ಶ್ರೀಪತಿ ಬಲ್ಲಾಳ

ಶ್ರೀಪತಿ ಬಲ್ಲಾಳ್ ರಂಗಕರ್ಮಿ, ನಟ ಮತ್ತು ಸಂಘಟಕರಾಗಿದ್ದವರು.

ಜನನ, ಮತ್ತು ವಿದ್ಯಾಭ್ಯಾಸ

ಶ್ರೀಪತಿ ಬಲ್ಲಾಳ್, ರಾಮದಾಸ್ ಬಲ್ಲಾಳ್ ಮತ್ತು ಕಲ್ಯಾಣಿ ಬಲ್ಲಾಳ್ ದಂಪತಿಗಳ ೭ ಗಂಡು ಮತ್ತು ೬ ಹೆಣ್ಣುಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ೧೯೪೭ ರಲ್ಲಿ ಕಾಲೇಜು ಶಿಕ್ಷಣ ಗಳಿಸಲು ಮುಂಬಯಿ ನಗರಕ್ಕೆ ಪಾದಾರ್ಪಣೆಮಾಡಿದರು. ನಂತರ ರಂಗಭೂಮಿಯ ಕಾರ್ಯಚಟುವಟಿಕೆಗಳಿಂದ ಪ್ರೇರಿತರಾಗಿ ಸುಮಾರು ೪ ದಶಕಗಳ ಕಾಲ ಮುಂಬಯಿನಲ್ಲಿ ನೆಲೆನಿಂತರು. ದಕ್ಷಿಣ ಕನ್ನಡದ ಉಡುಪಿಯ ಸಮೀಪದ ಅಂಬಲ ಪಾಡಿಯಿಂದ ಮುಂಬಯಿನಗರಕ್ಕೆ ವಲಸೆಬಂದು ಹವ್ಯಾಸಿ ರಂಗಭೂಮಿಯನ್ನು ಕಟ್ಟಿಬೆಳೆಸಲು ಬಹಳ ಶ್ರಮಿಸಿದವರಲ್ಲಿ ಒಬ್ಬರು. ತಮ್ಮ ೧೬ ನೆಯ ವಯಸ್ಸಿನಲ್ಲಿಯೇ ರಂಗಪ್ರವೇಶ ಮಾಡಿದರು. ಅವರ ಜೊತೆ ಕಿಶೋರಿ ಬಲ್ಲಾಳರೂ ಸಹಕರಿಸಿದರು. ಜ್ಯಾತ ಕಾದಂಬರಿ ಕರ್ತೃ ವ್ಯಾಸರಾಯ ಬಲ್ಲಾಳ ರು ಶ್ರೀಪತಿ ಬಲ್ಲಾಳರ ಹಿರಿಯ ಸೋದರರು.

ಆಡಿದ ನಾಟಕಗಳು

ಕುವೆಂಪು ರವರು ರಚಿಸಿದ "ಬಿರುಗಾಳಿ"ಯಲ್ಲಿ ಅಭಿನಯಿಸಿದರು. ಈ ನಾಟಕದಿಂದ ಅವರು ರಂಗಭೂಮಿಗೆ ಪಾದಾರ್ಪಣೆಮಾಡಿದ್ದರು.

  1. ವಸಂತ ಕವಲಿಯವರ ನಿರ್ದೇಶನದಲ್ಲಿ "ಎನ್ನ ಮುದ್ದಿನ ಮುದ್ದಣ"ನೆಂಬ ಎಂಬ ನಾಟಕದಲ್ಲಿ ಶ್ರೀಪತಿಬಲ್ಲಾಳ್ ಮುದ್ದಣನಾಗಿಯೂ, ಮನೋರಮೆಯ ಪಾತ್ರದಲ್ಲಿ ಕಿಶೋರಿ ಬಲ್ಲಾಳರೂ ಅಭಿನಯಿಸಿ ಪ್ರೇಕ್ಷಕರ ಮನೆಮಾತಾದರು

ನಿರ್ದೇಶಿಸಿದ ನಾಟಕಗಳು

  1. 'ಸಂಕ್ರಾಂತಿ', ಲಂಕೇಶ್ ವಿರಚಿತ
  2. 'ಮುಳ್ಳಲ್ಲಿದೆ ಮಂದಾರ'-ವ್ಯಾಸರಾವ್ ಬಲ್ಲಾಳ ವಿರಚಿತ (ಮೂಲ:ಬರ್ನಾಡ್ ಶಾ)
  3. 'ಗಿಳಿಯು ಪಂಜರದೊಳಿಲ್ಲ' (ಮೂಲ:ಇಬ್ಸನ್)
  4. ಪದ್ಮಶ್ರೀ ಧುಂಡಿರಾಜ ಮರಾಠಿ ವಲಯದ
  5. 'ಮಾತೃದೇವೋಭವ' ಕಾಮತರ ಕೃತಿ
  6. 'ನೀಲಾಂಬಿಕೆ', ಡಾ.ಬಿ.ಎ.ಸನದಿಯವರ ಕೃತಿಯನ್ನಾಧರಿಸಿ,

ತರಂಗ ರಂಗತಂಡದ ಸ್ಥಾಪನೆ

ತರಂಗ ತಂಡವನ್ನು ಕಟ್ಟಿ ಹಲವಾರು ನಾಟಕಗಳನ್ನು ರಾಜ್ಯದಾದ್ಯಂತ ಪ್ರಚಾರಮಾಡಿದರು.

ನಿಧನ

ಶ್ರೀಪತಿಬಲ್ಲಾಳ್, (೯೧) ಬೆಂಗಳೂರಿನ ಉಪನಗರಗಳಲ್ಲೊಂದಾದ ಕೋರಮಂಗಲದ ಗೃಹದಲ್ಲಿ ಶುಕ್ರವಾರ, ೧೯,ಏಪ್ರಿಲ್, ೨೦೧೯ ರಂದು ನಿಧನರಾದರು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ರಂಗನಟಿ ಮತ್ತು ಸಿನೆಮಾಗಳಲ್ಲೂ ಅಭಿನಯಿಸಿದ ಅವರ ಪತ್ನಿ ಕಿಶೋರಿಬಲ್ಲಾಳ್, ಮತ್ತು ಸೊಸೆ ಅಹಲ್ಯ ಬಲ್ಲಾಳ್ ಇದ್ದಾರೆ. ಅವರ ಮಗ ಸಂತೋಷ್ ಬಲ್ಲಾಳ್ ೧೦ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.

ಉಲ್ಲೇಖಗಳು

Tags:

ಶ್ರೀಪತಿ ಬಲ್ಲಾಳ ಜನನ, ಮತ್ತು ವಿದ್ಯಾಭ್ಯಾಸಶ್ರೀಪತಿ ಬಲ್ಲಾಳ ಆಡಿದ ನಾಟಕಗಳುಶ್ರೀಪತಿ ಬಲ್ಲಾಳ ತರಂಗ ರಂಗತಂಡದ ಸ್ಥಾಪನೆಶ್ರೀಪತಿ ಬಲ್ಲಾಳ ನಿಧನಶ್ರೀಪತಿ ಬಲ್ಲಾಳ ಉಲ್ಲೇಖಗಳುಶ್ರೀಪತಿ ಬಲ್ಲಾಳ

🔥 Trending searches on Wiki ಕನ್ನಡ:

ಮಲೆನಾಡುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕರ್ನಾಟಕದ ಜಾನಪದ ಕಲೆಗಳುಸಹೃದಯಸುಭಾಷ್ ಚಂದ್ರ ಬೋಸ್ಚಾಮರಾಜನಗರತ. ರಾ. ಸುಬ್ಬರಾಯಭಾರತದಲ್ಲಿನ ಜಾತಿ ಪದ್ದತಿಭಾರತದ ಸಂವಿಧಾನರಕ್ತಕ್ರೈಸ್ತ ಧರ್ಮಬಾಗಲಕೋಟೆಪುರಂದರದಾಸಶ್ರೀ ರಾಮಾಯಣ ದರ್ಶನಂಭಗತ್ ಸಿಂಗ್ಅಕ್ರಿಲಿಕ್ಕರ್ನಾಟಕದ ನದಿಗಳುವಿಮೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಈರುಳ್ಳಿಸೂರ್ಯಪ್ಲೇಟೊಸಿದ್ದರಾಮಯ್ಯರತ್ನಾಕರ ವರ್ಣಿಜನಪದ ಕ್ರೀಡೆಗಳುಕರ್ನಾಟಕ ಸಂಗೀತಕನ್ನಡದಲ್ಲಿ ಕಾವ್ಯ ಮಿಮಾಂಸೆಇಂದಿರಾ ಗಾಂಧಿಕಾವೇರಿ ನದಿದಯಾನಂದ ಸರಸ್ವತಿಶುಂಠಿವಾಸ್ತವಿಕವಾದಡಿ. ದೇವರಾಜ ಅರಸ್ತೆಲುಗುಅಶ್ವತ್ಥಾಮಯೋನಿಜಯಚಾಮರಾಜ ಒಡೆಯರ್ಆವಕಾಡೊಯೂಟ್ಯೂಬ್‌ಬೇವುಜಗತ್ತಿನ ಅತಿ ಎತ್ತರದ ಪರ್ವತಗಳುಕರ್ನಾಟಕದ ತಾಲೂಕುಗಳುವಾಯು ಮಾಲಿನ್ಯರಾಗಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮೂಲಧಾತುಬೇಲೂರುಎ.ಎನ್.ಮೂರ್ತಿರಾವ್ಕನ್ನಡದಲ್ಲಿ ವಚನ ಸಾಹಿತ್ಯಮಹಾವೀರಭಾರತೀಯ ಭೂಸೇನೆಧರ್ಮಯೋಗ ಮತ್ತು ಅಧ್ಯಾತ್ಮಕನ್ನಡದಲ್ಲಿ ಪ್ರವಾಸ ಸಾಹಿತ್ಯಹನುಮ ಜಯಂತಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿನಾಯಕ ಕೃಷ್ಣ ಗೋಕಾಕಭಾರತದ ರಾಜಕೀಯ ಪಕ್ಷಗಳುಕದಂಬ ಮನೆತನಪಠ್ಯಪುಸ್ತಕಬಹುವ್ರೀಹಿ ಸಮಾಸರಾವಣವಾಲಿಬಾಲ್ಪಿರಿಯಾಪಟ್ಟಣಶೂದ್ರ ತಪಸ್ವಿಭಾರತದ ವಿಜ್ಞಾನಿಗಳುಅಮ್ಮಗೋವಿಂದ ಪೈಕಾಳಿ ನದಿಅರ್ಥ ವ್ಯವಸ್ಥೆಮುಹಮ್ಮದ್ವಿಜ್ಞಾನಮಾರುಕಟ್ಟೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಬಡ್ಡಿಮುಖ್ಯ ಪುಟನಾರಾಯಣಿ ಸೇನಾ🡆 More