ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ.

ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ "ಸಂಘ ಪರಿವಾರ" ಎಂದು ಕರೆಯಲಾಗುತ್ತದೆ. ಸುಮಾರು ಆರು ವರ್ಷ ಭಾರತದ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಈ ಸಂಸ್ಥೆಯ ರಾಜಕೀಯ ಮುಖ ಎಂದು ಹಲವರು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ರಾಷ್ಟ್ರೀಯ ಸ್ವಯಂಸೇವಕ ಸಂಘ
ರಾಷ್ಟ್ರೀಯ ಸ್ವಯಂಸೇವಕ ಸಂಘ
ಪಥಸಂಚಲನ ನಡೆಸುತ್ತಿರುವ ಸಂಘದ ಸದಸ್ಯರು
ಸಂಕ್ಷಿಪ್ತ ಹೆಸರುಆರ್‌ಎಸ್‌ಎಸ್
ಸ್ಥಾಪನೆ27 ಸೆಪ್ಟೆಂಬರ್ 1925 (36002 ದಿನ ಗಳ ಹಿಂದೆ) (1925-೦೯-27)
ಸ್ಥಾಪಿಸಿದವರುಕೇಶವ್ ಬಲಿರಾಮ್ ಹೆಡಗೇವಾರ್
ಶೈಲಿಸ್ವಯಂಸೇವೆ
Legal statusಅಸ್ತಿತ್ವದಲ್ಲಿದೆ
Purposeಸ್ವಯಂಸೇವೆಯ ಮೂಲಕ ದೇಶಸೇವೆ
ಪ್ರಧಾನ ಕಚೇರಿಡಾ. ಹೆಡ್ಗೆವಾರ್ ಭವನ, ಸಂಘ ಕಟ್ಟಡ ರಸ್ತೆ, ನಾಗ್ಪುರ, ಮಹಾರಾಷ್ಟ್ರ - ೪೪೦೦೩೨
ಕಕ್ಷೆಗಳು21°08′46″N 79°06′40″E / 21.146°N 79.111°E / 21.146; 79.111
ಪ್ರದೇಶ
ಭಾರತ
Membership
  • ೬ ಮಿಲಿಯನ್
  • ೫೬,೮೫೯ ಶಾಖೆಗಳು (೨೦೧೬)
ಅಧಿಕೃತ ಭಾಷೆ
ಯಾವುದೂ ಇಲ್ಲ
ಸರಸಂಘಚಾಲಕ
ಮೋಹನ್ ಭಾಗವತ್
ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)
ದತ್ತಾತ್ರೇಯ ಹೊಸಬಾಳೆ
ಅಂಗಸಂಸ್ಥೆಗಳು
  • ಭಾರತೀಯ ಜನತಾ ಪಕ್ಷ
  • ಭಾರತೀಯ ಕಿಸಾನ್ ಸಂಘ
  • ಭಾರತೀಯ ಮಜ್ದೂರ್ ಸಂಘ
  • ಸೇವಾ ಭಾರತಿ
  • ಭಾರತೀಯ ರಾಷ್ಟ್ರಸೇವಿಕಾ ಸಮಿತಿ
  • ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು
  • ಶಿಕ್ಷಾ ಭಾರತಿ
  • ವಿಶ್ವ ಹಿಂದೂ ಪರಿಷತ್ತು
  • ಭಜರಂಗದಳ
ಅಧಿಕೃತ ಜಾಲತಾಣwww.rss.org

ಸಂಘಟನೆ

ಒಂದು ಅಂದಾಜಿನ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರ ಸಂಖ್ಯೆಯು ೨೫ ರಿಂದ ೬೦ ಲಕ್ಷಗಳಷ್ಟಾಗಿರುತ್ತದೆ .

ಸರಸಂಘಚಾಲಕರು

ರಾಷ್ಟ್ರೀಯ ಸ್ವಯಂಸೇವಕ ಸಂಘ 
೧೯೩೯ರಲ್ಲಿ ತೆಗೆದ ಚಿತ್ರದಲ್ಲಿ ಡಾ ಹೆಡಗೆವಾರ, ಗುರುಜಿ ಗೊಲ್ವಲ್ಕರ ಸೇರಿದಂತೆ ಆಗಿನ ಸಂಘದ ಹಿರಿಯ ನಾಯಕರು

ಈ ಸಂಘಟನೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರನ್ನು ಸರಸಂಘಚಾಲಕ ಎಂದು ಕರೆಯುತ್ತಾರೆ. ಸಂಸ್ಥಾಪನೆಯ ದಿನದಿಂದ ಈಗಿನವರೆಗಿನ ಸರಸಂಘಚಾಲಕರ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ.

  • ಡಾ. ಕೇಶವ ಬಲಿರಾಂ ಹೆಡಗೆವಾರ್, ಸಂಸ್ಥಾಪಕರು, ೧೯೨೫-೧೯೩೦ ಮತ್ತು ೧೯೩೧-೧೯೪೦, ಇವರನ್ನು ಡಾಕ್ಟರ್ ಜೀ ಎಂತಲೂ ಕರೆಯಲಾಗುತ್ತದೆ.
  • ಡಾ. ಲಕ್ಷ್ಮಣ ವಾಮನ ಪರಾಂಜಪೆ, ೧೯೩೦-೧೯೩೧, ಈ ಸಂಧರ್ಭದಲ್ಲಿ ಡಾಕ್ಟರ್ ಜೀ ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೈಲಿನಲ್ಲಿದ್ದರು.
  • ಶ್ರೀ ಮಾಧವ ಸದಾಶಿವ ಗೊಲ್ವಾಳ್ಕರ್, ೧೯೪೦-೧೯೭೩, ಇವರನ್ನು ಗುರೂಜಿ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಮಧುಕರ್ ದತ್ತಾತ್ರೇಯ ದೇವರಸ್, ೧೯೭೩-೧೯೯೩, ಇವರನ್ನು ಬಾಳಾಸಾಹೇಬ್ ಎಂತಲೂ ಕರೆಯಲಾಗುತ್ತದೆ.
  • ಪ್ರೊ. ರಾಜೇಂದ್ರ ಸಿಂಗ್, ೧೯೯೩-೨೦೦೦, ಇವರನ್ನು ರಜ್ಜುಭೈಯ್ಯಾ ಎಂತಲೂ ಕರೆಯಲಾಗುತ್ತದೆ.
  • ಶ್ರೀ ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್, ೨೦೦೦-೨೦೦೯.
  • ಡಾ. ಮೋಹನ ಮಧುಕರ ಭಾಗವತ, ೨೧ ಮಾರ್ಚ್ ೨೦೦೯ ರಿಂದ ಇಂದಿನವರೆಗೂ.

ಶಾಖಾ

ಈ ಶಬ್ದಕ್ಕೆ ಕನ್ನಡದಲ್ಲಿ ಶಾಖೆ ಎಂದು ಅರ್ಥ ಬರುತ್ತದೆ. ಆರ್.ಎಸ್.ಎಸ್. (ರಾ.ಸ್ವ.ಸಂ.) ನ ಸಂಘಟಾತ್ಮಕ ಕಾರ್ಯವು ಶಾಖೆಗಳ ಮೂಲಕವೇ ನಡೆಯುತ್ತದೆ. ಶಾಖೆಗಳು ಪ್ರತಿನಿತ್ಯ ಒಂದು ಘಂಟೆ ಕಾಲ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಸಲ್ಪಡುತ್ತವೆ. ಒಂದು ಅಂಕಿ ಅಂಶದ ಪ್ರಕಾರ, ರಾಷ್ಟ್ರಾದ್ಯಂತ ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ..

ರಾ.ಸ್ವ.ಸಂ.ನ ಶಾಖೆಗಳಲ್ಲಿ ಸ್ವಯಂ ಸೇವಕರ ವ್ಯಕ್ತಿತ್ವ ನಿರ್ಮಾಣ ಹಾಗು ವಿಕಸನ ದೃಷ್ಟಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೈಹಿಕ ಸದೃಢತೆಗಾಗಿ ಯೋಗ ಮತ್ತು ವ್ಯಾಯಾಮ ಮಾಡುವದಲ್ಲದೆ ಆಟಗಳನ್ನು ಆಡಲಾಗುತ್ತದೆ. ನಾಗರಿಕ ಪ್ರಜ್ಞೆ, ಸಮಾಜ ಸೇವೆ, ಸಮುದಾಯ ಜೀವನ, ದೇಶಭಕ್ತಿ ಮೊದಲಾದ ಗುಣಗಳ ಬೆಳವಣಿಗೆಗಾಗಿ ಇನ್ನಿತರ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ. ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸೆ, ಅಪಾಯಕರ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವದು ಮತ್ತು ಪುನರ್ವಸತಿಯಂತಹ ಚಟುವಟಿಕೆಗಳ ತರಭೇತಿ ನೀಡಲಾಗುತ್ತದೆ. ಶಾಖೆ ನಡೆಸಲ್ಪಡುವ ಗ್ರಾಮ ಅಥವಾ ಪ್ರದೇಶಗಳ ಸ್ವಚ್ಛತೆ ಹಾಗು ಅಭಿವೃದ್ಡಿ ಕೆಲಸಗಳಲ್ಲಿ ತೊಡಗುವಂತೆ ಸ್ವಯಂಸೇವಕರನ್ನು ಸಂಘವು ಪ್ರೋತ್ಸಾಹಿಸುತ್ತದೆ.

ಬಾಹ್ಯ ಸಂಪರ್ಕಗಳು

ಹೆಚ್ಚಿನ ಓದಿಗೆ

ಆಕರ/ಉಲ್ಲೇಖಗಳು

Tags:

ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಘಟನೆರಾಷ್ಟ್ರೀಯ ಸ್ವಯಂಸೇವಕ ಸಂಘ ಬಾಹ್ಯ ಸಂಪರ್ಕಗಳುರಾಷ್ಟ್ರೀಯ ಸ್ವಯಂಸೇವಕ ಸಂಘ ಹೆಚ್ಚಿನ ಓದಿಗೆರಾಷ್ಟ್ರೀಯ ಸ್ವಯಂಸೇವಕ ಸಂಘ ಆಕರಉಲ್ಲೇಖಗಳುರಾಷ್ಟ್ರೀಯ ಸ್ವಯಂಸೇವಕ ಸಂಘಕೆ.ಬಿ.ಹೆಡಗೆವಾರ್ನಾಗಪುರಬಲಪಂಥಭಾರತಭಾರತೀಯ ಜನತಾ ಪಕ್ಷಮಹಾರಾಷ್ಟ್ರವಿಕಿಪೀಡಿಯ:Citation neededವಿಜಯದಶಮಿಸೆಪ್ಟೆಂಬರ್ ೨೭ಸ್ವಯಂಸೇವೆ

🔥 Trending searches on Wiki ಕನ್ನಡ:

ಅಲೆಕ್ಸಾಂಡರ್ರಾಣಿ ಅಬ್ಬಕ್ಕಋತುಚಕ್ರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಮಾನವ ಹಕ್ಕುಗಳುರಾಜ್‌ಕುಮಾರ್ಭಾರತದ ಚುನಾವಣಾ ಆಯೋಗವೈದಿಕ ಯುಗಅಂತರಜಾಲಬೆಂಗಳೂರುಋತುಜಾಗತಿಕ ತಾಪಮಾನವಿಧಾನ ಪರಿಷತ್ತುಬಿಳಿಗಿರಿರಂಗನ ಬೆಟ್ಟಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಇತಿಹಾಸಮಣ್ಣುಜಶ್ತ್ವ ಸಂಧಿಶ್ರವಣಬೆಳಗೊಳಭಾರತದ ಸಂವಿಧಾನ ರಚನಾ ಸಭೆಕೋವಿಡ್-೧೯ಭಾರತದ ರಾಜಕೀಯ ಪಕ್ಷಗಳುಜ್ಞಾನಪೀಠ ಪ್ರಶಸ್ತಿಸಾಹಿತ್ಯಶೈಕ್ಷಣಿಕ ಮನೋವಿಜ್ಞಾನಚಾಮುಂಡರಾಯಜೀವಕೋಶಆರ್ಯಭಟ (ಗಣಿತಜ್ಞ)ರಾಜ್ಯಪಾಲಜಪಾನ್ಹಿಪಪಾಟಮಸ್ಆಂಧ್ರ ಪ್ರದೇಶಎಳ್ಳೆಣ್ಣೆಆಂಡಯ್ಯಭೂಮಿಸಾವಿತ್ರಿಬಾಯಿ ಫುಲೆದೇವತಾರ್ಚನ ವಿಧಿಸವದತ್ತಿರಾಜಸ್ಥಾನ್ ರಾಯಲ್ಸ್ಕನ್ನಡ ಸಂಧಿಸಿದ್ಧರಾಮಕಾಮಸೂತ್ರವೃತ್ತಪತ್ರಿಕೆಕರ್ನಾಟಕ ರತ್ನನಯಸೇನಅಕ್ಷಾಂಶ ಮತ್ತು ರೇಖಾಂಶಸ್ವರಪಾಕಿಸ್ತಾನಪುಸ್ತಕಭಾರತದ ಬುಡಕಟ್ಟು ಜನಾಂಗಗಳುಭಜರಂಗಿ (ಚಲನಚಿತ್ರ)ತತ್ಸಮ-ತದ್ಭವಮೆಂತೆಭಾರತೀಯ ನೌಕಾಪಡೆಉಪನಯನಹೊಯ್ಸಳ ವಿಷ್ಣುವರ್ಧನಬಿ.ಎಸ್. ಯಡಿಯೂರಪ್ಪಪುಟ್ಟರಾಜ ಗವಾಯಿಗೋತ್ರ ಮತ್ತು ಪ್ರವರಜಿ.ಎಸ್.ಶಿವರುದ್ರಪ್ಪಸಮಾಜಶಾಸ್ತ್ರಪಶ್ಚಿಮ ಘಟ್ಟಗಳುಮೈಸೂರು ದಸರಾಲೋಪಸಂಧಿಪ್ರಕಾಶ್ ರೈಶ್ರೀ ರಾಮಾಯಣ ದರ್ಶನಂಬೇಸಿಗೆಮಹಮದ್ ಬಿನ್ ತುಘಲಕ್ಭಾರತದ ಸಂಸತ್ತುಕನ್ನಡಹಾಸನಡಿ.ವಿ.ಗುಂಡಪ್ಪರಾಷ್ಟ್ರಕವಿಸಬಿಹಾ ಭೂಮಿಗೌಡತ. ರಾ. ಸುಬ್ಬರಾಯಭಾರತದ ಆರ್ಥಿಕ ವ್ಯವಸ್ಥೆವರದಿಸಿ. ಆರ್. ಚಂದ್ರಶೇಖರ್🡆 More