ರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ಸಾರ್ವಜನಿಕ
ಪ್ರಾರಂಭವಾದದ್ದು ೧೯೬೬
ಮೊದಲ ಪ್ರಶಸ್ತಿ ೧೯೬೬
ಕಡೆಯ ಪ್ರಶಸ್ತಿ ೨೦೨೦
ಪ್ರಶಸ್ತಿ ನೀಡುವವರು ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸರ್ಕಾರ
ಧನ ಪುರಸ್ಕಾರ ₹ ೧,೦೦,೦೦೦
ವಿವರ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಉನ್ನತ ಗೌರವ
ಹಿಂದಿನ ಹೆಸರು(ಗಳು) ಮೈಸೂರು ರಾಜ್ಯ ಪ್ರಶಸ್ತಿ
(೧೯೬೬–೧೯೭೨)
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.

ಇತಿಹಾಸ

ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:

ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರದಾನ ಮಾಡಿದ್ದರು.

ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

202ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್ ಲೈನ್ ಅಥವ ಆಫ್ ಲೈನ್ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಈ ಹಿಂದೆ ಹೊಸ ವ್ಯವಸ್ಥೆಯನ್ನು ತಂದು, ಮೆಚ್ಚುಗೆಯನ್ನು ಪಡೆದಿದ್ದರು. 2022ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸುವ , ಶಿಫಾರಸು ಮಾಡುವ ವ್ಯವ್ಸಥೆಸ್ಥಗಿತ ಮಾಡಲಾಯಿತು. ಮತ್ತೊಂದು ಹೊಸ ವಿಧಾನವನ್ನು ಜಾರಿಗೆ ತರಲಾಯಿತು. ಆ ಪ್ರಕಾರ ಹಲವು ಸಮಿತಿಗಳನ್ನು ನೇಮಿಸಿ ರಾಜ್ಯ ಪ್ರವಾಸ ನಡೆಸಿ ಸಮಿತಿಯೆ ಪ್ರಶಸ್ತಿಗೆ ಸೂಕ್ತ ಆದವರನ್ನು ಆಯ್ಕೆ ಮಾಡುವ ವಿಧಾನದ ಮೂಲ 2022ರ ರಾಜ್ಯೋತಸ್ವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ ಮಾಡಲಾಯಿತು.[೧]

ದಶಕವಾರು ಪ್ರಶಸ್ತಿಗಳ ಪಟ್ಟಿ

ನೋಡಿ

ಉಲ್ಲೇಖಗಳು

Tags:

ರಾಜ್ಯೋತ್ಸವ ಪ್ರಶಸ್ತಿ ಇತಿಹಾಸರಾಜ್ಯೋತ್ಸವ ಪ್ರಶಸ್ತಿ ದಶಕವಾರು ಪ್ರಶಸ್ತಿಗಳ ಪಟ್ಟಿರಾಜ್ಯೋತ್ಸವ ಪ್ರಶಸ್ತಿ ನೋಡಿರಾಜ್ಯೋತ್ಸವ ಪ್ರಶಸ್ತಿ ಉಲ್ಲೇಖಗಳುರಾಜ್ಯೋತ್ಸವ ಪ್ರಶಸ್ತಿ

🔥 Trending searches on Wiki ಕನ್ನಡ:

ಗಣರಾಜ್ಯೋತ್ಸವ (ಭಾರತ)ಚಂದ್ರಗುಪ್ತ ಮೌರ್ಯಅರವಿಂದ ಘೋಷ್ದೇವರ ದಾಸಿಮಯ್ಯಜಾತ್ಯತೀತತೆಸರಸ್ವತಿಭಾರತದ ಸಂವಿಧಾನ ರಚನಾ ಸಭೆನ್ಯೂಟನ್‍ನ ಚಲನೆಯ ನಿಯಮಗಳುಚದುರಂಗ (ಆಟ)ನುಡಿಗಟ್ಟುತಮ್ಮಟ ಕಲ್ಲು ಶಾಸನಬಹುವ್ರೀಹಿ ಸಮಾಸಕರ್ನಾಟಕದ ಅಣೆಕಟ್ಟುಗಳುನಾರಾಯಣಿ ಸೇನಾಭಾರತೀಯ ಅಂಚೆ ಸೇವೆಒಂದನೆಯ ಮಹಾಯುದ್ಧದೆಹಲಿ ಸುಲ್ತಾನರುಫೇಸ್‌ಬುಕ್‌ಕ್ರಿಯಾಪದಪುನೀತ್ ರಾಜ್‍ಕುಮಾರ್ದೆಹಲಿರೇಣುಕಶ್ರೀಲಂಕಾ ಕ್ರಿಕೆಟ್ ತಂಡಭಾರತ ಬಿಟ್ಟು ತೊಲಗಿ ಚಳುವಳಿವಾರ್ತಾ ಭಾರತಿಸಂಧಿಶ್ರೀರಂಗಪಟ್ಟಣಚಿನ್ನವಾಣಿಜ್ಯ ಪತ್ರನಾಗವರ್ಮ-೧ಅರಸೀಕೆರೆವಿದುರಾಶ್ವತ್ಥಸಾರ್ವಭೌಮತ್ವಕೃಷ್ಣತಾಳೆಮರಶಾಂತಲಾ ದೇವಿಚಂದ್ರಶೇಖರ ವೆಂಕಟರಾಮನ್ಹಿರಿಯಡ್ಕಒಡೆಯರ ಕಾಲದ ಕನ್ನಡ ಸಾಹಿತ್ಯಸೌರಮಂಡಲಕನ್ನಡ ಕಾವ್ಯಷಟ್ಪದಿಅಂತರಜಾಲಭಾರತೀಯ ಧರ್ಮಗಳುಅಮೃತಬಳ್ಳಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚಂಪಕ ಮಾಲಾ ವೃತ್ತಮಾನವನ ವಿಕಾಸಕಲಿಕೆಧೃತರಾಷ್ಟ್ರಕಾಫಿರ್ಮುತ್ತುಗಳುಹೃದಯತಂತ್ರಜ್ಞಾನಚಾಲುಕ್ಯರತ್ನಾಕರ ವರ್ಣಿಮಂತ್ರಾಲಯಸಾರ್ವಜನಿಕ ಹಣಕಾಸುಒಗಟುವೀರಗಾಸೆಕನ್ನಡ ಸಾಹಿತ್ಯದೀಪಾವಳಿಹನುಮಂತಲೋಹಹೊಯ್ಸಳಒಡೆಯರ್ಮೂಢನಂಬಿಕೆಗಳುಚಿತ್ರದುರ್ಗಭಾರತದ ರಾಜಕೀಯ ಪಕ್ಷಗಳುಅಲೆಕ್ಸಾಂಡರ್ತಿಂಥಿಣಿ ಮೌನೇಶ್ವರಕಾನೂನುಚೋಮನ ದುಡಿಕನ್ನಡ ರಂಗಭೂಮಿಸಾಮಾಜಿಕ ಸಮಸ್ಯೆಗಳುಅಕ್ರಿಲಿಕ್🡆 More