ಹರಳಯ್ಯ

ಹರಳಯ್ಯ 12ನೆಯ ಶತಮಾನದ ಶಿವಶರಣ.

ಬಸವಣ್ಣನವರ ಸಮಕಾಲೀನ.

ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರು ಲಿಂಗ ಜಂಗಮ ಸೇವೆಗೆ ತನ್ನ ತನುಮನಧನ ಗಳನ್ನು ಮುಡಿಪಾಗಿಟ್ಟಿದ್ದವ. ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯ ದಲ್ಲಿ ಭೇಟಿಯಾದ ಹರಳಯ್ಯ, ಶರಣು ಬಸವರಸ ಎಂದು ತಲೆಬಾಗಿ ವಂದಿಸಿದ. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದ. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದ, ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು, ಹರಳಯ್ಯನಿಗೆ. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ.

ಅನಂತರ ನಡೆದ ಕಲ್ಯಾಣದ ಕ್ರಾಂತಿಗೆ ಕಾರಣವಾದ ಘಟನೆಗಳಲ್ಲಿ ಕೀಳು ಜಾತಿಯ ಹರಳಯ್ಯನ ಮಗನ ಮದುವೆ ಮೇಲು ಜಾತಿಯ ಮಧುವಯ್ಯನ ಮಗಳೊಂದಿಗೆ ನಡೆದದ್ದು ಮುಖ್ಯವಾದದ್ದು. ಹರಳಯ್ಯ ಅನುಭವ ಮಂಟಪದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಿರ ಬಹುದಾದರೂ ಇವನ ವಚನಗಳು ದೊರೆತಿಲ್ಲ.

ಹರಳಯ್ಯ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಬಸವೇಶ್ವರ

🔥 Trending searches on Wiki ಕನ್ನಡ:

ಹಿಂದೂ ಧರ್ಮವರ್ಗೀಯ ವ್ಯಂಜನಅನುಭವ ಮಂಟಪಅಸಹಕಾರ ಚಳುವಳಿಭಾರತೀಯ ಸಂವಿಧಾನದ ತಿದ್ದುಪಡಿದಾಳಿಂಬೆಓಂ ನಮಃ ಶಿವಾಯಕೃಷ್ಣಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶಿವಕನ್ನಡ ಛಂದಸ್ಸುಕರ್ನಾಟಕದ ಜಾನಪದ ಕಲೆಗಳುಭೂತಾರಾಧನೆಸಂಗೊಳ್ಳಿ ರಾಯಣ್ಣಸಾಂಗತ್ಯಪುರೂರವಸ್ಹುಲಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಮಾಜಶಾಸ್ತ್ರಮಾಟ - ಮಂತ್ರಶ್ರೀನಿವಾಸ ರಾಮಾನುಜನ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಮುಹಮ್ಮದ್ಕೆ.ಎಲ್.ರಾಹುಲ್ಮಧ್ವಾಚಾರ್ಯಕರ್ಮಧಾರಯ ಸಮಾಸಆಲೂರು ವೆಂಕಟರಾಯರುಚೆನ್ನಣ್ಣ ವಾಲೀಕಾರನುಗ್ಗೆಕಾಯಿಇತಿಹಾಸವಿಧಾನಸೌಧಬೆಲ್ಲಮಧುಮೇಹಮೂಲಧಾತುಗೊರೂರು ರಾಮಸ್ವಾಮಿ ಅಯ್ಯಂಗಾರ್ಇಂದಿರಾ ಗಾಂಧಿಗಿಡಮೂಲಿಕೆಗಳ ಔಷಧಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಅ.ನ.ಕೃಷ್ಣರಾಯಕದಂಬ ಮನೆತನನಾಮಪದಯು.ಆರ್.ಅನಂತಮೂರ್ತಿಕಾಮಸೂತ್ರಮನುಸ್ಮೃತಿಭಾರತದ ಇತಿಹಾಸಆಗಮ ಸಂಧಿಆದಿಪುರಾಣಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಲ್ಲಭ್‌ಭಾಯಿ ಪಟೇಲ್ಪ್ರೀತಿಕನ್ನಡದಲ್ಲಿ ವಚನ ಸಾಹಿತ್ಯನೀಲಗಾರರುಜಾನಪದಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಡಲತೀರಪಂಚಾಂಗಸೌಂದರ್ಯ (ಚಿತ್ರನಟಿ)ದಾಸ ಸಾಹಿತ್ಯಬಾರ್ಲಿಅಂಬೇಡ್ಕರ ಹೊಳವುಗಳುಆರನ್ ಜಾನ್ಸನ್ವಿದ್ಯಾರ್ಥಿಹೊಂಗೆ ಮರಜೋಗಿ (ಚಲನಚಿತ್ರ)ಗಾದೆನೀತಿ ಆಯೋಗರಾಮಸತ್ಯ (ಕನ್ನಡ ಧಾರಾವಾಹಿ)ಕತ್ತೆಕಿರುಬರಾಮ ಮಂದಿರ, ಅಯೋಧ್ಯೆ೧೯೫೬ಭಾರತದ ಸ್ವಾತಂತ್ರ್ಯ ಚಳುವಳಿ🡆 More