ಬಿಸು

ಬಿಸು ತುಳುನಾಡು ಪ್ರದೇಶದಲ್ಲಿ (ಮಂಗಳೂರು ಹಾಗು ಉಡುಪಿ ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ.

ಇದು ಒಂದು ಹಿಂದೂ ಹಬ್ಬ. ಬಿಸುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದುವೇ ಬಿಸು. ತುಳು ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ 'ಬಿಸು'ವಾಗಿಯೂ ಕೇರಳದಲ್ಲಿ 'ವಿಸು'ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ 'ಬಿಶು' ಎಂಬುದಾಗಿ ಇದನ್ನು ಸಂಭ್ರಮಿಸಿದರೆ ಪಂಜಾಬ್ ನಲ್ಲಿ 'ಬೈಸಾಕಿ' ಮತ್ತು ತಮಿಳುನಾಡಿನಲ್ಲಿ 'ಪುತ್ತಾಂಡ್' ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಎಪ್ರಿಲ್ ತಿಂಗಳ ಎರಡನೇ ವಾರ ಅಂದರೆ ಎಪ್ರಿಲ್ ೧೪ರಂದು ಬಿಸುವನ್ನು ಆಚರಿಸುತ್ತಾರೆ.

ಬಿಸು
ಬಿಸು
ಬಿಸುಕಣಿ
ಅಧಿಕೃತ ಹೆಸರುಬಿಸು
ಆಚರಿಸಲಾಗುತ್ತದೆಹಿಂದುಗಳು
ರೀತಿಧಾರ್ಮಿಕ (ಹಿಂದೂ), ಸಾಮಾಜಿಕ
ಆಚರಣೆಗಳುಬಿಸುಕಣಿ, ವಿಶುಕ್ಕೈನೀತಂ , ವಿಷಂಜಿಜಿ ಬಿಸುಕ್ಕಂಜಿ , ಕಣಿ ಕೊನ್ನಾ, ಬಿಸುಪಟ್ಟುಕಂ (ಬಾಣಬಿರುಸುಗಳು), ಯಥು ಕತೋಧ್ (ಉಳುಮೆಗಾಗಿ ಮೊದಲ ತಯಾರಿಕೆ)
ಆರಂಭಮುಂಜಾನೆ
ಅಂತ್ಯ೨೪ ಗಂಟೆಯ ನಂತರ
ಸಂಬಂಧಪಟ್ಟ ಹಬ್ಬಗಳುಬಿಹು, ಬ್ವಿಸಾಗು , ಬೈಸಾಕಿ, ಪೋಲೆ ಬೋಯಿಷಾಕ್, ಪುತಂಡು, ಪಣ ಸಂಕ್ರಾಂತಿ
ಬಿಸು
ಬಿಸು
ತುಳುನಾಡಿನ ಬಿಸು ಕಣಿ

ಹಿನ್ನೆಲೆ

ಬಿಸು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ ಎಂದು ನಂಬಿಕೆ ಇದೆ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ಬಿಸುಹಬ್ಬವನ್ನು ಆಚರಿಸುತ್ತಾರೆ. ಇದೇ ಹಬ್ಬ ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ. ಸುಗ್ಗಿಯ ಸಂಭ್ರಮ ಶುಕ್ರವಾರ ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ.ಇದು ರೈತರಿಗೆ ತೃಪ್ತಿಯನ್ನು ನೀಡುತ್ತದೆ. 'ಬಿಸು ಕಣಿ' ಇಡುವುದೇ ಈ ಹಬ್ಬದ ವಿಶೇಷ. 'ಬಿಸು ಕಣಿ'ಎಂದರೆ ಸುಗ್ಗಿಯ ಕಾಲವಾದುದರಿಂದ ತಮ್ಮಲ್ಲಿ ಬೆಳೆದ ವಿವಿಧ ಹಣ್ಣು ತರಕಾರಿಗಳನ್ನು ಹೂ-ಹಿಂಗಾರಗಳನ್ನು ದೇವರ ಕೋಣೆ ಅಥವಾ ಚಾವಡಿಯಲ್ಲಿ ನಮಸ್ಕರಿಸುವುದು. ಬಿಷು ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ,ಹಣ್ಣು ಹಂಪಲು,ಚಿನ್ನಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ ಕ್ಯೆ ಬಿತ್ತು ಹಾಕುವ ಕ್ರಿಯೆಯನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ ಸರೋಳಿ ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನೊಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನುಒಕ್ಕಲು ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿಯಿತ್ತು.

ಅಶಯ

ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ.ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷ -ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ.ತುಳುವರು ಭತ್ತದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ.ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ ಎನ್ನುವುದು ಕಂಡು ಬರುತ್ತದೆ.

ಆಚರಣೆ ಹೇಗೆ

ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ

ಕ್ಯೆ ಬಿತ್ತು

ಕ್ಯೆ ಬಿತ್ತು ಹಾಕುವ ಕ್ರಮವನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ 'ಸರೋಳಿ' ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನ ಒಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು ಒಕ್ಕಲು ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿತ್ತು.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ಬಿಸು ಹಿನ್ನೆಲೆಬಿಸು ಅಶಯಬಿಸು ಆಚರಣೆ ಹೇಗೆಬಿಸು ಕ್ಯೆ ಬಿತ್ತುಬಿಸು ಬಾಹ್ಯ ಕೊಂಡಿಗಳುಬಿಸು ಉಲ್ಲೇಖಗಳುಬಿಸುಉಡುಪಿಎಪ್ರಿಲ್ಎಪ್ರಿಲ್ ೧೪ಕೇರಳಗ್ರೆಗೋರಿಯನ್ ಕ್ಯಾಲೆಂಡರ್ತಮಿಳುನಾಡುತುಳುತುಳುನಾಡುಪಂಜಾಬ್ಮಂಗಳೂರುಯುಗಾದಿ

🔥 Trending searches on Wiki ಕನ್ನಡ:

ಊಟವಿಷ್ಣುವರ್ಧನ್ (ನಟ)ಕ್ರೈಸ್ತ ಧರ್ಮರಾಮ ಮಂದಿರ, ಅಯೋಧ್ಯೆಮನಮೋಹನ್ ಸಿಂಗ್ರಾಷ್ಟ್ರೀಯ ಜನತಾ ದಳಗದ್ಯನಾಗಚಂದ್ರಮೊದಲನೆಯ ಕೆಂಪೇಗೌಡಮಣ್ಣಿನ ಸಂರಕ್ಷಣೆರೋಸ್‌ಮರಿಕಂಸಾಳೆಸಂಸ್ಕಾರಛಂದಸ್ಸುಬರವಣಿಗೆನುಗ್ಗೆ ಕಾಯಿಸರ್ವಜ್ಞಬಾಳೆ ಹಣ್ಣುಮಾಹಿತಿ ತಂತ್ರಜ್ಞಾನಕರ್ನಾಟಕದ ಹಬ್ಬಗಳುಕುರಿಗೋಲ ಗುಮ್ಮಟಶ್ರೀ ರಾಘವೇಂದ್ರ ಸ್ವಾಮಿಗಳುಶಿವನ ಸಮುದ್ರ ಜಲಪಾತಹರಕೆಭೂತಾರಾಧನೆಎರಡನೇ ಮಹಾಯುದ್ಧಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಹಾವೀರಚಿಕ್ಕಮಗಳೂರುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಾರ್ಮಿಕರ ದಿನಾಚರಣೆವೆಂಕಟೇಶ್ವರದೇವರ ದಾಸಿಮಯ್ಯಮಂಜುಳವಿರಾಟ್ ಕೊಹ್ಲಿಜಾಹೀರಾತುಮೊದಲನೇ ಅಮೋಘವರ್ಷನ್ಯೂಟನ್‍ನ ಚಲನೆಯ ನಿಯಮಗಳುಬೆಂಗಳೂರುಶುಂಠಿನರೇಂದ್ರ ಮೋದಿರಕ್ತಭಾರತದ ರಾಷ್ಟ್ರಪತಿಗಳ ಪಟ್ಟಿಶನಿ (ಗ್ರಹ)ರಾಜ್‌ಕುಮಾರ್ಸಮುದ್ರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪಂಚತಂತ್ರರೈತಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಅಲಂಕಾರದೇವರ/ಜೇಡರ ದಾಸಿಮಯ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚಿತ್ರದುರ್ಗ ಕೋಟೆಜೋಡು ನುಡಿಗಟ್ಟುಬಿದಿರುಪುನೀತ್ ರಾಜ್‍ಕುಮಾರ್ಜಿ.ಪಿ.ರಾಜರತ್ನಂಏಳು ಪ್ರಾಣಾಂತಿಕ ಪಾಪಗಳುಮೂಢನಂಬಿಕೆಗಳುಆದಿ ಶಂಕರಮಂಗಳೂರುನಾಯಿಅಂತರರಾಷ್ಟ್ರೀಯ ಸಂಘಟನೆಗಳುಗರ್ಭಧಾರಣೆಸಂಯುಕ್ತ ರಾಷ್ಟ್ರ ಸಂಸ್ಥೆಆತ್ಮರತಿ (ನಾರ್ಸಿಸಿಸಮ್‌)ಸಿದ್ಧಯ್ಯ ಪುರಾಣಿಕಚದುರಂಗ (ಆಟ)ವಾಯು ಮಾಲಿನ್ಯಲೋಪಸಂಧಿಕರ್ನಾಟಕದ ಜಿಲ್ಲೆಗಳುಯೂಟ್ಯೂಬ್‌ಮಹಾಲಕ್ಷ್ಮಿ (ನಟಿ)ಆಲೂರು ವೆಂಕಟರಾಯರುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕೆ. ಎಸ್. ನರಸಿಂಹಸ್ವಾಮಿ🡆 More