ವಿಕ್ರಮಾರ್ಜುನ ವಿಜಯ

ಕನ್ನಡದ ಆದಿಕವಿಯೆಂದು ಹೆಸರುವಾಸಿಯಾದ ಪಂಪನು ಬರೆದ ಮಹಾಭಾರತ ಪಂಪಭಾರತ.

ವಿಕ್ರಮಾರ್ಜುನ ವಿಜಯ ಕೃತಿಯನ್ನು ಪಂಪನು ಆರು ತಿಂಗಳಿನಲ್ಲಿ ಬರೆದು ಮುಗಿಸಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಈ ಕೃತಿಯಲ್ಲಿ ಲೌಕಿಕವನ್ನು ಅಂದರೆ ಲೋಕದ ವ್ಯಾಪಾರ ವ್ಯವಹಾರವನ್ನು,ನಯಗುಣ ಗರಿಮೆಗಳನ್ನು ತಿಳಿದುಕೊಳ್ಳಬಹುದೆನ್ನುತ್ತಾನೆ ಪಂಪ.

ಇತಿವೃತ್ತ

  • ಪಂಪನ ಇತಿವೃತ್ತ ಸಾರುವ ಶಾಸನಗಳು -೧)ಗಂಗಾಧರ ಶಾಸನ

ಪಂಪನ ಕೃತಿಗಳು

ಪಂಪನು ಒಂದು ಧಾರ್ಮಿಕ ಕಾವ್ಯವನ್ನು ಮತ್ತೊಂದು ಲೌಕಿಕ ಕಾವ್ಯವನ್ನು ರಚಿಸಿದ್ದಾನೆ.

  1. ಪಂಪನ ಮೊದಲನೆಯ ಕೃತಿ ಆದಿಪುರಾಣ.
  2. ಎರಡನೆಯ ಕೃತಿ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ.


ಪಂಪಭಾರತ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.ಈ ಕಥೆಯ ನಾಯಕ ಅರ್ಜುನ.ಇಲ್ಲಿ ಪಂಪ ತನ್ನ ಆಶ್ರಯದಾತ,ಮಿತ್ರನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.ಈ ಕೃತಿಯ ಪ್ರಕಾರ ದ್ರೌಪದಿ ವಿವಾಹವಾಗುವುದು ಅರ್ಜುನನನ್ನು ಮಾತ್ರ.ತನ್ನ ರಾಜ ಅರಿಕೇಸರಿಗೆ ಹೋಲಿಸಿ ಬರೆದ ಕಾರಣ ಪಂಪ ಮಹಾಭಾರತದ ಕಥೆಯಲ್ಲಿ ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಅಸಾಧಾರಣವಾದ ಪ್ರತಿಭೆ ಹಾಗೂ ಸೌಂದರ್ಯದಿಂದ ಕೂಡಿದ ಈ ಕಾವ್ಯದ ಕೊನೆಯಲ್ಲಿ ಅರ್ಜುನನೊಡನೆ ಸಿಂಹಾಸನವನ್ನೇರುವವಳು ಸುಭದ್ರೆ! ಇವನು ಹತ್ತನೆಯ ಶತಮಾನಕ್ಕೆ ಸೇರಿದವನು.ಪಂಪಭಾರತ ಕಾವ್ಯವು ಗದ್ಯ ಪದ್ಯ ಮಿಶ್ರಣದ ಒಂದು ಚಂಪೂ ಕಾವ್ಯ.ಪಂಪ ಕವಿ ತನ್ನ ಕಥಾಭಿತ್ತಿಯಾಗಿ ಆರಿಸಿಕೊಂಡಿದ್ದು ಸಂಸ್ಕೃತ ವ್ಯಾಸಭಾರತ ಕಥೆ. ಕನ್ನಡ ಭಾಷೆಯ ಆದಿಕಾವ್ಯವಾಗಿರುವುದು ಇದರ ವೈಶಿಷ್ಟ್ಯ.ಹಿಂದಿನ ಪ್ರಸಿದ್ಧ ಮಹಾಕಾವ್ಯಗಳಂತಲ್ಲದೆ ನಗರ,ಸಮುದ್ರ, ಪರ್ವತ, ಋತು ಮುಂತಾಗಿ ಪ್ರಸಿದ್ಧವಾಗಿರುವ 18 ವರ್ಣನೆಗಳಿಗೆ ಯಥೋಚಿತ್ತವಾಗಿ ಪ್ರಾಮುಖ್ಯಕೊಟ್ಟು ನಾಯಕನೊಬ್ಬನ ಚರಿತ್ರೆಯ್ನು ಅವನ ಜನನದಿಂದ ಮೊದಲ್ಗೊಂಡು ಅವನು ಅತಿಶಯವಾದ ಅಭ್ಯುದಯವನ್ನು ಪಡೆಯುವವರೆಗೆ ವರ್ಣಿಸಿರುವುದು ಈ ಕಾವ್ಯದ ಸಾಮಾನ್ಯ ಲಕ್ಷಣವಾಗಿದೆ. ಇದರಲ್ಲಿ 14 ಆಶ್ವಾಸಗಳಿವೆ. ಇಲ್ಲಿಯೂ ನಡುನಡುವೆ ಸಣ್ಣ ದೊಡ್ಡ ಗದ್ಯಖಂಡಗಳು ದಟ್ಟವಾಗಿ ಹೆಣೆದುಕೊಂಡು ವಿವಿಧ ಪದ್ಯಜಾತಿಗಳ 1609 ಪದ್ಯಗಳಿವೆ. ಈ ಪದ್ಯಜಾತಿಗಳಲ್ಲಿ ಕಂದಪದ್ಯಗಳೂ ಆ ಬಳಿಕ ಖ್ಯಾತ ಕರ್ಣಾಟಕಗಳು ಸಂಖ್ಯಾಬಾಹುಳ್ಯ ಪಡೆದಿವೆ. ರಗಳೆ, ಪಿರಿಯಕ್ಕರಗಳು ಇಲ್ಲಿ ಕಂಡುಬರುತ್ತವೆ. ಪಂಪಕವಿಯೇ ಹೇಳುವಂತೆ ಇದು ಆರು ತಿಂಗಳಲ್ಲಿ ಬರೆದು ಮುಗಿಸಿದನಂತೆ ಇದರ ರಚನೆಯ ಭಾಷೆ ಶೈಲಿಗಳ ಹದ ಇಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರುತ್ತದೆ ಹೀಗೆ ವ್ಯಾಸಭಾರತದಂತಹ ಒಂದು ದೊಡ್ಡಗ್ರಂಥದ ಕಥಾವಸ್ತುವನ್ನು ಸಮಗ್ರವಾಗಿ,ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ.

ನೋಡಿ

ಪೂರಕ ಓದಿಗೆ

  • ಪಂಪಭಾರತ- ವಿಕಿಸೋರ್ಸ್‍ನಲ್ಲಿ
ವಿಕ್ರಮಾರ್ಜುನ ವಿಜಯ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

Tags:

ವಿಕ್ರಮಾರ್ಜುನ ವಿಜಯ ಇತಿವೃತ್ತವಿಕ್ರಮಾರ್ಜುನ ವಿಜಯ ಪಂಪನ ಕೃತಿಗಳುವಿಕ್ರಮಾರ್ಜುನ ವಿಜಯ ನೋಡಿವಿಕ್ರಮಾರ್ಜುನ ವಿಜಯ ಪೂರಕ ಓದಿಗೆವಿಕ್ರಮಾರ್ಜುನ ವಿಜಯ ಉಲ್ಲೇಖವಿಕ್ರಮಾರ್ಜುನ ವಿಜಯಪಂಪಮಹಾಭಾರತ

🔥 Trending searches on Wiki ಕನ್ನಡ:

ಸರ್ಪ ಸುತ್ತುಭಾರತದ ಸಂವಿಧಾನಪ್ಲಾಸಿ ಕದನಭಾರತೀಯ ಅಂಚೆ ಸೇವೆನಾಮಪದಬಿ. ಆರ್. ಅಂಬೇಡ್ಕರ್ಜಾಗತೀಕರಣಸಮುದ್ರಗಾದೆಬೀಚಿಧಾನ್ಯಸಾಗುವಾನಿವೀರಗಾಸೆಇಸ್ಲಾಂ ಧರ್ಮಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮಂತ್ರಾಲಯಪರಶುರಾಮಚ.ಸರ್ವಮಂಗಳಸ್ವಚ್ಛ ಭಾರತ ಅಭಿಯಾನಆಂಧ್ರ ಪ್ರದೇಶಕನ್ನಡ ವ್ಯಾಕರಣರವಿಚಂದ್ರನ್ಹಲ್ಮಿಡಿಗಣೇಶ ಚತುರ್ಥಿಚಂದ್ರಯಾನ-೩ಸುಧಾ ಚಂದ್ರನ್ಕನ್ನಡ ಬರಹಗಾರ್ತಿಯರುಹುಲಿಕರ್ನಾಟಕ ಸಂಗೀತಪ್ರೇಮಾಮಹಾಕವಿ ರನ್ನನ ಗದಾಯುದ್ಧಭಾರತದ ರಾಷ್ಟ್ರಪತಿರಾಜ್ಯಸಭೆಚಿಕ್ಕಬಳ್ಳಾಪುರಪ್ರೀತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯತಿಗಳಾರಿ ಲಿಪಿಎರಡನೇ ಮಹಾಯುದ್ಧಹುರುಳಿಬೆಂಗಳೂರುಭಾರತೀಯ ಭಾಷೆಗಳುಕೆಂಪುಕವನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕರ್ನಾಟಕದ ಶಾಸನಗಳುಕನ್ನಡ ಸಾಹಿತ್ಯವಿಮರ್ಶೆಹೂವುಕೈಗಾರಿಕಾ ಕ್ರಾಂತಿಬಾಲಕಾರ್ಮಿಕಪಾಪಚದುರಂಗಮೌರ್ಯ ಸಾಮ್ರಾಜ್ಯಅಲೆಕ್ಸಾಂಡರ್ಬೇಬಿ ಶಾಮಿಲಿದೇವತಾರ್ಚನ ವಿಧಿಕ್ರಿಕೆಟ್ವಿಧಾನ ಸಭೆಟಿಪ್ಪು ಸುಲ್ತಾನ್ಕರ್ಬೂಜನಿರಂಜನಬಬಲಾದಿ ಶ್ರೀ ಸದಾಶಿವ ಮಠಗರ್ಭಧಾರಣೆಜ್ಞಾನಪೀಠ ಪ್ರಶಸ್ತಿನದಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಚಾಣಕ್ಯಯೋನಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಹೈನುಗಾರಿಕೆಸಂಗೊಳ್ಳಿ ರಾಯಣ್ಣದುರ್ಗಸಿಂಹಬರವಣಿಗೆಚೋಮನ ದುಡಿ🡆 More