ವಿಧಾನ ಪರಿಷತ್ತು

ಭಾರತದ ರಾಜ್ಯಗಳಲ್ಲಿ ಎರಡು ಶಾಸಕಾಂಗಗಳನ್ನು ಹೊಂದಿರುವ ರಾಜ್ಯಗಳ ಮೇಲ್ಮನೆ ಎಂದು ಪರಿಗಣಿತವಾಗುವ ಶಾಸನ ಸಭೆಯೇ ವಿಧಾನ ಪರಿಷತ್.

೨೦೧೬ರ ಅಂಕಿ ಅಂಶದಂತೆ ಭಾರತದ ಇಪ್ಪತ್ತೊಂಬತ್ತು ರಾಜ್ಯಗಳ ಪೈಕಿ ಏಳು ರಾಜ್ಯಗಳು ಮಾತ್ರವೇ ವಿಧಾನ ಪರಿಷತ್ ವ್ಯವಸ್ಥೆ ಹೊಂದಿವೆ.

ಸದ್ಯಕ್ಕೆ ಕೇವಲ ಆರು ರಾಜ್ಯಗಳು ವಿಧಾನ ಪರಿಷತ್ ಹೊಂದಿವೆ.

  • ಆಂಧ್ರ ಪ್ರದೇಶ
  • ಬಿಹಾರ
  • ಕರ್ನಾಟಕ
  • ಮಹಾರಾಷ್ಟ್ರ
  • ತೆಲಂಗಾಣ
  • ಉತ್ತರಪ್ರದೇಶ

ವಿಧಾನ ಪರಿಷತ್ ಸದಸ್ಯತ್ವ

ಭಾರತದ ರಾಜ್ಯಗಳಿಗೆ ಸಂಬಂಧ ಪಟ್ಟಂತೆ ವಿಧಾನ ಸಭೆಯನ್ನು ವಿಸರ್ಜಿಸಲು ಕಾನೂನಿನಲ್ಲಿ ಅವಕಾಶವಿದೆ ಆದರೆ ವಿಧಾನ ಪರಿಷತ್ ಅನ್ನು ವಿಸರ್ಜಿಸಲು ಸಾಧ್ಯವಿಲ್ಲ. ಆದರಿಂದ ವಿಧಾನ ಪರಿಷತ್ ಅನ್ನು ಶಾಶ್ವತ ಶಾಸಕಾಂಗ ಎನ್ನಲಾಗುತ್ತದೆ. ಪ್ರತಿಯೊಬ್ಬ ವಿಧಾನ ಪರಿಷತ್ ಸದಸ್ಯನ ವಾಯಿದೆ ಆರು ವರ್ಷಗಳಾಗಿರುತ್ತವೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಕೇಂದ್ರದ ರಾಜ್ಯಸಭೆಯ ಮಾದರಿಯಲ್ಲಿಯೇ ವಿಧಾನ ಪರಿಷತ್ ನ ಮೂರನೇ ಒಂದರಷ್ಟು ಸದಸ್ಯರ ವಾಯಿದೆ ಪೂರ್ಣವಾಗುತ್ತದೆ.

ವಿಧಾನ ಪರಿಷತ್ ನ ಒಟ್ಟು ಸದಸ್ಯರ ಸಂಖ್ಯೆ ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಇರಬೇಕು. ಅಂದರೆ ೩:೧ ಅನುಪಾತದಲ್ಲಿರಬೇಕು. ಹಾಗಿದ್ದಾಗ್ಯೂ ವಿಧಾನ ಪರಿಷತ್ ನ ಸದಸ್ಯರ ಕನಿಷ್ಠ ಸಂಖ್ಯೆ ೪೦ ಕ್ಕೆ ಮೀರಿರಬೇಕು.

ಅರ್ಹತೆಗಳು ಮತ್ತು ಮಾನದಂಡಗಳು

ವಿಧಾನ ಪರಿಷತ್ ಸದಸ್ಯರಾಗಲು ಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

  • ಭಾರತೀಯ ನಾಗರೀಕನಾಗಿರಬೇಕು.
  • ಕನಿಷ್ಠ ೩೦ ವರ್ಷಗಳನ್ನು ಪೂರೈಸಿರಬೇಕು.
  • ಮಾನಸಿಕ ಅಸ್ವಸ್ಥೆಗಳಂತಹ ವಿಷಯಗಳಿಂದ ಬಳಲುತ್ತಿರಬಾರದು.
  • ಅವರು ಯಾವ ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಲು ಬಯಸುತ್ತಾರೋ ಆ ರಾಜ್ಯದಿಂದ ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿರಬಾರದು.
  • ಅದೇ ಸಮಯಕ್ಕೆ ಕೇಂದ್ರದಲ್ಲಿ ಲೋಕಸಭಾ ಅಥವಾ ರಾಜ್ಯ ಸಭಾ ಸದಸ್ಯರಾಗಿರಬಾರದು.

ಸದಸ್ಯರನ್ನು ಆಯ್ಕೆ ಮಾಡುವ ರೀತಿ

•ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ಇತರ ಸರ್ಕಾರಿ ಸಂಸ್ಥೆಗಳಾದ ನಗರಸಭೆ, ಪುರಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿಗಳು ಹಾಗು ಜಿಲ್ಲಾ ಪರಿಷತ್ತುಗಳಿಂದ ಚುನಾಯಿತರಾಗಿರುತ್ತಾರೆ. •ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಜನ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾಗುತ್ತಾರೆ. ಚುನಾಯಿತರಾಗುವ ವ್ಯಕ್ತಿಗಳು ವಿಧಾನ ಸಭೆಯ ಸದಸ್ಯರಾಗಿರಬಾರದು. •ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಪದವೀಧರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. •ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಹನ್ನೆರಡನೇ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. •ವಿಧಾನ ಪರಿಷತ್ ನ ಒಟ್ಟು ಸದಸ್ಯರಲ್ಲಿ ಆರನೇ ಒಂದರಷ್ಟು ಸದಸ್ಯರು ರಾಜ್ಯಪಾಲರಿಂದ ನೇರವಾಗಿ ನೇಮಕವಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯ್ಪಾಲರು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ.


ಮುಂಬರುವ ವಿಧಾನ ಪರಿಷತ್ತುಗಳು

  • ೨೦೧೦ರಲ್ಲಿ ಕೇಂದ್ರ ಸದನದಲ್ಲಿ ವಿಧಾನ ಪರಿಷತ್ತುಗಳ ಮರು ನವೀಕರಣಕ್ಕೆ ಕಾಯ್ದೆಯೊಂದನ್ನು ಎಂಟು ರಾಜ್ಯಗಳಿಗೆ ಅಂಗೀಕರಿಸಲಾಯಿತು.ಆದರೆ ತಮಿಳುನಾಡು ರಾಜ್ಯ ಮರುನವೀಕರಿಸದಂತೆ ತಡೆ ಹಿಡಿದಿದೆ. ಹಾಗು ರಾಜ್ಯಸಭೆಗೆ ತಮಿಳುನಾಡು ರಾಜ್ಯ ಸರ್ಕಾರ ವಿರೋಧ ತೋರಿದೆ.
  • ಕೇಂದ್ರ ಸಂಪುಟ ಸಭೆ ನವೆಂಬರ್ ೨೮ ೨೦೧೩ ರಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸಲು ಒಪ್ಪಿಗೆ ನೀಡಿದೆ.
  • ಒಡಿಶಾ ರಾಜ್ಯವು ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿನ ವಿಧಾನ ಪರಿಷತ್ತುಗಳ ಬಗ್ಗೆ ಅಧ್ಯಯನ ನಡೆಸಿ ಒಡಿಶಾದಲ್ಲೂ ವಿಧಾನ ಪರಿಷತ್ ರಚನೆಗೆ ಸಿದ್ಧತೆ ಮಾಡಿಕೊಂಡಿದೆ.

ಇವನ್ನೂ ನೋಡಿ

ಹೆಚ್ಚಿನ ಮಾಹಿತಿ

ಉಲ್ಲೇಖ

Tags:

ವಿಧಾನ ಪರಿಷತ್ತು ವಿಧಾನ ಪರಿಷತ್ ಸದಸ್ಯತ್ವವಿಧಾನ ಪರಿಷತ್ತು ಅರ್ಹತೆಗಳು ಮತ್ತು ಮಾನದಂಡಗಳುವಿಧಾನ ಪರಿಷತ್ತು ಸದಸ್ಯರನ್ನು ಆಯ್ಕೆ ಮಾಡುವ ರೀತಿವಿಧಾನ ಪರಿಷತ್ತು ಮುಂಬರುವ ಗಳುವಿಧಾನ ಪರಿಷತ್ತು ಇವನ್ನೂ ನೋಡಿವಿಧಾನ ಪರಿಷತ್ತು ಹೆಚ್ಚಿನ ಮಾಹಿತಿವಿಧಾನ ಪರಿಷತ್ತು ಉಲ್ಲೇಖವಿಧಾನ ಪರಿಷತ್ತು

🔥 Trending searches on Wiki ಕನ್ನಡ:

ಸಮಾಜಕನ್ನಡ ಸಾಹಿತ್ಯಮಿಂಚುಬಾರ್ಲಿಅನುನಾಸಿಕ ಸಂಧಿಡಾ ಬ್ರೋಶ್ರೀಶೈಲಸ್ವಾಮಿ ವಿವೇಕಾನಂದಸಂಯುಕ್ತ ರಾಷ್ಟ್ರ ಸಂಸ್ಥೆಗ್ರಂಥಾಲಯಗಳುಜಿ.ಎಸ್.ಶಿವರುದ್ರಪ್ಪದ್ವಿಗು ಸಮಾಸದೀಪಾವಳಿಬಹಮನಿ ಸುಲ್ತಾನರುಕರ್ನಾಟಕ ವಿಧಾನ ಪರಿಷತ್ಸಾಲ್ಮನ್‌ಬಾಲ್ಯ ವಿವಾಹಜೀವವೈವಿಧ್ಯಪ್ರಬಂಧ ರಚನೆಭೂಮಿಸವದತ್ತಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕೇರಳದಯಾನಂದ ಸರಸ್ವತಿಸಿಗ್ಮಂಡ್‌ ಫ್ರಾಯ್ಡ್‌ಒಂದನೆಯ ಮಹಾಯುದ್ಧಕಾವೇರಿ ನದಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬ್ರಿಕ್ಸ್ ಸಂಘಟನೆಮಹಾತ್ಮ ಗಾಂಧಿಜೈನ ಧರ್ಮತೆನಾಲಿ ರಾಮಕೃಷ್ಣನಿರಂಜನಸುದೀಪ್ರಾಮ ಮಂದಿರ, ಅಯೋಧ್ಯೆಹೃದಯಕಲಬುರಗಿಕನ್ನಡದಲ್ಲಿ ಪ್ರವಾಸ ಸಾಹಿತ್ಯಹರಪ್ಪಶ್ರೀ ರಾಮಾಯಣ ದರ್ಶನಂಭಾರತೀಯ ಜನತಾ ಪಕ್ಷಮಾದಿಗಕರ್ಬೂಜಹೂವುಸಿದ್ದಲಿಂಗಯ್ಯ (ಕವಿ)ಬಾದಾಮಿಅಮೃತಬಳ್ಳಿಶ್ರೀವಿಜಯಶ್ಚುತ್ವ ಸಂಧಿಮಾವುಅಶೋಕನ ಶಾಸನಗಳುದಲಿತಶಾಲೆರನ್ನವಿಷ್ಣುವರ್ಧನ್ (ನಟ)ಭಾರತದ ಜನಸಂಖ್ಯೆಯ ಬೆಳವಣಿಗೆಮಲೈ ಮಹದೇಶ್ವರ ಬೆಟ್ಟಮೂಢನಂಬಿಕೆಗಳುರಚಿತಾ ರಾಮ್ಚೋಳ ವಂಶಜಾನಪದಶ್ರೀಕೃಷ್ಣದೇವರಾಯವೆಂಕಟೇಶ್ವರಸೂರತ್ಚೋಮನ ದುಡಿಕುವೆಂಪುಪರಿಸರ ರಕ್ಷಣೆಮಹಾಭಾರತಸಂಪತ್ತಿಗೆ ಸವಾಲ್ಗೋವಿಂದ ಪೈಭೀಷ್ಮಕರಗ (ಹಬ್ಬ)ಭಾರತೀಯ ಸಂವಿಧಾನದ ತಿದ್ದುಪಡಿಭಾರತಕಾವ್ಯಮೀಮಾಂಸೆಸಾಮ್ರಾಟ್ ಅಶೋಕಮಾಸ🡆 More