ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2008) |
ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ 'ಕಂತಿ'ನ ಮೊತ್ತದ ನ್ಯಾಯೋಚಿತ ವಿನಿಮಯವೇ ವಿಮೆ ಎಂದು ವಿಮೆಯನ್ನು ವಿವರಿಸಲಾಗಿದೆ.ಭಾರೀ ಪ್ರಮಾಣದ ಸಂಭವನೀಯ ವಿನಾಶಕಾರಿ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಅನುಭವಿಸುವ ನಿಶ್ಚಿತವೂ, ಗೊತ್ತಿರುವಂಥದ್ದೂ ಆದ ಅಲ್ಪ ಪ್ರಮಾಣದ ನಷ್ಟವೆಂದೂ ಇದನ್ನು ಭಾವಿಸಬಹುದು. ವಿಮೆಗಾರ ಎಂದರೆ ವಿಮೆ ಸೇವೆಯನ್ನು ಒದಗಿಸುವ ಸಂಸ್ಥೆ. ವಿಮೆದಾರ ಅಥವಾ ಪಾಲಿಸಿದಾರ ಎಂದರೆ ವಿಮೆಯ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಅಥವಾ ಘಟಕ. ಇಂತಿಷ್ಟು ಮೊತ್ತದ ವಿಮೆ ರಕ್ಷಣೆ ಪಡೆಯ ಬಯಸಿದಾಗ ಇಂತಿಷ್ಟು ಶುಲ್ಕ ತೆರಬೇಕು ಎಂದು ನಿರ್ಣಯಿಸುವ ಅಂಶವೇ ವಿಮಾ ದರ .ಇದೇ ವಿಮಾ ಪ್ರೀಮಿಯಂ (=ವಿಮಾ ಕಂತು) ಅಪಾಯ ನಿರ್ವಹಣೆಯು ಮೌಲ್ಯ ನಿರ್ಣಯ ಮತ್ತು ಅಪಾಯ ನಿಯಂತ್ರಣದ ನಡುವಿನ ಕಸರತ್ತು, ಇದು ವಿಭಿನ್ನವಾದ ಅಧ್ಯಯನ ಮತ್ತು ಪ್ರಯೋಗದ ಕ್ಷೇತ್ರವಾಗಿ ಹೊರಹೊಮ್ಮಿದೆ.
ವಾಣಿಜ್ಯ ರೂಪದಲ್ಲಿ ವಿಮೆಯ ರಕ್ಷಣೆಗೆ ಒಳಗಾಗಬಲ್ಲ ಅಪಾಯಗಳು ವಿಶಿಷ್ಟವಾಗಿ ಏಳು ಸಾಮಾನ್ಯ ಗುಣಗಳನ್ನು ಹೊಂದಿವೆ:
ಆಗಿರುವ ನಷ್ಟವನ್ನು ತುಂಬಿಕೊಡುವುದು 'ನಷ್ಟ ಪರಿಹಾರ'ಎಂಬುದುರ ತಾಂತ್ರಿಕ ವಿವರಣೆ. ವಿಮೆ ಇಳಿಸುವ ಒಪ್ಪಂದದಲ್ಲಿ ಎರಡು ವಿಧಗಳಿವೆ:
"ಪರವಾಗಿ ಪಾವತಿ ಮಾಡುವಂಥ" ಅಥವಾ "ಪರವಾಗಿ" ಪಾಲಿಸಿ. ಲಿಖಿತ ರೂಪದಲ್ಲಿ ವ್ಯತ್ಯಾಸವು ಗಮನಾರ್ಹವಾಗಿದೆ, ಆದರೆ ಅದು ಪ್ರಯೋಗದಲ್ಲಿ ಅತಿ ವಿರಳ.
ವಿಮೆದಾರರು ತಮ್ಮ ಜೇಬಿನಿಂದ ಮೂರನೆಯ ಪಕ್ಷದವರಿಗೆ ಹಣವನ್ನು ಪಾವತಿಸುವವರೆಗೂ, 'ನಷ್ಟ ಪರಿಹಾರ' ಪಾಲಿಸಿಯು ಪರಿಹಾರವನ್ನು ಪಾವತಿ ಮಾಡುವುದಿಲ್ಲ. ಉದಾಹರಣೆಗೆ, ನಿಮ್ಮ ಮನೆಗೆ ಭೇಟಿ ನೀಡುವವರು ನಿಮ್ಮ ಮನೆಯ ಒದ್ದೆ ನೆಲದ ಮೇಲೆ ಜಾರಿಬಿದ್ದು, ನಿಮ್ಮ ವಿರುದ್ಧ $10,000 ಮೊಕದ್ದಮೆ ಹೂಡಿ, ತೀರ್ಪನ್ನು ತಮ್ಮ ಪರವಾಗಿ ಮಾಡಿಕೊಳ್ಳುತ್ತಾರೆ. ಭೇಟಿ ನೀಡಿದವರು ಜಾರಿ ಬಿದ್ದದ್ದಕ್ಕೆ 'ನಷ್ಟ ಪರಿಹಾರ' ಪಾಲಿಸಿಯಡಿ ಮನೆಯ ಮಾಲೀಕರು ಈ $10,000 ಪಾವತಿಸಿ, ತಮ್ಮ ಜೇಬಿನಿಂದ ಭರಿಸಿದ ವೆಚ್ಚಗಳಿಗಾಗಿ ($10,000) ವಿಮೆ ವಾಹಕರ ಮೂಲಕ 'ನಿರ್ಬಾಧಿತ'ರಾಗುವರು.
ಇದೇ ಪರಿಸ್ಥಿತಿಯಲ್ಲಿ, 'ಪರವಾಗಿನ ಪಾವತಿ' ಪಾಲಿಸಿಯಂತೆ, ವಿಮೆ ವಾಹಕರು ಬೇಡಿಕೆಯ ವಿಮೆ ಹಣವನ್ನು ಪಾವತಿಸಿ ವಿಮೆದಾರ (ಮನೆಯ ಮಾಲೀಕ) ಯಾವುದೇ ಕಾರಣಕ್ಕೂ ಜೇಬಿನಿಂದ ಹಣ ತೆತ್ತಬೇಕಿಲ್ಲ. ಅಧುನಿಕ ಬಾಧ್ಯತೆ ವಿಮೆಯಲ್ಲಿ ಹೆಚ್ಚಿನವು 'ಪರವಾಗಿ ಪಾವತಿ' ಆಧಾರದ ಮೇಲೆ ಬರೆಯಲಾಗಿದೆ.
'ವಿಮೆಗಾರರು' (ವಿಮೆ ನೀಡುವ ಪಂಗಡ), ವಿಮೆ 'ಪಾಲಿಸಿ' ಎಂಬ ಕರಾರಿನ ಮೂಲಕ ವಿಮ ಅಪಾಯವನ್ನು ವಹಿಸಿದೊಡನೆಯೇ, ಅಪಾಯವನ್ನು ವರ್ಗಾಯಿಸಲು ಬಯಸುತ್ತಿರುವ ಘಟಕವು (ವ್ಯಕ್ತಿ, ನಿಗಮ ಅಥವಾ ಯಾವುದೇ ತರಹದ ಒಕ್ಕೂಟ ಇತ್ಯಾದಿ) 'ವಿಮೆದಾರ'ರಾಗುತ್ತಾರೆ/ವಾಗುತ್ತದೆ. ಸಾಮಾನ್ಯವಾಗಿ, ಒಂದು ವಿಮೆ ಕರಾರು ಕನಿಷ್ಥ ಪಕ್ಷದಲ್ಲಿ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ: ಪಕ್ಷಗಳು (ವಿಮೆಗಾರ, ವಿಮೆದಾರ, ಫಲಾನುಭವಿಗಳು), ವಿಮೆ ಕಂತು, ವಿಮೆ ರಕ್ಷಣೆಯ ಅವಧಿ, ವ್ಯಾಪ್ತಿಗೆ ಸೇರಿಸಿಕೊಂಡ ವಿಶಿಷ್ಟ ನಷ್ಟ ಘಟನೆ, ರಕ್ಷಣೆಯ ಮೊತ್ತ (ನಷ್ಟ ಸಂಭವಿಸಿದಾಗ ವಿಮೆದಾರರಿಗೆ ಅಥವಾ ಫಲಾನುಭವಿಗೆ ನೀಡಬೇಕಾದ ಹಣದ ಮೊತ್ತ), ಮತ್ತು ಹೊರತುಗಳು (ವ್ಯಾಪ್ತಿಗೊಳಪಡದ ಘಟನೆಗಳು). ಹಾಗಾಗಿ, ವಿಮೆದಾರರು ಪಾಲಿಸಿಯಲ್ಲಿ ಸೇರಿಸಿಕೊಳ್ಳಲಾದ ನಷ್ಟಗಳಿಂದ ನಿರ್ಬಾಧಿತರಾಗುತ್ತಾರೆ.
ವಿಮೆದಾರ ಪಕ್ಷವು ವಿಶಿಷ್ಟ ಅಪಾಯದಲ್ಲಿ ನಷ್ಟವನ್ನು ಅನುಭವಿಸಿದಾಗ, ವಿಮೆ ಪಾಲಿಸಿಯಲ್ಲಿ ಸೂಚಿಸಿದಂತೆ ಪಾಲಿಸಿದಾರರು ವಿಮೆಗಾರರ ವಿರುದ್ಧ 'ವಿಮೆ ಪರಿಹಾರದ ಬೇಡಿಕೆ'ಯನ್ನು ಸಲ್ಲಿಸಬಹುದು. ವಿಮೆದಾರರು ಅಪಾಯವನ್ನು ವಹಿಸಿಕೊಳ್ಳುವ ವಿಮೆಗಾರರಿಗೆ ಪಾವತಿ ಮಾಡಲಾದ ಹಣದ ಮೊತ್ತಕ್ಕೆ 'ವಿಮೆ ಕಂತು' ಎನ್ನಲಾಗುತ್ತದೆ. ಹಲವಾರು ವಿಮೆದಾರರಿಂದ ಸಂದ ವಿಮೆ ಕಂತುಗಳನ್ನು ಆನಂತರದ ವಿಮೆ ಹಣ ಬೇಡಿಕೆ ಸಲ್ಲಿಸುವವವರಿಗಾಗಿ ಪಾವತಿ ಮಾಡಲೆಂದು (ಸೈದ್ಧಾಂತಿಕವಾಗಿ ತುಲನಾತ್ಮಕವಾಗಿ ಕಡಿಮೆ ವಿಮೆ ಹಣ ಬೇಡಿಕೆಯ ಸಲ್ಲಿಕೆ) ಮೀಸಲಿಟ್ಟ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಹಾಗೂ ಹೆಚ್ಚುವರಿಸಾಮಾನ್ಯ ಆಡಳಿತದ ಖರ್ಚಿಗೆ ಬಳಸಲಾಗುತ್ತದೆ. ವಿಮೆಗಾರರು ಮುಂದಾಲೋಚಿಸುವ ನಷ್ಟಗಳಿಗಾಗಿ ಸಾಕಷ್ಟು ಹಣವನ್ನು ಮೀಸಲಿಡುವವರೆಗೂ,(ಆಪದ್ಧನ) ಉಳಿದ ಮೊತ್ತವು ವಿಮೆಗಾರರ ಲಾಭವಾಗುತ್ತದೆ.
ವ್ಯವಹಾರ ಮಾದರಿಯನ್ನು ಒಂದು ಸರಳ ಸಮೀಕರಣದ ರೂಪದಲ್ಲಿ ಸೂಚಿಸಬಹುದು: ಲಾಭ = ವಿಮೆಕಂತಿನ ಗಳಿಕೆ + ಹೂಡಿಕೆ ಆದಾಯ -ಅನುಭವಿಸಲಾದ ನಷ್ಟ - ವಿಮೆ ಇಳಿಸಲು ತಗಲುವ ವೆಚ್ಚ.
ವಿಮೆಗಾರರು ಎರಡು ರೀತಿಗಳಲ್ಲಿ ಹಣ ಗಳಿಸುತ್ತಾರೆ:
ವಿಮೆ ಇಳಿಸಿ ಪಾಲಿಸಿಗಳನ್ನು ತೆರೆಯುವುದೇ ವಿಮಾಪತ್ರದ ಜವಾಬ್ದಾರಿಯ ನಿರ್ವಹಣೆ ವಿಮಾ ವ್ಯವಹಾರದ ಅತಿ ಜಟಿಲ ವಿಚಾರ. ಮಾಹಿತಿಯ ವಿಸ್ತಾರಿತ ವಿಂಗಡಿಕೆಯನ್ನು ಬಳಸಿ, ವಿಮೆಗಾರರು ತಮ್ಮ ಪಾಲಿಸಿಗಳ ಮೇಲೆ ಬರಬಹುದಾದ ವಿಮೆ ಪರಿಹಾರ ಬೇಡಿಕೆಯ ಸಂಭಾವ್ಯತೆಯನ್ನು ಮುಂದಾಲೋಚಿಸಿ ಅದರ ಆಧಾರದ ಮೇಲೆ ಕಂತಿನ ಮೊತ್ತವನ್ನು ನಿರ್ಣಯಿಸುತ್ತಾರೆ. ಇದರತ್ತ, ವಿಮೆಗಾರರು ವಹಿಸಲಿಚ್ಛಿಸುವ ಅಪಾಯಗಳನ್ನು ಪ್ರಮಾಣೀಕರಿಸಿ, ವಿಮೆ ಕಂತುಗಳನ್ನು ನಿರ್ಣಯಿಸಲು, ವಿಮಾಗಣಿತದ ವಿಜ್ಞಾನವನ್ನು ಬಳಸುತ್ತಾರೆ. ಅಪಾಯವೊಂದರ ಆಧಾರದ ಮೇಲೆ ಭವಿಷ್ಯದಲ್ಲಿ ನಿರೀಕ್ಷಿಸಬಹುದಾದ ವಿಮೆ ಪರಿಹಾರವನ್ನು ನಿಖರವಾಗಿ ಕಲ್ಪಿಸಲು ಮಾಹಿತಿಯನ್ನು ವಿಶ್ಲೇಷಿಸುತ್ತಾರೆ.ಯಾವ ಯಾವ ಅಪಾಯಗಳಿಗೆ ಇಳಿಸಲಾದ ವಿಮೆಯು ಈಡಾಗಿದೆ ಎಂಬುದನ್ನು ವಿಶ್ಲೇಷಿಸುತ್ತಾರೆ. ವಿಮಾ ಗಣಿತವು ಅಂಕಿ-ಅಂಶಗಳು ಮತ್ತು ಸಂಭಾವ್ಯತೆಯನ್ನು ಬಳಸುತ್ತದೆ. ವಿಮೆಗಾರರ ಒಟ್ಟಾರೆ ಒಡ್ಡಿಕೊಳ್ಳುವಿಕೆಯನ್ನು ನಿರ್ಣಯಿಸಲು ಈ ವೈಜ್ಞಾನಿಕ ತತ್ವಗಳನ್ನು ಬಳಸಲಾಗುತ್ತದೆ. ಪ್ರಸಕ್ತ ಪಾಲಿಸಿಯು ಅಂತ್ಯಗೊಂಡಾಗ, ಸಂಗ್ರಹಿಸಲಾದ ವಿಮೆ ಕಂತಿನ ಮೊತ್ತ ಮತ್ತು ಹೂಡಿಕೆಯ ಲಾಭದಿಂದ ವಿಮೆ ಪರಿಹಾರದಲ್ಲಿ ಹಣ ಸಂದಾಯದ ಮೊತ್ತಗಳನ್ನು ಕಳೆದಾಗ ಉಳಿದ ಹಣವನ್ನು ಆ ಪಾಲಿಸಿಯ ಮೇಲೆ ವಿಮೆಗಾರರ ವಿಮೆ ಇಳಿಸುದುದರಿಂದ ದೊರೆತ ಲಾಭ ಎಂದು ಪರಿಗಣಿಸಲಾಗುತ್ತದೆ. ಖಚಿತವಾಗಿಯೂ, ವಿಮೆಗಾರರ ದೃಷ್ಟಿಕೋನದಿಂದ, ಕೆಲವು ಪಾಲಿಸಿಗಳು 'ವಿನರ್ಸ್'(='ಜಯಶಾಲಿ') ಆಗಿರುತ್ತವೆ (ಅರ್ಥಾತ್ ವಿಮೆಗಾರರು ಪಾವತಿಸುವ ವಿಮೆ ಪರಿಹಾರದ ಹಣ ಮತ್ತು ಖರ್ಚುಗಳ ಮೊತ್ತವು ತಾವು ಪಡೆದ ವಿಮೆ ಕಂತುಗಳು ಮತ್ತು ಹೂಡಿಕೆಗಳ ಮೊತ್ತಕ್ಕಿಂತಲೂ ಕಡಿಮೆಯಿರುತ್ತದೆ); ಕೆಲವು 'ಲೂಸರ್ಸ್' ಆಗಿರುತ್ತವೆ ( ಅರ್ಥಾತ್ ವಿಮೆಗಾರರು ಪಾವತಿಸಿದ ವಿಮೆ ಪರಿಹಾರ ಹಣ ಮತ್ತು ಖರ್ಚುಗಳ ಮೊತ್ತವು ತಾವು ಪಡೆದ ವಿಮೆ ಕಂತುಗಳು ಮತ್ತು ಹೂಡಿಕೆಗಳ ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ); ಲಾಭವನ್ನು ಉಳಿಸಿಕೊಳ್ಳುತ್ತಿರುವಾಗಲೇ, 'ಲೂಸರ್ಸ್'ಗೆ ಸಂದಾಯ ಮಾಡಲು ಸಾಕಷ್ಟು 'ವಿನಿಂಗ್' ಪಾಲಿಸಿಗಳನ್ನು ವಿಮೆಪತ್ರ ಖಾತರಿ ಯತ್ನಿಸಲು, ಸಂಸ್ಥೆಗಳು ಅಗತ್ಯವಾಗಿ ವಿಮಾ ಗಣಿತವನ್ನು ಬಳಸುತ್ತವೆ.
ವಿಮೆಗಾರರ ವಿಮೆ ಇಳಿಸುವುದನ್ನು ಅದರ ಸಂಯೋಜಿತ ಅನುಪಾತದಲ್ಲಿ ಅಳೆಯಲಾಗುತ್ತದೆ.ಸಂಸ್ಥೆಯ ಸಂಯೋಜಿತ ನಿಷ್ಪತ್ತಿಯನ್ನು ನಿರ್ಣಯಿಸಲು, ನಷ್ಟದ ನಿಷ್ಪತ್ತಿ ('ಅನುಭವಿಸಿದ ನಷ್ಟ' ಮತ್ತು 'ನಷ್ಟ-ಹೊಂದಾಣಿಕೆಯ ವೆಚ್ಚ'- ಈ ಮೊತ್ತವನ್ನು 'ಇಳಿಸಲಾದ ಒಟ್ಟು ವಿಮೆ'ಯಿಂದ ಭಾಗಿಸಿದಾಗ ದೊರೆಯುವ ಮೊತ್ತ)ಯನ್ನು ವೆಚ್ಚದ ನಿಷ್ಪತ್ತಿ (ವಿಮಾ ಕಂತಿನಿಂದ ಒಟ್ಟು ವಿಮೆ ಇಳಿಸುವ ವೆಚ್ಚವನ್ನು ಭಾಗಿಸಿ ದೊರೆತ ಮೊತ್ತ)ಯನ್ನು ಸೇರಿಸಿ ಕೂಡಲಾಗುತ್ತದೆ.
ಸಂಯೋಜಿತ ನಿಷ್ಪತ್ತಿಯು ವಿಮಾಗಾರ ಸಂಸ್ಥೆಯ ಒಟ್ಟಾರೆ ಲಾಭದ ಚಿತ್ರವನ್ನು ಬಿಂಬಿಸುತ್ತದೆ. 100%ಕ್ಕಿಂತಲೂ ಕಡಿಮೆಯ ಸಂಯೋಜಿತ ನಿಷ್ಪತ್ತಿಯು ವಿಮಾಗಾರಿಕೆಯ ಲಾಭದಾಯಕತೆಯನ್ನು ಸೂಚಿಸುತ್ತದೆ. 100%ಕ್ಕಿಂತಲೂ ಹೆಚ್ಚಾದಲ್ಲಿ ವಿಮಾಗಾರಿಕೆಯಲ್ಲಿ ನಷ್ಟವನ್ನು ಸೂಚಿಸುತ್ತದೆ.
ವಿಮಾ ಸಂಸ್ಥೆಗಳು 'ಫ್ಲೋಟ್' ಮೇಲೆ ಹೂಡಿಕೆಯ ಲಾಭವನ್ನು ಸಹ ಗಳಿಸುತ್ತವೆ. 'ಫ್ಲೋಟ್' ಅಥವಾ 'ಲಭ್ಯ ಲಾಭ ವೈಶಿಷ್ಟ್ಯ ಬಂಡವಾಳ' ಎಂದರೆ, ಸಂಗ್ರಹಿಸಿದ ವಿಮಾ ಕಂತಿನ ಮೊತ್ತ; ಇದನ್ನು ವಿಮೆ ಪರಿಹಾರ ನೀಡಲು ಪಾವತಿಸಿರುವುದಿಲ್ಲ; ಯಾವುದೇ ಕ್ಷಣದಲ್ಲಿಯೂ ಕೈಗೆಟಗುವ ಹಣವಿದು. ವಿಮೆಗಾರರು ವಿಮೆಕಂತುಗಳನ್ನು ಸಂಗ್ರಿಹಿಸಿದ ಕೂಡಲೇ, ಅವನ್ನು ಹೂಡಿ, ವಿಮೆ ಪರಿಹಾರ ಹಣವನ್ನು ಸಂದಾಯ ಮಾಡುವವರೆಗೂ, ಅವುಗಳ ಮೇಲೆ ಬಡ್ಡಿಯನ್ನು ಸಂಪಾದಿಸುವುದನ್ನು ಮುಂದುವರೆಯುತ್ತಾರೆ. 400 ವಿಮೆ ಸಂಸ್ಥೆಗಳು ಮತ್ತು UK ವಿಮಾ ಸೇವೆಯ 94%ರಷ್ಟು ಸೇರ್ಪಡೆ ಹೊಂದಿರುವ ಬ್ರಿಟಿಷ್ ವಿಮೆಗಾರರ ಸಂಘ ವು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಹೆಚ್ಚುಕಡಿಮೆ 20%ರಷ್ಟು ಹೂಡಿಕೆಗಳನ್ನು ಹೊಂದಿದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ವತ್ತಿನ ವಿಮಾಗಾರಿಕೆಯ ನಷ್ಟ ಮತ್ತು ಆಕಸ್ಮಿಕ ವಿಮೆಯ ಮೊತ್ತವು, 2003ರಲ್ಲಿ ಅಂತ್ಯದವರೆಗಿನ ಐದು ವರ್ಷಗಳ ಕಾಲದಲ್ಲಿ, $142.3 ಶತಕೋಟಿಯಾಗಿತ್ತು. ಆದರೆ, 'ಫ್ಲೋಟ್' ಪ್ರಕ್ರಿಯೆಯ ಪರಿಣಾಮವಾಗಿ, ಇದೇ ಅವಧಿಯ ಒಟ್ಟಾರೆ ಲಾಭ $68.4 ದಶಲಕ್ಷಗಳಾಗಿತ್ತು. ಲಾಭವನ್ನು ಸಹ ವಿಮಾಗಾರಿಕೆ ಮಾಡದೆ ಲಾಭವನ್ನು ಉಳಿಸಲು ಸಾಧ್ಯವೆಂಬುದನ್ನು ಗಮನಾರ್ಹವಾಗಿ ಹ್ಯಾಂಕ್ ಗ್ರೀನ್ಬರ್ಗ್ ಸೇರಿದಂತೆ ವಿಮೆ ಉದ್ದಿಮೆಯ ಆಂತರ್ಯಗಳನ್ನು ಬಲ್ಲ ಕೆಲವರು ನಂಬುತ್ತಿಲ್ಲ, ಆದರೂ ಈ ಅಭಿಪ್ರಾಯಕ್ಕೆ ಒಟ್ಟಾರೆ ಒಪ್ಪಿಗೆ ಸಿಕ್ಕಿದಂತಿಲ್ಲ.
ಹ್ಯಾಂಕ್ ಗ್ರೀನ್ಬರ್ಗ್ ಸೇರಿದಂತೆ ವಿಮೆ ಉದ್ದಿಮೆಯ ಆಂತರ್ಯಗಳನ್ನು ಬಲ್ಲ ಕೆಲವರ ಪ್ರಕಾರ, ವಿಮಾಗಾರಿಕೆಯ ಲಾಭವಿಲ್ಲದೆ 'ಫ್ಲೋಟ್'ನ ಮೂಲಕ ಲಾಭವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ; ಆದರೆ ಈ ಅಭಿಪ್ರಾಯಕ್ಕೆ ಸಾರ್ವತ್ರಿಕ ಸಮ್ಮತಿಯಿಲ್ಲ.
ಸಹಜವಾಗಿ, ಆರ್ಥಿಕ ಕುಗ್ಗಿನ ಕಾಲದಲ್ಲಿ 'ಫ್ಲೋಟ್' ರೀತಿಯನ್ನು ನಿರ್ವಹಿಸಲು ಕಷ್ಟಕರವಾಗಿದೆ. ಷೇರು ಬೆಲೆ ಕುಸಿತದ ಮಾರುಕಟ್ಟೆ ವಿಮೆಗಾರರನ್ನು ಹೂಡಿಕೆಯಿಂದ ದೂರವಿರುವಂತೆ ಮಾಡಿ ಅವರ ವಿಮಾಗಾರಿಕೆಯ ಗುಣಮಟ್ಟಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಮಾಡುತ್ತದೆ. ಹಾಗಾಗಿ, ಬಡ ಆರ್ಥಿಕತೆಯಲ್ಲಿ ವಿಮೆಕಂತಿನ ಮೊತ್ತ ಹೆಚ್ಚಾಗಿರುತ್ತದೆ. ಲಾಭದಾಯಕ ಮತ್ತು ಲಾಭದಾಯಕವಲ್ಲದ ಕಾಲಗಳ ನಡುವೆ ಅತ್ತಿಂದಿತ್ತ ಓಲಾಡುವುದಕ್ಕೆ ಸಾಮಾನ್ಯವಾಗಿ 'ವಿಮೆ ಇಳಿಸುವ ಚಕ್ರ' ಅಥವಾ 'ವಿಮಾ ಚಕ್ರ' ಎನ್ನಲಾಗುತ್ತದೆ.
ಆಸ್ತಿಪಾಸ್ತಿ ಮತ್ತು ಅವಘಡ ಮೇಲೆ ವಿಮೆ ಇಳಿಸುವ ವಿಮಾಗಾರ ಸಂಸ್ಥೆಯು ಸದ್ಯಕ್ಕೆ ವಾಹನ ವಿಮೆಯ ಕ್ಷೇತ್ರದ ವ್ಯವಹಾರದಲ್ಲಿ ಬಹಳಷ್ಟು ಹಣವನ್ನು ಗಳಿಸುತ್ತದೆ. ಸಾಮಾನ್ಯವಾಗಿ, ವಾಹನ ಕ್ಷೇತ್ರದಲ್ಲಿ ಇಳಿಸಲಾಗುವ ವಿಮೆಯ ಮೇಲಿನ ನಷ್ಟಗಳ ಬಗ್ಗೆ ಇನ್ನಷ್ಟು ಉತ್ತಮ ಮಾಹಿತಿಯು ಲಭ್ಯವಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಸಾಲ ಮಂಜೂರಾತಿ ಮಾಡುವುದರಿಂದಲೂ ಮತ್ತು ವಿಮೆ ಇಳಿಸುವುದರಿಂದಲೂ ಸಂಸ್ಥೆಯ ಲಾಭ ಹೆಚ್ಚಾಗುತ್ತದೆ. ಇದಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಮುಂದಾಲೋಚನೆಗೆ ಸಿಲುಕದ ಭಾರೀ ನೈಸರ್ಗಿಕ ವಿಪತ್ತುಗಳ ಕಾರಣ ಸಂಭವಿಸಿದ ಆಸ್ತಿಪಾಸ್ತಿಯ ನಷ್ಟಗಳು ಈ ವಿದ್ಯಮಾನವನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ವಿಮೆ ಪರಿಹಾರ ಬೇಡಿಕೆಗಳು ಮತ್ತು ನಷ್ಟ ನಿರ್ವಹಣೆಯು ವಿಮೆಯ ವಾಸ್ತವ ಉಪಯುಕ್ತತೆಯಾಗಿದೆ, ಆದರೂ ಹಣ ಸಂದಾಯ ಮಾಡಲಾದ ನೈಜ ವಸ್ತು ಅದಾಗಿದೆ. ಅದನ್ನು ಉಪಯೋಗಿಸಬಾರದೆಂಬುದು ಕೆಲವರ ಅಭಿಮತ. ವಿಮೆ ಪರಿಹಾರ ಬೇಡಿಕೆಗಳನ್ನು ವಿಮೆದಾರರು ನೇರವಾಗಿ ವಿಮೆಗಾರರೊಂದಿಗೆ ಅಥವಾ ದಲಾಲರ/ಮಧ್ಯವರ್ತಿಗಳ ಮೂಲಕವಾದರೂ ಸಲ್ಲಿಸಬಹುದು. ವಿಮೆಗಾರ ಈ ಬೇಡಿಕೆಯನ್ನು ತನ್ನದೇ ಆದ ನಿಗದಿತ ಅರ್ಜಿಯಲ್ಲಿ ಸಲ್ಲಿಸಲೆಂದು ನಿರೀಕ್ಷಿಸಬಹುದು ಅಥವಾ ACORD ರಚಿಸಿರುವ ಪ್ರಮಾಣಿತ ಉದ್ದಿಮೆಯ ನಮೂನೆಯ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಸಹ ಸ್ವೀಕರಿಸಬಹುದು.
ವಿಮೆ ಉದ್ದಿಮೆಗಳ ಪರಿಹಾರ ಬೇಡಿಕೆಯ ಇಲಾಖೆಗಳು, ದಾಖಲಾ ನಿರ್ವಹಣಾ ಸಿಬ್ಬಂದಿ ಮತ್ತು ದತ್ತಾಂಶ ಸಂಗ್ರಹಣಕಾರರನ್ನು ವಿಮೆ ಪರಿಹಾರ ಬೇಡಿಕೆಗಳ ಇತ್ಯರ್ಥಕ್ಕಾಗಿ ನೇಮಿಸಿರುತ್ತವೆ. ತೀವ್ರತೆಯ ಪ್ರಕಾರ ಒಳಬರುವ ಪರಿಹಾರ ಬೇಡಿಕೆಗಳನ್ನು ವಿಂಗಿಡಸಲಾಗಿ, ಅವುಗಳನ್ನು ಸಂಸ್ಕರಿಸಲು ಹೊಂದಿಕೆದಾರರಿಗೆ ವಹಿಸಲಾಗುತ್ತದೆ. ಇವರ ಚುಕಾವಣಾ ಅಧಿಕಾರವು ಅವರ ಜ್ಞಾನ ಮತ್ತು ಅನುಭವಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ವಿಮೆದಾರರ ಸಹಕಾರದೊಂದಿಗೆ, ಹೊಂದಿಕೆದಾರರು ಪ್ರತಿಯೊಂದು ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರ ನಿಖರ ಮೌಲ್ಯವನ್ನು ನಿರ್ಣಯಿಸಿ, ವಿಮಾ ಪರಿಹಾರ ಹಣದ ಸಂದಾಯವನ್ನು ಮಂಜೂರು ಮಾಡುತ್ತಾರೆ. ಹೊಣೆಗಾರಿಕೆಯ ವಿಮೆ ಪರಿಹಾರ ಬೇಡಿಕೆಗಳನ್ನು ಹೊಂದಿಸುವುದು ವಿಶೇಷವಾಗಿ ಕಷ್ಟವಾಗಿದೆ, ಏಕೆಂದರೆ ಅಲ್ಲಿ ಮೂರನೆಯ ಪಕ್ಷದವರೂ ಸೇರಿದ್ದು (ವಿಮೆದಾರರ ವಿರುದ್ಧ ಮೊಕದ್ದಮೆ ಹೂಡಿರುವ ವಾದಿ) ಅವರು ವಿಮೆಗಾರರೊಂದಿಗೆ ಸಹಕರಿಸಲು ಯಾವುದೇ ಒಪ್ಪಂದದಡಿಯಿರುವುದಿಲ್ಲ; ಜೊತೆಗೆ ಅವರು ವಿಮೆಗಾರರನ್ನು 'ಆಳ ಜೇಬು' ಎಂದೂ ಪರಿಗಣಿಸುವ ಎಲ್ಲಾ ಸಾಧ್ಯತೆಗಳಿವೆ. ಹೊಂದಿಕೆದಾರರು ('ಆಂತರಿಕ' ಸಲಹೆಗಾರರಾಗಲಿ ಬಾಹ್ಯ ಸಲಹೆಗಾರರಾಗಲಿ ಇವರ ಮೂಲಕ) ವಿಮೆದಾರರಿಗಾಗಿ ಕಾನೂನು ಸಲಹೆಯನ್ನು ಪಡೆಯಬೇಕು, ವರ್ಷಗಳ ಕಾಲ ನಡೆಯಬಹುದಾದ ಮೊಕದ್ದಮೆಗಳನ್ನು ನೋಡಿಕೊಳ್ಳಬೇಕು, ಮೊಕದ್ದಮೆಯಲ್ಲಿ ನ್ಯಾಯಾಧೀಶರ ಕೋರಿಕೆಯಂತೆ, ಖುದ್ದಾಗಿ ಅಥವಾ ದೂರವಾಣಿಯ ಮೂಲಕ ಚುಕಾವಣಾ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ.
ಈ ಬೇಡಿಕೆಗಳ ಸಂಸ್ಕರಣೆಯನ್ನು ನಿರ್ವಹಿಸುವುದರಲ್ಲಿ ವಿಮೆಗಾರರು ಗ್ರಾಹಕ ತೃಪ್ತಿ, ಆಡಳಿತ ವೆಚ್ಚು ನಿರ್ವಹಣೆ ಮತ್ತು ಹೆಚ್ಚುವರಿ ಸಂದಾಯ ಸ್ರವಣದ ವಿಚಾರಗಳನ್ನು ಸರಿತೂಗಿಸಲು ಇಚ್ಛಿಸುವರು. ಸರಿತೂಗಿಸುವ ಯತ್ನದ ಅಂಗವಾಗಿ, ವಿಮಾ-ಸಂಬಂಧಿತ ಮೋಸದ ಅಭ್ಯಾಸಗಳು ಅತಿ ದೊಡ್ಡ ವ್ಯಾವಹಾರಿಕ ಅಪಾಯವಾಗಿದ್ದು, ಅವುಗಳನ್ನು ನಿರ್ವಹಿಸಿ ನಿಯಂತ್ರಿಸಬೇಕಾಗಿದೆ. ವಿಮೆಗಾರರು ಮತ್ತು ವಿಮೆದಾರರ ನಡುವಿನ ತಕರಾರುಗಳು ಬೇಡಿಕೆಗಳ ನ್ಯಾಯಸಮ್ಮತತೆಯ ಅಥವಾ ಬೇಡಿಕೆಗಳ ನಿರ್ವಹಣಾ ಅಭ್ಯಾಸಗಳು ಕೆಲವೊಮ್ಮೆ ವ್ಯಾಜ್ಯಗಳಾಗಿ ಪರಿಣಮಿಸಬಹುದು; ವಿಮೆ ಅಪ್ರಾಮಾಣಿಕತೆ ನೋಡಿ.
ಮಾನವನ ಸಾಮಾಜಿಕ ಬದುಕು ಮತ್ತು ವಿಮೆಯ ಸೌಕರ್ಯ ಏಕಕಾಲದಲ್ಲಿ ಅಸ್ತಿತ್ವಕ್ಕೆ ಬಂದವೆಂದು ಒಂದರ್ಥದಲ್ಲಿ ಹೇಳಬಹುದು. ಮಾನವ ಸಮಾಜದಲ್ಲಿ ಎರಡು ರೀತಿಯ ಆರ್ಥಿಕ ವ್ಯವಸ್ಥೆ ಗೋಚರಿಸುತ್ತದೆ. ಹಣ ಸಹಿತದ್ದೊಂದು (ಮಾರುಕಟ್ಟೆ, ದುಡ್ಡು, ಹಣಕಾಸಿನ ಸಂಸ್ಥೆಗಳು, ಇತ್ಯಾದಿ) ಮತ್ತು ಹಣ ರಹಿತದ್ದು ಇನ್ನೊಂದು. (ದುಡ್ಡು, ಮಾರುಕಟ್ಟೆ, ಹಣಕಾಸಿನ ಸಾಧನ ಇತ್ಯಾದಿಗಳಿಲ್ಲದ್ದು). ನೈಸರ್ಗಿಕ ಆರ್ಥಿಕತೆ ಎಂದೂ ಕರೆಯಲಾಗುವ ಎರಡನೆಯ ವಿಧಾನ ಮೊದಲನೆಯದಕ್ಕಿಂತಲೂ ಪ್ರಾಚೀನವಾದದ್ದು. ಇಂತಹ ಆರ್ಥಿಕತೆ ಮತ್ತು ಸಮುದಾಯದಲ್ಲಿ, ಜನರು ಪರಸ್ಪರ ಸಹಾಯ ಮಾಡಿಕೊಳ್ಳುವುದಲ್ಲೇ ವಿಮೆಯ ಒಂದು ರೂಪವೆಂದು ನಾವು ಕಾಣಬಹುದು. ಉದಾಹರಣೆಗೆ, ಮನೆಯೊಂದು ಸುಟ್ಟು ಹೋದ ಸಂದರ್ಭದಲ್ಲಿ ಸಮುದಾಯದ ಸದಸ್ಯರು ಹೊಸ ಮನೆಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದರು. ಅಕ್ಕದ ಮನೆಯವರಿಗೆ ಇದೇ ರೀತಿಯ ಅಪಘಾತವು ಸಂಭವಿಸಿದಲ್ಲಿ ಪಕ್ಕದ ಮನೆಯವರು ಸಹಾಯ ಮಾಡಲೇ ಬೇಕಿತ್ತು. ಇಲ್ಲದಿದ್ದರೆ ಮುಂದೆಂದಾದರೂ ಇಂಥ ಕಷ್ಟಕ್ಕೆ ಸಿಲುಕಿದರೆ ನೆರೆಯವರ ಸಹಾಯ ಅವರಿಗೆ ಖಂಡಿತ ಸಿಗುತ್ತಿರಲಿಲ್ಲ. ಹಣಸಹಿತದ ಆಧುನಿಕ ಆರ್ಥಿಕತೆ ಮತ್ತು ಅದರ ಸಾಧನಗಳು ವ್ಯಾಪಕವಾಗಿರದ ಕೆಲವು ದೇಶಗಳಲ್ಲಿ ಈ ರೀತಿಯ ವಿಮೆಯು ಇಂದಿನವರೆಗೂ ಉಳಿದುಕೊಂಡಿದೆ.
ಆಧುನಿಕ ರೀತಿಯ ವಿಮೆಯಲ್ಲಿ (ಅರ್ಥಾತ್ ಹಣ ಸಹಿತದ ಆಧುನಿಕ ಆರ್ಥಿಕತೆ, ಇದರಲ್ಲಿ ವಿಮೆಯು ಧನ ಗೋಲದ ಒಂದು ಭಾಗವಾಗಿರುತ್ತದೆ) ಅಪಾಯದ ವರ್ಗಾವಣೆ ಅಥವಾ ಭಾಗಿಯಾಗುವಿಕೆಯನ್ನು ಚೀನೀ ಮತ್ತು ಬೇಬಿಲೊನೀಯ ವರ್ತಕರು ಕ್ರಮವಾಗಿ ಮೂರನೆಯಮತ್ತು ಎರಡನೆಯ ಸಹಸ್ರಾಬ್ದ BCಯಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಭೀಕರ ರಭಸದಿಂದ ಹರಿಯುವ ನದಿಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದ್ದ ಚೀನೀ ವರ್ತಕರು, ನೌಕೆಯೊಂದು ಮುಳುಗಿದಾಗ ಸಂಭವಿಸುವಂತಹ ನಷ್ಟ ಕನಿಷ್ಠ ಮಟ್ಟದ್ದಾಗಿರಲಿ ಎಂದು ತಮ್ಮ ಸರಕನ್ನು ಹಲವು ನೌಕೆಗಳಲ್ಲಿ ಹಂಚುತ್ತಿದ್ದರು. ಬೇಬಿಲೊನಿಯನ್ನರು ಇದಕ್ಕಾಗಿ ಸೂತ್ರವೊಂದನ್ನು ಅಭಿವೃದ್ಧಿ ಪಡಿಸಿದ ಸಂಗತಿ ಪ್ರಖ್ಯಾತ ಸುಮಾರು 1750 BCಯಹಮ್ಮುರಬಿ ಸಂಹಿತೆಯಲ್ಲಿ ದಾಖಲಾಗಿದೆ.ಆರಂಭಿಕ ಮೆಡಿಟರೆನಿಯನ್ ನೌಕಾಯಾನ ಮಾರ್ಗದ ವರ್ತಕರು ಈ ಪದ್ಧತಿಯ ಸೂತ್ರವನ್ನು ಪಾಲಿಸುತ್ತಿದ್ದರು. ವರ್ತಕನೊಬ್ಬನು ತನ್ನ ಸರಕು ಸಾಗಾಣಿಕೆಗಾಗಿ ಸಾಲವನ್ನು ಪಡೆದಲ್ಲಿ, ಸಾಗಾಣಿಕೆಯು ದೋಚಿಕೆಯಾದಲ್ಲಿ ಅಥವಾ ಸಮುದ್ರದಲ್ಲಿ ಕಳೆದುಹೋದಲ್ಲಿ, ಸಾಲದಾತರ ಖಾತರಿಯೊಂದಿಗೆ ವಿನಿಮಯವಾಗಿ ಅವರು ಸಾಲದಾತರಿಗೆ ಹೆಚ್ಚುವರಿ ಮೊತ್ತವನ್ನು ನೀಡುತ್ತಿದ್ದರು.
ಪ್ರಾಚೀನ ಪರ್ಷಿಯಾದ ಅಚೆಮೆನಿಯನ್ ದೊರೆಗಳು ತಮ್ಮ ಪ್ರಜೆಗಳಿಗೆ ವಿಮೆ ಮಾಡಿಸುವುದರಲ್ಲಿ ಮೊದಲಿಗರು. ವಿಮೆಯ ಪ್ರಕ್ರಿಯೆಯನ್ನು ಸರ್ಕಾರೀ ನೋಟರಿ ಕಛೇರಿಗಳಲ್ಲಿ ನೋಂದಾಯಿಸುವುದರ ಮೂಲಕ ಅದನ್ನು ಅಧಿಕೃತಗೊಳಿಸಿದರು. ವಿಮೆಯ ಸಂಪ್ರದಾಯವನ್ನು ಪ್ರತಿ ವರ್ಷವೂ ನೌರೊಜ್ (ಇರಾನ್ ಹೊಸ ವರ್ಷ) ದಿನದಂದು ಆಚರಿಸಲಾಗುತ್ತಿತ್ತು. ವಿವಿಧ ಜನಾಂಗದ ಮುಖಂಡರು ಮತ್ತು ಇತರರು ಭಾಗವಹಿಸಲು ಇಚ್ಛಿಸಿ, ದೊರೆಗೆ ಉಡುಗೊರೆಗಳನ್ನು ಅರ್ಪಿಸುತ್ತಿದ್ದರು. ಅತಿ ಮುಖ್ಯ ಉಡುಗೊರೆಯನ್ನು ವಿಶೇಷ ಸಮಾರಂಭವೊಂದರಲ್ಲಿ ಅರ್ಪಿಸಲಾಗುತ್ತಿತ್ತು.10,000 ಡೆರಿಕ್ (ಅಚೆಮೆನಿಯನ್ ಚಿನ್ನದ ನಾಣ್ಯ)ಗಳಿಗೂ ಹೆಚ್ಚು ಮೌಲ್ಯವನ್ನುಳ್ಳ ಉಡುಗೊರೆಯಾಗಿದ್ದಲ್ಲಿ ಅದನ್ನು ಒಂದು ವಿಶೇಷ ಕಾರ್ಯಾಲಯದಲ್ಲಿ ನೋಂದಾಯಿಸಲಾಗುತ್ತಿತ್ತು. ಇಂತಹ ವಿಶೇಷ ಉಡುಗೊರೆಗಳನ್ನು ಅರ್ಪಿಸುವವರಿಗೆ ಇದು ಅನುಕೂಲಕರವಾಗಿತ್ತು. ಇತರರು ಅರ್ಪಿಸುತ್ತಿದ್ದ ಉಡುಗೊರೆಯ ಮೌಲ್ಯವನ್ನು ಆಸ್ಥಾನದ ಆಪ್ತರು ನ್ಯಾಯಯುತವಾಗಿ ಅಳೆಯುತ್ತಿದ್ದರು. ಹೀಗೆ ಮಾಡಲಾದ ಅಳತೆಗಳನ್ನು ವಿಶೇಷ ಕಾರ್ಯಾಲಯಗಳಲ್ಲಿ ನೋಂದಾಯಿಸಲಾಗುತ್ತಿತ್ತು.
ಉಡುಗೊರೆಯನ್ನು ನೀಡಿ ನೋಂದಾಯಿಸಿದವರು ಎಂದಾದರೂ ಸಂಕಟದಲ್ಲಿ ಸಿಲುಕಿದಾಗ,ದೊರೆ ಮತ್ತು ಆಸ್ಥಾನದ ಆಡಳಿತ ವರ್ಗ ಇವರಿಗೆ ನೆರವಿನ ಹಸ್ತ ಚಾಚುತ್ತಿತ್ತು. ಜಹೇಜ್ ಎಂಬ ಇತಿಹಾಸಕಾರ ಮತ್ತು ಬರಹಗಾರ, ಪ್ರಾಚೀನ ಇರಾನ್ ಬಗೆಗಿನ ಹಲವು ಗ್ರಂಥಗಳಲ್ಲೊಂದರಲ್ಲಿ ಹೀಗೆ ಬರೆದಿದ್ದಾನೆ: "ಉಡುಗೊರೆ ನೀಡಿದವನು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಗೃಹ ನಿರ್ಮಾಣಕ್ಕೆ ತೊಡಗಿದಾಗ, ಅಥವಾ ಒಂದು ಔತಣವನ್ನು ಏರ್ಪಡಿಸಲು, ಅಥವಾ ತಮ್ಮ ಮಕ್ಕಳ ವಿವಾಹ ಮಾಡಲು ಮುಂದಾದಾಗ ಅಥವಾ ಈ ಬಗೆಯ ಕಾರ್ಯಗಳನ್ನು ಮಾಡಲು ಇಚ್ಛಿಸಿದಾಗ, ಇದಕ್ಕೆ ಸಂಬಂಧ ಪಟ್ಟ ಆಸ್ಥಾನದ ಅಧಿಕಾರಿಯೊಬ್ಬನು ಈ ವ್ಯಕ್ತಿ ನೀಡಿದ ಉಡುಗೊರೆ ನೋಂದಣಿ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದನು.ನೋಂದಾಯಿತ ಉಡುಗೊರೆಯ ಮೊತ್ತವು 10,000 ಡೆರಿಕ್ಗಳನ್ನು ಮೀರಿದ್ದಲ್ಲಿ, ಆತನು/ಆಕೆಯು ಅದರ ಎರಡರಷ್ಟು ಮೊತ್ತವನ್ನು ಪಡೆಯುಬಹುದಾಗಿತ್ತು." http://www.iran-law.com/article.php3?id_article=61 Archived 2008-04-04 ವೇಬ್ಯಾಕ್ ಮೆಷಿನ್ ನಲ್ಲಿ.
ಸಾವಿರ ವರ್ಷಗಳ ನಂತರ, ರೋಡ್ಸ್ನ ನಿವಾಸಿಗಳು 'ಸಾಮಾನ್ಯ ಸರಾಸರಿ'ಎಂಬೊಂದು ಕಲ್ಪನೆಯನ್ನು ರೂಪಿಸಿದರು. ಸರಕು ಸಾಗಣೆಯಲ್ಲಿ ನಿತರಾದ ವರ್ತಕರು ಸಾಮೂಹಿಕ ಸಾಗಣೆಯಲ್ಲಿ ತೊಡಗಿದಾಗ ಸೂಕ್ತ ಪ್ರಮಾಣದಲ್ಲಿ ಭಾಗಿಸಲ್ಪಟ್ಟ ವಿಮಾ ಕಂತನ್ನು ನೀಡುತ್ತಿದ್ದರು; ಯಾವುದೇ ವರ್ತಕನ ಸರಕು ಬಿರುಗಾಳಿ ಸಿಕ್ಕಿಯೋ ಅಥವಾ ಮುಳುಗಡೆಯಾಗಿಯೋ ನಷ್ಟವಾದಲ್ಲಿ ಆ ವರ್ತಕನಿಗೆ ಆದ ನಷ್ಟ ಭರಿಸಲು ಈ ವಿಮಾ ಕಂತಿನ ಮೊತ್ತವನ್ನು ಬಳಸಲಾಗುತ್ತಿತ್ತು.
ಸುಮಾರು 600 ADಯಲ್ಲಿ ಗ್ರೀಕರು ಮತ್ತು ರೋಮನ್ರು ಆರೋಗ್ಯ ಮತ್ತು ಜೀವ ವಿಮೆಯ ಮೊದಲು ಪರಿಚಯಿಸಿದರು. ಅವರು ಆಗ "ಬೆನೆವೆಲೆಂಟ್ ಸೊಸೈಟೀಸ್"(=ಸಹಾಯಾರ್ಥ ಸಂಘ")ಎಂಬ ಪರಸ್ಪರ ಸಹಾಯ ಸಂಘಗಳನ್ನು ಸ್ಥಾಪಿಸಿದರು. ಇದು ಕುಟುಂಬಗಳ ಯೋಗಕ್ಷೇಮವನ್ನು ವಹಿಸಿ, ಸಾವು ಸಂಭವಿಸಿದಾಗ ಸದಸ್ಯರ ಅಂತ್ಯಕ್ರಿಯೆಯ ವೆಚ್ಚಗಳನ್ನು ಸಂದಾಯ ಮಾಡುತ್ತಿದ್ದವು. ಮಧ್ಯಕಾಲೀನ ಯುಗ ಇದೇ ರೀತಿಯ ಉದ್ದೇಶವನ್ನು ಮಧ್ಯ ಯುಗೀನ ಕಾಲದಲ್ಲಿನ ಪರಸ್ಪರ ಸಹಾಯ ಸಂಘಗಳು ಹೊತ್ತಿದ್ದವು. ಸರಕುಗಳಮೇಲೆ ವಿಮೆ ಇಳಿಸುವ ಅನೇಕ ಅಂಶಗಳನ್ನು ತಾಲ್ಮಡ್ನಲ್ಲಿ ನಮೂದಿಸಲಾಗಿದೆ. 17ನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್ನಲ್ಲಿ ವಿಮಾ ಸಂಸ್ಥೆ ಸ್ಥಾಪನೆಯಾಗುವುದಕ್ಕೂ ಮುಂಚೆ, 'ಸ್ನೇಹ ಸಂಘಗಳು" ಅಸ್ತಿತ್ವದಲ್ಲಿ ಇದ್ದವು. ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲೆಂಬ ಉದ್ದೇಶದಿಂದ ನಿಧಿಯೊಂದಕ್ಕೆ ಜನ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದರು.
14ನೆಯ ಶತಮಾನದಲ್ಲಿ ಜಿನೊವಾದಲ್ಲಿ, ಸಾಲಗಳು ಮತ್ತು ಇತರೆ ಕರಾರುಗಳೊಂದಿಗೆ ಒಗ್ಗೂಡಿಸದ ವಿಮೆ ಪಾಲಿಸಿಗಳು ಸೇರಿ, ಪ್ರತ್ಯೇಕ ವಿಮಾ ಕರಾರುಗಳನ್ನು ಸೃಷ್ಟಿಸಲಾಯಿತು. ಇದೇ ರೀತಿ ಜಮೀನು ಆಸ್ತಿಪಾಸ್ತಿಯ ಭದ್ರತೆಯ ಬೆಂಬಲವನ್ನು ಹೊಂದಿರುವಂತಹ ವಿಮಾ ಸೌಕರ್ಯವೂ ಸೃಷ್ಟಿಯಾದವು. ಈ ಹೊಸ ವಿಮಾ ಕರಾರುಗಳು ಹೂಡಿಕೆ ಮತ್ತು ವಿಮೆಯ ಪ್ರತ್ಯೇಕತೆಗೆ ಅನುವು ಮಾಡಿತು. ಈ ರೀತಿಯ ಪ್ರತ್ಯೇಕತೆ ನೌಕಾಯಾನ ವಿಮೆಯಲ್ಲಿ ಬಹಳ ಉಪಯುಕ್ತವಾಯಿತು. ನವೋದಯೋತ್ತರ ಕಾಲದಯುರೋಪ್ನಲ್ಲಿ ವಿಮೆಯು ಇನ್ನಷ್ಟು ಅತ್ಯಾಧುನಿಕವಾಗಿ, ವಿಶಿಷ್ಟ ವೈವಿಧ್ಯಗಳೊಂದಿಗೆ ವಿಕಸನಗೊಂಡಿತು.
ಹದಿನೇಳನೆಯ ಶತಮಾನದ ಆರಂಭಿಕ ದಶಕಗಳಲ್ಲಿ ವಿಮೆಯ ಬೇರೆಬೇರೆ ರೂಪಗಳು ಲಂಡನ್ನಲ್ಲಿ ಅಭಿವೃದ್ಧಿಯಾದವು. ಉದಾಹರಣೆಗೆ, ರಾಬರ್ಟ್ ಹೇಮನ್ ಎಂಬ ಇಂಗ್ಲಿಷ್ ವಸಾಹತುದಾರನ ಉಯಿಲಿನಲ್ಲಿ ಲಂಡನ್ನ ಡಯೊಸಿಸನ್ ಚಾನ್ಸೆಲರ್ ಆರ್ಥರ್ ಡಕ್ ಅವರೊಂದಿಗೆ ತೆರೆಯಲಾದ ಎರಡು 'ವಿಮೆ ಪಾಲಿಸಿ'ಗಳನ್ನು ಉಲ್ಲೇಖಿಸುತ್ತದೆ.ಪ್ರತಿಯೊಂದರ ಮೌಲ್ಯವು £100 ಆಗಿದ್ದರ ಪೈಕಿ ಒಂದು ಹೇಮನ್ರ ಹಡಗು ಕ್ಷೇಮವಾಗಿ ಗಯಾನಾ ತಲುಪುವುದರ ಬಗ್ಗೆ ಮತ್ತು ಇನ್ನೊಂದು 'ನನ್ನ ಜೀವನದ ಬಗ್ಗೆ ಡಾ. ಆರ್ಥರ್ ಡ್ಯೂಕ್ ನೀಡಿರುವ ಒಂದು ನೂರು ಪೌಂಡ್ಗಳ ಭರವಸೆ"ಗೆ ಸಂಬಂಧಿಸಿದ್ದಾಗಿದೆ.. 1628ರ ನವೆಂಬರ್ 17ರಂದು ಹೇಮನ್ ಉಯಿಲಿಗೆ ಸಹಿ ಹಾಕಿ ಮುದ್ರೆಯೊತ್ತಿದ್ದರೂ ಅದನ್ನು 1633ರ ವರೆಗೂ ಸಾಬೀತುಪಡಿಸಿರಲಿಲ್ಲ. ಹದಿನೇಳನೆಯ ಶತಮಾನದ ಅಂತ್ಯದ ಹೊತ್ತಿಗೆ, ವಾಣಿಜ್ಯೋಮ ಕೇಂದ್ರವಾಗಿ ಬೆಳೆಯುತ್ತಿದ್ದ ಲಂಡನ್ ನಗರದಲ್ಲಿ ನೌಕಾ ವಿಮೆಗಾಗಿ ಬೇಡಿಕೆ ಏರಿತು.1680ರ ದಶಕದ ಉತ್ತರಾರ್ಧದಲ್ಲಿ, ಎಡ್ವರ್ಡ್ ಲಾಯ್ಡ್ ಒಂದು ಕಾಫಿ ಕೇಂದ್ರವನ್ನು ಆರಂಭಿಸಿದ. ಇದು ಹಡಗಿನ ಮಾಲೀಕರು, ಹಡಗಿನ ಕ್ಯಾಪ್ಟನ್ಗಳು ಮತ್ತು ವರ್ತಕರು ಪದೇಪದೇ ಸುಳಿದಾಡುವ ಜನಪ್ರಿಯರು ತಾಣವಾಯಿತು. ಹಾಗಾಗಿ, ಹಡಗಿನ ಮೂಲಕ ಸರಕು ಸಾಗಾಣಿಕೆ ವಿಶ್ವಸನೀಯ ವಾರ್ತೆಗಳಿಗಾಗಿ ಈ ಸ್ಥಳವು ಒಂದು ಪ್ರಮುಖ ಮೂಲವಾಯಿತು. ಸರಕು ಮತ್ತು ಹಡಗುಗಳಿಗೆ ವಿಮೆ ಇಳಿಸಲು ಬಯಸುವವರು ಮತ್ತು ಇಂಥ ಹೊಣೆ ಹೊರಲು ತಯಾರಿರುವ ಸಂಸ್ಥೆಗಳವರಿಗೆ ಭೇಟಿಯಾಗುವ ಸ್ಥಳವಾಗಿ ಮಾರ್ಪಟ್ಟಿತು. ಈಗ, ಲಾಯ್ಡ್ಸ್ ಆಫ್ ಲಂಡನ್ ಎಂಬ ಸಂಸ್ಥೆ ಕಡಲ ಮತ್ತು ಇತರೆ ವಿಶಿಷ್ಟ ರೀತಿಯ ವಿಮೆಗಳ ಮಾರುಕಟ್ಟೆಗಳ ಅಗ್ರಸ್ಥಾನದಲ್ಲಿದೆ. (ಇದು ವಿಮಾ ಸಂಸ್ಥೆಯಲ್ಲ ಎಂಬುದು ಗಮನಾರ್ಹ) ಆದರೆ ಇದು ಹೆಚ್ಚಾಗಿ ಚಾಲ್ತಿಯಲ್ಲಿರುವ ವಿಮಾ ವಿಧಾನಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಕಾರ್ಯವಹಿಸುತ್ತದೆ.
1666ರಲ್ಲಿ 13,200 ಮನೆಗಳನ್ನು ಸಾರಾಸಗಟಾಗಿ ಸುಟ್ಟುಹಾಕಿದ, ಲಂಡನ್ನಲ್ಲಿ ಸಂಭವಿಸಿದ ಘೋರ ಅಗ್ನಿ ಅನಾಹುತದಲ್ಲಿ ಈಗ ನಾವು ತಿಳಿದಿರುವಂತಹ ವಿಮೆಯ ಇತಿಹಾಸದ ಹೆಜ್ಜೆಗಳನ್ನು ಕಾಣ ಬಹುದು. ಈ ದುರಂತದ ಪರಿಣಾಮವಾಗಿ, ನಿಕಾಲಸ್ ಬಾರ್ಬನ್ ಕಟ್ಟಡಗಳನ್ನು ವಿಮೆ ಮಾಡಲು ಒಂದು ಕಾರ್ಯಾಲಯವನ್ನು ಸ್ಥಾಪಿಸಿದ. ಇಟ್ಟಿಗೆ ಮತ್ತು ಮರದ ಹಂದರದ ಮನೆಗಳ ಮೇಲೆ ವಿಮೆ ಇಳಿಸಲು, 1680ರಲ್ಲಿ ಆತನು 'ದಿ ಫೈರ್ ಆಫೀಸ್' ಎಂಬ ಇಂಗ್ಲೆಂಡ್ನ ಮೊಟ್ಟಮೊದಲ ಅಗ್ನಿ ವಿಮಾ ಸಂಸ್ಥೆಯನ್ನು ಸ್ಥಾಪಿಸಿದ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೊಟ್ಟಮೊದಲ ವಿಮಾ ಸಂಸ್ಥೆಯು ಅಗ್ನಿ ವಿಮೆಯ ವಿಮಾ ನಿರ್ವಹಣೆಯನ್ನು ಕೈಗೊಂಡು, 1732ರಲ್ಲಿ ದಕ್ಷಿಣ ಕ್ಯಾರೊಲಿನಾದ ಚಾರ್ಲ್ಸ್ಟೌನ್ (ಇಂದಿನ ಚಾರ್ಲ್ಸ್ಟನ್)ನಲ್ಲಿ ಸ್ಥಾಪನೆಯಾಯಿತ್ತು. ವಿಮೆಯ ರೀತಿ-ನೀತಿಗಳನ್ನು, ವಿಶೇಷವಾಗಿ ಬೆಂಕಿಯ ವಿರುದ್ಧದ ವಿಮೆಯನ್ನು ಸಾರ್ವಕಾಲಿಕ ವಿಮೆಯ ರೂಪದಲ್ಲಿ ಮಾಡಿಸುವುದರ ಮೂಲಕ ಬೆಂಜಮಿನ್ ಫ್ರಾಂಕ್ಲಿನ್ ವಿಮೆಯ ಜನಪ್ರಿಯತೆಯನ್ನು ಹೆಚ್ಚಿಸಿ ಪ್ರಮಾಣಿತಗೊಳಿಸಲು ನೆರವು ನೀಡಿದ. 1752ರಲ್ಲಿ 'ಅಗ್ನಿ-ನಷ್ಟ ಗೃಹ ವಿಮಾ ದೇಣಿಗೆ ಫಿಲಡೆಲ್ಫಿಯಾ ಸಂಸ್ಥೆಫಿಲಡೆಲ್ಫಿಯಾ ಕಾಂಟ್ರಿಬ್ಯೂಷನ್ಷಿಪ್ 'ಎಂಬ ಅಗ್ನಿ ಅನಾಹುತಗಳಿಂದಾಗಿ ಮನೆಗಳಿಗೆ ಒದಗಿಬಂದ ನಷ್ಟ ಭರಿಸುವ ವಿಮಾ ಸಂಸ್ಥೆ'ಯೊಂದನ್ನು ಸ್ಥಾಪಿಸಿದ. ಫ್ರಾಂಕ್ಲಿನ್ರ ಸಂಸ್ಥೆ ಅಗ್ನಿ ಅನಾಹುತ ತಡೆಯಲು ದೇಣಿಗೆ ನೀಡಿದ ಮೊದಲ ಸಂಸ್ಥೆ. ಕಟ್ಟಡಗಳಲ್ಲಿ ಸಂಭವಿಸಬಹುದಾದ ನಿಶ್ಚಿತ ಅಗ್ನಿ ಆಕಸ್ಮಿಕಗಳ ಬಗ್ಗೆ ಅವರ ಸಂಸ್ಥೆ ಎಚ್ಚರಿಸಿದ್ದಷ್ಟೇ ಅಲ್ಲ, ಮರದ ಮನೆಗಳಂತಹ ಬೆಂಕಿಯ ಅಪಾಯಕ್ಕೆ ಸುಲಭವಾಗಿ ತುತ್ತಾಗಬಹುದಾದ ಕಟ್ಟಡಗಳಗೆ ವಿಮಾ ಸೌಕರ್ಯ ಒದಗಿಸಲು ಅವರ ಸಂಸ್ಥೆ ನಿರಾಕರಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಮಾ ಉದ್ದಿಮೆಯ ನಿಯಂತ್ರಣವು ಅತಿಯಾದವಿಭಜನೆಗೆ ಒಳಗೊಂಡಿದ್ದು, ವೈಯಕ್ತಿಕ ರಾಜ್ಯ ವಿಮಾ ಇಲಾಖೆಯು ಅದರ ಪ್ರಾಥಮಿಕ ಜವಾಬ್ದಾರಿಯನ್ನು ಹೊತ್ತಿವೆ. ವಿಮಾ ಕ್ಷೇತ್ರ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಕೇಂದ್ರೀಕೃತವಾಗಿದ್ದು, ರಾಜ್ಯ ವಿಮಾ ಆಯೋಗದವರು ವೈಯಕ್ತಿಕ ನಿಗಾ ನೀಡುತ್ತಾರೆ. ಕೆಲವೊಮ್ಮೆ ರಾಷ್ಟ್ರೀಯ ವಿಮಾ ಆಯೋಗದವರೊಂದಿಗೆ ಸಲಹೆ ಪಡೆದು ಕೆಲಸ ಮಾಡುವುದುಂಟು. ಇತ್ತೀಚೆಗಿನ ವರ್ಷಗಳಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಂಕ್ಗಳ ಉಸ್ತುವಾರಿ ಮಂಡಳಿಯ ರೀತಿಯಲ್ಲಿ, ವಿಮೆಗಾಗಿಯೂ ಸಹ ಉಭಯ ರಾಜ್ಯ ಮತ್ತು ಸಂಯುಕ್ತ ನಿಯಂತ್ರಣಾ ವ್ಯವಸ್ಥೆ (ಸಾಮಾನ್ಯವಾಗಿ ಐಚ್ಛಿಕ ಸಂಯುಕ್ತ ಸನ್ನದು (OFC)) ಸ್ಥಾಪನೆಗಾಗಿ ಕೆಲವರು ಕರೆ ನೀಡಿದ್ದಾರೆ.
ಮೊತ್ತ ಪ್ರಮಾಣವನ್ನು ಲೆಕ್ಕಹಾಕಬಹುದಾದ ಯಾವುದೇ ಸಂಭವನೀಯ ಅಪಾಯವನ್ನು ವಿಮೆ ಇಳಿಸಬಹುದಾಗಿದೆ. ವಿಮಾ ಪರಿಹಾರದ ಬೇಡಿಕೆ(=ಕ್ಲೇಮ್)ಗೆ ಆಸ್ಪದ ನೀಡುವಂತಹ ವಿಶಿಷ್ಟ ರೀತಿಯ ಅಪಾಯಗಳಿಗೆ 'ಆಪತ್ತುಗಳು' ಎನ್ನಲಾಗುತ್ತದೆ. ವಿಮಾ ಪಾಲಿಸಿಯೊಂದು ಯಾವ ಆಪತ್ತುಗಳು ತನ್ನ ವ್ಯಾಪ್ತಿಯೊಳಗೆ ಬರಬಹುದು, ಯಾವುದು ಬಾರದು ಎಂಬ ವಿವರಗಳನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ಹಲವು ತೆರನಾದ ವಿಮೆಗಳ (ಸಮಗ್ರವಲ್ಲದ) ಪಟ್ಟಿಗಳು ಕೆಳಕಂಡಂತಿವೆ. ಒಂದು ಪಾಲಿಸಿಯು ಕೆಳಕಂಡಂತೆ ಒಂದು ಅಥವಾ ಹೆಚ್ಚು ಬಗೆಗಳ ಅಪಾಯಗಳನ್ನು ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಬಹುದು. ಉದಾಹರಣೆಗೆ, ವಾಹನ ವಿಮೆಯು ಆಸ್ತಿಪಾಸ್ತಿಯ ಅಪಾಯ (ವಾಹನಕ್ಕೆ ಹಾನಿ ಅಥವಾ ವಾಹನವು ಕಳುವಾಗುವಂತಹ ಅಪಾಯ) ಮತ್ತು ಹೊಣೆಗಾರಿಕೆಯ ಅಪಾಯ (ಅಪಘಾತದಿಂದ ಸಂಭವಿಸುವ ಕಾನೂನು ಮೊಕದ್ದಮೆಗಳು) ಎರಡನ್ನೂ ತನ್ನ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವುದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಗೃಹ ಮಾಲೀಕನ ವಿಮೆ ಪಾಲಿಸಿಯು ಮಾದರಿಯಾಗಿ - ಗೃಹಕ್ಕೆ ಮತ್ತು ಗೃಹ ಮಾಲೀಕನ ವಸ್ತುಗಳಿಗೆ ಹಾನಿ, ಗೃಹ ಮಾಲೀಕನ ವಿರುದ್ಧದ ಕಾನೂನು-ರೀತ್ಯಾ ಪರಿಹಾರ ಬೇಡಿಕೆಗಳನ್ನು ಒಳಗೊಂಡಿರುವ ಹೊಣೆಗಾರಿಕೆಯ ವಿಮೆ ಮತ್ತು ಮಾಲೀಕನ ಸ್ವತ್ತಿನಲ್ಲಿ ಅತಿಥಿಗಳಿಗೆ ಸಂಭವಿಸಬಹುದಾದ ಸಣ್ಣ ಅಪಘಾತಗಳಿಗೆ ವೈದ್ಯಕೀಯ ಖರ್ಚು- ಇವೆಲ್ಲವನ್ನೂ ಸಹ ಒಳಗೊಂಡಿರುವ ಆಸತಿಪಾಸ್ತಿ ವಿಮೆಯನ್ನು ಸಹ ಒಳಗೊಂದಿರುತ್ತದೆ.
ಅಪಾಯಗಳ ವಿರುದ್ಧ ವ್ಯವಹಾರಗಳಿಗೆ ರಕ್ಷಣೆ ನೀಡುವಂತಹ ವಿಮೆಯು ವ್ಯವಹಾರ ವಿಮೆಎನಿಸಿದೆ. ವ್ಯವಹಾರ ವಿಮೆಯ ಕೆಲವು ಪ್ರಮುಖ ಉಪವಿಧಗಳು ವೃತ್ತಿಯ ನಷ್ಟ ಪರಿಹಾರ ವಿಮೆ ಯನ್ನು {ಎ}ವೃತ್ತಿಯ ಸುಭದ್ರತಾ ವಿಮೆ ಎಂದೂ ಕರೆಯಲಾಗಿದೆ; ಈ ಶೀರ್ಷಿಕೆಯಡಿ ಮುಂದೆ ಚರ್ಚಿಸಲಾಗಿದೆ; (ಬಿ) ಉದ್ದಿಮೆಯ ಮಾಲೀಕನ ಪಾಲಿಸಿ (BOP) - ಇದರೊಳಗೆ, ಉದ್ದಿಮೆಯ ಮಾಲೀಕನಿಗೆ ಇರುವ ವಿಮಾ ಅಗತ್ಯತೆಯಿದೆ. (ಗೃಹ ಮಾಲೀಕನಿಗೆ ಅಗತ್ಯವಾದ ವಿಮಾ ರಕ್ಷಣೆಗೆ ಒಳಗೊಂಡಿರುವ ಗೃಹ ಮಾಲೀಕನ ವಿಮೆಯ ತರಹ).
ನಿಮಗೆ ಅಪಘಾತ ಸಂಭವಿಸಿದಲ್ಲಿ ಹಣಕಾಸಿನ ನಷ್ಟ ವಿರುದ್ಧ ವಾಹನ ವಿಮೆಯು ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಮತ್ತು ವಿಮಾ ಸಂಸ್ಥೆಯ ನಡುವಿನ ಒಂದು ಕರಾರು. ನೀವು ವಿಮೆಕಂತುಗಳನ್ನು ಪಾವತಿಸಲು ಒಪ್ಪಿ, ವಿಮಾ ಸಂಸ್ಥೆಯು ನಿಮ್ಮ ಪಾಲಿಸಿಯಲ್ಲಿ ವ್ಯಾಖ್ಯಾನಿಸಲಾದ ನಷ್ಟಗಳನ್ನು ಸಂದಾಯ ಮಾಡಲು ಒಪ್ಪುತ್ತದೆ. ವಾಹನ ವಿಮೆಯು ಆಸ್ತಿಪಾಸ್ತಿ, ಹೊಣೆಗಾರಿಕೆ ಮತ್ತು ವೈದ್ಯಕೀಯ ವಿಮಾ ರಕ್ಷಣೆಯನ್ನು ನೀಡುತ್ತದೆ:
ವಾಹನ ವಿಮಾ ಪಾಲಿಸಿಯು ಆರು ವಿಧಗಳ ರಕ್ಷಾ ಕವಚವನ್ನು ಹೊಂದಿದೆ. ಬಹುಪಾಲು ದೇಶಗಳು ವಿಮೆಯ ಕೆಲವು ರಕ್ಷಣೆಗಳನ್ನು ಕೊಂಡುಕೊಳ್ಳುವಂತೆ ಸೂಚಿಸುತ್ತದೆ; ಎಲ್ಲಾ ರಕ್ಷಾ ಕವಚಗಳಿಗೂ ಜೋತುಬೀಳುವ ಅಗತ್ಯವಿಲ್ಲ. ಕಾರಿಗಾಗಿ ಸಾಲ ನೀಡುವ ಸಂಸ್ಥೆಯು ಕೆಲವು ವಿಮಾ ರಕ್ಷಣೆಗಳನ್ನು ವಾಹನದ ಮೇಲೆ ಇಳಿಸುವಂತೆ ಸೂಚಿಸುತ್ತದೆ. ವಾಹನ ಪಾಲಿಸಿಗಳಲ್ಲಿ ಬಹುಪಾಲು ವರ್ಷ ಅಥವಾ ಅರ್ಧ ವರ್ಷದ ಕಾಲಾವಧಿಗೆ ಊರ್ಜಿತವಾಗಿರುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ನಿಮ್ಮ ಪಾಲಿಸಿಯನ್ನು ನವೀಕರಿಸಲು ವಿಮೆಕಂತು ಪಾವತಿಸಬೇಕಾದ ದಿನವು ಸಮೀಪಿಸಿದಾಗ, ವಿಮಾ ಸಂಸ್ಥೆಯು ನಿಮಗೆ ಅಂಚೆಯ ಮೂಲಕ ನೆನಪೋಲೆಯನ್ನು ಕಳುಹಿಸುತ್ತದೆ.
ಅನಾಹುತ ಎಂಬ ದುರ್ಘಟನೆಯಲ್ಲಿ ಹಾನಿಗೀಡಾದ ಕಟ್ಟಡಕ್ಕೆ ಪರಿಹಾರ ಒದಗಿಸುವುದು ಗೃಹ ವಿಮೆ. ಕೆಲವು ಭೌಗೋಳಿಕ ವಲಯಗಳಲ್ಲಿ, ಹೆಚ್ಚುವರಿ ವಿಮಾ ವ್ಯಾಪ್ತಿಯ ಅಗತ್ಯವಿರುವ ಪ್ರವಾಹ, ಭೂಕಂಪದಂತಹ ಆಪತ್ತುಗಳನ್ನು ಪ್ರಮಾಣಿತ ವಿಮೆಗಳು ತಮ್ಮ ವ್ಯಾಪ್ತಿಯಿಂದ ಹೊರಗಿಡುತ್ತವೆ. ನಿರ್ವಹಣಾ-ಸಂಬಂಧಿತ ಸಂಗತಿಗಳ ಹೊಣೆ ಗೃಹ ಮಾಲೀಕರದ್ದೇ. ವಿಮೆಯು ವಿವರಣಾ ಪಟ್ಟಿಯನ್ನು ಒಳಗೊಂಡಿರಬಹುದು, ಅಥವಾ (ವಿಶೇಷವಾಗಿ ಬಾಡಿಗೆಯ ಮೇಲೆ ಮನೆ ಪಡೆದಿರುವವರಿಗಾಗಿ) ಅದನ್ನು ಪ್ರತ್ಯೇಕ ಪಾಲಿಸಿಯಾಗಿ ಕೊಂಡುಕೊಳ್ಳಬಹುದು. ಸಾಕು ಪ್ರಾಣಿಗಳಿಂದಾಗಲೀ ಕುಟುಂಬದ ಸದಸ್ಯರಿಂದಾಗಲೀ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದರೆ ಅದಕ್ಕೂ ಪರಿಹಾರ ಒದಗಿಸುವಂಥ ಹೊಣೆ ಹೊರುವಂಥ ಮತ್ತು ಕಾಯಿದೆಯನುಸಾರದ ಜವಾಬ್ದಾರಿಯನ್ನೂ ನಿಭಾಯಿಸುವಂಥ ವಿಮೆಯನ್ನು ಕೆಲವು ದೇಶಗಳು ಜಾರಿಗೆ ತಂದಿವೆ.
ಯುನೈಟೆಡ್ ಕಿಂಗ್ಡಮ್ರಾಷ್ಟ್ರೀಯ ಆರೋಗ್ಯ ಸೇವೆಯ ವಿಮಾ ಪಾಲಿಸಿಗಳು ಯುನೈಟೆಡ್ ಕಿಂಗ್ಡಮ್ನಲ್ಲಿ ಜಾರಿಯಲ್ಲಿದೆ ಅಥವಾ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಬಹು ಪಾಲನ್ನು ಭರಿಸುವಂಥ ಇತರೆ ಸಾರ್ವಜನಿಕ-ನಿಧಿ ಬೆಂಬಲಿತ ಆರೋಗ್ಯ ಕಾರ್ಯಕ್ರಮಗಳೂ ಅಲ್ಲುಂಟು.ವೈದ್ಯಕೀಯ ವಿಮೆಯಂಥ, ದಂತ ವೈದ್ಯ ವಿಮೆಯೂ ಸಹ ದಂತ ಚಿಕಿತ್ಸೆಯ ವೆಚ್ಚಗಳ ವಿರುದ್ಧ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ.ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಉದ್ಯಮಿಗಳ ಅನುಕೂಲಗಳ ಪಾಕ್ಯೇಜ್ನಲ್ಲಿ ಆರೋಗ್ಯ ವಿಮೆಯೊಂದಿಗೆ ಆಗಾಗ್ಗೆ ದಂತ ವಿಮೆಯು ಸಹ ಸೇರಿದೆ.
ಯಾವುದೇ ಅಪಘಾತಗಳ ವಿರುದ್ಧ ಅವಘಡ ವಿಮೆಯು ರಕ್ಷಣೆ ನೀಡುತ್ತದೆ. ಸಂಭವಿಸಬಹುದಾದ ಅಪಘಾತ ನಿರ್ದಿಷ್ಟ ಮಾನದಂಡಕ್ಕೆ ಒಳಪಟ್ಟಿರುವುದಿಲ್ಲ.
ಮೃತ ವ್ಯಕ್ತಿಯ ಕುಟುಂಬಕ್ಕೆ ಅಥವಾ ನಿಯುಕ್ತರಾದ ಇತರೆ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನೂ, ಅಥವಾ ವಿಮೆದಾರರಿಗೆ ವಿಶಿಷ್ಟ ವರಮಾನದ ನೆರವನ್ನೂ ನೀಡುವುದು ಜೀವ ವಿಮೆ.
ಮೃತ ವ್ಯಕ್ತಿಯ ಕುಟುಂಬಕ್ಕೆ ಹೂಳುವಿಕೆ, ಅಂತ್ಯ ಕ್ರಿಯೆ ಹಾಗೂ ಇನ್ನಿತರ ವೆಚ್ಚ ಭರಿಸಲೂ ಅದು ನೆರವಾಗಬಹುದು.ಇಡಿ ಗಂಟಿನ ಪರಿಹಾರ ನೀಡಿಕೆ ಅಥವಾ ವಾರ್ಷಿಕ ಹಣ ನೀಡಿಕೆಯ ವ್ಯವಸ್ಥೆ- ಈ ಎರಡರಲ್ಲಿ ಯಾವುದು ಫಲಾನುಭವಿಗೆ ಸಿಕ್ಕುವಂತಾಗಬೇಕು ಎಂಬ ಆಯ್ಕೆಯನ್ನು ಜೀವ ವಿಮಾ ಪಾಲಿಸಿಗಳು ಪಾಲಿಸಿದಾರನ ಪಾಲಿಗೆ ಬಿಟ್ಟಿದೆ.
ವರ್ಷಾಶನಗಳು ಸಂದಾಯಗಳನ್ನು ನೀಡುತ್ತಿದ್ದು, ವಿಮಾ ಸಂಸ್ಥೆಗಳು ಇವನ್ನು ನೀಡುವ ಕಾರಣ ಸಾಮಾನ್ಯವಾಗಿ ಇವನ್ನು ವಿಮೆಯೆಂದು ವರ್ಗೀಕರಿಸಲಾಗಿದೆ. ಇದಕ್ಕೂ ಸಹ ವಿಮೆಯ ನಿಯಂತ್ರಣವಿದ್ದು, ಜೀವ ವಿಮೆಗೆ ಅಗತ್ಯವಿರುವ ಒಂದೇ ರೀತಿಯ ವಿಮಾ ಗಣಿತ ಮತ್ತು ಹೂಡಿಕೆಯ ನಿರ್ವಹಣೆಯು ಇದಕ್ಕೆ ಅಗತ್ಯವಿದೆ. ನಿವೃತ್ತರಾಗುವವರು ತಮ್ಮ ಹಣಕಾಸಿನ ಮೂಲಗಳನ್ನು ಕಳೆದುಕೊಂಡು ಬದುಕುವ ಸಾಧ್ಯತೆಯ ವಿರುದ್ಧ ವಿಮೆ ಎಂದು ಜೀವಾವಧಿಯುದ್ದಕ್ಕೂ ಅನುಕೂಲಗಳನ್ನು ಸಂದಾಯ ಮಾಡುವ ವರ್ಷಾಶನ ಮತ್ತು ನಿವೃತ್ತಿ ವೇತನಗಳನ್ನು ಕೆಲವೊಮ್ಮೆ ಪರಿಗಣಿಸಲಾಗಿದೆ. ಈ ರೀತಿಯಲ್ಲಿ ಅವು ಜೀವ ವಿಮೆಗೆ ಪೂರಕವಾಗಿದ್ದು, ವಿಮಾ ದೃಷ್ಟಿಕೋನದಿಂದ, ಜೀವ ವಿಮೆಯ ಕೈಗನ್ನಡಿಯಂತಿದೆ.
ನಗದು ಮೌಲ್ಯವನ್ನು ಸಂಚಯಿಸುತ್ತವೆ.ಈ ನಗದನ್ನು ವಿಮೆಯನ್ನು ತ್ಯಜಿಸಿಯೋ ಅಥವಾ ಅದರ ವಿರುದ್ಧ ಎರವಲು ರೂಪದಲ್ಲಿಯೋ, ವಿಮೆದಾರ ಮೊತ್ತವನ್ನು ಹಿಂಪಡೆಯುವ ಅವಕಾಶವನ್ನು ಕೆಲವು ಜೀವ ವಿಮಾ ಕರಾರುಗಳು ಒದಗಿಸುತ್ತವೆ. ವರ್ಷಾಶನಗಳು ಮತ್ತು ದತ್ತಿ ವಿಮಾ ಪಾಲಿಸಿಗಳು ಸೇರಿದಂತೆ ಕೆಲವು ಪಾಲಿಸಿಗಳು, ಸಂಪತ್ತು ಸಂಚಯಿಸಲು ಅಥವಾ ಅಗತ್ಯಬಿದ್ದಲ್ಲಿ ಅದನ್ನು ಬಳಸಲು ಒಂದು ವಿತ್ತೀಯ ಸಾಧನವಾಗಿದೆ.
U.S. ಮತ್ತು UK ಸೇರಿದಂತೆ ಹಲವು ದೇಶಗಳಲ್ಲಿ,ಈ ರೀತಿ ಸಂಚಿತವಾದ ನಗದು ಮೌಲ್ಯದ ಮೇಲಿನ ಬಡ್ಡಿಯು ಕೆಲವು ಸಂದರ್ಭಗಳಲ್ಲಿ ತೆರಿಗೆಗೆ ಒಳಪಡುವುದಿಲ್ಲ ಎಂಬ ಅವಕಾಶವನ್ನು ತೆರಿಗೆ ಕಾಯಿದೆಯಲ್ಲಿ ಕಲ್ಪಿಸಲಾಗಿದೆ.ತೆರಿಗೆಯಿಂದ ತಪ್ಪಿಸಿಕೊಳ್ಳ ಬಹುದಾದ ಉಳಿತಾಯ ಮಾರ್ಗ ಮತ್ತು ಅಕಾಲ ಮರಣಕ್ಕೆ ತುತ್ತಾಗ ಬಹುದಾದ ಸನ್ನಿವೇಶದಿಂದ ರಕ್ಷಣೆ ಪಡೆಯವ ಸಾಧ್ಯತೆ ಈ ಪಾಲಿಸಿಗಳಲ್ಲಿ ಅಡಕವಾಗಿರುವುದರಿಣದ ಇದು ವ್ಯಾಪಕ ಬಳಕೆಯಲ್ಲಿದೆ.
U.S.ನಲ್ಲಿ ಜೀವ ವಿಮೆ ಮತ್ತು ವರ್ಷಾಶನಗಳ ಬಡ್ಡಿಯ ಮೇಲಿನ ತೆರಿಗೆ ಪಾವತಿಯನ್ನು ಸಾಮಾನ್ಯವಾಗಿ ಮುಂದೂಡಲಾಗುತ್ತದೆ. ಆದರೆ, ಕೆಲವು ಪ್ರಕರಣಗಳಲ್ಲಿ, ತೆರಿಗೆ ಮುಂದೂಡಿಕೆಯಿಂದ ಪಡೆದ ಪ್ರಯೋಜನವನ್ನು ಕ್ಷೀಣಿತ ಆದಾಯಕ್ಕೆ ಸರಿದೂಗಿಸಲಾಗುತ್ತದೆ. ಇದು ವಿಮಾ ಸಂಸ್ಥೆ, ವಿಮಾ ಪಾಲಿಸಿಯ ವಿಧ ಮತ್ತು ಇತರೆ ಅಂಶಗಳನ್ನು (ಮರಣ, ಮಾರುಕಟ್ಟೆ ಆದಾಯಗಳು ಇತ್ಯಾದಿ) ಅವಲಂಬಿಸಿದೆ. ನಗದು ಮೌಲ್ಯ ಸಂಚಯನಕ್ಕೆ,ಆದಾಯ ತೆರಿಗೆ ಉಳಿತಾಯ ಮಾಡಬಲ್ಲಂಥ ವಾಹನಗಳು (ಉದಾಹರಣೆಗೆ IRAಗಳು, 401(k) ಯೋಜನೆಗಳು, ರಾಥ್ IRAಗಳು) ಉತ್ತಮ ಪರ್ಯಾಯಗಳಾಗಬಹುದು.
ಆಸ್ತಿಪಾಸ್ತಿ ವಿಮೆಯು ಬೆಂಕಿ, ಕಳ್ಳತನ ಅಥವಾ ಹವಾಮಾನ ವೈಪರೀತ್ಯಗಳಿಂದ ಉಂಟಾಗಬಹುದಾದ ವಿಪತ್ತುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಗ್ನಿ ಆಕಸ್ಮಿಕ ವಿಮೆ, ಪ್ರವಾಹ ಪ್ರಕೋಪ ವಿಮೆ, ಭೂಕಂಪದ ಆಪತ್ತಿನ ವಿಮೆ, ಗೃಹ ವಿಮೆ, ಒಳನಾಡ ನೌಕಾ ವಿಮೆ ಮತ್ತು ಕುದಿಪಾತ್ರೆ ವಿಮೆಯಂತಹ ವಿಶಿಷ್ಟ ರೂಪಗಳನ್ನು ಇದು ಒಳಗೊಂಡಿದೆ.
ವಿಮೆದಾರರ ವಿರುದ್ಧದ ಕಾನೂನು ಸಮ್ಮತ ವಿಮಾ ಪರಿಹಾರ ಬೇಡಿಕೆಗಳನ್ನು ಈಡೇರಿಸುವಂತಹ ಒಂದು ವಿಸ್ತೃತ ರಕ್ಷಾ ಕವಚವಾಗಿದೆ - ಈ ವಿಮೆಯ ಹೊಣೆಗಾರಿಕೆ. ವಿಮೆಯ ಹಲವು ವಿಧಗಳು ಹೊಣೆಗಾರಿಕೆಯ ಅಂಶವನ್ನು ಸೇರಿಸಿಕೊಳ್ಳುತ್ತವೆ. ಉದಾಹರಣೆಗೆ, ಗೃಹ ಮಾಲೀಕನ ವಿಮೆ ಪಾಲಿಸಿಯು ಸಾಮಾನ್ಯವಾಗಿ ಹೊಣೆಗಾರಿಕೆಯ ಅಂಶವನ್ನು ಒಳಗೊಳ್ಳುತ್ತದೆ. ಸ್ವತ್ತಿನಲ್ಲಿ ಯಾರೋ ಜಾರಿಬಿದ್ದವರು ಪರಿಹಾರಕ್ಕಾಗಿ ದಾವೆ ಹೂಡಿದ್ದಲ್ಲಿ ವಿಮೆದಾರರಿಗೆ ಹೊಣೆಗಾರಿಕೆಯ ಅಂಶದ ರಕ್ಷಣೆಯನ್ನು ನೀಡುತ್ತದೆ. ವಾಹನ ವಿಮೆಯೂ ಸಹ ಹೊಣೆಗಾರಿಕೆಯ ವಿಮೆಯನ್ನು ನೀಡುತ್ತದೆ. ಇದು ಢಿಕ್ಕಿ ಹೊಡೆಯುವ ವಾಹನವು ಇತರರ ಜೀವಗಳಿಗೆ, ಆರೋಗ್ಯ ಅಥವಾ ಆಸ್ತಿಪಾಸ್ತಿಗಳಿಗೆ ಎಸಗುವ ಹಾನಿಯ ವಿರುದ್ಧ ನಷ್ಟ ಪರಿಹಾರದ ರಕ್ಷಣೆ ನೀಡುತ್ತದೆ. ಹೊಣೆಗಾರಿಕೆಯ ವಿಮೆ ಪಾಲಿಸಿಯು ನೀಡುವ ಸುರಕ್ಷೆಯು ದುಪ್ಪಟ್ಟಾಗಿದೆ: ಪಾಲಿಸಿದಾರರ ವಿರುದ್ಧ ಮೊಕದ್ದಮೆ ಆರಂಭವಾದಲ್ಲಿ ರಕ್ಷಣಾತ್ಮಕ ಪ್ರತಿವಾದ (ಲೀಗಲ್ ಡಿಫೆನ್ಸ್) ಮತ್ತು ಇತ್ಯರ್ಥ ಅಥವಾ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ವಿಮೆದಾರರ ಪರವಾಗಿ ಹಣ ಸಂದಾಯವನ್ನೂ (ನಷ್ಟ ತುಂಬಿಸುವಿಕೆಯನ್ನೂ) ಸಹ ಮಾಡುತ್ತದೆ. ಹೊಣೆಗಾರಿಕೆಯ ಪಾಲಿಸಿಗಳು ಕೇವಲ ವಿಮೆದಾರರ ಉಪೇಕ್ಷೆಗೆ ಮಾತ್ರ ರಕ್ಷಣೆ ನೀಡುತ್ತದೆ. ಇದು ವಿಮೆದಾರರು ಉದ್ದೇಶಪೂರ್ವಕವಾಗಿಯೇ ಎಸಗುವ ಕೃತ್ಯಗಳಿಗೆ ಅನ್ವಯಿಸುವುದಿಲ್ಲ.
ನಿರುದ್ಯೋಗ, ಅಂಗವೈಕಲ್ಯ ಅಥವಾ ಸಾವಿನಂತಹ ಅವಘಡಗಳಿಗೆ ಸಾಲಗಾರರು ತುತ್ತಾದ ಸಂದರ್ಭದಲ್ಲಿ ಸಾಲವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ತೀರಿಸುವಲ್ಲಿ ಸಾಲ ವಿಮೆಯು ನೆರವಿಗೆ ಧಾವಿಸುತ್ತದೆ.
ಕೆಲವು ಸಮುದಾಯಗಳು, ಸುಸ್ಪಷ್ಟ ಸಾಂಖ್ಯಿಕ ಮೌಲ್ಯಗಳನ್ನು ಅಪಾಯಕ್ಕೆ ವಹಿಸುವ ಕರಾರಿನ ಅಪಾಯ ವರ್ಗಾವಣೆಯ ಬದಲಿಗೆ, ಇತರೆ ರೀತಿಗಳಲ್ಲಿ ತಮ್ಮೊಳಗೇ ವಸ್ತುತಃ ವಿಮೆಗಳನ್ನು ಸೃಷ್ಟಿಸಿಕೊಳ್ಳಲು ಇಚ್ಛಿಸುತ್ತವೆ. ಅಮಿಷ್ ಮತ್ತು ಕಲವು ಮುಸ್ಲಿಮ್ ಪಂಗಡಗಳು ಸೇರಿದಂತೆ ಅನೇಕ ಧಾರ್ಮಿಕ ಪಂಗಡಗಳು, ಆಪತ್ತು ಒಡ್ಡಿದಾಗ ತಮ್ಮ ಸಮುದಾಯಗಳು ನೀಡುವ ಬೆಂಬಲವನ್ನು ಅವಲಂಬಿಸುತ್ತವೆ. ಯಾವುದೇ ವ್ಯಕ್ತಿಯಿಂದ ಒಡ್ಡಲಾದ ಅಪಾಯವನ್ನು ಸಮುದಾಯದ ಮೂಲಕ ಸಾಮೂಹಿಕವಾಗಿ ವಹಿಸಲಾಗಿದ್ದು, ಒಂದು ರೀತಿಯ ನಷ್ಟದ ಕಾರಣ ಅಗತ್ಯಗಳು ಹಠಾತ್ತನೆ ಹೆಚ್ಚಾದಾಗ, ನಷ್ಟವಾದ ಸ್ವತ್ತುಗಳ ಪುನರ್ನಿರ್ಮಾಣ ಮತ್ತು ಸಂತ್ರಸ್ತರಿಗೆ ಎಲ್ಲಾ ತರಹದ ಬೆಂಬಲವನ್ನು ನೀಡುವುದು. ಇತರರು ಸಮುದಾಯ ಮುಖಂಡರನ್ನು ಅನುಸರಿಸುವಂತೆ ಒಪ್ಪಿಸುವಂತಹ ಬೆಂಬಲಿಸುವ-ಮನೋಭಾವವುಳ್ಳ ಸಮುದಾಯಗಳಲ್ಲಿ, ವಿಮೆಯ ಈ ಅನುಕ್ತ ರೀತಿಯು ಫಲಕಾರಿಯಾಗಬಹುದು. ಈ ರೀತಿಯಲ್ಲಿ ಸಮುದಾಯವು, ವಿಮೆಯ ಔಚಿತ್ಯದ ಬಗ್ಗೆ ಇರುವ ಸದಸ್ಯರ ನಡುವಿನ ತೀವ್ರ ಭಿನ್ನಾಭಿಪ್ರಾಯಗಳನ್ನು ಸಮಗೊಳಸಬಹುದು. ಸುಸ್ಪಷ್ಟ ವಿಮೆ ಕರಾರುಗಳ ನೈತಿಕ ಅಧಃಪತನವನ್ನು ಸಮರ್ಥಿಸುವ ಕೆಲವು ವಿಮಾ ಪಾಲಿಸಿಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿವೆ.
ಯುನೈಟೆಡ್ ಕಿಂಗ್ಡಮ್ನಲ್ಲಿ ದೊರೆಯು (ಪ್ರಾಯೋಗಿಕ ಉದ್ದೇಶಗಳಿಗಾಗಿ, ಪೌರ ಸೇವಾ ವಿಭಾಗವನ್ನೂ ಒಳಗೊಂಡಿದೆ) ಸರ್ಕಾರೀ ಕಟ್ಟಡಗಳಂತಹ ಸ್ವತ್ತುಗಳನ್ನು ವಿಮೆ ಮಾಡಿಸಿಲ್ಲ. ಸರ್ಕಾರೀ ಕಟ್ಟಡಕ್ಕೆ ಹಾನಿಯಾದಲ್ಲಿ, ದುರಸ್ತಿ ವೆಚ್ಚವು ಸಾರ್ವಜನಿಕ ನಿಧಿಗಳಿಂದ ಭರಿಸಲಾಗುವುದು, ಏಕೆಂದರೆ, ದೀರ್ಘಾವಧಿಯಲ್ಲಿ, ವಿಮೆಕಂತುಗಳನ್ನು ಪಾವತಿಸುವುದಕ್ಕಿಂತಲೂ ಇದೇ ಕಡಿಮೆ ವೆಚ್ಚದ್ದಾಗಿತ್ತು. UKಯ ಹಲವು ಸರ್ಕಾರೀ ಕಟ್ಟಡಗಳನ್ನು ಸ್ಥಿರಾಸ್ತಿ ಸಂಸ್ಥೆಗಳಿಗೆ ಮಾರಿ ಬಾಡಿಗೆಯ ಮೇಲೆ ಪಡೆದುಕೊಳ್ಳುತ್ತಿತ್ತು. ಈ ಪದ್ಧತಿಯು ಈಗ ಅದು ಅಪರೂಪವಾಗಿದೆ ಅಥವಾ ನಿಂತುಹೋಗಿರುವ ಸಾಧ್ಯತೆಯೂ ಇರಬಹುದು.
ವಿಮಾ ಸಂಸ್ಥೆಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು:
ಸಾಮಾನ್ಯ ವಿಮಾ ಸಂಸ್ಥೆಗಳನ್ನು ಕೆಳಕಂಡಂತೆ ಉಪವಿಂಗಡಣೆ ಮಾಡಬಹುದು.
ಹಲವು ದೇಶಗಳಲ್ಲಿ, ಜೀವ ಮತ್ತು ಜೀವವಿಮೆ-ಹೊರತುಪಡಿಸುವ ವಿಮೆಗಾರರು ವಿವಿಧ ನಿಯಂತ್ರಣಾತ್ಮಕ ಪದ್ಧತಿಗಳು ಮತ್ತು ವಿವಿಧ ತೆರಿಗೆ ಮತ್ತು ಲೆಕ್ಕಪತ್ರ ವಿಜ್ಞಾನದ ನಿಯಮಗಳಿಗೆ ಒಳಪಟ್ಟಿರುತ್ತವೆ. ಸಂಸ್ಥೆಗಳ ಎರಡೂ ವಿಧಗಳ ನಡುವಿನ ವ್ಯತ್ಯಾಸವೇನೆಂದರೆ, ಜೀವ ವಿಮೆ, ವರ್ಷಾಶನ ಮತ್ತು ನಿವೃತ್ತಿ ವೇತನ ವ್ಯವಹಾರಗಳು ಬಹಳ ದೀರ್ಘಾವಧಿಯದ್ದಾಗಿವೆ. ಜೀವ ವಿಮೆಗೆ ಅಥವಾ ನಿವೃತ್ತಿ ವೇತನವು ಹಲವು ದಶಕಗಳ ಕಾಲ ಅಪಾಯಗಳ ವಿರುದ್ಧ ರಕ್ಷಣೆ ನೀಡಬಹುದು. ಇದಕ್ಕೆ ವಿಭಿನ್ನವಾಗಿ, ಜೀವವಿಮೆ ಹೊರತುಪಡಿಸುವ ವಿಮಾ ಸಂಸ್ಥೆಗಳು ಸಾಮಾನ್ಯವಾಗಿ ಅಲ್ಪಾವಧಿಗೆ - ಉದಾಹರಣೆಗೆ ಒಂದು ವರ್ಷದ ಕಾಲಕ್ಕೆ ವಿಮೆಯನ್ನು ನೀಡುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಮಾಣಿತ ಪಂಕ್ತಿಗಳ ವಿಮಾ ಸಂಸ್ಥೆಗಳು ಮುಖ್ಯವಾಹಿನಿಯ ವಿಮೆಗಾರರಾಗಿರುತ್ತಾರೆ. ಈ ಸಂಸ್ಥೆಗಳು ವಾಹನ, ಗೃಹ ಮತ್ತು ವ್ಯವಹಾರಗಳಿಗೆ ವಿಮೆ ನೀಡುತ್ತವೆ. ಅವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವ್ಯತ್ಯಾಸವಿಲ್ಲದೆಯೇ ನಮೂನೆ ಅಥವಾ 'ಕುಕಿ-ಕಟರ್' ಪಾಲಿಸಿಗಳನ್ನು ಬಳಸುತ್ತವೆ. ಆಧಿಕ್ಯ ಪಂಕ್ತಿಗಳಿಗಿಂತಲೂ ಅವು ಸಾಮಾನ್ಯವಾಗಿ ಕಡಿಮೆ ವಿಮೆಕಂತುಗಳನ್ನು ಹೊಂದಿದ್ದು, ವ್ಯಕ್ತಿಗಳಿಗೆ ನೇರವಾಗಿ ಮಾರಾಟವಾಗುತ್ತವೆ. ವಿಮೆ ಪಾಲಿಸಿಗಳಿಗೆ ಅವರು ವಿಧಿಸುವಂತಹ ಶುಲ್ಕದ ಮೊತ್ತವನ್ನು ನಿರ್ಬಂಧಿಸುವಂತಹ ರಾಜ್ಯ ಕಾನೂನು ನಿಯಂತ್ರಣಗಳಿಗೆ ಒಳಗಾಗಿರುತ್ತವೆ.
ಆಧಿಕ್ಯ ಪಂಕ್ತಿಗಳ ವಿಮಾ ಸಂಸ್ಥೆಗಳು (ಅಥವಾ ಅಧಿಕ್ಯ ಮತ್ತು ಹೆಚ್ಚುವರಿ) ಮಾದರಿಯಾಗಿ ಪ್ರಮಾಣಿತ ಪಂಕ್ತಿ ವಿಮಾ ಸಂಸ್ಥೆಗಳ ವ್ಯಾಪ್ತಿಯಲ್ಲಿರದಂತಹ ಅಪಾಯಗಳಿಗೆ ವಿಮೆ ನೀಡುತ್ತವೆ. ಅಂಗೀಕೃತವಾಗಿರದ ವಿಮೆಗಾರರೊಂದಿಗಿರುವ ಎಲ್ಲ ವಿಮೆಗಳು ಎಂದು ಅವುಗಳನ್ನು ಸ್ಥೂಲವಾಗಿ ಉಲ್ಲೇಖಿಸಲಾಗಿದೆ. ಅಂಗೀಕೃತವಾಗಿರದ ವಿಮೆಗಾರರು ಅಪಾಯಗಳಿರುವ ರಾಜ್ಯಗಳಲ್ಲಿ ಪರವಾನಗಗಿ ಹೊಂದಿರುವುದಿಲ್ಲ. ಈ ಸಂಸ್ಥೆಗಳಿಗೆ ಅಧಿಕವಾಗಿ ಸಂದರ್ಭಕ್ಕೆ ಹೊಂದಿಕೊಳ್ಳುವ ಕ್ಷಮತೆಯಿದ್ದು, ಪ್ರಮಾಣಿತ ವಿಮಾ ಸಂಸ್ಥೆಗಳಿಗಿಂತಲೂ ಬೇಗ ಪ್ರತಿಕ್ರಿಯೆ ನೀಡಬಲ್ಲವು, ಏಕೆಂದರೆ, ಅಂಗೀಕೃತ ವಿಮೆಗಾರರಂತೆ ದರಗಳು ಮತ್ತು ಅರ್ಜಿಗಳನ್ನು ಭರ್ತಿಮಾಡಲು ಅಗತ್ಯ ಅವುಗಳಿಗಿಲ್ಲ. ಆದರೂ, ಅವುಗಳ ಮೇಲೆ ಗಮನಾರ್ಹ ನಿಯಂತ್ರಣಾ ನಿಯಮಗಳನ್ನು ಹೇರಲಾಗಿವೆ. ಪರವಾನಗಿ ಪ್ರಮಾಣಿತ ವಿಮೆಗಾರರೊಂದಿಗೆ ಅಲಭ್ಯವಾಗಿರುವ ವಿಮೆಗಳನ್ನು ಆಧಿಕ್ಯ ಮಧ್ಯವರ್ತಿಗಳು ಮತ್ತು ದಲಾಲರು ಹೊಂದಿರಬೇಕೆಂದು ರಾಜ್ಯ ಕಾನೂನುಗಳು ಸಾಮಾನ್ಯವಾಗಿ ನಿಯಮವನ್ನು ಹೇರುತ್ತವೆ.
ವಿಮಾ ಸಂಸ್ಥೆಗಳನ್ನು ಸಾಮಾನ್ಯವಾಗಿ ಮ್ಯೂಚುಯಲ್ ಅಥವಾ ಸ್ಟಾಕ್ ಸಂಸ್ಥೆಗಳನ್ನಾಗಿ ವಿಂಗಡಿಸಲಾಗಿದೆ. ಮ್ಯೂಚುಯಲ್ ಸಂಸ್ಥೆಗಳು ಪಾಲಿಸಿದಾರರ ಸ್ವಾಮ್ಯದಲ್ಲಿರುತ್ತವೆ, ಪಾಲಿಸಿ ಹೊಂದಿದ ಅಥವಾ ಹೊಂದಿರದ ಸ್ಟಾಕ್ದಾರರು ಸ್ಟಾಕ್ ವಿಮೆ ಸಂಸ್ಥೆಗಳ ಸ್ವಾಮ್ಯ ವಹಿಸಿರುತ್ತಾರೆ. 20ನೆಯ ಶತಮಾನದ ಅಪರಾರ್ಧದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವೂ ಸೇರಿದಂತೆ ಕೆಲವು ದೇಶಗಳಲ್ಲಿ ಮ್ಯೂಚುಯಲ್ ವಿಮೆಗಾರರ 'ಡಿಮ್ಯೂಚುಯಲೈಸೇಷನ್' ಜೊತೆಗೆ ಮ್ಯೂಚುಯಲ್ ಹೋಲ್ಡಿಂಗ್ ಸಂಸ್ಥೆಯೆಂಬ ಸಂಕರಿತ ಸಂಸ್ಥೆಗಳ ಸ್ಥಾಪನೆಯು ಸಾಮಾನ್ಯವಾದವು. ವಿಮಾ ಸಂಸ್ಥೆಯೊಂದಕ್ಕೆ ಇತರೆ ಸಂಭಾವ್ಯ ನಮೂನೆಗಳಲ್ಲಿ ಪರಸ್ಪರಗಳು ಸಹ ಸೇರಿರುತ್ತವೆ, ಇದರಲ್ಲಿ ಪಾಲಿಸಿದಾರರು ಅಪಾಯ ಮತ್ತು ಲಾಯ್ಡ್ಸ್ ಸಂಘಟನೆಗಳೊಂದಿಗೆ 'ವಿನಿಮಯ' ಮಾಡಿಕೊಳ್ಳಬಹುದು.
ವಿಮಾ ಸಂಸ್ಥೆಗಳ ಗುಣಮಟ್ಟವನ್ನು ಎ. ಎಂ. ಬೆಸ್ಟ್ ಅಂತಹ ವಿವಿಧ ಮಧ್ಯವರ್ತಿಗಳಿಂದ ನಿರ್ಣಯಿಸಲಾಗುತ್ತದೆ. ಬೇಡಿಕೆಗಾಗಿ ಬಂದ ಪರಿಹಾರ ಧನವನ್ನು ನೀಡಲು ವಿಮಾಗಾರ ಸಂಸ್ಥೆಗೆ ಸಾಮರ್ಥ್ಯ ಇದೆಯೇ ಎಂಬುದನ್ನು ಅಳೆಯಲು ಮತ್ತು ಅದರ ಆರ್ಥಿಕ ದೃಢತೆಯನ್ನು ಒರೆ ಹಚ್ಚುವುದನ್ನು ರೇಟಿಂಗ್ಸ್ ಒಳಗೊಂಡಿದೆ. ರೇಟಿಂಗ್ಸ್ ನೀಡುವ ಸಂದರ್ಭದಲ್ಲಿ ಇದು ವಿಮಾ ಸಂಸ್ಥೆಯು ನೀಡಿರುವ ಬಾಂಡ್ಸ್ಗಳು, ನೋಟ್ಸ್ಗಳು ಮತ್ತು ಇತರೆ ಸೇವೆಗಳಂತಹ ಹಣಕಾಸಿನ ಸಾಧನಗಳನ್ನು ಸಹ ಅಳೆದು ನಿರ್ಣಯಿಸುತ್ತದೆ.
ಇತರೆ ವಿಮಾ ಸಂಸ್ಥೆಗಳಿಗೆ ಪಾಲಿಸಿಗಳನ್ನು ಮಾರಿ ಅವುಗಳು ಅಪಾಯಗಳನ್ನು ಕಡಿಮೆಗೊಳಿಸಿ ಭಾರೀ ನಷ್ಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡುವ ಸಂಸ್ಥೆಗಳೇ 'ಪುನರ್ವಿಮೆ ಸಂಸ್ಥೆಗಳು'. ಪುನರ್ವಿಮಾ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೆಲವೇ ಅತಿದೊಡ್ಡ ಸಂಸ್ಥೆಗಳು ಪ್ರಾಬಲ್ಯ ಮೆರೆದಿದ್ದು, ಈ ಸಂಸ್ಥೆಗಳು ಭಾರೀ ಆಪದ್ಧನವನ್ನು ಹೊಂದಿರುತ್ತವೆ. ಪುನರ್ವಿಮೆಗಾರರೊಬ್ಬರು ವಿಮಾ ಅಪಾಯಗಳ ನೇರ ನಿರ್ವಹಣೆಯನ್ನೂ ಸಹ ಮಾಡಬಲ್ಲರು.
ಬಂಧಿತ ವಿಮಾ ಸಂಸ್ಥೆಗಳು ಮೂಲ ಸಮೂಹ ಅಥವಾ ಸಮೂಹಗಳಿಂದ ಉದ್ಭವಿಸುವ ಅಪಾಯಗಳಿಗಾಗಿ ಹಣ ಬೆಂಬಲ ನೀಡಲು ಸ್ಥಾಪಿಸಲಾದ 'ಸೀಮಿತ-ಉದ್ದೇಶ' ವಿಮಾ ಸಂಸ್ಥೆಗಳಾಗಿವೆ. ಈ ವ್ಯಾಖ್ಯಾನವನ್ನು ಕೆಲವೊಮ್ಮೆ ಮೂಲ ಸಂಸ್ಥೆಯ ಗ್ರಾಹಕರ ಕೆಲವು ಅಪಾಯಗಳನ್ನು ಸಹ ಒಳಗೊಳ್ಳುವಂತೆ ವಿಸ್ತರಿಸಲಾಗುವುದು. ಸಂಕ್ಷಿಪ್ತವಾಗಿ, ಇದು ಒಂದು ಆಂತರಿಕ ಸ್ವ-ವಿಮೆ ಹೊಂದಿದ ವಾಹನವಾಗಿದೆ. ಬಂಧಿತ ವಿಮಾ ಸಂಸ್ಥೆಗಳು ಸ್ವ-ವಿಮೆ ಹೊಂದಿದ ಮೂಲ ಸಂಸ್ಥೆಯ 100% ಅಂಗಸಂಸ್ಥೆಯಾಗಿರುವ 'ಶುದ್ಧ' ಘಟಕದ; ಹಾಗೂ 'ಮ್ಯೂಚುಯಲ್' ಬಂಧಿತ (ಇದು ಒಂದು ಉದ್ದಿಮೆಯ ಸದಸ್ಯರ ಸಾಮೂಹಿಕ ಅಪಾಯಗಳಿಗೆ ವಿಮೆ ನೀಡುತ್ತದೆ); ಹಾಗೂ ಒಂದು 'ಸಾಂಘಿಕ' ಬಂಧಿತ ವಿಮಾ ಸಂಸ್ಥೆ (ಇದು ವೃತ್ತೀಯ, ವಾಣಿಜ್ಯ ಅಥವಾ ಔದ್ಯಮಿಕ ಸಂಘದ ಸದಸ್ಯರ ಅಪಾಯಗಳನ್ನು ಸ್ವ-ವಿಮೆ ಮಾಡುತ್ತದೆ) ರೂಪವನ್ನು ಹೊಂದಿರಬಹುದು. ವೆಚ್ಚಗಳಲ್ಲಿ ಕಡಿತಗಳಾಗುವ ಸಂದರ್ಭಗಳನ್ನು ಸೃಷ್ಟಿಸಿ, ಅಪಾಯ ನಿರ್ವಹಣೆಯ ಸರಳೀಕರಣ ಮತ್ತು ಅವು ಕಲ್ಪಿಸುವ ನಗದು ಹರಿವಿಗಾಗಿ ಸಾಂದರ್ಭಿಕ ಹೊಂದುವಿಕೆಯ ಕಾರಣ, ಬಂಧಿತ ವಿಮಾ ಸಂಸ್ಥೆಗಳು ಅವುಗಳ ಪ್ರಾಯೋಜಕರಿಗೆ ವಾಣಿಜ್ಯ, ಆರ್ಥಿಕ ಮತ್ತು ತೆರಿಗೆ ಅನುಕೂಲಗಳನ್ನು ನೀಡುತ್ತವೆ. ಇದರ ಜೊತೆಗೆ, ಸಾಂಪ್ರದಾಯಿಕ ವಿಮಾ ಮಾರುಕಟ್ಟೆಯಲ್ಲಿ ನ್ಯಾಯವಾದ ಬೆಲೆಯಲ್ಲಿ ಅರ್ಪಿಸಲಾಗದ ಅಥವಾ ಅಲಭ್ಯವಾದ ಅಪಾಯ-ರಕ್ಷಣೆಗಳನ್ನು ಅವುಗಳು ನೀಡಬಹುದು.
ಬಂಧಿತ ವಿಮಾ ಸಂಸ್ಥೆಗಳು ತಮ್ಮ ಮೂಲ ಸಂಸ್ಥೆಗಳಿಗಾಗಿ ಮಾಡಬಹುದಾದ ವಿಮಾಗಾರಿಕೆಯು, ಸ್ವತ್ತಿಗೆ ಹಾನಿ, ಸಾರ್ವಜನಿಕ ಮತ್ತು ಉತ್ಪನ್ನದ ಹೊಣೆಗಾರಿಕೆ, ವೃತ್ತೀಯ ನಷ್ಟ ಪರಿಹಾರ, ಉದ್ಯೋಗಿ ಸೌಲಭ್ಯಗಳು, ಉದ್ಯೋಗಿಗಳ ಹೊಣೆಗಾರಿಕೆಗಳು ಮತ್ತು ವೈದ್ಯಕೀಯ ಸಹಾಯ ವೆಚ್ವಗಳಂತಹ ಅಪಾಯಗಳನ್ನು ಇದು ಒಳಗೊಂಡಿರುತ್ತದೆ. ಪುನರ್ವಿಮೆಯ ಬಳಕೆಯಿಂದ ಇಂತಹ ಅಪಾಯಗಳಿಗೆ ಬಂಧಿತ ವಿಮಾ ಸಂಸ್ಥೆಯು ತಾನು ಈಡಾಗುವ ಸಂಭವವನ್ನು ಸೀಮಿತಗೊಳಿಸಬಹುದು.
ಅಪಾಯ ನಿರ್ವಹಣೆ ಮತ್ತು ಮೂಲ ಸಂಸ್ಥೆಯ ಅಪಾಯದ ಹಣ ಬೆಂಬಲ ನೀತಿಯ ಅಂಶವಾಗಿ ಬಂಧಿತ ವಿಮಾ ಸಂಸ್ಥೆಗಳ ಪ್ರಾಮುಖ್ಯತೆ ಹೆಚ್ಚುತ್ತಿವೆ. ಕೆಳಕಂಡ ಹಿನ್ನೆಲೆಯಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು:
'ವಿಮಾ ಸಲಹೆಗಾರರು' ಎಂದು ಕರೆಯಲ್ಪಡುವ ಕೆಲವು ಸಂಸ್ಥೆಗಳೂ ಇವೆ. ಇರುವ ಅನೇಕ ವಿಮಾ ಸಂಸ್ಥೆಗಳಿಂದ ನ್ಯಾಯೋಚಿತ ದರದಲ್ಲಿ ಪಾಲಿಸಿಯನ್ನು ಖರೀದಿಸಲು, ಭೋಗ್ಯ ದಲಾಲರಿಗೆ ನೀಡುವ ಶುಲ್ಕದಂತೆ ಈ ಸಂಸ್ಥೆಗಳಿಗೆ ಗ್ರಾಹಕರು ಶುಲ್ಕ ಪಾವತಿಯಾಗುತ್ತದೆ. ವಿಮಾ ಸಲಹೆಗಾರರಂತೆಯೇ, 'ವಿಮಾ ದಲಾಲ'ರೂ ಸಹ ಹಲವಾರು ಸಂಸ್ಥೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ವಿಮಾ ಪಾಲಿಸಿಯನ್ನು ಆಯ್ದು ಖರೀದಿಸುತ್ತಾರೆ. ಆದರೂ ಸಹ, ನೇರವಾಗಿ ಗ್ರಾಹಕರ ಬದಲಿಗೆ ಆಯ್ಕೆಯಾದ ವಿಮೆಗಾರರಿಂದ ವಿಮಾ ದಲಾಲರಿಗೆ ಕಮಿಷನ್ ಸಂದಾಯವಾಗುತ್ತದೆ.
ವಿಮಾ ಸಲಹಾಗಾರರಾಗಲೀ ವಿಮಾ ದಲಾಲರಾಗಲೀ ವಿಮಾ ಸಂಸ್ಥೆಗಳಾಗಿರುವುದಿಲ್ಲ; ಹಾಗೂ ವಿಮಾ ವ್ಯವಹಾರಗಳಲ್ಲಿ ಯಾವುದೇ ಅಪಾಯದ ರಕ್ಷಣೆಯ ಹೊಣೆಯನ್ನು ಅವರಿಗೆ ವರ್ಗಾಯಿಸಲಾಗುವುದಿಲ್ಲ. ಮೂರನೆಯ ಪಕ್ಷದ ಆಡಳಿತವು ವಿಮಾಗಾರಿಕೆಯ ಜೊತೆಗೆ ಕೆಲವೊಮ್ಮೆ ವಿಮಾ ಸಂಸ್ಥೆಗಳಿಗಾಗಿ ವಿಮಾ ಪರಿಹಾರ ಬೇಡಿಕೆಗಳ ಸಂಸ್ಕರಣಾ ಸೇವೆಗಳನ್ನು ನಿರ್ವಹಿಸುವಂತಹ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಆಗಾಗ್ಗೆ ವಿಮಾ ಸಂಸ್ಥೆಗಳು ಹೊಂದಿರದಂತಹ ವಿಶೇಷ ಪರಿಣತಿಯನ್ನು ಹೊಂದಿರುತ್ತವೆ.
ವಿಮಾ ಕರಾರನ್ನು ಕೊಂಡುಕೊಳ್ಳುವ ಮುನ್ನ ವಿಮಾ ಸಂಸ್ಥೆಯ ಹಣಕಾಸಿನ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಮುಖ್ಯವಾಗಿ ಪರಿಗಣಿಸಬೇಕಾದ್ದು ಅತ್ಯವಶ್ಯ. ಚಾಲ್ತಿ ವರ್ಷದಲ್ಲಿ ಪಾವತಿಸಲಾದ ವಿಮೆಕಂತು ಭವಿಷ್ಯದಲ್ಲಿ ಹಲವು ವರ್ಷಗಳ ಕಾಲ ಸಂಭವಿಸುವ ನಷ್ಟಗಳ ವಿರುದ್ಧವೂ ರಕ್ಷಣೆಯನ್ನು ನೀಡಬಲ್ಲದಾಗಿದೆ. ಈ ಕಾರಣಕ್ಕಾಗಿ, ವಿಮಾ ವಾಹಕರ ಕಾರ್ಯಸಾಧ್ಯತೆಯು ಬಹಳ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವು ವಿಮಾ ಸಂಸ್ಥೆಗಳು ದಿವಾಳಿಯಾಗಿ, ಅವುಗಳ ಪಾಲಿಸಿದಾರರು ಯಾವುದೇ ರಕ್ಷಣೆಯಿಲ್ಲದಂತಹ (ಅಥವಾ ಕೇವಲ ಸರ್ಕಾರ-ಬಂಬಲಿತ ವಿಮಾ ಸಂಗ್ರಹ ಅಥವಾ ನಷ್ಟವಾದಲ್ಲಿ ಅತ್ಯಲ್ಪ ಪ್ರಮಾಣದ ಪರಿಹಾರಧನವನ್ನು ಒಳಗೊಂಡ ಇತರೆ ವ್ಯವಸ್ಥೆ) ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಬೆಸ್ಟ್ಸ್, ಫಿಚ್, ಸ್ಟಾಂಡರ್ಡ್ ಅಂಡ್ ಪೂರ್ಸ್ ಮತ್ತು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ನಂತಹ ಹಲವು ಸ್ವತಂತ್ರ ರೇಟಿಂಗ್ ಹೊಂದಿದ ಏಜೆನ್ಸಿಗಳು ವಿಮಾ ಸಂಸ್ಥೆಗಳ ಕಾರ್ಯಸಾಧ್ಯತೆಗಳ ಗುಣಮಟ್ಟವನ್ನು ಅಳೆದು ನಿರ್ಣಯಿಸುತ್ತವೆ.
ಜಾಗತಿಕ ವಿಮೆಕಂತುಗಳು 2007ರಲ್ಲಿ 11%ರಷ್ಟು ಅಭಿವೃದ್ಧಿ ಹೊಂದಿ (ಅಥವಾ ನೈಜ ಮಟ್ಟದಲ್ಲಿ 3.3%) $4.1 ಲಕ್ಷಕೋಟಿಯಷ್ಟು ಅಭಿವೃದ್ಧಿ ಹೊಂದಿತು. ಭಾರೀ-ಆರ್ಥಿಕ ವಾತಾವರಣವು 2007ರಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದಿಂದ ಚಿತ್ರಿತವಾಗಿತ್ತು. ಆ ವರ್ಷ, ಜೀವವಿಮೆಯಲ್ಲಿ ಲಾಭದಾಯಕತೆಯು ಸುಧಾರಿಸಿತಾದರೂ ಇತರೆ ವಿಮೆ ಕ್ಷೇತ್ರಗಳಲ್ಲಿ ಕುಸಿತ ಕಂಡಿತು. ಜೀವವಿಮೆಕಂತುಗಳು 12.6% ಅಭಿವೃದ್ಧಿ ಕಂಡು, ಜಪಾನ್ ಮತ್ತು ಭೂಖಂಡೀಯ ಯುರೋಪ್ ಹೊರತುಪಡಿಸಿ, ಮುಂದುವರೆದ ಆರ್ಥಿಕತೆಗಳಲ್ಲಿ ತ್ವರಿತ ಅಭಿವೃದ್ಧಿಯನ್ನು ಕಂಡಿತು. ಆ ವರ್ಷ ಜೀವವಿಮೆ-ಹೊರತುಪಡಿಸಿದ ವಿಮೆಕಂತುಗಳು 7.6%ರಷ್ಟು ಅಭಿವೃದ್ಧಿ ಹೊಂದಿದವು. ವಿಮೆಕಂತು ಆದಾಯಕ್ಕೆ ಸಂಬಂಧಿಸಿದ 2008ರ ಅಂಕಿ-ಅಂಶಗಳು ಇನ್ನೂ ಲಭ್ಯವಿಲ್ಲ, ಆದರೆ ವಿಮಾ ಕ್ಷೇತ್ರವು ಹೊಸ ಉದ್ಯಮದಲ್ಲಿ ನಿಧಾನಪ್ರಗತಿ ಮತ್ತು ಹೂಡಿಕೆಯ ಆದಾಯದಲ್ಲಿ ಇಳಿತವನ್ನು ಅನುಭವಿಸುವ ಸಾಧ್ಯತೆಯಿದೆ.
ಜಾಗತಿಕ ವಿಮೆಯ ಅಧಿಕಾಂಶವನ್ನು ಮುಂದುವರೆದ ಆರ್ಥಿಕತೆಗಳೇ ಹೊಂದಿವೆ. $1,681 ಶತಕೋಟಿ ವಿಮೆಕಂತು ಆದಾಯದೊಂದಿಗೆ ಯುರೋಪ್ ಅತಿ ಪ್ರಮುಖ ವಲಯವಾಗಿತ್ತು, ಉತ್ತರ ಅಮೆರಿಕಾ ($1,330 ಶತಕೋಟಿ) ಮತ್ತು ಏಷ್ಯಾ ($814 ಶತಕೋಟಿ) ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಸ್ಥಾನ ಪಡೆದಿದ್ದವು. 2007ರಲ್ಲಿ, ನಾಲ್ಕು ಅಗ್ರಗಣ್ಯ ದೇಶಗಳದ್ದು ವಿಮೆಕಂತಿನಲ್ಲಿ 60%ರಷ್ಟು ಪಾಲಿತ್ತು. US ಮತ್ತು UK ಮಾತ್ರವೇ ಜಾಗತಿಕ ವಿಮೆಯಲ್ಲಿ 42%ರಷ್ಟು ಪಾಲನ್ನು ಹೊಂದಿತ್ತು. ಇದು ಜಾಗತಿಕ ಜನಸಂಖ್ಯೆಯಲ್ಲಿ ಅವರ ಪಾಲಾದ 7%ರಷ್ಟಕ್ಕಿಂತಲೂ ಅಧಿಕವಾಗಿತ್ತು. ಆಸ್ತಿತ್ವಕ್ಕೆ ಬರುತ್ತಿದ್ದ ಮಾರುಕಟ್ಟೆ ವ್ಯವಸ್ಥೆಗಳು ಜಾಗತಿಕ ಜನಸಂಖ್ಯೆಯ 85%ರಷ್ಟು ಪಾಲನ್ನು ಹೊಂದಿತ್ತು, ಆದರೆ ವಿಮೆಕಂತುಗಳಲ್ಲಿ ಕೇವಲ 10%ರಷ್ಟು ಮಾತ್ರ ಕಲ್ಪಿಸಿದವು.
ತನ್ನ ವಿಮೆದಾರರಿಗೆ ರಕ್ಷಣೆಯ ಕವಚ ಕಲ್ಪಿಸುವುದರ ಮೂಲಕ, ವಿಮೆದಾರರು ಅಪಾಯಗಳನ್ನು ತಪ್ಪಿಸಲು ಅಗತ್ಯ ಉಪಾಯಗಳನ್ನು ಕೈಗೊಳ್ಳವುದರತ್ತ ನಿರ್ಲಕ್ಷ್ಯ ತೋರುವುದೂ ವಿಮಾಗಾರ ಸಂಸ್ಥೆಯ ಕಣ್ಣಿಗೆ ಬೀಳಬಹುದು. ಹೀಗಾಗಿ ವಿಮೆದಾರರು ಅಪಾಯವನ್ನು ವಿಮೆಗಾರರಿಗೆ ವರ್ಗಾಯಿಸಿರುತ್ತಾರೆ. ಇದನ್ನು ನೈತಿಕ ಅಪಾಯ ಎಂದು ಗುರುತಿಸಲಾಗಿದೆ. ತಮ್ಮ ಹಣಕಾಸಿನ ವೆಚ್ಚವನ್ನು ಇತಿಮಿತಿಯೊಳಗಿಡಲು , ವಿಮೆದಾರರು ನಷ್ಟದ ಅಪಾಯವನ್ನು ಇರುವುದಕ್ಕಿಂತಲೂ ದೊಡ್ಡದಾಗಿ ಬಿಂಬಿಸುವಂತಹ ಭೂತಗನ್ನಡಿ ಹಿಡಿದರೆ,ಅಂಥ ಸಂದರ್ಭಗಳಲ್ಲಿ ರಕ್ಷಣೆಯನ್ನು ನೀಡಲೇಬೇಕಾದ ಪ್ರಮಾಣವನ್ನು ತಗ್ಗಿಸುವಂಥ ಷರತ್ತುಗಳನ್ನು ವಿಮಾ ಸಂಸ್ಥೆಗಳು ಹೊಂದಿರಿತ್ತವೆ.[ಸೂಕ್ತ ಉಲ್ಲೇಖನ ಬೇಕು]
ಉದಾಹರಣೆಗೆ, ಜೀವವಿಮಾ ಸಂಸ್ಥೆಗಳಿಗೆ ಅಧಿಕ ಮೊತ್ತದ ವಿಮೆಕಂತುಗಳ ಅಗತ್ಯ ಬೀಳಬಹುದು ಅಥವಾ ಅಪಾಯಕಾರಿ ವೃತ್ತಿಗಳಲ್ಲಿ ಅಥವಾ ಕ್ರೀಡೆಗಳಲ್ಲಲಿ ಪಾಲ್ಗೊಳ್ಳುವವರಿಗೆ ಈ ವಿಮೆಯು ರಕ್ಷಣೆಯಯ ಪೂರೈಕೆಯನ್ನು ನಿರಾಕರಿಸಬಹುದು.ವಿಮೆದಾರರು ಉದ್ದೇಶಪೂರ್ವಕವಾಗಿ ಎಸಗುವ ಅಪರಾಧ ಕೃತ್ಯಗಳಿಂದ ಉದ್ಭವಿಸುವ ಹೊಣೆಗೆ ವಿಮೆಗಾರರು ರಕ್ಷಣೆ ನೀಡುವುದಿಲ್ಲ. ಇಂತಹ ರಕ್ಷಣೆಯನ್ನು ನೀಡುವಷ್ಟು ವಿಚಾರಹೀನ ವಿಮೆಗಾರರಿದ್ದರೂ, ಅಂತಹ ವಿಮೆಯು ಆಸ್ತಿತ್ವದಲ್ಲಿರಲು ಬಹಳಷ್ಟು ದೇಶಗಳಲ್ಲಿ ಸಾರ್ವಜನಿಕರ ವಿರೋಧವೇ ಇದೆ. ಹೀಗಾಗಿ ಇದು ಸಾಮಾನ್ಯವಾಗಿ ಕಾನೂನು-ಬಾಹಿರ.[ಸೂಕ್ತ ಉಲ್ಲೇಖನ ಬೇಕು]
ಪಾಲಿಸಿಯು ಒಳಗೊಂಡಿರುವ ಶುಲ್ಕ ಮತ್ತು ಅಪಾಯ ವ್ಯಾಪ್ತಿ ವಿವರಗಳು ಕೆಲವು ಪಾಲಿಸಿದಾರರಿಗೆ ಅರ್ಥವಾಗದೇ ಇರುವಷ್ಟು ವಿಮೆ ಪಾಲಿಸಿಗಳು ಬಹಳ ಜಟಿಲ.ಇದರ ಪರಿಣಾಮವಾಗಿ, ತಾವು ಒಲ್ಲದ ಷರತ್ತುಗಳೊಂದಿಗೆ ಜನರು ಪಾಲಿಸಿಯನ್ನು ಕೊಳ್ಳುವುದುಂಟು. ಈ ಪ್ರಕರಣಗಳಿಗೆ ಪ್ರತಿಯಾಗಿ, ವಿಮೆ ಪಾಲಿಸಿಗಳಿಗೆ ಕನಿಷ್ಠ ಪಕ್ಷದ ಪ್ರಮಾಣಗಳು ಮತ್ತು ಅವುಗಳನ್ನು ಜಾಹೀರುಗೊಳಿಸಿ ಮಾರುವುದರ ಬಗ್ಗೆಯೂ ಸೇರಿದಂತೆ, ವಿಮೆಯ ವ್ಯವಹಾರ ಸಂಬಂಧ ವಿಸ್ತೃತವಾದ, ಶಾಸನಾಪೇಕ್ಷಿತ ಮತ್ತು ನಿಯಂತ್ರಣಾತ್ಮಕ ನಿಯಮಗಳನ್ನು ಹಲವು ದೇಶಗಳು ಜಾರಿಗೊಳಿಸಿವೆ.
ಉದಾಹರಣೆಗೆ, ಇಂಗ್ಲಿಷ್ ಭಾಷೆಯಲ್ಲಿರುವ ಹಲವು ವಿಮೆ ಪಾಲಿಸಿಗಳ ಕರಡನ್ನು ಸರಳ ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿವೆ; ವಿಮೆ ಪಾಲಿಸಿಗಳು ಏನನ್ನು ಹೇಳುತ್ತಿವೆ ಎಂಬುದನ್ನು ಅರಿಯಲು ನ್ಯಾಯಾಧೀಶರುಗಳಿಗೇ ಕಷ್ಟವಾಗಿದ್ದು, ನ್ಯಾಯಾಲಯಗಳು ವಿಮೆದಾರರ ವಿರುದ್ಧ ತೀರ್ಪು ನೀಡಲಾರರು ಎಂದು ವಿಮಾ ಕ್ಷೇತ್ರವು ಪ್ರಯಾಸದಿಂದ ಕಲಿಯಿತು.
ವಿಮೆ ಇಳಿಸ ಬಯಸುವ ಹಲವು ಸಾಂಸ್ಥಿಕ ಕೊಳ್ಳುಗರು ವಿಮಾ ದಲಾಲರ ಮೂಲಕ ವಿಮೆಯನ್ನು ಕೊಂಡುಕೊಳ್ಳುತ್ತಾರೆ. ಮೇಲ್ನೋಟಕ್ಕೆ, ದಲಾಲರು ಕೊಳ್ಳುಗರ (ವಿಮಾ ಸಂಸ್ಥೆಯಲ್ಲ) ಪ್ರತಿನಿಧಿಯಾಗಿ ಕಾಣುತ್ತಾರೆ. ಸೂಕ್ತ ರಕ್ಷಣೆ ಮತ್ತು ಪಾಲಿಸಿ ಒದಗಿಸುವ ಇತಿಮಿತಿಗಳನ್ನು ಆಪ್ತ ಸಲಹೆಗಾರರಂತೆ ತಿಳಿಸುತ್ತಾರಾದರೂ, ಬಹುಪಾಲು ಪ್ರಕರಣಗಳಲ್ಲಿ, ದಲಾಲರಿಗೆ ವಿಮೆ ಕಂತಿನ ಮೇಲೆ ಇಂತಿಷ್ಟು ಶೇಕಡಾ ಕಮೀಷನ್ ಎಂದು ಹಣ ಸಂದಾಯವಾಗುತ್ತದೆ. ಹೀಗಾಗಿ, ದಲಾಲರ ಹಣಕಾಸಿನ ಆಸಕ್ತಿಯು ಅಗತ್ಯಕ್ಕಿಂತ ಹೆಚ್ಚಿನ ಬೆಲೆಯ ವಿಮೆ ಇಳಿಸಲು ವಿಮೆದಾರರನ್ನು ಪ್ರೇರೇಪಿಸುತ್ತಾರೆ. ದಲಾಲರು ಸಾಮಾನ್ಯವಾಗಿ ಹಲವು ವಿಮೆಗಾರರೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಹಾಗಾಗಿ ದಲಾಲರು ಮಾರುಕಟ್ಟೆಯಲ್ಲಿ ನ್ಯಾಯೋಚಿತ ದರಗಳಲ್ಲಿ ಲಭಿಸುವ ಅತ್ಯುತ್ತಮ ರಕ್ಷಣಾ ಪಾಲಿಸಿಗಳನ್ನು ಕೊಂಡುಕೊಳ್ಳಲು ಅನುಕೂಲವಾಗುತ್ತದೆ.
ಮಧ್ಯವರ್ತಿಯೊಬ್ಬನ ಮೂಲಕವೂ ಸಹ ವಿಮೆಯನ್ನು ಕೊಳ್ಳಬಹುದು. ಮಧ್ಯವರ್ತಿ ಪಾಲಿಸಿದಾರರನ್ನು ಪ್ರತಿನಿಧಿಸಿದರೆ,ವಿಮೆದಾರರಿಗೆ ಪಾಲಿಸಿಯನ್ನು ಮಾರಿದ ವಿಮಾ ಸಂಸ್ಥೆಯನ್ನು ದಲಾಲ ಪ್ರತಿನಿಧಿಸುತ್ತಾನೆ. ಇವರಿಬ್ಬರದೂ ವಿಭಿನ್ನ ವರ್ತನೆ. ಮಧ್ಯವರ್ತಿಯು ಒಂದಕ್ಕಿಂತಲೂ ಅಧಿಕ ಸಂಸ್ಥೆಗಳನ್ನು ಪ್ರತಿನಿಧಿಸಬಹುದು.
ಒಬ್ಬ ಸ್ವತಂತ್ರ ವಿಮಾ ಸಲಹಾಗಾರರು, ವಿಮೆದಾರರಿಗೆ ಸೇವಾ ಧಾರಕ ಶುಲ್ಕದ ಮೇಲೆ ವಕೀಲರಂತೆ ಸಲಹೆ ನೀಡುವರು. ಇದು ಸಂಪೂರ್ಣ ಸ್ವತಂತ್ರ ಸಲಹೆಯಾಗಿದ್ದು, ದಲಾಲರ ಮತ್ತು/ಅಥವಾ ಮಧ್ಯವರ್ತಿಗಳ ಹಣಕಾಸಿನ ಹಿತಾಸಕ್ತಿಗಳ ಘರ್ಷಣೆಗೆ ಇಲ್ಲಿ ಆಸ್ಪದವಿರುದಿಲ್ಲ. ಆದರೂ, ಅವರ ಗ್ರಾಹಕರಿಗೆ ಪಾಲಿಸಿ ರಕ್ಷಣೆಯನ್ನು ಕೊಡಿಸಲು, ಅಂತಹ ಸಲಹೆಗಾರರು ದಲಾಲರ ಮತ್ತು/ಅಥವಾ ಮಧ್ಯವರ್ತಿಗಳ ಮೂಲಕ ಕಾರ್ಯನಿರ್ವಹಿಸಬೇಕು.
ನಷ್ಟದ ಸಾಧ್ಯತೆಯು ಅಧಿಕವಾಗಿರುವ ಕಾರಣ, ನಿರ್ದಿಷ್ಟ ಭೌಗೋಳಿಕ ವಲಯಗಳಲ್ಲಿ ವಿಮಾ ರಕ್ಷಣೆಯನ್ನು ನಿರಾಕರಿಸುವುದಕ್ಕೆ ರೆಡ್ಲೈನಿಂಗ್ ಎನ್ನಲಾಗಿದೆ. ಈ ತಾರತಮ್ಯವು ಕಾನೂನು-ಸಮ್ಮತವಲ್ಲದ್ದೆಂಬ ಆರೋಪಕ್ಕೆ ಇದು ಈಡಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆಸ್ತಿಪಾಸ್ತಿ ವಿಮಾ ಕ್ಷೇತ್ರದಲ್ಲಿ ವರ್ಣ ಭೇದ ನೀತಿ(=ಜನಾಂಗೀಯ ಭೇದ) ಅಥವಾ ರೆಡ್ಲೈನಿಂಗ್ಗೆ ದೀರ್ಘಾವಧಿಯ ಇತಿಹಾಸವಿದೆ.ಕ್ಷೇತ್ರದ ವಿಮಾಗಾರಿಕೆ ಮತ್ತು ಮಾರಾಟ-ಪ್ರಚಾರ ಸಾಮಗ್ರಿಗಳು, ನ್ಯಾಯಾಲಯದ ಪತ್ರಗಳ ಅವಲೋಕನ ಹಾಗೂ ತಮ್ಮ ಮಧ್ಯವರ್ತಿಗಳಿಂದ ನಡೆಸಲಾಗುವ ಸರ್ಕಾರೀ ಪ್ರಾಯೋಜಿತ ಉದ್ದಿಮೆ, ಸಮುದಾಯ ಮತ್ತು ಶೈಕ್ಷಣಿಕ ಸಂಶೋಧನಾ ಅಧ್ಯಯನಗಳಿಂದ ದೃಢಪಟ್ಟಿರುವ ಒಂದಂಶವಿದು: ವಿಮಾ ಕ್ಷೇತ್ರದ ನೀತಿ-ನಿಯಮಗಳು ಮತ್ತು ಪ್ರಯೋಗಗಳ ಮೇಲೆ ಜನಾಂಗೀಯತೆ ದೀರ್ಘಾವಧಿಯಿಂದಲೂ ಪ್ರಭಾವ ಬೀರುತ್ತಾ ಬಂದಿದೆ.
ಕ್ರೆಡಿಟ್-ಆಧಾರಿತ ವಿಮಾ ಸಂಗತಿಗಳು ಮತ್ತು ವಾಹನ ವಿಮೆ ಕುರಿತ ಅಧ್ಯಯನದ ವರದಿಯನ್ನು ಸಂಯುಕ್ತ ವಹಿವಾಟು ಆಯೋಗವು 2007ರ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತು. ಗ್ರಾಹಕರು ಸಲ್ಲಿಸಬಹುದಾದ ಪರಿಹಾರ ಬೇಡಿಕೆಗಳ ಬಗ್ಗೆ ಮುನ್ಸೂಚನೆಯನ್ನು ಈ ಸಂಗತಿಗಳು ಪರಿಣಾಮಕಾರಿಯಾಗಿ ನೀಡಬಲ್ಲವು ಎಂದು ಅಧ್ಯಯನವು ಪತ್ತೆಮಾಡಿದೆ. (http://www2.ftc.gov/os/2007/07/P044804FACTA_Report_Credit-Based_Insurance_Scores.pdf Archived 2009-05-11 ವೇಬ್ಯಾಕ್ ಮೆಷಿನ್ ನಲ್ಲಿ.)
ಎಲ್ಲಾ ರಾಜ್ಯಗಳಲ್ಲಿಯೂ ಸಹ ಅವರ ನಿಯಂತ್ರಣಾ ಶಾಸನಗಳಲ್ಲಿ ಅಥವಾ ನ್ಯಾಯಸಮ್ಮತ ವಹಿವಾಟು ಕಾಯಿದೆಗಳಲ್ಲಿ, ದರಗಳನ್ನು ನಿಗದಿಪಡಿಸಿ ವಿಮೆಯನ್ನು ಲಭ್ಯಗೊಳಿಸುವುದರಲ್ಲಿ ರೆಡ್ಲೈನಿಂಗ್ ಎನ್ನಲಾದ ನ್ಯಾಯಸಮ್ಮತವಲ್ಲದ ತಾರತಮ್ಯವನ್ನು ನಿಷೇಧಿಸುವ ನಿಯಮವಿದೆ.
ವಿಮೆಕಂತು ಮತ್ತು ವಿಮೆಕಂತು ದರ ರಚನೆಗಳನ್ನು ನಿರ್ಣಯಿಸುವುದರಲ್ಲಿ, ಸ್ಥಳ, ಲಭ್ಯ ಮಾಹಿತಿ, ಲಿಂಗ, ಉದ್ಯೋಗ, ವೈವಾಹಿಕ ಸ್ಥಿತಿಗತಿ ಮತ್ತು ಶಿಕ್ಷಣ ಮಟ್ಟಗಳಂತಹ ವಿಮೆಗಾರರು ಕಾರಣಗಳನ್ನು ಪರಿಗಣಿಸುತ್ತಾರೆ. ಆದರೂ, ಇಂತಹ ಕಾರಣಗಳ ಬಳಕೆಯನ್ನು ನ್ಯಾಯಸಮ್ಮತವಲ್ಲದ್ದು, ಕಾನೂನು ಬಾಹಿರವೂ ಮತ್ತು ತಾರತಮ್ಯವುಳ್ಳದ್ದು ಎಂದು ಪರಿಗಣಿಸಲಾಗಿದೆ; ಈ ಧೋರಣೆಯ ವಿರುದ್ಧ ಪ್ರತಿಕ್ರಿಯೆಯು, ವಿಮೆಗಾರರು ವಿಮೆಕಂತುಗಳನ್ನು ನಿರ್ಣಯಿಸುವ ರೀತಿಗಳ ಮತ್ತು ಬಳಕೆಯಾದ ಕಾರಣಗಳನ್ನು ಕುರಿತು ನಿಯಂತ್ರಣಾತ್ಮಕ ಹಸ್ತಕ್ಷೇಪಗಳ ಬಗ್ಗೆ ರಾಜಕೀಯ ವ್ಯಾಜ್ಯಗಳಿಗೆ ಕಾರಣವಾಗಿದೆ.
ನಷ್ಟವಾಗುವ ಸಾಧ್ಯತೆಯ ದೃಷ್ಟಿಕೋನದಿಂದ ಅಪಾಯವನ್ನು ಲೆಕ್ಕಿಸುವುದು ವಿಮೆಗಾರರ ಕೆಲಸವಾಗಿದೆ. ಅಧಿಕ ನಷ್ಟಕ್ಕೆ ಈಡಾಗುವುದನ್ನು ತಪ್ಪಿಸಲು, ಯಾವ ಕಾರಣದಿಂದಾಗಿ ನಷ್ಟವಾಗುತ್ತದೋ, ಅದಕ್ಕೆ ಹೆಚ್ಚಿನ ಶುಲ್ಕ ವಿಧಿಸಬೇಕು. ವಿಮಾ ಸಂಸ್ಥೆಗಳು ಋಣಪರಿಹಾರ ಸಮರ್ಥವಾಗಿರಬೇಕೆಂದಲ್ಲಿ, ವಿಮೆಯ ಈ ಮೂಲಭೂತ ತತ್ವವನ್ನು ಅವುಗಳು ಪಾಲಿಸಲೇಬೇಕು.[ಸಾಕ್ಷ್ಯಾಧಾರ ಬೇಕಾಗಿದೆ] ಹಾಗಾಗಿ, ಅಪಾಯಗಳನ್ನು ಲೆಕ್ಕಿಸಿ ವಿಮೆಕಂತನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿ ಸಂಭಾವ್ಯ ವಿಮೆದಾರರ ವಿರುದ್ಧದ ತಾರತಮ್ಯವು ವಿಮಾಗಾರಿಕೆಯ ಅಗತ್ಯ ಉಪ-ಉತ್ಪನ್ನವಾಗಿದೆ. ಉದಾಹರಣೆಗೆ, ಜೀವವಿಮೆಗಾಗಿ ಕಿರಿಯರಿಗೆ ಹೋಲಿಸಿದರೆ ವೃದ್ಧರಿಗೆ ಗಮನಾರ್ಹವಾಗಿ ಹೆಚ್ಚಿನ ವಿಮೆಕಂತಿನ ದರಗಳನ್ನು ವಿಮೆಗಾರರು ವಿಧಿಸುತ್ತಾರೆ. ಹೀಗಾಗಿ, ಕಿರಿಯರಿಗಿಂತಲೂ ವೃದ್ಧರನ್ನು ಅನ್ಯ ರೀತಿಯಲ್ಲಿ ನಡೆಸಿಕೊಳ್ಳಾಗುತ್ತದೆ (ಭೇದ ತೋರಲಾಗುತ್ತದೆ, ತಾರತಮ್ಯವೂ ಉಂಟು). ಈ ರೀತಿಯ ಭೇದಭಾವದ ಹಿಂದಿನ ಕಾರಣ, 'ವೃದ್ಧರು ಕಿರಿಯರಿಗಿಂತಲೂ ಬೇಗನೆ ಮರಣ ಹೊಂದುತ್ತಾರೆ, ಹಾಗಾಗಿ ನಷ್ಟದ ಅಪಾಯವು ಯಾವುದೇ ಕಾಲಾವಧಿಯಲ್ಲಿ ಹೆಚ್ಚಾಗಲಿದೆ; ಹೆಚ್ಚಿನ ಅಪಾಯದ ವಿರುದ್ಧ ರಕ್ಷಣೆ ಒದಗಿಸಲು ವಿಮೆಕಂತು ಅಧಿಕ ದರದಲ್ಲಿರಬೇಕು' ಎಂಬುದು ವಿಮೆಗಾರರ ಧೋರಣೆ. ಆದರೂ, ವಿಮಾಗಣಿತದ ದೃಷ್ಟಿಕೋನದಿಂದ ಯಾವುದೇ ಸಮರ್ಪಕ ಕಾರಣವಿಲ್ಲದಿದ್ದರೂ, ವಿಮೆದಾರರನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳುವುದು ಕಾನೂನುಬಾಹಿರ ತಾರತಮ್ಯ.
ನ್ಯಾಯಸಮ್ಮತ ಮತ್ತು ವಿಮಾಗಣಿತದ ದೃಷ್ಟಿಕೋನದಿಂದ ಸಮಂಜಸವಾದ ಕಾರಣಗಳ ಬಳಕೆಯು ನಿಷೇಧವಾಗಿರುವುದು ಚರ್ಚೆಯಲ್ಲಿ ಕಾಣೆಯಾಗಿರುವ ವಿಚಾರಗಳಾಗಿವೆ; ಅರ್ಥಾತ್ ಅಪಾಯಕ್ಕೆ ವಿಧಿಸಲಾದ ವಿಮೆಕಂತಿನ ದರವು ಸಾಕಷ್ಟಿಲ್ಲ ಎಂದು ಹೇಳುವುದು ವ್ಯವಸ್ಥೆಯಲ್ಲಿನ ನ್ಯೂನತೆಯನ್ನು ಗುರುತಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ನ್ಯೂನತೆಯನ್ನು ಸರಿಪಡಿಸುವ ವೈಫಲ್ಯದ ಅರ್ಥವು ದಿವಾಳಿ ಸ್ಥಿತಿಯನ್ನು ಸೂಚಿಸಿ, ಆ ವಿಮಾಸಂಸ್ಥೆಯ ವಿಮೆದಾರರೆಲ್ಲರಿಗೂ ಸಂಕಷ್ಟವನ್ನು ತಂದೊಡ್ಡುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ಈ ನ್ಯೂನತೆಯನ್ನು ಸರಿಪಡಿಸಲು ಆಯ್ಕೆಗಳು ಹೀಗಿವೆ: ಈ ನ್ಯೂನತೆಯನ್ನು ಇತರೆ ಪಾಲಿಸಿದಾರರಿಗೆ ಅಥವಾ ಸರ್ಕಾರಕ್ಕೆ ತಗುಲಿಸುವುದು (ಅರ್ಥಾತ್ ಸಂಸ್ಥೆಯ ಹೊರಗೆ ಮತ್ತು ಸಮಾಜಕ್ಕೆ ಬಾಹ್ಯೀಕರಿಸುವುದು).[ಸಾಕ್ಷ್ಯಾಧಾರ ಬೇಕಾಗಿದೆ]
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವ್ಯಾಪಾರ ವಿಧಾನ ಹಕ್ಕುಸ್ವಾಮ್ಯಈಗ ವಿಮೆಯ ಹೊಸ ಹೊಸ ಮಾದರಿಗಳನ್ನು ರೂಪಿಸುತ್ತಿದ್ದು ಅವುಗಳನ್ನು ಬೇರೆಯವರು ನಕಲು ಮಾಡುವುದರ ವಿರುದ್ಧ ವಿಮಾ ರಕ್ಷಣೆ ಪಡೆಯಬಹುದಾಗಿದೆ.ಆಗ ರೂಪಿಸಲಾದ ಹೊಸ ಉತ್ಪನ್ನವು ಸ್ವಾಮ್ಯದ ಸನ್ನದು ಪಡೆದಂತಾಗುತ್ತದೆ.
ಬಳಕೆ ಆಧಾರಿತ ವಾಹನ ವಿಮೆಇತ್ತೀಚಿಗೆ ಹಕ್ಕುಸ್ವಾಮ್ಯಕ್ಕೊಳಪಟ್ಟ ಹೊಸ ವಿಮಾ ಉತ್ಪನ್ನ . U.S. ವಾಹನ ವಿಮೆ ಕಂಪನಿಯಾದ ಪ್ರೋಗ್ರೆಸೀವ್ ಆಟೋ ಇನ್ಷೂರೆನ್ಸ್ (ಯು.ಎಸ್ ಪೇಟೆಂಟ್ ೫೭,೯೭,೧೩೪) ಮತ್ತು ಸ್ಪಾನಿಷ್ ಸ್ವತಂತ್ರ ಅವಿಷ್ಕಾರಕರಾದ ಸಾಲ್ವೆಡರ್ ಮಿಂಗ್ವಿಜನ್ ಪೆರೆಜ್ (EP 0700009) ಸ್ವತಂತ್ರವಾಗಿ ಅವಿಷ್ಕಾರಿಸಿ, ಹಕ್ಕಸ್ವಾಮ್ಯವನ್ನು ಪಡೆದುಕೊಂಢ ಮೊದಲ ಪ್ರಮುಖ ಸಂಸ್ಥೆಗಳು.
ವಿಮಾ ಮಾರುಕಟ್ಟೆಗೆ ದೊಡ್ಡ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸುವಾಗ, ಅವುಗಳಿಂದ ಹಕ್ಕುಸ್ವಾಮ್ಯ ರಕ್ಷಣೆ ನೀಡುವುದರಿಂದ ಹಲವು ಸ್ವತಂತ್ರ ಆವಿಷ್ಕಾರಕರು ಹಕ್ಕುಸ್ವಾಮ್ಯದ ಪರ ಇದ್ದಾರೆ. ವಿಮಾ ಕ್ಷೇತ್ರದಲ್ಲಿ ಹೊಸ ಹಕ್ಕುಸ್ವಾಮ್ಯ ಪಡೆಯಲು ಮುಂದಾಗಿರುವವರಲ್ಲಿ U.S.ನ ಸ್ವತಂತ್ರ ಆವಿಷ್ಕಾರಕರ ಪಾಲು 70%ನಷ್ಟಿದೆ.
ವಿಮಾ ಉತ್ಪನ್ನಗಳ ಹಕ್ಕುಸ್ವಾಮ್ಯ ಪಡೆಯುವುದನ್ನು ಹಲವಾರು ವಿಮಾ ಕಾರ್ಯನಿರ್ವಾಹಕರು ವಿರೋಧಿಸುತ್ತಾರೆ. ಏಕೆಂದರೆ ಅದು ಅವರಿಗೆ ಹೊಸ ಅಪಾಯವೊಡ್ಡುತ್ತದೆ.ಉದಾಹರಣೆಗೆ, ಬ್ಯಾನ್ಕೋರ್ಪ್ ಅನ್ವೇಷಿಸಿದ ಮತ್ತು ಹಕ್ಕುಸ್ವಾಮ್ಯ ಮಾಡಿಸಲ್ಪಟ್ಟ ಜೀವವಿಮಾ ಉತ್ಪನ್ನಕ್ಕೆ ಸಂಬಂಧಿತ ಉದ್ಯಮ ರಹಸ್ಯದ ಕಳವು ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯನ್ನು ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ದಿ ಹಾರ್ಟ್ಫೋರ್ಡ್ ವಿಮಾ ಕಂಪನಿಯು ಸ್ವತಂತ್ರ ಅವಿಷ್ಕಾರಕ ಸಂಸ್ಥೆ ಬ್ಯಾನ್ಕೋರ್ಪ್ ಸರ್ವಿಸಸ್ಗೆ $80 ದಶಲಕ್ಷ ಪಾವತಿಸುವ ಪರಿಸ್ಥಿತಿ ಒದಗಿ ಬಂತು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಮೆ ಅನ್ವೇಷಣೆ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಸುಮಾರು 150 ಹೊಸ ಹಕ್ಕುಸ್ವಾಮ್ಯ ಬೇಡಿಕೆ ಅರ್ಜಿಗಳು ಬರುತ್ತವೆ. ಹಕ್ಕುಸ್ವಾಮ್ಯ ವಿತರಣೆ ದರವು 2002ರಲ್ಲಿ 15ರಷ್ಟಿದ್ದು, ಇದು 2006ರಲ್ಲಿ 44ರಷ್ಟು ಏರಿಕೆ ಕಂಡಿದೆ.
ಅವಿಷ್ಕಾರಕರು ತಮ್ಮ ವಿಮೆ U.S. ಹಕ್ಕುಸ್ವಾಮ್ಯ ಅರ್ಜಿಗಳನ್ನು ಹಕ್ಕುಸ್ವಾಮ್ಯಕ್ಕಾಗಿ ಸಾರ್ವಜನಿಕರ ಮರುಪರಿಶೀಲನೆಗೆ ಒಳಪಡಿಸಬಹುದು. ಮೊದಲ ವಿಮೆ ಹಕ್ಕುಸ್ವಾಮ್ಯ ಅರ್ಜಿಯನ್ನು US2009005522 “ಅಪಾಯ ಮೌಲ್ಯಮಾಪನ ಕಂಪನಿ” Archived 2009-05-10 ವೇಬ್ಯಾಕ್ ಮೆಷಿನ್ ನಲ್ಲಿ.ಯು ಪ್ರಕಟಿಸಿದೆ. ಅದನ್ನು ಮಾರ್ಚ್ 6, 2009ರಲ್ಲಿ ಪ್ರಕಟಿಸಿತು. ಈ ಹಕ್ಕುಸ್ವಾಮ್ಯ ಅರ್ಜಿಯು ಬದಲಾಗುತ್ತಿರುವ ವಿಮಾ ಕಂಪನಿಗಳ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ವಿಧಾನವನ್ನು ವಿವರಿಸುತ್ತದೆ.
ಕೆಲವು ನಿರ್ದಿಷ್ಟ ವಿಮಾ ಉತ್ಪನ್ನಗಳು ಮತ್ತು ನಡವಳಿಕೆಗಳು ಬಾಡಿಗೆ ಪ್ರೇರಿತ ಎಂಬ ಟೀಕೆಗೆ ಗುರಿಯಾಗಿವೆ.[ಸಾಕ್ಷ್ಯಾಧಾರ ಬೇಕಾಗಿದೆ]ದುರ್ಘಟನೆಯ ಅಪಾಯದಿಂದ ರಕ್ಷಿಸುವುದು ಮಾತ್ರವಲ್ಲದೆ, ತೆರಿಗೆಗಳು ಕಡಿಮೆಯಾಗುತ್ತದೆ , ಕಾನೂನು ಸೌಲಭ್ಯಗಳು ದೊರೆಯುವುದರಿಂದ, ಕೆಲವು ವಿಮಾ ಉತ್ಪನ್ನಗಳು ಮತ್ತು ನಡವಳಿಕೆಗಳು ಪ್ರಾಥಮಿಕವಾಗಿ ಉಪಯುಕ್ತವಾಗಿದೆ. ಉದಾಹರಣೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನ ತೆರಿಗೆ ಕಾನೂನಿನಡಿ ಚರ ವರ್ಷಾಶನ ಮತ್ತು ಚರ ಜೀವ ವಿಮೆಯ ಹೆಚ್ಚಿನ ಮಾಲೀಕರು ವಿಮಾಕಂತಿನ ಪಾವತಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು ಮತ್ತು ವಿಮಾಕಂತನ್ನು ಹಿಂಪಡೆಯುವವರೆಗೆ ಅವರ ಹೂಡಿಕೆಯ ಮೇಲಿನ ಯಾವುದೇ ತೆರಿಗೆಯು ವ್ಯತ್ಯಾಸಗೊಳ್ಳಬಹುದು ಅಥವಾ ಕಡಿಮೆಯಾಗಬಹುದು. ಜನರು ಈ ಉತ್ಪನ್ನಗಳನ್ನು ಬಳಸಲು ಕೆಲವೊಮ್ಮೆ ಈ ತೆರಿಗೆ ಮುಂದೂಡಿಕೆಗಳು ಏಕಮಾತ್ರ ಕಾರಣವಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಇನ್ನೊಂದು ಉದಾಹರಣೆಯೆಂದರೆ ಸ್ಥಿರಾಸ್ತಿ ತೆರಿಗೆಯನ್ನು ಪಾವತಿಸುವ ಹಿಂದಕ್ಕೆ ತೆಗೆದುಕೊಳ್ಳಲಾಗದ ನಂಬಿಕೆಯಲ್ಲಿ ಜೀವವಿಮೆಯಿಂದ ಸ್ಥಿರಾಸ್ತಿ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆದುಕೊಳ್ಳುವ ಕಾನೂನುಬದ್ಧ ಮೂಲಭೂತ ವ್ಯವಸ್ಥೆಗಳಾಗಿವೆ.
Find more about Insurance at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
ನಿರ್ದಿಷ್ಟ ದೇಶದ ಲೇಖನಗಳು
This article uses material from the Wikipedia ಕನ್ನಡ article ವಿಮೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.