ಸಿದ್ದಪ್ಪ ಕಂಬಳಿ

ಸಿದ್ದಪ್ಪ ತೋಟದಪ್ಪ ಕಂಬಳಿ ೧೮೮೨ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು.ಮುಂಬಯಿ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ದೊಡ್ಡಮೇಟಿ ಅಂದಾನಪ್ಪ, ಗಿರಿಮಲ್ಲಪ್ಪ ನಲ್ವಾಡಿ, ವಿಶ್ವನಾಥ ರಾವ್ ಜೋಗ್, ಶ್ರೀಪಾದ ಕರಿಗುದ್ರಿ ಮತ್ತು ತಿಮ್ಮಪ್ಪ ನೇಸ್ವಿ ಯವರ ಜೊತೆ ಧಾರವಾಡ ಪ್ರಾಂತ್ಯದ ಶಾಸಕರಾಗಿದ್ದರು. ಬೆಳಗಾವಿ,ಬಿಜಾಪುರ, ಕೆನರಾ ಮತ್ತು ಧಾರವಾಡ ಪ್ರಾಂತ್ಯಗಳನ್ನು ಮುಂಬಯಿ ಪ್ರಾಂತ್ಯದಿಂದ ಕನ್ನಡ ಭಾಷಿಕರ ರಾಜ್ಯವೊಂದಕ್ಕೆ ಸೇರಿಸಲು ಹಾತೊರೆಯುತ್ತಿದ್ದ ಕಂಬಳಿಯವರು, ಈ ಕಾರಣದಿಂದ ಕರ್ನಾಟಕ ಎಂಬ ರಾಜ್ಯವನ್ನು ಸ್ಥಾಪಿಸಲು ಬ್ರಿಟಿಷ್ ಸರ್ಕಾರಕ್ಕೆ ಮನವಿಯಿತ್ತರು. . ಆದರೆ, ಮೈಸೂರು ಪ್ರಾಂತ್ಯದಿಂದ ಮುಕ್ತ ಪ್ರತಿಕ್ರಿಯೆ ಬರಲಿಲ್ಲ. ಆದರೂ, ಕರ್ನಾಟಕ ಎಂಬ ಪದವನ್ನು ಸಾಧ್ಯವಾದಷ್ಟೂ ಬಳಸಲು ಮುಂದಾದರು. ಮುಂಬಯಿ ಸರ್ಕಾರದಲ್ಲಿ ಸಚಿವರಾಗಿದ್ದ ಕಂಬಳಿಯವರ ಸೇವೆಗೆ ಬ್ರಿಟಿಷ್ ಸರ್ಕಾರ ಸರ್ ಪದವಿಯಿತ್ತು ಗೌರವಿಸಿತು. ಭಾಷಾವಾರು ಪ್ರಾಂತ್ಯದ ರಚನೆಗಾಗಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಾ ಬಂದ ಸರ್ ಕಂಬಳಿಯವರು, ಈ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೆ ಗುರಿಯಾದರು. ೧೯೪೯ರಲ್ಲಿ ಪ್ರಸಕ್ತ ಪಾವಟೆನಗರದಲ್ಲಿರುವ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಪರೋಕ್ಷವಾಗಿ ಕಾರಣರಾದರು. ಸ್ವತಂತ್ರ ದೊರೆತ ಮೇಲೆ ನೆಹರೂ ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಜೀವತ್‌ರಾಮ್_ಕೃಪಲಾನಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಫ಼ುಲ್ಲ ಚಂದ್ರ ಘೋಷ್, ಮದ್ರಾಸ್ ಮುಖ್ಯಮಂತ್ರಿ ಟಂಗಟೂರಿ ಪ್ರಕಾಶಂರೊಡಗೂಡಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಸ್ಥಾಪಿಸಿದರು. ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು. ಇದು ಕಂಬಳಿಯವರಿಗೆ ಹಿನ್ನಡೆಯಾಯಿತು. ೧೯೫೨ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯು ಪ್ರಜಾ ಸೋಷಲಿಸ್ಟ್ ಪಕ್ಷದೊಂದಿಗೆ ವಿಲೀನವಾಯಿತು.

ಸರ್ ಸಿದ್ದಪ್ಪ ಕಂಬಳಿ
Born೧೧-೦೯-೧೮೮೨
ಹುಬ್ಬಳ್ಳಿ
Occupation(s)ಶಿಕ್ಷಣ, ಆಡಳಿತ, ರಾಜಕೀಯ,
ಸಿದ್ದಪ್ಪ ಕಂಬಳಿ
ಹುಬ್ಬಳ್ಳಿ-ಧಾರವಾಢ ಮಹಾನಗರಪಾಲಿಕೆಯ ಬಳಿ, ಸರ್ ಸಿದ್ದಪ್ಪ ಕಂಬಳಿಯವರ ಕಂಚಿನ ಪ್ರತಿಮೆ
ಸಿದ್ದಪ್ಪ ಕಂಬಳಿ
ಹುಬ್ಬಳ್ಳಿ-ಧಾರವಾಢ ಮಹಾನಗರಪಾಲಿಕೆಯ ಬಳಿ, ಸರ್ ಸಿದ್ದಪ್ಪ ಕಂಬಳಿಯವರ ಕಂಚಿನ ಪ್ರತಿಮೆಯ ಕೆಳಗೆ ಅವರ ಬದುಕು-ಸಾಧನೆ

ಸೇವೆ

  • ಕೃಷಿ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೦-೧೯೩೪)
  • ಶಿಕ್ಷಣ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೨-೧೯೩೭)

ಕೃಷಿ, ಶಿಕ್ಷಣ ಮತ್ತು ಅಬ್ಕಾರಿ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೨-೧೯೩೭)

ಉಲ್ಲೇಖಗಳು‌‌



Tags:

ಅಂದಾನಪ್ಪ ದೊಡ್ಡಮೇಟಿಜೀವತ್‌ರಾಮ್ ಕೃಪಲಾನಿಪಶ್ಚಿಮ ಬಂಗಾಳ

🔥 Trending searches on Wiki ಕನ್ನಡ:

ಮೈಸೂರು ಅರಮನೆಮೊದಲನೇ ಅಮೋಘವರ್ಷಹೃದಯಸೋಮನಾಥಪುರಕಾರ್ಮಿಕರ ದಿನಾಚರಣೆಬರಗೂರು ರಾಮಚಂದ್ರಪ್ಪಶಿವರಾಮ ಕಾರಂತಕಾದಂಬರಿಕೃಷ್ಣದೇವರಾಯಶೈಕ್ಷಣಿಕ ಮನೋವಿಜ್ಞಾನಆನೆಅಕ್ಷಾಂಶ ಮತ್ತು ರೇಖಾಂಶಹಣಭೂಮಿ ದಿನಆದಿಪುರಾಣಝಾನ್ಸಿ ರಾಣಿ ಲಕ್ಷ್ಮೀಬಾಯಿಆಂಡಯ್ಯಎ.ಎನ್.ಮೂರ್ತಿರಾವ್ಹೆಚ್.ಡಿ.ದೇವೇಗೌಡಕಥೆವಿಷ್ಣುವರ್ಧನ್ (ನಟ)ವಚನಕಾರರ ಅಂಕಿತ ನಾಮಗಳುಭಾರತದಲ್ಲಿ ಪಂಚಾಯತ್ ರಾಜ್ದಿಕ್ಕುಸಾಸಿವೆಮಹಾವೀರರಾಗಿಮೊಹೆಂಜೊ-ದಾರೋಜಾಹೀರಾತುಬಹುವ್ರೀಹಿ ಸಮಾಸಭೋವಿಕನ್ನಡ ವ್ಯಾಕರಣಪಾರಿಜಾತಪರಿಸರ ರಕ್ಷಣೆಸಾಂಗತ್ಯಕೊಡಗುಪ್ರಜಾವಾಣಿಪಾಪಅಕ್ಬರ್ಪು. ತಿ. ನರಸಿಂಹಾಚಾರ್ಬೌದ್ಧ ಧರ್ಮಸಮಾಸಇಸ್ಲಾಂ ಧರ್ಮಸೂರ್ಯವ್ಯೂಹದ ಗ್ರಹಗಳುಭಾಷಾಂತರಚನ್ನವೀರ ಕಣವಿಚದುರಂಗದ ನಿಯಮಗಳುಜ್ಯೋತಿಬಾ ಫುಲೆತಿರುಪತಿವಸುಧೇಂದ್ರಸಂಸದೀಯ ವ್ಯವಸ್ಥೆಖಾಸಗೀಕರಣಶಾಸ್ತ್ರೀಯ ಭಾಷೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಹೊಂಗೆ ಮರಸಾವಿತ್ರಿಬಾಯಿ ಫುಲೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗುರುರಾಜ ಕರಜಗಿರೋಮನ್ ಸಾಮ್ರಾಜ್ಯದೇವನೂರು ಮಹಾದೇವನಾಲ್ವಡಿ ಕೃಷ್ಣರಾಜ ಒಡೆಯರುದ.ರಾ.ಬೇಂದ್ರೆಊಳಿಗಮಾನ ಪದ್ಧತಿಕೋಲಾರಪೂರ್ಣಚಂದ್ರ ತೇಜಸ್ವಿಮಾವುಮಣ್ಣಿನ ಸಂರಕ್ಷಣೆಕಿತ್ತೂರು ಚೆನ್ನಮ್ಮಶಿವಕಪ್ಪೆಚಿಪ್ಪುಸಿದ್ದರಾಮಯ್ಯ೧೮೬೨ಗೋಲ ಗುಮ್ಮಟಕರ್ನಾಟಕದ ಸಂಸ್ಕೃತಿಬ್ಯಾಡ್ಮಿಂಟನ್‌ಗುಡುಗು🡆 More