ಸ್ವಾಮಿ ರಾಮಾನಂದ ತೀರ್ಥ

ಸ್ವಾಮಿ ರಾಮಾನಂದ ತೀರ್ಥರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ ರಂದು ಜನಿಸಿದರು.ಇವರ ತಂದೆ ಭವಾನರಾಯ ಬೇಡಗಿ.

ರಾಮಾನಂದ ತೀರ್ಥರ ಹುಟ್ಟು ಹೆಸರು ವೆಂಕಟೇಶ. ತಮ್ಮ ಮೊದಲ ಹಂತದ ವಿದ್ಯಾಭ್ಯಾಸವನ್ನು ಇವರು ದೇವಳ ಗಾಣಗಾಪುರದಲ್ಲಿ ತಮ್ಮ ದೊಡ್ಡ ಅಕ್ಕ ಗಂಗಾಬಾಯಿಯ ಬಳಿಯಲ್ಲಿ ಮಾಡಿದರು. ಬಳಿಕ ಸೊಲ್ಲಾಪುರದ ನಾರ್ಥಕೋಟ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಗಾಂಧೀಜಿ ಹಾಗು ಲೋಕಮಾನ್ಯ ತಿಲಕರ ದರ್ಶನ ಪಡೆದರು.

ತಿಲಕ ವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಕಾರ್ಮಿಕ ಧುರೀಣ ಎನ್.ಎಮ್.ಜೋಶಿ ಅವರ ಕಾರ್ಯದರ್ಶಿಯಾಗಿ ದಿಲ್ಲಿಗೆ ತೆರಳಿದರು. ದಿಲ್ಲಿಯ ಹವಾಮಾನದಿಂದ ಬಳಲಿದ ವೆಂಕಟೇಶ ಅವರು ಹವಾ ಬದಲಾವಣೆಗೆಂದು ಉಸ್ಮಾನಾಬಾದ ಜಿಲ್ಲೆಯ ಹಿಪ್ಪರಗಾಕ್ಕೆ ಬಂದರು.ಅಲ್ಲಿ ಹೈದರಾಬಾದ ನಿಜಾಮನ ರಾಜ್ಯವಿತ್ತು. ಸಾಮಾನ್ಯ ಪ್ರಜೆಗಳ ಮೇಲೆ ನಿಜಾಮ ಆಡಳಿತ ನಡೆಯಿಸುತ್ತಿದ್ದ ಅತ್ಯಾಚಾರದ ವಿರುದ್ಧ ರಾಮಾನಂದರು ಪ್ರಜೆಗಳನ್ನು ಸಂಘಟಿಸಿದರು. ಹೈದರಾಬಾದ ಕಾಂಗ್ರೆಸ್ ಪಕ್ಷ ಕಟ್ಟಿದರು.ಅತ್ಯಾಚಾರದ ವಿರುದ್ಧ ಹೋರಾಟಕ್ಕಿಳಿದರು. ನಿಜಾಮ ಸರಕಾರ ರಾಮಾನಂದರನ್ನು ಬಂಧಿಸಿ ಚಂಚಲಗುಡ್ಡಾ ಸೆರೆಮನೆಗೆ ಕಳಿಯಿಸಿತು.

೧೯೪೮ ಸಪ್ಟಂಬರ ೧೧ ರಿಂದ ಸಪ್ಟಂಬರ ೧೭ ರವರೆಗೆ ಜರುಗಿದ ಹೈದರಾಬಾದ ವಿಮೋಚನಾ ಕಾರ್ಯಾಚರಣೆ‍ಯ ನಾಯಕತ್ವವನ್ನು ಇವರು ವಹಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಇವರನ್ನು ಪೂಜ್ಯ ಭಾವನೆಯಿಂದ ನೋಡುವ ಲಕ್ಷಾಂತರ ಜನರಿದ್ದಾರೆ. ಹೈದರಾಬಾದ್ ವಿಮೋಚನೆಯ ನಂತರ ರಾಜಕೀಯ ಸೇರದೆ, ಸ್ವಾಮಿ ರಾಮಾನಂದ ತೀರ್ಥರು ಆನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.

ಸ್ವಾಮಿ ರಾಮಾನಂದ ತೀರ್ಥರು ೧೯೭೨ ಜನೆವರಿ ೨೨ರಂದು ಹೈದರಾಬಾದಿನಲ್ಲಿ ನಿಧನರಾದರು. ಮಹಾರಾಷ್ಟ್ರದಲ್ಲಿ ಇವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

Tags:

ಮಹಾತ್ಮ ಗಾ೦ಧಿಲೋಕಮಾನ್ಯ ತಿಲಕಸಿಂದಗಿಸೊಲ್ಲಾಪುರ

🔥 Trending searches on Wiki ಕನ್ನಡ:

ಓಂ ನಮಃ ಶಿವಾಯಸಂತಾನೋತ್ಪತ್ತಿಯ ವ್ಯವಸ್ಥೆ2017ರ ಕನ್ನಡ ಚಿತ್ರಗಳ ಪಟ್ಟಿವಿಷ್ಣುವರ್ಧನ್ (ನಟ)ಮೂಲಭೂತ ಕರ್ತವ್ಯಗಳುಅಮ್ಮೊನೈಟ್ಕಾನೂನುಭಂಗ ಚಳವಳಿಬೇವುಭಾರತ ಚೀನಾ ಸಂಬಂಧಗಳುವಾಟ್ಸ್ ಆಪ್ ಮೆಸ್ಸೆಂಜರ್ಶಾತವಾಹನರುಸೀತಾ ರಾಮಶಾಲೆಕನ್ನಡ ಅಕ್ಷರಮಾಲೆಭಾರತೀಯ ಭಾಷೆಗಳುಸಾವಿತ್ರಿಬಾಯಿ ಫುಲೆಯುವರತ್ನ (ಚಲನಚಿತ್ರ)ಕನ್ನಡ ಅಂಕಿ-ಸಂಖ್ಯೆಗಳುದ್ರಾವಿಡ ಭಾಷೆಗಳುಮಾಹಿತಿ ತಂತ್ರಜ್ಞಾನಬಸವೇಶ್ವರಒಂದನೆಯ ಮಹಾಯುದ್ಧಮಲ್ಲಿಕಾರ್ಜುನ ಜ್ಯೋತಿರ್ಲಿಂಗಪಶ್ಚಿಮ ಘಟ್ಟಗಳುರಾಷ್ಟ್ರೀಯ ಸೇವಾ ಯೋಜನೆವಿತ್ತೀಯ ನೀತಿವಾದಿರಾಜರುಮಲೈ ಮಹದೇಶ್ವರ ಬೆಟ್ಟವಿಜಯಪುರ ಜಿಲ್ಲೆಮಾಸ್ತಿ ವೆಂಕಟೇಶ ಅಯ್ಯಂಗಾರ್ಅಳೆಯುವ ಸಾಧನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೆ. ಎಸ್. ನರಸಿಂಹಸ್ವಾಮಿಕ್ರಿಯಾಪದಏಷ್ಯನ್ ಕ್ರೀಡಾಕೂಟರಾಮಕೃಷ್ಣ ಪರಮಹಂಸಗ್ರಹಭಾರತದಲ್ಲಿನ ಜಾತಿ ಪದ್ದತಿಮುದ್ದಣರಾಮಾಚಾರಿ (ಕನ್ನಡ ಧಾರಾವಾಹಿ)ಕನಕದಾಸರುಭಾರತೀಯ ರಿಸರ್ವ್ ಬ್ಯಾಂಕ್ಕಂಪ್ಯೂಟರ್ಚಂದ್ರಯಾನ-೨ಪ್ರಜಾವಾಣಿ೨೦೧೬ ಬೇಸಿಗೆ ಒಲಿಂಪಿಕ್ಸ್ಮಹಾಭಾರತತತ್ಪುರುಷ ಸಮಾಸನಾಗವರ್ಮ-೧ಹತ್ತಿದಿಕ್ಕುಸುದೀಪ್ಭಾರತದ ತ್ರಿವರ್ಣ ಧ್ವಜರನ್ನಭಾರತದಲ್ಲಿನ ಶಿಕ್ಷಣಕಿತ್ತೂರು ಚೆನ್ನಮ್ಮಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚಾರ್ಲಿ ಚಾಪ್ಲಿನ್ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಲೋಕಸಭೆಅಭಯ ಸಿಂಹಮೈಸೂರುಕನ್ನಡ ವ್ಯಾಕರಣಕರ್ನಾಟಕ ಸಂಗೀತಹ್ಯಾಲಿ ಕಾಮೆಟ್ಮಾನವ ಅಭಿವೃದ್ಧಿ ಸೂಚ್ಯಂಕಕಾಮಚಂದ್ರಗದ್ದಕಟ್ಟುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರ್ನಾಟಕ ಸರ್ಕಾರಭಾರತದ ಬಂದರುಗಳುಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನವ್ಯಾಸರಾಯರುಋಗ್ವೇದಹೊಂಗೆ ಮರಶೈಕ್ಷಣಿಕ ಮನೋವಿಜ್ಞಾನಹುರುಳಿಅಭಿಮನ್ಯು🡆 More