ವಿಜಯ ದಶಮಿ

ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ.

ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರ JJIಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.

ಪ್ರಾಮುಖ್ಯತೆ

ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.

ವಿಜಯದ ಶಮೀ

  • ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು.
  • ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.
  • ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು ನೋಡುವುದೆಂದರೆ ಪರಮ ಸಂತೋಷ. ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ.

ಹೊರಗಿನ ಸಂಪರ್ಕಗಳು



ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ ವಿಜಯ ದಶಮಿ 
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ


Tags:

ಚಾಂದ್ರಮಾನದಸರಾನವರಾತ್ರಿಪಾಂಡವರುರಾವಣಶರದೃತು

🔥 Trending searches on Wiki ಕನ್ನಡ:

ಗ್ರಹಕುಂಡಲಿಜ್ವರಹೊಂಗೆ ಮರಚಂದ್ರಯಾನ-೩ಬಿ. ಎಂ. ಶ್ರೀಕಂಠಯ್ಯಸಂಸ್ಕೃತ ಸಂಧಿಭಾಷಾ ವಿಜ್ಞಾನಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬ್ಯಾಂಕ್ಪುಸ್ತಕಅಂತಿಮ ಸಂಸ್ಕಾರಭಾರತದ ವಿಶ್ವ ಪರಂಪರೆಯ ತಾಣಗಳುಸನ್ನತಿಭ್ರಷ್ಟಾಚಾರಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಮೂಲಧಾತುಉಡುಪಿ ಜಿಲ್ಲೆಒಲಂಪಿಕ್ ಕ್ರೀಡಾಕೂಟನೀರುಕುವೆಂಪುವಿರೂಪಾಕ್ಷ ದೇವಾಲಯಪುತ್ತೂರುವರ್ಗೀಯ ವ್ಯಂಜನದಿನೇಶ್ ಕಾರ್ತಿಕ್ಕರ್ನಾಟಕದ ಸಂಸ್ಕೃತಿಗ್ರಂಥ ಸಂಪಾದನೆಪರಿಸರ ರಕ್ಷಣೆಪ್ರಚಂಡ ಕುಳ್ಳಸುಧಾ ಮೂರ್ತಿಮತದಾನಶಿರ್ಡಿ ಸಾಯಿ ಬಾಬಾಅನುಪಮಾ ನಿರಂಜನಕೈಗಾರಿಕೆಗಳುಬ್ರಾಹ್ಮಣರಾಗಿಅರ್ಥಶಾಸ್ತ್ರಹಣಉಪನಯನನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕ ವಿದ್ಯಾವರ್ಧಕ ಸಂಘಕರ್ನಾಟಕದ ಜಿಲ್ಲೆಗಳುಡಿ.ಎಸ್.ಕರ್ಕಿಅಂಬಿಗರ ಚೌಡಯ್ಯವಸಾಹತುಕಲ್ಯಾಣ ಕರ್ನಾಟಕಪ್ರಾಥಮಿಕ ಶಿಕ್ಷಣದಶರಥವೇಗೋತ್ಕರ್ಷಮನೆಬಾದಾಮಿಬ್ಲಾಗ್ಭಗತ್ ಸಿಂಗ್ಜಿ.ಪಿ.ರಾಜರತ್ನಂತಂತ್ರಜ್ಞಾನದ ಉಪಯೋಗಗಳುಬಂಗಾರದ ಮನುಷ್ಯ (ಚಲನಚಿತ್ರ)ಕರ್ನಾಟಕ ಐತಿಹಾಸಿಕ ಸ್ಥಳಗಳುಅರಿಸ್ಟಾಟಲ್‌ರಾಜಧಾನಿಗಳ ಪಟ್ಟಿವಿಧಿಎಂ. ಕೆ. ಇಂದಿರಕಲಿಕೆಗೋಪಾಲಕೃಷ್ಣ ಅಡಿಗವಿರಾಟ್ ಕೊಹ್ಲಿಸರ್ಪ ಸುತ್ತುತಾಪಮಾನಮಾನವನ ಪಚನ ವ್ಯವಸ್ಥೆಏಲಕ್ಕಿಭಗವದ್ಗೀತೆಯೇಸು ಕ್ರಿಸ್ತಕನ್ನಡದಲ್ಲಿ ಮಹಿಳಾ ಸಾಹಿತ್ಯಮಂಡಲ ಹಾವುಸಿದ್ದಲಿಂಗಯ್ಯ (ಕವಿ)ಭಾರತೀಯ ಮೂಲಭೂತ ಹಕ್ಕುಗಳುರಜಪೂತಗೂಗಲ್🡆 More