ಹಡಪದ ಅಪ್ಪಣ್ಣ

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.


"ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು. "ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ". ಇವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿರುತ್ತದೆ ಅಲ್ಲಿಯೆ ಇವರ ಸಮಾಧಿಯೂ ಸಹ ಇದೆ. ಇವರು ಸುಮಾರು ೨೫೦ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿರುತ್ತಾರೆ. ಇವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಯಾಗಬೇಕಾಗಿದೆ.

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ಗಣಗಲೆ ಹೂಸೂರ್ಯವ್ಯೂಹದ ಗ್ರಹಗಳುಉತ್ತರ ಕರ್ನಾಟಕವಲ್ಲಭ್‌ಭಾಯಿ ಪಟೇಲ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಭಾರತದ ತ್ರಿವರ್ಣ ಧ್ವಜಮಹಾಕವಿ ರನ್ನನ ಗದಾಯುದ್ಧಮೈಸೂರುವೆಂಕಟೇಶ್ವರಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದ ಬುಡಕಟ್ಟು ಜನಾಂಗಗಳುಯೂಟ್ಯೂಬ್‌ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶಿಶುನಾಳ ಶರೀಫರುಎಮ್.ಎ. ಚಿದಂಬರಂ ಕ್ರೀಡಾಂಗಣವಚನಕಾರರ ಅಂಕಿತ ನಾಮಗಳುಪಂಚ ವಾರ್ಷಿಕ ಯೋಜನೆಗಳುಬಹುವ್ರೀಹಿ ಸಮಾಸರಾಷ್ಟ್ರೀಯ ಉತ್ಪನ್ನಗುಪ್ತ ಸಾಮ್ರಾಜ್ಯಕನ್ನಡ ವ್ಯಾಕರಣಯು.ಆರ್.ಅನಂತಮೂರ್ತಿಸಂಖ್ಯಾಶಾಸ್ತ್ರಭೀಷ್ಮಸಾಮ್ರಾಟ್ ಅಶೋಕರಮ್ಯಾಶಿವಪ್ಪ ನಾಯಕಬಿ.ಜಯಶ್ರೀಆದೇಶ ಸಂಧಿಒಡೆಯರ್ಕಾನೂನುಬಿ. ಎಂ. ಶ್ರೀಕಂಠಯ್ಯದಕ್ಷಿಣ ಭಾರತದ ಇತಿಹಾಸಕರ್ನಾಟಕ ವಿಧಾನ ಸಭೆಗೋಕರ್ಣಹೊಸ ಆರ್ಥಿಕ ನೀತಿ ೧೯೯೧ಎರಡನೇ ಮಹಾಯುದ್ಧರಾಘವಾಂಕಕೆ. ಅಣ್ಣಾಮಲೈಶಿಕ್ಷಣಭಾರತದಲ್ಲಿ ಕೃಷಿಕರ್ಣಾಟ ಭಾರತ ಕಥಾಮಂಜರಿಗವಿಸಿದ್ದೇಶ್ವರ ಮಠಪರಮಾತ್ಮ(ಚಲನಚಿತ್ರ)ಪ್ರಾಚೀನ ಈಜಿಪ್ಟ್‌ಜವಾಹರ‌ಲಾಲ್ ನೆಹರುಹದಿಬದೆಯ ಧರ್ಮಇತಿಹಾಸಜಾನಪದಕೃಷ್ಣದೇವರಾಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತದ ಬಂದರುಗಳುಯುಧಿಷ್ಠಿರಕರ್ನಾಟಕ ರತ್ನರಾಶಿಕಂಪ್ಯೂಟರ್ವಾಲಿಬಾಲ್ಭಾರತೀಯ ಜನತಾ ಪಕ್ಷಭಾರತದ ಪ್ರಧಾನ ಮಂತ್ರಿಗಳ ಪಟ್ಟಿರನ್ನಹನುಮಂತಚಿನ್ನಬೀಚಿಶ್ಯೆಕ್ಷಣಿಕ ತಂತ್ರಜ್ಞಾನತುಮಕೂರುಎಸ್. ಜಾನಕಿತುಳುಹೋಬಳಿನಗರಕ್ರಿಕೆಟ್ಸಂಗೀತಕಲೆಮಸೂರ ಅವರೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಸ್ಕೃತಿದೇವನೂರು ಮಹಾದೇವಮಲ್ಲಿಕಾರ್ಜುನ್ ಖರ್ಗೆ🡆 More