು ಸೇರಿಸಿದನು ಎಂದು ನಾವು ಹೇಳಬಹುದು. ಹಾಗಾಗಿ ಮೌಲ್ಯ ಸಂವರ್ಧನೆಯು ಒಂದು ಸರಕು ಅಥವಾ ಸೇವೆಯ ಮಾರಾಟ ಬೆಲೆಯಿಂದ ಅದನ್ನು ಉತ್ಪಾದಿಸಲು ಬಳಸಲಾದ ಎಲ್ಲ ಅಕಾರ್ಮಿಕ ವೆಚ್ಚಗಳನ್ನು ಕಳೆದಾಗ ಬರುವ ಬೆಲೆಗೆ ಸಮವಾಗಿರುತ್ತದೆ.

ಉಲ್ಲೇಖಗಳು

Tags:

ಅರ್ಥಶಾಸ್ತ್ರಬೃಹದರ್ಥಶಾಸ್ತ್ರಹಣ

🔥 Trending searches on Wiki ಕನ್ನಡ:

ಭಾರತೀಯ ರಿಸರ್ವ್ ಬ್ಯಾಂಕ್ಜೋಳಹನುಮ ಜಯಂತಿಷಟ್ಪದಿರಾಗಿಕುಂಬಳಕಾಯಿಕಲ್ಯಾಣಿಕುಂ.ವೀರಭದ್ರಪ್ಪಸಿದ್ದರಾಮಯ್ಯಆದಿಪುರಾಣಸ್ವರಕಪ್ಪೆ ಅರಭಟ್ಟಕರ್ನಾಟಕದ ಜಾನಪದ ಕಲೆಗಳುಸತ್ಯ (ಕನ್ನಡ ಧಾರಾವಾಹಿ)ರೇಣುಕಅಮೃತನರೇಂದ್ರ ಮೋದಿಶ್ವೇತ ಪತ್ರಕನ್ನಡ ಕಾವ್ಯಬೆಂಗಳೂರು ನಗರ ಜಿಲ್ಲೆಜಿ.ಎಸ್.ಶಿವರುದ್ರಪ್ಪಶ್ರೀ ರಾಮ ಜನ್ಮಭೂಮಿಭಾರತೀಯ ಭಾಷೆಗಳುಎಳ್ಳೆಣ್ಣೆಬಾಲಕೃಷ್ಣಭೂತಾರಾಧನೆರಾಷ್ಟ್ರೀಯ ಸ್ವಯಂಸೇವಕ ಸಂಘಬಂಡಾಯ ಸಾಹಿತ್ಯಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಟಿಪ್ಪು ಸುಲ್ತಾನ್ಕೈವಾರ ತಾತಯ್ಯ ಯೋಗಿನಾರೇಯಣರುಅರಿಸ್ಟಾಟಲ್‌ಬೇಡಿಕೆಚೆಲ್ಲಿದ ರಕ್ತಕ್ರೀಡೆಗಳು೧೮೬೨ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭತ್ತಸತ್ಯಂಕನ್ನಡ ಚಿತ್ರರಂಗವಾಸ್ತುಶಾಸ್ತ್ರದಾವಣಗೆರೆಶಂ.ಬಾ. ಜೋಷಿಮೂಲಧಾತುಗಳ ಪಟ್ಟಿಅಂತರ್ಜಾಲ ಹುಡುಕಾಟ ಯಂತ್ರಗುರುನಾನಕ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ರಾಥಮಿಕ ಶಾಲೆಕದಂಬ ರಾಜವಂಶಜೈಮಿನಿ ಭಾರತಮಣ್ಣುಏಡ್ಸ್ ರೋಗಮೊದಲನೇ ಅಮೋಘವರ್ಷಚಾಮರಾಜನಗರಅಕ್ಕಮಹಾದೇವಿಕ್ರಿಕೆಟ್ರಾಘವಾಂಕಗಣೇಶಅಶೋಕನ ಶಾಸನಗಳುಕರ್ನಾಟಕ ವಿದ್ಯಾವರ್ಧಕ ಸಂಘಮತದಾನಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಕಾಗೋಡು ಸತ್ಯಾಗ್ರಹನಾಮಪದಈರುಳ್ಳಿಭಗತ್ ಸಿಂಗ್ಗದ್ಯಬೆಳಕುಜೇನು ಹುಳುತೆಂಗಿನಕಾಯಿ ಮರಸಂಗೊಳ್ಳಿ ರಾಯಣ್ಣಅಂಬಿಗರ ಚೌಡಯ್ಯಹರಿಹರ (ಕವಿ)ಮನುಸ್ಮೃತಿಮಹಾಭಾರತಗಾದೆದಶಾವತಾರ🡆 More