ಸವಣೂರು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಮಾರು ೧೬ಕಿ.ಮೀ ದೂರದಲ್ಲಿ ಸವಣೂರು ಎಂಬ ಒಂದು ಪ್ರದೇಶವಿದೆ.

ಚರಿತ್ರೆ

ಹಿಂದೆ ಜೈನ ಮುನಿಗಳಿಂದ ,ಶ್ರಾವಕರು ಓದ ತುಂಬಿಕೊಂಡಿದ್ದ ಈ ಊರಿಗೆ ಜೈನ ಪೇಟೆ ಎಂಬ ಹೆಸರಿತ್ತು.ಇಲ್ಲಿ ಅತ್ಯಂತ ಹಳೆಯದಾದ ,ಕಲಾತ್ಮಕವಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಎಲ್ಲರ ಭಕ್ತಿ,ಶ್ರದ್ಧೆ,ನಂಬಿಕೆಗಳಿಗೆ ಪಾತ್ರವಾಗಿದೆ. ಅನೇಕ ಶ್ರವಣರು ಧರ್ಮ ಕಾರ್ಯತತ್ಪರರಾಗಿ ನಾಡು,ನುಡಿ,ಸಂಸ್ಕೃತಿಯನ್ನು ಮೆರೆದರು. ಶ್ರವಣರ ಊರು ಮುಂದೆ "ಸವಣೂರು" ಆಯಿತು.ಒಂದು ದಾಖಲೆಯಂತೆ ಈ ಬಸದಿಗೆ ಒಳಪಡುವ ೧೦೧ ಮನೆಗಳು,೧೦೧ ಬಾವಿಗಳು ಇದ್ದುವು.ಸುತ್ತಲೂ ಕೋಟೆ ದ್ವಾರಗಳಿದ್ದವು.ಆಸುಪಾಸಿನ ಜನ ಕೆಲವು ಬಾವಿಗಳನ್ನು ದುರಸ್ತಿ ಮಾಡಿ ಇಂದಿಗೂ ಬಳಸುತ್ತಿದ್ದಾರೆ.ಹಿಂದೊಮ್ಮೆ ಚಂದ್ರನಾಥ ಬಸದಿ ಸಂಪೂರ್ಣ ಶಿಲಾಮಯಗೊಂಡಿದ್ದು ೧೮೩೭ ರ ಕಲ್ಯಾಣಪ್ಪನ ಕಾಟುಕಾಯಿ ಎಂಬ ದಂಗೆಯ ಸಮಯದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಇದೀಗ ಮಂದಿರದ ಗರ್ಭ ಗುಡಿ ಮಾತ್ರ ಶಿಲಾಮಯವಾಗಿದೆ.

ಜೋಕ್ಲೆನ ಬಸದಿ

ಜೈನ ಪರಂಪರೆಯಲ್ಲಿ ಮಡಿದವರ ಸ್ಮಾರಕವನ್ನು "ನಿಸಿದ್ಧಿ" ಕಲ್ಲುಗಳೆಂದು ಕರೆಯಲಾಗುತ್ತದೆ. ಸವಣೂರಿನಲ್ಲೂ ಒಂದು ನಿಸಿದ್ಧಿ ಕಲ್ಲು ಕಾಣಸಿಗುವುದು. ಇದನ್ನು ಇಲ್ಲಿಯ ಜನ ತುಳು ಭಾಷೆಯಲ್ಲಿ "ಜೋಕ್ಲೆನ ಬಸದಿ" ಅಂದರೆ ಮಕ್ಕಳ ಬಸದಿ ಎಮ್ದು ಕರೆಯುತ್ತಾರೆ.ಮಕ್ಕಳೇ ಸೇರಿ ಈ ಬಸದಿಯನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. ಮಕ್ಕಳ ಬಸದಿಯ ಒಳಗೆ ೩೭೩ ವರ್ಷಗಳ ಹಿಂದಿನ ಶಿಲಾಶಾಸನವನ್ನು ಅಧ್ಯಯನ ಮಾಡಿರುವ ಇ೮ತಿಹಾಸಜ್ನ ವೈ.ಉಮಾನಾಥ ಶೆಣೈ ಅವರು ಈ ಶಾಸನವನ್ನು ಹೊಂಬುಜ ಮಠದ ಶ್ರೀ ದೇವೇಂದ್ರ ತೀರ್ಥ ಸ್ವಾಮಿಗಳ ಆದೇಶಾನುಸಾರ ಶಾಲಿವಾಹನ ಶಕ ೧೫೫೮ ರಲ್ಲಿ ಬರೆಯಲಾಗಿದೆ. ಶ್ರೀ ಮದ್ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಯವರ ಶಿಷ್ಯರಾಗಿದ್ದ ದೇವಣ ಎಂಬವರು ನಿರ್ವಾಣ ಹೊಂದಿದ ಮುನಿ ಮತ್ತುಅವರ ಶಿಷ್ಯರ ಸ್ಮರಣೆ ಹಾಗೂ ಪುಣ್ಯಾರ್ಥವಾಗಿ ಅವರಿಬ್ಬರ ಬಿಂಬಗಳನ್ನು ಮಠಾಧೀಶರ ಹಾರೈಕೆಯಂತೆ ಸ್ಥಾಪಿಸಿ ,ಶಿಲಾಶಾಸನವಾನ್ನು ಮಧ್ಯಯುಗದ ಕನ್ನಡ ಲಿಪಿಯಲ್ಲಿ ಬರೆಸಲಾಗಿದೆ ಎಂದು ಹೇಳಿರುವುದು ಇಲ್ಲಿನ ಇತಿಹಾಸಕ್ಕಿಡಿದ ಕನ್ನಡಿ.

Tags:

ಕನ್ನಡ

🔥 Trending searches on Wiki ಕನ್ನಡ:

ಸ್ವಚ್ಛ ಭಾರತ ಅಭಿಯಾನಲೋಪಸಂಧಿಭಾರತದ ಸಂಸತ್ತುಕೇಂದ್ರಾಡಳಿತ ಪ್ರದೇಶಗಳುಆಸ್ಪತ್ರೆವಿರಾಟ್ ಕೊಹ್ಲಿಪು. ತಿ. ನರಸಿಂಹಾಚಾರ್ಸ್ತ್ರೀಟೊಮೇಟೊಭಾರತದ ಪ್ರಧಾನ ಮಂತ್ರಿತಂತ್ರಜ್ಞಾನದ ಉಪಯೋಗಗಳುಕನ್ನಡದ ಉಪಭಾಷೆಗಳುಬೊಜ್ಜುಪ್ರಾಚೀನ ಈಜಿಪ್ಟ್‌ಕಲಿಕೆಕವಿಗಳ ಕಾವ್ಯನಾಮವ್ಯಾಪಾರತಲಕಾಡುಭಾರತದ ಪಂಚಾಯತ್ ರಾಜ್ ವ್ಯವಸ್ಥೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕನ್ನಡ ಅಭಿವೃದ್ಧಿ ಪ್ರಾಧಿಕಾರಕಾದಂಬರಿದಿವ್ಯಾಂಕಾ ತ್ರಿಪಾಠಿಉತ್ಪಾದನೆಯ ವೆಚ್ಚಪಾಲಕ್ಹೊಂಗೆ ಮರಗುಬ್ಬಚ್ಚಿಭಾರತದ ಮುಖ್ಯಮಂತ್ರಿಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾವಣಆಟಿಸಂವಾಲ್ಮೀಕಿಹನುಮ ಜಯಂತಿಕನ್ನಡದಲ್ಲಿ ಕಾವ್ಯ ಮಿಮಾಂಸೆಸಂವಹನವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಬೇಬಿ ಶಾಮಿಲಿದೇವರ/ಜೇಡರ ದಾಸಿಮಯ್ಯಕುಂಬಳಕಾಯಿಮುದ್ದಣವಚನ ಸಾಹಿತ್ಯಸಿಂಧೂತಟದ ನಾಗರೀಕತೆವೀರಗಾಸೆಎಕರೆಮಧ್ವಾಚಾರ್ಯಮಂಡಲ ಹಾವುಧೃತರಾಷ್ಟ್ರಕಲ್ಯಾಣ ಕರ್ನಾಟಕಶೈಕ್ಷಣಿಕ ಮನೋವಿಜ್ಞಾನಹಾ.ಮಾ.ನಾಯಕಮಹಾವೀರಪ್ಲಾಸ್ಟಿಕ್ಶತಮಾನಬಾವಲಿರಸ(ಕಾವ್ಯಮೀಮಾಂಸೆ)ಅಯೋಧ್ಯೆಸಂಸ್ಕೃತಿಮಡಿವಾಳ ಮಾಚಿದೇವಜ್ಯೋತಿಷ ಶಾಸ್ತ್ರಮಾಟ - ಮಂತ್ರಕ್ರಿಯಾಪದವಿಜಯ ಕರ್ನಾಟಕಭಗವದ್ಗೀತೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸೆಸ್ (ಮೇಲ್ತೆರಿಗೆ)ಪುನೀತ್ ರಾಜ್‍ಕುಮಾರ್ಉತ್ತರ ಕನ್ನಡಮೌರ್ಯ ಸಾಮ್ರಾಜ್ಯನಿರಂಜನಭಾರತೀಯ ಕಾವ್ಯ ಮೀಮಾಂಸೆಕರ್ನಾಟಕ ಸಂಗೀತಜಯಚಾಮರಾಜ ಒಡೆಯರ್ತಮ್ಮಟಕಲ್ಲು ಶಾಸನಎಸ್.ಎಲ್. ಭೈರಪ್ಪ🡆 More