ಲೇಡಿ ಗಾಗಾ

ಸ್ಟೇಜ್ ಹೆಸರು ಲೇಡಿ ಗಾಗಾ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದ ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ (ಮಾರ್ಚ್ ೨೮, ೧೯೮೬ ರಂದು ಜನಿಸಿದರು) ಇವರು ಅಮೇರಿಕಾದ ಒಬ್ಬ ಹಾಡುಗಾರ್ತಿ-ಕವನಬರಹಗಾರರಾಗಿದ್ದರು.

ರಲ್ಲಿ ನ್ಯೂಯಾರ್ಕ್ ನಗರದ ಲೋವರ್ ಈಸ್ಟ್ ಸೈಡ್‌ನ ರಾಕ್ ಸಂಗೀತ ದೃಶ್ಯದಲ್ಲಿ ಪಾಲ್ಗೊಂಡ ನಂತರ ಮತ್ತು ನಂತರದಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದ ಆರ್ಟ್ಸ್‌ನಲ್ಲಿ ದಾಖಲಾತಿಯನ್ನು ಪಡೆದ ನಂತರ, ಆಕೆಯು ಸ್ಟ್ರೀಮ್‌ಲೈನ್ ರೆಕಾರ್ಡ್ಸ್, ಇಂಟರ್‌ಸ್ಕೋಪ್ ರೆಕಾರ್ಡ್ಸ್‌ನ ಒಂದು ಪ್ರಕಾಶನ ಮುದ್ರೆಯಾಗಿತ್ತು. ಇಂಟರ್‌ಸ್ಕೋಪ್‌ನಲ್ಲಿನ ಮೊದಲ ಅವಧಿಯ ಸಮಯದಲ್ಲಿ, ಅವರು ತಮ್ಮ ಸಹ ಕಲಾಕಾರರಿಗೆ ಕವನಬರಹಗಾರರಾಗಿ ಕಾರ್ಯನಿರ್ವಹಿಸಿದರು ಮತ್ತು ರಾಪರ್ ಆಕೋನ್‌ರ ಗಮನವನ್ನು ತಮ್ಮೆಡೆಗೆ ಸೆಳೆದರು, ಆಕನ್ ಆಕೆಯ ಹಾಡುಗಾರಿಕೆಯ ಸಾಮರ್ಥ್ಯಗಳನ್ನು ಗುರುತಿಸಿದರು, ಮತ್ತು ತಮ್ಮ ಸ್ವಂತ ಲೇಬಲ್‌ ಕಾನ್ ಲೈವ್ ಡಿಸ್ಟ್ರಿಬ್ಯೂಷನ್‌ನಲ್ಲಿ ಆಕೆಯನ್ನು ದಾಖಲಾತಿ ಮಾಡಿಕೊಂಡರು.

ಲೇಡಿ ಗಾಗಾ
ಲೇಡಿ ಗಾಗಾ
ಹೆಸರುStefani Joanne Angelina Germanotta
ಹುಟ್ಟು (1986-03-28) ಮಾರ್ಚ್ ೨೮, ೧೯೮೬ (ವಯಸ್ಸು ೩೭)
New York, New York, U.S.
ಕ್ಷೇತ್ರ music

ಗಾಗಾ ತಮ್ಮ ಮೊದಲ ಸ್ಟೂಡಿಯೋ ಆಲ್ಬಮ್ ದ ಫೇಮ್ (೨೦೦೮) ನ ಬಿಡುಗಡೆಯ ನಂತರ ಪ್ರಖ್ಯಾತಿಯನ್ನು ಪಡೆದುಕೊಂಡರು, ಈ ಆಲ್ಬಮ್ ಒಂದು ಬೃಹತ್ ಯಶಸ್ವೀ ಆಲ್ಬಮ್ ಆಗಿತ್ತು ಮತ್ತು ಸಿಂಗಲ್ಸ್ "ಜಸ್ಟ್ ಡಾನ್ಸ್" ಮತ್ತು "ಪೋಕರ್ ಫೇಸ್" ನ ಜೊತೆಗೆ ಅಂತರಾಷ್ತ್ರೀಯ ಜನಪ್ರಿಯತೆಯನ್ನು ಸಾಧಿಸಿತು. ಈ ಆಲ್ಬಮ್ ಆರು ದೇಶಗಳ ದಾಖಲೆಯ ಚಾರ್ಟ್‌ನಲ್ಲಿ ಮೊದಲನೆಯ ಸ್ಥಾನವನ್ನು ಆಕ್ರಮಿಸಿಕೊಂಡಿತು, ಜಗತ್ತಿನಾದ್ಯಂತದ ಉತ್ತಮ-ಹತ್ತು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಗಳಿಸಿಕೊಂಡಿತು, ಮತ್ತು ಬಿಲ್‌ಬೋರ್ಡ್ ಡಾನ್ಸ್/ಎಲೆಕ್ಟ್ರಾನಿಕ್ ಆಲ್ಬಮ್ಸ್ ಚಾರ್ಟ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು ಅದೇ ರೀತಿಯಾಗಿ ಏಕಕಾಲದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಲ್‌ಬೋರ್ಡ್ ೨೦೦ ಚಾರ್ಟ್‌ನಲ್ಲಿ ಪ್ರಥಮ ಶ್ರೇಯಾಂಕವನ್ನು ಪಡೆದುಕೊಂಡಿತು. ಅದೇ ರೀತಿಯಾದ ಜಗತ್ತಿನಾದ್ಯಂತದ ಯಶಸ್ಸನ್ನು ಸಾಧಿಸುತ್ತ, ಇದರ ನಮ್ತರದ ಆಲ್ಬಮ್ ದ ಫೇಮ್ ಮಾನ್‌ಸ್ಟರ್ (೨೦೦೯) "ಬ್ಯಾಡ್ ರೋಮ್ಯಾನ್ಸ್" ಮತ್ತು ಮತ್ತು "ಟೆಲಿಫೋನ್" ಎಂಬ ಎರಡು ಜಾಗತಿಕ ಚಾರ್ಟ್-ಟಾಪಿಂಗ್ ಸಿಂಗಲ್ಸ್ ಅನ್ನು ಸಾಧಿಸಿತು ಮತ್ತು ದ ಫೇಮ್ ಬಾಲ್ ಟೂರ್ ಎಂಬ ಆಕೆಯ ಮೊದಲ ಟೂರ್ ಅನ್ನು ಸಮಾಪ್ತಿಗೊಳಿಸಿದ ಕೆಲವೇ ತಿಂಗಳುಗಳ ನಂತರದಲ್ಲಿ ದ ಮಾನ್‌ಸ್ಟರ್ ಬಾಲ್ ಟೂರ್ ಎಂಬ ಎರಡನೆಯ ಜಾಗತಿಕ ಹೆಲಿಂಗ್ ಕನ್ಸರ್ಟ್ ಟೂರ್ ಅನ್ನು ಪ್ರಾರಂಭಿಸುವುದಕ್ಕೆ ಸಹಾಯಮಾಡಿತು. ಅವರ ಎರಡನೆಯ ಸ್ಟೂಡಿಯೋ ಆಲ್ಬಮ್ ಬೊರ್ನ್ ದಿಸ್ ವೇ ಇದು ತನ್ನ "ಬಾರ್ನ್ ದಿಸ್ ವೇ" ಎಂಬ ನಾಮಸೂಚಕ ಸಿಂಗಲ್‌ನ ಬಿಡುಗಡೆಯ ನಂತರದಲ್ಲಿ ಮೇ ೨೩, ೨೦೧೧ ರಂದು ಬಿಡುಗಡೆಗೊಳ್ಳುವಂತೆ ಆಯೋಜಿಸಲಾಗಿತ್ತು, ಇದು ಜಗತ್ತಿನಾದ್ಯಂತದ ದೇಶಗಳಲ್ಲಿ ಪ್ರಥಮ-ಸ್ಥಾನವನ್ನು ಸಾಧಿಸಿತು ಮತ್ತು ಐದು ದಿನಗಳಲ್ಲಿ ಒಂದು ಮಿಲಿಯನ್ ಪ್ರತಿಗಳ ಮಾರಾಟವನ್ನು ಕಂಡ ಐಟ್ಯೂನ್ಸ್ ಇತಿಹಾಸದಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಮಾರಾಟವಾದ ಸಿಂಗಲ್ ಆಗಿತ್ತು.

ಗ್ಲಾಮ್ ರಾಕ್ ಕಲಾಕಾರರಾದ ಡೇವಿಡ್ ಬೋವೀ, ಎಲ್ಟನ್ ಜಾನ್ ಮತ್ತು ಕ್ವೀನ್ ಇವರುಗಳಿಂದ ಹಾಗೆಯೇ ಪಾಪ್ ಸಿಂಗರ್‌ಗಳಾದ ಮಡೋನಾ, ಮೈಕೆಲ್ ಜಾಕ್ಸನ್, ಮತ್ತು ಎಮಿ ವೈನ್‌ಹೌಸ್, ಇವರುಗಳಿಂದ ಪ್ರಭಾವಿತರಾದ ಗಾಗಾ ಪ್ರದರ್ಶನದಲ್ಲಿ ಮತ್ತು ಅವರ ಸಂಗೀತ ವೀಡಿಯೋಗಳಲ್ಲಿ ವಿನ್ಯಾಸದಲ್ಲಿನ ಶೈಲಿಯ ಬಾಹ್ಯ ಗ್ರಹಿಕೆಗಾಗಿ ಉತ್ತಮವಾಗಿ-ಗುರುತಿಸಲ್ಪಟ್ಟರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆಗಳು ಹನ್ನೆರಡು ನೊಮಿನೇಷನ್‌ಗಳಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಮಹಾನ್ ಸಾಧನೆಗಳ ಸಂಚಯಗಳನ್ನು ಸಾಧಿಸುವಂತೆ ಮಾಡಿತು; ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ; ಜಗತ್ತಿನಾದ್ಯಂತ ಹದಿನೈದು ಮಿಲಿಯನ್ ಪ್ರತಿಗಳು ಮತ್ತು ಐವತ್ತೊಂದು ಸಿಂಗಲ್ಸ್‌ಗಳ ಅಂದಾಜು ಮಾರಾಟ. ಬಿಲ್‌ಬೋರ್ಡ್ ಆಕೆಯನ್ನು ೨೦೧೦ ರಲ್ಲಿ ಆರ್ಟಿಸ್ಟ್ ಆಫ್ ದ ಇಯರ್ ಮತ್ತು ೨೦೧೦ ರ ಟಾಪ್ ಸೆಲ್ಲಿಂಗ್ ಆರ್ಟಿಸ್ಟ್ ಎಂಬ ಬಿರುದನ್ನು ನೀಡಿತು; ಆಕೆಯನ್ನು ೨೦೦೦ ನೇ ದಶಕದ ೭೩ ನೆಯ ಆರ್ಟಿಸ್ಟ್ ಎಂಬ ಶ್ರೇಯಾಂಕವನ್ನೂ ನೀಡಿತು. }ಗಾಗಾ ಟೈಮ್ ನಿಯತಕಾಲಿಕದ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಟೈಮ್ ೧೦೦ ಯಾದಿಯಲ್ಲಿ ಹೆಸರನ್ನು ಹೊಂದಿದ್ದರು ಹಾಗೆಯೇ ಫೋರ್ಬ್ಸ್ ಯಾದಿಯಲ್ಲಿನ ೧೦೦ ಹೆಚ್ಚಿನ ಪ್ರಭಾವಶಾಲಿಗಳ ಮತ್ತು ಜಗತ್ತಿನಲ್ಲಿನ ಪರಿಣಾಮಕಾರಿ ಪ್ರಖ್ಯಾತ ವ್ಯಕ್ತಿಗಳ ಯಾದಿಯಲ್ಲಿಯೂ ಇದ್ದರು.ಫೋರ್ಬ್ಸ್ ಆಕೆಯನ್ನು ತಮ್ಮ ಜಗತ್ತಿನ ೧೦೦ ಹೆಚ್ಚಿನ ಪ್ರಭಾವಶಾಲಿ ಮಹಿಳೆಯರ ವಾರ್ಷಿಕ ಯಾದಿಯಲ್ಲಿ ಏಳನೆಯ ಸ್ಥಾನವನ್ನೂ ನೀಡಿತು.

ಜೀವನ ಮತ್ತು ವೃತ್ತಿಜೀವನ

೧೯೮೬–೨೦೦೪: ಪ್ರಾರಂಭಿಕ ಜೀವನ

ಲೇಡಿ ಗಾಗಾ ಇವರು ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ ಎಂಬ ಹೆಸರಿನಿಂದ ನ್ಯೂಯಾರ್ಕ್ ನಗರದಲ್ಲಿ, ಇಟಾಲಿಯನ್ ಅಮೇರಿಕನ್ ಜೋಸೆಫ್ ಜರ್ಮಾನೊಟ್ಟಾ ಎಂಬ ಹೆಸರಿನ ಒಬ್ಬ ಇಂಟರ್‌ನೆಟ್ ಉದ್ಯಮಿ, ಮತ್ತು ಸಿಂಥಿಯಾರಿಗೆ (ನೀ ಬಿಸೆಟ್) ಹಿರಿಯ ಮಗಳಾಗಿ ಜನಿಸಿದರು. ಆಕೆಯು ಎಡಗೈಯನ್ನು-ಬಳಸುವವರಾಗಿದ್ದರು ಮತ್ತು ನಾಲ್ಕನೆಯ ವರ್ಷದಲ್ಲಿ ಪಿಯಾನೋ ಬಾರಿಸುವುದನ್ನು ಕಲಿಯುವುದಕ್ಕೆ ಪ್ರಾರಂಭಿಸಿದರು, ತಮ್ಮ ೧೩ ನೆಯ ವರ್ಷದಲ್ಲಿ ಮೊದಲ ಪಿಯಾನೋ ಕಿರುಗೀತೆಯನ್ನು ಬರೆದರು ಮತ್ತು ೧೪ ರ ವಯಸ್ಸಿನ ವೇಳೆಗೆ ಓಪನ್ ಮೈಕ್ ರಾತ್ರಿಗಳಲ್ಲಿ ಪ್ರದರ್ಶನವನ್ನು ನೀಡುವುದಕ್ಕೆ ಪ್ರಾರಂಭಿಸಿದರು. ಗಾಗಾ ಒಬ್ಬ ರೋಮನ್ ಕ್ಯಾಥೋಲಿಕ್ ಆಗಿ ಬೆಳೆದರು. ತಮ್ಮ ೧೧ ನೆಯ ವರ್ಷದಲ್ಲಿ ಗಾಗಾ ಮ್ಯಾನ್‌ಹಟನ್‌ನ ಅಪ್ಪರ್ ಈಸ್ಟ್ ಸೈಡ್‌ನಲ್ಲಿನ ಬಾಲಕಿಯರ ಒಂದು ಖಾಸಗಿ ರೋಮನ್ ಕ್ಯಾಥೋಲಿಕ್ ಶಾಲೆ ಕಾನ್ವೆಂಟ್ ಆಫ್ ದ ಸ್ಯಾಕ್ರೆಡ್ ಹಾರ್ಟ್ ನಲ್ಲಿ ದಾಖಲಾತಿಯನ್ನು ಪಡೆದರು, ಆದರೆ ಆಕೆಯು ಒಂದು ಉತ್ತಮ ಹಿನ್ನೆಲೆಯಿಂದ ಬಂದವರಲ್ಲ ಎಂಬ ಅಂಶದಿಂದ ನಿರ್ಬಂಧವನ್ನು ಹೇರಲ್ಪಟ್ಟರು, ಅವರು ಹೇಳಿದ್ದೇನೆಂದರೆ ಆಕೆಯ ತಂದೆತಾಯಿಗಳು "ಇಬ್ಬರೂ ಕೂಡ ಕೆಳ-ವರ್ಗದ ಕುಟುಂಬಗಳಿಂದ ಬಂದವರು, ಆದ್ದರಿಂದ ನಾವು ಎಲ್ಲ ರೀತಿಯಲ್ಲಿಯೂ ಕಾರ್ಯನಿರ್ವಹಿಸಿದ್ದೇವೆ - ನನ್ನ ತಾಯಿಯು ಎಂಟು ಘಂಟೆಯಿಂದ ಎಂಟು ಘಂಟೆಯವರೆಗೆ ಮನೆಯ ಹೊರಗಡೆ ಅಂದರೆ ಟೆಲಿಕಮ್ಯುನಿಕೇಷನ್ಸ್‌ನಲ್ಲಿ ಕೆಲಸ ಮಾಡುತ್ತಾರೆ, ಮತ್ತು ಹಾಗೆಯೇ ನನ್ನ ತಂದೆಯೂ ಕೂಡ."

ಹೈಸ್ಕೂಲ್ ಸಂಗೀತಗೋಷ್ಟಿಗಳಲ್ಲಿ ಒಬ್ಬ ಹುರುಪಿನ ನಟರಾಗಿದ್ದ ಗಾಗಾ ಗೈಸ್ ಎಂಡ್ ಡಾಲ್ಸ್‌ ನಲ್ಲಿ ಎಡೆಲೈಡ್ ಪಾತ್ರವನ್ನು ಮತ್ತು ಎ ಫನ್ನಿ ಥಿಂಗ್ ಹ್ಯಾಪನ್‌ಡ್ ಆನ್ ದ ವೇ ಟು ದ ಫೋರಮ್‌ ನಲ್ಲಿ ಫಿಲಿಯಾ ಪಾತ್ರವನ್ನು ನಿರ್ವಹಿಸಿದ್ದರು. ಅವರು ಹೈಸ್ಕೂಲ್‌ನಲ್ಲಿನ ತಮ್ಮ ಶೈಕ್ಷಣಿಕ ಜೀವನವನ್ನು "ತುಂಬಾ ಮೀಸಲಿರಿಸಿದ್ದ, ಹೆಚ್ಚಿನ ಅಧ್ಯಯನನಿರತವಾದ, ತುಂಬಾ ಶಿಸ್ತಿನ" ಜೀವನವಾಗಿತ್ತು ಎಂಬುದಾಗಿ ವರ್ಣಿಸುತ್ತಾರೆ ಆದರೆ ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದಂತೆ "ಸ್ವಲ್ಪ ಮಟ್ಟಿನ ಅಸುರಕ್ಷತೆಯಿಂದ ಕೂಡಿತ್ತು" ಎಂದು ಹೇಳಿದ್ದಾರೆ, "ತಾನು ತುಂಬಾ ಉದ್ರೇಕಕಾರಿ ಅಥವಾ ತುಂಬಾ ವಿಲಕ್ಷಣ ವ್ಯಕ್ತಿತ್ವವನ್ನು ಹೊಂದಿದ್ದ ಕಾರಣದಿಂದ ಗೇಲಿಗೊಳಗಾಗಲ್ಪಡುತ್ತಿದ್ದೆ, ಆದ್ದರಿಂದ ಅದನ್ನು ತಡೆಯುವ ಪ್ರಯತ್ನವನ್ನು ನಡೆಸಿದೆ". ಇನಾನು ಅಲ್ಲಿ ಸುರಕ್ಷಿತವಾಗಿರಲಿಲ್ಲ, ಮತ್ತು ಮನೋವಿಕಾರತೆಯೂ ಉಂಟಾಗುತ್ತಿತ್ತು." ಆಕೆಯ ಪರಿಚಿತರು ಆಕೆಯು ಆ ಶಾಲೆಯಲ್ಲಿ ಹೊಂದಿಕೊಂಡಿರಲಿಲ್ಲ ಎಂಬುದಾಗಿ ವಾದಿಸುತ್ತಾರೆ. "ಆಕೆಯು ಸ್ನೇಹಿತರ ಒಂದು ಉತ್ತಮ ಗುಂಪನ್ನು ಹೊಂದಿದ್ದರು; ಆಕೆ ಒಬ್ಬ ಉತ್ತಮ ವಿದ್ಯಾರ್ಥಿಯಾಗಿದ್ದರು. ಆಕೆಯು ಹುಡುಗರನ್ನು ತುಂಬಾ ಇಷ್ಟಪಡುತ್ತಿದ್ದರು, ಆದರೆ ಹಾಡುಗಾರಿಕೆಯು ೧ ನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು, "ಆಕೆ ತಮ್ಮ ಮುಂಚಿನ ಹೈಸ್ಕೂಲ್‌ನ ಒಬ್ಬ ಸಹಪಾಠಿಯನ್ನು ನೆನೆಸಿಕೊಂಡರು. ತಮ್ಮ ಸಹಪಾಠಿಯ "ಅಭಿವ್ಯಕ್ತಿತ್ವ, ಒಳ್ಳೆಯ ಸ್ಪೂರ್ತಿ" ಬಗ್ಗೆ ಮಾತನಾಡುತ್ತ ಗಾಗಾ ಎಲ್ಲೆ ನಿಯತಕಾಲಿಕಕ್ಕೆ "ಆಯ್ ಆಮ್ ಲೆಫ್ಟ್ ಹ್ಯಾಂಡೆಡ್!" ಎಂದು ಹೇಳಿದರು.

ತಮ್ಮ ೧೭ ನೆಯ ವಯಸ್ಸಿನಲ್ಲಿ ಗಾಗಾ ನ್ಯೂಯಾರ್ಕ್ ಯುನಿವರ್ಸಿಟಿಯ ಟಿಶ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ದಾಖಲಾತಿಯನ್ನು ಪಡೆದುಕೊಂಡರು ಮತ್ತು ೧೧ ನೆಯ ಸ್ಟ್ರೀಟ್‌ನ ಒಂದು ಎನ್‌ವೈಯು ಡಾರ್ಮ್‌ನಲ್ಲಿ ಜೀವಿಸುತ್ತಿದ್ದರು. ಅಲ್ಲಿ ಆಕೆಯು ಸಂಗೀತದ ಅಧ್ಯಯನವನ್ನು ಮಾಡಿದರು ಮತ್ತು ಕಲೆ, ಧರ್ಮ, ಸಾಮಾಜಿಕ ಸಮಸ್ಯೆಗಳು ಮತ್ತು ರಾಜಕೀಯದಂತಹ ವಿಷಯಗಳ ಬಗ್ಗೆ ಗಮನವನ್ನು ನೀಡುವ ಪ್ರಬಂಧಗಳು ಮತ್ತು ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುವ ಮೂಲಕ ತಮ್ಮ ಹಾಡುಬರೆಯುವ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಂಡರು. ಗಾಗಾ ಪಾಪ್ ಕಲಾವಿದರಾದ ಸ್ಪೆನ್ಸರ್ ಟ್ಯುನಿಕ್ ಮತ್ತು ಡ್ಯಾಮೈನ್ ಹರ್ಸ್ಟ್ ಇವರುಗಳ ಬಗ್ಗೆ ಪ್ರೌಢ ಪ್ರಬಂಧಗಳನ್ನು ಬರೆದರು; ಈ ಸಂಶೋಧನೆಯು ಆಕೆಯನ್ನು "ಸಂಗೀತ, ಕಲೆ, ಸೆಕ್ಸ್ ಮತ್ತು ಸೆಲಿಬ್ರಿಟಿ" ಕ್ಷೇತ್ರದಲ್ಲಿ ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ತಯಾರಾಗುವುದಕ್ಕೆ ಸಹಾಯವನ್ನು ಮಾಡಿತು. ಗಾಗಾ ತಮ್ಮ ಇತರ ಕೆಲವು ಸಹಪಾಠಿಗಳಿಗಿಂತ ಹೆಚ್ಚು ಕ್ರಿಯಾಶಿಲವಾಗಿದ್ದೇನೆ ಎಂಬುದಾಗಿ ಭಾವಿಸಿದ್ದರು. "ಒಮ್ಮೆ ನೀವು ಕಲೆಯ ಬಗ್ಗೆ ಚಿಂತನೆಯನ್ನು ನಡೆಸಿದರೆ, ನಿಮಗೆ ನೀವೆ ಕಲಿತುಕೊಳ್ಳಬಹುದು" ಎಂಬುದಾಗಿ ಅವರು ಹೇಳಿದ್ದರು. ಆಕೆಯ ಸೊಫೋಮೋರ್ ವರ್ಷದ ಎರಡನೆಯ ಸೆಮಿಸ್ಟರ್ ವೇಳೆಗೆ, ಆಕೆಯು ತಮ್ಮ ಸಂಗೀತ ವೃತ್ತಿಜೀವನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದಕ್ಕೆ ಶಾಲೆಯಿಂದ ಹೊರಹೋದರು. ಆಕೆಯ ತಂದೆಯು ಗಾಗಾ ಸಂಗೀತ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣದಿದ್ದ ಪಕ್ಷದಲ್ಲಿ ಆಕೆಯು ಮತ್ತೆ ಟಿಶ್ ಸ್ಕೂಲ್‌ಗೆ ದ್ಖಲಾತಿಯನ್ನು ಪಡೆದುಕೊಳ್ಳಬೇಕು ಎಂಬ ಷರತ್ತಿನ ಮೇಲೆ ಆಕೆಯ ಒಂದು ವರ್ಷದ ಬಾಡಿಗೆಯನ್ನು ನೀಡುವುದಕ್ಕೆ ಒಪ್ಪಿಕೊಂಡರು. "ನಾನು ನನ್ನ ಕುಟುಂಬವನ್ನು ಸಂಪೂರ್ಣವಾಗಿ ತೊರೆದೆ, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ವೆಚ್ಚದ ಅಪಾರ್ಟ್‌ಮೆಂಟನ್ನು ಬಾಡಿಗೆ ಹಿಡಿದೆ ಮತ್ತು ಯಾರೊಬ್ಬರು ನನ್ನನ್ನು ಗಮನಿಸುವವರೆಗೂ ನಿಕೃಷ್ಟ ಸ್ಥಿತಿಯಲ್ಲಿ ಕಳೆದೆ" ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

೨೦೦೫–೦೭: ವೃತ್ತಿಜೀವನ ಪ್ರಾರಂಭಗಳು

ಲೇಡಿ ಗಾಗಾ 
ಗಾಗಾ () performing with Lady Starlight () at ಳೊಲ್ಲಪಲೋಜ2007ರಲ್ಲಿ ಗಾಗಾ ಲೇಡಿ ಸ್ಟಾರ್‌ಲೈಟ್‌ರೊಂದಿಗೆ ಅಭಿನಯಿಸಿದರು

ಗಾಗಾ ತಮ್ಮ ೧೯ ನೆಯ ವಯಸ್ಸಿನಲ್ಲಿ ಮೊದಲಿಗೆ ಡೆಫ್ ಜಾಮ್ ರೆಕಾರ್ಡಿಂಗ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು, ಆದಾಗ್ಯೂ ಕೂಡ ಅವರು ಕೇವಲ ಮೂರು ತಿಂಗಳ ನಂತರದಲ್ಲಿ ಆ ಲೇಬಲ್‌ನಿಂದ ಹೊರಹಾಕಲ್ಪಟ್ಟರು. ಅದರ ಸ್ವಲ್ಪ ಸಮಯದ ನಂತರ, ಆಕೆಯ ಮುಂಚಿನ ಮ್ಯಾನೇಜ್‌ಮೆಂಟ್ ಕಂಪನಿಯು ತಮ್ಮ ಮ್ಯಾನೇಜ್‌ಮೆಂಟ್‌ನಲ್ಲಿದ್ದ ಸಂಗೀತಬರಹಗಾರ ಮತ್ತು ನಿರ್ಮಾಪಕ ರೆಡ್‌ಒನ್‌ಗೆ ಆಕೆಯನ್ನು ಪರಿಚಯಿಸಿತು. ರೆಡ್‌ಒನ್ ಜೊತೆಗೆ ಆಕೆಯು ರಚಿಸಿದ ಮೊದಲ ಹಾಡು "ಬಾಯ್ಸ್ ಬಾಯ್ಸ್ ಬಾಯ್ಸ್" ಇದು ಮೊಟ್ಲೇಯ್ ಕ್ರ್ಯೂ ರ "ಗರ್ಲ್ಸ್ ಗರ್ಲ್ಸ್ ಗರ್ಲ್ಸ್" ಮತ್ತು ಎಸಿ/ಡಿಸಿ ಇವರ "ಟಿ.ಎನ್.ಟಿ" ಯಿಂದ ಸ್ಪೂರ್ತಿಯನ್ನು ಪಡೆದುಕೊಂಡ ಒಂದು ಮ್ಯಾಷ್-ಅಪ್ ಆಗಿತ್ತು. ಆಕೆಯು ಲೋವರ್ ಈಸ್ಟ್ ಸೈಡ್‌ನಲ್ಲಿನ ಒಂದು ಅಪಾರ್ಟ್‌ಮೆಂಟ್‌ಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದರು ಮತ್ತು ಹಿಪ್-ಹಾಪ್ ಹಾಡುಗಾರ ಗ್ರ್ಯಾಂಡ್‌ಮಾಸ್ಟರ್ ಮೆಲ್ಲೆ ಮೆಲ್ ಜೊತೆಗೆ ಕ್ರಿಕೆಟ್ ಕ್ಯಾಸೇಯ್‌ರಿಂದ ರಚಿಸಲ್ಪಟ್ಟ ಮಕ್ಕಳ ಪುಸ್ತಕ ದ ಪೋರ್ಟಲ್ ಇನ್ ದ ಪಾರ್ಕ್‌ ಅನ್ನು ಒಳಗೊಂಡಿರುವ ಒಂದು ಆಡಿಯೋ ಪುಸ್ತಕಕ್ಕಾಗಿ ಹಲವಾರು ಹಾಡುಗಳ ಧ್ವನಿಮುದ್ರಣವನ್ನು ಮಾಡಿದರು. ಆಕೆಯು ಎನ್‌ವೈಯು ದಿಂದ ಬಂದ ಕೆಲವು ಸ್ನೇಹಿತರ ಜೊತೆಗೂಡಿ ಸ್ಟೆಫನಿ ಜರ್ಮಾನೊಟ್ಟಾ ಬ್ಯಾಂಡ್ ಅನ್ನು ಪ್ರಾರಂಭಿಸಿದರು. ಅವರು ನ್ಯೂ ಜರ್ಸಿಯಲ್ಲಿನ ಒಂದು ಲಿಕ್ಕರ್ (ಮದ್ಯದ) ಅಂಗಡಿಯ ಕೆಳಗಿರುವ ತಮ್ಮ ಸ್ಟುಡಿಯೋದಲ್ಲಿ ತಮ್ಮ ಕಿರುಗೀತೆಗಳ ಹೆಚ್ಚುವರಿ ಪ್ರದರ್ಶನಗಳ ಧ್ವನಿಮುದ್ರಣಗಳನ್ನು ಪ್ರಾರಂಭಿಸಿದರು. ಈ ಸ್ಟುಡಿಯೋವು ಲೋವರ್ ಈಸ್ಟ್ ಸೈಡ್ ಕ್ಲಬ್ ಪ್ರದೇಶದಲ್ಲಿನ ಒಂದು ಸ್ಥಳೀಯ ತಾಣವಾಗಿ ಹೊರಹೊಮ್ಮಲ್ಪಟ್ಟಿತು. ಅವರು ನಿಯೋ-ಬರ್ಲ್‌ಸ್ಕ್ವೇರ್ ಪ್ರದರ್ಶನಗಳಲ್ಲಿ ಕಾರ್ಯನಿರ್ವಹಿಸುವ ಸಮಯದಲ್ಲಿ ಡ್ರಗ್‌ಗಳ ಜೊತೆಗೆ ಪ್ರಯೋಗವನ್ನು ಪ್ರಾರಂಭಿಸಿದರು. ಸ್ಟೇಜ್‌ನ ಮೇಲೆ ನಾನು ತೊಗಲಪಟ್ಟಿಯ (ತಾಂಗ್) ಮೇಲೆ ಇದ್ದೆ, ಒಂದು ಬಟ್ಟೆಯ ಅಂಚು ನನ್ನ ಆಸ್ ಅನ್ನು ಆವರಿಸಿಕೊಳ್ಳಬಹುದು ಎಂದು ನಾನು ಆಲೋಚಿಸಿದ್ದೆ, ಕೂದಲನ್ನು ಬೆಂಕಿಯ ಜ್ವಾಲೆಯ ಬಣ್ಣಕ್ಕೆ ವಿನ್ಯಾಸಗೊಳಿಸಿದ್ದೆ, ಗೋ-ಗೋ ಡಾನ್ಸಿಂಗ್‌ನಿಂದ ಬ್ಲ್ಯಾಕ್ ಸಬ್ಬತ್‌ವರೆಗೆ ಮತ್ತು ಓರಲ್ ಸೆಕ್ಸ್ ಬಗ್ಗೆ ಹಾಡುಗಳನ್ನು ಹಾಡುವವರೆಗೆ. ಮಕ್ಕಳು ಖುಷಿಯಿಂದ ಕೇಕೆಹಾಕುತ್ತಿದ್ದರು ಮತ್ತು ನಂತರದಲ್ಲಿ ನಾವೆಲ್ಲರೂ ಒಂದು ಬಿಯರ್ ಅನ್ನು ಹಿಡಿದುಕೊಳ್ಳುವುದಕ್ಕೆ ಸಾಗಿದೆವು. ಇದು ನನಗೆ ಸ್ವಾತಂತ್ರ್ಯದ ಪ್ರತೀಕವಾಗಿತ್ತು. ನಾನು ಕ್ಯಾಥೋಲಿಕ್ ಸ್ಕೂಲ್‌ಗೆ ಹೋದೆ ಆದರೆ ನಾನು ನ್ಯೂಯಾರ್ಕ್ ಅಂಡರ್‌ಗ್ರೌಂಡ್‌ನಲ್ಲಿ ನನ್ನ ಪ್ರತಿಭೆಗೆ ಅವಕಾಶವನ್ನು ಕಂಡುಕೊಂಡೆ." ಅವರ ತಂದೆಯು ಆಕೆಯ ಡ್ರಗ್ ತೆಗೆದುಕೊಳ್ಳುವ ಹಿಂದಿರುವ ಕಾರಣವನ್ನು ತಿಳಿದಿರಲಿಲ್ಲ ಮತ್ತು ಹಲವಾರು ತಿಂಗಳುಗಳವರೆಗೆ ಅವಳನ್ನು ನೋಡುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ಗಾಗಾರ ಕೆಲವು ಮುಂಚಿನ ಹಾಡುಗಳಿಗೆ ಅವರಿಗೆ ಸಹಾಯವನ್ನು ಮಾಡಿದ್ದ ಸಂಗೀತ ನಿರ್ಮಾಪಕ ರಾಬ್ ಫ್ಯುಸರಿ ಗಾಗಾರ ಹಲವಾರು ವೋಕಲ್ ಹಾರ್ಮೊನಿಗಳಿಂದ ಫ್ರೆಡ್ಡಿ ಮರ್ಕ್ಯುರಿವರೆಗೆ ಹೋಲಿಸಿ ನೋಡಿದರು. ಫ್ಯುಸರಿ ಕ್ವೀನ್ ಹಾಡು "ರೇಡಿಯೋ ಗಾ ಗಾ" ನಂತರದಲ್ಲಿ ಮೊನಿಕರ್ ಗಾಗಾವನ್ನು ನಿರ್ಮಿಸುವುದಕ್ಕೆ ಸಹಾಯ ಮಾಡಿದರು. ಗಾಗಾ ಫ್ಯುಸರಿಯವರಿಂದ "ಲೇಡಿ ಗಾಗಾ" ಎಂಬ ಒಂದು ಸಂದೇಶವನ್ನು ಪಡೆದುಕೊಂಡ ಸಮಯದಲ್ಲಿ ಅವರು ಒಂದು ಸ್ಟೇಜ್ ಹೆಸರಿನಿಂದ ಹೊರಹೊಮ್ಮುವಲ್ಲಿ ಸಾಕಷ್ಟು ಪ್ರಯತ್ನವನ್ನು ನಡೆಸುತ್ತಿದ್ದರು. ಅವರು ಈ ರೀತಿಯಾಗಿ ವಿವರಿಸಿದರು,

Every day, when Stef came to the studio, instead of saying hello, I would start singing 'Radio Ga Ga'. That was her entrance song. [Lady Gaga] was actually a glitch; I typed 'Radio Ga Ga' in a text and it did an autocorrect so somehow 'Radio' got changed to 'Lady'. She texted me back, "That's it." After that day, she was Lady Gaga. She's like, "Don't ever call me Stefani again."
ಲೇಡಿ ಗಾಗಾ 
ಆಲ್ಟ್=ಪಬ್‌ನಲ್ಲಿ ಸುತ್ತಲೂ ಕುಳಿತಿರುವ ವೀಕ್ಷಕರಿಂದ, ಯುವ ಸುಂದರ ತರುಣಿಯ ಸಂಪೂರ್ಣ ಬಲಭಾಗದ ಸಂಕ್ಷಿಪ್ತ ವ್ಯಕ್ತಿಚಿತ್ರ. ಅವಳು ಬಿಗಿಯಾದ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದಳು ಮತ್ತು ಅವಳ ಉದ್ದವಾದ ಕೂದಲು ಅವಳ ಸುತ್ತಲೂ ಹರಡಿತ್ತು.ಬಲಗೈಯಲ್ಲಿ ಅವಳು ತನ್ನ ಕಣ್ಣುಗಳಿಗೆ ವೀಡಿಯೋ ಸನ್‌ಗ್ಲಾಸ್‌ನ ಜೊತೆಯನ್ನು ಹಿಡಿದಿರುತ್ತಿದ್ದಳು.

ಆದಾಗ್ಯೂ, ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದೇನೆಂದರೆ ಈ ಸಂಗತಿಯು ವಾಸ್ತವಕ್ಕೆ ಹತ್ತಿರವಾಗಿದೆ, ಮತ್ತು ಈ ಹೆಸರು ಒಂದು ಮಾರ್ಕೆಟಿಂಗ್ ಮೀಟಿಂಗ್‌ನ ಫಲಿತಾಂಶವಾಗಿದೆ. ಅದೇ ರೀತಿಯ ಪೋಸ್ಟ್ ವರದಿಯು ಊಹಿಸಿದ್ದೇನೆಂದರೆ ಅವರು ತಮ್ಮ ವಾಸ್ತವಿಕ ವಯಸ್ಸಿನ ಬಗ್ಗೆ ಸುಳ್ಳನ್ನು ಹೇಳುತ್ತಿದ್ದಾರೆ, ಮತ್ತು ಈ ರಿತಿಯ ಸುಳ್ಳುಗಳು ಒಬ್ಬ ಹಾಡುಗಾರನ ಬಗ್ಗೆ ಅಸ್ತಿತ್ವದಲ್ಲಿದ್ದವು. ಫ್ಯುಸರಿ ಆಕೆಯು ಮೂಲಭೂತವಾಗಿ "ಅಧಿಕತೂಕ" ಮತ್ತು ಅನಪೇಕ್ಷಣಿಯವಾಗಿದ್ದ ಸಂದರ್ಭದಲ್ಲಿ ಆಕೆಯನ್ನು ಪುನಃ ವಾಪಸು ಕರೆಸಿಕೊಂಡರು ಎಂಬುದಾಗಿ ಲೇಖನವು ಹೇಳುತ್ತದೆ.

೨೦೦೭ರ ಉದ್ದಕ್ಕೂ, ಗಾಗಾ ತಮಗೆ ಸ್ಟೇಜ್‍ನ-ಮೇಲಿನ ವಿನ್ಯಾಸಗಳಲ್ಲಿ ಸಹಾಯವನ್ನು ಮಾಡಿದ ಲೆಡಿ ಸ್ಟ್ಯಾರ್ಲೈಟ್‌ರ ಪ್ರದರ್ಶನದ ಜೊತೆಗೆ ಸಂಯೋಜಿತವಾಗಿದ್ದರು. ಈ ಜೋಡಿಯು ಡೌನ್‌ಟೌನ್ ಕ್ಲಬ್ ಸ್ಥಳಗಳಾದ ಮರ್ಕ್ಯುರಿ ಲಾಂಜ್, ದ ಬಿಟರ್ ಎಂಡ್, ಮತ್ತು ದ ರಾಕ್‌ವುಡ್ ಮ್ಯೂಸಿಕ್ ಹಾಲ್‌ನಂತಹ ಪ್ರದೇಶಗಳಲ್ಲಿ ತಮ್ಮ ಲೈವ್ ಪ್ರದರ್ಶನ ಕಲಾ ಸಂಗ್ರಹವಾದ "ಲೇಡಿ ಗಾಗಾ ಎಂಡ್ ದ ಸ್ಟ್ಯಾರ್ಲೈಟ್ ರೆವ್ಯೂ" ಎಂಬ ಹೆಸರಿನ ಗಿಗ್ ಸಂಗೀತಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸಿತು., "ದ ಅಲ್ಟಿಮೇಟ್ ಪಾಪ್ ಬರ್ಲ್‌ಸ್ಕ್ಯೂ ರಾಕ್‌ಶೋ" ಎಂಬುದಾಗಿ ಖ್ಯಾತಿಯನ್ನು ಪಡೆದುಕೊಂಡ ಅವರ ಪ್ರದರ್ಶನವು ೧೯೭೦ ರ ವಿಭಿನ್ನವಾದ ಪ್ರದರ್ಶನಗಳಿಗೆ ಒಂದು ಲೋ-ಫೈಗೆ ಒಂದು ಅಭಿನಂದನೆಯಾಗಿತ್ತು. ಆಗಸ್ಟ್ ೨೦೦೭ರಲ್ಲಿ, ಗಾಗಾ ಮತ್ತು ಸ್ಟ್ಯಾರ್ಲೈಟ್ ಅಮೇರಿಕಾದ ಲೊಲ್ಲಾಪಾಲೂಜಾ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಅಹ್ವಾನಿಸಲ್ಪಟ್ಟರು. ಈ ಪ್ರದರ್ಶನವು ವಿಮರ್ಶಾತ್ಮಕವಾಗಿ ಅನುಮೋದಿಸಲ್ಪಟ್ಟಿತು, ಮತ್ತು ಅವರ ಪ್ರದರ್ಶನವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು. ಅವಂತ್-ಗಾರ್ಡೆ ಎಲೆಕ್ಟ್ರಾನಿಕ್ ಡಾನ್ಸ್ ಮ್ಯೂಸಿಕ್ ಮೇಲೆ ಪ್ರಾಥಮಿಕ ಗಮನವನ್ನು ನೀಡಿದ ಗಾಗಾ ಪಾಪ್ ಮೆಲೊಡಿಗಳು (ಲಘುಸಂಗೀತಗಳು) ಮತ್ತು ಡೇವಿಡ್ ಬೋವಿ ಮತ್ತು ಕ್ವೀನ್ ಇವರುಗಳ ಗ್ಲ್ಯಾಮ್ ರಾಕ್ ಅನ್ನು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡ ಸಂದರ್ಭದಲ್ಲಿ ತಮ್ಮ ಸಂಗೀತದ ತಾಣವನ್ನು ಕಂಡುಕೊಂಡರು.

ಫ್ಯುಸರಿ ತಾವು ರಚಿಸಿದ ಹಾಡುಗಳನ್ನು ತಮ್ಮ ಸ್ನೇಹಿತ, ನಿರ್ಮಾಪಕ ಮತ್ತು ರೆಕಾರ್ಡ್ ಎಕ್ಸಿಕ್ಯುಟಿವ್ ವಿನ್ಸೆಂಟ್ ಹೆರ್ಬರ್ಟ್ ಮೂಲಕ ಗಾಗಾರಿಗೆ ಕಳಿಸುತ್ತಿದ್ದರು. ಹೆರ್ಬರ್ಟ್ ತಮ್ಮ ಲೇಬಲ್ ಸ್ಟ್ರೀಮ್‌ಲೈನ್ ರೆಕಾರ್ಡ್‌ಗಳಲ್ಲಿ ಗಾಗಾರ ಜೊತೆಗೆ ಶಿಘ್ರವಾಗಿ ಒಪ್ಪಂದವನ್ನು ಮಾಡಿಕೊಂಡರು, ಇದು ೨೦೦೭ ರಲ್ಲಿ ತನ್ನ ಸ್ಥಾಪನೆಯ ನಂತರ ಇಂಟರ್‌ಸ್ಕೋಪ್ ರೆಕಾರ್ಡ್ಸ್‌ನ ಒಂದು ಪ್ರಕಾಶನ ಮುದ್ರೆಯಾಗಿತ್ತು. ಗಾಗಾ ಹೆರ್ಬೆರ್ಟ್‌ರಿಗೆ ತಮ್ಮನ್ನು ಸಂಶೋಧಿಸಿದ ಒಬ್ಬ ಮನುಷ್ಯ ಎಂಬ ಖ್ಯಾತಿಯನ್ನು ನೀಡಿದರು, ಜೊತೆಗೆ "ನಾವು ಪಾಪ್ ಇತಿಹಾಸವನ್ನು ನಿರ್ಮಿಸಿದ್ದೇವೆ, ಮತ್ತು ನಾವು ಇದೇ ನಿಟ್ಟಿನಲ್ಲಿ ಮುಂದುವರೆಯುತ್ತೇವೆ ಎಂಬುದಾಗಿ ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ. ಸೋನಿ/ಎಟಿವಿ ಮ್ಯೂಸಿಕ್ ಪಬ್ಲಿಷಿಂಗ್‌ನಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಫೇಮಸ್ ಮ್ಯೂಸಿಕ್ ಪಬ್ಲಿಷಿಂಗ್‌ನಲ್ಲಿ ಒಂದು ಇಂಟರ್ನ್‌ಷಿಪ್ ಮಾಡುತ್ತಿದ್ದ ವೇಳೆಯಲ್ಲಿ ಒಬ್ಬ ಅನನುಭವಿ (ಕಲಿಕಾ) ಹಾಡುಬರಹಗಾರರಾಗಿ ಕಾರ್ಯನಿರ್ವಹಿಸಿದ್ದ ಗಾಗಾ ಕಾಲಾನಂತರದಲ್ಲಿ ಸೋನಿ/ಎಟಿವಿಯ ಜೊತೆಗೆ ಒಂದು ಸಂಗೀತ ಪ್ರಕಟಣೆಯ ಒಪ್ಪಂದವನ್ನು ಮಾಡಿಕೊಂಡರು. ಅದರ ಪರಿಣಾಮವಾಗಿ, ಅವರು ಬ್ರಿಟ್ನೇಯ್ ಸ್ಪಿಯರ್ಸ್ ಮತ್ತು ಲೇಬಲ್‌ಮೇಟ್ಸ್ ನ್ಯೂ ಕಿಡ್ಸ್ ಅನ್ ದ ಬ್ಲಾಕ್, ಫರ್ಗೀ, ಮತ್ತು ಪುಸ್ಸಿಕ್ಯಾಟ್ ಡಾಲ್ಸ್‌ಗಳಿಗೆ ಹಾಡುಗಳನ್ನು ಬರೆಯುವುದಕ್ಕೆ ಆಯ್ಕೆಮಾಡಲ್ಪಟ್ಟರು. ಗಾಗಾ ಇಂಟರ್‌ಸ್ಕೋಪ್‌ನಲ್ಲಿ ಹಾಡುಗಳನ್ನು ಬರೆಯುತ್ತಿದ್ದ ಸಮಯದಲ್ಲಿ, ಹಾಡುಗಾರ-ಕವನಬರಹಗಾರ ಆಕನ್ ಆಕೆಯು ಸ್ಟುಡಿಯೋದಲ್ಲಿ ಆಕನ್‌ರ ಒಂದು ಹಾಡಿಗೆ ಉಲ್ಲೇಖ ಹಾಡುಗಾರಿಕೆಯನ್ನು ಹಾಡಿದ ಸಂದರ್ಭದಲ್ಲಿ ಅವರ ಹಾಡುಗಾರಿಕಾ ಸಾಮರ್ಥ್ಯಗಳನ್ನು ಗುರುತಿಸಿದರು. ನಂತರದಲ್ಲಿ ಅವರು ಇಂಟರ್‌ಸ್ಕೋಪ್-ಗೆಫಿನ್-ಎ&ಎಮ್ ಅಧ್ಯಕ್ಷ ಮತ್ತು ಸಿಇಓ ಜಿಮ್ಮಿ ಲೋವಿನ್ ಅವರನ್ನು ಗಾಗಾರನ್ನು ತಮ್ಮ ಸ್ವಂತ ಲೇಬಲ್ ಕೊನ್ ಲೈವ್ ಡಿಸ್ಟ್ರಿಬ್ಯೂಷನ್‌ನಲ್ಲಿ ಒಪ್ಪಂದ ಮಾಡಿಕೊಳ್ಳುವುದರ ಜೊತೆಗೆ ಒಂದು ಜಂಟಿ ಒಪ್ಪಂದಕ್ಕೆ ಸಹಿಹಾಕುವಂತೆ ಮನವೊಲಿಸಿದರು ಮತ್ತು ನಂತರದಲ್ಲಿ ಆಕೆಯನ್ನು ತಮ್ಮ "ಫ್ರಾಂಚೈಸಿ ಪ್ಲೇಯರ್" ಎಂಬುದಾಗಿ ಕರೆದರು. ಗಾಗಾ ತಮ್ಮ ಅಭಿನಂದನಾ ಆಲ್ಬಮ್‌ನ ಒಂದು ವಾರದವರೆಗೆ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ರೆಡ್‌ಒನ್‌ರ ಜೊತೆಗಿನ ಹಾಡುಗಳ ಸಂಯೋಜನವನ್ನು ಮುಂದುವರೆಸಿದರು ಮತ್ತು ಅವರು ಕೈರ್ಸೆನ್‌ಬವಾಮ್‌ ಜೊತೆಗೂಡಿ "ಎಹ್ ಎಹ್ (ನಥಿಂಗ್ ಎಲ್ಸ್ ಕ್ಯಾನ್ ಸೇ" ಸಿಂಗಲ್ ಅನ್ನು ಒಳಗೊಂಡಂತೆ ನಾಲ್ಕು ಹಾಡುಗಳನ್ನು ಜೊತೆಗೂಡಿ ಬರೆದ ನಂತರದಲ್ಲಿ ನಿರ್ಮಾಪಕ ಮತ್ತು ಹಾಡುಬರಹಗಾರ ಮಾರ್ಟಿನ್ ಕೈರ್ಸೆನ್‌ಬವಾಮ್‌ರಿಂದ ಸ್ಥಾಪಿಸಲ್ಪಟ್ಟ ಒಂದು ಇಂಟರ್‌ಸ್ಕೋಪ್ ಪ್ರಕಾಶನ ಮುದ್ರೆ ಚೆರ್ರಿಟ್ರೀ ರೆಕಾರ್ಡ್ಸ್‌ನ ಸರದಿಪಟ್ಟಿಯನ್ನು ಸೇರಿಕೊಂಡರು.

೨೦೦೮–೧೦: ಪ್ರಖ್ಯಾತಿ ಮತ್ತು ಪ್ರಖ್ಯಾತಿಯ ವಿಪತ್ತು

ಲೇಡಿ ಗಾಗಾ 
ಆಲ್ಟ್=ಯುವ ಸುಂದರ ತರುಣಿಯ ಬಲಗಡೆಯ ಸಂಕ್ಷಿಪ್ತ ವ್ಯಕ್ತಿ ಚಿತ್ರ. ಅವಳು ನೇರಳೆ ಬಣ್ಣದ ಪಟ್ಟೆಗಳುಳ್ಳ ಕೆನ್ನೀಲಿ ಬಣ್ಣದ ಬಿಗಿಯುಡುಪನ್ನು ಧರಿಸಿದ್ದಳು.ಅವಳ ಕೂದಲು ತಲೆಯ ಮೇಲೆ ಹಿಂಭಾಗದಲ್ಲಿ ಸುರುಳಿಯಾಗಿತ್ತು(ಅಲೆಅಲೆಯಾಗಿತ್ತು).ಅವಳು ತನ್ನ ಬಗೈಯಲ್ಲಿ ಬೆಳ್ಳಿಯ ಪಾರಿತೋಷಕವನ್ನು ಹಿಡಿದಿದ್ದಳು.ಅವಳ ಹಿಂದೆ ಕೆಂಪು ಅಕ್ಷರಗಳುಳ್ಳ ಕಪ್ಪು ಹಿನ್ನೆಲೆ ಕಾಣಿಸುತ್ತಿತ್ತು.

೨೦೦೮ ರ ವೇಳೆಗೆ, ಗಾಗಾ ಲಾಸ್ ಎಂಜಲೀಸ್‌ಗೆ ತಮ್ಮ ವಾಸ್ತವ್ಯವನ್ನು ಪುನಃ ಬದಲಾಯಿಸಿದರು, ಅಲ್ಲಿ ಅವರು ತಮ್ಮ ಡೆಬ್ಯೂಟ್ ಆಲ್ಬಮ್ ದ ಫೇಮ್ ಅನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುವುದಕ್ಕೆ ತಮ್ಮ ರೆಕಾರ್ಡ್ ಲೇಬಲ್ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸಿದರು. ಅವರು ತಮ್ಮ ಆಲ್ಬಮ್‌ನಲ್ಲಿ ವಿಭಿನ್ನ ಶೈಲಿಗಳನ್ನು ಸಂಯೋಜಿಸಿದರು, "ಡೆಫ್ ಲೆಪ್ಪಾರ್ಡ್ ಡ್ರಮ್ಸ್ ಮತ್ತು ಕ್ಲ್ಯಾಪ್ಸ್ ಟು ಮೆಟಲ್ ಡ್ರಮ್ಸ್ ಆನ್ ಅರ್ಬನ್ ಟ್ರ್ಯಾಕ್ಸ್." ದ ಫೇಮ್ ಆಲ್ಬಮ್ ಸಮಕಾಲೀನ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು; ಮೆಟಾಕ್ರಿಟಿಕ್ ಸಂಗೀತ ಅವಲೋಕನ ಸಂಯೋಜನದ ಪ್ರಕಾರ ೭೧/೧೦೦ ರ ಒಂದು ಸರಾಸರಿ ಶ್ರೇಯಾಂಕವನ್ನು ದಾಖಲಿಸಿತು. ಈ ಆಲ್ಬಮ್ ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಐರ್ಲೆಂಡ್‌ಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು, ಮತ್ತು ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹದಿನೈದು ದೇಶಗಳಲ್ಲಿ ಐದು-ಉನ್ನತ ಸ್ಥಾನಗಳನ್ನು ಪಡೆದುಕೊಂಡಿತು. ಜಗತ್ತಿನಾದ್ಯಂತ ದ ಫೇಮ್ ಆಲ್ಬಮ್‌ನ ಹದಿನಾಲ್ಕು ಮಿಲಿಯನ್‌ಗಳಿಗಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಲ್ಪಟ್ಟವು. ಇದರ ಪ್ರಮುಖ ಸಿಂಗಲ್ "ಜಸ್ಟ್ ಡಾನ್ಸ್" ಇದು ಆರು ದೇಶಗಳ - ಆಸ್ಟ್ರೇಲಿಯಾ, ಕೆನಡಾ, ನೆದರ್‌ಲ್ಯಾಂಡ್ಸ್, ಐರ್ಲೆಂಡ್, ಯುನೈಟೆಡ್ ಕಿಂಗ್‌ಡಮ್, ಮತ್ತು ಯುನೈಟೆಡ್ ಸ್ಟೇಟ್ಸ್ - ಚಾರ್ಟ್‌ಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು ಮತ್ತು ನಂತರದಲ್ಲಿ ಬೆಸ್ಟ್ ಡಾನ್ಸ್ ರೆಕಾರ್ಡಿಂಗ್‌ಗಾಗಿ ಜರ್ಮನಿ ಅವಾರ್ಡ್ ನೊಮಿನೇಷನ್ ಅನ್ನು ಪಡೆದುಕೊಂಡಿತು. ಅದರ ನಂತರದ ಸಿಂಗಲ್ "ಪೋಕರ್ ಫೇಸ್" ಮುಂಚಿನದಕ್ಕೂ ಹೆಚ್ಚಿನ ಯಶಸ್ಸನ್ನು ಕಂಡಿತು, ಇದು ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳನ್ನು ಒಳಗೊಂಡಂತೆ ಜಗತ್ತಿನಾದ್ಯಂತದ ಪ್ರಮುಖ ಸಂಗೀತ ಮಾರುಕಟ್ಟೆಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ಇದು ೫೨ನೆಯ ಜರ್ಮನಿ ಅವಾರ್ಡ್ಸ್‌ನಲ್ಲಿ ಸಾಂಗ್ ಆಫ್ ದ ಇಯರ್ ಮತ್ತು ರೆಕಾರ್ಡ್ ಅಫ್ ದ ಇಯರ್ ಪ್ರಶಸ್ತಿಗಳ ಜೊತೆಗೆ ಬೆಸ್ಟ್ ಡಾನ್ಸ್ ರೆಕಾರ್ಡಿಂಗ್ ಪ್ರಶಸ್ತಿಯನ್ನೂ ಪಡೆದುಕೊಂಡಿತು. ದ ಫೇಮ್ ಆಲ್ಬಮ್ ಆಫ್ ದ ಇಯರ್ ಪ್ರಶಸ್ತಿಗಾಗಿ ಹೆಸರು ನೀಡಲ್ಪಟ್ಟಿತ್ತು; ಇದು ಜರ್ಮನಿ ಅವಾರ್ಡ್ ಫಾರ್ ಬೆಸ್ಟ್ ಎಲೆಕ್ಟ್ರಾನಿಕ್/ಡನ್ಸ್ ಆಲ್ಬಮ್ ಪ್ರಶಸ್ತಿಯನ್ನು ಗೆದ್ದಿತು. ಅವರ ನಿಶ್ಚಯಿತ ಪ್ರವಾಸವು ಅವರ ಇಂಟರ್‌ಸ್ಕೋಪ್ ಪಾಪ್ ಗುಂಪಿನ ಪ್ರಾರಂಭಕ್ಕಾಗಿ ನಡೆಸಲ್ಪಟ್ಟ ಒಂದು ಕಾರ್ಯವಾಗಿದ್ದರೂ ಕೂಡ, ಸುಧಾರಿತ ನ್ಯೂ ಕಿಡ್ಸ್ ಆನ್ ದ ಬ್ಲಾಕ್‌ನಲ್ಲಿ, ಅವರು ತಮ್ಮ ಸ್ವಂತ ಜಗತ್ತಿನಾದ್ಯಂತದ ಸಂಗೀತ ಕಛೇರಿಯ ಪ್ರವಾಸ ಎಂಬುದಾಗಿ ಘೋಷಿಸಿದರು, ದ ಫೇಮ್ ಬಾಲ್ ಟೂರ್ ಇದು ವಿಮರ್ಶಾತ್ಮಕವಾಗಿ ಶ್ಲಾಘನೆಗೆ ಒಳಗಾಗಲ್ಪಟ್ಟಿತು ಮತ್ತು ಮಾರ್ಚ್ ೨೦೦೯ ರಲ್ಲಿ ಪ್ರಾರಂಭವಾಗಲ್ಪಟ್ಟಿತು; ಅದೇ ವರ್ಷದ ಸಪ್ಟೆಂಬರ್‌ನಲ್ಲಿ ಅಂತ್ಯವಾಗಲ್ಪಟ್ಟಿತು. ಮೇ ೨೦೦೯ ರಲ್ಲಿ ರೋಲಿಂಗ್ ಸ್ಟೋನ್‌ ನ ವಾರ್ಷಿಕ "ಹಾಟ್ ೧೦೦" ವಿವಾದದ ಮುಖ ಪುಟವು ಅರೆ-ನಗ್ನಳಾಗಿದ್ದ ಗಾಗಾ ಸ್ಟ್ರೆಟೆಜಿಕ್ ಆಗಿ ಇರಿಸಲ್ಪಟ್ಟಿದ್ದ ಪ್ಲಾಸ್ಟಿಕ್ ಬಬಲ್‌ಗಳನ್ನು ತೊಟ್ಟಿದ್ದ ಚಿತ್ರವನ್ನು ಪ್ರದರ್ಶಿಸಿತ್ತು. ಈ ವಿವಾದದಲ್ಲಿ, ಅವರು ಹೇಳಿದ್ದೇನೆಂದರೆ ತಾವು ನ್ಯೂಯಾರ್ಕ್ ಕ್ಲಬ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅವರು ಒಂದು ಹೆವಿ ಮೆಟಲ್ ಡ್ರಮರ್ ಜೊತೆಗೆ ಸೌಂದರ್ಯಾತ್ಮಕವಾಗಿ ತೊಡಗಿಕೊಂಡಿದ್ದರು. ಅವರು ತಮ್ಮ ಸಂಬಂಧ ಮತ್ತು ಸಂಬಂಧದ ಮುರಿಯುವಿಕೆಯನ್ನು ವರ್ಣಿಸಿದರು, ಅವರು ಅದರ ಬಗ್ಗೆ ಈ ರೀತಿಯಾಗಿ ಹೇಳಿದರು "ನಾನು ಅವನ ಸ್ಯಾಂಡಿಯಾಗಿದ್ದೆ ಮತ್ತು ಅವನು ನನ್ನ ಡ್ಯಾನ್ನಿಯಾಗಿದ್ದ [ಆಫ್ ಗ್ರೀಸ್ ], ಮತ್ತು ನಾನು ಆ ಸಂಬಂಧವನ್ನು ಮುರಿದೆ." ಅವನು ನಂತರದಲ್ಲಿ ದ ಫೇಮ್ ಆಲ್ಬಮ್‌ನ ಕೆಲವು ಹಾಡುಗಳ ಸ್ಪೂರ್ತಿಯಾಗಿ ಗೋಚರಿಸಿದನು. ಅವರು ೨೦೦೯ ಎಮ್‌ಟಿವಿ ವೀಡಿಯೋ ಮ್ಯೂಸಿಕ್ ಅವಾರ್ಡ್ಸ್‌ನ ಒಟ್ಟು ಒಂಬತ್ತು ಅವಾರ್ಡ್‌ಗಳಲ್ಲಿ ಒಬ್ಬರಾಗಿ ನೊಮಿನೇಷನ್ ಮಾಡಲ್ಪಟ್ಟಿದ್ದರು, ಮತ್ತು ಅವರು ಬೆಸ್ಟ್ ನ್ಯೂ ಆರ್ಟಿಸ್ಟ್ ಪ್ರಶಸ್ತಿಯನ್ನು ಗೆದ್ದರು, ಅದೇ ಸಮಯದಲ್ಲಿ ಅವರ ಸಿಂಗಲ್ "ಪಾಪಾರಾಜಿ" ಬೆಸ್ಟ್ ಡೈರೆಕ್ಷನ್ ಮತ್ತು ಬೆಸ್ಟ್ ಸ್ಪೆಷಲ್ ಇಫೆಕ್ಟ್ಸ್‌ಗಳಿಗಾಗಿ ಎರಡು ಪ್ರಶಸ್ತಿಗಳನ್ನು ಗೆದ್ದಿತು. ಅಕ್ಟೋಬರ್‌ನಲ್ಲಿ, ಗಾಗಾ ಬಿಲ್‌ಬೋರ್ಡ್ ನಿಯತಕಾಲಿಕದ ೨೦೦೯ ರ ರೈಸಿಂಗ್ ಸ್ಟಾರ್ ಪ್ರಸಸ್ತಿಯನ್ನು ಪಡೆದುಕೊಂಡರು. ವಾಷಿಂಗ್‌ಟನ್ ಡಿ.ಸಿ. ಯಲ್ಲಿ ಯು.ಎಸ್. ಸಿವಿಲ್ ಕಾಯಿದೆಗಳಿಂದ ನಿರ್ವಹಿಸಲ್ಪಡುವ ಎಲ್ಲಾ ವಿಷಯಗಳಲ್ಲಿ ಎಲ್‌ಜಿಬಿಟಿಯ ಜನರಿಗೆ ಸಮಾನ ಸಂರಕ್ಷಣೆಯನ್ನು ಒದಗಿಸುವುದಕ್ಕೆ ನ್ಯಾಷಲ್ ಇಕ್ವಲಿಟಿ ಮಾರ್ಚ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಮುಂಚೆ ಅದೇ ತಿಂಗಳಿನಲ್ಲಿ ಹ್ಯೂಮನ್ ರೈಟ್ಸ್ ಕ್ಯಾಂಪೇನ್‌ನ "ನ್ಯಾಷನಲ್ ಡಿನ್ನರ್"ನಲ್ಲಿ ಉಪಸ್ಥಿತರಿದ್ದರು.

ಲೇಡಿ ಗಾಗಾ 
ಆಲ್ಟ್=ಯುವ ಸುಂದರ ತರುಣಿಯ ಸಂಕ್ಷಿಪ್ತ ವ್ಯಕ್ತಿಚಿತ್ರ. ಅವಳ ಹರಡಿದ ಕೂದಲು ಗಾಳಿಗೆ ಭುಜದ ಮೇಲೆ ಹಾರಾಡುತ್ತಿತ್ತು.ಅವಳು ಕಣ್ಣೀಗೆ ಕಾಣುವ ಮಿನುಗು ಬೊಟ್ಟುಗಳಿಂದ ಕೂಡಿದ ನೇರಳೆ ಬಣ್ಣದ ಬಿಗಿಯುಡುಪನ್ನು ಧರಿಸಿದ್ದಳು.ವಿಶಾಲವಾದ ಎದೆ, ತೋಳು ಮತ್ತು ಕಾಲುಗಳು ಕಾಣಿಸುತ್ತಿದ್ದವು.

೨೦೦೮–೦೯ ರ ವರ್ಷದಲ್ಲಿ ಬರೆಯಲ್ಪಟ್ಟ ದ ಫೇಮ್ ಮಾನ್‌ಸ್ಟರ್ , ಎಂಟು ಹಾಡುಗಳ ಒಂದು ಸಂಗ್ರಹವು ನವೆಂಬರ್ ೨೦೦೯ ರಲ್ಲಿ ಬಿಡುಗಡೆ ಮಾಡಲ್ಪಟ್ಟಿತು. ಅವರು ಜಗತ್ತಿನಾದ್ಯಂತ ಮಾಡಿದ ಪ್ರವಾಸದ ವೈಯುಕ್ತಿಕ ಅನುಭವಗಳಿಂದ ಪ್ರಖ್ಯಾತಿಯ ನಿರಾಶಾದಾಯಕ ಬದಿಯ ಜೊತೆಗೆ ವ್ಯವಹರಿಸುತ್ತಿದ್ದ ಪ್ರತಿ ಹಾಡೂ ಕೂಡ ಒಂದು ಮಾನ್‌ಸ್ಟರ್ ರೂಪಕಾಲಂಕಾರದ ಮೂಲಕ ಅಭಿವ್ಯಕ್ತಿಗೊಳಿಸಲ್ಪಟ್ಟಿತು. ಇದರ ಮೊದಲ ಸಿಂಗಲ್ "ಬ್ಯಾಡ್ ರೋಮ್ಯಾನ್ಸ್" ಇದು ಹದಿನೆಂಟು ದೇಶಗಳಲ್ಲಿನ ಚಾರ್ಟ್‌ಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ಹಾಗೆಯೇ ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿತು. ಯು.ಎಸ್.ನಲ್ಲಿ ಗಾಗಾ ಡಿಜಿಟಲ್ ಮಾರಾಟಗಳಲ್ಲಿ ನಾಲ್ಕು ಮಿಲಿಯನ್ ಪ್ರತಿಗಳನ್ನು ದಾಟುವುದಕ್ಕೆ ಮೂರು ಸಿಂಗಲ್ಸ್ ("ಜಸ್ಟ್ ಡಾನ್ಸ್ " ಮತ್ತು "ಪೋಕರ್ ಫೇಸ್" ಅನ್ನು ಒಳಗೊಂಡಂತೆ) ಅನ್ನು ಹೊಂದಿದ್ದ ಡಿಜಿಟಲ್ ಇತಿಹಾಸದಲ್ಲಿನ ಮೊದಲ ಕಲಾವಿದರಾಗಿದ್ದರು. ಹಾಡು ಬೆಸ್ಟ್ ಫೀಮೇಲ್ ಪಾಪ್ ವೋಕಲ್ ಪರ್ಫಾರ್ಮನ್ಸ್‌ಗಾಗಿ ಒಂದು ಗ್ರ್ಯಾಮ್ಮಿಯನ್ನು ಪಡೆದುಕೊಂಡಿತು, ಹಾಗೆಯೇ ಇದರ ಸಂಯೋಜಿತ ವೀಡಿಯೋವು ಗ್ರ್ಯಾಮ್ಮಿ ಅವಾರ್ಡ್ ಫಾರ್ ಬೆಸ್ಟ್ ಷಾರ್ಟ್ ಫಾರ್ಮ್ ಮ್ಯೂಸಿಕ್ ವೀಡಿಯೋ ಪ್ರಶಸ್ತಿಯನ್ನು ಗೆದ್ದಿತು. ಹಾಡುಗಾರ ಬೆಯೋನ್ಸ್‌ರ ಲಕ್ಷಣಗಳನ್ನು ವಿವರಿಸುವ ಈ ಆಲ್ಬಮ್‌ನ ಎರಡನೆಯ ಸಿಂಗಲ್ "ಟೆಲಿಫೋನ್" ಗ್ರ್ಯಾಮ್ಮಿ ಅವಾರ್ಡ್ ಫಾರ್ ದ ಬೆಸ್ಟ್ ಪಾಪ್ ಕೊಲ್ಲೊಬೊರೇಷನ್ ವಿತ್ ವೋಕಲ್ಸ್‌ಗಾಗಿ ನೊಮಿನೇಷನ್ ಮಾಡಲ್ಪಟ್ಟಿತು ಮತ್ತು ಗಾಗಾರ ನಾಲ್ಕನೆಯ ಯುಕೆ ಅಗ್ರ-ಶ್ರೇಯಾಂಕದ ಸಿಂಗಲ್ ಆಗಿ ಬದಲಾಗಲ್ಪಟ್ಟಿತು, ಅದೇ ಸಮಯದಲ್ಲಿ ವಿರೋದಾಭಾಸವಾಗಿದ್ದರೂ ಕೂಡ, ಇದರ ಸಂಬಂಧಿತ ವೀಡಿಯೋ ಸಿಂಗಲ್ ಸಮಕಾಲೀನ ವಿಮರ್ಶಕರಿಂದ ಸಕರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು; ವಿಮರ್ಶಕರು ಗಾಗಾರನ್ನು "ಮೈಕೆಲ್ ಜಾಕ್ಸನ್‌ರ ಸಂಗೀತ ಮತ್ತು ಶೋಮನ್‌ಷಿಪ್ ಮತ್ತು ಪ್ರಭಾವಶಾಲಿ ಲೈಂಗಿಕತೆ ಮತ್ತು ಮಡೋನ್ನಾರ ಪ್ರಚೋದಕ ಪ್ರವೃತ್ತಿ." ಅವರ ನಂತರದ ಸಿಂಗಲ್ "ಅಲೆಜಾಂಡ್ರೋ" ಇದು ಗಾಗಾರನ್ನು ವಿನ್ಯಾಸಿ ಛಾಯಾಗ್ರಾಹಕ ಸ್ಟೀವನ್ ಕ್ಲೈನ್‌ರ ಜೊತೆಗೆ ಅದೇ ರೀತಿಯಾಗಿ ವಿರೋದಾಭಾಸವನ್ನು ಹೊಂದಿದ ಒಂದು ಸಂಗೀತ ವೀಡಿಯೋಕ್ಕಾಗಿ ಜೊತೆಯಾಗಿಸಲ್ಪಟ್ಟಿತು - ವಿಮರ್ಶಕರು ಇದರ ಕಲ್ಪನೆ ಮತ್ತು ಮಸುಕಾದ ಸ್ವರೂಪದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಆದರೆ ಕ್ಯಾಥೋಲಿಕ್ ಲೀಗ್ ಪಾಷಂಡಿತನದ ಬಳಕೆಗಾಗಿ ಗಾಗಾರನ್ನು ದೂಷಿಸಿತು. ಅವರ ಸಂಗೀತ ವೀಡಿಯೋದ ಸುತ್ತ ಇದ್ದ ವಿರೋದಾಭಾಸಗಳ ಹೊರತಾಗಿಯೂ, ಅವುಗಳು ಯೂ ಟ್ಯೂಬ್ ವೀಡಿಯೋ ಶೇರಿಂಗ್ ವೆಬ್‌ಸೈಟ್‌‌ನ ವೈರಲ್ ವ್ಯೂಗಳ ಒಂದು ಬಿಲಿಯನ್‌ಕ್ಕಿಂತ ಹೆಚ್ಚು ವೋಟ್‍ಗಳನ್ನು ಗಳಿಸುವಲ್ಲಿನ ಮೊದಲ ಕಲಕಾರರಾಗಿದ್ದರು. ಸಾಂಗೀತಿಕವಾಗಿ, ದ ಫೇಮ್ ಮಾನ್‌ಸ್ಟರ್ ಕೂಡ ಹೇರಳ ಯಶಸ್ಸನ್ನು ಕಂಡಿತು. ಅವರ ಡೆಬ್ಯೂಟ್ ಪಡೆದುಕೊಳ್ಳಲ್ಪಟ್ಟ ಗ್ರ್ಯಾಮ್ಮಿ ನೊಮಿನೇಷನ್‌ಗಳ ಮೊತ್ತವನ್ನು ಸರಿಹೊಂದಿಸುತ್ತ, ದ ಫೇಮ್ ಮಾನ್‌ಸ್ಟರ್ ಆರು ಒಟ್ಟು ಮೊತ್ತಗಳನ್ನು ಪಡೆದುಕೊಂಡಿತು - ಅವುಗಳಲ್ಲಿ, ಆಲ್ಬಮ್ ಬೆಸ್ಟ್ ಪಾಪ್ ವೋಕಲ್ಲ್ ಆಲ್ಬಮ್ ಖ್ಯಾತಿಯನ್ನು ಪಡೆದುಕೊಂಡಿತು ಮತ್ತು ಅವರಿಗೆ ನೊಮಿನೇಷನ್ ಫಾರ್ ಆಲ್ಬಮ್ ಆಫ್ ದ ಇಯರ್‌ಗೆ ಎರಡನೆಯ-ಅನುಕ್ರಮವನ್ನು ಪಡೆಯುವಂತೆ ಮಾಡಿತು. ಈ ಆಲ್ಬಮ್‌ನ ಯಶಸ್ಸು ಗಾಗಾರಿಗೆ ತಮ್ಮ ಎರಡನೆಯ ಜಗತ್ತಿನಾದ್ಯಂತದ ಸಂಗೀತ ಕಚೇರಿಯ ಪ್ರವಾಸವನ್ನು ಕೈಗೊಳ್ಳುವುದಕ್ಕೆ ಸಹಾಯ ಮಾಡಿತು, ದ ಫೇಮ್ ಮಾನ್‌ಸ್ಟರ್‌ ನ ಬಿಡುಗಡೆಯ ಕೆಲವೇ ವಾರಗಳ ನಂತರ ಮತ್ತು ತಮ್ಮ ಮೊದಲನೆಯ ಆಲ್ಬಮ್‌ನ ಬಿಡುಗಡೆಯ ಕೆಲವು ತಿಂಗಳುಗಳ ನಂತರ ಅವರು ದ ಮಾನ್‌ಸ್ಟರ್ ಬಾಲ್ ಪ್ರವಾಸವನ್ನು ಕೈಗೊಂಡರು. ಮೇ ೨೦೧೧ ರಲ್ಲಿ ಮುಗಿಸಿದ ನಂತರ, ವಿಮರ್ಶಾತ್ಮಕವಾಗಿ ಅವಲೋಕಿಸಲ್ಪಟ್ಟ ಮತ್ತು ವಾಣಿಜ್ಯವಾಗಿ ಸಂಪೂರ್ಣಗೊಳ್ಳಲ್ಪಟ್ಟ ಸಂಗೀತ ಪ್ರವಾಸವು ಒಂದೂವರೆ ವರ್ಷದವರೆಗೆ ಮುಂದುವರೆಯಲ್ಪಟ್ಟಿತು. ಅದಕ್ಕೆ ಜೊತೆಯಾಗಿ, ತಮ್ಮ ಆಲ್ಬಮ್‌ನಿಂದ ಇತರ ಹಾಡುಗಳನ್ನು ಅಂತರಾಷ್ಟ್ರೀಯ ಪ್ರದರ್ಶನಗಳಾದ ೨೦೦೯ ರಾಯಲ್ ವೆರೈಟಿ ಪರ್ಫಾರ್ಮನ್ಸ್‌ನಲ್ಲಿ ಹಾಡಿದರು, ಅಲ್ಲಿ ಅವರು ರಾಣಿ ಎಲಿಜಬೆತ್‌ II ರ ಸಮ್ಮುಖದಲ್ಲಿ "ಸ್ಪೀಚ್‌ಲೆಸ್", ಒಂದು ಪ್ರಭಾವಶಾಲಿ ಕಿರುಗೀತೆಯನ್ನು ಹಾಡಿದರು; ೫೨ನೆಯ ಗ್ರ್ಯಾಮ್ಮಿ ಅವಾರ್ಡ್ಸ್‌ನಲ್ಲಿ ಅವರ ಪ್ರಾರಂಭಿಕ ಪ್ರದರ್ಶನವು "ಪೋಕರ್ ಫೇಸ್" ಹಾಡನ್ನು ಮತ್ತು ಎಲ್ಟನ್ ಜಾನ್‌ರ ಜೊತೆಗಿನ "ಯುವರ್ ಸಾಂಗ್"ನ ಒಂದು ಮಿಶ್ರಗೀತೆಯ ಜೊತೆಗೆ "ಸ್ಪೀಚ್‌ಲೆಸ್"ನ ಒಂದು ಪಿಯಾನೋ ಡ್ಯುಯೆಟ್ ಅನ್ನು ಒಳಗೊಂಡಿತ್ತು; ಮತ್ತು ೨೦೧೦ ಬಿಆರ್‌ಐಟಿ ಅವಾರ್ಡ್ಸ್‌ನಲ್ಲಿ "ಡಾನ್ಸ್ ಇನ್ ದ ಡಾರ್ಕ್"ನ ಮೂಲಕ ಅನುಸರಿಸಲ್ಪಟ್ಟ "ಟೆಲಿಫೋನ್"‌ನ ಒಂದು ಶ್ರಾವಣ ಅಭಿವ್ಯಕ್ತಿಯ ಪ್ರದರ್ಶನವು ಮೃತ ಫ್ಯಾಶನ್ ವಿನ್ಯಾಸಿಗ ಮತ್ತು ಅವರ ನಿಕಟ ಸ್ನೇಹಿತ ಅಲೆಕ್ಸಾಂಡರ್ ಮ್ಯಾಕ್‌ಕ್ವೀನ್‌ರಿಗೆ ಸಮರ್ಪಿಸಲ್ಪಟ್ಟಿತು, ಇದು ಅವಾರ್ಡ್ ಸಭೆಯಲ್ಲಿ ಅವರ ಹ್ಯಾಟ್-ಟ್ರಿಕ್ ಗೆಲುವಿಗೆ ಪೂರಕವಾಗಲ್ಪಟಿತು.

ಬಾರ್ಬರಾ ವಾಲ್ಟರ್ಸ್ ತಮ್ಮ ವಾರ್ಷಿಕ ಎಬಿಸಿ ನ್ಯೂಸ್‌ಗಾಗಿ ಗಾಗಾರನ್ನು "೨೦೦೯ ರ ೧೦ ಅತ್ಯಂತ ಆಕರ್ಷಣೀಯ ವ್ಯಕ್ತಿಗಳಲ್ಲಿ" ಒಬ್ಬರು ಎಂಬುದಾಗಿ ಆಯ್ಕೆಮಾಡಿದರು. ಪತ್ರಕರ್ತರಿಂದ ಸಂದರ್ಶನವನ್ನು ನಡೆಸಲ್ಪಟ್ಟ ಸಂದರ್ಭದಲ್ಲಿ ಗಾಗಾ ಒಬ್ಬ ಅರ್ಬನ್ ಲೆಜೆಂಡ್‌ನಂತೆ ಅಂತರಲಿಂಗಿ ಎಂಬ ಹೇಳಿಕೆಯನ್ನು ತಿರಸ್ಕರಿಸಿದರು. ಈ ವಿಷಯದ ಬಗೆಗಿನ ಒಂದು ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಅವರು ಈ ರಿತಿ ಹೇಳಿದರು, "ಮೊದಲಿಗೆ ಇದು ತುಂಬಾ ವಿಭಿನ್ನವಾದ ವಿಷಯವಾಗಿದೆ ಮತ್ತು ಪ್ರತಿಯೊಬ್ಬರೂ ಹೇಳಿದರು,’ಇದು ಹೆಚ್ಚಿನದಾಗಿ ಒಂದು ಕಟ್ಟುಕಥೆಯಾಗಿದೆ!’ ಆದರೆ ಒಂದು ಗ್ರಹಿಕೆಯಲ್ಲಿ, ನಾನು ನನ್ನನ್ನು ತುಂಬಾ ಉಭಯಲಿಂಗಿತ್ವದ ರಿತಿಯಲ್ಲಿ ಚಿತ್ರಿಸಿಕೊಳ್ಳುತ್ತೇನೆ ಮತ್ತು ಮತ್ತು ನಾನು ಉಭಯಲಿಂಗಿತವ್ವನ್ನು ಪ್ರಿತಿಸುತ್ತೇನೆ." ಪೋಲರಾಯ್ಡ್ ಅನ್ನು ವಾಪಸು ಕರೆತರುವ ಬಗ್ಗೆ ಉತ್ಸುಕರಾದ ಮತ್ತು "ಇದನ್ನು ಡಿಜಿಟಲ್ ಇರಾದ ಜೊತೆಗೆ ಸಂಯೋಜಿಸುತ್ತ", ಗಾಗಾ ಜನವರಿ ೨೦೧೦ ರಲ್ಲಿ ಫ್ಯಾಷನ್, ತಾಂತ್ರಿಕತೆ ಮತ್ತು ಛಯಾಗ್ರಾಹಕ ಉತ್ಪನ್ನಗಳನ್ನು ನಿರ್ಮಿಸುವ ಅಂತರಾಷ್ಟ್ರೀಯ ಆಪ್ಟಿಕ್ ಕಂಪನಿಗೆ ಇಮೇಜಿಂಗ್ ಉತ್ಪನ್ನಗಳ ಒಂದು ಲೈನ್‌ಗಾಗಿ ಪ್ರಧಾನ ಕ್ರಿಯಾತ್ಮಕ ಅಧಿಕಾರಿಯಾಗಿ ಆಯ್ಕೆಯಾಗಲ್ಪಟ್ಟರು. ಅವರ ಉತ್ಪಾದಕ ಗುಂಪು, ಮರ್ಮೇಡ್ ಮ್ಯೂಸಿಕ್ ಎಲ್‌ಎಲ್‌ಸಿ ಯು ಮಾರ್ಚ್‌ನಲ್ಲಿ ರಾಬ್ ಫ್ಯುಸರಿಯವರಿಂದ ಮೊಕದ್ದಮೆಯನ್ನು ಎದುರಿಸಿತು; ಅವರು ಇದರ ಗಳಿಕೆಗಳ ೨೦% ಪಾಲಿಗೆ ಹಕ್ಕುದಾರರಾಗಿದ್ದಾರೆ ಎಂಬುದಾಗಿ ವಾದವನ್ನು ಮಂಡಿಸಿದರು. ಗಾಗಾರ ವಕೀಲ ಚಾರ್ಲ್ಸ್ ಅದರ್ ಫ್ಯುಸರಿಯವರ ಜೊತೆಗಿನ ವಾದವನ್ನು "ಅನ್‌ಲಾಫುಲ್" (ಅನೀತಿಯುಕ್ತ) ಎಂಬುದಾಗಿ ವರ್ಣಿಸಿದ್ದಾರೆ ಮತ್ತು ಅದರ ಬಗ್ಗೆ ಹೇಳಿಕೆಯನ್ನು ನೀಡುವುದಕ್ಕೆ ನಿರಾಕರಿಸಿದರು, ಆದಾಗ್ಯೂ, ಐದು ತಿಂಗಳ ನಂತರ, ನ್ಯೂಯಾರ್ಕ್ ಸುಪ್ರೀಮ್ ಕೋರ್ಟ್ ಮೊಕದ್ದಮೆಯನ್ನು ವಜಾ ಮಾಡಿತು. ಎಪ್ರಿಲ್‌ನಲ್ಲಿ, ಗಾಗಾ ಟೈಮ್ ನಿಯತಕಾಲಿಕದ ವರ್ಷದ ಅತ್ಯಂತ ಪ್ರಭಾವಶಾಲಿ ೧೦೦ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಪಡೆದುಕೊಂಡರು. ದ ಟೈಮ್ಸ್‌ ಗೆ ಒಂದು ಸಂದರ್ಶನವನ್ನು ನೀಡುವ ಸಂದರ್ಭದಲ್ಲಿ, ಗಾಗಾ ಸಾಮಾನ್ಯವಾಗಿ ಲೂಪಸ್ (ಚರ್ಮರೋಗ, ಚರ್ಮಕ್ಷಯ) ಎಂಬುದಾಗಿ ಕರೆಯಲ್ಪಡುವ ಸಿಸ್ಟಮೆಟಿಕ್ ಲೂಪಸ್ ಎರಿಥೆಮಟೊಸಸ್ ಅನ್ನು ಹೊಂದಿರುವ ಸುಳಿವನ್ನು ಪಡೆದುಕೊಂಡರು, ಇದು ಒಂದು ಸಂಬಂಧಿತ ಅಂಗಾಂಶಗಳ ರೋಗವಾಗಿದೆ. ಅವರು ನಂತರದಲ್ಲಿ ಲ್ಯಾರಿ ಕಿಂಗ್ ಜೊತೆಗೆ ತಾವು ಲೂಪಸ್ ಅನ್ನು ಹೊಂದಿಲ್ಲ ಎಂಬುದನ್ನು ಧೃಡಪಡಿಸಿಕೊಂಡರು ಆದರೆ "ಫಲಿತಾಂಶಗಳು ಬರ್ಡರ್‌ಲೈನ್ ಪಾಸಿಟೀವ್" ಆಗಿದ್ದವು. ನವೆಂಬರ್ ೨೦೧೦ ರಲ್ಲಿ, ಹಾಡುಗಾರರು ವರದಿ ಮಾಡಲ್ಪಟ್ಟ ಹತ್ಯೆಯ ಬೆದರಿಕೆಯ ಒಂದು ತಿಂಗಳ ನಂತರ, ರಷಿಯನ್ ಅನಸ್ತೇಷಿಯಾ ಒಬುಖೋವಾದ ವಿರುದ್ಧ ಒಂದು ಪ್ರತಿಬಂಧದ ನಿಯಮವು ಜಾರಿಗೊಳಿಸಲ್ಪಟ್ಟಿತು, ಅವನು ಗಾಗರಿಗೆ ತಲೆಗೆ ಶೂಟ್ ಮಾಡಿ ಸಾಯಿಸುವ ಬೆದರಿಕೆಯನ್ನು ಒಡ್ಡಿದ್ದನು.

೨೦೧೧–ಪ್ರಸ್ತುತ: ಬೊರ್ನ್ ದಿಸ್ ವೇ

ಗಾಗಾರ ಎರಡನೆಯ ಸ್ಟೂಡಿಯೋ ಆಲ್ಬಮ್ ಮತ್ತು ಮೂರನೆಯ ಮಹತ್ವದ ಬಿಡುಗಡೆ ಬೊರ್ನ್ ದಿಸ್ ವೇ ಇದು ಮೇ ೨೩, ೨೦೧೧ ರಂದು ಬಿಡುಗಡೆಯಾಗಲಿದೆ. ಆಕೆಯು ಆಲ್ಬನ್‌ನ ಶಿರ್ಷಿಕೆಯನ್ನು ೨೦೧೦ ಎಮ್‌ಟಿವಿ ವೀಡಿಯೋ ಮ್ಯೂಸಿಕ್ ಅವಾರ್ಡ್ಸ್‌ನಲ್ಲಿ ವೀಡಿಯೋ ಆಫ್ ದ ಇಯರ್ ಭಾಷಣಕ್ಕೆ ತಮ್ಮ ಒಪ್ಪಿಗೆಯನ್ನು ನೀಡುವ ಸಮಯದಲ್ಲಿ ಘೋಷಿಸಿದರು. ಇದರ ಆಗಮನವು ಫೆಬ್ರವರಿ ೧೧, ೨೦೧೧ ರಂದು ಇದರ ನಾಮಸೂಚಕ ಲೀಡ್ ಸಿಂಗಲ್‌ನ ಬಿಡುಗಡೆಯನ್ನು ಅನುಸರಿಸುತ್ತದೆ. ಸಿಂಗಲ್ ಬಿಡುಗಡೆಯ ಮುಂಚೆ ನಿರ್ಧರಿಸಿದ ದಿನಾಂಕವಾದ ಫೆಬ್ರವರಿ ೧೩, ೨೦೧೧ ಗಾಗಾರಿಂದ ೨೦೧೧ ರ ಹೊಸ ವರ್ಷದ ದಿನದ ಮಧ್ಯರಾತ್ರಿಯಂದು ಘೋಷಿಸಲ್ಪಟ್ಟಿತು. "ಪ್ರಮುಖ [...] ಮೆಟಲ್ ಅಥವಾ ರಾಕ್ ’ಎನ್’ ರೋಲ್, ಪಾಪ್, ಎಂಥೆಮಿಕ್ ಶೈಲಿಗಳ ಜೊತೆಗಿನ ವಾಸ್ತವವಾಗಿ ಸ್ಲೆಜ್-ಹ್ಯಾಮರಿಂಗ್ ಡಾನ್ಸ್ ಬೀಟ್‌ಗಳ ಜೊತೆಗಿನ ಎಲೆಕ್ಟ್ರಾನಿಕ್ ಸಂಗೀತದ ಒಂದು ಸಂಯೋಜನ" ಎಂಬುದಾಗಿ ವರ್ಣಿಸಲ್ಪಟ್ಟ ಬೊರ್ನ್ ದಿಸ್ ವೇ ಇದು ಗಗಾರ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಮೂರನೆಯ ಆಲ್ಬಮ್ ಆಗಿತ್ತು. ಅವರು ಹೇಳಿದರು, "ಇದು ತುಂಬಾ ಶೀಘ್ರವಾಗಿ ಬಿಡುಗಡೆಯಾಗಲ್ಪಟ್ಟಿತು. ನಾನು [ಈ ಆಲ್ಬಮ್‌ಗಾಗಿ] ಹಲವಾರು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದೆ, ಮತ್ತು ಇದು ಈಗ ಸಮಾಪ್ತಿಗೊಂಡಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ಕೆಲವು ಕಲಾವಿದರು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಾನು ಹಾಗಲ್ಲ. ನಾನು ಪ್ರತಿದಿನವೂ ಸಂಗೀತವನ್ನು ಬರೆಯುತ್ತೇನೆ." ಗಾಗಾರಿಂದ ಈ ಮುಂಚೆಯೇ ನಿಗದಿಪಡಿಸಲ್ಪಟ್ಟ ಎರಡು ಟ್ರ್ಯಾಕ್‌ಗಳು (ಹಾಡುಗಳು) - ಅವುಗಳಲ್ಲಿ ಒಂದು ಹಾಡನ್ನು ಅವರು ದ ಮಾನ್‌ಸ್ಟರ್ ಬಾಲ್ ಟೂರ್‌ನ ಸಂದರ್ಭದಲ್ಲಿ ಪ್ರದರ್ಶಿಸಿದ್ದಾರೆ, ತಮ್ಮ ಆಲ್ಬಮ್ ಬಗ್ಗೆ ಉಲ್ಲೇಖಿಸುತ್ತ ಅವರು ಈ ರೀತಿ ಹೇಳಿದ್ದಾರೆ "ನಮ್ಮನ್ನು ರಾತ್ರಿಗಳಲ್ಲಿ ಯಾವುದು ಎಚ್ಚರವಾಗಿರಿಸುತ್ತದೆಯೋ ಮತ್ತು ನಮಗೆ ಭೀತಿಯನ್ನುಂಟುಮಾಡುವುದರ" ದಶಕದ ಬಗೆಗಿನ "ಅತ್ಯುತ್ತಮ" ಆಲ್ಬಮ್. "ಚರ್ಚ್‌ಗೆ ಹೋಗುವ ಕೆಟ್ಟ ಮಕ್ಕಳಿಗೆ" ಹೋಲಿಸಲ್ಪಡುವ ಬೊರ್ನ್ ದಿಸ್ ವೇ "ಒಂದು ಉನ್ನತ ಮಟ್ಟದಲ್ಲಿ ವಿನೋದವನ್ನು ಒದಗಿಸುತ್ತದೆ", ಗಾಗಾ ತಮ್ಮ ಸಂಗೀತವನ್ನು "ಒಂದು ವಿಗ್ ಅಥವಾ ಲಿಪ್‌ಸ್ಟಿಕ್ ಅಥವಾ ಒಂದು ಫಕಿಂಗ್ ಮೀಟ್ ಡ್ರೆಸ್‌ಗಿಂತ ಹೆಚ್ಚು ಆಳವಾದದ್ದು" ಎಂಬುದಾಗಿ ವರ್ಣಿಸುತ್ತಾರೆ, ಮತ್ತು ಇದನ್ನು ಕೇಳಿದ ನಂತರ ಆಕನ್ ಆಕೆಯು ಸಂಗೀತವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂಬ ಹೇಳಿಕೆಯನ್ನು ನೀಡಿದರು. ಫೆಬ್ರವರಿ ೧೩ ರಂದು ಗಾಗಾ ಫೆಬ್ರವರಿ ೧೧ರಂದು ಬಿಡುಗಡೆಯಾಗಲ್ಪಟ್ಟ ತಮ್ಮ ಸಿಂಗಲ್ "ಬೊರ್ನ್ ದಿಸ್ ವೇ" ಗೆ ೫೩ನೆಯ ಗ್ರ್ಯಾಮ್ಮಿ ಅವಾರ್ಡ್ಸ್‌ನಲ್ಲಿ ಲೈವ್ ಪ್ರದರ್ಶನವನ್ನು ನೀಡಿದರು. ಆಕೆಯು ತಮ್ಮ ಪ್ರದರ್ಶನಕ್ಕಾಗಿ ಯಾವ ಕಡೆಯಿಂದ ಸ್ಟೇಜ್‌ನ ಮೇಲೆ ಬಂದರೋ ಅಲ್ಲಿಂದ ಅವರು ಒಂದು ಬೃಹದಾಕಾರದ ಅಪಕ್ವ-ರೂಪದ ಕೃತಕ ಶಾಖೋಪಕರಣದಲ್ಲಿ (ಇದರ ವಿನ್ಯಾಸಗಾರ ಹುಸೇನ್ ಚಾಲಯಾನ್‌ರಿಂದ "ದ ವೆಸೆಲ್" ಎಂಬುದಾಗಿ ಕರೆಯಲ್ಪಟ್ಟಿತು), ಕೆಂಪು ರತ್ನಗಂಬಳಿಯ ಮೂಲಕ ಫ್ಯಾಷನ್ ಮಾಡೆಲ್‌ಗಳಿಂದ ಕರೆತರಲ್ಪಟ್ಟರು. ಈ ಹಾಡು ಚಾರ್ಟ್ಸ್‌ನ ಇತಿಹಾಸದಲ್ಲಿ ಬಿಲ್‌ಬೋರ್ಡ್ ಹಾಟ್ ೧೦೦ ಯಾದಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ೧೯ನೆಯ ಮೊದಲ-ಸ್ಥಾನದ ಡೆಬ್ಯೂಟ್ ಮತ್ತು ೧,೦೦೦ನೆಯ ಪ್ರಥಮ-ಸ್ಥಾನದ ಸಿಂಗಲ್ ಸ್ಥಾನವನ್ನು ಪಡೆದುಕೊಂಡಿತು. ಎಪ್ರಿಲ್ ೧೮ ರಂದು, ಕ್ವೀನ್ ಗಿಟಾರಿಸ್ಟ್ ಬ್ರಿಯಾನ್ ಮೇ "ಯು ಎಂಡ್ ಆಯ್" ಹಾಡಿಗೆ ಎಲೆಕ್ಟ್ರಾನಿಕ್ ಗಿಟಾರ್ ಅನ್ನು ಒದಗಿಸುತ್ತಾರೆ ಎಂಬುದಾಗಿ ಘೋಷಿಸಲ್ಪಟ್ಟಿತು.

ಗಾಗಾರ ಹೊಸ ಆಲ್ಬಮ್ ಬೊರ್ನ್ ದಿಸ್ ವೇ ಯ ಕನಿಷ್ಠ ಪಕ್ಷ ಮೂರು ಹಾಡುಗಳು "ಜುದಾಸ್", "ಯುಎಂಡ್ ಆಯ್" ಮತ್ತು "ಬೊರ್ನ್ ದಿಸ್ ವೇ" ಬಹಿರಂಗವಾದ ಧಾರ್ಮಿಕ ಸಾಹಿತ್ಯಗಳನ್ನು ಒಳಗೊಂಡಿವೆ. ಈ ಮುಂಚೆಯೇ ಪ್ರಕಟವಾಗಲ್ಪಟ್ಟ "ಬೊರ್ನ್ ದಿಸ್ ವೇ" ಮತ್ತು "ಜುದಾಸ್" ಗಳು ಕೆಲವು ಧಾರ್ಮಿಕತೆಯ ಬಗ್ಗೆ ಮಾತನಾಡುವ ಮತ್ತು ಇತರರಿಂದ ಶ್ಲಾಘನೆಗೆ ಒಳಗಾಗುವ ವ್ಯಕ್ತಿಗಳಿಂದ ಹಿಂಸೆಗೆ ಪ್ರಚೋದನೆಯನ್ನುಂಟುಮಾಡಿದವು. "ಜುದಾಸ್‌"ನಲ್ಲಿ ಮೊನ್‌ಸ್ಟರ್‌ನ ವಿಷಯಗಳನ್ನು ಜೊತೆಯಾಗಿ ಮತ್ತು ಜೊತೆಯಿಲ್ಲದೆಯೇ ವಿಸ್ತರಿಸುವಲ್ಲಿ ಗಾಗಾ ಎಲ್ಲಾ ಮಾನವರ ನಶಿಸಲ್ಪಟ್ಟ, ಅವನತಿಗೊಂಡ ಸ್ವರೂಪದ ಬಗ್ಗೆ ಮತ್ತು ನಮಗೆ ಯಾವುದು ಕೆಟ್ಟದ್ದೋ ಅದರೆಡೆಗಿನ ನಮ್ಮ ಆಕರ್ಷಣೆ, "ಆಇ ವನ್ನಾ ಲವ್ ಯು, / ಬಟ್ ಸಮ್‌ತಿಂಗ್ ಈಸ್ ಪುಲ್ಲಿಂಗ್ ಅವೇ ಫ್ರಾಮ್ ಯು " ಎಂದು ಹೇಳುವುದರ ಬಗ್ಗೆ ನೇರವಾಗಿ ಉಲ್ಲೇಖಿಸುತ್ತಾರೆ. / ಜೀಸಸ್ ನನ್ನ ದೇವರು, / ಜುದಾಸ್ ನಾನು ಸೇರಿಕೊಂಡಿರುವ ಅಸುರ ದೇವತೆ." "ಬೊರ್ನ್ ದಿಸ್ ವೇ" ಯಲ್ಲಿ ಗಾಗಾ ದೇವರು ಜನರು ಹೇಗಿದ್ದಾರೋ ಅದೇ ರೀತಿಯಲ್ಲಿಯೇ ಅವರನ್ನು ಸೃಷ್ಟಿಸುತ್ತಾನೆ ಮತ್ತು "ದೇವರು ತಪ್ಪುಗಳನ್ನು ಮಾಡುವುದಿಲ್ಲ" ಎಂಬುದಾಗಿ ಹೇಳುತ್ತಾರೆ, ಈ ಮೂಲಕ ಅವರು ಸೂಚಿಸುವುದೇನೆಂದರೆ ಸಮಾಜದಿಂದ ನಿರ್ದೇಶಿಸಲ್ಪಡುವ ಗೇ (ಸಲಿಂಗಕಾಮಿ ಅಥವಾ ಉಲ್ಲಾಸಶೀಲ) ಜನರು ಮತ್ತು ಇತರರು ತಮ್ಮನ್ನು ತಾವು ಪ್ರೀತಿಸಬೇಕು. "ಯು ಎಂಡ್ ಆಯ್" ಹಾಡಿನಲ್ಲಿ ಗಾಗಾ ತನ್ನ ಜೀವನದಲ್ಲಿ ಮೂರು ಗಂಡಸರು ಪ್ರಭಾವವನ್ನು ಬೀರಿದ್ದಾರೆ, ತನ್ನ ತಂದೆ, ಒಬ್ಬ ನಿರ್ದಿಷ್ಟ ಹಳೆಯ ಬಾಯ್‌ಫ್ರೆಂಡ್ ಮತ್ತು ಜೀಸಸ್ ಕ್ರೈಸ್ಟ್ ಎಂದು ಹೇಳಿದ್ದಾರೆ. ಧರ್ಮ ಮತ್ತು ನೈತಿಕತೆಯ ಬಗ್ಗೆ ಮಾತನಾಡುವ ಒಬ್ಬ ಪಾಪ್ ಸ್ಟಾರ್ ಅನ್ನು ಸ್ವಾಗತಿಸುವ ಬದಲಾಗಿ, ಕೆಲಸು ಧಾರ್ಮಿಕ ವಿಷಯದ ಬಗ್ಗೆ ಮಾತನಾಡುವ ಜನರು ಗಾಗಾರನ್ನು ಅಪಾಯವನ್ನುಂಟುಮಾಡುವ ಮತ್ತು ಅವರ ಸಂದೇಶಗಳ ತೀರ್ಪು ನೀಡಲಾಗದ ಸ್ವರೂಪದ ಬಗ್ಗೆ ವಿಮರ್ಶೆಯನ್ನು ಮಾಡುತ್ತ ಅವರನ್ನು ಹಿಂಸೆಗೆ ಒಳಪಡಿಸಿದರು. ಧಾರ್ಮಿಕ ಮುಖಂಡರುಗಳು ಮತ್ತು ಧಾರ್ಮಿಕತೆಯ ಬಗ್ಗೆ ಮಾತನಾಡುವ ಜನರನ್ನು ಒಳಗೊಂಡಂತೆ ಅಡ್ಮೈರರ್‌ಗಳು ಗಮನಿಸಿದ್ದೇನೆಂದರೆ ಗಾಗಾ ನಿಖರತೆ, ವಿವೇಚನೆ, ಅವ್ಯಭಿಚಾರತೆ ಮತ್ತು ಆತ್ಮ-ಗೌರವಗಳಿಗೆ ನೀಡುವ ಕರೆಗಳನ್ನು ಒಳಗೊಂಡ ಆಧ್ಯಾತ್ಮಿಕ ಸಂದೇಶಗಳ ಜೊತೆಗೆ ಮಿಲಿಯನ್ ಸಂಖ್ಯೆಯ ಯುವ ಜನರನ್ನು ತಲುಪುತ್ತಾರೆ.

ತಮ್ಮ ಸಂಗೀತವನ್ನು ಎಲ್ಲೆಡೆಯಲ್ಲಿ ತಲುಪಿಸುತ್ತ ಗಾಗಾ ಎನಿಮೇಟೆಡ್ ಫೀಚರ್ ಫಿಲ್ಮ್ ಗ್ನೋಮಿಯೋ & ಜ್ಯೂಲಿಯಟ್ ಗೆ ಒಂದು ಮೂಲ ಡ್ಯುಯೆಟ್‌ನ ಧ್ವನಿಮುದ್ರಣ ಮಾಡುವುದಕ್ಕೆ ಎಲ್ಟನ್ ಜಾನ್ ಜೊತೆಗೂಡಿದರು. "ಹೆಲೋ, ಹೆಲೋ" ಎಂಬ ಶಿರ್ಷಿಕೆಯನ್ನು ಹೊಂದಿದ ಹಾಡು ಗಗಾರ ಸಂಗೀತದ ಹೊರತಾಗಿ ಫೆಬ್ರವರಿ ೧೧, ೨೦೧೧ ರಂದು ಬಿಡುಗಡೆ ಮಾಡಲ್ಪಟ್ಟಿತು. ಡ್ಯುಯೆಟ್ ಆವೃತ್ತಿಯು ಕೇವಲ ಫಿಲ್ಮ್‌ನಲ್ಲಿ ಮಾತ್ರ ಪ್ರದರ್ಶಿಸಲ್ಪಟ್ಟಿತು.

ಕಲಾತ್ಮಕತೆ

ಸಂಗೀತದ ಶೈಲಿ ಮತ್ತು ಪ್ರಭಾವಗಳು

ಗಾಗಾ ಗ್ಲಾಮ್ ರಾಕ್ ಕಲಾವಿದರಾದ ಡೇವಿಡ್ ಬೂವಿ ಮತ್ತು ಕ್ವೀನ್,ಪಾಪ್ ಗಾಯಕರಾದ ಮಡೋನಾ, ಬ್ರಿಟ್ನಿ ಸ್ಪಿಯರ್ಸ್ ಮತ್ತು ಮೈಕೆಲ್ ಜಾಕ್ಸನ್‌ರಿಂದ ಪ್ರಾಭಾವಿತಗೊಂಡಿದ್ದರು. ದಿ ಕ್ವೀನ್ ಹಾಡು "ರೇಡಿಯೋ ಗಾ ಗಾ" ಇಕೆಯ ಸ್ಟೇಜ್ ಹೆಸರು, "ಲೇಡಿ ಗಾಗಾ"ಕ್ಕೆ ಸ್ಫೂರ್ತಿಯಾಯಿತು. ಆಕೆ ಹೇಳುತ್ತಾರೆ: " ಫ್ರೆಡಿ ಮರ್ಕ್ಯೂರಿ ಮತ್ತು ಕ್ವೀನ್ 'ರೇಡಿಯೋ ಗಾಗಾ' ಎಂಬ ಹಿಟ್ ನೀಡಿದ್ದನ್ನು ನಾನು ಆರಾಧಿಸುತ್ತೇನೆ. ಅದಕ್ಕಾಗಿ ನಾನು ಆ ಹೆಸರನ್ನು ಪ್ರೀತಿಸುತ್ತೇನೆ[...] ಪಾಪ್ ಸಂಗೀತ ಲೋಕದಲ್ಲಿ ಫ್ರೀಡಿ ಒಬ್ಬ ಅದ್ವಿತೀಯ ಅತ್ಯುತ್ತಮ ವ್ಯಕ್ತಿ ." ತನಗೆ ಮತ್ತು ಮಡೋನಾರನ್ನು ಹೋಲಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಗಾಗಾ ಹೇಳಿತ್ತಾರೆ: "ನಾನು ಸೌಂಡ್ ಪ್ರತಿಷ್ಠೆಯನ್ನು ಬಯಸುವುದಿಲ್ಲ ಆದರೆ ಪಾಪ್ ಸಂಗೀತವನ್ನು ಬದಲಾಯಿಸುವ ಉದ್ದೇಶ ಹೊಂದಿದ್ದೇನೆ. ಕೊನೆಯ ಕ್ರಾಂತಿಯನ್ನು ಮಡೋನಾ ೨೫ ವರ್ಷ ಹಿಂದೆ ಮಾಡಿದ್ದರು." ನಟ ಮತ್ತು ಗಾಯಕ ಗ್ರೇಸ್ ಜಾನ್ಸ್ ಇದರ ಜೊತೆ ಬ್ಲಾಂಡಿ ಗಾಯಕ ಡೆಬ್ಬಿ ಹ್ಯಾರಿ ಕೂಡ ಪ್ರಭಾವ ಬೀರಿದ್ದಾರೆ .

ಲೇಡಿ ಗಾಗಾ 
ದಿ ಫೇಮ್ ಬಾಲ್ ಟೂರ್ ನಲ್ಲಿ ಅಭಿನಯಿಸುತ್ತಿರುವಾಗ ಅವಳು ಪ್ಲಾಸ್ಟಿಕ್ ಗುಳ್ಳೆಯ ವಸ್ತ್ರ ಧರಿಸಿದ್ದಳು.

ಗಾಗಾ ತುಂಬಾ ಮಂದವಾದ ಸ್ವರ ಹೊಂದಿದ್ದಾರೆ. ಇವರ ಸ್ವರವನ್ನು ಕೆಲವೊಮ್ಮೆ ಮಡೋನಾ ತ್ತು ಗ್ವೆನ್ ಸ್ಟೇಫಾನಿಗೆ ಹೋಲಿಸುತ್ತಾರೆ, ಅವರು ಸಂಯೋಜಿಸಿದ ಸಂಗೀತ ೧೯೮೦ ಪಾಪ್ ೧೯೯೦ ಯೂರೋಪಾಪ್ ಇಕೋ ಕ್ಲಾಸಿಕ್‌ನಂತಿದೆ. ಈಕೆಯ ಮೊದಲ ಆಲ್ಬಮ್ ದಿ ಫೇಮ್‌ ಕುರಿತು ದಿ ಸಂಡೆ ಟೈಮ್ಸ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ: ಸಂಗೀತ, ಫ್ಯಾಶನ್, ಕಲೆ ಮತ್ತು ತಂತ್ರಜ್ಞಾನ ಎಲ್ಲಾ ಸೇರಿಕೊಂಡು (ಗಾಗಾ) ಮಡೋನಾ ಮತ್ತು ಗ್ವೆನ್ ಸ್ಟೇಫಾನಿ ಸಿಕ್ರಾರ ’ಹೋಲೊಬ್ಯಾಕ್ ಗರ್ಲ್’ ಕೈಲಿ ಮಿನೊಗ್ ೨೦೦೧ ಅಥವಾ ಈಗ ಗ್ರೇಸ್ ಜಾನ್ಸ್ ಎದ್ದು ಬರುವಂತಿದೆ. ಹಾಗೆಯೇ ದಿ ಬೋಸ್ಟನ್ ಗ್ಲೋಬ್ ವಿಮರ್ಶಕಿ ಸಾರಾಹ್ ರೋಡ್ಮನ್ ಹೇಳಿದ್ದಾರೆ "ಮಡೋನಾ ರಿಂದ ಗ್ವೆನ್ ಸ್ಟೇಫಾನಿಯವರೆಗೆ, ಬಲಿಷ್ಟವಾದ ಗಾಳಿವಾದ್ಯ ಮತ್ತು ಬಬ್ಲಿ ಬೀಟ್ಸ್‌ಗಳಿಂದ ಎಲ್ಲರಿಂದಲೂ ಸಂಪೂರ್ಣವಾದ ಪ್ರೇರಣೆ [ಈಕೆ] ಪಡೆದಿದ್ದಾರೆ... ." ಈಕೆಯ ಸಾಹಿತ್ಯದಲ್ಲಿ ಬೌದ್ಧಿಕತೆಗೆ ಪ್ರಚೋದನೆ ನೀಡುವ ಯಾವುದೇ ವಿಷಯವಿಲ್ಲ. ಆದರೆ ಈಕೆಯು ನಮ್ಮನ್ನು ಅಪ್ರಯತ್ನವಾಗಿ ಹೆಜ್ಜೆಹಾಕುವಂತೆ ಪ್ರೇರೆಪಿಸುತ್ತಾರೆ" ಸಂಗೀತ ವಿಮರ್ಶಕ ಸಿಮೋನ್ ರೆನಾಲ್ಡ್ಸ್ ಬರೆಯುತ್ತಾರೆ; ಸಂಗೀತ ಹೊರತು ಪಡಿಸಿ ಉಳಿದೆಲ್ಲವು ಗಾಗಾರಿಗೆ ಎಲೆಕ್ಟ್ರೊಕ್ಲಾಶ್‌ನಿಂದ ಬಂದಿದೆ. ಅದರೆ ೧೯೮೦ರಂತಲ್ಲ, ಕೇವಲ ನಿರ್ದಯವಾದ ಹಾಸ್ಯಭರಿತ ಹೊಳಪು ನೀಡಿದ ಆಟೋ-ಟ್ಯೂನ್‌ಗಳು ಮತ್ತು ಆರ್&ಡಿ-ಇಶ್ ಬೀಟ್ಸ್‌ನಿಂದ ಬಲಪಡಿಸಲಾಗಿದೆ.

ಗಾಗಾರ ಮೇಲೆ ಫ್ಯಾಶನ್ ಗಾಢವಾದ ಪ್ರಭಾವ ಬೀರಿದೆ ಎಂಬುದು ಕಂಡುಬರುತ್ತದೆ. ಡೊನಾಟೆಲ್ಲ ವೆರ್ಸಾಚೆ ತನ್ನ ಧ್ಯಾನ(ಗುರು) ಎಂದು ಪರಿಗಣಿಸುತ್ತಾರೆ. ಗಾಗಾ ತನ್ನದೆ ಆದ ಹೌಸ್ ಆಫ್ ಗಾಗ ಹೆಸರಿನ ಸೃಜನಾತ್ಮಕ ಪ್ರೊಡಕ್ಷನ್ ತಂಡವನ್ನು ಹೊಂಡಿದ್ದು ಖುದ್ದಾಗಿ ತಾವೆ ಅದನ್ನ ನಿರ್ವಹಿಸುತ್ತಾರೆ. ಈ ತಂಡವು ಈಕೆಯ ಹಲವಾರು ಬಟ್ಟೆಗಳು, ಸ್ಟೇಜ್ ಪರಿಕರಗಳು ಮತ್ತು ಕೇಶವಿನ್ಯಾಸವನ್ನು ಸಿದ್ಧಪಡಿಸುತ್ತದೆ. ಈಕೆಯ ಫ್ಯಾಶನ್ ಪ್ರೀತಿಯು ತಾಯಿಯ ಬಳುವಳಿಯಾಗಿದೆ, ಇವರು ಹೇಳುತ್ತಾರೆ; "ಯಾವಾಗಲೂ ಚೆನ್ನಾಗಿ ಮತ್ತು ಸುಂದರವಾಗಿರಬೇಕು." "ನಾನು ಸಂಗೀತ ಸಂಯೋಜಿಸುವಾಗ ಯಾವ ಉಡುಗೆಯನ್ನು ಸ್ಟೇಜ್ ಮೇಲೆ ಧರಿಸಬೇಕೆಂದು ವಿಚಾರ ಮಾಡುತ್ತಿರುತ್ತೇನೆ. ಪ್ರದರ್ಶನ ಕಲೆ, ಪಾಪ್ ಪ್ರದರ್ಶನ ಕಲೆ, ಮತ್ತು ಫ್ಯಾಶನ್ ಇವೆಲ್ಲವು ಜೊತೆಯಾಗಿರಬೇಕು. ನನಗೆ, ಇವೆಲ್ಲವೂ ಜೊತೆಯಾಗಿದ್ದು ಸೂಪರ್ ಅಭಿಮಾನಿಗಳನ್ನು ನೀಡಬೇಕು. ಅದೆಲ್ಲವನ್ನು ನಾನು ವಾಪಸ್ಸು ಪಡೆಯಲು ಬಯಸುತ್ತೇನೆ. ಅಭಿಮಾನಿಗಳು ನಮ್ಮೆಲ್ಲ ಅಂಶಗಳನ್ನು ತಿನ್ನಬೇಕು ಮತ್ತು ಅನುಭವಿಸಬೇಕು ಮತ್ತು ನೆಕ್ಕಬೇಕು ಎಂದು ಬಲವಾದ ಆಲಂಕಾರಿಕ ನಿರೂಪಣೆ ಮಾಡಲು ಬಯಸುತ್ತೇನೆ." ಗ್ಲೊಬಲ್ ಲ್ಯಾಂಗ್ವೇಜ್ ಮಾನಿಟರ್ "ಲೇಡಿ ಗಾಗಾ" ಟಾಪ್ ಫ್ಯಾಶನ್ ಬ್ಯ್\ಉ. ೩. ಎಂಟರ್‌ಟೇನ್‌ಮೆಂಟ್‌ವೀಕ್ಲಿ ಪತ್ರಿಕೆಯು ಆಕೆಯ ಉಡುಪುಗಳನ್ನು ತನ್ನ ದಶಕದ "ಬೆಸ್ಟ್-ಅಫ್" ಯಾದಿಯಲ್ಲಿ ನಮೂದಿಸುತ್ತ ಈ ರೀತಿ ಹೇಳಿತು, "ಮಪೆಟ್ಸ್‌ನಿಂದ ನಿರ್ಮಿಸಲ್ಪಟ್ಟ ಉಡುಪುಗಳಾಗಿರಬಹುದು ಅಥವಾ ತಂತ್ರಿಕವಾಗಿ ಇರಿಸಲ್ಪಟ್ಟ ಬಬಲ್‌ಗಳಾಗಿರಬಹುದು, ಗಾಗಾರ ವರ್ತನೆಯ ಸಮಗ್ರತೆಯು ಪ್ರದರ್ಶನದ ಕಲೆಯನ್ನು ಮುಖ್ಯವಾಹಿನಿಗೆ ತಂದಿತು".

ಸಾರ್ವಜನಿಕ ಪ್ರತೀಕ

ಲೇಡಿ ಗಾಗಾ 
ಮಾನ್ಸ್‌ಸ್ಟರ್ ಬಾಲ್ ಟೂರ್‌ನಲ್ಲಿ "ರಕ್ತ ಹೀರುವ" ಅಭಿನಯದಲ್ಲಿ ಗಾಗಾ, ಅವಳ ಅಸಂಪ್ರದಾಯ ಬದ್ಧತೆಯಿಂದ ಉತ್ತಮ ಗುರುತಿಸುವಿಕೆ ಹೊಂದಿದ್ದಳು,

ಗಾಗಾರ ಸಂಗೀತ,ಫ್ಯಾಶನ್ ಸೆನ್ಸ್ ಮತ್ತು ಪರ್ಸೊನಾ ಇವೆಲ್ಲವು ಮಿಶ್ರವಾದ ವಿಮರ್ಶಕ ಪ್ರತಿಕ್ರಿಯೆ ಪಡೆದಿದೆ. ರೋಲ್ ಮಾಡೆಲ್ , ಟ್ರೈಲ್‌ಬ್ಲೇಜರ್ ಮತ್ತು ಫ್ಯಾಶನ್ ಐಕಾನ್ ಆಗಿ ಈಕೆಯ ಸ್ಥಾನವು ಎತ್ತಿಹಿಡಿಯಲ್ಪಟ್ಟಿದೆ ಮತ್ತು ನಿರಾಕರಣೆಯಾಗಿದೆ. ಗಾಗಾರ ಆಲ್ಬಮ್‌ಗಳು ಹೆಚ್ಚು ಉತ್ತಮವಾದ ಪ್ರತಿಕ್ರಿಯೆಯನ್ನೆ ಪಡೆದಿವೆ, ಪ್ರಸಿದ್ಧ ಸಂಸ್ಕೃತಿಯಲ್ಲಿ ಹೊಸದಾದ ಬದಲಾವಣೆಗಳ ಅವಶ್ಯಕತೆ, ಗಾಗಾ ಪ್ರಮುಖ ಸಾಮಾಜಿಕ ವಿಷಯಗಳನ್ನು ಗಮನಸೆಳ. ಆತ್ಮ ವಿಶ್ವಾಸದ ಹೆಚ್ಚಾಗುವ ಶ್ಲಾಘನೆಯನ್ನು ಅಭಿಮಾನಿಗಳಿಂದ ಪಡೆದು ಫ್ಯಾಶನ್ ಉದ್ದಿಮೆಯಲ್ಲಿ ಚೈತನ್ಯದ ಚಿಲುಮೆಯಾಗಿದ್ದಾರೆ. ಈಕೆಯ ಪ್ರದರ್ಶನವನ್ನು ಹೀಗೆ ವರ್ಣಿಸಲಾಗುತ್ತದೆ ತುಂಬಾ ಮನೋರಂಜನಾತ್ಮಕ ಮತ್ತು ನವೀನತೆ ಹೊಂದಿದೆ"; ಮುಖ್ಯವಾಗಿ, ೨೦೦೯ ಎಂಟಿವಿ ವಿಡಿಯೋ ಮ್ಯೂಜಿಕ್ ಅವಾರ್ಡ್ಸ್‌ನಲ್ಲಿ ಪ್ರದರ್ಶಿಸಿದ "ಪಾಪರಾಜಿ" ರಕ್ತ ಚಿಮ್ಮುವಂತಿತ್ತು, ಕಣ್ಣು ಕೋರೈಸುವಂತಿತ್ತೆಂದು ಎಂಟಿವಿ ವರ್ಣಿಸಿದೆ. ದಿ ಮಾನ್ಸ್‌ಸ್ಟರ್ ಬಾಲ್ ಟೂರ್‌ನಲ್ಲಿಯೂ "ರಕ್ತ ನೆನೆಸುವ" ಥೀಮ್‌ನ್ನು ಮುಂದುವರೆಸಿದರು, ಇಲ್ಲಿ ಚರ್ಮದ ಬಿಗಿಯಾದ ಒಳ ಉಡುಪು ಧರಿಸಿದ್ದರು ಮತ್ತು "ದಾಳಿಕೋರ" ಪ್ರದರ್ಶನಕಾರ ಕಪ್ಪು ಉಡುಪು ಧರಿಸಿ ಆಕೆಯ ಕುತ್ತಿಗೆಯನ್ನು ಕಚ್ಚುತ್ತಿರುವಂತೆ ಕಾಣುತ್ತಿತ್ತು, "ರಕ್ತವು" ಆಕೆಯ ಎದೆಯನ್ನು ತೋಯಿಸುತ್ತಿತ್ತು, ನಂತರದಲ್ಲಿ ಅವರು ಹೊಂಡದಲ್ಲಿ ಬೀಳುತ್ತಾರೆ. ಮ್ಯಾಂಚೆಸ್ಟರ್, ಇಂಗ್ಲೆಂಡ್‌ನಲ್ಲಿ ಇದರ ಪ್ರದರ್ಶನಗಳಿತ್ತು, ಸ್ಥಳೀಯ ಒಂದು ದುರಂತದಲ್ಲಿ ಟ್ಯಾಕ್ಸಿ ಡ್ರೈವರ್ ಹನ್ನೆರಡು ಜನರನ್ನು ಕೊಲೆ ಮಾಡಿದ್ದ ಇದು ಪ್ರದರ್ಶನದ ಪರಿಣಾಮವೆಂದು ಕುಟುಂಬ ಮತ್ತು ಅಭಿಮಾನಿಗಳಿಂದ ಪ್ರತಿಭಟನೆಗೊಳಗಾಯಿತು. "ಬ್ರಾಡ್‌ಫೊರ್ಡ್‌ನಲ್ಲಿ ಏನಾಯಿತೆಂಬುದು ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗೆ ಇದೆ ಮತ್ತು ಕೆಲವೆ ಗಂಟೆಗಳ ಮೊದಲು ಕಂಬ್ರಿಯಾದಲ್ಲಿ ಏನಾಯಿತು ಎಂಬುದನ್ನು ವಿವರಿಸುತ್ತಾರೆ ಇದೊಂದು ಪ್ರತಿಕ್ರಿಯೆ ತೋರದ ವಿಷಯವಾಗಿದೆ" ಎಂದು ಮದರ್ಸ್ ಅಗೆನಸ್ಟ್ ವಯಲನ್ಸ್‌ನ ಲೈನ್ ಕೊಸ್ಟೇಲೊ ಹೇಳುತ್ತಾರೆ. ನಂತರದಲ್ಲಿ ಕ್ರಿಸ್ ರಾಕ್ ಎದ್ದು ಕಾಣುವ ಪ್ರಚೋದನಕಾರಿ ನಡವಳಿಕೆಯನ್ನು ಬೆಂಬಲಿಸುತ್ತಾನೆ. "ಅವಳು ಲೇಡಿ ಗಾಗಾ," "ಅವಳು ಹುಡುಗಿಯರ ವರ್ತನೆ ಹೊಂದಿಲ್ಲ.’ ಗಾಗಾ ಹೆಸರಿನ ವ್ಯಕ್ತಿಯಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಏನನ್ನು ನೀವು ನಿರೀಕ್ಷಿಸುತ್ತಿದ್ದೀರಿ?" ಎಂಡು ಹೇಳಿದರು ೨೦೧೦ ಎಂಟಿವಿ ವಿಡಿಯೋ ಮ್ಯೂಜಿಕ್ ಅವಾರ್ಡ್ಸ್‌ನಲ್ಲಿ ಸತ್ತ ಪ್ರಾಣಿಯ ಮಾಂಸದಿಂದ ತಯಾರಿಸಿದ ಬೂಟ್‌ಗಳು, ಪರ್ಸ್ ಮತ್ತು ಹ್ಯಾಟ್ ಧರಿಸಿದ್ದರು . ಈ ಧಿರಿಸು ಟೈಮ್ ಮ್ಯಾಗಜೀನ್‌ನ ೨೦೧೦ರ ಫ್ಯಾಶನ್ ಸ್ಟೇಟ್‍‍ಮೆಂಟ್‌ ನಲ್ಲಿ ಸ್ಥಾನ ಪಡೆಯಿತು ಮತ್ತು "ಮಾಂಸದುಡುಗೆ" ಎಂದು ವ್ಯಾಪಕ ಪ್ರಚಾರ ಪಡೆಯಿತು. ಇದನ್ನು ಅರ್ಜಂಟೈನಾದ ಫ್ಯಾಶನ್ ವಿನ್ಯಾಸಕ ಫ್ರಾನ್ಸ್ ಫರ್ನಾಂಡೀಸ್ ತಯಾರಿಸಿದ್ದರು ಇದಕ್ಕಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಪ್ರಪಂಚದಾದ್ಯಂತದ ಮೀಡಿಯಾಗಳು ತಮ್ಮ ಗಮನವನ್ನು ಈ ಕಡೆ ಹರಿಸಿದವು ಆದರೆ ಪ್ರಾಣಿ ರಕ್ಷಣಾ ಸಂಸ್ಥೆ ಪೇಟಾದ ಕೋಪಕ್ಕಿಡಾಗಬೇಕಾಯಿತು ಆದಾಗ್ಯೂ, ಗಾಗಾ ನಂತರದಲ್ಲಿ ತಮಗೆ ಯಾವುದೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅಗೌರವ ತೋರುವ ಉದ್ದೇಶವಿದ್ದುದನ್ನು ನಿರಾಕರಿಸಿದರು ಮತ್ತು ಎಲ್‌ಜಿಬಿಟಿ ಸಮುದಾಯದಲ್ಲಿರುವಂತೆ ಅವುಗಳ ಮೇಲೆ ಗಮನವನ್ನು ಹರಿಸುತ್ತ ನಾವು ತೊಡುವ ಉಡುಪು ಮಾನವ ಹಕ್ಕುಗಳ ಒಂದು ನಿರೂಪಣೆಯಾಗಿರಬೇಕು ಎಂಬುದಾಗಿ ಅವರು ಬಯಸಿದರು.

ಇವರ ಔಟರ್ ಸ್ಟೈಲ್‌ಗೆ ವ್ಯತಿರಿಕ್ತವಾಗಿ, ನ್ಯೂಯಾರ್ಕ್ ಪೋಸ್ಟ್ ಇವರ ಮೊದಲಿನ ರೂಪವನ್ನು ಹೀಗೆ ವರ್ಣಿಸುತ್ತದೆ "ಉದ್ದವಾದ ಕಪ್ಪು ಕೂದಲು, ಗಾಢವಾದ ಮೇಕಪ್ ಮತ್ತು ಬಿಗಿಯಾದ ಪ್ರಚೋದನಕಾರಿ ಉಡುಪಿನಿಂದಾಗಿ "ಜೆರ್ಸಿ ಶೋರ್ "ನಿಂದ ನಿರಾಶ್ರಿತರಾಗಿ ಬಂದಂತೆ ಕಾಣುತ್ತಾರೆ ." ಗಾಗಾ ನೈಸರ್ಗಿಕವಾದ ಕಪ್ಪು ಕೂದಲಿನ ಸ್ತ್ರೀ; ತಮ್ಮ ಕೂದಲನ್ನು ಬ್ಲೀಚ್ ಮೂಲಕ ಹೊಂಬಣ್ಣಕ್ಕೆ ತಿರುಗಿಸಿದ್ದಾರೆ ಏಕೆಂದರೆ ಎಮಿ ವೈನ್‌ಹೌಸ್‌ರಿಂದ ತಪ್ಪಾಗಿ ಆರಿಸಿಕೊಂಡಿದ್ದಾರೆ . ಅವರು ಅನೇಕ ವೇಳೆ ತಮ್ಮ ಅಭಿಮಾನಿಗಳನ್ನು ತಮ್ಮ "ಲಿಟಲ್ ಮಾನ್‌ಸ್ಟರ್ಸ್" ಎಂಬುದಾಗಿ ಉಲ್ಲೇಖಿಸಿದ್ದಾರೆ ಮತ್ತು ಅವರಿಗೆ ಸಮರ್ಪಣೆಯಾಗಿ, "ಮೈಕ್ [ರೋಫೋನ್] ಅನ್ನು ಹಿಡಿಯುವ [ತಮ್ಮ] ಕೈಗೆ" ಆ ಪದಗಳನ್ನು ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ. ಇದಲ್ಲದೇ ಇನ್ನೂ ಆರು ಟ್ಯಾಟು ಹಾಕಿಕೊಂಡಿದ್ದಾರೆ, ಜಾನ್ ಲೆನಾನ್‌ರಿಂದ ಸ್ಫೂರ್ತಿಗೊಂಡು, ಶಾಂತಿಯ ಸಂಕೇತ ಹಾಕಿಕೊಂಡಿದ್ದು ಇವರನ್ನು ತಮ್ಮ ಹೀರೋ ಎಂದು ಹೇಳಿದ್ದಾರೆ, ಮತ್ತು ತಮ್ಮ ಮೆಚ್ಚಿನ ತತ್ವಶಾಸ್ತ್ರಜ್ಞ, ಕವಿ ರೇನರ್ ಮರಿಯಾ ರೈಕ್ ತಮಗೆ ಹೇಳಿರುವ "ಫಿಲಾಸಫಿ ಆಫ್ ಸಾಲಿಟ್ಯೂಡ್" ಎಂಬುದನ್ನು ಎಡ ತೋಳಿನ ಮೇಲೆ ಸುರುಳಿಯಾಗಿ ಜರ್ಮನಿಯ ಲಿಪಿಯಲ್ಲಿ ಹಾಕಿಕೊಂಡಿದ್ದಾರೆ. ೨೦೦೮ರ ಕೊನೆಯಿಂದ, ಗಾಗಾರ ಫ್ಯಾಶನ್ ಮತ್ತು ಅವರ ಜೊತೆಯ ರೆಕಾರ್ಡಿಂಗ್ ಕಲಾವಿದೆ ಕ್ರಿಸ್ಟೀನಾ ಆ‍ಯ್‌೦ಗ್ವಿಲೇರಾರ ಸ್ಟೈಲ್, ಕೂದಲು ಮತ್ತು ಮೇಕಪ್‌ನಲ್ಲಿ ಹೋಲಿಕೆಯನ್ನು ಗುರುತಿಸಿ ಇಬ್ಬರಿಗೂ ಹೋಲಿಕೆ ಮಾಡಲಾಗುತ್ತಿದೆ. ಆ‍ಯ್‌೦ಗ್ವಿಲೇರಾ ಹೇಳಿದ್ದಾರೆ ತಾನು " ಗಾಗಾರನ್ನು ಅವರೊಬ್ಬ ಗಂಡಸೊ ಹೆಂಗಸೊ ಎಂದು ಸಂಪೂರ್ಣವಾಗಿ ತಿಳಿದಿಲ್ಲ". ಗಾಗಾ ಬಿಡುಗಡೆಯಾದ ಪ್ರಕಟಣೆಯಲ್ಲಿನ ಹೋಲಿಕೆಯು ಉಪಯುಕ್ತವಾದ ಪ್ರಚಾರ ನೀಡುತ್ತದೆ ಎಂದು ಸ್ವಾಗತಿಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ, "ಅವಳೊಬ್ಬ ದೊಡ್ಡ ಸ್ಟರ್ ಮತ್ತು ನಾನು ಹೂವನ್ನು ಕಳುಹಿಸಿದ್ದೇನೆ ಏಕೆಂದರೆ ಅಮೆರಿಕಾದಲ್ಲಿನ ಬಹಳಷ್ಟು ಜನರಿಗೆ ನಾನ್ಯಾರೆಂದು ತಿಳಿಯುವುದಕ್ಕಿಂತ ಮುಂಚೆ ಇದೆಲ್ಲ ನಡೆದಿದೆ". ಇದು ನನ್ನನ್ನು ಅ ದಾರಿಯಲ್ಲಿ ನಿಲ್ಲಿಸಿದೆ." ೨೦೧೦ ರಲ್ಲೂ ಹೋಲಿಕೆ ಮುಂದುವರೆದಿದ್ದಂತೆ ಆ‍ಯ್‌೦ಗ್ವಿಲೇರಾ ತನ್ನ "ನಾಟ್ ಮೈಸೆಲ್ಫ್ ಟುನೈಟ್" ಎಂಬ ಮ್ಯೂಜಿಕ್ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಇದರಲ್ಲಿನ ಹಾಡು ಮತ್ತು ಮ್ಯೂಜಿಕ್ ವಿಡಿಯೋ ಗಾಗಾರ "ಬ್ಯಾಡ್ ರೋಮ್ಯಾನ್ಸ್"ಗೆ ಹೋಲಿಕೆ ಇರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ಗಾಗಾರ ಸ್ಟೈಲ್ ಮತ್ತು ಫ್ಯಾಷನ್ ಐಕಾನ್ ಮಿಸ್ಸಿಂಗ್ ಪರ್ಸನ್ಸ್ ಬ್ಯಾಂಡ್‌ನ ಡೇಲ್ ಬುಜಿಯೋ ನಡುವೆ ಇದೇ ರೀತಿಯಾದ ಹೋಲಿಕೆ ಇದೆ. ಇವರ ಆದರದ ಇಮೇಜ್ ಮಿಸ್ಸಿಂಗ್ ಪರ್ಸನ್ಸ್ ಅಭಿಮಾನಿಗಳಂತೆ ಇದ್ದು ಬುಜಿಯೋ ಮೂವತ್ತು ವರ್ಷಕ್ಕಿಂತ ಹಿಂದೆ ಇದನ್ನು ಗಳಿಸಿರುವುದು ಗಮನಾರ್ಹವಾಗಿದೆ.

ಲೇಡಿ ಗಾಗಾರು ಆಧುನಿಕ ಸಂಸ್ಕೃತಿ ಮೇಲೆ ಬೀರಿದ ಪ್ರಭಾವ ಮತ್ತು ಜಾಗತಿಕವಾಗಿ ಹೆಚ್ಚಾದ ಅವರ ಕೀರ್ತಿಯನ್ನು ಗಮನದಲ್ಲಿಟ್ಟುಕೊಂಡು, ಸೌತ್ ಕೆರೋಲಿನಾ ವಿಶ್ವವಿದ್ಯಾಲಯದ ಸಮಾಜಸಾಸ್ತ್ರಜ್ಞ ಮ್ಯಾಥ್ಯೂ ಡೆಫ್ಲೆನ್ ೨೦೧೧ ರ ಬೇಸಿಗೆಯಿಂದ "ಲೇಡಿ ಗಾಗಾ ಆ‍ಯ್‌೦ಡ್ ದ ಸೋಷಿಯಾಲಜಿ ಆಫ್ ದ ಫೇಮ್" ಹೆಸರಿನ ಪಾಠ ಪ್ರವಚನಗಳ ಸರಣಿ ಆಯೋಜಿಸಿದ್ದಾರೆ. ಜೊತೆಗೆ ಸಾಮಾಜಿಕವಾಗಿ ಲೇಡಿ ಗಾಗಾರ ಕೀರ್ತಿಗೆ ಸಂಬಧಿಸಿದ ಆಯಾಮಗಳು ಮತ್ತು ಅವರ ಸಂಗೀತ, ವಿಡಿಯೋ, ಫ್ಯಾಶನ್, ಮತ್ತು ಇತರೆ ಕಲಾತ್ಮಕ ಪ್ರಯತ್ನ" ಇವೆಲ್ಲವು ಸೇರಿಕೊಂಡಿವೆ.

ಲೋಕೋಪಕಾರ

ಸಂಗೀತದಲ್ಲಿ ಗಾಗಾರ ವೃತ್ತಿಜೀವನ ಹೊರತು ಪಡಿಸಿ ತಮ್ಮನ್ನು ಉದಾರದಾನಿ ಎಂದು ಪರಿಚಿತ ಕೃತಿ ಸಂಗ್ರಹ ಹೆಚ್ಚಿಸಿಕೊಂಡಿದ್ದಾರೆ ಹಾಗೆಯೇ ವಿವಿಧ ಚಾರಿಟಿಗಳಿಗೆ ಮತ್ತು ಮಾನವೀಯ ಕೆಲಸಗಳಿಗೆ ಕೊಡುಗೆ ನೀಡಿದ್ದಾರೆ. ಗಾಗಾ ದಿ ಮಾನ್ಸ್‌ಸ್ಟರ್ ಬಾಲ್ ಟೂರ್‌ನಲ್ಲಿ ೨೦೧೦ ಹೈಟಿ ಭೂಕಂಪಕ್ಕಾಗಿ ಸಹಾಯಾರ್ಥ ಹಾಡು ರಚಿಸಿ ಹಾಡಲು ಆಹ್ವಾನ ಬಂದಿತ್ತು ಮತ್ತು ಇದರಲ್ಲಿ ಬಂದ ನಿಧಿಯನ್ನು ದೇಶದ ಪುನರ್‌ನಿರ್ಮಾಣ ಸಹಾಯ ನಿಧಿಗೆ ಸಮರ್ಪಿಸಲು ನಿರ್ಧರಿಸಲಾಯಿತು. ಜನವರಿ ೨೪, ೨೦೧೦ರಂದು ನ್ಯೂಯಾರ್ಕ್‌ನ ರೇಡಿಯೋ ಸಿಟಿ ಮ್ಯೂಜಿಕ್ ಹಾಲ್‌ನಲ್ಲಿ ಸಂಗೀತ ಗೋಷ್ಠಿ ನಡೆಯಿತು, ಹಾಗೆಯೇ ಸಹಾಯ ನಿಧಿಗೆ ಯಾವುದೇ ಸಹಾಯ ಬಂದರು ಸ್ವೀಕರಿಸಲಾಯಿತು ಇದಲ್ಲದೆ ಗಾಗಾರ ಅಧೀಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟವಾದ ಉತ್ಪನ್ನದಿಂದ ಬಂದ ಲಾಭವನ್ನು ಅದೇ ದಿನ ದಾನ ಮಾಡಮಾಡಲಾಯಿತು. ನಿಧಿಗಾಗಿ ಅಂದಾಜು $೫೦೦,೦೦೦ ಸಂಗ್ರಗವಾಗಿದೆ ಎಂದು ಗಾಗಾ ಪ್ರಕಟಿಸಿದರು. ಮಾರ್ಚ್ ೧೧, ೨೦೧೧ರಂದು ಜಪಾನಿನ ೨೦೧೧ ತೋಹೊಕು ಭೂಕಂಪ ಮತ್ತು ತ್ಸುನಾಮಿ ಅಪ್ಪಳಿಸಿದ ತಾಸಿನ ನಂತರ, ಗಾಗಾ ಟ್ವಿಟ್ವರ್‌ನಲ್ಲಿ ಒಂದು ಸಂದೇಶ ರವಾನಿಸಿದರು ಮತ್ತು ಜಪಾನ್ ಪ್ರೇಯರ್ ಬ್ರೇಸ್ಲೆಟ್ಸ್‌ಗೆ ಸೇರಿಕೊಂಡರು. ಕಂಪನಿಗೆ ವಿನ್ಯಾಸ ಮಾಡಿ ತಯಾರಿಸಲ್ಪಟ್ಟ ಬ್ರೇಸ್ಲೆಟ್ ಗಳಿಸಿದ ಹಣವೆಲ್ಲ ಜಪಾನಿನ ಪರಿಹಾರ ಪ್ರಯತ್ನಕ್ಕೆ ಹೋಗುತ್ತದೆ. ಬ್ರೇಸ್ಲೇಟ್‌ಗಳು $೧.೫ಮಿಲಿಯನ್ ( ೨೯, ೨೦೧೧ಕ್ಕೆ)ಹೆಚ್ಚಿಸಿಕೊಂಡಿವೆ. ಜೂನ್ ೨೫, ೨೦೧೧ರಲ್ಲಿ ಮಾಕುಹರಿ ಮೆಸ್‌ನಲ್ಲಿ, ಎಂಟಿವಿ ಜಪಾನ್‌ನ ಚಾರಿಟಿ ಪ್ರದರ್ಶನದಲ್ಲಿ ಭಾಗವಹಿಸುತ್ತಾರೆ. ಭೂಕಂಪ ಮತ್ತು ತ್ಸುನಾಮಿಯ ನಂತರದ ಪರಿಣಾಮಗಳಿಂದ ಬಳಲುತ್ತಿರುವ ನೊಂದವರಿಗೆ ನೆರವು ನೀಡಲು ಜಪಾನಿನ ರೆಡ್ ಕ್ರಾಸ್ ಇದನ್ನು ಆಯೋಜಿಸಿದೆ.

ಇದಲ್ಲದೆ ಗಾಗಾ ಎಚ್‌ಐವಿ ಮತ್ತು ಏಡ್ಸ್ ವಿರುದ್ಧ ಹೋರಾಡಲು ನೆರವು ನೀಡಲಿದ್ದು ಜೊತೆಗೆ ಅಪಾಯಕಾರಿ ರೋಗದ ಕುರಿತು ಯುವ ಮಹಿಳೆಯರಿಗೆ ಶಿಕ್ಷಣ ನೀಡುವತ್ತ ಗಮನ ಹರಿಸಿದ್ದಾರೆ. ವಿವಾ ಗ್ಲಾಮ್ ಎಂಬ ತಮ್ಮ ಪೂರಕ ಕಾಸ್ಮೆಟಿಕ್ ಲೈನ್‌ನಡಿಯಲ್ಲಿ ಲಿಪ್‌ಸ್ಟಿಕ್ ಬಿಡುಗಡೆ ಮಾಡಲು ಸೈಂಡಿ ಲೌಪರ್, ಗಾಗಾ ಜೊತೆಯಾಗಿ ಎಂಎಸಿ ಕಾಸ್ಮೆಟಿಕ್ಸ್ ಸೇರಿಕೊಂಡರು. ವಿವಾ ಗ್ಲ್ಯಾಮ್ ಗಾಗಾ ಮತ್ತು ವಿವಾ ಗ್ಲ್ಯಾಮ್ ಸೈಂಡಿ ಹೆಸರನ್ನು ಹೊಂದಿರುವ ಲಿಪ್‌ಸ್ಟಿಕ್‌ಗಳು ಮುಂಚೂಣಿಯಲ್ಲಿದ್ದು ಇದನ್ನು ಕಾಸ್ಮೆಟಿಕ್ ಕಂಪನಿಯು ನಡೆಸುವ ಜಗತ್ತಿನಾದ್ಯಂತದ ಎಚ್‌ಐವಿ ಮತ್ತು ಏಡ್ಸ್ ಪ್ರಚಾರಕ್ಕೆ ದಾನ ನೀಡಲಾಗುತ್ತದೆ. ಗಾಗಾ ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಘೋಷಿಸಿದ್ದಾರೆ " ವಿವಾ ಗ್ಲ್ಯಾಮ್ ಕೇವಲ ಲಿಪ್‌ಸ್ಟಿಕ್ ಅಲ್ಲ ಇದನ್ನು ಒಂದು ಉದ್ದೇಶವಿಟ್ಟುಕೊಂಡು ತೆಗೆದುಕೊಳ್ಳಿ" ನೀವು ರಾತ್ರಿಯಲ್ಲಿ ಹೊರಗಡೆ ಹೋದಾಗ ನಿಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ನಂತರ ಅವಶ್ಯವಾಗಿ ಕಾಂಡೋಮ್ ಇಟ್ಟುಕೊಳ್ಳಿ ಇದೊಂದು ನೆನಪೋಲೆ ಎಂದು ಹೇಳುತ್ತೇನೆ."

ಎಲ್‌ಜಿಬಿಟಿ ವಕಾಲತ್ತು

ಲೇಡಿ ಗಾಗಾ 
ಆಲ್ಟ್= ಒಬ್ಬ ಹೊಂಬಣ್ಣದ ಮಹಿಳೆ ಬಿಳಿಯಾದ ಸ್ಕರ್ಟ್ ಮತ್ತು ಕಪ್ಪು ಗ್ಲಾಸಸ್ ಧರಿಸಿ ನಿಲುಪೀಠದಲ್ಲಿ ’ನ್ಯಾಶನಲ್ ಇಕ್ವಾಲಿಟಿ ಮಾರ್ಚ್’ ಕುರಿತು ಮಾತನಾಡುತ್ತಿರುವ ಪೋಸ್ಟರ್‌. ಅವಳ ಹಿಂದೆ ಕಟ್ಟಡದ ಬಿಳಿಯ ಕಲ್ಲಿನ ಕಟಾಂಜನವಿತ್ತು.

ಗಾಗಾ ಗುಣಲಕ್ಷಣಗಳು ಪ್ರಸಿದ್ಧ ಕಲಾವಿದೆಯಾಗಿ ಅವಳ ಶೀಘ್ರ ಯಶಸ್ಸಿನ ಹೆಚ್ಚಿನ ಭಾಗವು ಅವಳ ಗೇ ಅಭಿಮಾನಿಗಳಿಗೆ ಸಲ್ಲುತ್ತದೆ ಮತ್ತು ಇದು ಸಲಿಂಗ ಕಾಮಿ ಬಿಂಬವಾಗಿ ಪರಿಗಣಿತವಾಯಿತು. ವೃತ್ತಿ ಜೀವನದ ಆರಂಭದಲ್ಲಿ ಅವಳು ಅನೇಕ ಕಷ್ಟಗಳನ್ನು ಕಂಡಳು, ರೇಡಿಯೋ ಪ್ರಸಾರವನ್ನು ತೆಗೆದುಕೊಂಡಳು ಮತ್ತು ಅದರಲ್ಲಿ ಹೇಳಿದಳು, ಸಲಿಂಗ ಕಾಮಿ ಸಮಾಜವು ನನಗೆ ಮಹತ್ವದ ತಿರುವನ್ನು ನೀಡಿತು. ನಾನು ಅನೇಕ ಸಲಿಂಗ ಕಾಮಿ ಅಭಿಮಾನಿಗಳನ್ನು ಹೊಂದಿದ್ದೇನೆ, ಅವರು ನನ್ನ ಕಟ್ಟಾ ಹಿಂಬಾಲಕರಾಗಿದ್ದಾರೆ ಮತ್ತು ಅವರೇ ನಿಜವಾಗಿ ನನ್ನನ್ನು ಮೇಲಕ್ಕೆ ತಂದಿದ್ದಾರೆ. ಅವರು ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ ಮತ್ತು ನಾನೂ ಅವರನ್ನು ಯಾವಾಗಲೂ ಬೆಂಬಲಿಸುತ್ತೇನೆ. ಅಭಿಮಾನಿ ಬಳಗವನ್ನು ಸೃಷ್ಠಿಸುವುದು ಸಾಮಾನ್ಯ ಕೆಲಸವಲ್ಲ." ಆಕೆಯು ತಮ್ಮ ಲೇಬಲ್ ಇಂಟರ್‌ಸ್ಕೋಪ್ ಕಾರ್ಯನಿರ್ವಹಿಸುತ್ತದೆಯೋ ಆ ಮ್ಯಾನ್‌ಹಟನ್-ಆಧಾರಿತ ಎಲ್‌ಜಿಬಿಟಿ ಮಾರ್ಕೆಟಿಂಗ್ ಕಂಪನಿಯಾದ ಫ್ಲೈಲೈಫ್‌ಗೆ, ದ ಫೇಮ್‌ ನ ಲೈನರ್ ಟಿಪ್ಪಣಿಯಲ್ಲಿ "ಐ ಲವ್ ಯು ಸೋ ಮಚ್" ಎಂಬುದಾಗಿ ಹೇಳುತ್ತ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ನೀವೇ ಈ ಯೋಜನೆಯ ಮೊದಲ ಎದೆ ಬಡಿತಗಳು(ರೂವಾರಿಗಳು), ಮತ್ತು ನಿಮ್ಮ ಪ್ರೋತ್ಸಾಹ ಮತ್ತು ಬುದ್ಧಿವಂತಿಕೆಗಳು ನನಗೆ ಜಗತ್ತಿನ ಸಂಪತ್ತುಗಳಾಗಿವೆ. ನಾನು ಈ ಸೋಜಿಗದ ಗುಂಪಿನೊಂದಿಗೆ ಸಲಿಂಗಕಾಮಿ ಸಮಾಜಕ್ಕಾಗಿ ಕೈಯಲ್ಲಿ ಕೈ ಇಟ್ಟು ಯಾವತ್ತಿಗೂ ಹೋರಾಡುತ್ತೇನೆ." ಎಲ್‌ಜಿಬಿಟಿ ಟೆಲಿವಿಶನ್ ನೆಟ್‌ವರ್ಕ್‌ ಲೋಗೋದಿಂದ, ಅವಳ ಮೊಟ್ಟಮೊದಲು ಪ್ರಸಾರವಾದ ಅನೇಕ ಕಾರ್ಯಕ್ರಮಗಳಲ್ಲಿ ಒಂದಾದ, ೨೦೦೮ ಮೇದಲ್ಲಿ ನಡೆದ ನ್ಯೂನೌನೆಕ್ಸ್ಟ್ ಅವಾರ್ಡ್ಸ್‌ನಲ್ಲಿ ಅವಳು ಹಾಡಿದ ಅವಳ "ಜಸ್ಟ್ ಡಾನ್ಸ್" ಹಾಡು ಪ್ರಸಾರವಾಯಿತು. ಅದೇ ವರ್ಷದ ಜೂನ್ ತಿಂಗಳಿನಲ್ಲಿ ಸ್ಯುಆನ್ ಫ್ರಾನ್ಸಿಸ್ಕೊ ಪ್ರೈಡ್ ಸಂದರ್ಭದಲ್ಲಿ ಅದೇ ಹಾಡನ್ನು ಮತ್ತೆ ಹಾಡಿದಳು.

ನಂತರ ಅವಳ ದಿ ಫೇಮ್ ಬಿಡುಗಡೆಯಾಯಿತು, ಅವಳ "ಪೋಕರ್ ಫೇಸ್" ಹಾಡು ಅವಳ ದ್ವಿಲಿಂಗತ್ವವನ್ನು ಪ್ರಕಾಶಿಸಿತ್ತು. ರೋಲಿಂಗ್ ಸ್ಟೋನ್ ಜೊತೆಗೆ ಒಂದು ಸಂದರ್ಶನದಲ್ಲಿ, ಅವಳ ಗೆಳೆಯರು ಅವಳ ದ್ವಿಲಿಂಗತ್ವದ ಬಗ್ಗೆ ಹೇಗೆ ಉದ್ದೇಶವನ್ನು ಹೊಂದಿದ್ದರು ಎಂಬ ಬಗ್ಗೆ ಮಾತನಾಡಿದಳು, ಅವಳು ಹೇಳುತ್ತಿದ್ದಳು " ವಿಷಯವೇನೆಂದರೆ ನಾನು ಹೆಣ್ಣನ್ನು ಬಯಸುತ್ತೇನೆ , ಅವರು ಇದರಿಂದ ಹೆದರಿದ್ದರು. ಇದು ಅವರನ್ನು ಅಸಮಾಧಾನಗೊಳಿಸಿತು. ನಾನು . ನಾನು ಕೇವಲ ನಿನ್ನೊಂದಿಗೆ ಸಂತೋಷವಾಗಿದ್ದೇನೆ." ಯಾವಾಗ ಅವಳು ಮೇ ೨೦೦೯ರಲ್ಲಿ ದಿ ಎಲೆನ್ ಡಿಜಿನಿರೀಸ್ ಶೋ ನಲ್ಲಿ ಅತಿಥಿಯಾಗಿ ಪಾತ್ರವಹಿಸೊದ್ದಳೋ, ಅವಳು ದಿಜಿನಿರೀಸ್‌ಅನ್ನು "ಇದು ಹೆಣ್ಣಿಗೆ ಮತ್ತು ಸಲಿಂಗಕಾಮಿ ಸಮಾಜಕ್ಕೆ ಒಂದು ಪ್ರೇರಣೆ" ಯಾಗಿರುವುದಕ್ಕಾಗಿ ಹೊಗಳಿದಳು. ಅಕ್ಟೋಬರ್ ೧೧, ೨೦೦೯ರಲ್ಲಿ ನ್ಯಾಶನಲ್ ಮಾಲ್‌ನಲ್ಲಿ ನ್ಯಾಶನಲ್ ಇಕ್ವಾಲಿಟಿ ಮಾರ್ಚ್‌ನಲ್ಲಿ ಅವಳು "ಪ್ರತಿಯೊಂದೂ ನನ್ನ ವೃತ್ತಿ ಜೀವನದ ಬಹು ಮುಖ್ಯ ಘಟನೆಯಾಗಿದೆ." ಎಂದು ಘೋಷಿಸಿದಳು. "ದೇವರು ಆಶೀರ್ವದಿಸಲಿ ಮತ್ತು ಗೇಗಳನ್ನು ಆಶೀರ್ವದಿಸಲಿ," ಎಂದು ಸಂತೋಷಭರಿತವಾಗಿ ಹೊರನಡೆದರು ಇದೇ ರೀತಿಯಾಗಿ ಒಂದು ತಿಂಗಳ ಮೊದಲು ೨೦೦೯ ಎಂಟಿವಿ ವಿಡಿಯೋ ಮ್ಯೂಜಿಕ್ ಅವಾರ್ಡ್ಸ್‌ ನ ಬೆಸ್ಟ್ ನ್ಯೂ ಆರ್ಟಿಸ್ಟ್ ಪಡೆದ ಮಾತಿನಲ್ಲೂ ಹೀಗೆ ಹೇಳಿದ್ದರು. ಹ್ಯೂಮನ್ ರೈಟ್ಸ್ ಕ್ಯಾಂಪೇನ್ ಡಿನ್ನರ್, ಜಾಥಾದಂತಹುದೇ ಒಂದು ವಾರಾಂತ್ಯವನ್ನು ಏರ್ಪಡಿಸಿತ್ತು, ಅದರಲ್ಲಿ ಅವಳು ಜಾನ್ ಲೆನನ್‌ರ "ಇಮೇಜಿನ್"ರ ರಚನೆಯನ್ನು ಅನ್ನು ಅಭಿನಯಿಸಿದಳು, ಮತ್ತು "ನಾನು ಇಂದು ರಾತ್ರಿ ನನ್ನ ಹಾಡುಗಳಲ್ಲಿ ಒಂದನ್ನು ಹಾಡುತ್ತಿಲ್ಲ, ಏಕೆಂದರೆ ಇಂದು ರಾತ್ರಿ ನನ್ನ ಕುರಿತಾಗಿ ಅಲ್ಲ, ಇದು ನಿಮಗಾಗಿ" ಎಂದು ಪ್ರಕಟಿಸಿದಳು. ತನ್ನ ಅತಿಯಾದ ಲೈಂಗಿಕ ಆಸಕ್ತಿಯಿಂದ ಕೊಲೆಯಾದ ಮ್ಯಾಥ್ಯೂ ಶೆಫರ್ಡ್ ಎಂಬ ಒಬ್ಬ ಕಾಲೇಜ್ ವಿದ್ಯಾರ್ಥಿಯ ಮರಣದ ಮೇಲೆ ಬೆಳಕು ಚೆಲ್ಲುವುದಕ್ಕಾಗಿ ಅವಳು ಹಾಡಿನ ಮೂಲ ಸಾಹಿತ್ಯವನ್ನು ಬದಲಾಯಿಸಿದಳು.

ಚಿತ್ರ:DADT rally Lady Gaga.jpg
2000ನೇ ಇಸ್ವಿಯಲ್ಲಿ ಗಾಗಾ ಎಸ್‌ಡಿಎನ್‌ಎಸ್(ಸರ್ವೀಸ್‌ಮೆಂಬರ್ಸ್ ಲೀಗಲ್ ದಿಫೆನ್ಸ್ ನೆಟ್ವರ್ಕ್)ನ "ಏನೂ ಕೇಳಬೇಡಿ, ಏನೂ ಹೇಳಬೇಡಿ"ಜಾಥಾದಲ್ಲಿ ಜನರನ್ನು ಕರೆದಳು.

ಗಾಗಾ ೨೦೧೦ ಎಂಟಿವಿ ವಿಡಿಯೋ ಮ್ಯೂಜಿಕ್ ಅವಾರ್ಡ್ಸ್‌ಗೆ ಯುನೈಟೆಡ್ ಸ್ಟೇಟ್ಸ್ ಆರ್ಮ್ಡ್ ಫೋರ್ಸಸ್‌ನ (ಮೈಕ್ ಆಲ್ಮಿ; ಡೇವಿಡ್ ಹಾಲ್; ಕ್ಯಾಟಿ ಮಿಲ್ಲರ್ ಮತ್ತು ಸ್ಟೇಸಿ ವಾಸ್ಕ್ವೆಜ್) ಜೊತೆ ಆಗಮಿಸಿದ್ದರು ಇವರೆಲ್ಲರು, ಯು.ಎಸ್ ಮಿಲಿಟರಿಯಡಿಯಲ್ಲಿ "ಎನನ್ನು ಕೇಳಬೇಡ ,ಎನನ್ನು ಹೇಳಬೇಡ" (DADT) ಪಾಲಿಸಿಯವರು,ಇವರ ಲೈಂಗಿಕತೆಗೆ ಸಂಬಂಧಿಸಿದ ಕಾರಣದಿಂದ ಬಹಿರಂಗವಾಗಿ ಸೇವೆ ಸಲ್ಲಿಸುವುದನ್ನು ನಿಷೇಧಿಸಲಾಗಿತ್ತು. ಇದಲ್ಲದೆ ಅವಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸತ್ತ ಪ್ರಾಣಿಯ ಮಾಂಸದಿಂದ ತಯಾರಿಸಿದ್ದ ಉಡುಗೆಯನ್ನು ಧರಿಸಿದ್ದಳು. ಹ್ಗೆಚ್ಗಾಚು ವ್ಯಾಪಕವಾಗಿ "ಮೀಟ್ ಡ್ರೆಸ್" ಎಂಬುದಾಗಿ ತಿಳಿಯಲ್ಪಟ್ಟಿದ್ದ ಆ ಉಡುಪಿನ ಬಗ್ಗೆ ಗಾಗಾ ಎಲ್‌ಜಿಬಿಟಿ ಸಮುದಾಯದಲ್ಲಿನ ಜನರನ್ನು ಬಗ್ಗೆ ಗಮನ ಹರಿಸುವುದರ ಜೊತೆಗೆ ಮಾನವ ಹಕ್ಕುಗಳ ಒಂದು ನಿರೂಪಣೆ ಎಂಬುದಾಗಿ ಪರಿಗಣಿಸಿದರು ಜೊತೆಗೆ ಅವರು ಈ ರೀತಿಯಾಗಿ ಹೇಳಿದರು "ನಾವು ಯಾವುದನ್ನು ನಂಬುತ್ತೇವೆಯೋ ಅದಕ್ಕಾಗಿ ನಾವು ಬೆಂಬಲಿಸದಿದ್ದರೆ ಮತ್ತು ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ನಡೆಸದಿದ್ದರೆ, ಸ್ವಲ್ಪ ಸಮಯದಲ್ಲಿಯೇ ನಾವು ನಮ್ಮ ದೇಹದಲ್ಲಿನ ಮಾಂಸಗಳಷ್ಟೆ ಹಕ್ಕುಗಳನ್ನು ಪಡೆಯುತ್ತೇವೆ." ಸೆನೆಟರ್‌ನ ಪಾಲಿಸಿಯನ್ನು ಬುಡಮೇಲು ಮಾಡುವುದಕ್ಕಾಗಿ ತನ್ನ ಅಭಿಮಾನಿಗಳನ್ನು ಪ್ರಚೋದಿಸಲು ಯೂಟ್ಯೂಬ್‌ನಲ್ಲಿ ಮೂರು ವಿಡಿಯೋ ಬಿಡುಗಡೆ ಮಾಡಿದಳು. ಸೆಪ್ಟೆಂಬರ್ ೨೦,೨೦೧೦ರಲ್ಲಿ ಪೋರ್ಟ್‌ಲ್ಯಾಂಡ್ ಮೇನ್‌ನ ಡೀರಿಂಗ್ ಓಕ್ಸ್ ಪಾರ್ಕ್‌ನಲ್ಲಿ ಸರ್ವಿಸ್‌ಮೆಂಬರ್ಸ್ ಲೀಗಲ್ ಡಿಫೆನ್ಸ್ ನೆಟ್‌ವರ್ಕ್‌ನ ೪ದಿ ೧೪ಕೆ ಜಾಥಾದಲ್ಲಿ ಅವಳು ಮಾತನಾಡಿದಳು. ಜಾಥಾದ ಹೆಸರು ಸಂಖ್ಯೆಯನ್ನು ಸೂಚಿಸುತ್ತದೆ_ ಒಂದು ಅಂದಾಜಿನ ಪ್ರಕಾರ ೧೪,೦೦೦ ಸರ್ವಿಸ್ ಮೆಂಬರ್ಸ್ ಆ ಸಮಯದಲ್ಲಿ ಡಿಎಡಿಟಿ ಸಿದ್ಧಾಂತದ ಅಡಿಯಲ್ಲಿ ಕೆಲಸದಿಂದ ತೆಗೆದು ಹಾಕಲ್ಪಟ್ಟರು. ತನ್ನ ಅಭಿಪ್ರಾಯದ ಸಮಯದಲ್ಲಿ, ಅವಳು ಡಿಎಡಿಟಿ ಸಿದ್ಧಾಂತವನ್ನು ಹಿಂಪಡೆಯುವ ಪರವಾಗಿ ಮತ ಚಲಾಯಿಸುವಂತೆ ಅಮೆರಿಕಾ ಸಂಸತ್ ಸದಸ್ಯರನ್ನು(ಮತ್ತು ಪ್ರಮುಖವಾಗಿ, ಸೌಮ್ಯವಾದ ಮೇನ್, ಓಲಂಪಿಯಾ ಸ್ನೋವೆ ಮತ್ತು ಸುಸಾನ್ ಕೊಲಿನ್ಸ್‌ನ ರಿಪಬ್ಲಿಕನ್ ಸೆನೆಟರ್ಸ್) ಒತ್ತಾಯಿಸಿದಳು. ಈ ಘಟನೆಯ ಅನುಸಾರ ದಿ ಅಡ್ವೋಕೇಟ್‌ ನ ಸಂಪಾದಕರು ಹೀಗೆ ವ್ಯಾಖ್ಯಾನಿಸಿದರು, ಅವಳು ಸಲಿಂಗಕಾಮಿಗಳಿಗೆ ಮತ್ತು ಲೆಸ್ಬಿಯನ್ನರಿಗೆ "ನಿಜವಾದ ಭಯಂಕರ ಪಕ್ಷವಾದಿ"ಯಾಗಿದ್ದಾಳೆ.

ಧ್ವನಿಮುದ್ರಿಕೆ ಪಟ್ಟಿ

ಸಂಚಾರಗಳು

  • ದಿ ಫೇಮ್ ಬಾಲ್ ಟೂರ್ (೨೦೦೯)
  • ದಿ ಮಾನ್‌ಸ್ಟರ್ ಬಾಲ್ ಟೂರ್ (೨೦೦೯–೧೧)

ಇವನ್ನೂ ಗಮನಿಸಿ‌

ಟೆಂಪ್ಲೇಟು:Portal box

  • ಜನಪ್ರಿಯ ಸಂಗೀತದಲ್ಲಿ ಗೌರವ ಸೂಚಕ ಉಪ ನಾಮಗಳು
  • ಅತಿಹೆಚ್ಚು ಬೇಡಿಕೆಯಲ್ಲಿರುವ ಸಂಗೀತ ಕಲಾವಿದರ ಪಟ್ಟಿ.

ಉಲ್ಲೇಖಗಳು‌‌

ಲೇಡಿ ಗಾಗಾ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ಲೇಡಿ ಗಾಗಾ

This article uses material from the Wikipedia ಕನ್ನಡ article ಲೇಡಿ ಗಾಗಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಲೇಡಿ ಗಾಗಾ ಜೀವನ ಮತ್ತು ವೃತ್ತಿಜೀವನಲೇಡಿ ಗಾಗಾ ಕಲಾತ್ಮಕತೆಲೇಡಿ ಗಾಗಾ ಲೋಕೋಪಕಾರಲೇಡಿ ಗಾಗಾ ಧ್ವನಿಮುದ್ರಿಕೆ ಪಟ್ಟಿಲೇಡಿ ಗಾಗಾ ಸಂಚಾರಗಳುಲೇಡಿ ಗಾಗಾ ಇವನ್ನೂ ಗಮನಿಸಿ‌ಲೇಡಿ ಗಾಗಾ ಉಲ್ಲೇಖಗಳು‌‌ಲೇಡಿ ಗಾಗಾ ಹೆಚ್ಚಿನ ಓದಿಗಾಗಿಲೇಡಿ ಗಾಗಾ ಬಾಹ್ಯ ಕೊಂಡಿಗಳು‌‌ಲೇಡಿ ಗಾಗಾ

🔥 Trending searches on Wiki ಕನ್ನಡ:

ರೇಣುಕಆಟಗೂಗಲ್ಕುರಿರೋಸ್‌ಮರಿಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರನಾಟಕವಿಕ್ರಮಾದಿತ್ಯ ೬ಉಪನಯನಒಡೆಯರ್ಬೌದ್ಧ ಧರ್ಮಬೃಂದಾವನ (ಕನ್ನಡ ಧಾರಾವಾಹಿ)ವಚನ ಸಾಹಿತ್ಯಅಂಜನಿ ಪುತ್ರಕಾಟೇರಕಥೆಭಾರತದಲ್ಲಿ ತುರ್ತು ಪರಿಸ್ಥಿತಿಜೋಳಎ.ಪಿ.ಜೆ.ಅಬ್ದುಲ್ ಕಲಾಂಕೃಷ್ಣದೇವರಾಯಶಕ್ತಿಕೊರೋನಾವೈರಸ್ಚಂದ್ರದ.ರಾ.ಬೇಂದ್ರೆನ್ಯೂಟನ್‍ನ ಚಲನೆಯ ನಿಯಮಗಳುಎತ್ತಿನಹೊಳೆಯ ತಿರುವು ಯೋಜನೆಭಾರತದ ಸಂವಿಧಾನ ರಚನಾ ಸಭೆಭಾರತದ ಸ್ವಾತಂತ್ರ್ಯ ಚಳುವಳಿಸೌರಮಂಡಲಮೂಲಧಾತುಕುಟುಂಬಕಾನ್ಸ್ಟಾಂಟಿನೋಪಲ್ಆಯ್ಕಕ್ಕಿ ಮಾರಯ್ಯಭಾರತದಲ್ಲಿ ಬ್ರಿಟಿಷ್ ಆಳ್ವಿಕೆನವೆಂಬರ್ ೧೪ಬಾಲ ಗಂಗಾಧರ ತಿಲಕಉಡಯೋಗಗುಪ್ತ ಸಾಮ್ರಾಜ್ಯಶಾಸನಗಳುವ್ಯಂಜನರಂಗಭೂಮಿಅಮ್ಮೊನೈಟ್ಕುಡಿಯುವ ನೀರುಗುರು (ಗ್ರಹ)ಕನ್ನಡ ಪತ್ರಿಕೆಗಳುಬೇವುಮಾನವ ಸಂಪನ್ಮೂಲ ನಿರ್ವಹಣೆಪುರಂದರದಾಸಆರ್ಯ ಸಮಾಜಸಸ್ಯಶಾಲಿವಾಹನ ಶಕೆಸಂವಹನಕನ್ನಡ ಸಾಹಿತ್ಯ ಸಮ್ಮೇಳನಅರಿಸ್ಟಾಟಲ್‌ವಚನಕಾರರ ಅಂಕಿತ ನಾಮಗಳುಶ್ರೀ. ನಾರಾಯಣ ಗುರುಮುದ್ದಣದರ್ಶನ್ ತೂಗುದೀಪ್ರಮ್ಯಾರಾಷ್ಟ್ರೀಯ ವರಮಾನತೀರ್ಪುಕರ್ನಾಟಕದ ಹಬ್ಬಗಳುಯು.ಆರ್.ಅನಂತಮೂರ್ತಿಬುಧನರರೋಗ(Neuropathy)ಕರ್ನಾಟಕದ ತಾಲೂಕುಗಳುಆಧುನಿಕತಾವಾದಕೆಂಪೇಗೌಡ (ಚಲನಚಿತ್ರ)ಕನ್ನಡಪ್ರಭಬಸವೇಶ್ವರಸ್ವಾತಂತ್ರ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಎರಡನೇ ಮಹಾಯುದ್ಧಗಾದೆಕರ್ಣಸ್ಫಟಿಕ ಶಿಲೆಯಣ್ ಸಂಧಿ🡆 More