ಕೋಲಾರ

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ.

ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.

ಕೋಲಾರ
ಕೋಲಾರ ನಗರದ ಪಕ್ಷಿನೋಟ
ಕೋಲಾರ ನಗರದ ಪಕ್ಷಿನೋಟ
ಸೋಮೇಶ್ವರ ದೇವಾಲಯ
ಕೋಲಾರ
ಕೋಲಾರ
ಕೋಲಾರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೋಲಾರ
ನಿರ್ದೇಶಾಂಕಗಳು 13.1333° N 78.1333° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಲಾರ
ಕೋಲಾರದಲ್ಲಿ ಸೂರ್ಯಾಸ್ತದ ಒಂದು ನೋಟ

ಕೋಲಾರ ಜಿಲ್ಲೆಯ ಬಗ್ಗೆ

ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ನಾಡು’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪದ ಹೋರಾಟಗಳು ಮತ್ತು ಜನಪದ ಸಂಸ್ಕೃತಿಯನ್ನು ಮೆರೆದಿದೆ . ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ.ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ. ಶಿವಾರ ಪಟ್ಟಣ ಕಲ್ಲಿನಿಂದ ಕೆತ್ತಿರುವ ಶಿಲ್ಪಕಲೆಗೆ ಪ್ರಖ್ಯಾತಿ.ಕೋಲಾರನ್ನು ಚಿನ್ನದ ಗಣಿ ಎಂದು ಸಹ ಕರೆಯುತ್ತಾರೆ

ಇತಿಹಾಸ

ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.

ಜನಸಂಖ್ಯೆ

೨೦೨೧ ರ ಆದಾರ್ ನೊಂದಣಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು ೧೬,೫೩,೩೨೦ ಆಗಿದೆ ಹಾಗೂ ೨೦೧೧ ರ ಜನಗಣತಿಯ ಪ್ರಕಾರ ೧೫,೩೬,೪೧೧. ಇದರಲ್ಲಿ ಪುರುಷರ ಸಂಖ್ಯೆ ೭೭೬,೩೯೬ ಹಾಗು ಸ್ತೀಯರ ಸಂಖ್ಯೆ ೭೬೦,೦೦೫ ಇದೆ .

ಜಿಲ್ಲೆಯ ಪ್ರಮುಖರು

ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ.

  • ಶ್ರೀ ಟಿ ಚನ್ನಯ್ಯ ಕರಡು ಸಮಿತಿ ಸದಸ್ಯರು, ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಆತ್ಮೀಯರು, ಭಾರತದ ಮೊದಲ ತಂಡದ ರಾಜ್ಯ ಸಭಾ ಸದಸ್ಯರು ಮೈಸೂರು ರಾಜ್ಯದ ಮಂತ್ರಿಯಾಗಿದ್ದರು ಬೆಂಗಳೂರು ನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಅಧ್ಯಕ್ಷರಾಗಿದ್ದರು ಕೋಲಾರಕ್ಕೆ ವಿದ್ಯುತ್ ತರಲು ನೀರು ತರಲು ಹೋರಾಡಿದವರು, ಉತ್ತಮವಾದ ನಗರ ರಚನೆ ಮಾಡಿ ಕೋಲಾರದ ಗಾಂಧಿನಗರ ನಿರ್ಮಿಸಿದವರು.
  • ಕೈವಾರ ನಾರಣಪ್ಪ
  • ಸರ್.ಎಂ.ವಿಶ್ವೇಶ್ವರಯ್ಯ
  • ಮಲ್ಲಿಕರ್ಜುನ ರೆಡ್ಡಿ ಸೂಕ್ಷ್ಮ ಕಲೆ ಗಿನ್ನೆಸ್ ವಿಶ್ವ ದಾಖಲೆ.ತೊಪ್ಪನಹಳ್ಳಿ.
  • ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ
  • ತೀ.ತಾ. ಶರ್ಮ.
  • ಗಟ್ಟಹಳ್ಳಿ ಆಂಜನಪ್ಪಸ್ವಾಮಿ
  • ಡಿ. ವಿ. ಗುಂಡಪ್ಪ
  • ಸೌಂದರ್ಯ
  • ವೆಂಕಟೇಶ ಅಯ್ಯಂಗಾರ್
  • ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ- ಪ್ರಾಧ್ಯಾಪಕರು ಮತ್ತು ಲೇಖಕರು.
  • ಮಂಸೋರೆ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ಚಿತ್ರ ಕಲಾವಿದ, ಲೇಖಕ, ಹವ್ಯಾಸಿ ಪತ್ರಕರ್ತ
  • ಆಕರ್ಷಣೆಗಳು

    ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ

    ಕೋಲಾರ 
    ಅ೦ತರಗ೦ಗೆ


    ನಗರದ ಸುಧಾರಣೆ

    • ಕೋಲಾರದಲ್ಲಿ ಕಸದ ಪ್ರಮಾಣ ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಿರುವುದನ್ನು ಕಂಡು, 'ಗೋ ಪ್ಲಾಗ್!' ಎಂಬ ವಿಶಿಷ್ಟ ಅಭಿಯಾನವನ್ನು ಸುಮಂಗಲಿ ನೋಹ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯು ಕೋಲಾರವನ್ನು ಕಸ ಮುಕ್ತಗೊಳಿಸಲು ಪಣತೊಟ್ಟಿದೆ.
    • ಹೆಚ್ಚಿನ ಹಳೆಯ ಕಟ್ಟಡಗಳನ್ನು ಬಿಳಿಸಿ, ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.

    ಇದನ್ನೂ ನೋಡಿ

    ಉಲ್ಲೇಖಗಳು

    Tags:

    ಕೋಲಾರ ಜಿಲ್ಲೆಯ ಬಗ್ಗೆಕೋಲಾರ ಇತಿಹಾಸಕೋಲಾರ ಜನಸಂಖ್ಯೆಕೋಲಾರ ಜಿಲ್ಲೆಯ ಪ್ರಮುಖರುಕೋಲಾರ ಆಕರ್ಷಣೆಗಳುಕೋಲಾರ ನಗರದ ಸುಧಾರಣೆಕೋಲಾರ ಇದನ್ನೂ ನೋಡಿಕೋಲಾರ ಉಲ್ಲೇಖಗಳುಕೋಲಾರಕರ್ನಾಟಕ

    🔥 Trending searches on Wiki ಕನ್ನಡ:

    ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಾದಾಮಿ ಗುಹಾಲಯಗಳುನೀನಾದೆ ನಾ (ಕನ್ನಡ ಧಾರಾವಾಹಿ)ಕೈಗಾರಿಕೆಗಳುಉಪನಯನಸಿಂಗಪೂರಿನಲ್ಲಿ ರಾಜಾ ಕುಳ್ಳತತ್ಸಮ-ತದ್ಭವಎಂ. ಕೆ. ಇಂದಿರಜೀವವೈವಿಧ್ಯಭಾರತ ಬಿಟ್ಟು ತೊಲಗಿ ಚಳುವಳಿಗ್ರಾಮಗಳುರಕ್ತದೊತ್ತಡಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬೆಳವಲದುರ್ಗಸಿಂಹಕರ್ನಾಟಕದ ಅಣೆಕಟ್ಟುಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಸೂರ್ಯ (ದೇವ)ಮಂಜಮ್ಮ ಜೋಗತಿಸತಿ ಸುಲೋಚನಪ್ರೇಮಾಗುರುರಾಜ ಕರಜಗಿಇಮ್ಮಡಿ ಪುಲಿಕೇಶಿಭಾರತದ ಮುಖ್ಯ ನ್ಯಾಯಾಧೀಶರುಗುದ್ದಲಿಜನಪದ ನೃತ್ಯಗಳುಜೋಳರಾಜ್ಯಗಳ ಪುನರ್ ವಿಂಗಡಣಾ ಆಯೋಗಮಣ್ಣುಶಬ್ದಮಣಿದರ್ಪಣಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ರಾಜ್ಯಗಳ ಜನಸಂಖ್ಯೆಜೈನ ಧರ್ಮಜೋಗಿ (ಚಲನಚಿತ್ರ)ಜಾಹೀರಾತುಬೆಂಗಳೂರು ನಗರ ಜಿಲ್ಲೆಸವದತ್ತಿಬ್ಲಾಗ್ಅಲಂಕಾರವ್ಯವಹಾರಗ್ರಹಹೊಯ್ಸಳ ವಾಸ್ತುಶಿಲ್ಪಕ್ಷತ್ರಿಯಚದುರಂಗಕರ್ನಾಟಕದ ನದಿಗಳುಸಂವತ್ಸರಗಳುಖ್ಯಾತ ಕರ್ನಾಟಕ ವೃತ್ತಮೊದಲನೆಯ ಕೆಂಪೇಗೌಡಶಿಕ್ಷಕರಾಮಪಶ್ಚಿಮ ಘಟ್ಟಗಳುಜಾನ್ ಸ್ಟೂವರ್ಟ್ ಮಿಲ್ಕನಕದಾಸರುಸೂರ್ಯವ್ಯೂಹದ ಗ್ರಹಗಳುಬಿ.ಎಲ್.ರೈಸ್ವಿಜಯ ಕರ್ನಾಟಕಅಂತರರಾಷ್ಟ್ರೀಯ ವ್ಯಾಪಾರಸೂರ್ಯ ವಂಶಕನ್ನಡ ವ್ಯಾಕರಣಚಿತ್ರದುರ್ಗವಾಯು ಮಾಲಿನ್ಯಮಹಾವೀರ ಜಯಂತಿಮೀನಾಕ್ಷಿ ದೇವಸ್ಥಾನಕುಂದಾಪುರಭಾರತದ ಸಂಗೀತಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಮೂಲಧಾತುಹಿಂದೂ ಧರ್ಮಕರ್ಣನರೇಂದ್ರ ಮೋದಿ೧೮೬೨ಹಲ್ಮಿಡಿ ಶಾಸನಕಲ್ಯಾಣ ಕರ್ನಾಟಕಗೋಪಾಲಕೃಷ್ಣ ಅಡಿಗಬಿ.ಎಸ್. ಯಡಿಯೂರಪ್ಪರಾಶಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ🡆 More