ವೀರೇಂದ್ರ ಸಿಂಪಿ

ವೀರೇಂದ್ರ ಸಿಂಪಿಯವರು ಪ್ರಸಿದ್ಧ ಪ್ರಬಂಧಕಾರರು, ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.

ವೀರೇಂದ್ರ ಸಿಂಪಿ
ವೀರೇಂದ್ರ ಸಿಂಪಿ

ಪರಿಚಯ

ವೀರೇಂದ್ರ ಸಿಂಪಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಎಂಬಲ್ಲಿ ೧೯೩೮ ರಂದು. ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣ. ಕಾಲೇಜು ಶಿಕ್ಷಣ ವಿಜಯಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ೧೯೬೨ರಲ್ಲಿ.

ಉದ್ಯೋಗ ಪ್ರಾರಂಭಿಸಿದ್ದು ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೯ರಲ್ಲಿ ನಿವೃತ್ತಿ. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ‍್ಯರಾಗಿ ನಾಲ್ಕು ವರ್ಷ ಸೇವೆ.

ಸಾಹಿತ್ಯ

ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಹುಚ್ಚು. ‘ಖೊಟ್ಟಿ ನಾಣ್ಯ’ ಎಂಬ ಕಥೆ ‘ಸಂಗಮ’ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿತ. ಏಕಲವ್ಯ ಎಂಬ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದ. ಇಂದಿನ ವಿದ್ಯಾರ್ಥಿಗಳಲ್ಲಿ ‘ಅಸಂತೋಷವೇಕೆ?’ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ ಪಡೆದ ಬಹುಮಾನ.

ಇಂಗ್ಲಿಷ್ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ. ಪ್ರಮುಖ ಪ್ರಬಂಧ ಬರಹಗಾರರು. ಅಂಕಣಕಾರರೆಂದೇ ಪ್ರಸಿದ್ಧಿ. ಪ್ರಬಂಧ ಸಂಕಲನಗಳು-ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿಗಾಳಿ, ಪರಸ್ಪರ ಸ್ಪಂದನ, ಲಲಿತ ಪ್ರಬಂಧಗಳು, ಆಯ್ದ ಲಲಿತ ಪ್ರಬಂಧಗಳು. ಸಂಪಾದಿತ-ಚನ್ನಬಸವಣ್ಣನವರ ವಚನಗಳು, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು, ಅಂಕಣ ಬರಹ/ವೈಚಾರಿಕ ಲೇಖನಗಳು- ಜೀವನವೆಂದರೇನು ? ಸುಖಸಾಧನ, ಬಣ್ಣಗಾರಿಕೆ, ಯೋಗಾರಂಭ. ವಿಮರ್ಶೆ/ಸಮೀಕ್ಷೆ-ಕನ್ನಡದಲ್ಲಿ ಲಲಿತ ಪ್ರಬಂಧಗಳು, ಗಾಯ್ ಡಿ ಮೊಪಾಸನ ಕಥೆಗಳು, ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ. ಜೀವನಚರಿತ್ರೆ-ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆಯ್ದಕ್ಕಿ ಮಾರಯ್ಯ, ಮಾದಾರ ಚೆನ್ನಯ್ಯ, ಚನ್ನಬಸವಣ್ಣ, ಆರ್.ವಿ. ಬೀಡಪ್, ಹತ್ತು ಪಾಶ್ಚಾತ್ಯ ಕಾದಂಬರಿಕಾರರು.

ಪ್ರಶಸ್ತಿ

ಹಲವಾರು ಗೌರವ ಪ್ರಶಸ್ತಿಗಳ ಗರಿ. ಭಾವಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಸ್ವಚ್ಛಂದ ಮನದ ಸುಳಿಗಾಳಿ ಪ್ರಬಂಧ ಸಂಕಲನವು ಕರ್ನಾಟಕ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿ ಆಯ್ಕೆ. ಪರಿಸರ ಸ್ಪಂದನಕ್ಕೆ ಗುಲಬರ್ಗಾ ವಿ.ವಿ.ದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಿಜಪುರ, ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.

ಬಾಹ್ಯ ಕೊಂಡಿಗಳು

Tags:

ವೀರೇಂದ್ರ ಸಿಂಪಿ ಪರಿಚಯವೀರೇಂದ್ರ ಸಿಂಪಿ ಸಾಹಿತ್ಯವೀರೇಂದ್ರ ಸಿಂಪಿ ಪ್ರಶಸ್ತಿವೀರೇಂದ್ರ ಸಿಂಪಿ ಬಾಹ್ಯ ಕೊಂಡಿಗಳುವೀರೇಂದ್ರ ಸಿಂಪಿ

🔥 Trending searches on Wiki ಕನ್ನಡ:

ಸರ್ ಐಸಾಕ್ ನ್ಯೂಟನ್ಮುಟ್ಟು ನಿಲ್ಲುವಿಕೆಋತುಭಾರತದ ಸಂಯುಕ್ತ ಪದ್ಧತಿಆಪತ್ಭಾಂದವಗದ್ದಕಟ್ಟು೧೮೬೨ಲಕ್ಷ್ಮಿಹತ್ತಿಉತ್ತರ ಕರ್ನಾಟಕಭತ್ತಜ್ಯೋತಿಷ ಶಾಸ್ತ್ರಮೊಘಲ್ ಸಾಮ್ರಾಜ್ಯಭಾರತೀಯ ಸಂಸ್ಕೃತಿದೇವರ/ಜೇಡರ ದಾಸಿಮಯ್ಯಸಂಸ್ಕೃತರವೀಂದ್ರನಾಥ ಠಾಗೋರ್ಅನುಭವ ಮಂಟಪಸಿದ್ದಲಿಂಗಯ್ಯ (ಕವಿ)ರಕ್ತದ ಗುಂಪುಗಳುಭಾರತೀಯ ಸ್ಟೇಟ್ ಬ್ಯಾಂಕ್ಬಾಲ್ಯ ವಿವಾಹಕುಕ್ಕೆ ಸುಬ್ರಹ್ಮಣ್ಯ ದೇವಾಲಯಅಯೋಧ್ಯೆವೃದ್ಧಿ ಸಂಧಿಭೂತಕೋಲಬ್ಯಾಂಕ್ಗುರುಸುದೀಪ್ಅರವಿಂದ ಘೋಷ್ಇತಿಹಾಸಜೀವವೈವಿಧ್ಯಶಿವ ಪುರಾಣಕಾವೇರಿ ನದಿಕನಕದಾಸರುಏರೋಬಿಕ್ ವ್ಯಾಯಾಮಭಾರತದ ರಾಷ್ಟ್ರೀಯ ಉದ್ಯಾನಗಳುನಿರಂಜನಡಾ ಬ್ರೋಹೈದರಾಲಿಆಯ್ದಕ್ಕಿ ಲಕ್ಕಮ್ಮವಿಜ್ಞಾನನಾಡ ಗೀತೆಕರ್ನಾಟಕದ ವಾಸ್ತುಶಿಲ್ಪಜೋಗಈರುಳ್ಳಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸಂಗೊಳ್ಳಿ ರಾಯಣ್ಣಬಡತನಜನಪದ ಕ್ರೀಡೆಗಳುಸರ್ಪ ಸುತ್ತುಲಾವಣಿಸಾರಜನಕಯುಧಿಷ್ಠಿರತಂತ್ರಜ್ಞಾನದ ಉಪಯೋಗಗಳುಆಟಕರಿಘಟ್ಟಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಸಂಧ್ಯಾವಂದನ ಪೂರ್ಣಪಾಠಡೊಳ್ಳು ಕುಣಿತತುಮಕೂರುಶಾಸನಗಳುಸಮಾಜಶಾಸ್ತ್ರಪ್ರವಾಸ ಸಾಹಿತ್ಯಕುಟುಂಬಹೃದಯಆಲಮಟ್ಟಿ ಆಣೆಕಟ್ಟುಅಕ್ಬರ್ಟಿಪ್ಪು ಸುಲ್ತಾನ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಸುವರ್ಣ ನ್ಯೂಸ್ವಿಜಯ ಕರ್ನಾಟಕರಾಜಕೀಯ ಪಕ್ಷಭಾಷೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕೊಡಗಿನ ಗೌರಮ್ಮಕುವೆಂಪುಯು.ಆರ್.ಅನಂತಮೂರ್ತಿ🡆 More