ಹಲ್ಮಿಡಿ

ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ.

ಕ್ರಿ. ಶ. ೪೫೦ರ ಕಾಲದ, ಕನ್ನಡದ ಮೊಟ್ಟಮೊದಲ ಶಾಸನ ಇದೇ ಹಳ್ಳಿಯಲ್ಲಿ ದೊರಕಿತು. ಹಿಟ್ಟುಗಲ್ಲಿನಿಂದ ಕೆತ್ತಿಸಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.

ಹಲ್ಮಿಡಿ
Halmidi
town
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ದೇಶಹಲ್ಮಿಡಿ ಭಾರತ
ರಾಜ್ಯಕರ್ನಾಟಕ
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ISO 3166 codeIN-KA
ಜಾಲತಾಣkarnataka.gov.in

ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.

ಹಲ್ಮಿಡಿ ಶಾಸನ

ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕದಂಬರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು,ಕೊಟ್ಟಾರ್,ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.

ಉಲ್ಲೇಖಗಳು

Tags:

ಕನ್ನಡಕರ್ನಾಟಕಜಿಲ್ಲೆಹಾಸನ

🔥 Trending searches on Wiki ಕನ್ನಡ:

ಜಾತ್ಯತೀತತೆಸಾಗುವಾನಿಮತದಾನನುಗ್ಗೆ ಕಾಯಿಕೊರೋನಾವೈರಸ್ಕನ್ನಡ ಸಂಧಿಕಲ್ಯಾಣ ಕರ್ನಾಟಕಅಲೆಕ್ಸಾಂಡರ್ಕರ್ನಾಟಕ ರಾಜ್ಯ ಮಹಿಳಾ ಆಯೋಗಭಾರತೀಯ ಜನತಾ ಪಕ್ಷಹಾ.ಮಾ.ನಾಯಕಒಡೆಯರ್ಬಾರ್ಲಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಹಲ್ಮಿಡಿಭಾರತದ ವಿಜ್ಞಾನಿಗಳುತತ್ಪುರುಷ ಸಮಾಸಸಹೃದಯವಿಜ್ಞಾನಸಂಸ್ಕೃತ ಸಂಧಿಬಾಲಕಾರ್ಮಿಕಕರ್ನಾಟಕ ಲೋಕಸೇವಾ ಆಯೋಗಕರ್ನಾಟಕದ ಕಲೆ ಮತ್ತು ಸಂಸ್ಕೃತಿಕ್ರಿಕೆಟ್ಸೀತೆಗುಣ ಸಂಧಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗರ್ಭಧಾರಣೆವಾಯು ಮಾಲಿನ್ಯಕದಂಬ ಮನೆತನಕನ್ನಡಬೆಳ್ಳುಳ್ಳಿಕೆಂಪುಕಾನೂನುಕುರಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆದಿವಾಸಿಗಳುಶ್ರೀ ರಾಘವೇಂದ್ರ ಸ್ವಾಮಿಗಳುಪ್ರಹ್ಲಾದ ಜೋಶಿಲೆಕ್ಕ ಪರಿಶೋಧನೆಸುಧಾರಾಣಿಮಲೆನಾಡುಆವರ್ತ ಕೋಷ್ಟಕಲಕ್ಷ್ಮೀಶಮ್ಯಾಕ್ಸ್ ವೆಬರ್ತ್ರಿಶೂಲಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹರಿಶ್ಚಂದ್ರಬಹಮನಿ ಸುಲ್ತಾನರುಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಚನ್ನವೀರ ಕಣವಿಮುತ್ತುಗಳುಕಲೆಭಾರತೀಯ ಸ್ಟೇಟ್ ಬ್ಯಾಂಕ್ಹೊಯ್ಸಳ ವಾಸ್ತುಶಿಲ್ಪಬಬಲಾದಿ ಶ್ರೀ ಸದಾಶಿವ ಮಠರಾಜಸ್ಥಾನ್ ರಾಯಲ್ಸ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮಂತ್ರಾಲಯನುಡಿಗಟ್ಟುಭಾರತದ ಪ್ರಧಾನ ಮಂತ್ರಿಗಳ ಪಟ್ಟಿತಿಂಗಳುಕರ್ನಾಟಕದ ಮುಖ್ಯಮಂತ್ರಿಗಳುಶ್ರೀಶೈಲಕೃತಕ ಬುದ್ಧಿಮತ್ತೆಭಾರತದ ಸಂವಿಧಾನ ರಚನಾ ಸಭೆಇಸ್ಲಾಂ ಧರ್ಮಸಾನೆಟ್ಕನ್ನಡ ರಂಗಭೂಮಿಬೆಳಗಾವಿಕನ್ನಡ ಅಕ್ಷರಮಾಲೆಕವನಜಯಂತ ಕಾಯ್ಕಿಣಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣರಾಜ್‌ಕುಮಾರ್ಚುನಾವಣೆಭಾರತ ಸರ್ಕಾರ🡆 More