ವೈರಾಗ್ಯ

ವೈರಾಗ್ಯ ಹಿಂದೂ ತತ್ತ್ವಶಾಸ್ತ್ರದಲ್ಲಿ ಬಳಸಲಾದ ಒಂದು ಸಂಸ್ಕೃತ ಪದ.

ಇದನ್ನು ಸ್ಥೂಲವಾಗಿ ನಿರುದ್ವಿಗ್ನತೆ, ನಿರ್ಲಿಪ್ತತೆ, ಅಥವಾ ವಿರಕ್ತಿ, ವಿಶೇಷವಾಗಿ ತಾತ್ಕಾಲಿಕ ಭೌತಿಕ ಪ್ರಪಂಚದಲ್ಲಿನ ನೋವುಗಳು ಹಾಗೂ ಸಂತೋಷಗಳ ತ್ಯಾಗ ಎಂದು ಅನುವಾದಿಸಬಹುದು. ಇದು ಮೋಕ್ಷವನ್ನು ಸಾಧಿಸಲು ಒಂದು ಮಾರ್ಗವಾಗಿದೆ ಎಂದು ವೈರಾಗ್ಯವನ್ನು ಪ್ರತಿಪಾದಿಸಿದ ಹಿಂದೂ ತತ್ತ್ವಶಾಸ್ತ್ರಜ್ಞರು ತಮ್ಮ ಅನುಯಾಯಿಗಳಿಗೆ ಹೇಳಿದರು.

ನಿಜವಾದ ವೈರಾಗ್ಯವು ಬಾಹ್ಯ ಜೀವನಶೈಲಿಯ ಬದಲಾಗಿ ಒಂದು ಆಂತರಿಕ ಮನಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಇದನ್ನು ಒಬ್ಬ ವೈರಾಗಿಯು ಅಭ್ಯಸಿಸಿದಷ್ಟೇ ಉತ್ತಮವಾಗಿ, ಕೌಟುಂಬಿಕ ಜೀವನ ಹಾಗೂ ವೃತ್ತಿಯಲ್ಲಿ ತೊಡಗಿರುವವನು ಕೂಡ ಅಭ್ಯಸಿಸಬಹುದು. ವೈರಾಗ್ಯದ ಅರ್ಥ ಪ್ರಾಪಂಚಿಕ ವಸ್ತುಗಳ ನಿಗ್ರಹ ಅಥವಾ ಅವುಗಳ ಪ್ರತಿ ವಿಕರ್ಷಣೆಯನ್ನು ಬೆಳೆಸಿಕೊಳ್ಳುವುದು ಅಲ್ಲ. ಜೀವನಾನುಭವಕ್ಕೆ ವಿವೇಕದ (ಆಧ್ಯಾತ್ಮಿಕ ವಿವೇಚನೆ ಅಥವಾ ಸೂಕ್ಷ್ಮ ದೃಷ್ಟಿ) ಅನ್ವಯದ ಮೂಲಕ, ಆಕಾಂಕ್ಷಿಯು ಸಾರ್ಥಕತೆ ಹಾಗೂ ಸುಖದ ಆಂತರಿಕ ಆಧ್ಯಾತ್ಮಿಕ ಮೂಲದ ಪರ ಕ್ರಮೇಣವಾಗಿ ಪ್ರಬಲ ಆಕರ್ಷಣೆಯನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಸೀಮಿತ ಬಂಧನಗಳು ಸಹಜವಾಗಿ ಕಳಚಿ ಬೀಳುತ್ತವೆ.

ಮೂಲಗಳು

  • The Vairagya-Satakam Or The Hundred Verses On Renunciation. Advaita Ashrama. 1916.

Tags:

ಮೋಕ್ಷ

🔥 Trending searches on Wiki ಕನ್ನಡ:

ಯೋನಿಯಕ್ಷಗಾನವಿಕ್ರಮಾರ್ಜುನ ವಿಜಯಹನುಮಾನ್ ಚಾಲೀಸಕನ್ನಡ ಬರಹಗಾರ್ತಿಯರುಸಂವಹನಭ್ರಷ್ಟಾಚಾರಅಯ್ಯಪ್ಪವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕಲ್ಯಾಣಿಭಾರತೀಯ ಜನತಾ ಪಕ್ಷಛಂದಸ್ಸುರಂಗವಲ್ಲಿವಚನಕಾರರ ಅಂಕಿತ ನಾಮಗಳುರಾಮಚರಿತಮಾನಸಜಯಮಾಲಾಭಾರತದ ಗಡಿಗಳು ಮತ್ತು ನರೆ ರಾಜ್ಯಗಳುರಾಜಕುಮಾರ (ಚಲನಚಿತ್ರ)ಕಬ್ಬುವೇಗೋತ್ಕರ್ಷಹುರುಳಿವಿನಾಯಕ ದಾಮೋದರ ಸಾವರ್ಕರ್ನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಗದ್ಯ ಸಾಹಿತ್ಯಸಾವಿತ್ರಿಬಾಯಿ ಫುಲೆಚನ್ನವೀರ ಕಣವಿಭಾರತ ರತ್ನಚೋಮನ ದುಡಿದಶಾವತಾರಸಮುಚ್ಚಯ ಪದಗಳುಸಜ್ಜೆಶಿವರಾಜ್‍ಕುಮಾರ್ (ನಟ)ಗಿರೀಶ್ ಕಾರ್ನಾಡ್ಸಂಖ್ಯಾಶಾಸ್ತ್ರಸಾಲುಮರದ ತಿಮ್ಮಕ್ಕಹವಾಮಾನಆಯುರ್ವೇದಯಕೃತ್ತುಸಿದ್ದರಾಮಯ್ಯಹಾಲಕ್ಕಿ ಸಮುದಾಯಕರ್ನಾಟಕದ ಏಕೀಕರಣಕನ್ನಡ ಸಾಹಿತ್ಯ ಪರಿಷತ್ತುತಾಪಮಾನಋತುದಿನೇಶ್ ಕಾರ್ತಿಕ್ಶಿವರಾಮ ಕಾರಂತಸೀಮೆ ಹುಣಸೆಮಹಾತ್ಮ ಗಾಂಧಿಬಿ.ಎಫ್. ಸ್ಕಿನ್ನರ್ವಾಲ್ಮೀಕಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆವಿನಾಯಕ ಕೃಷ್ಣ ಗೋಕಾಕಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸುಗ್ಗಿ ಕುಣಿತನಗರೀಕರಣಹಸ್ತ ಮೈಥುನವಸ್ತುಸಂಗ್ರಹಾಲಯಹುಬ್ಬಳ್ಳಿಅಡಿಕೆಕರ್ನಾಟಕದ ಇತಿಹಾಸಕಾವ್ಯಮೀಮಾಂಸೆಶಾಸನಗಳುಪೂರ್ಣಚಂದ್ರ ತೇಜಸ್ವಿಹಣಕಾಸು ಸಚಿವಾಲಯ (ಭಾರತ)ಯುಗಾದಿಅಲ್ಲಮ ಪ್ರಭುಕೃತಕ ಬುದ್ಧಿಮತ್ತೆಭಾಮಿನೀ ಷಟ್ಪದಿಸಂಗೊಳ್ಳಿ ರಾಯಣ್ಣಬಾಲಕೃಷ್ಣಏಲಕ್ಕಿಮೀನಾಕ್ಷಿ ದೇವಸ್ಥಾನಸಂಶೋಧನೆಭಾರತದಲ್ಲಿನ ಶಿಕ್ಷಣಗಾಂಧಿ ಜಯಂತಿಲಕ್ಷ್ಮಣಚಿದಂಬರ ರಹಸ್ಯಜೈಮಿನಿ ಭಾರತಜಾತ್ರೆ🡆 More