ಸೆಲೆನಾ ಗೊಮೆಜ್

ಸೆಲೆನಾ ಮಾರೀ ಗೊಮೆಜ್ (ಜನನ ಜುಲೈ 22, 1992) ಒಬ್ಬ ಅಮೇರಿಕನ್ ನಟಿ ಮತ್ತು ಗಾಯಕಿ.

ಈಕೆ ಎಮ್ಮಿ ಪ್ರಶಸ್ತಿ ವಿಜೇತ ಡಿಸ್ನಿ ವಾಹಿನಿಯ ಮೂಲ ಸರಣಿ, ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ ನಲ್ಲಿನ ಅಲೆಕ್ಸ್ ರುಸ್ಸೋ ಪಾತ್ರದಿಂದ ಚಿರಪರಿಚಿತ. ಈಕೆ ಕಿರುತೆರೆಯ ಅನದರ್ ಸಿಂಡ್ರೆಲ್ಲಾ ಸ್ಟೋರಿ ಮತ್ತು ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾಳೆ.

ಸೆಲೆನಾ ಗೊಮೆಜ್
ಸೆಲೆನಾ ಗೊಮೆಜ್
Selena Gomez attending "The 6th Annual Hollywood Style Awards" in Beverly Hills, California on October 10, 2009.
ಹಿನ್ನೆಲೆ ಮಾಹಿತಿ
ಜನ್ಮನಾಮSelena Marie Gomez
ಸಂಗೀತ ಶೈಲಿPop, dance, rock, alternative
ವೃತ್ತಿActress, singer, songwriter
ಸಕ್ರಿಯ ವರ್ಷಗಳು2002–present
L‍abelsHollywood Records (2008-present)
Associated actsSelena Gomez & the Scene, Demi Lovato
ಅಧೀಕೃತ ಜಾಲತಾಣOffical Website

ಡಿಸ್ನಿಗೆ ಮುಂಚೆ, ಬರ್ನೆಯ್ & ಫ್ರೆಂಡ್ಸ್ ನಲ್ಲಿ ಬಾಲ ನಟಿಯಾಗಿ ಪಾತ್ರ ಮಾಡಿದ್ದಾಳೆ.' ಅವಳು 2008ರಲ್ಲಿ, ಹಾಲಿವುಡ್ ರೆಕಾರ್ಡ್ಸ್ ಜೊತೆ ಒಂದು ಧ್ವನಿಮುದ್ರಿಕೆ ಒಪ್ಪಂದಕ್ಕೆ ಸಹಿ ಹಾಕಿದಳು ಮತ್ತು ಟಿಂಕರ್ ಬೆಲ್ , ಅನದರ್ ಸಿಂಡ್ರೆಲ್ಲಾ ಸ್ಟೋರಿ ಮತ್ತು ವಿಸರ್ಡ್ಸ್ ಆಫ್ ವೇವೆರ್ಲಿ ಪ್ಲೇಸ್ ನ ಧ್ವನಿ ಮುದ್ರಣಗಳಿಗೆ ತನ್ನ ಧ್ವನಿಯನ್ನು ನೀಡಿದ್ದಾಳೆ. ಅವಳ ತಂಡ, ಸೆಲೆನಾ ಗೊಮೆಜ್ & ದಿ ಸೀನ್, ತಮ್ಮ ಮೊದಲ ಸ್ಟುಡಿಯೋ ಆಲ್ಬಮ್ ಕಿಸ್ & ಟೆಲ್ ಅನ್ನು ಸೆಪ್ಟೆಂಬರ್ 29, 2009ರಲ್ಲಿ ಬಿಡುಗಡೆ ಮಾಡಿತು.

ಆರಂಭಿಕ ಜೀವನ

ಗೊಮೆಜ್ ಟೆಕ್ಸಾಸ್ ನ ಗ್ರಾಂಡ್ ಪ್ರೈರೀಯಲ್ಲಿ ರಿಕಾರ್ಡೊ ಗೊಮೆಜ್ ಮತ್ತು ಮಾನ್ಡಿ ಟೀಫಿ (ಅಲಿಯಾಸ್ ಕಾರ್ನೆಟ್)ಯ ಮಗಳಾಗಿ ಜನಿಸಿದಳು, ಈಕೆಯ ತಾಯಿ ಒಬ್ಬ ಪೂರ್ವ ರಂಗಭೂಮಿ ನಟಿ. ಗೊಮೆಜ್‌ಗೆ ಜನ್ಮ ನೀಡಿದಾಗ ಅವಳಿಗೆ ಕೇವಲ 16 ವರ್ಷ ವಯಸ್ಸು. ಗೊಮೆಜ್ ಅವರಿಗೆ ಏಕೈಕ ಪುತ್ರಿ. ಗೊಮೆಜ್‌ನ ಹೆತ್ತ ತಂದೆ ತಾಯಿ ಅವಳು ಐದು ವರ್ಷದವಳಿದ್ದಾಗ 1997ರಲ್ಲಿ ವಿಚ್ಛೇದನ ಪಡೆದರು. ಆಕೆಯ ತಾಯಿ ಮ್ಯಾನ್ಡಿ 2006ರಲ್ಲಿ ಬ್ರಯಾನ್ ಟೀಫಿಯನ್ನು ಮರು ಮದುವೆಯಾದರು. ಗೊಮೆಜ್‌ಳಿಗೆ ತೆಜನೋ ಗಾಯಕಿ ಸೆಲೆನಾಳ ಹೆಸರನ್ನೇ ಇಡಲಾಗಿದೆ. ಈಕೆಯ ತಂದೆ ಮೆಕ್ಸಿಕನ್ ಮೂಲದವರು ಮತ್ತು ತಾಯಿ ಇಟಾಲಿಯನ್ ವಂಶದವರು. ಗೊಮೆಜ್ ಹೇಳುವಂತೆ ಅವಳು ಚಿಕ್ಕವಳಿದ್ದಾಗ ರಂಗಭೂಮಿ ನಾಟಕಗಳಲ್ಲಿ ತನ್ನ ತಾಯಿಯ ಅಭಿನಯವನ್ನು ವೀಕ್ಷಿಸುತ್ತಾ ಅದರೆಡೆಗೆ ಆಸಕ್ತಿಯನ್ನು ಬೆಳಸಿಕೊಂಡಳು. "ನನ್ನ ತಾಯಿ[ಮ್ಯಾನ್ಡಿ] ನಾಟಕಗಳಲ್ಲಿ ಹೆಚ್ಚಾಗಿ ಪಾತ್ರ ಮಾಡುತ್ತಿದ್ದರು, ಮತ್ತು ನಾನು ಅವರ ಪೂರ್ವಾಭ್ಯಾಸವನ್ನು ವೀಕ್ಷಿಸುತ್ತಿದ್ದೆ. ಅವರು ಪ್ರದರ್ಶನಕ್ಕೆ ತಯಾರಾಗಲು ಪ್ರಸಾಧನ ಸಾಮಗ್ರಿ ಲೇಪಿಸಿಕೊಳ್ಳುತ್ತಿದ್ದ ಹಾಗೆ, ನಾನು ಅವರ ಹಿಂದೆ ಕೂತು ಬಣ್ಣ ಹಚ್ಚಿಕೊಳ್ಳುತ್ತಿದ್ದೆ. ಅವರು ಹೇಳುತ್ತಿದ್ದರು, 'ನನ್ನ ಸಾಲುಗಳನ್ನು ನನಗಿಂತ ಹೆಚ್ಚಾಗಿ ನೀನು ಜ್ಞಾಪಕದಲ್ಲಿಟ್ಟುಕೊಂಡಿದ್ದೀಯ!' [...] ಒಂದು ದಿನ ನಾನು ಹೇಳಿದೆ [ಅವರಿಗೆ], "ನಾನು ನಿಮ್ಮ ಹಾಗೆ ಆಗಬೇಕು!."

ಸಾಗಿ ಬಂದ ವೃತ್ತಿ ಮಾರ್ಗ

ನಟನೆ

ಸೆಲೆನಾ ಗೊಮೆಜ್ 
ಗೊಮೆಜ್ ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ ನ ಸ್ಟುಡಿಯೋ ಸೆಟ್ ನಲ್ಲಿ, ಏಪ್ರಿಲ್, 2007ರಲ್ಲಿ ಪ್ರದರ್ಶನದ ಮೊದಲ ಅವಧಿಯಲ್ಲಿ ಸಂಚಿಕೆಯೊಂದರ ಚಿತ್ರೀಕರಣಕ್ಕೆ ಮುಂಚೆ ಕಾಣಿಸಿಕೊಂಡಿದ್ದಳು.

ಗೊಮೆಜ್ ನಟನಾ ವೃತ್ತಿಯನ್ನು ತನ್ನ ಏಳನೇ ವರ್ಷದಲ್ಲಿ ಪ್ರಾರಂಭಿಸಿದಳು,ಬರ್ನೆಯ್ & ಫ್ರೆಂಡ್ಸ್ ನಲ್ಲಿ ಗಿಯನ್ನ ಆಗಿ ಪಾತ್ರ ನಿರ್ವಹಿಸಿದಳು. ಅವಳು ಹೇಳುವಂತೆ ಈ ಪ್ರದರ್ಶನದಲ್ಲೇ ಅವಳು ನಟಿಸುವುದು ಹೇಗೆಂಬ ಬಗ್ಗೆ "ಎಲ್ಲವನ್ನು" ಕಲಿತುಕೊಂಡಳು. ಸೆಲೆನಾ ಗೊಮೆಜ್ ಅಭಿನಯಿಸಿದ ಬರ್ನೆಯ್ & ಫ್ರೆಂಡ್ಸ್ ನ 7ನೇ ಸರಣಿಯು, ಕೆಲ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ, ಗೊಮೆಜ್ ಅಭಿನಯಿಸಿದ್ದ ಸಂಚಿಕೆಗಳು ಅವಳು 5ನೇ ಗ್ರೇಡ್ ಓದುವ ತನಕವೂ ಪ್ರಸಾರವಾಗಲಿಲ್ಲ. ಇದು ಅವಳು ಬರ್ನೆಯ್‌ ನಲ್ಲಿ 5ನೇ ಗ್ರೇಡ್ ನಲ್ಲಿದ್ದಳೋ ಅಥವಾ 1ನೇ ಗ್ರೇಡ್‌ನಲ್ಲಿದ್ದಳೋ ಎಂಬ ಕೆಲವು ಸಣ್ಣ ವಿವಾದ/ಗೊಂದಲಗಳನ್ನು ಹುಟ್ಟುಹಾಕಿತು. ಅವಳು ನಂತರದಲ್ಲಿ ಚಿಕ್ಕ ಪಾತ್ರಗಳನ್ನು Spy Kids 3-D: Game Over ಮತ್ತು TV ಚಿತ್ರ ವಾಕರ್, ಟೆಕ್ಸಾಸ್ ರೇಂಜರ್: ಟ್ರಯಲ್ ಬೈ ಫೈರ್ ನಲ್ಲಿ ನಿರ್ವಹಿಸಿದಳು. ಗೊಮೆಜ್‌ ಳನ್ನು 2004ರಲ್ಲಿ ಒಂದು ರಾಷ್ಟ್ರವ್ಯಾಪಿ ಅನ್ವೇಷಣೆಯಲ್ಲಿ ಡಿಸ್ನಿ ವಾಹಿನಿಯು ಬೆಳಕಿಗೆ ತಂದಿತು. ಗೊಮೆಜ್ ಅತಿಥಿ ನಟಿಯಾಗಿ ದಿ ಸೂಟ್ ಲೈಫ್ ಆಫ್ ಜ್ಯಾಕ್ & ಕೋಡಿ ಯಲ್ಲಿ ಕಾಣಿಸಿಕೊಂಡಳು ಮತ್ತು ಹನ್ನ ಮೊಂಟಾನ ದಲ್ಲಿ ಒಂದು ಅತಿಥಿ ಪಾತ್ರವನ್ನು ನಿರ್ವಹಿಸಿದಳು - ಅದು ನಂತರದಲ್ಲಿ ಎರಡರಿಂದ ಮೂರನೇ ಅವಧಿಗೆ ಪುನರಾವರ್ತಿತ ಪಾತ್ರವಾಯಿತು. ಗೊಮೆಜ್‌ಳನ್ನು 2007ರ ಪ್ರಾರಂಭದಲ್ಲಿ ಡಿಸ್ನಿ ವಾಹಿನಿಯ ಸರಣಿ ವಿಸರ್ಡ್ಸ್ ಆಫ್ ದಿ ವವೆರ್ಲಿ ಪ್ಲೇಸ್ ನ ಮೂರು ಮುಖ್ಯ ಪಾತ್ರಗಳಲ್ಲಿ ಒಂದಾದ, ಅಲೆಕ್ಸ್ ರುಸ್ಸೋ ಪಾತ್ರಕ್ಕಾಗಿ ಆಯ್ಕೆ ಮಾಡಲಾಯಿತು.

ಗೊಮೆಜ್ 2008ರಲ್ಲಿ ಅನದರ್ ಸಿಂಡ್ರೆಲ್ಲಾ ಸ್ಟೋರಿ ಯಲ್ಲಿ ಕಾಣಿಸಿಕೊಂಡಳು, ಇದು 2004ರ ಹಿಲರಿ ಡಫ್ಫ್ ಚಿತ್ರದ ನೇರ DVDಯ-ಮುಂದಿನ ಭಾಗವಾಗಿದ್ದು,ಡ್ರಿವ್ ಸೀಲೇಯ್ ಗೆ ಎದುರಾಗಿ ಪಾತ್ರ ನಿರ್ವಹಿಸಿದಳು. ಅವಳು ಹಾರ್ಟನ್ ಹಿಯರ್ಸ್ ಏ ಹೂ! ನಲ್ಲಿ ಮೇಯರ್‌ನ ತೊಂಬತ್ತಾರು ಹೆಣ್ಣು ಮಕ್ಕಳಿಗೆ ಪರದೆಯ ಮೇಲೆ ಹಿನ್ನೆಲೆ ಧ್ವನಿ ನೀಡುವ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದಳು. ಇದು ಅದೇ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. ಏಪ್ರಿಲ್‌ನಲ್ಲಿ, ಫೋರ್ಬ್ಸ್ ನ ಲ್ಯಾಸಿ ರೋಜ್, ಗೊಮೆಜ್‌ಗೆ "ವೀಕ್ಷಿಸಲು ಯೋಗ್ಯವಾದ ಎಂಟು ಉತ್ತೇಜಕ ಬಾಲ ತಾರೆಯರ" ಪಟ್ಟಿಯಲ್ಲಿ ಐದನೆಯ ಸ್ಥಾನವನ್ನು ನೀಡಿತು. ಜೊತೆಗೆ ರೋಜ್ ಗೊಮೆಜ್‌ಳನ್ನು "ಒಂದು ಬಹುಪ್ರತಿಭೆಯುಳ್ಳ ಹದಿಹರೆಯದ ಹುಡುಗಿ" ಎಂದು ಬಣ್ಣಿಸಿದರು. ಜೂನ್, 2009ರಲ್ಲಿ, ಗೊಮೆಜ್ ಕಿರುತೆರೆಗೋಸ್ಕರ ನಿರ್ಮಾಣವಾದ ಡಿಸ್ನಿ ವಾಹಿನಿಯ ಚಿತ್ರ, ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ನಲ್ಲಿ ತನ್ನ ಆಪ್ತ ಸ್ನೇಹಿತೆ ಡೆಮಿ ಲೋವಾಟೋಜೊತೆ ಕಾಣಿಸಿಕೊಂಡಳು. ಆಗಸ್ಟ್ 28ರಂದು,ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ನಲ್ಲಿ ಕಾಣಿಸಿಕೊಂಡ ಒಂದು ತಿಂಗಳ ನಂತರ, ಗೊಮೆಜ್Wizards of Waverly Place: The Movie ಕಾರ್ಯಕ್ರಮವನ್ನು ಆಧರಿಸಿ ಕಿರುತೆರೆಗೋಸ್ಕರ ನಿರ್ಮಿಸಿದ ಚಿತ್ರದಲ್ಲಿ ಕಾಣಿಸಿಕೊಂಡಳು.

ಗೊಮೆಜ್ 2009ರಲ್ಲಿ ಅತಿಥಿ ಪಾತ್ರವನ್ನು ಒಂದು ಸಂಚಿಕೆಯಲ್ಲಿ ನಿರ್ವಹಿಸಿದಳು, ಲೋವಟೋನ ಡಿಸ್ನಿ ವಾಹಿನಿಸೋನ್ನಿ ವಿಥ್ ಎ ಚಾನ್ಸ್ ನಲ್ಲಿ, "ಬ್ಯಾಟ್ಟಲ್ ಆಫ್ ದಿ ನೆಟ್ವರ್ಕ್ ಸ್ಟಾರ್ಸ್" ಎಂಬ ಹೆಸರಿನ ಕಿರುತೆರೆ ಪ್ರದರ್ಶನದಲ್ಲಿ ಕಾಣಿಸಿಕೊಂಡಳು. ಗೋಮೆಜ್, ದೂರದರ್ಶನದಲ್ಲಿ ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ ನ ಇಬ್ಬರು ಸಹ ನಟರ ಜೊತೆಯಾಗಿ ಮೂರು ದಾರಿಗಳಲ್ಲಿ ದಾಟುವ ಸಂಚಿಕೆಯಲ್ಲಿಹನ್ನ ಮೊಂಟಾನ ಜೊತೆ ಕಾಣಿಸಿಕೊಂಡಳು ಮತ್ತು ದಿ ಸೂಟ್ ಲೈಫ್ ಆನ್ ಡೆಕ್ , ವಿಸರ್ಡ್ಸ್ ಆನ್ ಡೆಕ್ ವಿಥ್ ಹನ್ನ ಮೊಂಟಾನ ಎಂದು ಹೆಸರಾಗಿದೆ. ಫೆಬ್ರವರಿ 2009ರಲ್ಲಿ, ರಮೋನ ಅಂಡ್ ಬೀಸಸ್ ನಲ್ಲಿ ಎರಡು ಪ್ರಮುಖ ನಾಯಕಿಯರಲ್ಲಿ ಒಬ್ಬಳಾಗಿ ನಟಿಸಲು ಸಹಿ ಹಾಕಿದಳು. ಚಿತ್ರವು ಬೆವೆರ್ಲಿ ಕ್ಲೆಯರಿ ಅವರ ಮಕ್ಕಳ ಕಾದಂಬರಿ ಸರಣಿಯ ರೂಪಾಂತರವಾಗಿದೆ. . ಅಕ್ಟೋಬರ್, 2009ರಲ್ಲಿ, ವಾಟ್ ಬಾಯ್ಸ್ ವಾಂಟ್ ನ ಪ್ರಮುಖ ಪಾತ್ರದಲ್ಲಿ ಗೊಮೆಜ್ ನಟಿಸಲಿದ್ದಾಳೆಂದು ದೃಢಪಡಿಸಲಾಯಿತು.

ಸಂಗೀತ

ಗೊಮೆಜ್ 2008ರಲ್ಲಿ "ಕ್ರುಯೆಲ್ಲ ಡಿ ವಿಲ್" ಎಂಬ ಧ್ವನಿ ಮುದ್ರಿಕೆಯ ಅವತರಣಿಕೆಯನ್ನು ಪ್ರಸ್ತುತಪಡಿಸಿದಳು - ಇದು ಒಂದು ಸಂಗೀತ ವೀಡಿಯೊವನ್ನು - ಡಿಸ್ನಿಮೆನಿಯ6 ಎಂಬ ಆಲ್ಬಮ್ ಸಂಗ್ರಹಣಕ್ಕೆ ಒಳಗೊಂಡಿತ್ತು. ಗೊಮೆಜ್ಅನದರ್ ಸಿಂಡ್ರೆಲ್ಲಾ ಸ್ಟೋರಿ ಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಮೂರು ಹಾಡುಗಳನ್ನು ಧ್ವನಿ ಮುದ್ರಿಸಿದಳು. ಗೊಮೆಜ್ "ಫ್ಲೈ ಟು ಯುವರ್ ಹಾರ್ಟ್" ಎಂಬ 2008ರ ಅನಿಮೇಟೆಡ್ ಚಿತ್ರ ಟಿಂಕರ್ ಬೆಲ್ ಗೂ ಸಹ ಧ್ವನಿಮುದ್ರಿಸಿದ್ದಾಳೆ. ಜುಲೈ 2008ರಲ್ಲಿ - ಅವಳ ಹದಿನಾರನೆಯ ಹುಟ್ಟಿದಹಬ್ಬಕ್ಕೂ ಮುಂಚೆ, ಅವಳು ಒಂದು ಧ್ವನಿಮುದ್ರಣದ ಒಪ್ಪಂದಕ್ಕೆ ಹಾಲಿವುಡ್ ರೆಕಾರ್ಡ್ಸ್ ಜೊತೆ ಸಹಿ ಹಾಕಿದಳು, ಇದು ಒಂದು ಸಂಗೀತದ ಕಂಪನಿ ಡಿಸ್ನಿ ಯ ಒಡೆತನದಲ್ಲಿತ್ತು. ಗೊಮೆಜ್ 2008ರಲ್ಲಿ ಜೋನಾಸ್ ಸಹೋದರರ ಸಂಗೀತ ವೀಡಿಯೊ ಬರ್ನಿನ್' ಅಪ್ ನಲ್ಲೂ ಕಾಣಿಸಿಕೊಂಡಳು. ಗೊಮೆಜ್ 2009ರಲ್ಲಿ ಪ್ರಿನ್ಸೆಸ್ ಪ್ರೊಟೆಕ್ಷನ್ ಕಾರ್ಯಕ್ರಮ ಕ್ಕೆ "ಒನ್ ಅಂಡ್ ದಿ ಸೆಮ್" ಎಂಬ ಯುಗಳಗೀತೆಯ ಧ್ವನಿ ಮುದ್ರಿಕೆಗಾಗಿ ಲೋವಟೋ ಜೊತೆ ಧ್ವನಿ ಗೂಡಿಸಿದ್ದಾಳೆ - ಇವರಿಬ್ಬರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೊಮೆಜ್ ನಾಲ್ಕು ಹಾಡುಗಳನ್ನು ಧ್ವನಿಮುದ್ರಿಸಿದ್ದಾಳೆ, ಅದರಲ್ಲಿ ಒಂದು ವಿಸರ್ಡ್ಸ್ ಆಫ್ ವವೆರ್ಲಿ ಪ್ಲೇಸ್ ನ ಪ್ರಥಮ ಧ್ವನಿಮುದ್ರಿಕೆಯೆನಿಸಿತು, ಒಂದು ಏಕಗೀತೆಯು ಮ್ಯಾಜಿಕ್ ಆಲ್ಬಮ್‌ನಿಂದ ಬಿಡುಗಡೆಹೊಂದಿದೆ. ಅದೇ ವರ್ಷ, ಮೇನಲ್ಲಿ, ಗೊಮೆಜ್ ಫಾರ್ಎವರ್ ದಿ ಸಿಕ್ಕೆಸ್ಟ್ ಕಿಡ್ಸ್ ನಲ್ಲಿ ಅಭಿನಯಿಸಿದ್ದಾಳೆ, ಇದು ಆಲ್ಬಂಗೆ-ಸೇರಿರದ ಹಾಡು ವ್ಹೊಅ ಒಹ್!ನ ಯುಗಳಗೀತೆಯ ರೂಪಾಂತರ.

ಸೆಲೆನಾ ಗೊಮೆಜ್ & ದಿ ಸೀನ್

ಸೆಲೆನಾ ಗೊಮೆಜ್ & ದಿ ಸೀನ್ ( ಸಾಮಾನ್ಯವಾಗಿ ಸೆಲೆನಾ ಗೋಮೆಸ್ ♥ ದಿ ಸೀನ್ ಎಂದು ಬರೆಯಲಾಗುತ್ತದೆ) 2008ರಲ್ಲಿ ರೂಪುಗೊಂಡ ಒಂದು ಅಮೇರಿಕನ್ ಪಾಪ್ ರಾಕ್ ವಾದ್ಯ-ವೃಂದ. ವಾದ್ಯ ವೃಂದವು ಗಾಯನದಲ್ಲಿ ಗೊಮೆಜ್, ಗಿಟಾರ್‌ನಲ್ಲಿ ಎಥನ್ ರಾಬರ್ಟ್ ನನ್ನು, ಬೇಸ್‌ನಲ್ಲಿ ಜೋಎಯ್ ಕ್ಲೆಮೆಂಟ್‌ನನ್ನು, ಡ್ರಂನಲ್ಲಿ ಗ್ರೆಗ್ ಗರ್ಮನ್ ನನ್ನು, ಮತ್ತು ಕೀ ಬೋರ್ಡ್‌ನಲ್ಲಿ ಡೇನ್ ಫಾರ್ರೆಸ್ಟ್‌ರನ್ನು ಹೊಂದಿದೆ.

ಆಗಸ್ಟ್ 2008ರಲ್ಲಿ MTVಯ ಜೋಸೆಲಿನ್ ವೇನಾ ಜೊತೆಗಿನ ಒಂದು ಸಂದರ್ಶನದ ಸಮಯದಲ್ಲಿ, ಅವಳು ತನ್ನ ಸಂಗೀತ ವೃತ್ತಿಯ ಭವಿಷ್ಯದ ಬಗ್ಗೆ ಹೇಳುತ್ತಾಳೆ: "ನಾನು ವಾದ್ಯ ವೃಂದದಲ್ಲಿರುತ್ತೇನೆ - ಇದರಲ್ಲಿ ಸೆಲೆನಾ ಗೊಮೆಜ್ ಶೈಲಿ ಇರುವುದಿಲ್ಲ. ನಾನೊಬ್ಬಳೆ ಏಕೈಕ ಕಲಾವಿದೆಯಲ್ಲ. ನನಗೆ ನನ್ನ ಹೆಸರು ಅದರಲ್ಲಿ ಸೇರಿಕೊಳ್ಳುವುದು ಬೇಕಿಲ್ಲ. ನಾನು ಹಾಡು ಹೇಳುತ್ತೇನೆ, ಜೊತೆಗೆ ಡ್ರಮ್ಸ್ ಮತ್ತು ವಿದ್ಯುತ್ ಗಿಟಾರ್ ನುಡಿಸುವುದನ್ನು ಕಲಿಯುತ್ತಿದ್ದೇನೆ. ಗೊಮೆಜ್ ತನ್ನ ವಾದ್ಯ ವೃಂದ, ಸೆಲೆನಾ ಗೊಮೆಜ್ & ದಿ ಸೀನ್ ಜೊತೆಗೂಡಿ ತಮ್ಮ ಮೊದಲ ಸ್ಟುಡಿಯೋ ಆಲ್ಬಮ್, ಕಿಸ್ & ಟೆಲ್ ಅನ್ನು ಸೆಪ್ಟೆಂಬರ್ 29, 2009 ರಲ್ಲಿ ಬಿಡುಗಡೆ ಮಾಡಿದಳು. ಈ ಆಲ್ಬಮ್‌ನ ಮೊದಲ ಪ್ರದರ್ಶನದಿಂದ ಬಿಲ್ಬೋರ್ಡ್ 200ರಲ್ಲಿ ಒಂಬತ್ತನೇ ಸ್ಥಾನವನ್ನು ಪಡೆಯಿತು. ಇದರ 66,000 ಪ್ರತಿಗಳ ಮಾರಾಟ ಅದರ ಬಿಡುಗಡೆಯಾದ ಮೊದಲ ವಾರದಲ್ಲಿ ಕಂಡಿತು. ಆಲ್ಬಮ್ ನ ಮೊದಲ ಏಕಗೀತೆ ಮುದ್ರಿಕೆಯು ಫಾಲ್ಲಿಂಗ್ ಡೌನ್ ಆಗಸ್ಟ್ 21, 2009 ರಂದು ಬಿಡುಗಡೆಯಾಯಿತು, ಮತ್ತು ಹಾಡಿನ ವಿಡಿಯೋವನ್ನು ಆಗಸ್ಟ್ 28, 2009ರಲ್ಲಿ ನಡೆದ ಗೊಮೆಜ್‌ಳ TV-ಚಿತ್ರ ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್: ದಿ ಮೂವಿ ಯ ಪ್ರಥಮ ಪ್ರದರ್ಶನದ ನಂತರ ಪ್ರದರ್ಶಿಸಲಾಯಿತು. ಅವಳು ಮತ್ತು ಅವಳ ತಂಡ ಡಾನ್ಸಿಂಗ್ ವಿಥ್ ದಿ ಸ್ಟಾರ್ಸ್ ಸೀಸನ್ ಒಂಬತ್ತು ರ ಹಾಡಿಗೆ ಪ್ರದರ್ಶನ ನೀಡಿದರು. ಗೊಮೆಜ್ ತನ್ನ ಟ್ವಿಟರ್ ನ ಮೂಲಕ ಹೇಳುವಂತೆ, ತಂಡವು ಸದ್ಯದಲ್ಲಿ ಅವರ ಎರಡನೆಯ ಏಕಗೀತೆ ಮುದ್ರಿಕೆ,ನ್ಯಾಚುರಲಿ ಯ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಸಂಗೀತ ವಿಡಿಯೊವನ್ನು ನವೆಂಬರ್ 14, 2009ರಲ್ಲಿ ಚಿತ್ರೀಕರಿಸಲಾಯಿತು ಮತ್ತು ಡಿಸ್ನಿ ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ನೀಡಲಾಯಿತು ನಂತರ ಫಿನಾಸ್ ಅಂಡ್ ಫರ್ಬ್ ಕ್ರಿಸ್ಮಸ್ ವೆಕೇಶನ್ ನ ಪ್ರಥಮ ಪ್ರದರ್ಶನ ಡಿಸೆಂಬರ್ 11, 2009ರಂದು ಹಮ್ಮಿಕೊಳ್ಳಲಾಗಿತ್ತು ಮತ್ತು ಏಕಗೀತೆಯ ಮುದ್ರಿಕೆಯನ್ನು ಅಧಿಕೃತವಾಗಿ ಅದೇ ದಿನ ಬಿಡುಗಡೆ ಮಾಡಲಾಯಿತು. ಅವರು ಸದ್ಯದಲ್ಲಿ ಹೌಸ್ ಆಫ್ ಬ್ಲೂಸ್ 2010ರ ಪ್ರವಾಸದಲ್ಲಿದ್ದಾರೆ. ವಾದ್ಯ ವೃಂದವು ತಮ್ಮ ಎರಡನೇ ಏಕಗೀತೆ ಮುದ್ರಿಕೆ, "ನ್ಯಾಚುರಲಿ" ಯನ್ನು ದಿ ಎಲ್ಲೆನ್ ಡಿಜೆನೆರಸ್ ಪ್ರದರ್ಶನ ದಲ್ಲಿ ಮತ್ತು ಡಿಕ್ ಕ್ಲಾರ್ಕ್‌ರ ಹೊಸ ವರ್ಷದ ರಾಕಿನ್ ಈವ್ ನಲ್ಲಿ ರಯಾನ್ ಸೀಕ್ರೆಸ್ಟ್ ಜೊತೆಗೆ ಪ್ರಸ್ತುತಪಡಿಸಿತು.

ಲೋಕೋಪಕಾರ

ಗೊಮೆಜ್ UR ಮತ ಎಣಿಕೆಯ ಅಭಿಯಾನದಲ್ಲಿ ಭಾಗಿಯಾಗಿದ್ದಳು. ಇದು 2008ರ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬರಾಕ್ ಒಬಾಮ ಮತ್ತು ಜಾನ್ ಮೆಕೈನ್ ರ ಬಗ್ಗೆ ಹದಿಹರೆಯದವರು ಹೆಚ್ಚು ತಿಳಿದುಕೊಳ್ಳುವಂತೆ ಪ್ರೋತ್ಸಾಹಿಸಲು ನೆರವಾಯಿತು. ಅಕ್ಟೋಬರ್ 2008ರಲ್ಲಿ, ಗೊಮೆಜ್‌ಳನ್ನು UNICEFನ 2008ರ ಟ್ರಿಕ್-ಆರ್-ಟ್ರೀಟ್ ಅಭಿಯಾನದ ವಕ್ತಾರೆಯನ್ನಾಗಿ ಹೆಸರಿಸಲಾಯಿತು. ಇದು ವಿಶ್ವದಾದ್ಯಂತ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಹಲ್ಲೋವೀನ್ ಹಬ್ಬದಲ್ಲಿ ಮಕ್ಕಳಿಗೆ ಹಣವನ್ನು ಸಂಗ್ರಹಿಸಲು ಪ್ರೋತ್ಸಾಹ ನೀಡಿತು. "ವಿಶ್ವದಲ್ಲಿ ವ್ಯತ್ಯಾಸವನ್ನು ತೋರಿಸುವಂತೆ ಇತರ ಮಕ್ಕಳಿಗೆ ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲಿ" "ಅತ್ಯಂತ ರೋಮಾಂಚನ" ಗೊಂಡಿದ್ದಾಗಿ ಹೇಳಿದ್ದಾಳೆ" ಅಕ್ಟೋಬರ್ 2008ರಲ್ಲಿ, ಗೊಮೆಜ್St. ಜುಡ್'ಸ್ ಮಕ್ಕಳ ಆಸ್ಪತ್ರೆಯಲ್ಲಿ "ರನ್‌ವೇ ಫಾರ್ ಲೈಫ್" ಎಂಬ ಸಹಾಯಾರ್ಥ ಓಟದಲ್ಲಿ ಭಾಗವಹಿಸಿದ್ದಳು. ಗೊಮೆಜ್ ಬೋರ್ಡೆನ್ ಹಾಲಿಗೆ ವಕ್ತಾರೆಯಾಗಿದ್ದಾಳೆ; ಅವಳು ಈ ಅಭಿಯಾನದ ಮುದ್ರಿತ ಪ್ರಕಟಣೆಯಲ್ಲಿ ಮತ್ತು ಕಿರುತೆರೆಯ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳು ಪೋರ್ಟೊ ರಿಕೋ ನಲ್ಲಿರುವ ನಾಯಿಗಳಿಗೆ ಸಹಾಯ ಮಾಡುವ ಧರ್ಮದತ್ತಿ ಐಸ್ಲ್ಯಾಂಡ್ ಡಾಗ್ ನಲ್ಲಿ ಭಾಗಿಯಾದ ನಂತರ DoSomething.org ನ ರಾಯಭಾರಿಯಾಗಿದ್ದಾಳೆ. ಅವಳು ಇದರಲ್ಲಿ ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ :ದಿ ಮೂವಿ ಪೋರ್ಟೊರಿಕೋನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಸಮಯದಲ್ಲಿ ಭಾಗಿಯಾಗಿದ್ದಳು. ಗೊಮೆಜ್ ಸ್ಟೇಟ್ ಫಾರ್ಮ್ ಇನ್ಸೂರೆನ್ಸ್ ನ ವಕ್ತಾರೆಯಾಗಿದ್ದಾಳೆ, ಮತ್ತು ಅದರ TV ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ ಇದು ಡಿಸ್ನಿ ವಾಹಿನಿಯಲ್ಲಿ ಬಿತ್ತರವಾಗುತ್ತದೆ, ಇದು ಸುರಕ್ಷಿತ ಚಾಲನೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ. ಗೊಮೆಜ್ ದತ್ತಿಸಂಸ್ಥೆ RAISE ಹೋಪ್ ಫಾರ್ ಕಾಂಗೋ ನಲ್ಲಿ ಭಾಗಿಯಾಗಿದ್ದಾಳೆ, ಈ ಧರ್ಮಸಂಸ್ಥೆಯು ಕಾಂಗೋನಲ್ಲಿ ಕಾಂಗೊಲೀಸ್ ಮಹಿಳೆಯರ ಮೇಲೆ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿದೆ...

ಚಿತ್ರ:Selena At Young Vouge.jpg
ಗೊಮೆಜ್ 2008ರ ಯಂಗ್ ವೋಗ್ ಹಾಲಿವುಡ್ ಸಂತೋಷಕೂಟದಲ್ಲಿ.

ಆಗಸ್ಟ್, 2009 ರಲ್ಲಿ, 17 ವರ್ಷದ ಗೊಮೆಜ್ ಳನ್ನು UNICEFನ ಅತಿ ಚಿಕ್ಕ ರಾಯಭಾರಿಯೆಂದು ಹೆಸರಿಸಲಾಯಿತು. ತನ್ನ ಮೊದಲ ಅಧಿಕೃತ ಕ್ಷೇತ್ರ ಪ್ರವಾಸದಲ್ಲಿ ಗೊಮೆಜ್ ಸೆಪ್ಟೆಂಬರ್ 4, 2009ರಂದು ಒಂದು ವಾರದ ಮಟ್ಟಿಗೆ ಘಾನಾಕ್ಕೆ ಪ್ರಯಾಣ ಬೆಳೆಸುತ್ತಾಳೆ. ಅಲ್ಲಿ ಪ್ರಧಾನ ಅವಶ್ಯಕತೆಗಳಾದ ಶುದ್ಧ ನೀರು, ಪೌಷ್ಠಿಕತೆ, ಶಿಕ್ಷಣ ಮತ್ತು ಆರೋಗ್ಯಸೇವೆಯ ಕೊರತೆಯಿಂದ ನರಳುವ ಮಕ್ಕಳ ಭಯಂಕರ ಸ್ಥಿತಿಯ ಸಾಕ್ಷಾತ್ ದರ್ಶನ ಅವಳಿಗಾಗುತ್ತದೆ. ಗೊಮೆಜ್ಅಸೋಸಿಯೇಟೆಡ್ ಪ್ರೆಸ್ ಜೊತೆಗಿನ ಸಂದರ್ಶನದ ಸಮಯದಲ್ಲಿ ಮಾತನಾಡುತ್ತಾ, ತಾನು ತನ್ನ ತಾರಾ ಬಲದಿಂದ ಘಾನಾದಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತೇನೆ: " ಇದರಿಂದಾಗಿ ಮಕ್ಕಳು ಆಲಿಸಿ ಪರಿಗಣಿಸುವ ಧ್ವನಿಯನ್ನು ತಾನು ಹೊಂದಿರುವುದಕ್ಕಾಗಿ ತನಗೆ ತುಂಬಾ ಹೆಮ್ಮೆ ಎನಿಸುತ್ತಿದೆ.[...] ನನಗೆ ಪ್ರವಾಸದ ಸಮಯದಲ್ಲಿ ಜನ ಘಾನಾ ಎಲ್ಲಿದೆಯೆಂದು ಕೇಳುತ್ತಿದ್ದರು, ಮತ್ತು ಗೂಗಲ್ ನಲ್ಲಿ ಹುಡುಕಿದರು[...] ಜೊತೆಗೆ ನಾನು ಅಲ್ಲಿಗೆ ಹೋದ ಕಾರಣದಿಂದಾಗಿ, ಈಗ ಅವರಿಗೆ ಘಾನಾ ಎಲ್ಲಿದೆ ಎಂಬುದು ತಿಳಿದಿದೆ. ಹೀಗಾಗಿ ಇದು ಬಹಳ ಆಶ್ಚರ್ಯಕರವಾಗಿದೆ." ಗೊಮೆಜ್ ರಾಯಭಾರಿಯಾಗಿ ತನ್ನ ಪಾತ್ರದ ಬಗ್ಗೆ ಹೇಳುತ್ತಾ: "ಪ್ರತಿದಿನ 25,000 ಮಕ್ಕಳು ತಪ್ಪಿಸಬಹುದಾದ ಕಾರಣಗಳಿಗಾಗಿ ಸಾಯುತ್ತಿದ್ದಾರೆ. ಈ ಸಂಖ್ಯೆಯನ್ನು 25,000ದಿಂದ ಸೊನ್ನೆಗೆ ಇಳಿಸಬಹುದೆಂಬ ನಂಬಿಕೆಯಲ್ಲಿ UNICEFನ ಜತೆ ನಿಲ್ಲುತ್ತೇನೆ. ನಾವು ಇದನ್ನು ಸಾಧಿಸಬಹುದೆಂದು ನನಗೆ ತಿಳಿದಿದೆ ಏಕೆಂದರೆ, ಪ್ರತಿ ಕ್ಷಣವೂ UNICEF ಮಕ್ಕಳ ಜೀವರಕ್ಷಣೆಗೆ ಸಹಾಯ ಒದಗಿಸಲು ಸ್ಥಳದಲ್ಲಿದ್ದು, ಸೊನ್ನೆಯನ್ನು ವಾಸ್ತವರೂಪಕ್ಕೆ ತರುವ ಖಾತರಿ ನೀಡಿದೆ." ಗೊಮೆಜ್ ಡಿಸ್ನಿ'ಸ್ ಫ್ರೆಂಡ್ಸ್ ಫಾರ್ ಚೇಂಜ್ನಲ್ಲಿ ಭಾಗಿಯಾಗಿದ್ದಾಳೆ, ಈ ಸಂಸ್ಥೆಯು ಪರಿಸರ-ಸ್ನೇಹಿ ವರ್ತನೆ ಯನ್ನು ಉತ್ತೇಜಿಸುತ್ತದೆ, ಮತ್ತು ಡಿಸ್ನಿ ವಾಹಿನಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಲು ಅವರ ಸಾರ್ವಜನಿಕ ಸೇವೆಯ ಪ್ರಕಟಣೆಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಗೋಮೆಜ್, ಡೆಮಿ ಲೋವಟೋ, ಮಿಲೆಯ್ ಸೈರಸ್, ಮತ್ತು ಜೋನಾಸ್ ಬ್ರದರ್ಸ್ ಸೆಂಡ್ ಇಟ್ ಆನ್ ಅನ್ನು ಧ್ವನಿ ಮುದ್ರಿಸುತ್ತಾರೆ, ಇದು ಒಂದು ಸಹಾಯಾರ್ಥ ಏಕಗೀತೆ ಇದು ಡಿಸ್ನಿ'ಸ್ ಫ್ರೆಂಡ್ಸ್ ಫಾರ್ ಚೇಂಜ್‌ನ ಆವರ್ತಕ ರಾಗವಾಗಿ ಕೆಲಸ ಮಾಡುತ್ತದೆ. ಪ್ರಥಮ ಪ್ರದರ್ಶನದಲ್ಲಿ ಹಾಡು ಹಾಟ್ 100ರಲ್ಲಿ ಇಪ್ಪತ್ತನೆ ಸ್ಥಾನ ಪಡೆಯಿತು. ಡಿಸ್ನಿ'ಸ್ ಫ್ರೆಂಡ್ಸ್ ಫಾರ್ ಚೇಂಜ್ "ಸೆಂಡ್ ಇಟ್ ಆನ್" ನಿಂದ ಬಂದ ಹಣವನ್ನು ನೇರವಾಗಿ ಡಿಸ್ನಿ ವಿಶ್ವವ್ಯಾಪಿ ಸಂರಕ್ಷಣಾ ನಿಧಿಯ ಪರಿಸರ ಸಹಾಯಾರ್ಥಸಂಸ್ಥೆಗಳಿಗೆ ನೀಡಿತು. ಗೊಮೆಜ್‌ಳನ್ನು UNICEFನ 2009ರ ಟ್ರಿಕ್-ಆರ್-ಟ್ರೀಟ್ ಅಭಿಯಾನದ ವಕ್ತಾರೆಯನ್ನಾಗಿ, ಸತತ ಎರಡನೆಯ ಭಾರಿಗೆ ಆಯ್ಕೆ ಮಾಡಲಾಯಿತು, ಇದು ವಿಶ್ವದಾದ್ಯಂತ ಮಕ್ಕಳಿಗೆ ಸಹಾಯ ಮಾಡಲು ಹಲ್ಲೋವೀನ್ ಹಬ್ಬದಲ್ಲಿ ಮಕ್ಕಳನ್ನು ಹಣ ಸಂಗ್ರಹಿಸಲು ಪ್ರೋತ್ಸಾಹ ನೀಡಿತು. ಗೋಮೆಜ್, 2008ರಲ್ಲಿ ಸಹಾಯಾರ್ಥವಾಗಿ 700,000 ವನ್ನು ಸಂಗ್ರಹಿಸಿದಳು, 2009ರಲ್ಲಿ, 1 ದಶಲಕ್ಷ ಡಾಲರ್ ಗಳನ್ನು ಸಂಗ್ರಹಿಸುವ ಆಶಯ ಹೊಂದಿರುವುದಾಗಿ ಹೇಳಿದ್ದಳು. ಇದು ಹಿಂದಿನ ವರ್ಷಕ್ಕಿಂತ 300,000 ದಷ್ಟು ಹೆಚ್ಚು. ಗೊಮೆಜ್ UNICEFನ ಅಭಿಯಾನದ ಟ್ರಿಕ್-ಆರ್-ಟ್ರೀಟ್‌ಗೆ ಬೆಂಬಲಾರ್ಥವಾಗಿ ಪ್ರಖ್ಯಾತ ಹರಾಜಿನಲ್ಲಿ ಭಾಗವಹಿಸಿದ್ದಳು. ಹರಾಜಿನ ಒಂದು ಭಾಗವಾಗಿ, ಗೊಮೆಜ್ ಹರಾಜು ಕೂಗಿದವರು ಆಯ್ಕೆಮಾಡಿದ -ಸಂಗೀತ ಗೋಷ್ಠಿಗೆ 4 VIP ಟಿಕೆಟ್‌ಗಳನ್ನು ಕೊಡುಗೆ ನೀಡಿದಳು - ಜೊತೆಗೆ ತೆರೆಮರೆಯಲ್ಲಿ ಅವರನ್ನು ಸಂಧಿಸಿ, ಅಭಿನಂದಿಸಿದಳು ಜೊತೆಗೆ ತನ್ನ ಆಲ್ಬಮ್ ಕಿಸ್ ಅಂಡ್ ಟೆಲ್ ನ ಸಹಿಹಾಕಿದ CDಯನ್ನು ನೀಡಿದಳು. ಅಕ್ಟೋಬರ್ 29, 2009ರಲ್ಲಿ, ಹಲ್ಲೋವೀನ್ ಹಬ್ಬಕ್ಕೆ ಎರಡು ದಿನ ಮುಂಚೆ, ಗೊಮೆಜ್ ಫೇಸ್ ಬುಕ್ ನಡೆಸುವ ವೆಬ್ ಕಾಸ್ಟ್ ಸರಣಿಯ ನೇರ ಪ್ರಸಾರದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ವೀಕ್ಷಕರ ಜೊತೆ ಅದರ ಬಗ್ಗೆ ಮತ್ತು UNICEFನ ಟ್ರಿಕ್-ಆರ್-ಟ್ರೀಟ್‌ನಲ್ಲಿ ತನ್ನ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದಳು. ಅಕ್ಟೋಬರ್ 6, 2009ರಲ್ಲಿ, ಗೊಮೆಜ್ ಲಾಸ್ ಏಂಜಲ್ಸ್‌ನ ಪ್ರಾಥಮಿಕ ಶಾಲೆಯೊಂದಕ್ಕೆ ಅನಿರೀಕ್ಷಿತ ಭೇಟಿಯನ್ನು ನೀಡಿದಳು. ಇದು ಆಫೀಸ್ ಮಾಕ್ಸ್ ಪ್ರಾಯೋಜಿಸಿದ "ಏ ಡೇ ಮೇಡ್ ಬೆಟರ್" ಕಾರ್ಯಕ್ರಮದ ಒಂದು ಭಾಗ. ತನ್ನ ಭೇಟಿಯ ಸಮಯದಲ್ಲಿ, ಗೊಮೆಜ್ ಶಾಲೆಗೆ ಪ್ರಶಸ್ತಿಯ ಜೊತೆಗೆ $1,000 ಮೌಲ್ಯದ ಶಾಲಾ ಸಾಮಗ್ರಿಗಳನ್ನು ನೀಡಿದಳು. ಗೊಮೆಜ್ ವಿದ್ಯಾರ್ಥಿಗಳ ಜೊತೆ ಒಂದು ದಿನ ಕಳೆದಳು ಜೊತೆಗೆ ಸಮಾಜಕ್ಕೆ ಹಿಂದುರಿಗಿಸಬೇಕಾದ ಕೊಡುಗೆಯ ಮಹತ್ವದ ಬಗ್ಗೆ ಮಾತನಾಡಿದಳು.

ಉದ್ಯಮಶೀಲತೆ

ಸೆಲೆನಾ ಗೊಮೆಜ್ 
ಗೊಮೆಜ್ ತನ್ನ ಮ್ಯೂಸಿಕ್ ವೀಡಿಯೊ "ಟೆಲ್ ಮೇ ಸಂಥಿಂಗ್ ಐ ಡೋಂಟ್ ನೋ" ದ ಸೆಟ್ ನಲ್ಲಿ ಜುಲೈ 2008ರಂದು.

ಸೆಪ್ಟೆಂಬರ್, 2009ರ ತನಕ, ಗೊಮೆಜ್ ಸಿಯರ್ಸ್‌ನ ಶಾಲೆಗೆ-ಹಿಂದಿರುಗಿದ ಫ್ಯಾಶನ್ ಜಾಹಿರಾತು ಅಭಿಯಾನದ ಹೊಸ ಮುಖ. ಶರತ್ತುಬದ್ದ ಒಪ್ಪಂದದ ಭಾಗವಾಗಿ ಗೊಮೆಜ್ ಅವರ ಕಿರುತೆರೆ ಜಾಹಿರಾತಿನಲ್ಲಿ ಕಾಣಿಸಿಕೊಂಡಳು ಮತ್ತು "ಡೋಂಟ್ ಜಸ್ಟ್ ಗೋ ಬ್ಯಾಕ್ ಅರ್ರೈವ್" ನ ಧ್ವನಿ ಮುದ್ರಣ ಮಾಡಿದಳು. ಆಗಸ್ಟ್, 2009ರಲ್ಲಿ, ಗೊಮೆಜ್ "ಸಿಯರ್ಸ್ ಅರ್ರೈವ್ ಏರ್ ಬ್ಯಾಂಡ್ ಕ್ಯಾಸ್ಟಿಂಗ್ ಕಾಲ್" ಕೂಡ ನಿರೂಪಿಸಿದಳು - ಇದರಲ್ಲಿ ಮೊದಲ-ಬಾರಿಗೆ "ಸಿಯರ್ಸ್ ಏರ್ ಬ್ಯಾಂಡ್" ಗಾಗಿ ಐದು ಜನರನ್ನು ಆಯ್ಕೆ ಮಾಡುವುದಾಗಿತ್ತು. ಇದು ಸೆಪ್ಟೆಂಬರ್ 13, 2009 ರಲ್ಲಿ ನಡೆದ 2009 MTV ವೀಡಿಯೊ ಸಂಗೀತ ಪ್ರಶಸ್ತಿಗಳಿಗಾಗಿ ಪ್ರದರ್ಶನ ನೀಡಿತು.

ಅಕ್ಟೋಬರ್ 2008ರಲ್ಲಿ, ಗೊಮೆಜ್ ತನ್ನದೇ ಸ್ವಂತ ನಿರ್ಮಾಣ ಸಂಸ್ಥೆ ಜುಲೈ ಮೂನ್ ಪ್ರೊಡಕ್ಷನ್ಸ್ ಶುರು ಮಾಡುವುದರ ಜೊತೆಗೆ ತಾರಾ ಮಾಧ್ಯಮವನ್ನು ಸೃಷ್ಟಿಸಿಕೊಳ್ಳಲು XYZ ಫಿಲಂಸ್ (X amien Y our Z ipper) ಜೊತೆ ಪಾಲುದಾರಳಾದಳು. ಒಪ್ಪಂದದ ಭಾಗವಾಗಿ ಗೊಮೆಜ್ ಸಮರ್ಥ ಲೇಖನಗಳ ಆಯ್ಕೆಯ ಅವಕಾಶ, ಲೇಖಕರನ್ನು ಬಾಡಿಗೆಗೆ ಪಡೆದುಕೊಳ್ಳುವ ಮತ್ತು ಪ್ರತಿಭಾ ಸಾಮರ್ಥ್ಯವನ್ನು ಸ್ಟುಡಿಯೋಗಳಿಗೆ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಳು. ಅಲ್ಲದೆ, ಒಪ್ಪಂದದ ಭಾಗವಾಗಿ, "XYZ ಫಿಲಂಸ್ ಗೊಮೆಜ್. ಗೆ ಎರಡು ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅದರಲ್ಲಿ ಪಾತ್ರ ನಿರ್ವಹಿಸಲು ಅವಕಾಶ ನೀಡಿತು. ವೆರೈಟಿ ವರದಿ ಮಾಡಿದಂತೆ: "ಆಗಸ್ಟ್‌ನಲ್ಲಿ, XYZ[ಫಿಲಂಸ್] ಇದೆ ರೀತಿಯಾದ ಒಪ್ಪಂದಕ್ಕೆ ಟೈಮ್ Inc. ಮತ್ತು ನಿರ್ವಹಣೆ-ನಿರ್ಮಾಣ ಸಂಸ್ಥೆ ದಿ ಕಲೆಕ್ಟಿವ್ ಜೊತೆ ಸಹಿ ಹಾಕಿತು. ದೈತ್ಯ ಮುದ್ರಣ ಮಾಧ್ಯಮದ ವಿಷಯವನ್ನು ಚಲನಚಿತ್ರಕ್ಕೆ ಅಭಿವೃದ್ಧಿಪಡಿಸುವುದಕ್ಕೆ ಹಣಕಾಸು ಒದಗಿಸುವುದು ಇದರ ಉದ್ದೇಶವಾಗಿತ್ತು.[...] ಜುಲೈ ಮೂನ್-XYZ ಒಪ್ಪಂದದ ಭಾಗವಾಗಿ,[ಸೆಲೆನಾ] ಗೊಮೆಜ್ ಯೋಜನೆಗಳನ್ನು ವಿಸ್ತಾರವಾದ ಟೈಮ್ Inc. ಲೈಬ್ರರಿಯಿಂದ ಆಯ್ಕೆ ಮಾಡುವ ಅರ್ಹತೆಯನ್ನು ಹೊಂದಿದ್ದಳು. ಇದು ಟೈಮ್, ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್, ಫಾರ್ಚುನ್ ಅಂಡ್ ಲೈಫ್ ಅನ್ನು ಒಳಗೊಂಡಿದೆ." ಅಕ್ಟೋಬರ್, 2009ರಲ್ಲಿ, ಗೊಮೆಜ್ ತನ್ನ ಸ್ವಂತ ಫ್ಯಾಶನ್ ಶೈಲಿಯನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದಳು, ಇದರ ಹೆಸರು "ಡ್ರೀಮ್ ಔಟ್ ಲೌಡ್ ಬೈ ಸೆಲೆನಾ ಗೋಮೆಜ್", ಇದು 2010ರ ಶರತ್ಕಾಲದಲ್ಲಿ ಪ್ರಾರಂಭಗೊಳ್ಳಲು ತಯಾರಾಗಿದೆ.ಉಡುಪುಗಳು ವಿಶೇಷವಾಗಿ ಬೋಹೆಮಿಯನ್ ಉಡುಗೆಗಳು, ಹೂಗಳಿಂದ ಚಿತ್ರಿತವಾಗಿರುವ ಮೇಲಂಗಿಗಳು, ಜೀನ್ಸ್, ಸ್ಕರ್ಟ್ ಗಳು, ಜಾಕೆಟ್ ಗಳು, ಶಿರವಸ್ತ್ರಗಳು ಮತ್ತು ಟೋಪಿಗಳು, ಎಲ್ಲವೂ ಮರು ಬಳಕೆಯ ವಸ್ತುಗಳಿಂದ ಅಥವಾ ಪರಿಸರ-ಸ್ನೇಹಿ ವಸ್ತುಗಳಿಂದ ತಯಾರಿಸಿದಂತಹವುಗಳನ್ನು ಒಳಗೊಂಡಿದೆ. ಗೊಮೆಜ್ ಈ ಉಡುಪುಗಳ ಮಾದರಿ ತನ್ನ ವೈಯುಕ್ತಿಕ ಶೈಲಿಯನ್ನು ಬಿಂಬಿಸುತ್ತವೆ ಎಂದು ಹೇಳುತ್ತಾಳೆ ಮತ್ತು ಉಡುಪುಗಳು "ಸುಂದರ, ಸ್ತ್ರೀಸಹಜತೆ ಜೊತೆಗೆ ಬೋಹೆಮಿಯನ್ ಶೈಲಿ"ಯಲ್ಲಿದೆ ಎಂದು ವಿವರಿಸುತ್ತಾಳೆ ಮತ್ತು: "ನನ್ನ ಉಡುಪಿನ ಮಾದರಿಯಿಂದ, ನಾನು ನಿಜವಾಗಿ ಗ್ರಾಹಕರು ಹೇಗೆ ಅವರು ತಮ್ಮ ರೂಪಗಳನ್ನು ಒಂದುಗೂಡಿಸಬಹುದು ಎಂಬ ಬಗ್ಗೆ ಆಯ್ಕೆಗಳನ್ನು ನೀಡುತ್ತೇನೆ[...] ನನಗೆ ಉಡುಪುಗಳು ಮೇಲ್ಭಾಗದಲ್ಲಾಗಲಿ ಅಥವಾ ಕೆಳ ಭಾಗದಲ್ಲಾಗಲಿ ಧರಿಸಲು ಸುಲಭವಾಗಿರಬೇಕು, ಮತ್ತು ಬಟ್ಟೆಗಳು ಪರಿಸರ-ಸ್ನೇಹಿ ಮತ್ತು ಜೈವಿಕವಾಗಿರುವುದು ಹೆಚ್ಚು ಮುಖ್ಯ[...] ಜೊತೆಗೆ, ಎಲ್ಲಾ ಬೆಲೆ ಪಟ್ಟಿಗಳ ಮೇಲೆ ನನಗೆ ಸ್ಪೂರ್ತಿದಾಯಕವಾದ ಕೆಲವು ಉಲ್ಲೇಖಗಳು ಅಚ್ಚಾಗಿರುತ್ತವೆ. ನಾನು ಕೇವಲ ಒಂದು ಒಳ್ಳೆಯ ಸಂದೇಶವನ್ನು ಮುಟ್ಟಿಸಲು ಬಯಸುತ್ತೇನೆ." ಗೋಮೆಜ್‌ಗೆ ಫ್ಯಾಶನ್ ಬಗ್ಗೆ ಯಾವುದೇ ಹಿನ್ನಲೆ ಇಲ್ಲದಿರುವುದರಿಂದ ವಸ್ತ್ರ ವಿನ್ಯಾಸಕಾರರಾದ ಟೋನಿ ಮೇಲಿಲ್ಲೋ ಮತ್ತು ಸಾನ್ಡ್ರಾ ಕಮ್ಪೊಸ್ ಅವಳ ಜೊತೆಗೂಡಿದಳು. ಇವರಿಬ್ಬರು ಹೆಸರಾಂತ ವಸ್ತ್ರ ವಿನ್ಯಾಸ ಮಳಿಗೆಗಳಲ್ಲಿ ಕೆಲಸ ಮಾಡಿದ್ದರು. ಗೊಮೆಜ್ ಪಾಲುದಾರಿಕೆಯ ಬಗ್ಗೆ ಹೇಳುತ್ತಾ:"ನಾನು ಟೋನಿ ಮತ್ತು ಸಾನ್ಡ್ರಾ‌ರನ್ನು ಸಂಧಿಸಿದಾಗ, ನಾನು ಅವರ ಜೊತೆ ತಕ್ಷಣವೇ ಹೊಂದಿಕೊಂಡೆ ಮತ್ತು ಈಗ ಅವರು ನನ್ನ ಕುಟುಂಬದಂತೆ ಇದ್ದಾರೆ. [...] ಅವರು ತುಂಬಾ ಸೃಜನಶೀಲರು ಮತ್ತು ನನಗೆ ಸಂತೋಷವಾಗುತ್ತದೆ. ನಾನು ಅವರಿಗೆ ಯಾವಾಗ ಬೇಕಾದರೂ ಕರೆ ಮಾಡಿ ಎಲ್ಲದರ ಬಗ್ಗೆ ಮಾತನಾಡಬಹುದು, ಅದು ಕೇವಲ ಒಂದು ಗುಂಡಿಯನ್ನು ಬದಲಿಸುವ ಬಗ್ಗೆ ಕೂಡ ಆಗಿರಬಹುದು[...] ಅವರು ಎಲ್ಲದರ ಬಗ್ಗೆ ತುಂಬಾ ನಿರಾಳರಾಗಿರುತ್ತಾರೆ." ಬ್ರಾಂಡನ್ನು ಮಿಲಿಲ್ಲೋ ಮತ್ತು ಕಾಮ್ಪೋಸ್ ನ್ಯೂಯಾರ್ಕ್ ಮೂಲದ ಅಡ್ಜ್‌ಮಿ ಅಪ್ಪಾರೆಲ್ ಜತೆಸೇರಿ ತಯಾರಿಸುತ್ತದೆ ಮತ್ತು ಅಡ್ಜ್‌ಮಿ CH ಬ್ರಾಂಡ್ಸ್ LLC ರೂಪಿಸುತ್ತದೆ; ಇದು ಈ ಬ್ರಾಂಡ್‌ನ ಹಿಡುವಳಿ-ಸಂಸ್ಥೆ.

ವೈಯಕ್ತಿಕ ಜೀವನ

ಗೊಮೆಜ್ "ಟ್ರೂ ಲವ್ ವೇಯ್ಟ್ಸ್" ಎಂದು ಕೆತ್ತಿದ ಒಂದು ಪರಿಶುದ್ದ ಉಂಗುರವನ್ನು ಅವಳು 12 ವರ್ಷದ ಹುಡುಗಿಯಾಗಿದ್ದಾಗಿನಿಂದ ಧರಿಸಲು ಶುರು ಮಾಡಿದಳು. ಡಿಸೆಂಬರ್ 2009ರ ವರೆಗೂ, ಗೊಮೆಜ್ ಬಳಿ ಐದು ನಾಯಿಗಳಿವೆ, ತನ್ನನ್ನು ತಾನು ಒಂದು "ಬಹುದೊಡ್ಡ ಪ್ರಾಣಿ ಪ್ರೇಮಿ" ಎಂದು ಬಣ್ಣಿಸುತ್ತಾಳೆ. ಗೊಮೆಜ್‌ಳ ಆಪ್ತ ಸ್ನೇಹಿತೆ ಡೆಮಿ ಲೋವಟೋ - ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ಮತ್ತು ಬರ್ನೆಯ್ ಅಂಡ್ ಫ್ರೆಂಡ್ಸ್ ನಲ್ಲಿ ಅವಳ ಸಹ-ನಟಿ. ಇವರಿಬ್ಬರು ಬರ್ನೆಯ್ ಅಂಡ್ ಫ್ರೆಂಡ್ಸ್ ನ ಅಭಿನಯ ಪರೀಕ್ಷೆಯ ಸಮಯದಿಂದಲೂ ಸ್ನೇಹಿತರಾಗಿದ್ದಾರೆ. ಇವರಿಬ್ಬರು ಮಾರ್ಚ್ 2008ರಲ್ಲಿ ಯು ಟ್ಯೂಬ್ ನಲ್ಲಿ ಒಂದು ವೀಡಿಯೊ ಬ್ಲಾಗ್‌ನ್ನು ಹಾಕಿದಾಗ, ಮಿಲೆಯ್ ಸೈರಸ್ ಮತ್ತು ಅವಳ ಸ್ನೇಹಿತ ಮ್ಯಾನ್ಡಿ ಜಿರೋಕ್ಷ್ ಆ ವೀಡಿಯೊದ ಒಂದು ಅಣಕಬರಹವನ್ನು ಅಪ್‌ಲೋಡ್ ಮಾಡಿದರು. ಇದು ಮನೋರಂಜನಾ ಮಾಧ್ಯಮದಲ್ಲಿ ಆಸಕ್ತಿಯನ್ನು ಕೆರಳಿಸಿತು. ವರದಿಗಳು ಗೊಮೆಜ್ ಮತ್ತು ಸೈರಸ್ ನಿಕ್ಕ್ ಜೋನಾಸ್ ಬಗ್ಗೆ ವಾದಿಸುತ್ತಿದ್ದ ಸಿದ್ಧಾಂತವನ್ನು ಒಳಗೊಂಡಿತ್ತು, ಅಥವಾ ಗೊಮೆಜ್ ಮತ್ತು ಲೋವಟೋ ಸೈರಸ್‌ನ ಸ್ಥಾನವನ್ನು ಆಕ್ರಮಿಸಬಹುದು ಎಂದು ವರದಿ ತಿಳಿಸಿತ್ತು. ಸೈರಸ್‌ನ ಬದಲಿಸಿದ ಮೇಲೆ, ಗೊಮೆಜ್ ಸ್ಪಷ್ಟಪಡಿಸುತ್ತಾಳೆ: "ನನಗೆ ನನ್ನನ್ನು ಬಿಟ್ಟರೆ ಯಾರ ರೀತಿಯಾಗಲೂ ಸಹ ಆಸಕ್ತಿಯಿಲ್ಲ, ಮತ್ತು ನಾನು ಇಲ್ಲಿ ಯಾರ ಸ್ಥಾನಕ್ಕೆ ಬದಲಿಯಾಗಿ ತುಂಬಲು ಬಂದಿಲ್ಲ. ನನ್ನ ಪ್ರಕಾರ ಅವಳೊಬ್ಬ ಅದ್ಭುತ ಸಾಧಕಿ, ಮತ್ತು ಇದು ಒಂದು ಅಭಿನಂದನೆ. ಆದರೆ ನಾನು ಒಂದು ಬೇರೆ ದಾರಿಯನ್ನು ಹಿಡಿಯಲು ಬಯಸುತ್ತೇನೆ."

ಚಲನಚಿತ್ರಗಳ ಪಟ್ಟಿ

ಸಿನಿಮಾ
ವರ್ಷ ಸಿನಿಮಾ ಪಾತ್ರ ಟಿಪ್ಪಣಿಗಳು
2003 Spy Kids 3-D: Game Over ವಾಟರ್ ಪಾರ್ಕ್ ಗರ್ಲ್
2005 ವಾಕರ್, ಟೆಕ್ಸಾಸ್ ರೇಂಜರ್: ಟ್ರಯಲ್ ಬೈ ಫೈರ್ ಜೂಲಿ
2006 ಬ್ರೈನ್ ಜಾಪಡ್ ಎಮಿಲಿ ಗ್ರೇಸ್ ಗಾರ್ಸಿಯ
2008 ಹಾರ್ಟನ್ ಹಿಯರ್ಸ್ ಎ ಹೂ! ಹಾರ್ಟನ್ ಹಿಯರ್ಸ್ ಎ ಹೂ!]]]] ಮೇಯರ್ ಪುತ್ರಿ ಹಿನ್ನೆಲೆಧ್ವನಿ
ಅನದರ್ ಸಿಂಡ್ರೆಲ್ಲಾ ಸ್ಟೋರಿ ಮೇರಿ ಸಾಂಟಿಯಾಗೋ ನೇರ-DVD
2009 ಪ್ರಿನ್ಸೆಸ್ ಪ್ರೊಟೆಕ್ಷನ್ ಪ್ರೋಗ್ರಾಂ ಕಾರ್ಟರ್ ಮೇಸನ್ ಡಿಸ್ನಿ ವಾಹಿನಿಯ ಮೂಲ ಚಲನಚಿತ್ರ
Wizards of Waverly Place: The Movie ಅಲೆಕ್ಸ್ ರುಸ್ಸೋ
ಆರ್ಥರ್ ಅಂಡ್ ದಿ ವೆಂಜೆನ್ಸ್ ಆಫ್ ಮಾಲ್ಟಜಾರ್ಡ್ ರಾಜಕುಮಾರಿ ಸೆಲೆನಿಯ ಧ್ವನಿ/ಮಡೋನ್ನ ಬದಲಾಗಿ
2010 ರಮೋನ ಅಂಡ್ ಬೀಜಸ್ ಬಿಯಟ್ರೈಸ್ "ಬೀಜಸ್" ಕ್ವಿಮ್ಬಿ
2011 ವಾಟ್ ಬಾಯ್ಸ್ ವಾಂಟ್ ಬೆಕ್ಕಿ ಮಿಕಾಯಲ್ಸ್
ಕಿರುತೆರೆ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2002-2003 ಬರ್ನೆಯ್ & ಫ್ರೆಂಡ್ಸ್ ಗಿಯನ್ನ ಪುನರಾವರ್ತಕ ಪಾತ್ರ
2006 ದಿ ಸೂಟ್ ಲೈಫ್ ಆಫ್ ಸಾಕ್ & ಕೋಡಿ ಗ್ವೆನ್ "ಏ ಮಿಡ್ ಸಮ್ಮರ್'ಸ್ ನೈಟ್ ಮೇರ್" (ಸರಣಿ 2, ಸಂಚಿಕೆ 22)
2007—ಇಂದಿನವರೆಗೆ ವಿಸರ್ಡ್ಸ್ ಆಫ್‌ ವೇವರ್ಲಿ ಪ್ಲೇಸ್‌ ಅಲೆಕ್ಸ್ ರುಸ್ಸೋ
2007 ಹನ್ನಾ ಮೊಂಟಾನಾ ಮಿಕಲ್ಯ "ಐ ವಾಂಟ್ ಯು ಟು ವಾಂಟ್ ಮೀ...ಟು ಗೋ ಟು ಫ್ಲೋರಿಡ" (ಸರಣಿ 2, ಸಂಚಿಕೆ 13)
"ದಟ್'ಸ್ ವಾಟ್ ಫ್ರೆಂಡ್ಸ್ ಆರ್ ಫಾರ್?" (ಸರಣಿ 2, ಸಂಚಿಕೆ 18)
2008 ಡಿಸ್ನಿ ಚಾನಲ್ ಗೇಮ್ಸ್ ಸ್ವಯಂ ಪಾತ್ರ
2009 ಸೋನ್ನಿ ವಿತ್ ಎ ಚಾನ್ಸ್ ಸ್ವಯಂ ಪಾತ್ರ "ಬ್ಯಾಟಲ್ ಆಫ್ ದಿ ನೆಟ್ ವರ್ಕ್ಸ್' ಸ್ಟಾರ್ಸ್"(ಸರಣಿ 1, ಸಂಚಿಕೆ 13)
ದಿ ಸೂಟ್ ಲೈಫ್ ಆನ್ ಡೆಕ್ ಅಲೆಕ್ಸ್ ರುಸ್ಸೋ ಡಬಲ್-ಕ್ರಾಸ್ಸ್ಡ್ (ಸರಣಿ 1, ಸಂಚಿಕೆ 21)
ಎಕ್ಸ್ಟ್ರೀಮ್ ಮೇಕ್ ಓವರ್ ಹೋಂ ಎಡಿಶನ್ ಸ್ವಯಂ ಪಾತ್ರ ಅತಿಥಿ ನಟಿ

ಧ್ವನಿಮುದ್ರಿಕೆ ಪಟ್ಟಿ

  • ಗಮನಿಸಿ : ಸೆಲೆನಾ ಗೊಮೆಜ್ & ದಿ ಸೀನ್ ನ ಬಿಡುಗಡೆಗಳ ಭಾಗವನ್ನು,ಅವರಧ್ವನಿಮುದ್ರಿಕೆ ಪಟ್ಟಿಯ ಪುಟದಲ್ಲಿ ನೋಡಿ.
    ಏಕಗೀತೆ
ವರ್ಷ ಗೀತೆ ಪಟ್ಟಿಯ ಸ್ಥಾನಗಳು ಆಲ್ಬಮ್‌ಗಳು
US CAN
2008 "ಟೆಲ್ ಮೀ ಸಂಥಿಂಗ್ ಐ ಡೋಂಟ್ ನೋ" 58 ಅನದರ್ ಸಿಂಡ್ರೆಲ್ಲಾ ಸ್ಟೋರಿ
2009 "ಮ್ಯಾಜಿಕ್" 61 86 ವಿಸರ್ಡ್ಸ್ ಆಫ್‌ ವೇವರ್ಲಿ ಪ್ಲೇಸ್‌
ಪ್ರಮುಖ ಕಲಾವಿದೆಯಾಗಿ
2009 "ವ್ಹೊಅ ಒಹ್!" (ವಿಥ್ ಫಾರ್ಎವರ್ ದಿ ಸಿಕ್ಕೆಸ್ಟ್ ಕಿಡ್ಸ್) ಆಲ್ಬಮ್-ಅಲ್ಲದ ಏಕಗೀತೆ
"ಒನ್ ಅಂಡ್ ದಿ ಸೇಮ್" (ಡೆಮಿ ಲೋವಟೋ ಜೊತೆಗೆ 82 ಡಿಸ್ನಿ ವಾಹಿನಿಯ ಪಾತ್ರ ಪಟ್ಟಿ
"ಸೆಂಡ್ ಇಟ್ ಆನ್"(ಡೆಮಿ ಲೋವಟೋ, ಜೋನಾಸ್ ಬ್ರದರ್ಸ್ ಮತ್ತು ಮಿಲೆಯ್ ಸೈರಸ್ ಜೊತೆಯಾಗಿ) 20

ಆಲ್ಬಮ್ ಅಲ್ಲದ ಹಾಡು

"—" ಪಟ್ಟಿಯಲ್ಲಿರದ ಬಿಡುಗಡೆಗಳನ್ನು ಸೂಚಿಸುತ್ತದೆ
    ಧ್ವನಿಮುದ್ರಿಕೆಗಳು
ವರ್ಷ ಗೀತೆ ಆಲ್ಬಮ್‌ಗಳು
2008 "ಕ್ರುಯೆಲ್ಲ ಡಿ ವಿಲ್" ಡಿಸ್ನಿ ಮೇನಿಯ 6
"ಟೆಲ್ ಮೀ ಸಂಥಿಂಗ್ ಐ ಡೋಂಟ್ ನೋ" ಅನದರ್ ಸಿಂಡ್ರೆಲ್ಲಾ ಸ್ಟೋರಿ
"ನ್ಯೂ ಕ್ಲಾಸಿಕ್" (ಡ್ರೆವ್ ಸೀಲೆಯ್ ಮೇಲೆ ಚಿತ್ರಿತವಾಗಿದೆ)
"ಬ್ಯಾಂಗ್ ಏ ಡ್ರಂ"
"ನ್ಯೂ ಕ್ಲಾಸಿಕ್"(ನೇರಪ್ರಸಾರ)

ಡ್ರೆವ್ ಸೀಲೆಯ್ ಮೇಲೆ ಚಿತ್ರಿತವಾಗಿದೆ)

"ಫ್ಲೈ ಟು ಯುವರ್ ಹಾರ್ಟ್" ಟಿಂಕರ್ ಬೆಲ್
2009 "ಒನ್ ಅಂಡ್ ದಿ ಸೇಮ್" ( ಡೆಮಿ ಲೋವಟೋ ಜೊತೆಯಾಗಿ) ಡಿಸ್ನಿ ವಾಹಿನಿಯ ಪಾತ್ರಗಳ ಪಟ್ಟಿ
"ಎವೆರಿಥಿಂಗ್ ಇಸ್ ನಾಟ್ ವಾಟ್ ಇಟ್ ಸೀಮ್ಸ್" ವಿಸರ್ಡ್ಸ್ ಆಫ್ ದಿ ವೆವರ್ಲಿ ಪ್ಲೇಸ್
"ಡಿಸ್ಅಪಿಯರ್"
"ಮ್ಯಾಜಿಕಲ್"
"ಮ್ಯಾಜಿಕ್"
    ಸಂಗೀತದ ವೀಡಿಯೊಗಳು
ಶೀರ್ಷಿಕೆ
2008 "ಕ್ರುಯೆಲ್ಲ ಡಿ ವಿಲ್"
"ಟೆಲ್ ಮೀ ಸಂಥಿಂಗ್ ಐ ಡೋಂಟ್ ನೋ"
"ಫ್ಲೈ ಟು ಯುವರ್ ಹಾರ್ಟ್"
2009 "ಒನ್ ಅಂಡ್ ದಿ ಸೇಮ್" (ಡೆಮಿ ಲೋವಟೋ ಜೊತೆಗೆ)
"ಮ್ಯಾಜಿಕ್"
"ಸೆಂಡ್ ಇಟ್ ಆನ್"(ಮಿಲೆಯ್ ಸೈರಸ್, ಡೆಮಿ ಲೋವಟೋ, ಮತ್ತು ಜೋನಾಸ್ ಬ್ರದರ್ಸ್)

ಪ್ರಶಸ್ತಿಗಳು

ಪ್ರಶಸ್ತಿಗಳು
ವರ್ಷ ಪ್ರಶಸ್ತಿ ವಿಭಾಗ ಕೆಲಸಗಳು ಫಲಿತಾಂಶ
2008 ಆಲ್ಮ ಪ್ರಶಸ್ತಿ ಕಿರುತೆರೆಯ ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಸ್ತ್ರೀ ಅಭಿನಯ ವಿಸರ್ಡ್ಸ್ ಆಫ್‌ ವೆವರ್ಲಿ ಪ್ಲೇಸ್‌ ರೋಸ್ಪಾನ್="3"|

style="background: #FFE3E3; color: black; vertical-align: middle; text-align: center; " class="duhoc-kn no table-no2 notheme"|ನಾಮನಿರ್ದೇಶನ

ಇಮಾಜೆನ್ ಪ್ರಶಸ್ತಿಗಳು ಅತ್ಯುತ್ತಮ ನಟಿ - ಕಿರುತೆರೆ
2009 ಇಮೇಜ್ ಪ್ರಶಸ್ತಿಗಳು ಯುವಜನ/ಮಕ್ಕಳ ಕಾರ್ಯಕ್ರಮ-ಸರಣಿ ಅಥವಾ ವಿಶೇಷ ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಭಿನಯ
ನಿಕಲೋಡಿಯನ್ ಕಿಡ್ಸ್' ಚಾಯ್ಸ್ ಪ್ರಶಸ್ತಿಗಳು ಅಚ್ಚುಮೆಚ್ಚಿನ TV ನಟಿ ರೋಸ್ಪಾನ್="2"|
ಯುವ ಕಲಾವಿದೆ ಪ್ರಶಸ್ತಿ

TV ಚಲನಚಿತ್ರಗಳಲ್ಲಿ, ಕಿರುಸರಣಿಗಳಲ್ಲಿ ಅಥವಾ ವಿಶೇಷದಲ್ಲಿ-ಪ್ರಮುಖ ಯುವ ನಟಿಯಾಗಿ ಅತ್ಯುತ್ತಮ ಅಭಿನಯ

ಅನದರ್ ಸಿಂಡ್ರೆಲ್ಲಾ ಸ್ಟೋರಿ
TV ಸರಣಿಗಳಲ್ಲಿ ಅತ್ಯುತ್ತಮ ಅಭಿನಯ - ಪ್ರಮುಖ ಯುವ ನಟಿ ವಿಸರ್ಡ್ಸ್ ಆಫ್‌ ವೇವರ್ಲಿ ಪ್ಲೇಸ್‌ ರೋಸ್ಪಾನ್="2"|
ಹಿನ್ನೆಲೆ-ಧ್ವನಿಯ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ ಹಾರ್ಟನ್ ಹಿಯರ್ಸ್ ಎ ಹೂ! ಹಾರ್ಟನ್ ಹಿಯರ್ಸ್ ಎ ಹೂ!]]]]
ಟೀನ್ ಚಾಯ್ಸ್ ಪ್ರಶಸ್ತಿಗಳು "ಸಮ್ಮರ್ ಚಾಯ್ಸ್ -ಪ್ರಖ್ಯಾತ ನೃತ್ಯಗಾರ್ತಿ" ಅನದರ್ ಸಿಂಡ್ರೆಲ್ಲಾ ಸ್ಟೋರಿ ರೋಸ್ಪಾನ್="5"|
"ಚಾಯ್ಸ್ ಸಮ್ಮರ್ - TV ಸ್ಟಾರ್-ಮಹಿಳೆ" ಪ್ರಿನ್ಸೆಸ್ ಪ್ರೊಟೆಕ್ಷನ್ ಪ್ರೋಗ್ರಾಂ
"ಛಾಯ್ಸ್ ಅದರ್ ಸ್ಟಫ್-ರೆಡ್ ಕಾರ್ಪೆಟ್ ಐಕಾನ್:ಮಹಿಳೆ" ಸ್ವಂತ ಪಾತ್ರ
ಹಾಲಿವುಡ್ ಸ್ಟೈಲ್ ಪ್ರಶಸ್ತಿ ಮುಗ್ಧಬಾಲಿಕೆಯ ಶೈಲಿ
ಆಲ್ಮ ಪ್ರಶಸ್ತಿ ಹಾಸ್ಯದಲ್ಲಿ ವಿಶೇಷ ಸಾಧನೆ - ಕಿರುತೆರೆ ನಟಿ ವಿಸರ್ಡ್ಸ್ ಆಫ್‌ ವೇವರ್ಲಿ ಪ್ಲೇಸ್‌
ಇಮಾಜೆನ್ ಪ್ರಶಸ್ತಿಗಳು ಅತ್ಯುತ್ತಮ ನಟಿ - ಕಿರುತೆರೆ ರೋಸ್ಪಾನ್="3"|
ನಿಕೆಲೊಡೆನ್ ಅಸ್ಟ್ರೇಲಿಯನ್ ಕಿಡ್ಸ್ ಛಾಯ್ಸ್ ಪ್ರಶಸ್ತಿಗಳು 2009 ಅಚ್ಚುಮೆಚ್ಚಿನ ಅಂತಾರಾಷ್ಟ್ರೀಯ TV ನಟಿ ಸ್ವಂತ ಪಾತ್ರ
2010 NAACP ಇಮೇಜ್ ಪ್ರಶಸ್ತಿಗಳು ಯುವಜನ/ಮಕ್ಕಳ ಕಾರ್ಯಕ್ರಮ-ಸರಣಿ ಅಥವಾ ವಿಶೇಷದಲ್ಲಿ ಅತ್ಯುತ್ತಮ ಪ್ರದರ್ಶನ

ಆಕರಗಳು

ಹೊರಗಿನ ಕೊಂಡಿಗಳು

Tags:

ಸೆಲೆನಾ ಗೊಮೆಜ್ ಆರಂಭಿಕ ಜೀವನಸೆಲೆನಾ ಗೊಮೆಜ್ ಸಾಗಿ ಬಂದ ವೃತ್ತಿ ಮಾರ್ಗಸೆಲೆನಾ ಗೊಮೆಜ್ ಲೋಕೋಪಕಾರಸೆಲೆನಾ ಗೊಮೆಜ್ ಉದ್ಯಮಶೀಲತೆಸೆಲೆನಾ ಗೊಮೆಜ್ ವೈಯಕ್ತಿಕ ಜೀವನಸೆಲೆನಾ ಗೊಮೆಜ್ ಚಲನಚಿತ್ರಗಳ ಪಟ್ಟಿಸೆಲೆನಾ ಗೊಮೆಜ್ ಧ್ವನಿಮುದ್ರಿಕೆ ಪಟ್ಟಿಸೆಲೆನಾ ಗೊಮೆಜ್ ಪ್ರಶಸ್ತಿಗಳುಸೆಲೆನಾ ಗೊಮೆಜ್ ಆಕರಗಳುಸೆಲೆನಾ ಗೊಮೆಜ್ ಹೊರಗಿನ ಕೊಂಡಿಗಳುಸೆಲೆನಾ ಗೊಮೆಜ್

🔥 Trending searches on Wiki ಕನ್ನಡ:

ನದಿನಿರಂಜನವಿಧಾನಸೌಧಭಾರತೀಯ ಧರ್ಮಗಳುಶ್ರೀನಿವಾಸ ರಾಮಾನುಜನ್ಹುರುಳಿಕಾಟೇರಯಜಮಾನ (ಚಲನಚಿತ್ರ)ಕರ್ನಾಟಕದ ಏಕೀಕರಣಇಂಟೆಲ್ಶಿವಕೋಟ್ಯಾಚಾರ್ಯಅಶೋಕನ ಶಾಸನಗಳುಜ್ಯೋತಿಷ ಶಾಸ್ತ್ರಸಾಹಿತ್ಯಸಿರ್ಸಿಅಸ್ಪೃಶ್ಯತೆಗೋತ್ರ ಮತ್ತು ಪ್ರವರನ್ಯೂಟನ್‍ನ ಚಲನೆಯ ನಿಯಮಗಳುಕನ್ನಡದಲ್ಲಿ ಸಣ್ಣ ಕಥೆಗಳುಅರವಿಂದ ಘೋಷ್ಸಂಭೋಗಕೇಂದ್ರ ಲೋಕ ಸೇವಾ ಆಯೋಗಆರ್ಯ ಸಮಾಜಕನ್ನಡ ಛಂದಸ್ಸುಭಾರತದ ರಾಷ್ಟ್ರೀಯ ಚಿನ್ಹೆಗಳುಕಾನೂನುಭಂಗ ಚಳವಳಿಇಂದಿರಾ ಗಾಂಧಿಭೂಕಂಪಆಂಗ್‌ಕರ್ ವಾಟ್ಪ್ರತಿಧ್ವನಿಸಸ್ಯ ಜೀವಕೋಶಕಳಿಂಗ ಯುದ್ದ ಕ್ರಿ.ಪೂ.261ಯುನೈಟೆಡ್ ಕಿಂಗ್‌ಡಂಅನ್ನಿ ಬೆಸೆಂಟ್ಭಾರತೀಯ ಮೂಲಭೂತ ಹಕ್ಕುಗಳುಭಾರತದ ಸ್ವಾತಂತ್ರ್ಯ ದಿನಾಚರಣೆಉಡಚುನಾವಣೆಮಡಿವಾಳ ಮಾಚಿದೇವಟಿಪ್ಪಣಿಗೋವಹುಲಿಮಾವಂಜಿತುಂಬೆಗಿಡಋತುಮೊದಲನೇ ಅಮೋಘವರ್ಷಕರ್ನಾಟಕದ ಮಹಾನಗರಪಾಲಿಕೆಗಳುಸವದತ್ತಿಜನ್ನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೌರ್ಯ ಸಾಮ್ರಾಜ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಳೆಯುವ ಸಾಧನಅಮೃತಧಾರೆ (ಕನ್ನಡ ಧಾರಾವಾಹಿ)ಕಪಾಲ ನರಶೂಲೆಕಂಸಾಳೆಹಲ್ಮಿಡಿ ಶಾಸನಗುರುತ್ವಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳುಭಾರತ ಬಿಟ್ಟು ತೊಲಗಿ ಚಳುವಳಿಅಂತರ್ಜಲಸಾವಿತ್ರಿಬಾಯಿ ಫುಲೆಕನ್ನಡ ಗುಣಿತಾಕ್ಷರಗಳುವಾಣಿವಿಲಾಸಸಾಗರ ಜಲಾಶಯಬ್ಯಾಂಕ್ ಖಾತೆಗಳುಕೈಗಾರಿಕೆಗಳ ಸ್ಥಾನೀಕರಣಹಣಜೋಡು ನುಡಿಗಟ್ಟುಶೂದ್ರ ತಪಸ್ವಿಬಿ.ಎಫ್. ಸ್ಕಿನ್ನರ್ದ.ರಾ.ಬೇಂದ್ರೆಅಶ್ವತ್ಥಮರಹರ್ಷವರ್ಧನಕರ್ನಾಟಕ ಸಂಗೀತಜಶ್ತ್ವ ಸಂಧಿಭಾರತದ ವಾಯುಗುಣ🡆 More