ಎಸ್. ನಾರಾಯಣ ಶೆಟ್ಟಿ

ಎಸ್.

ನಾರಾಯಣ ಶೆಟ್ಟಿಯವರು (೧೩-೪-೧೯೩೦ - ೧೬ ಮೇ ೨೦೧೧) ಕನ್ನಡದ ಸಾಹಿತಿಯಾಗಿದ್ದರು. ಸುಜನಾ ಎಂಬುದು ಇವರ ಕಾವ್ಯ ನಾಮ.

ಬಾಲ್ಯ ಮತ್ತು ಜಿವನ

೧೯೩೦ ಏಪ್ರಿಲ್ ೧೩ ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ತಾಲ್ಲೂಕಿನ ಹೊಸಹೊಳಲುವಿನಲ್ಲಿ ಜನಿಸಿದ ಇವರ ತಂದೆ ಸುಬ್ಬಶೆಟ್ಟಿಯವರು ಹಾಗೂ ತಾಯಿ ಗೌರಮ್ಮನವರು. ಪತ್ನಿ ಲಕ್ಷ್ಮಿ ಹೊಸಹೊಳಲಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಸುಜನಾ ಹೊಳೆ ನರಸೀಪುರದಲ್ಲಿ ಪ್ರೌಢಶಿಕ್ಷಣ ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹಳವಾಗಿ ಆಕರ್ಷಿತರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಆನರ್ಸ್ ಪದವಿಯನ್ನು ಪಡೆದು ಸಾಹಿತ್ಯ ಕೃಷಿ ಮುಂದುವರಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಯುವರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು ಆನಂತರ ಒಂದೂವರೆ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾಗಿಯೂ ಕೆಲಸ ಮಾಡಿದ್ದರು. ೨೦೦೯ರಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದರು.ಸೇವೆಯಿಂದ ನಿವೃತ್ತಿಯಾದ ಬಳಿಕ ಮೈಸೂರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.ಇವರು ೨೦೧೧ರ ಮೇ ೧೬ ರಂದು ಮೈಸೂರಿನಲ್ಲಿ ನಿಧನರಾದರು.

ಕವಿ

ಸುಜನಾ ವಿಜ್ಞಾನದ ಆಸಕ್ತಿಯ ಕವಿಯೂ ಆಗಿದ್ದರು. ನಾಣ್ಯ ಯಾತ್ರೆ ಒಂದೇ ಸೂರಿನಡಿಯಲ್ಲಿ ಅವರ ಜನಪ್ರಿಯ ಕವನ ಸಂಕಲನಗಳಾಗಿದ್ದವು. ಅಲ್ಲದೆ ಗ್ರೀಕ್ ಭಾಷೆಯ ಏಜಾಕ್ಸ್ ಎಂಬ ಪ್ರಖ್ಯಾತ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಸುಜನಾ ಅನುವಾದ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಬಳಿಕ "ಯುಗಸಂಧ್ಯಾ" ಎಂಬ ಮಹಾಕಾವ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡುವ ಮೂಲಕ ಮಹಾಕಾವ್ಯ ಬರೆದ ಕೆಲವೇ ಕವಿಗಳ ಸಾಲಿಗೆ ಸೇರಿದ್ದರು.

  • ಯುಗಸಂಧ್ಯಾ ಕೃತಿಗೆ ೨೦೦೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಹೃದಯ ಸಂವಾದ (ವಿಮರ್ಶಾ ಕೃತಿ)ಗೆ ೧೯೬೩ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ
  • ಒಂದೇ ಸೂರಿನಡಿಯಲ್ಲಿ ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
  • ಭಾರತ ಕಥಾಮಂಜರಿ
  • ಕುಮಾರವ್ಯಾಸ (ವಿಮರ್ಶಾ ಕಿರುಹೊತ್ತಿಗೆ)
  • ಪರಂಪರೆ
  • ಕುವೆಂಪು ಪು.ತಿ.ನ.ಸಾಹಿತ್ಯದ ಹೊಳಹುಗಳು
  • ಚಿಲಿಪಿಲಿ ಮಕ್ಕಳ ಕವನ ಸಂಕಲನ
  • ಇಬ್ಬನಿ ಆರತಿ
  • ವಚನ ಕವನ ಸಂಕಲನ
  • ಕಣಗಳು
  • ಏಜಾಕ್ಸ್ (ಅನುವಾದಿತ ನಾಟಕ)
  • ಬಾಲಕಾಂಡ ವಾಲ್ಮೀಕಿ ರಾಮಾಯಣ (ಸಿ.ಪಿ.ಕೆ.ಯೊಡನೆ) ಅನುವಾದಿತ ಕೃತಿಯನ್ನು ಇವರು ರಚಿಸಿದ್ದರು.
  • ಹೃದಯ ಸಂವಾದ.

ಉಲ್ಲೇಖಗಳು

Tags:

ಕನ್ನಡ

🔥 Trending searches on Wiki ಕನ್ನಡ:

ಹಿಂದೂ ಮಾಸಗಳುಮೈಸೂರುಭ್ರಷ್ಟಾಚಾರಅಯೋಧ್ಯೆಚಿತ್ರದುರ್ಗ ಜಿಲ್ಲೆಆದೇಶ ಸಂಧಿಜವಾಹರ‌ಲಾಲ್ ನೆಹರುಸಿಸ್ಟೆಮಿಕ್‌ ಲ್ಯೂಪಸ್‌ ಎರಿಥ್‌ಮೆಟೋಸಸ್‌ವೀರಗಾಸೆಮುಳ್ಳುಹಂದಿರೆವರೆಂಡ್ ಎಫ್ ಕಿಟ್ಟೆಲ್ಚಂದ್ರಶೇಖರ ವೆಂಕಟರಾಮನ್ಶ್ರೀ ರಾಮ ನವಮಿಯಮಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ೧೮೬೨ಚಿತ್ರದುರ್ಗ ಕೋಟೆತೆರಿಗೆವಿಜಯ ಕರ್ನಾಟಕಸೋಮನಾಥಪುರಸ್ತ್ರೀರಾಘವಾಂಕಪು. ತಿ. ನರಸಿಂಹಾಚಾರ್ದಿಕ್ಕುಕರ್ನಾಟಕ ಹೈ ಕೋರ್ಟ್ಶ್ಯೆಕ್ಷಣಿಕ ತಂತ್ರಜ್ಞಾನಸಾರಾ ಅಬೂಬಕ್ಕರ್ಶಿಶುನಾಳ ಶರೀಫರುಲೋಕಸಭೆಭಾರತ ಸಂವಿಧಾನದ ಪೀಠಿಕೆಚೇಳು, ವೃಶ್ಚಿಕಕುವೆಂಪುತೆಂಗಿನಕಾಯಿ ಮರಶಬ್ದಮಣಿದರ್ಪಣಕರ್ನಾಟಕ ಐತಿಹಾಸಿಕ ಸ್ಥಳಗಳುಸಾನೆಟ್ಶುಕ್ರಚಿ.ಉದಯಶಂಕರ್ವ್ಯಕ್ತಿತ್ವಪಿ.ಲಂಕೇಶ್ಬೆಳಗಾವಿ ಜಿಲ್ಲೆಬಂಧನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮುಖ್ಯ ಪುಟನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರಪತಿಭಾರತದ ಉಪ ರಾಷ್ಟ್ರಪತಿಉಡಋಗ್ವೇದವಿಜಯನಗರ ಸಾಮ್ರಾಜ್ಯಏಡ್ಸ್ ರೋಗಭೂಮಿನಂಜನಗೂಡುಜಯಂತ ಕಾಯ್ಕಿಣಿಕೆಂಪುರೋಸ್‌ಮರಿರಕ್ತಮಂಜುಮ್ಮೆಲ್ ಬಾಯ್ಸ್ಪ್ರೇಮಲೋಕಟೊಮೇಟೊವಿಮರ್ಶೆರಾಶಿಭಾರತೀಯ ಧರ್ಮಗಳುಪರೀಕ್ಷೆಸೀತೆಗೊರೂರು ರಾಮಸ್ವಾಮಿ ಅಯ್ಯಂಗಾರ್ಜಾಗತಿಕ ತಾಪಮಾನಹಳೇಬೀಡುಹಂಸಲೇಖನೈಸರ್ಗಿಕ ಸಂಪನ್ಮೂಲತ್ರಿಪದಿಭಾರತೀಯ ಸಂವಿಧಾನದ ತಿದ್ದುಪಡಿಪ್ರೇಮಾಕ್ರೈಸ್ತ ಧರ್ಮಜೀವವೈವಿಧ್ಯಅಂತರ್ಜಲರೇಡಿಯೋಮೂಕಜ್ಜಿಯ ಕನಸುಗಳು (ಕಾದಂಬರಿ)ಡೊಳ್ಳು ಕುಣಿತ🡆 More