ಹಕೀಂ ಅಜ್ಮಲ್ ಖಾನ್: ಭಾರತದ ರಾಜಕಾರಣಿ

'ಹಕೀಂ ಅಜ್ಮಲ್ ಖಾನ್ (1868–1927) .

ಪ್ರಸಿದ್ಧ ಹಕೀಂ ಮನೆತನವೊಂದರಲ್ಲಿ ಜನಿಸಿ, ವೈದ್ಯದಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಹಿಂದುಳಿದ ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ,ಉಜ್ವಲ ರಾಷ್ಟ್ರಭಕ್ತರಾಗಿ ನಾಡಿನ ಸೇವೆ ಮಾಡಿದ ಮುಸ್ಲಿಂ ನಾಯಕರಲ್ಲಿ ಒಬ್ಬರು.

ಹಕೀಂ ಅಜ್ಮಲ್ ಖಾನ್
ಹಕೀಂ ಅಜ್ಮಲ್ ಖಾನ್: ಸಾಧನೆ, ರಾಜಕೀಯ, ನಿಧನ
ಹಕೀಂ ಅಜ್ಮಲ್ ಖಾನ್
Born(೧೮೬೮-೦೨-೧೧)೧೧ ಫೆಬ್ರವರಿ ೧೮೬೮
Died29 December 1927
Nationalityಭಾರತೀಯ
Occupation(s)ವೈದ್ಯ, ರಾಜಕಾರಣಿ

ಸಾಧನೆ

ಇವರು ಯುನಾನಿ ವೈದ್ಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದ ದೆಹಲಿ ವೈದ್ಯ ಮನೆತನವೊಂದಕ್ಕೆ ಸೇರಿದವರು. ಈ ಮನೆತನದವರೇ ಸ್ಥಾಪಿಸಿ, ಬೆಳೆಸಿಕೊಂಡು ಬಂದಿದ್ದ ತಿಬಿಯಾ ಯುನಾನಿ ವೈದ್ಯ ಶಿಕ್ಷಣಶಾಲೆ ಅಜ್ಮಲ್ ಖಾನರ ಶ್ರಮದ ಫಲವಾಗಿ ಪ್ರೌಢ ವಿದ್ಯಾಸಂಸ್ಥೆಯಾಯಿತು. ಇವರ ಶಿಕ್ಷಣ ನಡೆದದ್ದು ಮನೆಯಲ್ಲಿಯೇ; ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಣ ಪಾಂಡಿತ್ಯ ಗಳಿಸಿದರು. 1904ರಲ್ಲಿ ಪಶ್ಚಿಮ ಏಷ್ಯ ಪ್ರವಾಸಮಾಡಿ, ಎರಡು ಸಲ ಯೂರೋಪು ದೇಶಗಳಲ್ಲೂ ಸಂಚರಿಸಿ, ಅಲ್ಲಿನ ವೈದ್ಯಕೀಯ ವಿಧಾನಗಳನ್ನು ಅಭ್ಯಾಸಮಾಡಿದರು. ವೈದ್ಯಶಾಸ್ತ್ರದ ಮೇಲೆ ಇವರು ಬರೆದಿರುವ ಗ್ರಂಥಗಳು ಪ್ರಮಾಣ ಗ್ರಂಥಗಳಾಗಿವೆ. ಅಲಿಘರ್‍ನ ಮುಸ್ಲಿಂ ಪ್ರೌಢವಿದ್ಯಾಶಾಲೆಯನ್ನು ಬೆಳೆಸಿ, ಅದು ವಿಶ್ವವಿದ್ಯಾನಿಲಯವಾಗಲು ಶ್ರಮಿಸಿದವರಲ್ಲಿ ಅಜ್ಮಲ್ ಖಾನರೊಬ್ಬರು.

ರಾಜಕೀಯ

1918ರ ದೆಹಲಿ ಕಾಂಗ್ರೆಸ್ಸಿನ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಇವರು ಮರು ವರ್ಷವೇ ರಾಜಕೀಯದಲ್ಲಿ ಧುಮುಕಬೇಕಾಯಿತು. 1919ರ ರೌಲತ್ ಕಾನೂನು, ಜಲಿಯನ್‍ವಾಲಾ ಬಾಗ್ ಕಗ್ಗೊಲೆ, ಖಿಲಾಫತ್ ವಿಷಯದಲ್ಲಿ ಬ್ರಿಟಿಷರು ಮುಸ್ಲಿಂಮರಿಗೆ ಮಾಡಿದ ಅನ್ಯಾಯ-ಇವೆಲ್ಲ ಅವರನ್ನು ರಾಜಕೀಯಕ್ಕೆ ಸೆಳೆದುವು. 1919ರಲ್ಲಿ ಬ್ರಿಟಿಷರು ನಡೆಸಿದ ಅತ್ಯಾಚಾರಗಳಿಂದ ತಮ್ಮ ರಾಜಕೀಯ ಅಭಿಪ್ರಾಯಗಳು ಒಮ್ಮೆಲೇ ಬದಲಾಯಿಸಿದವು ಎಂದು ಮಿತ್ರರೊಬ್ಬರಿಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ. 1921ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ಸಿಗೆ ಇವರು ಅಧ್ಯಕ್ಷರಾಗಿ ಆರಿಸಲ್ಪಟ್ಟು ಅಧ್ಯಕ್ಷಪೀಠದಿಂದ, ಸ್ವಾತಂತ್ರ್ಯದ ಹಾಗೂ ಹಿಂದೂ ಮುಸ್ಲಿಮ್ ಐಕ್ಯದ ಬಗ್ಗೆ ಭಾವೋದ್ರೇಕದಿಂದ ಜನತೆಗೆ ಕರೆಕೊಟ್ಟರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಇವರ ಗೆಳೆತನ ಬೆಳೆಯಿತು. ಸೆರೆಮನೆಯಲ್ಲೇ ನಡೆದ ಗಾಂಧೀಜಿಯವರ ಶಸ್ತ್ರಚಿಕಿತ್ಸೆ, ದೆಹಲಿಯಲ್ಲಿ ಗಾಂಧೀಜಿಯವರು ಮಾಡಿದ ಮೂರು ವಾರಗಳ ಉಪವಾಸ (1924)-ಇಂಥ ಸಂದರ್ಭಗಳಲ್ಲಿ ಅಜ್ಮಲ್‍ಖಾನರು ತೋರಿಸಿದ ಕಾಳಜಿ, ಆಸಕ್ತಿಗಳು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಹೃದಯಸ್ಪರ್ಶಿಯಾದ ಪ್ರಸಂಗಗಳು.

ನಿಧನ

ಇವರು ಡಿಸೆಂಬರ್ ೨೯,೧೯೨೭ ರಂದು ಹೃದಯ ಸಂಬಂಧಿ ಖಾಯಿಲೆಯಿಂದ ನಿಧನ ಹೊಂದಿದರು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಹಕೀಂ ಅಜ್ಮಲ್ ಖಾನ್: ಸಾಧನೆ, ರಾಜಕೀಯ, ನಿಧನ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಹಕೀಂ ಅಜ್ಮಲ್ ಖಾನ್ ಸಾಧನೆಹಕೀಂ ಅಜ್ಮಲ್ ಖಾನ್ ರಾಜಕೀಯಹಕೀಂ ಅಜ್ಮಲ್ ಖಾನ್ ನಿಧನಹಕೀಂ ಅಜ್ಮಲ್ ಖಾನ್ ಉಲ್ಲೇಖಗಳುಹಕೀಂ ಅಜ್ಮಲ್ ಖಾನ್ ಬಾಹ್ಯ ಸಂಪರ್ಕಗಳುಹಕೀಂ ಅಜ್ಮಲ್ ಖಾನ್

🔥 Trending searches on Wiki ಕನ್ನಡ:

ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗೋವಿಂದ ಪೈಆನೆಸವದತ್ತಿಹಲ್ಮಿಡಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರಾಮಾಯಣಆಗಮ ಸಂಧಿಯು.ಆರ್.ಅನಂತಮೂರ್ತಿಭಗತ್ ಸಿಂಗ್ಸರಸ್ವತಿಕಾವ್ಯಮೀಮಾಂಸೆಕುವೆಂಪುಬೆಂಗಳೂರುಭಾರತಕನ್ನಡ ಬರಹಗಾರ್ತಿಯರುಅನುನಾಸಿಕ ಸಂಧಿವಿದುರಾಶ್ವತ್ಥಪಶ್ಚಿಮ ಬಂಗಾಳಸಜ್ಜೆಸಾರ್ವಭೌಮತ್ವತತ್ಸಮ-ತದ್ಭವಸುಭಾಷ್ ಚಂದ್ರ ಬೋಸ್ರಾಯಲ್ ಚಾಲೆಂಜರ್ಸ್ ಬೆಂಗಳೂರುಬಾಗಲಕೋಟೆಸಾರಜನಕನವೋದಯಮೊದಲನೇ ಅಮೋಘವರ್ಷಭಾರತದ ವಿಜ್ಞಾನಿಗಳುರಾಜಕೀಯ ಪಕ್ಷಅಂತರಜಾಲಭಾರತದ ಸ್ವಾತಂತ್ರ್ಯ ಚಳುವಳಿಮಂತ್ರಾಲಯಹಸಿರುವಿಮರ್ಶೆಸರ್ವಜ್ಞಮತದಾನಮಧ್ಯಕಾಲೀನ ಭಾರತಸ್ತ್ರೀವಾದಹರಪ್ಪವಿನಾಯಕ ಕೃಷ್ಣ ಗೋಕಾಕಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತೀಯ ಭೂಸೇನೆಗ್ರಾಮ ಪಂಚಾಯತಿಉತ್ತರ ಕನ್ನಡಚದುರಂಗದ ನಿಯಮಗಳುಹಣ್ಣುಕಾರವಾರಭಾಷಾಂತರಕವಲುಕರ್ನಾಟಕದ ಆರ್ಥಿಕ ಪ್ರಗತಿಚಂದ್ರಗುಪ್ತ ಮೌರ್ಯರನ್ನಲೆಕ್ಕ ಪರಿಶೋಧನೆಪುರಂದರದಾಸವೃದ್ಧಿ ಸಂಧಿನುಡಿಗಟ್ಟುವಿಜಯಪುರಛಂದಸ್ಸುಆದೇಶ ಸಂಧಿಜ್ಯೋತಿಬಾ ಫುಲೆಕನ್ನಡ ಸಾಹಿತ್ಯ ಸಮ್ಮೇಳನರಕ್ತಬ್ಯಾಡ್ಮಿಂಟನ್‌ತಿಗಳಾರಿ ಲಿಪಿಡಾ ಬ್ರೋಸಂವಹನತಂತ್ರಜ್ಞಾನವಿಧಾನಸೌಧಬೆಟ್ಟದ ನೆಲ್ಲಿಕಾಯಿಕನ್ನಡದಲ್ಲಿ ಪ್ರವಾಸ ಸಾಹಿತ್ಯಉಡುಪಿ ಜಿಲ್ಲೆಮೋಕ್ಷಗುಂಡಂ ವಿಶ್ವೇಶ್ವರಯ್ಯಡಿ. ದೇವರಾಜ ಅರಸ್ಬಾದಾಮಿ ಶಾಸನಛತ್ರಪತಿ ಶಿವಾಜಿವಾಲಿಬಾಲ್🡆 More