ಸ್ವಾಮಿ ರಾಮಾನಂದ ತೀರ್ಥ

ಸ್ವಾಮಿ ರಾಮಾನಂದ ತೀರ್ಥರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ ರಂದು ಜನಿಸಿದರು.ಇವರ ತಂದೆ ಭವಾನರಾಯ ಬೇಡಗಿ.

ರಾಮಾನಂದ ತೀರ್ಥರ ಹುಟ್ಟು ಹೆಸರು ವೆಂಕಟೇಶ. ತಮ್ಮ ಮೊದಲ ಹಂತದ ವಿದ್ಯಾಭ್ಯಾಸವನ್ನು ಇವರು ದೇವಳ ಗಾಣಗಾಪುರದಲ್ಲಿ ತಮ್ಮ ದೊಡ್ಡ ಅಕ್ಕ ಗಂಗಾಬಾಯಿಯ ಬಳಿಯಲ್ಲಿ ಮಾಡಿದರು. ಬಳಿಕ ಸೊಲ್ಲಾಪುರದ ನಾರ್ಥಕೋಟ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಗಾಂಧೀಜಿ ಹಾಗು ಲೋಕಮಾನ್ಯ ತಿಲಕರ ದರ್ಶನ ಪಡೆದರು.

ತಿಲಕ ವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಕಾರ್ಮಿಕ ಧುರೀಣ ಎನ್.ಎಮ್.ಜೋಶಿ ಅವರ ಕಾರ್ಯದರ್ಶಿಯಾಗಿ ದಿಲ್ಲಿಗೆ ತೆರಳಿದರು. ದಿಲ್ಲಿಯ ಹವಾಮಾನದಿಂದ ಬಳಲಿದ ವೆಂಕಟೇಶ ಅವರು ಹವಾ ಬದಲಾವಣೆಗೆಂದು ಉಸ್ಮಾನಾಬಾದ ಜಿಲ್ಲೆಯ ಹಿಪ್ಪರಗಾಕ್ಕೆ ಬಂದರು.ಅಲ್ಲಿ ಹೈದರಾಬಾದ ನಿಜಾಮನ ರಾಜ್ಯವಿತ್ತು. ಸಾಮಾನ್ಯ ಪ್ರಜೆಗಳ ಮೇಲೆ ನಿಜಾಮ ಆಡಳಿತ ನಡೆಯಿಸುತ್ತಿದ್ದ ಅತ್ಯಾಚಾರದ ವಿರುದ್ಧ ರಾಮಾನಂದರು ಪ್ರಜೆಗಳನ್ನು ಸಂಘಟಿಸಿದರು. ಹೈದರಾಬಾದ ಕಾಂಗ್ರೆಸ್ ಪಕ್ಷ ಕಟ್ಟಿದರು.ಅತ್ಯಾಚಾರದ ವಿರುದ್ಧ ಹೋರಾಟಕ್ಕಿಳಿದರು. ನಿಜಾಮ ಸರಕಾರ ರಾಮಾನಂದರನ್ನು ಬಂಧಿಸಿ ಚಂಚಲಗುಡ್ಡಾ ಸೆರೆಮನೆಗೆ ಕಳಿಯಿಸಿತು.

೧೯೪೮ ಸಪ್ಟಂಬರ ೧೧ ರಿಂದ ಸಪ್ಟಂಬರ ೧೭ ರವರೆಗೆ ಜರುಗಿದ ಹೈದರಾಬಾದ ವಿಮೋಚನಾ ಕಾರ್ಯಾಚರಣೆ‍ಯ ನಾಯಕತ್ವವನ್ನು ಇವರು ವಹಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಇವರನ್ನು ಪೂಜ್ಯ ಭಾವನೆಯಿಂದ ನೋಡುವ ಲಕ್ಷಾಂತರ ಜನರಿದ್ದಾರೆ. ಹೈದರಾಬಾದ್ ವಿಮೋಚನೆಯ ನಂತರ ರಾಜಕೀಯ ಸೇರದೆ, ಸ್ವಾಮಿ ರಾಮಾನಂದ ತೀರ್ಥರು ಆನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.

ಸ್ವಾಮಿ ರಾಮಾನಂದ ತೀರ್ಥರು ೧೯೭೨ ಜನೆವರಿ ೨೨ರಂದು ಹೈದರಾಬಾದಿನಲ್ಲಿ ನಿಧನರಾದರು. ಮಹಾರಾಷ್ಟ್ರದಲ್ಲಿ ಇವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

Tags:

ಮಹಾತ್ಮ ಗಾ೦ಧಿಲೋಕಮಾನ್ಯ ತಿಲಕಸಿಂದಗಿಸೊಲ್ಲಾಪುರ

🔥 Trending searches on Wiki ಕನ್ನಡ:

ಅಂಬಿಗರ ಚೌಡಯ್ಯಹುಚ್ಚೆಳ್ಳು ಎಣ್ಣೆಛತ್ರಪತಿ ಶಿವಾಜಿಕೊಬ್ಬರಿ ಎಣ್ಣೆಆದಿ ಶಂಕರತ. ರಾ. ಸುಬ್ಬರಾಯಪ್ಯಾರಾಸಿಟಮಾಲ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಗರ್ಭಧಾರಣೆದಾಸವಾಳಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಒಡೆಯರ್ನೀರುಪಠ್ಯಪುಸ್ತಕಸೂರ್ಯವ್ಯೂಹದ ಗ್ರಹಗಳುನಿರಂಜನಸಮುದ್ರಗುಪ್ತಜಪಾನ್ಭಜರಂಗಿ (ಚಲನಚಿತ್ರ)ಯೋಗಶಾಲೆಪಾಕಿಸ್ತಾನಶೈಕ್ಷಣಿಕ ಮನೋವಿಜ್ಞಾನಭಾರತದ ರಾಷ್ಟ್ರಪತಿಗಳ ಪಟ್ಟಿಚದುರಂಗ (ಆಟ)ಕುವೆಂಪುಕರ್ನಾಟಕದಲ್ಲಿ ವನ್ಯಜೀವಿಧಾಮಗಳುಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ಆರ್ಥಿಕ ವ್ಯವಸ್ಥೆಪ್ರಜಾವಾಣಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿನ ಚುನಾವಣೆಗಳುರಮ್ಯಾಕರ್ನಾಟಕ ವಿಧಾನ ಪರಿಷತ್ವಿಜಯಪುರ ಜಿಲ್ಲೆಅರಿಸ್ಟಾಟಲ್‌ಚಂದ್ರಶೇಖರ ಪಾಟೀಲಹವಾಮಾನಜನ್ನಬಹಮನಿ ಸುಲ್ತಾನರುಚಾಮುಂಡರಾಯಚನ್ನವೀರ ಕಣವಿಅರ್ಥಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕಾಗೋಡು ಸತ್ಯಾಗ್ರಹಜಾಗತೀಕರಣಸಚಿನ್ ತೆಂಡೂಲ್ಕರ್ಜೇನು ಹುಳುವಾಣಿಜ್ಯ(ವ್ಯಾಪಾರ)ಕರ್ನಾಟಕದ ಏಕೀಕರಣದೀಪಾವಳಿದೇವನೂರು ಮಹಾದೇವಕ್ರಿಯಾಪದಜಯಚಾಮರಾಜ ಒಡೆಯರ್ಭಾರತದ ಚುನಾವಣಾ ಆಯೋಗಚೆನ್ನಕೇಶವ ದೇವಾಲಯ, ಬೇಲೂರುನಾಥೂರಾಮ್ ಗೋಡ್ಸೆಮಾಸಭಾರತದಲ್ಲಿ ಕೃಷಿಕಾರ್ಮಿಕರ ದಿನಾಚರಣೆತಾಜ್ ಮಹಲ್ಹೆಚ್.ಡಿ.ದೇವೇಗೌಡಭೋವಿಕುಬೇರಶಬರಿವಿಷ್ಣುಕೇಶಿರಾಜಸಂಗೀತಕಲ್ಯಾಣಿಹೊಯ್ಸಳಸಿದ್ಧರಾಮಮಳೆಗಾಲಕ್ರಿಕೆಟ್ಪಂಡಿತಾ ರಮಾಬಾಯಿಸಾರಜನಕಕರ್ನಾಟಕದ ವಾಸ್ತುಶಿಲ್ಪಬಂಗಾರದ ಮನುಷ್ಯ (ಚಲನಚಿತ್ರ)ಕರ್ನಾಟಕದ ಇತಿಹಾಸ🡆 More