ಲಿಂಗದಹಳ್ಳಿ

ಲಿಂಗದಹಳ್ಳಿ ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ.

ಲಿಂಗದಹಳ್ಳಿ
ಲಿಂಗದಹಳ್ಳಿ
village
Population
 (೨೦೧೨)
 • Total೧೫೦೦


ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.


ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.


ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.


ಕಲೆ ಮತ್ತು ಸಂಸ್ಕೃತಿ

ಲಿಂಗದಹಳ್ಳಿ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.


ಧರ್ಮಗಳು

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.


ಭಾಷೆಗಳು

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.


ದೇವಾಲಯಗಳು

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ವೆಂಕಟೇಶ್ವರ ದೇವಾಲಯ, ಶ್ರೀ ಪಾಂಡುರಂಗ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.


ಮಸೀದಿಗಳು

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.


ನೀರಾವರಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.


ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.


ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.


ಹಬ್ಬಗಳು

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.


ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.


ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.


ರಾಜಕೀಯ

ಗ್ರಾಮವು ವಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

Tags:

ಲಿಂಗದಹಳ್ಳಿ ಭೌಗೋಳಿಕಲಿಂಗದಹಳ್ಳಿ ಹವಾಮಾನಲಿಂಗದಹಳ್ಳಿ ಸಾಂಸ್ಕೃತಿಕಲಿಂಗದಹಳ್ಳಿ ಕಲೆ ಮತ್ತು ಸಂಸ್ಕೃತಿಲಿಂಗದಹಳ್ಳಿ ಧರ್ಮಗಳುಲಿಂಗದಹಳ್ಳಿ ಭಾಷೆಗಳುಲಿಂಗದಹಳ್ಳಿ ದೇವಾಲಯಗಳುಲಿಂಗದಹಳ್ಳಿ ಮಸೀದಿಗಳುಲಿಂಗದಹಳ್ಳಿ ನೀರಾವರಿಲಿಂಗದಹಳ್ಳಿ ಉದ್ಯೋಗಲಿಂಗದಹಳ್ಳಿ ಬೆಳೆಗಳುಲಿಂಗದಹಳ್ಳಿ ಹಬ್ಬಗಳುಲಿಂಗದಹಳ್ಳಿ ಶಿಕ್ಷಣಲಿಂಗದಹಳ್ಳಿ ಸಾಕ್ಷರತೆಲಿಂಗದಹಳ್ಳಿ ರಾಜಕೀಯಲಿಂಗದಹಳ್ಳಿಕರ್ನಾಟಕಬಿಜಾಪುರಮುದ್ದೇಬಿಹಾಳ

🔥 Trending searches on Wiki ಕನ್ನಡ:

ಗ್ರಾಮ ಪಂಚಾಯತಿಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆಮುಮ್ಮಡಿ ಕೃಷ್ಣರಾಜ ಒಡೆಯರುಪೊನ್ನಹೊನ್ನಾವರಸೀಮೆ ಹುಣಸೆವಿಶ್ವ ಪರಂಪರೆಯ ತಾಣರಾಮಾಯಣಚೆನ್ನಕೇಶವ ದೇವಾಲಯ, ಬೇಲೂರುವಿವಾಹವಡ್ಡಾರಾಧನೆತಾಲ್ಲೂಕುವಿಕಿಪೀಡಿಯಅಂಶಿ ಸಮಾಸಸರ್ಪ ಸುತ್ತುಜಲಂಧರಗರ್ಭಧಾರಣೆಸಂಯುಕ್ತ ಕರ್ನಾಟಕಬಲಾತ್ಕಾರದ ಸಂಭೋಗಶೈಕ್ಷಣಿಕ ಮನೋವಿಜ್ಞಾನನಂಜನಗೂಡುಸೀಬೆಆಪ್ತಮಿತ್ರಕರ್ನಾಟಕದ ಜಾನಪದ ಕಲೆಗಳುವಿಶ್ವ ಪರಿಸರ ದಿನಮೈಸೂರು ರಾಜ್ಯಹದಿಬದೆಯ ಧರ್ಮಬ್ಯಾಂಕಿಂಗ್ ವ್ಯವಸ್ಥೆಸರಸ್ವತಿ ಪ್ರಭಾ ಕೊಂಕಣಿ ಮಾಸಿಕದಶಾವತಾರನಾಗವರ್ಮ-೧ನಾಟಕಜೇನುಸಾಕಣೆಕೃಷ್ಣ ಮಠಗೋಪಾಲಕೃಷ್ಣ ಅಡಿಗಭಾರತೀಯ ಅಂಚೆ ಸೇವೆಘಾಟಿ ಸುಬ್ರಹ್ಮಣ್ಯಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಅಳಿಲುಹೆಚ್.ಡಿ.ಕುಮಾರಸ್ವಾಮಿದುರ್ಯೋಧನಹಂಸಲೇಖಹುಬ್ಬಳ್ಳಿಕಣಜ (ಜಾಲತಾಣ)ಹಲ್ಮಿಡಿಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಮಾಟ - ಮಂತ್ರಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಯು.ಆರ್.ಅನಂತಮೂರ್ತಿಸಂಖ್ಯೆಜಶ್ತ್ವ ಸಂಧಿಕರ್ನಾಟಕ ವಿಶ್ವವಿದ್ಯಾಲಯಮೂತ್ರಪಿಂಡಚಾರ್ಲಿ ಚಾಪ್ಲಿನ್ಆಲದ ಮರವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮೆಕ್ಕೆ ಜೋಳಭಾರತದ ರಾಷ್ಟ್ರೀಯ ಉದ್ಯಾನಗಳುಪಂಚತಂತ್ರಭ್ರಷ್ಟಾಚಾರಮೊಘಲ್ ಸಾಮ್ರಾಜ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ನಗರಹಾಲುಪದ್ಮಭೂಷಣಭಾರತೀಯ ಶಾಸ್ತ್ರೀಯ ನೃತ್ಯಶ್ರೀ ರಾಮ ನವಮಿಮಣ್ಣುಬೆಸಗರಹಳ್ಳಿ ರಾಮಣ್ಣಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುನಾಗೇಶ ಹೆಗಡೆರಸ(ಕಾವ್ಯಮೀಮಾಂಸೆ)೧೮೬೨ಭಾರತೀಯ ಸ್ಟೇಟ್ ಬ್ಯಾಂಕ್🡆 More