ಲಿಯೊ ಟಾಲ್‍ಸ್ಟಾಯ್

ಕೌಂಟ್ ಲಿಯೋ ಟಾಲ್‍ಸ್ಟಾಯ್ (ಸೆಪ್ಟೆಂಬರ್ ೯, ೧೮೨೮ — ನವೆಂಬರ್ ೨೦, ೧೯೧೦) (Лев Никола́евич Толсто́й, ಉಚ್ಛಾರಣೆ (ಸಹಾಯ·ಮಾಹಿತಿ)), ರಷ್ಯಾದ ಒಬ್ಬ ಸಾಹಿತಿ.

ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್
ಜನನ: ಸೆಪ್ಟೆಂಬರ್ ೯, ೧೮೨೮
ಜನನ ಸ್ಥಳ: ಯಸ್ನಾಯ ಪೊಲ್ಯಾನ, ರಷ್ಯಾ ಸಾಮ್ರಾಜ್ಯ
ನಿಧನ:ನವೆಂಬರ್ ೨೦, ೧೯೧೦
ಆಸ್ಟಪೊವೊ, ರಷ್ಯಾ ಸಾಮ್ರಾಜ್ಯ
ವೃತ್ತಿ: ಲೇಖಕ
ಸಾಹಿತ್ಯದ ವಿಧ(ಗಳು):
ನೈಜ ಸಾಹಿತ್ಯ
ಪ್ರಮುಖ ಕೃತಿ:ವಾರ್ ಅಂಡ್ ಪೀಸ್
ಆನ್ನಾ ಕರೆನೀನ
ಪ್ರಭಾವಗಳು:ಅಲೆಕ್ಸಾಂಡರ್ ಪುಷ್ಕಿನ್, ಪ್ಲೇಟೊ, ಜಾನ್-ಜಾಕ್ ರೂಸೊ, ನಿಕೊಲಾಯ್ ಗೊಗೊಲ್, ಇತ್ಯಾದಿ
ಪ್ರಭಾವಿತರು:ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್, ಲುಡ್ವಿಗ್ ವಿಟ್ಜೆನ್‍ಸ್ಟೈನ್, ಇತ್ಯಾದಿ
ಲಿಯೊ ಟಾಲ್‍ಸ್ಟಾಯ್
ಲಿಯೊ ಟಾಲ್‍ಸ್ಟಾಯ್

ಟಾಲ್ ಸ್ಟಾಯ್,ರವರ ಪೂರ್ವ ವೃತ್ತಾಂತ, ಹಾಗೂ ಅವರ ವೃತ್ತಿ-ಜೀವನ :

ಟಾಲ್ ಸ್ಟಾಯ್, "ಯಾಸ್ನ್ಯಾ ಪೊಲ್ಯಾನ," ಎಂಬ ಹಳ್ಳಿಯಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಟಾಲ್ ಸ್ಟಾಯ್ ಹೆಸರಿನ ಹಿಂದೆ 'ಕೌಂಟ್,' ಅನ್ನುವ ಶಬ್ದ ಸೇರುವುದು ಈ ಕಾರಣದಿಂದಾಗಿ] ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಟಾಲ್ ಸ್ಟಾಯ್, ಸಾವು-ನೋವುಗಳ ಬಗ್ಗೆ ಆಗಲೇ ತಾತ್ವಿಕ ಚಿಂತನೆ ನಡೆಸಿದ್ದರು. ಕಜಾನ್ ವಿಶ್ವವಿದ್ಯಾಲಯ,ದಲ್ಲಿ ಕಾನೂನು ಅಭ್ಯಾಸಮಾಡಲು ಹೋದ ಟಾಲ್ ಸ್ಟಾಯ್ ಅದನ್ನು, ಅರ್ಧಕ್ಕೇ ಕೈಬಿಟ್ಟು ಊರಿಗೆ ಮರಳಿದರು. ಮನೆಯ ಆಸ್ತಿಪಾಲಾದಾಗ, ಟಾಲ್ ಸ್ಟಾಯ್ ರವರ ಪಾಲಿಗೆ, ೫,೪೦೦ ಎಕರೆ ಭೂಮಿ, ಮತ್ತು ೩೩೦ ಜೀತದಾಳುಗಳು ಬಂದಿದ್ದರು !

ಟಾಲ್ ಸ್ಟಾಯ್, ಸ್ವಲ್ಪಕಾಲ ಕೃಷಿ ಮಾಡಿಸಲು ತೊಡಗಿದ್ದರು. ಹಳ್ಳಿಯ ಮಕ್ಕಳಿಗಾಗಿ ಶಾಲೆ ತೆರೆದರು. ಮತ್ತೆ ಹಳ್ಳಿ ಬಿಟ್ಟು ಸೈನ್ಯಕ್ಕೆ ಸೇರಿದರು. ಈ ಅವಧಿಯಲ್ಲಿ ಅವರಿಗೆ ಕೆಲವು ದುಶ್ಚಟಗಳಿದ್ದವು. ಕೊನೆಗೆ, ತಮ್ಮ ಅದುವರೆಗಿನ ಜೀವನದ ಬಗ್ಗೆ ಪಶ್ಚಾತ್ತಾಪಪಟ್ಟುಕೊಂಡು 'ಸೋನ್ಯ', ಎಂಬವಳನ್ನು ಮದುವೆಯಾಗಿ ಹಳ್ಳಿಗೆ ಹಿಂದಿರುಗಿದರು. ಅವರ ಮುಂದಿನ ಜೀವನವನ್ನೆಲ್ಲ ಹಳ್ಳಿಗರ ಉದ್ಧಾರಕ್ಕಾಗಿ ಮೀಸಲಾಗಿಟ್ಟರು.

ಅವರು ತಮ್ಮನ್ನು ತಾವೇ, "ಋಷಿ," ಯೆಂದು ಭಾವಿಸಿಕೊಂಡು ಅದರಂತೆ ಬದುಕಲು ಪ್ರಯತ್ನಿಸಿದರು. ಕೊನೆಗೆ ಮನೆಬಿಟ್ಟು ಬೈರಾಗಿಯಂತೆ ದೇಶಾಂತರ ಹೋಗಿಟಾಲ್ ಸ್ಟಾಯ್, ತಮ್ಮ ಎರಡು ಕಾದಂಬರಿಗಳು, 'ವಾರ್ ಅಂಡ್ ಪೀಸ್,' [೧೮೬೩-೬೯] ಮತ್ತು ಅನ್ನಾ ಕರೆನಿನಾ' [೧೮೭೫-೭೭] ಮತ್ತು ಸಣ್ಣಕತೆಗಳಿಂದಾಗಿ ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ನೀಳ್ಗತೆಗಳು, ಮಕ್ಕಳಿಗಾಗಿ ನಿರೂಪಿಸಿದ ಕಥೆಗಳು, ಹೀಗೆ ಅವರ ಸಾಹಿತ್ಯಸೃಷ್ಟಿ, ಇತರ ಪ್ರಕಾರಗಳಲ್ಲೂ ನಡೆದಿದೆ. ಕೊನೆಗೆ ಅವರು, ರೈಲು ನಿಲ್ದಾಣವೊಂದರಲ್ಲಿ ಕೊನೆಯುಸಿರೆಳೆದರು.


ಟಾಲ್ ಸ್ಟಾಯ್ ಅವರ ಇಪ್ಪತ್ತುಮೂರು ಸಣ್ಣಕತೆಗಳು ವಿಶಿಷ್ಟವಾಗಿವೆ. ಇವುಗಳನ್ನು ಅವರು 'ಮಕ್ಕಳ ಕಥೆಗಳು' ಜನಪ್ರಿಯ ಕಥೆಗಳು, ಒಂದು ಅಪ್ಸರ ಕಥೆ, ಚಲನಚಿತ್ರಗಳಿಗೆ ಬರೆದ ಕಥೆ, ಜಾನಪದ ಕಥೆಗಳ ಮರುನಿರೂಪಣೆ, ಫ್ರೆಂಚಿನಿಂದ ಅನುವಾದಿಸಿದ ಕಥೆಗಳು. ಮತ್ತು ಪೀಡಿಗೆಗೊಳಗಾದ ಯೆಹೂದ್ಯರ ಸಹಾಯಕ್ಕಾಗಿ ಬರೆದುಕೊಟ್ಟ ಕಥೆಗಳು-ಎಂಬ ವಿಭಾಗಗಳಲ್ಲಿ ವಿಂಗಡಿಸಿಕೊಟ್ಟಿದ್ದಾರೆ.

ಈ ಕಥೆಗಳು ಹಿಂದಿನ ಕಾಲದ ಸಾಂಪ್ರದಾಯಿಕ ಕಥೆಗಳೋ ಏನೋ ಅನ್ನುವಂತಹ ಸನ್ನಿವೇಶವನ್ನು ಹೊಂದಿವೆ ; ಆದರೆ ಮಾನವನ ಸಾರ್ವಕಾಲಿಕ ಸುಖದುಃಖಗಳಿಗೆ ಮಾದರಿಯಾಗಿವೆ, ಜೊತೆಗೆ ಓದುಗರಿಗೆ ಮಾರ್ಗದರ್ಶಕವಾಗಿವೆ.

೧೯೩೪ ರಲ್ಲಿ, ಶ್ರೀ ಎಲ್. ಗುಂಡಪ್ಪ ನವರು, ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗಳನ್ನು ಕನ್ನಡ ಪುಸ್ತಕಪ್ರಾಧಿಕಾರ, ಮರು ಮುದ್ರಿಸಿದಾಗ ಮಲ್ಲೇಪುರಂ ವೆಂಕಟೇಶ ರು, ಬೆನ್ನುಡಿಯಲ್ಲಿ ಹೇಳಿದ ಮಾತುಗಳು : " ಟಾಲ್ ಸ್ಟಾಯ್ ಅವರು ಸುಸಂಸ್ಕೃತ ಮನೋಧರ್ಮ, ಅವರ ಧಾರ್ಮಿಕ ನಂಬಿಕೆ, ಜನಪರ ಮನಸ್ಸು, ಉದಾರವಾದ ಮಾನವೀಯತೆ-ಇವೆಲ್ಲವೂ, ಈ ಕಥೆಗಳಲ್ಲಿ ಹರಡಿಕೊಂಡಿವೆ."

ಟಾಲ್ ಸ್ಟಾಯ್,ರವರ ಅತ್ಯಂತ ಪ್ರಮುಖ ಕಾದಂಬರಿಗಳು :

  • How Much Land Does a Man Need ? (ಕಥೆ)
  • ಅನ್ನಾ ಕರೆನಿನಾ
  • ವಾರ್ ಅಂಡ್ ಪೀಸ್ - ಇದು ಸುಮಾರು ೧೫೦೦ ಪುಟಗಳ ಕಾದಂಬರಿಯಾಗಿದ್ದು ಜೀವನದ ವೈಶಾಲ್ಯವನ್ನು ಮತ್ತು ಎಲ್ಲ ಬಗೆಯ ನೋವುನಲಿವುಗಳನ್ನು ಸ್ಪಷ್ಟವಾಗಿ ಮತ್ತು ರಸವತ್ತಾಗಿ ಈಕಾದಂಬರಿಯಷ್ಟು ಬೇರಾವ ಕಾದಂಬರಿಯೂ ತೋರಿಸುವುದಿಲ್ಲ. ಇದರ ಸಂಗ್ರಹವನ್ನು ಇಲ್ಲಿ - 'ಪುಸ್ತಕ ಸಂಗ್ರಹ' ವಿಭಾಗದಲ್ಲಿ ಓದಬಹುದು
  • ರೀಸರ್ರೆಕ್ಷನ್ ( ಇದು 'ಪುನರ್ಜನ್ಮ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ)

ಹೆಚ್ಚಿನ ಮಾಹಿತಿಗೆ

ಹೊರಗಿನ ಕೊಂಡಿ

Tags:

ಲಿಯೊ ಟಾಲ್‍ಸ್ಟಾಯ್ ಟಾಲ್ ಸ್ಟಾಯ್,ರವರ ಪೂರ್ವ ವೃತ್ತಾಂತ, ಹಾಗೂ ಅವರ ವೃತ್ತಿ-ಜೀವನ :ಲಿಯೊ ಟಾಲ್‍ಸ್ಟಾಯ್ ಟಾಲ್ ಸ್ಟಾಯ್,ರವರ ಅತ್ಯಂತ ಪ್ರಮುಖ ಕಾದಂಬರಿಗಳು :ಲಿಯೊ ಟಾಲ್‍ಸ್ಟಾಯ್ ಹೆಚ್ಚಿನ ಮಾಹಿತಿಗೆಲಿಯೊ ಟಾಲ್‍ಸ್ಟಾಯ್ ಹೊರಗಿನ ಕೊಂಡಿಲಿಯೊ ಟಾಲ್‍ಸ್ಟಾಯ್Ru-Lev Nikolayevich Tolstoy.oggw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:Ru-Lev Nikolayevich Tolstoy.oggನವೆಂಬರ್ ೨೦ರಷ್ಯಾಸೆಪ್ಟೆಂಬರ್ ೯೧೮೨೮೧೯೧೦

🔥 Trending searches on Wiki ಕನ್ನಡ:

ಅನುಶ್ರೀಮೆಂತೆರಾಯಲ್ ಚಾಲೆಂಜರ್ಸ್ ಬೆಂಗಳೂರುಗಾಂಧಿ ಜಯಂತಿಭಾರತದ ಸಂವಿಧಾನ ರಚನಾ ಸಭೆಖೊಖೊಆರ್ಯಭಟ (ಗಣಿತಜ್ಞ)ಟೈಗರ್ ಪ್ರಭಾಕರ್ಸಮುಚ್ಚಯ ಪದಗಳುಯಶ್(ನಟ)ಕಾಫಿರ್ಹುಲಿಚದುರಂಗಬುಡಕಟ್ಟುಹಸಿರುಅಮೃತಬಳ್ಳಿಭಾರತೀಯ ಜನತಾ ಪಕ್ಷಉತ್ಪಲ ಮಾಲಾ ವೃತ್ತರನ್ನಭಾರತೀಯ ಕಾವ್ಯ ಮೀಮಾಂಸೆಜೋಳಪ್ರಹ್ಲಾದ ಜೋಶಿಸಮಾಜಶಾಸ್ತ್ರಕರ್ನಾಟಕದ ಏಕೀಕರಣಕೆರೆಗೆ ಹಾರ ಕಥನಗೀತೆಚಾಮರಾಜನಗರವರ್ಣಾಶ್ರಮ ಪದ್ಧತಿಅರವಿಂದ ಘೋಷ್ರಾಮ್ ಮೋಹನ್ ರಾಯ್ಷಟ್ಪದಿದಾಸ ಸಾಹಿತ್ಯಇತಿಹಾಸಕಲಬುರಗಿಮಹಾಕವಿ ರನ್ನನ ಗದಾಯುದ್ಧಕನ್ನಡ ಗುಣಿತಾಕ್ಷರಗಳುದ್ವಿಗು ಸಮಾಸಲಕ್ಷ್ಮಿಲೋಹಮೊದಲನೇ ಅಮೋಘವರ್ಷಕೃಷಿಆದೇಶ ಸಂಧಿಕರ್ನಾಟಕ ರಾಜ್ಯ ಮಹಿಳಾ ಆಯೋಗಜಗತ್ತಿನ ಅತಿ ಎತ್ತರದ ಪರ್ವತಗಳುಅರಣ್ಯನಾಶವಿಜ್ಞಾನಸೀತೆಕರ್ಬೂಜಅಡೋಲ್ಫ್ ಹಿಟ್ಲರ್ವ್ಯವಸಾಯಕೂಡಲ ಸಂಗಮಬ್ಯಾಡ್ಮಿಂಟನ್‌ರಾಷ್ಟ್ರೀಯ ಜನತಾ ದಳತಿರುಪತಿಹೊಂಗೆ ಮರಸೆಸ್ (ಮೇಲ್ತೆರಿಗೆ)ತತ್ತ್ವಶಾಸ್ತ್ರಕನ್ನಡ ಛಂದಸ್ಸುಫೇಸ್‌ಬುಕ್‌ಮಾದಿಗಭಾರತದ ಜನಸಂಖ್ಯೆಯ ಬೆಳವಣಿಗೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಓಂ (ಚಲನಚಿತ್ರ)ಪಶ್ಚಿಮ ಬಂಗಾಳಚೀನಾಕೋವಿಡ್-೧೯ಕುಕ್ಕೆ ಸುಬ್ರಹ್ಮಣ್ಯ ದೇವಾಲಯರಾಜ್‌ಕುಮಾರ್ಶಿಶುನಾಳ ಶರೀಫರುಗದ್ಯಕರ್ನಾಟಕದ ನದಿಗಳುಚಿಕ್ಕಮಗಳೂರುನಾಡ ಗೀತೆಚಂಪೂಮಾನವ ಸಂಪನ್ಮೂಲ ನಿರ್ವಹಣೆಸುದೀಪ್🡆 More