ಶ್ವೇತಾಶ್ವತರೋಪನಿಷತ್

ಶ್ವೇತಾಶ್ವತರೋಪನಿಷತ್ ಯಜುರ್ವೇದದ ತೈತ್ತೀರಿಯ ಶಾಖೆಗೆ ಸೇರಿದ ಉಪನಿಷತ್ತು.ಪ್ರಾಚೀನವೂ,ಸತ್ವಪೂರ್ಣವೂ ಆಗಿರುತ್ತದೆ.ಶ್ವೇತಾಶ್ವತರ ಮಹರ್ಷಿಗಳು ಇದನ್ನು ಪ್ರಕಟಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.ಇದರಲ್ಲಿ ಆರು ಅಧ್ಯಾಯಗಳೂ ೧೧೩ ಮಂತ್ರಗಳೂ ಇವೆ.

ಪದ್ಯಮಯವಾಗಿದೆ. ಸಹನಾವವತು ಎಂಬುದು ಇದರ ಶಾಂತಿಮಂತ್ರ, ವಿಚಾರಪುರಿತವಾದ 113 ಮಂತ್ರಗಳಿವೆ. ಜಗತ್ಕಾರಣವಾವುದು ? ನಾವು ಎಲ್ಲಿಂದ ಬಂದೆವು ? ಯಾರ ಕಟ್ಟಳೆಗೊಳಗಾಗಿ ಸುಖ ದುಃಖಗಳುಂಟಾಗುವುವು ? ಎಂಬ ಪ್ರಶ್ನೆಗಳ ಮಾಲೆಯಿಂದ ಇದು ಪ್ರಾರಂಭವಾಗಿದೆ. ಜೀವ, ಬ್ರಹ್ಮರ (ಜ್ಞ, ಅಜ್ಞ) ವಿಚಾರ ಪ್ರಸ್ತುತವಾಗಿದೆ. 2ನೆಯ ಅಧ್ಯಾಯದ ಯೋಗದ, ಯೋಗಾನುಭವದ ನಿರೂಪಣೆ ಇದೆ. ಇದು ಪಾತಂಜಲಯೋಗದ ಪೀಠಿಕೆಯಂತಿದೆ. 3-4ನೆಯ ಅಧ್ಯಾಯಗಳಲ್ಲಿ ಬ್ರಹ್ಮತತ್ತ್ವ, ಆತ್ಮತತ್ತ್ವಗಳ ಸ್ವರೂಪ ನಿರೂಪಣೆ ಇದೆ. ಬ್ರಹ್ಮವನ್ನು ಮಹೇಶ್ವರ ಎಂದು ಕರೆಯಲಾಗಿದೆ. 5ನೆಯ ಅಧ್ಯಾಯದಲ್ಲಿ ಕಪಿಲ ಋಷಿಯ ಸಾಂಖ್ಯತತ್ತ್ವದ ಉಲ್ಲೇಖವಿದೆ. ಆದರೆ ನಿರೀಶ್ವರ ಸಿದ್ಧಾಂತದ ಛಾಯೆ ಇಲ್ಲ. ಏಕೈಕ ಕಾರಣನೂ ಸರ್ವಾಧಿಪನೂ ಆದ ಅದ್ವಿತೀಯನನ್ನು ಅರಿಯುವುದರಿಂದ, ಮುಕ್ತಿ ಎಂದು ಹೇಳಲಾಗಿದೆ. 6ನೆಯ ಅಧ್ಯಾಯದಲ್ಲಿ ಕರ್ಮಸಿದ್ಧಾಂತದ ನಿರೂಪಣೆ ಇದ್ದು ಕರ್ಮಕ್ಷಯದಿಂದ ಮೋಕ್ಷಪ್ರಾಪ್ತಿ ಎಂದೂ ಮಹೇಶ್ವರ ಕರ್ಮಚಕ್ರದಿಂದ ಹೊರಗಿರುವ, ಕರ್ಮಾಧ್ಯಕ್ಷನೆಂದೂ ಶ್ವೇತಾಶ್ವತರ ಉಪದೇಶಿಸಿದ್ದಾನೆ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಎಲ್ಲಕ್ಕಿಂತಲೂ ಮೊದಲಾಗಿ ಗುರುಭಕ್ತಿ ಇರಬೇಕೆಂಬುದನ್ನು ಕೊನೆಯಲ್ಲಿ ಒತ್ತಿಹೇಳಲಾಗಿದೆ.

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಆಧಾರ

೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

ಬಾಹ್ಯ ಸಂಪರ್ಕಗಳು

ಶ್ವೇತಾಶ್ವತರೋಪನಿಷತ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮಂತ್ರಮಹೇಶ್ವರಮುಕ್ತಿಯಜುರ್ವೇದ

🔥 Trending searches on Wiki ಕನ್ನಡ:

ಡಾ. ಎಚ್ ಎಲ್ ಪುಷ್ಪಕಪ್ಪೆ ಅರಭಟ್ಟಮಧುಬನಿ ಕಲೆನಾರುವಿಜಯಪುರ ಜಿಲ್ಲೆಯ ತಾಲೂಕುಗಳುಗ್ರಹರಾಜಸ್ಥಾನಶೀತಲ ಸಮರಆಟಿಸಂಅಕ್ಕಮಹಾದೇವಿಕವಿರಾಜಮಾರ್ಗಪುನೀತ್ ರಾಜ್‍ಕುಮಾರ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಅರವಿಧಾನ ಪರಿಷತ್ತುರಾಷ್ಟ್ರೀಯ ಸೇವಾ ಯೋಜನೆಮೈಸೂರು ಸಂಸ್ಥಾನಫ್ರೆಂಚ್ ಕ್ರಾಂತಿಜುಗಾರಿ ಕ್ರಾಸ್ಬೇಸಿಗೆಧರ್ಮಜ್ಯೋತಿಷ ಶಾಸ್ತ್ರಮೋಕ್ಷಗುಂಡಂ ವಿಶ್ವೇಶ್ವರಯ್ಯಯು.ಆರ್.ಅನಂತಮೂರ್ತಿಭೋವಿಬಾಲ ಗಂಗಾಧರ ತಿಲಕಪಕ್ಷಿರಾಷ್ಟ್ರೀಯ ಸ್ವಯಂಸೇವಕ ಸಂಘಇಂದಿರಾ ಗಾಂಧಿಶಾತವಾಹನರುಜೋಗಿ (ಚಲನಚಿತ್ರ)ಶಿಕ್ಷಕದ್ರಾವಿಡ ಭಾಷೆಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮಧ್ಯಕಾಲೀನ ಭಾರತಹಾಸನ ಜಿಲ್ಲೆಮಹಾತ್ಮ ಗಾಂಧಿಪಂಪಸ್ವಾಮಿ ವಿವೇಕಾನಂದರಾಜಾ ರವಿ ವರ್ಮಭೂತಾರಾಧನೆಸಂಚಿ ಹೊನ್ನಮ್ಮಮೂಲಭೂತ ಕರ್ತವ್ಯಗಳುಓಂ (ಚಲನಚಿತ್ರ)ಕಲಿಯುಗರೋಸ್‌ಮರಿಕತ್ತೆಗೌತಮ ಬುದ್ಧನ ಕುಟುಂಬಒಕ್ಕಲಿಗತ. ರಾ. ಸುಬ್ಬರಾಯನವಣೆಕೊಡಗುಟಿಪ್ಪು ಸುಲ್ತಾನ್ಬಿ.ಎಫ್. ಸ್ಕಿನ್ನರ್ಕ್ರಿಕೆಟ್ದಿವ್ಯಾಂಕಾ ತ್ರಿಪಾಠಿಬಾಬು ಜಗಜೀವನ ರಾಮ್ಭಾರತೀಯ ಜನತಾ ಪಕ್ಷಗೋಪಾಲದಾಸರುಅಂತಿಮ ಸಂಸ್ಕಾರಚೆನ್ನಕೇಶವ ದೇವಾಲಯ, ಬೇಲೂರುನಾಟಕಭಾರತಕರ್ನಾಟಕದ ತಾಲೂಕುಗಳುಕನ್ನಡ ಸಂಧಿಹೃದಯಹೆಚ್.ಡಿ.ದೇವೇಗೌಡಗುಪ್ತ ಸಾಮ್ರಾಜ್ಯಅದಿತಿಗಂಗ (ರಾಜಮನೆತನ)ರವಿಚಂದ್ರನ್ಅಳತೆಗಳುವಿಜಯನಗರ ಸಾಮ್ರಾಜ್ಯಮಾಟ - ಮಂತ್ರಜಯಮಾಲಾಕರಾವಳಿವಿಧಾನಸೌಧಸಿಂಧೂತಟದ ನಾಗರೀಕತೆ🡆 More