ವಾಳ್ಕೇಶ್ವರ ದೇವಸ್ಥಾನ

ವಾಳ್ಕೇಶ್ವರ ದೇವಸ್ಥಾನಕ್ಕೆ ಬಾಣ ಗಂಗಾ ದೇವಸ್ಥಾನ ಎಂಬ ಮತ್ತೊಂದು ಹೆಸರಿದೆ. ಇದು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ. ಭಾರತದ ಮುಂಬಯಿ ನಗರದ ದಕ್ಷಿಣ ಮುಂಬಯಿನ ಆವರಣದಲ್ಲಿರುವ ಮಲಬಾರ್ ಹಿಲ್ ಗೆ ಸಮೀಪದಲ್ಲಿ ವಾಳ್ಕೇಶ್ವರ ನೆಲೆಗೊಂಡಿದೆ. ಇದು ನಗರದ ಅತಿ ಎತ್ತರವಾದ ಸ್ಥಳದಲ್ಲಿದೆ. [೧] ಹಾಗೂ ದೇವಸ್ಥಾನಕ್ಕೆ ಸಮೀಪದಲ್ಲೇ ಬಾಣ ಗಂಗಾ ಕೆರೆ ಇದೆ.

ಎಡ್ವಿನ್ ವೀಕ್ಸ್ ತೆಗೆದಿರುವ ವಾಳ್ಕೇಶ್ವರ ದೇವಸ್ಥಾನದ ಚಿತ್ರ
ಬಾಣಗಂಗಾ ಟ್ಯಾಂಕ್ ಮತ್ತು ವಾಳ್ಕೇಶ್ವರ ದೇವಸ್ಥಾನ, ಬಾಂಬೆ, ಕ್ರಿ.ಶ. ೧೮೫೫.
ಗೌಡ ಸಾರಸ್ವತ ಬ್ರಾಹ್ಮಣ ಜಾತಿಯ ದೇವಸ್ಥಾನ ಶ್ರೀ ವಾಳ್ಕೇಶ್ವರ
ಕಾಶಿ ಮಠ, ವಾಳ್ಕೇಶ್ವರ

ದಂತಕಥೆ

ದಂತಕಥೆಯ ಪ್ರಕಾರ, ಹಿಂದೂ ದೇವರಾದ ರಾಮನು ತನ್ನ ಸೀತೆಯನ್ನು ಅಪಹರಿಸಿದ ರಾಕ್ಷಸ ರಾಜನಾದ ರಾವಣನನ್ನು ಅಯೋಧ್ಯೆಯಿಂದ ಲಂಕೆಗೆ ಹಿಂಬಾಲಿಸಿ ಹೋದನು. ಹೋಗುವ ದಾರಿಯಲ್ಲಿ ಭಗವಾನ್ ರಾಮನಿಗೆ ಶಿವಲಿಂಗವನ್ನು ಪೂಜಿಸಲು ಸಲಹೆ ನೀಡಲಾಯಿತು. ಆ ಸಲಹೆಯಂತೆ ಅವನು ತನ್ನ ಸಹೋದರ ಲಕ್ಷ್ಮಣನಿಗೆ ಮೂಲ ಲಿಂಗವನ್ನು ನಿರ್ಮಿಸಿ ತರುವಂತೆ ಸೂಚಿಸಿದನು. ಆದರೆ ಲಕ್ಷ್ಮಣ ಲಿಂಗವನ್ನು ತರುವಲ್ಲಿ ತಡವಾದ ಕಾರಣ ರಾಮನು ಮರಳಿನಿಂದ ಲಿಂಗವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ವಾಲುಕಾ ಈಶ್ವರ ಎಂಬ ಪದದ ಮೂಲ ಸಂಸ್ಕೃತ ಪದದಿಂದ ವ್ಯುತ್ಪತ್ತಿಯಾಗಿರುವುದು. ಮರಳಿನಿಂದ ಮಾಡಿದ ವಿಗ್ರಹ ಎಂಬ ಅರ್ಥವನ್ನು ಹೊಂದಿದೆ. - ವಾಳುಕಾ ಈಶ್ವರ್ ಎಂದರೆ ಶಿವನ ಅವತಾರ .

ಕಥೆ ಮುಂದುವರೆದಂತೆ, ಒಮ್ಮೆ ರಾಮನಿಗೆ ಬಾಯಾರಿಕೆಯಾದಾಗ ಸಿಹಿನೀರು ಅಲ್ಲಿ ದೊರಕುವುದಿಲ್ಲ. ಈ ಕಾರಣ(ಸಮುದ್ರ ನೀರು ಮಾತ್ರ) ಅವನು ಬಾಣವನ್ನು ಹೊಡೆದು ಗಂಗೆಯನ್ನು ಇಲ್ಲಿಗೆ ಕರೆತಂದನೆಂದು ಹೇಳಲಾಗುತ್ತದೆ. ಅಂದಿನಿಂದ ಬನ (ಸಂಸ್ಕೃತದಲ್ಲಿ ಬಾಣ) ಗಂಗೆ ಎಂಬ ಹೆಸರಿಂದ ಈ ಸ್ಥಳವನ್ನು ಗುರುತಿಸಲಾಗುತ್ತದೆ. ಈ ಕೆರೆ ನೀರು ಸಮುದ್ರಕ್ಕೆ ಸಮೀಪದಲ್ಲಿದ್ದರೂ ಆ ಸ್ಥಳದಲ್ಲಿ ಒಂದು ಭೂಗತ ಬುಗ್ಗೆಯಿಂದ ನೀರು ಉದ್ಭವಿಸುತ್ತದೆ.

ಇತಿಹಾಸ

ಸು. ಕ್ರಿ.ಶ. ೮೧೦ ರಿಂದ ೧೨೪೦ರ ವರೆಗೆ ಥಾಣೆ ಮತ್ತು ಮುಂಬಯಿ ದ್ವೀಪಗಳನ್ನು ಆಳಿದ ಷಿಲ್ಲಾರ ರಾಜವಂಶದ ಆಸ್ಥಾನದಲ್ಲಿದ್ದ ಲಕ್ಷ್ಮಣ ಪ್ರಭು, ಚಂದ್ರಸೇನೀಯ ಕಾಯಸ್ಥ ಪ್ರಭು ಸಚಿವ [೨] [೩] ದೇವಸ್ಥಾನ ಮತ್ತು ಸಿಹಿ ನೀರಿನ ಬಾಣಗಂಗಾ ಕೆರೆ(ಕಲ್ಯಾಣಿ)ಯನ್ನು ಕ್ರಿ.ಶ.೧೧೨೭ರಲ್ಲಿ ನಿರ್ಮಿಸಿದರು. ೧೬ ನೇ ಶತಮಾನದಲ್ಲಿ ಪೋರ್ಚುಗೀಸರು ಮುಂಬೈನಲ್ಲಿ ಆಳ್ವಿಕೆ ನಡೆಸಿದಾಗ ಈ ದೇವಾಲಯವನ್ನು ನಾಶಗೊಳಿಸಿದರು. ೧೭೧೫ ರಲ್ಲಿ ಮುಂಬಯಿ ಉದ್ಯಮಿ ಮತ್ತು ಲೋಕೋಪಕಾರಿ ರಾಮ ಕಾಮತ್ ಗೌಡ ಸಾರಸ್ವತ ಬ್ರಾಹ್ಮಣ (ಬ್ರಿಟಿಷ್ ದಾಖಲೆಗಳಲ್ಲಿ 'ಕಾಮತಿ' ಎಂದು ಕರೆಯಲ್ಪಡುವ) ಅವರ ಉದಾರತೆಯಿಂದಾಗಿ ಇದನ್ನು ಪುನರ್ನಿರ್ಮಿಸಲಾಯಿತು. ಮೂಲ ದೇವಾಲಯದ ನೆಲೆಯಲ್ಲಿಯೆ ಪುನರ್ನಿರ್ಮಿಸಲಾಗಿದೆ ಹಾಗೂ ಬಾಣಗಾಂಗಾ ಕೆರೆಯ ಸುತ್ತಲೂ ಅನೇಕ ಸಣ್ಣ ದೇವಾಲಯಗಳನ್ನು ನಿರ್ಮಿಸಲಾಗಿದೆ. ೧೮೬೦ ರ ಹೊತ್ತಿಗೆ ಹೆಚ್ಚಿನ ಜನರು ಆಕರ್ಷಿತರಾಗಿ ದೇವಾಲಕ್ಕೆ ಬರಲು ಪ್ರಾರಂಭಿಸಿದರು. ಸುಮಾರು ೧೦ ರಿಂದ ೨೦ ಇತರ ದೇವಾಲಯಗಳು ಅದರ ಸುತ್ತಲೂ ಮತ್ತು ೫೦ ಧರ್ಮಶಾಲೆಗಳು ನಿರ್ಮಾಣವಾಗಿದೆ. [೪]

ಇಂದಿಗೂ ದೇವಸ್ಥಾನ ಮತ್ತು ಸಂಕೀರ್ಣದಲ್ಲಿನ ಬಹುತೇಕ ಆಸ್ತಿಯ ಹಕ್ಕು ಗೌಡ ಸಾರಸ್ವತ ಬ್ರಾಹ್ಮಣ ದೇವಸ್ಥಾನದ ಟ್ರಸ್ಟ್‌ಗೆ ಸೇರಿದೆ.

ಆಚರಣೆ

ದೇವಾಲಯವು ಸಾಮಾನ್ಯವಾಗಿ ಪ್ರತಿ ತಿಂಗಳು ಹುಣ್ಣಿಮೆ ಮತ್ತು ಅಮವಾಸ್ಯೆಯಂದು ( ಅಮಾವಾಸ್ಯೆ ) ಮಾತ್ರ ಕಾರ್ಯನಿರತವಾಗಿರುತ್ತದೆ. ಬಹಳ ಹಿಂದೆ ೧೬ ಮತ್ತು ೧೭ ನೇ ಶತಮಾನಗಳಲ್ಲಿ ಈ ಸ್ಥಳದ ದ್ವೀಪಗಳಿಗೆ ಮಲಬಾರ್ ಕಡಲ್ಗಳ್ಳರು ಬರುತ್ತಿದ್ದರು. ಅವರಿಗೆ ಈ ಸ್ಥಳ ಅಚ್ಚುಮೆಚ್ಚಿನದಾಗಿತ್ತು.

ಪ್ರಸ್ತುತ ಈ ಸ್ಥಳದಲ್ಲಿ ಪ್ರತಿ ವರ್ಷ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಉತ್ಸವನ್ನು ನಡೆಸಲಾಗುತ್ತದೆ. ೨೦೦೫ರಲ್ಲಿ ನಡೆದ ಉತ್ಸವವು ಶಾಸ್ತ್ರೀಯ ಗಾಯಕರಾದ ರಾಜನ್ ಮತ್ತು ಸಾಜನ್ ಮಿಶ್ರಾ ಮತ್ತು ಸಂತೂರ್ ಮೇಸ್ಟ್ರು ಶಿವಕುಮಾರ ಶರ್ಮಾ ಅವರಂತಹ ಸಂಗೀತಗಾರರನ್ನು ಒಳಗೊಂಡಿತ್ತು. ಗೌಡ ಸಾರಸ್ವತ ಬ್ರಾಹ್ಮಣರ ಪ್ರಸಿದ್ಧ ಧಾರ್ಮಿಕ ಸ್ಥಾನಗಳಾದ ಶ್ರೀ ಕಾವ್ಲೆ ಮಠ ಮತ್ತು ಶ್ರೀ ಕಾಶಿ ಮಠದ ಶಾಖೆಗಳು ಕ್ರಮವಾಗಿ ಕೆರೆಯ ಉತ್ತರ ಮತ್ತು ಪಶ್ಚಿಮ ತೀರದಲ್ಲಿವೆ.

ಗ್ಯಾಲರಿ

ಉಲ್ಲೇಖಗಳು

  1. http://www.bl.uk/onlinegallery/onlineex/apac/photocoll/v/019pho000000937u00009000.html ವಾಳ್ಕೇಶ್ವರ್ ಹಳ್ಳಿ]
  2. Shamrao Moroji Nayak (1877). A History of the Pattana Prabhus (in English). Oxford University. Family printing press, Fanaswadi.CS1 maint: unrecognized language (link)
  3. Mulay, Sumati (1954). "Studies in the historical and cultural geography and ethnography of the Deccan". University (in English).CS1 maint: unrecognized language (link)
  4. Malabar Hill - Image, 1850
🔥 Top keywords: ಗಣರಾಜ್ಯೋತ್ಸವ (ಭಾರತ)ಭಾರತದ ಸಂವಿಧಾನಮೈಸೂರುಸಂಗೊಳ್ಳಿ ರಾಯಣ್ಣಉಡುಪಿ ಜಿಲ್ಲೆದಕ್ಷಿಣ ಕನ್ನಡಮಂಡ್ಯಬೆಂಗಳೂರುಬಿ. ಆರ್. ಅಂಬೇಡ್ಕರ್ಕುವೆಂಪುಹಾಸನಗಣರಾಜ್ಯಕೊಡಗುವಿಶೇಷ:Searchಮುಖ್ಯ ಪುಟಚಾಮರಾಜನಗರಕೋಲಾರಬೆಂಗಳೂರು ಗ್ರಾಮಾಂತರ ಜಿಲ್ಲೆಸುಭಾಷ್ ಚಂದ್ರ ಬೋಸ್ದ.ರಾ.ಬೇಂದ್ರೆರಾಮನಗರಭಾರತದ ಸಂವಿಧಾನ ರಚನಾ ಸಭೆಮಹಾತ್ಮ ಗಾಂಧಿಭಾರತ ಗಣರಾಜ್ಯದ ಇತಿಹಾಸಸ್ವಾಮಿ ವಿವೇಕಾನಂದಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಣತಂತ್ರ ದಿನಾಚರಣೆಬಸವೇಶ್ವರಸತ್ಯವತಿಭಾರತ ಸಂವಿಧಾನದ ಪೀಠಿಕೆಭಾರತೀಯ ಮೂಲಭೂತ ಹಕ್ಕುಗಳುಶಿವರಾಮ ಕಾರಂತಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ತ್ರಿವರ್ಣ ಧ್ವಜಪುರಂದರದಾಸಗಿರೀಶ್ ಕಾರ್ನಾಡ್ರವಿ ಡಿ. ಚನ್ನಣ್ಣನವರ್ಕವಿರಾಜಮಾರ್ಗಕನ್ನಡಪ್ರಜಾಪ್ರಭುತ್ವವಿನಾಯಕ ಕೃಷ್ಣ ಗೋಕಾಕಕನಕದಾಸರುಜ್ಞಾನಪೀಠ ಪ್ರಶಸ್ತಿಹಂಪೆಭಾರತಚಂದ್ರಶೇಖರ ಕಂಬಾರವರಾಹಾವತಾರಅಕ್ಕಮಹಾದೇವಿಭಾರತದ ರಾಷ್ಟ್ರಗೀತೆಭಗತ್ ಸಿಂಗ್ಅಲ್ಲಮ ಪ್ರಭುಯು.ಆರ್.ಅನಂತಮೂರ್ತಿಕರ್ನಾಟಕಕಿತ್ತೂರು ಚೆನ್ನಮ್ಮಎ.ಪಿ.ಜೆ.ಅಬ್ದುಲ್ ಕಲಾಂಕನ್ನಡ ರಾಜ್ಯೋತ್ಸವಯೋಗಭಾರತದ ಸ್ವಾತಂತ್ರ್ಯ ದಿನಾಚರಣೆಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತೀಯ ಸಂಸ್ಕೃತಿಜವಾಹರ‌ಲಾಲ್ ನೆಹರುಕರ್ನಾಟಕದ ಏಕೀಕರಣಕನ್ನಡ ಸಾಹಿತ್ಯಪಂಪತ್ಯಾಜ್ಯ ನಿರ್ವಹಣೆವಚನಕಾರರ ಅಂಕಿತ ನಾಮಗಳುಸಂವಿಧಾನಜಾಗತೀಕರಣಬಾದಾಮಿಜಾನಪದಮೈಸೂರು ಅರಮನೆವಲ್ಲಭ್‌ಭಾಯಿ ಪಟೇಲ್ಯಕ್ಷಗಾನವಂದೇ ಮಾತರಮ್ಪೂರ್ಣಚಂದ್ರ ತೇಜಸ್ವಿಕೊರೋನಾವೈರಸ್ ಕಾಯಿಲೆ ೨೦೧೯ಚಿತ್ರ:Constitution of India.jpgರನ್ನಸಿದ್ದಲಿಂಗಯ್ಯ (ಕವಿ)