ಸ್ಟೀಫನ್‌ ಹಾಕಿಂಗ್

ಸ್ಟೀಪನ್ ವಿಲಿಯಂ ಹಾಕಿಂಗ್ (8 ಜನವರಿ 1942 - 14 ಮಾರ್ಚ್ 2018) ಒಬ್ಬ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ, ವಿಶ್ವವಿಜ್ಞಾನಿ.

ಇವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ವಿಶ್ವವಿಜ್ಞಾನ ಕೇಂದ್ರದಲ್ಲಿದ್ದರು. ಖಭೌತ ಹಾಗೂ ಶಕಲ-ವಿಜ್ಞಾನಗಳಲ್ಲಿ ಕ್ರಾಂತಿಕಾರಕ ಸಿದ್ಧಾಂತಗಳ ಮಂಡನಕಾರ. ಮೂಲಭೂತ ಚಿಂತನೆಗಳಲ್ಲಿ ಸದಾ ಮಗ್ನರಾಗಿದ್ದರು.

ಸ್ಟೀಫನ್‌ ವಿಲಿಯಂ ಹಾಕಿಂಗ್
ಸ್ಟೀಫನ್‌ ಹಾಕಿಂಗ್
NASAದಲ್ಲಿ ಸ್ಟೀಫನ್‌ ಹಾಕಿಂಗ್
ಜನನಸ್ಟೀಫನ್‌ ವಿಲಿಯಮ್ ಹಾಕಿಂಗ್
(1942-01-08) ೮ ಜನವರಿ ೧೯೪೨ (ವಯಸ್ಸು ೮೨)
ಆಕ್ಸ್‌ಫರ್ಡ್, ಇಂಗ್ಲೆಂಡ್
ಮರಣ14 March 2018(2018-03-14) (aged 76)
ಕೇಂಬ್ರಿಡ್ಜ್, ಕೇಂಬ್ರಿಡ್ಜ್ ಶೈರ್, ಇಂಗ್ಲೆಂಡ್
ವಾಸಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಶ್
ಕಾರ್ಯಕ್ಷೇತ್ರಗಳುಅನ್ವಯಿಕ ಗಣಿತ
ಸೈದ್ಧಾಂತಿಕ ಭೌತಶಾಸ್ತ್ರ
ಸಂಸ್ಥೆಗಳುಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಸೈದ್ಧಾಂತಿಕ ಭೌತಶಾಸ್ತ್ರದ ಪರಿಧಿಯ ಸಂಸ್ಥೆ
ಅಭ್ಯಸಿಸಿದ ಸಂಸ್ಥೆಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಡೆನ್ನಿಸ್ ಸ್ಕಿಯಾಮಾ
Other academic advisorsರಾಬರ್ಟ್ ಬೆರ್ಮನ್
ಡಾಕ್ಟರೆಟ್ ವಿದ್ಯಾರ್ಥಿಗಳುಬ್ರೂಸ್ ಅಲೆನ್
ರಫಾಯೆಲ್ ಬೌಸ್ಸೊ
ಫೇ ಡೌಕೆರ್
ಮಲ್ಕೋಲ್ಮ್ ಪೆರಿ
ಬರ್ನಾರ್ಡ್ ಕಾರ್
ಗ್ಯಾರಿ ಗಿಬ್ಬೊನ್ಸ್
ಹಾರ್ವೆ ರಿಯಲ್
ಡಾನ್ ಪೇಜ್
ಟಿಮ್ ಪ್ರೆಸ್ಟಿಡ್ಜ್
ರೇಮಂಡ್ ಲಾಫ್ಲಮ್ಮೆ
ಜೂಲಿಯನ್ ಲೂಟ್ಟ್ರೆಲ್
ಪ್ರಸಿದ್ಧಿಗೆ ಕಾರಣಕಪ್ಪು ಕುಳಿಗಳು
ಸೈದ್ಧಾಂತಿಕ ವಿಶ್ವಶಾಸ್ತ್ರ
ಕ್ವಾಂಟಮ್ ಗುರುತ್ವಕಷಣೆ
Influencesಡಿಕ್ರಾನ್ ತಾಹ್ತ
ಗಮನಾರ್ಹ ಪ್ರಶಸ್ತಿಗಳುಪ್ರಿನ್ಸ್ ಆಫ್ ಆಸ್ಟೂರಿಯಾಸ್ ಪ್ರಶಸ್ತಿ (1989)
ಕಾಪ್ಲಿ ಪದಕ (2006)
ಸ್ವಾತಂತ್ರ್ಯದ ಅಧ್ಯಕ್ಷೀಯ ಪದಕ (2009)
ಹಸ್ತಾಕ್ಷರ
ಚಿತ್ರ:Stephen Hawking Signature.svg

ಇತಿವೃತ್ತ

  • ಸ್ಟೀಫನ್ ವಿಲಿಯಂ ಹಾಕಿಂಗ್ ಲೇಖಕ ಮತ್ತು ಸಂಶೋಧನಾ ನಿರ್ದೇಶಕರಾಗಿದ್ದರು. ಅವರ ವೈಜ್ಞಾನಿಕ ಕೃತಿಗಳು ಸಾಮಾನ್ಯ ಸಾಪೇಕ್ಷತೆಯ ಚೌಕಟ್ಟಿನಲ್ಲಿನ ಗುರುತ್ವ ಏಕತ್ವ ಪ್ರಮೇಯಗಳ ಮೇಲೆ ರೋಜರ್ ಪೆನ್ರೋಸ್ ಸಹಯೋಗದೊಂದಿಗೆ ಮತ್ತು ಕಪ್ಪು ಕುಳಿಗಳು ವಿಕಿರಣವನ್ನು ಹೊರಸೂಸುವ ಸೈದ್ಧಾಂತಿಕ ಭವಿಷ್ಯವನ್ನು ಸಾಮಾನ್ಯವಾಗಿ ಹಾಕಿಂಗ್ ವಿಕಿರಣ ಎಂದು ಕರೆಯಲಾಗುತ್ತಿತ್ತು.
  • ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಒಕ್ಕೂಟವು ವಿವರಿಸಿರುವ ವಿಶ್ವವಿಜ್ಞಾನದ ಸಿದ್ಧಾಂತವನ್ನು ಮೊದಲ ಬಾರಿಗೆ ಹಾಕಿಂಗ್ ರಚಿಸಿದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಅನೇಕ-ಲೋಕಗಳ ವ್ಯಾಖ್ಯಾನದ ಹುರುಪಿನ ಬೆಂಬಲಿಗರಾಗಿದ್ದರು. ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‍ನ ಜೀವಮಾನದ ಸದಸ್ಯರಾಗಿದ್ದ ರಾಯಲ್ ಸೊಸೈಟಿ ಆಫ್ ಆರ್ಟ್ಸ್ (FRSA) ನ ಗೌರವಾನ್ವಿತ ಫೆಲೋ ಆಗಿದ್ದರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಧ್ಯಕ್ಷೀಯ ಪದಕ ಸ್ವಾತಂತ್ರ್ಯದ ಸ್ವೀಕರಿಸುವವರಾಗಿದ್ದರು.
  • 2002 ರಲ್ಲಿ, ಬಿಬಿಸಿಯ 100 ಅತಿ ಮಹಾನ್ ಬ್ರಿಟಿಷರ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಹಾಕಿಂಗ್ 25 ನೇ ಸ್ಥಾನವನ್ನು ಪಡೆದರು.1979 ಮತ್ತು 2009 ರ ನಡುವೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ಗಣಿತಶಾಸ್ತ್ರದ ಲ್ಯೂಕಾಶಿಯಾದ ಪ್ರಾಧ್ಯಾಪಕರಾಗಿದ್ದರು ಮತ್ತು ಜನಪ್ರಿಯ ವಿಜ್ಞಾನದ ಕೃತಿಗಳೊಂದಿಗೆ ವಾಣಿಜ್ಯ ಯಶಸ್ಸನ್ನು ಸಾಧಿಸಿದರು.
  • ಇದರಲ್ಲಿ ಅವರು ತಮ್ಮದೇ ಆದ ಸಿದ್ಧಾಂತಗಳು ಮತ್ತು ವಿಶ್ವವಿಜ್ಞಾನವನ್ನು ಸಾಮಾನ್ಯವಾಗಿ ಚರ್ಚಿಸುತ್ತಾರೆ. ಅವರ ಪುಸ್ತಕ, ಎ ಬ್ರೀಫ್ ಹಿಸ್ಟರಿ ಆಫ್ ಟೈಮ್, ಬ್ರಿಟಿಷ್ ಸಂಡೇ ಟೈಮ್ಸ್‌ನ ಅತ್ಯುತ್ತಮ-ಮಾರಾಟದ ಪಟ್ಟಿಯಲ್ಲಿ 237 ವಾರಗಳವರೆಗೆ ಇದ್ದ ದಾಖಲೆಯಿತ್ತು.
  • ಹಾಕಿಂಗ್ ಒಂದು ಅಪರೂಪದ ಮುಂಚಿನ-ಪ್ರಾರಂಭದ ನಿಧಾನಗತಿಯ ಪ್ರಗತಿ ಹೊಂದಿದ ಅಮೈಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್ಎಸ್) ಅನ್ನು ಹೊಂದಿದ್ದರು. ಇದನ್ನು ಮೋಟಾರು ನರಕೋಶ ರೋಗ ಅಥವಾ ಲೌ ಗೆಹ್ರಿಗ್ನ ಕಾಯಿಲೆ ಎಂದು ಕರೆಯಲಾಗುತ್ತದೆ. ಅದು ನಿಧಾನವಾಗಿ ಅವರನ್ನು ದಶಕಗಳಲ್ಲಿ ಪಾರ್ಶ್ವವಾಯುವಿಗೆ ಒಳಪಡಿಸಿತು.
  • ಅವರ ಮಾತಿನ ನಷ್ಟದ ನಂತರವೂ, ಭಾಷಣ-ಉತ್ಪಾದಿಸುವ ಸಾಧನದ ಮೂಲಕ ಅವರು ಕೈಯಲ್ಲಿ-ಹಿಡಿದ ಸ್ವಿಚ್‍ನ ಬಳಕೆಯ ಮೂಲಕ ಸಂವಹನ ನಡೆಸಲು ಸಾಧ್ಯವಾಯಿತು.

ಜನನ/ಬದುಕು

  • ಸ್ಟೀಫನ್ ಹಾಕಿಂಗ್ ಜನಿಸಿದ್ದು ಜನವರಿ 8, 1942ರಂದು. ಬಾಲ್ಯದಲ್ಲಿ ಎಲ್ಲ ಯುವಕರಂತೆ ಸುಟಿಯಾಗಿದ್ದ ಈತ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನ ಕೀಸ್ ಕಾಲೇಜಿನಲ್ಲಿ ಸಂಶೋಧನ ವಿದ್ಯಾರ್ಥಿಯಾಗಿ ಆಯ್ಕೆಗೊಂಡ. ಗಣಿತ ಮತ್ತು ಭೌತವಿಜ್ಞಾನಗಳಲ್ಲಿ ಪದವಿ ಗಳಿಸಿದ. ಇವನು ಸಂಶೋಧನೆ ಮತ್ತು ಅಧ್ಯಯನಕ್ಕೆ ಆಯ್ದುಕೊಂಡದ್ದು ಸೈದ್ಧಾಂತಿಕ ಭೌತವಿಜ್ಞಾನ ಮತ್ತು ವಿಶ್ವವಿಜ್ಞಾನ (ಕಾಸ್ಮಾಲಜಿ). ಆಗಲೇ ಜ್ವಲಂತ ವಿಷಯಗಳಾಗಿದ್ದ ಕೃಷ್ಣವಿವರ (ಬ್ಲ್ಯಾಕ್ ಹೋಲ್) ಹಾಗೂ ಪ್ರಪಂಚದ ಹುಟ್ಟು ಮತ್ತು ಸಾವು ಕುರಿತು ವಿಶೇಷ ಆಸಕ್ತಿ ತಳೆದ. 1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್.
  • ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದರು.
  • ಸಂಶೋಧನೆ ಅಷ್ಟೇನೂ ಚೆನ್ನಾಗಿ ಮುಂದುವರೆದಿರಲಿಲ್ಲ. ಹಾಕಿಂಗ್‌ಗೂ ಅದರಲ್ಲಿ ಅಷ್ಟು ತೀಕ್ಷ್ಣವಾದ ಆಸಕ್ತಿ ಕಂಡಿರಲಿಲ್ಲ. ವೈದ್ಯರ ವರದಿ ಅವರ ಬದುಕಿನಲ್ಲಿ ಬಂದ ಬಹುದೊಡ್ಡ ತಿರುವು. ಆಗ ಅವರ ಮುಂದೆ ಇದ್ದದ್ದು ಎರಡೇ ಹಾದಿಗಳು. ಒಂದು, ದುಃಖದಿಂದ ಕೆಲಸವೆಲ್ಲವನ್ನು ನಿಲ್ಲಿಸಿ ಕೊರಗುತ್ತ ಸಾವಿಗಾಗಿ ಕಾಯುವುದು.
  • ಇನ್ನೊಂದು ಉಳಿದ ಸ್ವಲ್ಪವೇ ಸಮಯವನ್ನು ಸರಿಯಾಗಿ ಬಳಸಿ ಸಾಧನೆ ಮಾಡುವುದು. ಹಾಕಿಂಗ್ ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗುರುತ್ವ ಭೌತವಿಜ್ಞಾನ ಪ್ರಾಧ್ಯಾಪಕನಾಗಿ 1977ರಲ್ಲಿ ನೇಮಕಗೊಂಡ. ಹಿಂದೆ ಐಸಾಕ್ ನ್ಯೂಟನ್ (1642-1727) ಅಲಂಕರಿಸಿದ್ದ ಲುಕೇಶಿಯನ್ ಪ್ರಾಧ್ಯಾಪಕ ಪೀಠಾಧ್ಯಕ್ಷ ಪದವಿ ಇವನಿಗೆ ಲಭಿಸಿತು (1979). ಜೇನ್ ವೈಲ್ಡೆ ಜೊತೆ ವಿವಾಹ (1965); ಮೂವರು ಆರೋಗ್ಯವಂತ ಮಕ್ಕಳು. ಇವರಿಗೆ ಸ್ಫೂರ್ತಿಯಾಗಿ ನಿಂತವರು, ಇವರ ಜೊತೆಗಾತಿ ಜೇನ್. ಆಕೆಯ ಚೇತೋಹಾರಿಯಾದ ಮಾತುಗಳು, ಪ್ರೋತ್ಸಾಹ ಹಾಕಿಂಗ್‌ ಅವರನ್ನು ಬಡಿದೆಬ್ಬಿಸಿದವು. ಇವನು ತನ್ನ ಕುರ್ಚಿಗೆ ಅಳವಡಿಸಿರುವ ಗಣಕಧ್ವನಿಗ್ರಹಣಯಂತ್ರದ ಮೂಲಕವೇ ಮಾತಾಡುತ್ತಿದ್ದರು. ಭೌತಿಕವಾಗಿ ಪೂರ್ತಿ ಪರಾವಲಂಬಿಯಾಗಿದ್ದರೂ ಬೌದ್ಧಿಕವಾಗಿ ಚುರುಕಾಗಿದ್ದರು. ವಿಶ್ವವಿಜ್ಞಾನ ಕುರಿತಂತೆ ಹಲವಾರು ಸಂಶೋಧನ ಪ್ರಬಂಧಗಳನ್ನೂ ಪರಾಮರ್ಶನ ಗ್ರಂಥಗಳನ್ನೂ ರಚಿಸಿದ್ದಾನೆ. ಇವನ ಅತ್ಯಂತ ಜನಪ್ರಿಯ ಮತ್ತು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ವಾಗಿರುವ ಒಂದು ಕೃತಿ ‘ಕಾಲದ ಸಂಕ್ಷೇಪ ಇತಿಹಾಸ’ (ಎ ಬ್ರೀಫ್ ಹಿಸ್ಟರಿ ಆಫ್ ಟೈಮ್). ದಿ ಲಾರ್ಜ್ ಸ್ಕೇಲ್ ಸ್ಟ್ರಕ್ಚರ್ ಆಫ್ ಸ್ಪೇಸ್‌ಟೈಮ್, ಸಾಸರ್ ಸ್ಟಾರ್ ಅ್ಯಂಡ್ ಸೂಪರ್ ಗ್ರ‍್ಯಾವಿಟಿ, ಬ್ಲ್ಯಾಕ್ ಹೋಲ್ಸ್ ಅ್ಯಂಡ್ ಬೇಬಿ ಯೂನಿವರ್ಸಸ್’ ಇವು ಇವನ ಗಮನಾರ್ಹ ಕೃತಿಗಳು.
  • ಆದರೆ, ಅದಕ್ಕಿಂತ ಹೆಚ್ಚಾಗಿ ಸಾವು ಬರುವುದಕ್ಕಿಂತ ಮೊದಲು ಯಾವ ಸಾಧನೆಯನ್ನೂ ಮಾಡದಿರುವುದರ ಭಯವಿತ್ತು. ಮುಂಬರುವ ತಿಂಗಳುಗಳಲ್ಲಿ ಅವರ ಆರೋಗ್ಯ ಎಷ್ಟೆಷ್ಟು ಕುಸಿಯುತ್ತಿತ್ತೋ ಅವರ ಸಾಧನೆಯ ಮಟ್ಟ ಅಷ್ಟಷ್ಟು ಏರುತ್ತಿತ್ತು. 1974ರಲ್ಲಿ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ವಯಸ್ಸಿನ ಫೆಲೋ ಆಗಿ ಆಯ್ಕೆಯಾದರು.
  • 1982ರಲ್ಲಿ ಬ್ರಿಟಿಷ್ ಸರಕಾರ, ತನ್ನ ಅತ್ಯುಚ್ಛ ಗೌರವವಾದ ‘ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯರ್‌’ ಇವರಿಗೆ ನೀಡಿ ಗೌರವಿಸಿತು. ಅವರ ತಲಸ್ಪರ್ಶಿಯಾದ ಅಧ್ಯಯನದಿಂದ ಸೈದ್ಧಾಂತಿಕ ಖಗೋಳಶಾಸ್ತ್ರದಲ್ಲಿ ಅದರಲ್ಲೂ ಕಪ್ಪು ರಂಧ್ರಗಳ ಬಗ್ಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.
  • ಆಗ ಅವರು ಬರೆದ ಗ್ರಂಥ, ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಜ್ಞಾನದ ಗ್ರಂಥಗಳಲ್ಲಿ ಒಂದು ವಿಶೇಷ ಮೈಲಿಗಲ್ಲು. ಅದು ಪ್ರಪಂಚದ ಅತ್ಯಂತ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಗಿದೆ.
  • ಇವನ ವಿಶೇಷ ಅಧ್ಯಯನಕ್ಷೇತ್ರ ಕೃಷ್ಣವಿವರ ಮತ್ತು ವಿಶ್ವ ಕುರಿತು ಇದೆ. ಕೃಷ್ಣವಿವರ (ಕಪ್ಪುಕುಳಿ) ಪೂರ್ತಿ ಕಪ್ಪಲ್ಲ, ಅದರಿಂದ ಹಲವಾರು ಕಣಗಳು ತಪ್ಪಿಸಿಕೊಂಡು ಹೊರಸಿಡಿಯುತ್ತವೆ ಎಂಬ ವಿನೂತನ ವಾದವನ್ನು ತರಂಗಚಲನಸಿದ್ಧಾಂತ ಆಧರಿಸಿ ಮಂಡಿಸಿದ (1974). ಇದು ನಿಜವಾದರೆ ಒಂದಲ್ಲ ಒಂದು ದಿವಸ ಕೃಷ್ಣವಿವರದ ಅಸ್ತಿತ್ವವೇ ಅಳಿಸಿಹೋಗಬೇಕು! ಖಭೌತವಿಜ್ಞಾನ ರಂಗದಲ್ಲಿ ಈ ವಿಚಿತ್ರ ವಾದ ಕ್ಷೋಭೆಗೆ ಕಾರಣವಾಯಿತು-ಇವನ ಮುಂಚೂಣಿ ವಿಜ್ಞಾನಿಗಳು ಯಾರೂ ಇವನ ವಾದವನ್ನು ಸಮರ್ಥಿಸಲಿಲ್ಲ. ಭಾರತೀಯ ವಿಜ್ಞಾನಿಗಳೂ ಆಗ  ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ೨೦೦೪ರಲ್ಲಿ ಇವನು ತನ್ನ ವಾದ ಅಸಮರ್ಪಕವೆಂಬ ಅಂಶವನ್ನು ಪ್ರಕಟಿಸಿ ಅದಕ್ಕೆ ತಿದ್ದುಪಡಿ ಸೂಚಿಸಿದನು (ಜುಲೈ 2004).
  • ಏಕೀಕೃತಕ್ಷೇತ್ರ ಸಿದ್ಧಾಂತದಲ್ಲಿಯೂ (ಗುರುತ್ವಕ್ಷೇತ್ರಕ್ಕೆ ಶಕಲ ಸಿದ್ಧಾಂತವನ್ನು ಸಂಯೋಜಿಸುವ ಚಿಂತನೆ) ಇವನು ವೈಜ್ಞಾನಿಕ ಊಹೆಗಳನ್ನು ಮುಂದಿಟ್ಟಿದ್ದಾನೆ.
  • ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ನಲವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು. ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು, ಅವರು ಸದಾಕಾಲವೂ ಗಾಲಿಕುರ್ಚಿಯ ಮೇಲೆಯೇ ಇರಬೇಕಾಗಿತ್ತು. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳಸಬೇಕಿತ್ತು.
  • ಆದರೆ, ಮಿದುಳು ಮಾತ್ರ ನಿಖರತೆ ಕಾಪಾಡಿಕೊಂಡಿತ್ತು. ಇಂದಿನವರೆವಿಗೂ ಹಾಕಿಂಗ್‌ ಅವರು ಪ್ರಪಂಚದ ಇಂದಿನ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿದ್ದರು, ಲಕ್ಷಾಂತರ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕೆಲವೊಮ್ಮೆ ಜೀವನದಲ್ಲಿ ಬರುವ ಆಘಾತಗಳು ಧನಾತ್ಮಕ ಬದಲಾವಣೆ ತರುತ್ತವೆ.

ನಿಧನ

ವಿಜ್ಞಾನದ ವಿಸ್ಮಯರೆಂದೆನಿಸಿದ್ದ, ಆಲ್ಬರ್ಟ್ ಐನ್‍ಸ್ಟೈನ್ ನಂತರದ ಮಹಾನ್ ಭೌತವಿಜ್ಞಾನಿ ಎನಿಸಿದ್ದ ಸ್ಟೀಫನ್ ಹಾಕಿಂಗ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.

ಹೆಚ್ಚಿನ ಓದಿಗೆ

  • ವಿಜ್ಞಾನಲೋಕದ ವಿಜೃಂಭಿತ ತಾರೆ ಸ್ಟೀಫನ್ ಹಾಕಿಂಗ್ನಾ-ನಾಗೇಶ ಹೆಗಡೆ-15 Mar, 2018[೧]
  • ಶತಮಾನದ ವಿಜ್ಞಾನಿ ಇನ್ನಿಲ್ಲ-ಪಿಟಿಐ-15 Mar, 2018[೨]

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಸ್ಟೀಫನ್‌ ಹಾಕಿಂಗ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಸ್ಟೀಫನ್‌ ಹಾಕಿಂಗ್ ಇತಿವೃತ್ತಸ್ಟೀಫನ್‌ ಹಾಕಿಂಗ್ ಜನನಬದುಕುಸ್ಟೀಫನ್‌ ಹಾಕಿಂಗ್ ಉಲ್ಲೇಖಗಳುಸ್ಟೀಫನ್‌ ಹಾಕಿಂಗ್ ಹೊರಗಿನ ಕೊಂಡಿಗಳುಸ್ಟೀಫನ್‌ ಹಾಕಿಂಗ್ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ

🔥 Trending searches on Wiki ಕನ್ನಡ:

ಅಮೃತಧಾರೆ (ಕನ್ನಡ ಧಾರಾವಾಹಿ)ಗೋಲ ಗುಮ್ಮಟಹನುಮಾನ್ ಚಾಲೀಸಅಲ್ಲಮ ಪ್ರಭುಹಿಂದೂ ಕೋಡ್ ಬಿಲ್ಭಾರತದ ಮಾನವ ಹಕ್ಕುಗಳುಬೆಸಗರಹಳ್ಳಿ ರಾಮಣ್ಣಜಾನಪದಶಿವಕೋಟ್ಯಾಚಾರ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಏಣಗಿ ಬಾಳಪ್ಪಪೊನ್ನಭಾರತದ ಚಲನಚಿತ್ರೋದ್ಯಮಸಾರಾ ಅಬೂಬಕ್ಕರ್ಎಚ್.ಎಸ್.ಶಿವಪ್ರಕಾಶ್ಕದಂಬ ರಾಜವಂಶಕುಂಟೆ ಬಿಲ್ಲೆಇತಿಹಾಸಸಿಂಧೂತಟದ ನಾಗರೀಕತೆಸವದತ್ತಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ರೈಸ್ತ ಧರ್ಮಕೊಡಗುಕನ್ನಡ ಚಿತ್ರರಂಗಹಾಕಿಕ್ರಿಕೆಟ್ಮಧ್ವಾಚಾರ್ಯಗೌತಮ ಬುದ್ಧಹಿಂದಿ ಭಾಷೆಕರ್ನಾಟಕದ ಏಕೀಕರಣಬರಗೂರು ರಾಮಚಂದ್ರಪ್ಪವಿಜಯಪುರಪಾಟೀಲ ಪುಟ್ಟಪ್ಪಶಬ್ದಮಣಿದರ್ಪಣಕನ್ನಡದಲ್ಲಿ ಮಹಿಳಾ ಸಾಹಿತ್ಯಪಠ್ಯಪುಸ್ತಕಸಂಶೋಧನೆತಾಳಗುಂದ ಶಾಸನಜಾಯಿಕಾಯಿಐಹೊಳೆ ಶಾಸನಚಿ.ಉದಯಶಂಕರ್ಭಾರತದ ಸ್ವಾತಂತ್ರ್ಯ ದಿನಾಚರಣೆಮೇಘಾ ಶೆಟ್ಟಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯೋಗರಕ್ಷಾ ಬಂಧನಅರ್ಜುನಎಂ.ಬಿ.ನೇಗಿನಹಾಳಗಿಡಮೂಲಿಕೆಗಳ ಔಷಧಿದೇವನೂರು ಮಹಾದೇವಮಾಸಕ್ರಿಯಾಪದಬಿ.ಜಯಶ್ರೀಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕನ್ನಡ ಗುಣಿತಾಕ್ಷರಗಳುಬಾಲಕೃಷ್ಣಕರ್ನಾಟಕದಲ್ಲಿ ವನ್ಯಜೀವಿಧಾಮಗಳುಎ.ಕೆ.ರಾಮಾನುಜನ್ಸಿದ್ದರಾಮಯ್ಯಸ್ವಚ್ಛ ಭಾರತ ಅಭಿಯಾನರಾಷ್ಟ್ರೀಯ ಸೇವಾ ಯೋಜನೆರಾಷ್ಟ್ರೀಯ ಶಿಕ್ಷಣ ನೀತಿಭೂತಾರಾಧನೆಕಾಂತಾರ (ಚಲನಚಿತ್ರ)ಜಯಮಾಲಾವಚನಕಾರರ ಅಂಕಿತ ನಾಮಗಳುವಿಜಯ ಕರ್ನಾಟಕವಜ್ರಮುನಿಹೊಂಗೆ ಮರನದಿಆದಿ ಶಂಕರಹಕ್ಕ-ಬುಕ್ಕಚಾಮರಾಜನಗರಪರಿಸರ ಶಿಕ್ಷಣಕಬಡ್ಡಿದಾಳಿಂಬೆಹದಿಹರೆಯರಾಮಸೂತ್ರದ ಗೊಂಬೆಯಾಟ🡆 More