ಸೂಕ್ಷ್ಮ ಜೀವ ವಿಜ್ಞಾನ

ಸೂಕ್ಷ್ಮ ಜೀವವಿಜ್ಞಾನ ಎಂಬುದು ವೈಜ್ಞಾನಿಕವಾಗಿ ಸೂಕ್ಷ್ಮಜೀವಿಗಳ ಅಧ್ಯಯನ ನಡೆಸುವ ಶಾಸ್ತ್ರವಾಗಿದೆ.

ಪ್ರಮುಖವಾಗಿ ಏಕಾಣುಜೀವಿಗಳಾದ ಬ್ಯಾಕ್ಟೀರಿಯ, ಪ್ರೊಕ್ಯಾರ್ಯೊಟ, ವೈರಾಣು ಮತ್ತು ಬೂಷ್ಟು ಜೀವಿಗಳ ಅಧ್ಯಯನ ನಡೆಸಲಾಗುತ್ತದೆ. ಈ ಸೂಕ್ಷ್ಮಜೀವಿಗಳು ಏಕಕೋಶೀಯ ಅಥವಾ ಜೀವಕೋಶ-ಗುಚ್ಛದ ಅತಿಸೂಕ್ಷ್ಮ ಜೀವಿಗಳಾಗಿರುತ್ತವೆ. ಇದು ಶಿಲೀಂಧ್ರಗಳು ಮತ್ತು ಪ್ರೋಟಿಸ್ಟ್‌ ವರ್ಗಕ್ಕೆ ಸೇರಿದ ಜೀವಿಗಳ ರೀತಿಯ ಯೂಕ್ಯಾರಿಯೋಟ್‌ ಜೀವಿಗಳು ಹಾಗೂ ಪ್ರೋಕ್ಯಾರಿಯೋಟ್‌ ಜೀವಿಗಳನ್ನು ಒಳಗೊಂಡಿರುತ್ತದೆ. ವೈರಸ್‌‌ಗಳನ್ನು ಬದುಕಿರುವ ಜೀವಿಗಳಂತೆ ಕಟ್ಟುನಿಟ್ಟಾಗಿ ವರ್ಗೀಕರಿಸಿಲ್ಲವಾದರೂ, ಅವುಗಳ ಕುರಿತೂ ಇಲ್ಲಿ ಅಧ್ಯಯನವನ್ನು ನಡೆಸಲಾಗುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ; ಬರಿಗಣ್ಣಿಗೆ ಕಾಣಿಸದಷ್ಟು ತುಂಬಾ ಚಿಕ್ಕದಾಗಿರುವ ಜೀವ ಮತ್ತು ಜೀವಿಗಳ ಅಧ್ಯಯನಕ್ಕೆ ಸೂಕ್ಷ್ಮಜೀವವಿಜ್ಞಾನ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಜೀವ ವಿಜ್ಞಾನ
ಸೂಕ್ಷ್ಮಜೀವಿಗಳೊಂದಿಗೆ ಗುರುತಿಸಲಾಗಿರುವ ಒಂದು ಸಮುದ್ರಪಾಚಿಯ ತಟ್ಟೆ

ಸೂಕ್ಷ್ಮಜೀವವಿಜ್ಞಾನವು ವಿಶಿಷ್ಟ ರೀತಿಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ, ಅಥವಾ ರೋಗರಕ್ಷಾಶಾಸ್ತ್ರದ ಅಧ್ಯಯನವನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಪ್ರತಿರಕ್ಷಣಾ ವ್ಯವಸ್ಥೆಗಳು ರೋಗಕಾರಕ ಸೂಕ್ಷ್ಮಜೀವಿಗಳೊಂದಿಗೆ ಪರಸ್ಪರ ಕಾರ್ಯನಡೆಸುತ್ತವೆ ಅಥವಾ ಪರಸ್ಪರ ಪ್ರಭಾವ ಬೀರುತ್ತವೆ; ಈ ಎರಡೂ ವಿಭಾಗಗಳು ಅನೇಕ ವೇಳೆ ಪರಸ್ಪರ ಅಡ್ಡಹಾಯುವುದರಿಂದಲೇ ಅನೇಕ ಕಾಲೇಜುಗಳು "ಸೂಕ್ಷ್ಮಜೀವವಿಜ್ಞಾನ ಮತ್ತು ರೋಗರಕ್ಷಾಶಾಸ್ತ್ರ" ಎಂಬ ಒಂದು ಒಗ್ಗೂಡಿದ ಪದವಿಯನ್ನು ಶಿಕ್ಷಣಾರ್ಥಿಗಳಿಗೆ ನೀಡುತ್ತವೆ. ಸೂಕ್ಷ್ಮಜೀವವಿಜ್ಞಾನ ಎಂಬುದು ಒಂದು ವ್ಯಾಪಕವಾದ ಪದವಾಗಿದ್ದು, ಇದು ಸೂಕ್ಷ್ಮರೋಗಾಣು ಶಾಸ್ತ್ರ, ಶಿಲೀಂಧ್ರಶಾಸ್ತ್ರ, ಪರಜೀವಿಶಾಸ್ತ್ರ, ಬ್ಯಾಕ್ಟೀರಿಯ ವಿಜ್ಞಾನ ಮತ್ತು ಇತರ ಶಾಖೆಗಳನ್ನು ಒಳಗೊಂಡಿದೆ. ಸೂಕ್ಷ್ಮಜೀವವಿಜ್ಞಾನದಲ್ಲಿ ಪರಿಣತಿ ಹೊಂದಿದವನಿಗೆ ಅಥವಾ ವಿಶೇಷಜ್ಞನಿಗೆ ಸೂಕ್ಷ್ಮಜೀವವಿಜ್ಞಾನಿ ಎಂದು ಕರೆಯಲಾಗುತ್ತದೆ.

ಸೂಕ್ಷ್ಮಜೀವವಿಜ್ಞಾನ ಕ್ಷೇತ್ರದಲ್ಲಿ ಸಕ್ರಿಯವಾದ ಸಂಶೋಧನೆಗಳು ನಡೆಯುತ್ತಿವೆ, ಮತ್ತು ಈ ಕ್ಷೇತ್ರವು ನಿರಂತರವಾಗಿ ಪ್ರಗತಿ ಹೊಂದುತ್ತಿದೆ. ಪ್ರಾಯಶಃ ನಾವು ಭೂಮಿಯ ಮೇಲಿರುವ ಸೂಕ್ಷ್ಮಜೀವಿ ಜಾತಿಗಳ ಪೈಕಿ ಕೇವಲ ಸುಮಾರು ಶೇಕಡಾ ಒಂದರಷ್ಟನ್ನು ಮಾತ್ರವೇ ಅಧ್ಯಯನ ಮಾಡಿರಬಹುದು ಎನಿಸುತ್ತದೆ. ಸೂಕ್ಷ್ಮಜೀವಿಗಳು ಮುನ್ನೂರು ವರ್ಷಗಳಷ್ಟು ಹಿಂದಿನಿಂದಲೂ ನೇರವಾದ ವೀಕ್ಷಣೆಗೆ ಒಳಗಾಗಿದ್ದರೂ ಸಹ, ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನದಂಥ ಹಳೆಯದಾದ, ಜೀವವಿಜ್ಞಾನದ ಶಾಖೆಗಳಿಗೆ ಹೋಲಿಸಿದರೆ ಇನ್ನೂ ತನ್ನ ಶೈಶವಾವಸ್ಥೆಯಲ್ಲಿದೆ ಎಂದೇ ಹೇಳಬಹುದು.

ಇತಿಹಾಸ

ಪ್ರಾಚೀನ ಇತಿಹಾಸ

  • ಸೂಕ್ಷ್ಮಜೀವಿಗಳು 17ನೇ ಶತಮಾನದಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಆವಿಷ್ಕಾರಗೊಳ್ಳುವವರೆಗೂ ಅವುಗಳ ಅಸ್ತಿತ್ವವು ಆಧಾರಕಲ್ಪನೆಯಾಗಿ ಪರಿಗ್ರಹಿಸಲ್ಪಟ್ಟಿತ್ತು. ಕ್ರಿ.ಪೂ. 600 ರ ಅವಧಿಯಲ್ಲಿ ಪ್ರಾಚೀನ ಭಾರತದ ಶಸ್ತ್ರಚಿಕಿತ್ಸಾ ತಜ್ಞನಾದ ಸುಶ್ರುತನು ಹಲವಾರು ಕಾಯಿಲೆಗಳಿಗೆ ಸೂಕ್ಷ್ಮಜೀವಿಗಳೇ ಕಾರಣ ಎಂಬುದನ್ನು ತಿಳಿಸಿದ ಹಾಗೂ ಸಂಪರ್ಕ, ಗಾಳಿ ಅಥವಾ ನೀರಿನ ಮೂಲಕ ಅವು ಪ್ರಸರಣಗೊಳ್ಳಬಲ್ಲವು ಎಂಬುದನ್ನು ತಾನು ಬರೆದ ಸುಶ್ರುತ ಸಂಹಿತಾ ಎಂಬ ಕೃತಿಯಲ್ಲಿ ತಿಳಿಸಿದ. ಸೂಕ್ಷ್ಮಜೀವಿಗಳ ಕುರಿತಾದ ಸಿದ್ಧಾಂತಗಳನ್ನು ಮಾರ್ಕಸ್‌ ಟೆರೆಂಷಿಯಸ್‌ ವರೊ ಎಂಬ ರೋಮನ್‌ ವಿದ್ವಾಂಸನು ಪ್ರತಿಪಾದಿಸಿದನು. ಜೌಗು ಪ್ರದೇಶಗಳ ಸುತ್ತಮುತ್ತಲ ಭಾಗಗಳಲ್ಲಿ ಗೃಹಸಂಕೀರ್ಣವೊಂದನ್ನು ನೆಲೆಗೊಳಿಸುವುದರ ವಿರುದ್ಧ ಆತ ತನ್ನ ಆನ್‌ ಅಗ್ರಿಕಲ್ಚರ್‌ ಎಂಬ ಶೀರ್ಷಿಕೆಯ ಪುಸ್ತಕವೊಂದರಲ್ಲಿ ಎಚ್ಚರಿಸಿದ್ದಾನೆ:

...ಮತ್ತು ಬರಿಯ ಕಣ್ಣುಗಳಿಗೆ ಕಾಣಿಸದ ನಿರ್ದಿಷ್ಟ ಸೂಕ್ಷ್ಮಜೀವಿಗಳು ಅಲ್ಲಿ ಹುಟ್ಟಿಕೊಳ್ಳುತ್ತವೆಯಾದ್ದರಿಂದ, ಅವು ಗಾಳಿಯಲ್ಲಿ ತೇಲಿಕೊಂಡು ಬಾಯಿ ಹಾಗೂ ಮೂಗಿನ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುತ್ತವೆ ಮತ್ತು ಗಂಭೀರಸ್ವರೂಪದ ಕಾಯಿಲೆಗಳನ್ನು ಉಂಟುಮಾಡುತ್ತವೆ.

  • ಇನ್ನೂ ಕಣ್ಣಿಗೆ ಕಾಣಿಸದ ಜೀವಿಗಳಿಂದ ಕಾಯಿಲೆಗಳು ಹರಡುವ ಸಾಧ್ಯತೆ ಇದೆ ಎಂಬುದನ್ನು ನಮ್ಮ ಪೂರ್ವಜರು ಅರಿತುಕೊಂಡಿದ್ದರು ಎಂಬುದನ್ನು ಆ ಪುಸ್ತಕದ ಈ ಉದ್ಧೃತಭಾಗವು ಸೂಚಿಸುತ್ತದೆ ಎನಿಸುತ್ತದೆ. ದ ಕ್ಯಾನನ್ ಆಫ್ ಮೆಡಿಸಿನ್‌ (1020) ಎಂಬ ಕೃತಿಯಲ್ಲಿ, ಅಬು ಆಲಿ ಇಬ್ನ್‌ ಸಿನಾ (ಅವಿಸೆನ್ನ) ಎಂಬಾತ ತಿಳಿಸಿರುವ ಪ್ರಕಾರ, ಶಾರೀರಿಕ ಸ್ರವಿಕೆಯು ಸೋಂಕಿಗೆ ಒಳಗಾಗುವ ಮುನ್ನ ಭೂಮಿಗೆ ಸೇರಿದ ಮಲಿನವಾದ ಬಾಹ್ಯ ಕಾಯಗಳಿಂದ ಮಲಿನಗೊಳ್ಳುತ್ತದೆ. ಕ್ಷಯರೋಗ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳ ಸಾಂಕ್ರಾಮಿಕ ಸ್ವರೂಪದ ಕುರಿತೂ ಆತನು ಆಧಾರಕಲ್ಪನೆಯಾಗಿ ಪರಿಗ್ರಹಿಸಿದ್ದು, ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯನ್ನು ಸೀಮಿತಗೊಳಿಸುವ ಒಂದು ಮಾರ್ಗವಾಗಿ ಸಂಪರ್ಕತಡೆ ಅಥವಾ ಪ್ರತಿಬಂಧಕವನ್ನು ಆತ ಬಳಸಿದ್ದಾನೆ.
  • ಗೆಡ್ಡೆ ಪ್ಲೇಗು ಎಂದು ಕರೆಯಲಾಗುವ ಪ್ಲೇಗುಮಾರಿಯು 14ನೇ ಶತಮಾನದಲ್ಲಿ ಅಲ್‌-ಅಂದಾಲಸ್‌ನ್ನು ತಲುಪಿದಾಗ, ಸಾಂಕ್ರಾಮಿಕ ಕಾಯಿಲೆಗಳು "ಸೂಕ್ಷ್ಮ ಕಾಯಗಳಿಂದ" ಉಂಟಾಗುತ್ತವೆ ಹಾಗೂ ಇವು ಮಾನವ ಶರೀರದೊಳಗೆ ಪ್ರವೇಶಿಸಿ, ಕಾಯಿಲೆಯನ್ನುಂಟುಮಾಡುತ್ತವೆ ಎಂಬುದನ್ನು ಇಬ್ನ್‌ ಖಾತಿಮಾ ಆಧಾರಕಲ್ಪನೆಯಾಗಿ ಪರಿಗ್ರಹಿಸಿದ. 1546ರಲ್ಲಿ ಗಿರೋಲಾಮೋ ಫ್ರಕಾಸ್ಟೊರೊ ಎಂಬಾತ ತನ್ನ ಪ್ರಸ್ತಾವನೆಯನ್ನು ಮಂಡಿಸುತ್ತಾ, ಸಾಂಕ್ರಾಮಿಕ ಕಾಯಿಲೆಗಳು ವರ್ಗಾವಣೆಗೊಳ್ಳಬಲ್ಲ ಬೀಜದಂಥ ವಸ್ತುಗಳಿಂದ ಉಂಟಾದವು. ಈ ಕಾಯಗಳು ಪ್ರತ್ಯಕ್ಷವಾದ ಇಲ್ಲವೇ ಪರೋಕ್ಷವಾದ ಸಂಪರ್ಕದ ಮೂಲಕ ಅಥವಾ ಕೆಲವೊಮ್ಮೆ ಸಂಪರ್ಕವಿಲ್ಲದೆಯೂ ದೀರ್ಘ ಅಂತರಗಳವರೆಗೆ ಸೋಂಕನ್ನು ಪ್ರಸರಣ ಮಾಡಬಲ್ಲವಾಗಿದ್ದವು ಎಂದು ತಿಳಿಸಿದ.
  • ಸೂಕ್ಷ್ಮಜೀವಿಗಳ ಕುರಿತಾದ ಈ ಎಲ್ಲಾ ಆರಂಭಿಕ ಸಮರ್ಥನೆಗಳೂ ಊಹಾತ್ಮಕ ಸ್ವರೂಪವನ್ನು ಹೊಂದಿದ್ದವು ಹಾಗೂ ಇವಕ್ಕೆ ಯಾವುದೇ ದತ್ತಾಂಶವಾಗಲೀ, ವಿಜ್ಞಾನವಾಗಲೀ ಆಧಾರವಾಗಿರಲಿಲ್ಲ. 17ನೇ ಶತಮಾನದವರೆಗೂ ಸೂಕ್ಷ್ಮಜೀವಿಗಳನ್ನು ಸಾಬೀತು ಮಾಡಿರಲಿಲ್ಲ ಮತ್ತು ವೀಕ್ಷಿಸಿರಲಿಲ್ಲ, ಅಥವಾ ನಿಖರವಾಗಿ ಮತ್ತು ಸೂಕ್ತವಾಗಿ ವಿವರಿಸಲಿರಲಿಲ್ಲ. ಸೂಕ್ಷ್ಮಜೀವವಿಜ್ಞಾನ ಮತ್ತು ಬ್ಯಾಕ್ಟೀರಿಯ ವಿಜ್ಞಾನವು ಒಂದು ವಿಜ್ಞಾನದ ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವುದಕ್ಕಾಗಿ ಕ್ರಮಬದ್ಧವಾಗಿರುವ ಒಂದು ಅತ್ಯಂತ ಮೂಲಭೂತ ಉಪಕರಣವನ್ನು ಈ ಎಲ್ಲಾ ಆರಂಭಿಕ ಶೋಧನೆಗಳು ಒಳಗೊಳ್ಳದೇ ಇದ್ದುದೇ ಇದರ ಹಿಂದಿನ ಕಾರಣವಾಗಿತ್ತು. ಆ ಸಾಧನ ಮತ್ತಾವುದೂ ಆಗಿರದೆ, ಸೂಕ್ಷ್ಮದರ್ಶಕವಾಗಿತ್ತು.
ಸೂಕ್ಷ್ಮ ಜೀವ ವಿಜ್ಞಾನ 
ಆಂಟೊನಿ ವಾನ್‌ ಲೀವೆನ್‌ಹೂಕ್‌, ಮೊಟ್ಟಮೊದಲ ಸೂಕ್ಷ್ಮಜೀವವಿಜ್ಞಾನಿ. ಸೂಕ್ಷ್ಮದರ್ಶಕವೊಂದನ್ನು ಬಳಸಿಕೊಂಡು ಸೂಕ್ಷ್ಮಜೀವಿಗಳನ್ನು ವೀಕ್ಷಿಸಿದವರಲ್ಲಿ ಮೊದಲಿಗ. 'ಸೂಕ್ಷ್ಮ ಜೀವವಿಜ್ಞಾನದ ಜನಕ' ಎಂದು ಹೆಸರಾಗಿದ್ದಾನೆ. ಆತ ಸೂಕ್ಷ್ಮದರ್ಶಕವನ್ನು ಕಂಡುಹಿಡಿಯಲಿಲ್ಲ, ಬದಲಿಗೆ ಅತ್ಯುತ್ತಮವಾಗಿ ಅದನ್ನು ಅಭಿವೃದ್ಧಿಪಡಿಸಿದ.

ಆಧುನಿಕತೆ ಇತಿಹಾಸ

  • ಬ್ಯಾಕ್ಟೀರಿಯಾ, ಮತ್ತು ಇತರ ಸೂಕ್ಷ್ಮಜೀವಿಗಳನ್ನು ಮೊಟ್ಟಮೊದಲು ಆಂಟೊನಿ ವಾನ್‌ ಲೀವೆನ್‌ಹೂಕ್‌‌ 1676ರಲ್ಲಿ ವೀಕ್ಷಿಸಿದನು. ಇದಕ್ಕಾಗಿ ಆತ ತನ್ನದೇ ಸ್ವಂತ ವಿನ್ಯಾಸದ ಒಂದು ಏಕ-ಮಸೂರದ ಸೂಕ್ಷ್ಮದರ್ಶಕವನ್ನು ಬಳಸಿದ್ದ. ಹೀಗೆ ಮಾಡುವಲ್ಲಿ ಲೀವೆನ್‌ಹೂಕ್‌ ಎಂಬಾತ ಜೀವವಿಜ್ಞಾನದಲ್ಲಿನ ಅತ್ಯಂತ ಪ್ರಮುಖ ಆವಿಷ್ಕಾರಗಳಲ್ಲಿ ಒಂದನ್ನು ಕೈಗೊಂಡ, ಮತ್ತು ಬ್ಯಾಕ್ಟೀರಿಯ ವಿಜ್ಞಾನ ಹಾಗೂ ಸೂಕ್ಷ್ಮಜೀವವಿಜ್ಞಾನದ ವೈಜ್ಞಾನಿಕ ಕ್ಷೇತ್ರಗಳನ್ನು ಆತ ಆರಂಭಿಸಿದ. ಬಹಳ ಕಾಲದ ನಂತರ ಅಂದರೆ, 1828ರಲ್ಲಿ ಎಹ್ರೆನ್‌‍ಬರ್ಗ್‌ ಎಂಬಾತನು "ಬ್ಯಾಕ್ಟೀರಿಯಂ" ಎಂಬ ಹೆಸರನ್ನು ಪರಿಚಯಿಸಿದನು. "ಚಿಕ್ಕ ಕಡ್ಡಿ" ಎಂಬ ಅರ್ಥವನ್ನು ನೀಡುವ ಗ್ರೀಕ್‌ ಭಾಷೆಯ βακτηριον ಎಂಬ ಪದದಿಂದ ಈ ಪದವು ಜನ್ಯವಾಗಿತ್ತು.
  • ವಾನ್‌ ಲೀವೆನ್‌ಹೂಕ್‌ನನ್ನು ಮೊಟ್ಟಮೊದಲ ಸೂಕ್ಷ್ಮಜೀವವಿಜ್ಞಾನಿ ಎಂದು ಉಲ್ಲೇಖಿಸಲಾಗುತ್ತದೆಯಾದರೂ, ಬೂಷ್ಟುಗಳ ಬೀಜಾಣುಬಿಡುವ ಕಾಯಗಳ ಮೊಟ್ಟಮೊದಲ ದಾಖಲಿತ ಸೂಕ್ಷ್ಮಜೀವವಿಜ್ಞಾನದ ವೀಕ್ಷಣೆಯನ್ನು ಅವನಿಗೂ ಮುಂಚಿತವಾಗಿ 1665ರಲ್ಲಿ ರಾಬರ್ಟ್‌ ಹುಕ್‌ ಎಂಬಾತನು ಮಾಡಿದನು.
  • ಬ್ಯಾಕ್ಟೀರಿಯ ವಿಜ್ಞಾನ ದ ಕ್ಷೇತ್ರವನ್ನು (ನಂತರ ಇದನ್ನು ಸೂಕ್ಷ್ಮಜೀವವಿಜ್ಞಾನದ ಒಂದು ಉಪವಿಭಾಗವಾಗಿ ಪರಿಗಣಿಸಲಾಯಿತು) 19ನೇ ಶತಮಾನದಲ್ಲಿ ಫರ್ಡಿನಂಡ್‌ ಕೋನ್‌ ಎಂಬ ಓರ್ವ ಸಸ್ಯವಿಜ್ಞಾನಿ ಸ್ಥಾಪಿಸಿದನು ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಪಾಚಿಗಳು ಹಾಗೂ ದ್ಯುತಿಸಂಶ್ಲೇಷಕ ಬ್ಯಾಕ್ಟೀರಿಯಾಗಳ ಮೇಲಿನ ಈತನ ಅಧ್ಯಯನಗಳು, ಬೇಸಿಲಸ್‌ ಮತ್ತು ಬೆಗ್ಗಿಯಾಟೋವಾ ಸೇರಿದಂತೆ ಹಲವಾರು ಬ್ಯಾಕ್ಟೀರಿಯಾವನ್ನು ವಿವರಿಸುವಲ್ಲಿ ಆತನಿಗೆ ನೆರವಾದವು. ಬ್ಯಾಕ್ಟೀರಿಯಾದ ಜೀವಿವರ್ಗೀಕರಣದ ವಿಂಗಡಣೆಗೆ ಸಂಬಂಧಿಸಿದ ಒಂದು ಯೋಜನೆಯನ್ನು ರೂಪಿಸುವಲ್ಲಿ ಕೋನ್‌ ಕೂಡ ಮೊದಲಿಗನಾಗಿದ್ದ. ಲೂಯಿಸ್‌ ಪಾಶ್ಚರ್‌ ಮತ್ತು ರಾಬರ್ಟ್‌ ಕಾಚ್‌ ಈ ಇಬ್ಬರೂ ಸಹ ಕೋನ್‌ನ ಸಮಕಾಲೀನರಾಗಿದ್ದರು ಮತ್ತು ಇವರನ್ನು ವೈದ್ಯಕೀಯ ಸೂಕ್ಷ್ಮಜೀವವಿಜ್ಞಾನದ ಸಂಸ್ಥಾಪಕರೆಂದು ಪರಿಗಣಿಸಲಾಗಿದೆ.
  • ಅಂದು ವ್ಯಾಪಕವಾಗಿ ಪ್ರಚಾರದಲ್ಲಿದ್ದ ಸ್ವಯಂ ಜನನದ ಸಿದ್ಧಾಂತವನ್ನು ತಪ್ಪೆಂದು ಸಾಧಿಸಲು, ತನ್ಮೂಲಕ ಸೂಕ್ಷ್ಮಜೀವವಿಜ್ಞಾನದ ಗುರುತನ್ನು ಒಂದು ಜೈವಿಕ ವಿಜ್ಞಾನವಾಗಿ ಘನೀಕರಿಸಲು ವಿನ್ಯಾಸಗೊಳಿಸಲಾಗಿದ್ದ ತನ್ನ ಪ್ರಯೋಗಗಳ ಸರಣಿಗೆ ಪಾಶ್ಚರ್‌ ಅತ್ಯಂತ ಪ್ರಸಿದ್ಧನಾಗಿದ್ದಾನೆ. ಆಹಾರ ಸಂಸ್ಕರಣೆಗೆ (ಪಾಶ್ಚರೀಕರಣ) ಸಂಬಂಧಪಟ್ಟಿರುವ ಅನೇಕ ವಿಧಾನಗಳನ್ನೂ ಪಾಶ್ಚರ್‌ ವಿನ್ಯಾಸಗೊಳಿಸಿದ್ದಾನೆ ಮತ್ತು ನೆರಡಿ, ಹಕ್ಕಿ ಕಾಲರ ಮತ್ತು ರೇಬೀಸ್‍ನಂಥ ಅನೇಕ ಕಾಯಿಲೆಗಳಿಗೆ ಪ್ರತಿಯಾಗಿ ಲಸಿಕೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿಯೂ ಆತನಿಗೆ ಸಲ್ಲುತ್ತದೆ. ಕಾಯಿಲೆಯ ರೋಗಾಣು ಸಿದ್ಧಾಂತಕ್ಕೆ ನೀಡಿದ ತನ್ನ ಕೊಡುಗೆಗಳಿಂದಾಗಿ ಕಾಚ್‌ ತುಂಬಾ ಪ್ರಸಿದ್ಧನಾಗಿದ್ದಾನೆ.
  • ವಿಲಕ್ಷಣವಾದ ಕಾಯಿಲೆಗಳು ವಿಲಕ್ಷಣವಾದ ರೋಗಕಾರಕ ಸೂಕ್ಷ್ಮಜೀವಿಗಳಿಂದ ಉಂಟಾಗುತ್ತಿದ್ದವು ಎಂಬುದು ಈತನ ಸಮರ್ಥನೆಯಾಗಿತ್ತು. ಕಾಚ್‌ನ ಆಧಾರ ನಿಯಮಗಳು ಎಂದು ಹೆಸರಾಗಿರುವ ಮಾನದಂಡದ ಒಂದು ಸರಣಿಯನ್ನೇ ಆತ ಅಭಿವೃದ್ಧಿಪಡಿಸಿದ. ಅಪ್ಪಟ ಸಂಗೋಪನ ಕೃಷಿಯಲ್ಲಿ ಬ್ಯಾಕ್ಟೀರಿಯಾದ ಬೇರ್ಪಡಿಸುವಿಕೆಯ ಕುರಿತಾಗಿ ಗಮನಹರಿಸಿದ ಮೊದಲ ವಿಜ್ಞಾನಿಗಳ ಪೈಕಿ ಕಾಚ್‌ ಕೂಡಾ ಒಬ್ಬ. ಇದರ ಪರಿಣಾಮವಾಗಿ, ಕ್ಷಯರೋಗದ ಕಾರಣಕರ್ತ ಮಧ್ಯವರ್ತಿಯಾದ ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್‌ ಸೇರಿದಂತೆ ಹಲವಾರು ಅಪೂರ್ವವಾದ ಬ್ಯಾಕ್ಟೀರಿಯಾ ಕುರಿತಾಗಿ ವಿವರಣೆಯನ್ನು ನೀಡಲು ಆತನಿಗೆ ಸಾಧ್ಯವಾಯಿತು.
  • ಪಾಶ್ಚರ್‌ ಮತ್ತು ಕಾಚ್‌ ಈ ಇಬ್ಬರನ್ನೂ ಸೂಕ್ಷ್ಮಜೀವವಿಜ್ಞಾನದ ಸಂಸ್ಥಾಪಕರೆಂದು ಪರಿಗಣಿಸಲಾಗಿದ್ದರೂ, ಅವರ ಕೆಲಸವು ಸೂಕ್ಷ್ಮಜೀವಿಯ ಪ್ರಪಂಚದ ನಿಜವಾದ ವೈವಿಧ್ಯವನ್ನು ಕರಾರುವಾಕ್ಕಾಗಿ ಪ್ರತಿಬಿಂಬಿಸಲಿಲ್ಲ. ನೇರವಾದ ವೈದ್ಯಕೀಯ ಪ್ರಸ್ತುತತೆಯನ್ನು ಹೊಂದಿರುವ ಸೂಕ್ಷ್ಮಜೀವಿಗಳ ಕುರಿತಾಗಿಯೇ ಅವರು ತಮ್ಮ ವಿಶೇಷ ಗಮನವನ್ನು ಹರಿಸಿದ್ದು ಇದಕ್ಕೆ ಕಾರಣವಾಗಿತ್ತು. 19ನೇ ಶತಮಾನದ ಅಂತ್ಯದ ತನಕ ಮತ್ತು ಸಾರ್ವತ್ರಿಕ ಸೂಕ್ಷ್ಮಜೀವವಿಜ್ಞಾನದ (ಸೂಕ್ಷ್ಮಜೀವಿಯ ಶರೀರವಿಜ್ಞಾನ, ವೈವಿಧ್ಯ ಮತ್ತು ಪರಿಸರ ವಿಜ್ಞಾನದ ಮಗ್ಗಲುಗಳನ್ನು ಒಳಗೊಂಡಿರುವ ಒಂದು ಹಳೆಯ ಪದ) ಸಂಸ್ಥಾಪಕರಾದ ಮಾರ್ಟಿನಸ್‌ ಬೀಜೆರಿಂಕ್‌ ಮತ್ತು ಸೆರ್ಗೀ ವಿನೊಗ್ರಾಡ್ಸ್‌ಕಿ ಇವರ ಕೆಲಸವು ಹೊರಹೊಮ್ಮುವವರೆಗೆ ಸೂಕ್ಷ್ಮಜೀವವಿಜ್ಞಾನದ ನಿಜವಾದ ವ್ಯಾಪ್ತಿಯು ಬಹಿರಂಗಗೊಂಡಿರಲಿಲ್ಲ.
  • ಸೂಕ್ಷ್ಮಜೀವವಿಜ್ಞಾನ ಕ್ಷೇತ್ರಕ್ಕೆ ಬೀಜೆರಿಂಕ್ ಎರಡು ಪ್ರಮುಖ ಕೊಡುಗೆಗಳನ್ನು ನೀಡಿದ. ಅವುಗಳೆಂದರೆ: ವೈರಸ್‌‌ಗಳ ಆವಿಷ್ಕಾರ ಮತ್ತು ಸಂವರ್ಧನ ಸಂಗೋಪನ ಕೃಷಿ ಕೌಶಲಗಳ ಅಭಿವೃದ್ಧಿ. ಟೊಬ್ಯಾಕೊ ಮೊಸಾಯಿಕ್‌ ವೈರಸ್‌ ಕುರಿತಾದ ಆತನ ಕೆಲಸವು ಸೂಕ್ಷ್ಮರೋಗಾಣು ಶಾಸ್ತ್ರದ ಮೂಲಭೂತ ತತ್ತ್ವಗಳನ್ನು ಸ್ಥಾಪಿಸಿದ ಸಂದರ್ಭದಲ್ಲೇ, ಆತ ಕೈಗೊಂಡ ಸಂವರ್ಧನ ಸಂಗೋಪನ ಕೃಷಿಗಾರಿಕೆಯ ಅಭಿವೃದ್ಧಿ ಕೆಲಸವು ಸೂಕ್ಷ್ಮಜೀವವಿಜ್ಞಾನದ ಮೇಲೆ ಅತ್ಯಂತ ಕ್ಷಿಪ್ರಕಾಲದಲ್ಲಿ ಪ್ರಭಾವ ಬೀರಿತು.
  • ವ್ಯಾಪಕವಾಗಿ ವೈವಿಧ್ಯಮಯವಾಗಿದ್ದ ದೈಹಿಕ ಕ್ರಿಯೆಗಳೊಂದಿಗಿನ ಸೂಕ್ಷ್ಮಜೀವಿಗಳ ವ್ಯಾಪಕ ಶ್ರೇಣಿಯ ಸಂಗೋಪನೆಗೆ ಇದು ಅನುವುಮಾಡಿಕೊಟ್ಟಿತು. ಕೀಮೋಲಿಥೋಟ್ರೋಫಿ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ತನ್ಮೂಲಕ ಭೂರಾಸಾಯನಿಕ ಪ್ರಕ್ರಿಯೆಗಳಲ್ಲಿ ಸೂಕ್ಷ್ಮಜೀವಿಗಳು ವಹಿಸುವ ಮೂಲಭೂತ ಪಾತ್ರವನ್ನು ಬಹಿರಂಗಪಡಿಸುವಲ್ಲಿ ವಿನೊಗ್ರಾಡ್ಸ್‌ಕಿ ಎಂಬಾತ ಮೊಟ್ಟಮೊದಲಿಗನಾಗಿದ್ದ. ನೈಟ್ರೇಟೀಕರಿಸುವ ಮತ್ತು ನೈಟ್ರೋಜನ್‌-ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳೆರಡರ ಮೊಟ್ಟಮೊದಲ ಪ್ರತ್ಯೇಕಿಸುವಿಕೆ ಹಾಗೂ ವಿವರಣೆಗೆ ಆತ ಕಾರಣಕರ್ತನಾಗಿದ್ದ.

ಕ್ಷೇತ್ರಗಳು

ಸೂಕ್ಷ್ಮಜೀವವಿಜ್ಞಾನ ಕ್ಷೇತ್ರವನ್ನು ಸಾಮಾನ್ಯವಾಗಿ ಹಲವಾರು ಉಪವಿಭಾಗಗಳಾಗಿ ವಿಭಾಗಿಸಲಾಗುತ್ತದೆ:

  • ಸೂಕ್ಷ್ಮಜೀವಿಯ ಶರೀರವಿಜ್ಞಾನ: ಸೂಕ್ಷ್ಮಜೀವಿಯ ಜೀವಕೋಶವು ಜೀವರಾಸಾಯನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತಾದ ಅಧ್ಯಯನವಿದು. ಸೂಕ್ಷ್ಮಜೀವಿಯ ಬೆಳವಣಿಗೆ, ಸೂಕ್ಷ್ಮಜೀವಿಯ ಚಯಾಪಚಯ ಕ್ರಿಯೆ ಮತ್ತು ಸೂಕ್ಷ್ಮಜೀವಿಯ ಕೋಶ ರಚನೆಗಳ ಅಧ್ಯಯನವನ್ನು ಇದು ಒಳಗೊಳ್ಳುತ್ತದೆ.
  • ಸೂಕ್ಷ್ಮಜೀವಿಯ ತಳಿಶಾಸ್ತ್ರ: ಜೀನ್‌‌ಗಳು ತಮ್ಮ ಜೀವಕಣಗಳ ಕಾರ್ಯಲಕ್ಷಣಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮಜೀವಿಗಳಲ್ಲಿ ಹೇಗೆ ಸಂಘಟಿಸಲ್ಪಟ್ಟಿವೆ ಮತ್ತು ನಿಯಂತ್ರಿಸಲ್ಪಟ್ಟಿವೆ ಎಂಬುದರ ಕುರಿತಾದ ಅಧ್ಯಯನವಿದು. ಆಣ್ವಿಕ ಜೀವವಿಜ್ಞಾನದ ಕ್ಷೇತ್ರಕ್ಕೆ ಇದು ನಿಕಟ ಸಂಬಂಧವನ್ನು ಹೊಂದಿದೆ.
  • ಜೀವಕೋಶೀಯ ಸೂಕ್ಷ್ಮಜೀವವಿಜ್ಞಾನ: ಸೂಕ್ಷ್ಮಜೀವವಿಜ್ಞಾನ ಮತ್ತು ಕೋಶಜೀವವಿಜ್ಞಾನ ನಡುವಣ ಸಂಪರ್ಕ ಕಲ್ಪಿಸುವ ಒಂದು ವಿಭಾಗವಿದು.
  • ವೈದ್ಯಕೀಯ ಸೂಕ್ಷ್ಮಜೀವವಿಜ್ಞಾನ: ರೋಗಕಾರಕ ಸೂಕ್ಷ್ಮಜೀವಿಗಳ ಬಗೆಗಿನ ಮತ್ತು ಮಾನವ ಅಸ್ವಸ್ಥತೆಯಲ್ಲಿ ಸೂಕ್ಷ್ಮಜೀವಿಗಳ ಪಾತ್ರವೇನು ಎಂಬುದರ ಕುರಿತಾದ ಅಧ್ಯಯನವಿದು. ಸೂಕ್ಷ್ಮಜೀವಿಯ ರೋಗೋತ್ಪತ್ತಿ ಮತ್ತು ಸಾಂಕ್ರಾಮಿಕ ರೋಗವಿಜ್ಞಾನದ ಅಧ್ಯಯನವನ್ನು ಇದು ಒಳಗೊಂಡಿದ್ದು, ಕಾಯಿಲೆಯ ರೋಗನಿದಾನ ಶಾಸ್ತ್ರ ಹಾಗೂ ರೋಗರಕ್ಷಾಶಾಸ್ತ್ರದೊಂದಿಗೆ ಇದು ಸಂಬಂಧವನ್ನು ಹೊಂದಿದೆ.
  • ಪಶುವೈದ್ಯಕೀಯ ಸೂಕ್ಷ್ಮಜೀವವಿಜ್ಞಾನ: ಪಶುವೈದ್ಯಶಾಸ್ತ್ರ ಅಥವಾ ಪ್ರಾಣಿ ಜೀವಿವರ್ಗೀಕರಣ ಶಾಸ್ತ್ರದಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಕುರಿತಾದ ಅಧ್ಯಯನವಿದು.
  • ಪರಿಸರೀಯ ಸೂಕ್ಷ್ಮಜೀವವಿಜ್ಞಾನ: ಸೂಕ್ಷ್ಮಜೀವಿಗಳ ನೈಸರ್ಗಿಕ ಪರಿಸರಗಳಲ್ಲಿ ಅವುಗಳ ಕಾರ್ಯಲಕ್ಷಣ ಹಾಗೂ ವೈವಿಧ್ಯದ ಕುರಿತಾದ ಅಧ್ಯಯನವಿದು. ಸೂಕ್ಷ್ಮಜೀವಿ ಪರಿಸರ ವಿಜ್ಞಾನ, ಸೂಕ್ಷ್ಮಜೀವಿ-ಮಧ್ಯಸ್ಥಿಕೆಯ ಪೋಷಕಾಂಶ ಆವರ್ತವಾಗುವಿಕೆ, ಭೂ ಸೂಕ್ಷ್ಮಜೀವವಿಜ್ಞಾನ, ಸೂಕ್ಷ್ಮಜೀವಿಯ ವೈವಿಧ್ಯ ಮತ್ತು ಜೈವಿಕ ಪುನರ್‌ ಮಧ್ಯಸ್ಥಿಕೆ ಇವೇ ಮೊದಲಾದವುಗಳ ಅಧ್ಯಯನವನ್ನು ಇದು ಒಳಗೊಳ್ಳುತ್ತದೆ. ಬೇರುವಲಯ ಮತ್ತು ಪರ್ಣವಲಯ, ಮಣ್ಣು ಮತ್ತು ಅಂತರ್ಜಲ ಪರಿಸರ ವ್ಯವಸ್ಥೆಗಳು, ಮುಕ್ತ ಸಾಗರಗಳು ಅಥವಾ ತುತ್ತತುದಿಯ ಪರಿಸರಗಳಂಥ (ಎಕ್ಸ್‌ಟ್ರೀಮೋಫೈಲ್‍ಗಳು) ಬ್ಯಾಕ್ಟೀರಿಯಾದ ಪ್ರಮುಖ ವಾಸಯೋಗ್ಯ ತಾಣಗಳ ಸ್ವರೂಪದ ಚಿತ್ರಣವನ್ನು ಇದು ಒಳಗೊಳ್ಳುತ್ತದೆ.
  • ವಿಕಸನೀಯ ಸೂಕ್ಷ್ಮಜೀವವಿಜ್ಞಾನ: ಸೂಕ್ಷ್ಮಜೀವಿಗಳ ವಿಕಸನದ ಅಧ್ಯಯನವಿದು. ಬ್ಯಾಕ್ಟೀರಿಯಾದ ವರ್ಗೀಕರಣ ವಿಧಾನ ಮತ್ತು ಜೀವಿವರ್ಗೀಕರಣ ಶಾಸ್ತ್ರವನ್ನು ಇದು ಒಳಗೊಳ್ಳುತ್ತದೆ.
  • ಕೈಗಾರಿಕಾ ಸೂಕ್ಷ್ಮಜೀವವಿಜ್ಞಾನ: ಕೈಗಾರಿಕಾ ಪ್ರಕ್ರಿಯೆಗಳಲ್ಲಿನ ಬಳಕೆಗಾಗಿ ಸೂಕ್ಷ್ಮಜೀವಿಗಳನ್ನು ಉಪಯೋಗಿಸಿಕೊಳ್ಳುವುದು ಇದರ ಲಕ್ಷಣ. ಕೈಗಾರಿಕಾ ಹುದುಗುವಿಕೆ ಮತ್ತು ತ್ಯಾಜ್ಯ ನೀರಿನ ಸಂಸ್ಕರಣವು ಇದರ ಉದಾಹರಣೆಗಳಲ್ಲಿ ಸೇರಿವೆ. ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಇದರ ನಿಕಟ ಸಂಬಂಧವಿದೆ. ಸೂಕ್ಷ್ಮಜೀವವಿಜ್ಞಾನದ ಒಂದು ಪ್ರಮುಖ ಅನ್ವಯಿಕೆಯಾದ ಮದ್ಯ ತಯಾರಿಕೆಯನ್ನೂ ಈ ಕ್ಷೇತ್ರವು ಒಳಗೊಳ್ಳುತ್ತದೆ. ಇದರಲ್ಲಿ ಮದ್ಯ, ವಿವಿಧ ಕಿಣ್ವಗಳು, ಅಮೈನೊ ಆಮ್ಲಗಳು, ಬ್ರೆಡ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುವ ಸೂಕ್ಷ್ಮಜೀವಿ ಗಳು ಹಾಗೂ ತಯಾರಿಕೆಯ ತಂತ್ರ ಇವನ್ನು ಅಧ್ಯಯನ ಮಾಡಲಾಗುತ್ತದೆ.
  • ವಾಯು ಸೂಕ್ಷ್ಮಜೀವವಿಜ್ಞಾನ: ವಾಯುವಾಹಿ ಸೂಕ್ಷ್ಮಜೀವಿಗಳ ಅಧ್ಯಯನವಿದು.
  • ಆಹಾರ ಸೂಕ್ಷ್ಮಜೀವವಿಜ್ಞಾನ: ಆಹಾರ ಹಳಸುವಿಕೆ ಹಾಗೂ ಆಹಾರ ಮೂಲಕ ಅಸ್ವಸ್ಥತೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಅಧ್ಯಯನವಿದು. ಆಹಾರಗಳನ್ನು ತಯಾರಿಸಲು ಸೂಕ್ಷ್ಮಜೀವಿಗಳನ್ನು ಉಪಯೋಗಿಸುವುದು ಇದರಲ್ಲಿ ಸೇರಿದೆ. ಹುದುಗುವಿಕೆಯ ಬಳಕೆಯು ಇದಕ್ಕೊಂದು ಉದಾಹರಣೆ.
  • ಔಷಧೀಯ ಸೂಕ್ಷ್ಮಜೀವವಿಜ್ಞಾನ: ಔಷಧೀಯ ಮಾಲಿನ್ಯ ಹಾಗೂ ನಾಶವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಅಧ್ಯಯನವಿದು.
  • ಕೃಷಿ ಸೂಕ್ಷ್ಮಜೀವವಿಜ್ಞಾನ: ವ್ಯಾವಸಾಯಿಕವಾಗಿ ಪ್ರಮುಖವಾಗಿರುವ ಸೂಕ್ಷ್ಮಜೀವಿಗಳ ಅಧ್ಯಯನವಿದು.
  • ಜಲಸೂಕ್ಷ್ಮಜೀವಿವಿಜ್ಞಾನ: ನೀರಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳು, ಅವುಗಳಿಂದ ಮಾನವನಿಗೆ ಹಾಗೂ ಇತರ ಪ್ರಾಣಿಗಳಿಗೆ ತಗಲುವ ರೋಗಗಳು ಮುಂತಾದವುಗಳ ಬಗ್ಗೆ ಈ ವಿಭಾಗದಲ್ಲಿ ಅಧ್ಯಯನ ಮಾಡಲಾಗುತ್ತದೆ.

(ರೋಗನಿಯಂತ್ರಣ ಹಾಗೂ ತಡೆಗಟ್ಟುವಿಕೆಯ ಕೇಂದ್ರದಲ್ಲಿನ ಉದ್ಯೋಗಗಳು, ಅದರಲ್ಲಿನ ಬಹುಪಾಲು ಸ್ಥಾನಗಳಿಗೆ ಸೂಕ್ಷ್ಮಜೀವವಿಜ್ಞಾನದಲ್ಲಿನ ಒಂದು ಪದವಿಯನ್ನು ಬಯಸುತ್ತವೆ)

ಪ್ರಯೋಜನಗಳು

ಸೂಕ್ಷ್ಮ ಜೀವ ವಿಜ್ಞಾನ 
ಬಿಯರ್‌ನ್ನು ಹುದುಗಿಸಲು ಬಳಸಲಾಗುತ್ತಿರುವ ಯೀಸ್ಟ್‌ನ್ನು ಹೊಂದಿರುವ ಹುದುಗಿಸುವಿಕೆಯ ತೊಟ್ಟಿಗಳು
  • ಮಾನವನ ಹಲವಾರು ಅಸ್ವಸ್ಥತೆಗಳೊಂದಿಗೆ ಕೆಲವೊಂದು ಸೂಕ್ಷ್ಮಜೀವಿಗಳು ಗುರುತಿಸಿಕೊಂಡಿರುವುದರಿಂದಾಗಿ ಎಲ್ಲಾ ಸೂಕ್ಷ್ಮಜೀವಿಗಳ ಕುರಿತೂ ಕೆಲವೊಬ್ಬರಿಗೆ ಭಯವಿದೆ ಎಂಬುದು ನಿಸ್ಸಂದೇಹವಾದ ವಿಚಾರ. ಆದರೆ ಅನೇಕ ಸೂಕ್ಷ್ಮಜೀವಿಗಳು ಹಲವಾರು ಪ್ರಯೋಜನಕಾರಿ ಪ್ರಕ್ರಿಯೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ ಎಂಬುದೂ ಮಹತ್ವದ ವಿಚಾರವೇ. ಕೈಗಾರಿಕಾ ಹುದುಗುವಿಕೆ (ಉದಾಹರಣೆಗೆ ಮದ್ಯಸಾರ, ವಿನೆಗರ್‌ ಮತ್ತು ಹೈನು ಉತ್ಪನ್ನಗಳ ಉತ್ಪಾದನಾ ಕಾರ್ಯ), ಪ್ರತಿಜೀವಕದ ಉತ್ಪಾದನೆ ಮತ್ತು ಸಸ್ಯಗಳಂಥ ಉನ್ನತ ಜೀವಿಗಳಲ್ಲಿನ ಅಬೀಜ ಸಂತಾನೋತ್ಪತ್ತಿಯಲ್ಲಿ ವಾಹಕಗಳಾಗಿ ಇವುಗಳ ಬಳಕೆ ಇವೇ ಮೊದಲಾದವುಗಳು ಸೂಕ್ಷ್ಮಜೀವಿಗಳ ಪ್ರಯೋಜಕತೆಗೆ ಒಂದಷ್ಟು ಉದಾಹರಣೆಗಳಾಗಿವೆ.
  • ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿರುವ ಟ್ಯಾಕ್‌ ಪಾಲಿಮರೇಸ್‌ನಂಥ ಕಿಣ್ವಗಳನ್ನು ತಯಾರಿಸಲು, ಇತರ ತಳಿವಿಜ್ಞಾನದ ಪದ್ಧತಿಗಳಲ್ಲಿನ ಬಳಕೆಗಾಗಿ ಮಾಹಿತಿ ವಾಹಕ ಜೀನ್‌ಗಳನ್ನು ತಯಾರಿಸಲು ಮತ್ತು ಯೀಸ್ಟ್‌ ದ್ವಿಮಿಶ್ರತಳಿ ಪದ್ಧತಿಯಂಥ ಅಪೂರ್ವವಾದ ಆಣ್ವಿಕ ಜೀವವಿಜ್ಞಾನ ಕೌಶಲಗಳನ್ನು ತಯಾರಿಸಲು ವಿಜ್ಞಾನಿಗಳು ಸೂಕ್ಷ್ಮಜೀವಿಗಳ ಕುರಿತಾದ ತಮ್ಮ ಜ್ಞಾನವನ್ನು ಬಳಸಿಕೊಂಡಿದ್ದಾರೆ. ಅಮೈನೋ ಆಮ್ಲಗಳ ಕೈಗಾರಿಕಾ ಉತ್ಪಾದನೆಗಾಗಿ ಬ್ಯಾಕ್ಟೀರಿಯಾವನ್ನು ಬಳಸಿಕೊಳ್ಳಬಹುದು.
  • ಕೋರೈನೆಬ್ಯಾಕ್ಟೀರಿಯಂ ಗ್ಲುಟಮಿಕಮ್‌ ಎಂಬುದು ಇಂಥ ಅತ್ಯಂತ ಪ್ರಮುಖ ಬ್ಯಾಕ್ಟೀರಿಯಾದ ಜಾತಿಗಳಲ್ಲಿ ಒಂದಾಗಿದ್ದು, ಇದರಿಂದ ಎರಡು ದಶಲಕ್ಷ ಟನ್ನುಗಳಿಗೂ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳನ್ನು, ಅದರಲ್ಲೂ ಮುಖ್ಯವಾಗಿ L-ಗ್ಲುಟಮೇಟ್‌ ಹಾಗೂ L-ಲೈಸೀನ್‌ ಪ್ರಭೇದಗಳನ್ನು ವಾರ್ಷಿಕವಾಗಿ ಉತ್ಪಾದಿಸಬಹುದಾಗಿದೆ.
  • ಬಹುಶರ್ಕರಗಳು, ಪಾಲಿಯೆಸ್ಟರ್‌ಗಳು, ಮತ್ತು ಪಾಲಿಅಮೈಡ್‌ಗಳಂಥ ವೈವಿಧ್ಯಮಯ ಜೈವಿಕ ಪಾಲಿಮರ್‌ಗಳನ್ನು ಸೂಕ್ಷ್ಮಜೀವಿಗಳಿಂದ ತಯಾರಿಸಲಾಗುತ್ತದೆ. ಜೈವಿಕ ಪಾಲಿಮರ್‌ಗಳನ್ನು ಜೈವಿಕ ತಂತ್ರಜ್ಞಾನದ ಸ್ವರೂಪದಲ್ಲಿ ತಯಾರಿಸುವುದಕ್ಕಾಗಿ ಸೂಕ್ಷ್ಮಜೀವಿಗಳನ್ನು ಬಳಸಲಾಗುತ್ತದೆ. ಅಂಗಾಂಶ ಎಂಜಿನಿಯರಿಂಗ್ ಹಾಗೂ ಔಷಧ ವಿತರಣೆಯಂಥ ಉನ್ನತ-ಮೌಲ್ಯದ ವೈದ್ಯಕೀಯ ಅನ್ವಯಿಕಗಳಿಗೆ ಸೂಕ್ತವಾಗಿರುವ ರೀತಿಯಲ್ಲಿ ಇವುಗಳ ಗುಣಲಕ್ಷಣಗಳನ್ನು ರೂಪಿಸಲಾಗಿರುತ್ತದೆ. ಈ ಕೆಳಗೆ ನಮೂದಿಸಲಾಗಿರುವುವುಗಳ ಜೈವಿಕ-ಸಂಶ್ಲೇಷಣೆಯಲ್ಲಿ ಸೂಕ್ಷ್ಮ ಜೀವಿಗಳನ್ನು ಬಳಸಲಾಗುತ್ತದೆ:
  • ಕ್ಸಾಂಥಾನ್‌, ಆಲ್ಜಿನೇಟ್‌, ಸೆಲ್ಯುಲೋಸ್, ಸಯನೋಫೈಸಿನ್‌, ಪಾಲಿ (ಗ್ಯಾಮಾ-ಗ್ಲುಟಮಿಕ್‌ ಆಮ್ಲ), ಲೆವಾನ್‌, ಹೈಯಲುರೋನಿಕ್‌ ಆಮ್ಲ, ಸಾವಯವ ಆಮ್ಲಗಳು, ಆಲಿಗೋಸ್ಯಾಕರೈಡುಗಳು ಮತ್ತು ಬಹುಶರ್ಕರ, ಹಾಗೂ ಪಾಲಿಹೈಡ್ರಾಕ್ಸಿಆಲ್ಕನೋಯೇಟ್‌ಗಳು.
  • ಗೃಹಬಳಕೆಯ, ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯಗಳ ಸೂಕ್ಷ್ಮಜೀವಿ ಜೈವಿಕ ವಿಘಟನೆ ಅಥವಾ ಜೈವಿಕ ಪುನರ್‌‌ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಹಾಗೂ ಮಣ್ಣುಗಳು, ಸಂಚಯಗಳು ಹಾಗೂ ಸಾಗರ ಪರಿಸರಗಳಲ್ಲಿನ ಕೆಳಮೇಲ್ಮೈನ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮಜೀವಿಗಳು ಪ್ರಯೋಜನಕಾರಿಯಾಗಿ ಪರಿಣಮಿಸುತ್ತವೆ. ವಿಷಕಾರಿ ತ್ಯಾಜ್ಯವನ್ನು ವಿಘಟಿಸುವಲ್ಲಿನ ಪ್ರತಿ ಸೂಕ್ಷ್ಮಜೀವಿಯ ಸಾಮರ್ಥ್ಯವು ಪ್ರತಿ ಮಾಲಿನ್ಯಕಾರಕದ ಸ್ವರೂಪವನ್ನು ಅವಲಂಬಿಸಿರುತ್ತದೆ. ಪ್ರದೇಶಗಳು ವಿಶಿಷ್ಟ ರೀತಿಯಲ್ಲಿ ಬಹು ಮಾಲಿನ್ಯಕಾರಕ ಬಗೆಗಳನ್ನು ಹೊಂದಿರುತ್ತವೆಯಾದ್ದರಿಂದ, ಮಾಲಿನ್ಯಕಾರಕಗಳ ಒಂದು ಅಥವಾ ಹೆಚ್ಚು ಬಗೆಗಳ ಜೈವಿಕ ವಿಘಟನೆಯ ಕಡೆಗೆ ಒಂದೊಂದೂ ಗುರಿಯಿಟ್ಟಿರುವ ಬ್ಯಾಕ್ಟೀರಿಯಾದ ಜಾತಿಗಳು ಹಾಗೂ ತಳಿಗಳ ಒಂದು ಮಿಶ್ರಣವನ್ನು ಬಳಸುವುದು ಸೂಕ್ಷ್ಮಜೀವಿ ಜೈವಿಕ ವಿಘಟನೆಗೆ ಒಂದು ಪರಿಣಾಮಕಾರಿ ಮಾರ್ಗವಾಗಿದೆ.
  • ಪ್ರೋಬಯಾಟಿಕ್‌ಗಳು (ಜೀರ್ಣಾಂಗವ್ಯೂಹಕ್ಕೆ ಸಮರ್ಥವಾದ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಬ್ಯಾಕ್ಟೀರಿಯಾ) ಮತ್ತು/ಅಥವಾ ಪ್ರೀಬಯಾಟಿಕ್‌ಗಳನ್ನು (ಪ್ರೋಬಯಾಟಿಕ್‌ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರವರ್ತಿಸಲು ಸೇವಿಸಲಾಗುವ ವಸ್ತುಗಳು) ಸೇವಿಸುವುದರ ಮೂಲಕ ಮಾನವರ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ದೊರೆಯುವ ಕೊಡುಗೆಗಳು ಅಥವಾ ಪ್ರಯೋಜನಗಳ ಕುರಿತಾಗಿ ಹಲವಾರು ಸಮರ್ಥನೆಗಳು ಮಂಡಿಸಲ್ಪಟ್ಟಿವೆ.
  • ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ಸೂಕ್ಷ್ಮಜೀವಿಗಳು ಪ್ರಯೋಜನಕಾರಿಯಾಗಬಹುದು ಎಂದು ಇತ್ತೀಚಿನ ಸಂಶೋಧನೆಯು ಸೂಚಿಸಿದೆ. ರೋಗಕಾರಕವಲ್ಲದ ಕ್ಲಾಸ್ಟ್ರೀಡಿಯಾದ ಹಲವಾರು ತಳಿಗಳು ಘನವಾಗಿರುವ ಗಡ್ಡೆಗಳೊಳಗೆ ತೂರಿಕೊಳ್ಳಬಲ್ಲವು ಹಾಗೂ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬಲ್ಲವು. ಕ್ಲಾಸ್ಟ್ರೀಡಿಯಾದ ವಾಹಕಗಳನ್ನು ಕ್ಷೇಮಕರವಾಗಿ ಸೇವಿಸಬಹುದು ಮತ್ತು ಚಿಕಿತ್ಸಕ ಪ್ರೋಟೀನುಗಳನ್ನು ವಿತರಿಸಬಲ್ಲ ಅವುಗಳ ಸಾಮರ್ಥ್ಯವು ರೋಗನಿದಾನ ಪೂರ್ವದ ವೈವಿಧ್ಯಮಯ ಮಾದರಿಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.

ಉಲ್ಲೇಖಗಳು

ಹೆಚ್ಚಿನ ಓದಿಗೆ

  • Lerner, Brenda Wilmoth & K. Lee Lerner (eds) (2006). Medicine, health, and bioethics : essential primary sources (1st ed.). Thomson Gale. ISBN 1414406231.
  • Witzany, Guenther (2008). Bio-Communication of Bacteria and its Evolutionary Interrelations to Natural Genome Editing Competences of Viruses. Nature Precedings. hdl:10101/npre.2008.1738.1.

ಇವನ್ನೂ ಗಮನಿಸಿ

ಹೊರಗಿನ ಕೊಂಡಿಗಳು

ಸಾಮಾನ್ಯ

ನಿಯತಕಾಲಿಕಗಳು

ವೃತ್ತಿಪರ ಸಂಘಟನೆಗಳು

ಸೂಕ್ಷ್ಮ ಜೀವ ವಿಜ್ಞಾನ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಸೂಕ್ಷ್ಮ ಜೀವ ವಿಜ್ಞಾನ ಇತಿಹಾಸಸೂಕ್ಷ್ಮ ಜೀವ ವಿಜ್ಞಾನ ಕ್ಷೇತ್ರಗಳುಸೂಕ್ಷ್ಮ ಜೀವ ವಿಜ್ಞಾನ ಪ್ರಯೋಜನಗಳುಸೂಕ್ಷ್ಮ ಜೀವ ವಿಜ್ಞಾನ ಉಲ್ಲೇಖಗಳುಸೂಕ್ಷ್ಮ ಜೀವ ವಿಜ್ಞಾನ ಇವನ್ನೂ ಗಮನಿಸಿಸೂಕ್ಷ್ಮ ಜೀವ ವಿಜ್ಞಾನ ಹೊರಗಿನ ಕೊಂಡಿಗಳುಸೂಕ್ಷ್ಮ ಜೀವ ವಿಜ್ಞಾನಜೀವಿಬೂಷ್ಟುಬ್ಯಾಕ್ಟೀರಿಯವೈರಾಣುಶಿಲೀಂಧ್ರಗಳುಸಾವಯವಸೂಕ್ಷ್ಮ ಜೀವಿ

🔥 Trending searches on Wiki ಕನ್ನಡ:

ಪಶ್ಚಿಮ ಘಟ್ಟಗಳುರತ್ನಾಕರ ವರ್ಣಿತಲಕಾಡುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗದ್ಯಅನುಪಮಾ ನಿರಂಜನವಿಜಯ ಕರ್ನಾಟಕಚಾಲುಕ್ಯಬೆಂಗಳೂರು ನಗರ ಜಿಲ್ಲೆಇನ್ಸ್ಟಾಗ್ರಾಮ್ವಿಜಯನಗರಜಾತ್ರೆಉಪನಯನಚುನಾವಣೆಮಾಧ್ಯಮಸಾಸಿವೆಭಾರತದ ಸಂಸತ್ತುಶಿಕ್ಷಣನಾಗರೀಕತೆಕೇರಳಮಹಾವೀರ ಜಯಂತಿಸವದತ್ತಿಮಲಬದ್ಧತೆಶ್ಯೆಕ್ಷಣಿಕ ತಂತ್ರಜ್ಞಾನಹಂಪೆಕಲಿಕೆವಾಲ್ಮೀಕಿಸೂರ್ಯವ್ಯೂಹದ ಗ್ರಹಗಳುಬೆಕ್ಕುಋತುಶ್ರೀವಿಜಯನೀರುಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ರಾಷ್ಟ್ರೀಯ ಉದ್ಯಾನಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬೇಲೂರುಕನ್ನಡಲೆಕ್ಕ ಪರಿಶೋಧನೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಾಷ್ಟ್ರೀಯ ಶಿಕ್ಷಣ ನೀತಿಲಕ್ಷ್ಮೀಶಪ್ಯಾರಾಸಿಟಮಾಲ್ಹಣಚಂಪೂಮಳೆಚಂದ್ರಗುಪ್ತ ಸಾಮ್ರಾಜ್ಯಭಾರತದಲ್ಲಿ ಬಡತನವಾಸ್ತವಿಕವಾದರಾಘವಾಂಕಪಂಚ ವಾರ್ಷಿಕ ಯೋಜನೆಗಳುಸರ್ವೆಪಲ್ಲಿ ರಾಧಾಕೃಷ್ಣನ್ದ್ವಿರುಕ್ತಿಆವರ್ತ ಕೋಷ್ಟಕಉಡಶಿವರಾಮ ಕಾರಂತಕನ್ನಡ ಸಾಹಿತ್ಯ ಸಮ್ಮೇಳನಮಾಹಿತಿ ತಂತ್ರಜ್ಞಾನಹೊಂಗೆ ಮರಭಾರತ ಬಿಟ್ಟು ತೊಲಗಿ ಚಳುವಳಿಡಾ ಬ್ರೋಎರಡನೇ ಮಹಾಯುದ್ಧಕಾವ್ಯಮೀಮಾಂಸೆಕವಿಗಳ ಕಾವ್ಯನಾಮಬಾಲಕಾರ್ಮಿಕಮುಮ್ಮಡಿ ಕೃಷ್ಣರಾಜ ಒಡೆಯರುಗ್ರಾಮ ದೇವತೆಶಿವಮೊಗ್ಗಕೇಸರಿ (ಬಣ್ಣ)ಖೊಖೊಹುರುಳಿಜೀವವೈವಿಧ್ಯವರ್ಣಾಶ್ರಮ ಪದ್ಧತಿಅಕ್ರಿಲಿಕ್ಹಳೇಬೀಡು🡆 More