ವಿಜಯನಗರ ಜಿಲ್ಲೆ

ವಿಜಯನಗರ ಜಿಲ್ಲೆ ಭಾರತದ, ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆ, ಇದು ಕಲ್ಯಾಣ -ಕರ್ನಾಟಕ ಪ್ರದೇಶದಲ್ಲಿದೆ.

ಈ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿಸಲಾಯಿತು. ೨ನೇ ಅಕ್ಟೋಬರ್ ೨೦೨೧ ರಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಹೊಸ ಜಿಲ್ಲೆಯನ್ನು ಘೋಷಿಸಿದರು

ಐತಿಹಾಸಿಕವಾಗಿ ಇದು ವಿಜಯನಗರ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿತ್ತು ಹಂಪಿ ಮತ್ತು ವಿರೂಪಾಕ್ಷ ದೇವಸ್ಥಾನದ ಎಲ್ಲಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ .

ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆ

ಇತಿಹಾಸ

ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ವಿಜಯನಗರವು, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ ರಾಜ್ಯಗಳ ರಚನೆಯ ಸಮಯದಲ್ಲಿ, ೧೯೫೩ರಲ್ಲಿ ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಾಗ , ಈ ಪ್ರದೇಶವು ಮೈಸೂರು ರಾಜ್ಯದ ಬಳ್ಳಾರಿ ಜಿಲ್ಲೆಯ ಭಾಗವಾಗಿ ಸೇರ್ಪಡೆಗೊಂಡಿತು. ಪ್ರಸ್ತುತ ಈ ಜಿಲ್ಲೆಯು ಹೈದರಾಬಾದ್-ಕರ್ನಾಟಕ ಪ್ರದೇಶದ ಅಡಿಯಲ್ಲಿ ಬರುತ್ತದೆ,

೨೦೨೦ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಆರು ತಾಲ್ಲೂಕುಗಳನ್ನು ಬೇರ್ಪಡಿಸಿ, ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿ ಒಂದುಗೂಡಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವು ೧೮ನೇ ನವೆಂಬರ್ ೨೦೨೦ರಂದು ಈ ಜಿಲ್ಲೆಯ ರಚನೆಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿತು.

ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳು

ವಿಜಯನಗರ ಜಿಲ್ಲೆಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ, (ಎಸ್‍ಟಿ ವರ್ಗಕ್ಕೆ ಮೀಸಲಾಗಿದೆ) ಮತ್ತು ೫ ವಿಧಾನಸಭಾ ಸ್ಥಾನಗಳನ್ನು ಹೊಂದಿದೆ:

  • 88. ಹೂವಿನಹಡಗಲಿ (SC)
  • 89. ಹಗರಿಬೊಮ್ಮನಹಳ್ಳಿ (SC)
  • 90 ವಿಜಯನಗರ (ಸಾಮಾನ್ಯ)
  • 96. ಕುಡ್ಲಿಗಿ (ಎಸ್ಟಿ)
  • 104. ಹರಪನಹಳ್ಳಿ (ಸಾಮಾನ್ಯ)

ಹರಪನಹಳ್ಳಿಯ ವಿಧಾನಸಭಾ ಕ್ಷೇತ್ರವು ದಾವಣಗೆರೆಯ ಸಂಸದೀಯ ಕ್ಷೇತ್ರದ ಭಾಗವಾಗಿದೆ.

ಪ್ರವಾಸೋದ್ಯಮ

  • ಹಂಪಿ : ವಿಜಯನಗರದ ಅವಶೇಷಗಳಿಗೆ ಹೆಸರುವಾಸಿಯಾಗಿದೆ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.
  • ಮೈಲಾರ : ಮೈಲಾರಲಿಂಗೇಶ್ವರ ದೇವಸ್ಥಾನವು ಈಶ್ವರನಿಗೆ (ಮೈಲಾರ ರಾಜವಂಶ) ಮೀಸಲಾಗಿರುವ ಹಿಂದೂ ದೇವಾಲಯವಾಗಿದೆ.
  • ಅಂಕ ಸಮುದ್ರ ಪಕ್ಷಿಧಾಮ : ಇದು ಹಗರಿಬೊಮ್ಮನಹಳ್ಳಿ ತಾಲೂಕಿಗೆ ಸಂಬಂಧಿಸಿದ್ದು, ಉಪನಾಯಕನಹಳ್ಳಿಯಿಂದ 2 ಕೀ.ಮಿ ದೂರದ ಅಂಕಸಮುದ್ರ ಎಂಬ ಹಳ್ಳಿಗೆ ಸೇರಿದೆ. ವಿದೇಶಗಳಿಂದ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ.

ಶಿಕ್ಷಣ

  • ಹಂಪಿಯಲ್ಲಿರುವ ಸಂಶೋಧನಾ-ಆಧಾರಿತ ಸಾರ್ವಜನಿಕ ವಿಶ್ವವಿದ್ಯಾಲಯವಾದ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ಮತ್ತು ಅದರ ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸ್ಥಾಪಿತವಾಗಿದೆ.

ಉಲ್ಲೇಖಗಳು

Tags:

ವಿಜಯನಗರ ಜಿಲ್ಲೆ ಇತಿಹಾಸವಿಜಯನಗರ ಜಿಲ್ಲೆ ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳುವಿಜಯನಗರ ಜಿಲ್ಲೆ ಪ್ರವಾಸೋದ್ಯಮವಿಜಯನಗರ ಜಿಲ್ಲೆ ಶಿಕ್ಷಣವಿಜಯನಗರ ಜಿಲ್ಲೆ ಉಲ್ಲೇಖಗಳುವಿಜಯನಗರ ಜಿಲ್ಲೆಬಳ್ಳಾರಿಬಸವರಾಜ ಬೊಮ್ಮಾಯಿ

🔥 Trending searches on Wiki ಕನ್ನಡ:

ಭಾರತದ ಬ್ಯಾಂಕುಗಳ ಪಟ್ಟಿಹುಣ್ಣಿಮೆಕುಮಾರವ್ಯಾಸರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಉಗ್ರಾಣಆಂಡಯ್ಯಬೆಳವಲಪ್ರಜಾವಾಣಿಸರ್ವೆಪಲ್ಲಿ ರಾಧಾಕೃಷ್ಣನ್ರಾಷ್ಟ್ರಕೂಟಚಾಣಕ್ಯಚಂದ್ರಯಾನ-೩ಸಿ. ಆರ್. ಚಂದ್ರಶೇಖರ್ಭೂತಾರಾಧನೆಶಬರಿಸಮಾಜಶಾಸ್ತ್ರಬಾಗಿಲುಮಹಾವೀರಬೆಳಗಾವಿದೇವನೂರು ಮಹಾದೇವಮೊದಲನೆಯ ಕೆಂಪೇಗೌಡವಾಲ್ಮೀಕಿಗುರುರಾಜ ಕರಜಗಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಶ್ರೀರಂಗಪಟ್ಟಣಕುಕ್ಕೆ ಸುಬ್ರಹ್ಮಣ್ಯ ದೇವಾಲಯಕರ್ನಾಟಕ ಸಂಗೀತವರದಿಮಲ್ಲಿಕಾರ್ಜುನ್ ಖರ್ಗೆಪ್ರಜಾಪ್ರಭುತ್ವಯಕೃತ್ತುಹೆಚ್.ಡಿ.ಕುಮಾರಸ್ವಾಮಿಭಾರತದ ಜನಸಂಖ್ಯೆಯ ಬೆಳವಣಿಗೆರಾವಣಹೊಂಗೆ ಮರಕೇಶಿರಾಜಅಳಿಲುವ್ಯಂಜನರಾಷ್ಟ್ರೀಯ ಸೇವಾ ಯೋಜನೆಎರಡನೇ ಮಹಾಯುದ್ಧಸಿದ್ಧರಾಮಜಯಚಾಮರಾಜ ಒಡೆಯರ್ಗ್ರಹಣಆಟಗಾರ (ಚಲನಚಿತ್ರ)ವಾಣಿವಿಲಾಸಸಾಗರ ಜಲಾಶಯಸೀತೆಚಂದ್ರಯು.ಆರ್.ಅನಂತಮೂರ್ತಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸೀಬೆಪಂಚ ವಾರ್ಷಿಕ ಯೋಜನೆಗಳುರಾಷ್ಟ್ರೀಯ ಶಿಕ್ಷಣ ನೀತಿಗಾದೆನಾಗರೀಕತೆಮಹಮದ್ ಬಿನ್ ತುಘಲಕ್ಭಾರತದ ಬುಡಕಟ್ಟು ಜನಾಂಗಗಳುಋತುರವಿಚಂದ್ರನ್ಭಾರತದಲ್ಲಿ ಮೀಸಲಾತಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕರ್ನಾಟಕ ವಿಶ್ವವಿದ್ಯಾಲಯಮೂಲಧಾತುಕ್ರಿಯಾಪದತತ್ಸಮ-ತದ್ಭವಗ್ರಾಮ ಪಂಚಾಯತಿಪುನೀತ್ ರಾಜ್‍ಕುಮಾರ್ರಾಯಚೂರು ಜಿಲ್ಲೆಅಶ್ವತ್ಥಾಮಹಿಂದೂ ಮಾಸಗಳುಗಂಗಾಅಕ್ಕಮಹಾದೇವಿಭಾರತದ ಚುನಾವಣಾ ಆಯೋಗಸಂಪ್ರದಾಯಸಿದ್ದರಾಮಯ್ಯಭೂಮಿ🡆 More