ಮೆರವಣಿಗೆ

ಮೆರವಣಿಗೆಯು ವಿಧ್ಯುಕ್ತ ಅಥವಾ ಔಪಚಾರಿಕ ರೀತಿಯಲ್ಲಿ ನಡೆಯುತ್ತಿರುವ ಜನರ ಸಂಘಟಿತ ಸಮೂಹ.

ಎಲ್ಲ ಜನರಲ್ಲಿ ಮತ್ತು ಎಲ್ಲ ಕಾಲಗಳಲ್ಲಿ ಮೆರವಣಿಗೆಗಳು ಕ್ರಮಬದ್ಧ ಮತ್ತು ಪ್ರಭಾವಶಾಲಿ ಕಾರ್ಯಕ್ರಮದ ರೂಪದಲ್ಲಿನ ಸಾರ್ವಜನಿಕ ಆಚರಣೆಯ ಸಹಜ ರೂಪವಾಗಿವೆ. ಪ್ರಾಚೀನ ಸ್ಮಾರಕಗಳು ಧಾರ್ಮಿಕ ಮತ್ತು ವಿಜಯೋತ್ಸವದ ಮೆರವಣಿಗೆಗಳನ್ನು ಹೇರಳವಾಗಿ ಚಿತ್ರಿಸಿವೆ, ಉದಾ. ಈಜಿಪ್ಟ್‌ನ ಧಾರ್ಮಿಕ ಮೆರವಣಿಗೆಗಳು, ಕೆಲವು ಬಘಾಜ಼್-ಕೇಯಿಯ ಬಂಡೆ ಕೆತ್ತನೆಗಳಲ್ಲಿ ಚಿತ್ರಿಸಲ್ಪಟ್ಟಿವೆ, ಗ್ರೀಕ್ ಕಲೆಯಲ್ಲಿ ಮೆರವಣಿಗೆಗಳ ಅನೇಕ ನಿರೂಪಣಗಳು, ಇದು ಪಾರ್ಥೆನಾನ್ ಅಲಂಕರಣಪಟ್ಟಿಯ ಮಹಾ ಪ್ಯಾನ್ಯಾಥನೇಯಾ ಸಂಬಂಧಿ ಮೆರವಣಿಗೆಯಲ್ಲಿ ಅಂತ್ಯಗೊಂಡಿತು, ಮತ್ತು ಟೈಟಸ್‍ನ ಕಮಾನಿನಲ್ಲಿರುವಂತಹ ರೋಮನ್ ವಿಜಯೋತ್ಸವ ಸಂಬಂಧಿ ಉಬ್ಬುಕೆತ್ತನೆಗಳು.

ಒಂದು ಮೆರವಣಿಗೆಯನ್ನು ಕೇವಲ ಒಂದೇ ದಿಕ್ಕಿನಲ್ಲಿ ನಡೆಯುತ್ತಿರುವ ಜನರಿಗಿಂತ ಹೆಚ್ಚು ಅರ್ಥಪೂರ್ಣವಾಗಿಸಲು ಅನೇಕ ಅಂಶಗಳನ್ನು ಬಳಸಬಹುದು:

ವಿಧ್ಯುಕ್ತವಾದ ನಾವೆ, ಆನೆ ಅಂಬಾರಿ, ಕುದುರೆಯಿಂದ ಎಳೆಯಲ್ಪಟ್ಟ ಗಾಡಿ, ಅಥವಾ ಇತರರು ತಮ್ಮ ಹೆಗಲ ಮೇಲೆ ಹೊತ್ತ ಪಲ್ಲಕ್ಕಿಯಂತಹ ಅಥವಾ ಒಂದು ವಿಶೇಷವಾದ ಸಾರಿಗೆಯ ವಿಧಾನ; ಸಂಗೀತ, ಇದರಲ್ಲಿ ಇಗರ್ಜಿ ಮೆರವಣಿಗೆಯ ಗಾಯಕವೃಂದ, ಸೇನಾ ಮೆರವಣಿಗೆಯ ಪ್ರಯಾಣ ವಾದ್ಯಗೋಷ್ಠಿ ಎಲ್ಲವೂ ಸೇರಿರಬಹುದು. ಮೆರವಣಿಗೆಯ ಮುಂದೆ ಘೋಷಕರು ಅದಕ್ಕೆ ದಾರಿ ಬಿಡುವಂತೆ ಕೂಗುತ್ತ ನಡೆಯಬಹುದು; ಆದ್ಯತೆಯ ಕ್ರಮ: ಆಡಂಬರದ ಪ್ರದರ್ಶನವಿಲ್ಲದೇ ಕೂಡ, ಅವರ ಕ್ರಮ ಮತ್ತು ನಿಯೋಜನೆಯು ಸ್ಪಷ್ಟವಾಗಿ ಒಂದು ಶ್ರೇಣಿ ವ್ಯವಸ್ಥೆ ಅಥವಾ ಸಹಜೀವಿ ಸಂಬಂಧದಂತೆ ಕಣ್ಣಿಗೆ ಕಾಣಿಸಿದರೆ, ಮುಂದೆ ನಡೆಯುತ್ತಿರುವ ಜನರ ಒಂದು ಗುಂಪು ಮೆರವಣಿಗೆಯನ್ನು ರೂಪಿಸುತ್ತದೆ ಎಂದು ಹೇಳಬಹುದು; ಪತಾಕೆಗಳು, ಬೀಸಣಿಗೆಗಳು, ಸೂಚಕ ಸಂಕೇತಗಳು, ನಿಧಿ, ಅಥವಾ ಇತರ ಕಣ್ಸೆಳೆಯುವ ವಸ್ತುಗಳ ಧಾರಕರು ಅಥವಾ ಮುಂದೆ ನಡೆಯುವ ವಿದೇಶಿ ಪ್ರಾಣಿಗಳು. ಒಂದು ಸರಳ ಉದಾಹರಣೆಯೆಂದರೆ ವಿವಾಹದಲ್ಲಿನ ಉಂಗುರ ಧಾರಕ; ಹೂವು ಹೊತ್ತೊಯ್ಯುವವರು ಒದಗಿಸುವ ಸುಗಂಧದ್ರವ್ಯ ಅಥವಾ ಧೂಪದ್ರವ್ಯದ ಧೂಪದಾನಿ; ವಿಶೇಷ ವೇಷಭೂಷಣ: ಸಾಂಪ್ರದಾಯಿಕವಾಗಿ ಮೆರವಣಿಗೆ ಸಹಾಯಕರು, ಕಾಲಾಳುಗಳು, ಕಾರ್ಯಕ್ರಮದ ಕಾವಲು ಪಡೆಗಳು, ಅಥವಾ ಸೇವಕರ ವೇಷಭೂಷಣಗಳು ಮೆರವಣಿಗೆಯನ್ನು ಏರ್ಪಡಿಸುವ ವ್ಯಕ್ತಿಯ ಸಂಪತ್ತನ್ನು ಪ್ರದರ್ಶಿಸಲು ನೆರವಾಗುತ್ತವೆ; ವಿಶೇಷ ದೀಪ ವ್ಯವಸ್ಥೆ: ಮೃತರ ನೆನಪಿನಲ್ಲಿ ಅಥವಾ ರಾಜಕೀಯ ಐಕಮತ್ಯವನ್ನು ತೋರಿಸಲು ಮೇಣದ ಬತ್ತಿಯನ್ನು ಹೊತ್ತಿಸುವುದು. ಹಲವುವೇಳೆ ಇದರಲ್ಲಿ ಮೇಣದ ಬತ್ತಿ ಹೊತ್ತಿಸಿದ ಮೆರವಣಿಗೆ ಸೇರಿರುತ್ತದೆ. ಪಟಾಕಿಗಳು ಪಟ್ಟಾಭಿಷೇಕಗಳು, ಕವಾಯಿತುಗಳು, ಮತ್ತು ಥಾಯ್ ಅರಸು ನಾವೆ ಮೆರವಣಿಗೆಗಳಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಬೆಳಗಿಸುತ್ತವೆ; ಸಾರ್ವಜನಿಕ ಪ್ರದರ್ಶನ, ಉದಾಹರಣೆಗೆ ಸ್ವಲ್ಪ ಕಡಿಮೆ ಎತ್ತರದಲ್ಲಿ ವಿಮಾನದ ಹಾರಾಟ, ನ್ಯೂ ಯಾರ್ಕ್ ಟಿಕರ್ ಟೇಪ್ ಕವಾಯತುಗಳ ಬಣ್ಣಬಣ್ಣದ ಕಾಗದದ ತುಂಡುಗಳು. ಉಡುಗೊರೆಗಳ ವಿತರಣೆ, ಒಂದು ಕಾಲದಲ್ಲಿ ಹಲವುವೇಳೆ ಆಹಾರ ಅಥವಾ ಹಣವಾಗಿತ್ತು. ಇಂದು, ಬಹುತೇಕ ಜನರು ಮರ್ಡಿ ಗ್ರಾಸ್‍ನಲ್ಲಿ ಮಣಿಗಳ ವಿತರಣೆ ಮತ್ತು ಸ್ಥಳೀಯ ಜಾತ್ರೆ ಕವಾಯತುಗಳಲ್ಲಿ ಸಿಹಿ ಮಿಠಾಯಿಗಳ ಎಸೆಯುವಿಕೆ ಬಗ್ಗೆ ಪರಿಚಿತವಾಗಿದ್ದಾರೆ.

Tags:

🔥 Trending searches on Wiki ಕನ್ನಡ:

ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮೈಸೂರು ಸಂಸ್ಥಾನಕೆಂಬೂತ-ಘನಹುಣಸೂರು ಕೃಷ್ಣಮೂರ್ತಿಭಾರತದ ರಾಜ್ಯಗಳ ಜನಸಂಖ್ಯೆಹಳೆಗನ್ನಡಡಿ.ಎಸ್.ಕರ್ಕಿಋಗ್ವೇದಕೃಷ್ಣಾ ನದಿಸಂಶೋಧನೆತಿಗಣೆಚಾಣಕ್ಯಪುತ್ತೂರುಕನ್ನಡದಲ್ಲಿ ಗದ್ಯ ಸಾಹಿತ್ಯಜೈಮಿನಿ ಭಾರತಕಲಿಕೆಯೋಗ ಮತ್ತು ಅಧ್ಯಾತ್ಮಕನ್ನಡ ಸಾಹಿತ್ಯ ಸಮ್ಮೇಳನಬಾಬು ಜಗಜೀವನ ರಾಮ್ನಾಮಪದಭಾರತ ರತ್ನರಾಷ್ಟ್ರಕವಿರಂಗವಲ್ಲಿಭಾರತದ ಸರ್ವೋಚ್ಛ ನ್ಯಾಯಾಲಯಕನ್ನಡದಲ್ಲಿ ವಚನ ಸಾಹಿತ್ಯಕರ್ನಾಟಕ ಹೈ ಕೋರ್ಟ್ಅಂತರ್ಜಾಲ ಹುಡುಕಾಟ ಯಂತ್ರಅಂತರಜಾಲದೆಹಲಿ ಸುಲ್ತಾನರುಎಚ್ ಎಸ್ ಶಿವಪ್ರಕಾಶ್ಸನ್ನತಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾಘವನ್ (ನಟ)ಕರ್ನಾಟಕ ಜನಪದ ನೃತ್ಯಶ್ಯೆಕ್ಷಣಿಕ ತಂತ್ರಜ್ಞಾನಬಸವೇಶ್ವರಗುಣ ಸಂಧಿಮದುವೆಬೆಂಗಳೂರು ನಗರ ಜಿಲ್ಲೆಭಾರತದಲ್ಲಿನ ಶಿಕ್ಷಣಕಾವ್ಯಮೀಮಾಂಸೆರಾಜಕುಮಾರ (ಚಲನಚಿತ್ರ)ಪ್ಯಾರಾಸಿಟಮಾಲ್ಗೌತಮಿಪುತ್ರ ಶಾತಕರ್ಣಿಕರ್ನಾಟಕದ ಇತಿಹಾಸಕನ್ನಡ ಚಿತ್ರರಂಗನವಗ್ರಹಗಳುಮಂಟೇಸ್ವಾಮಿಸಾಹಿತ್ಯಡಾ. ಎಚ್ ಎಲ್ ಪುಷ್ಪಎ.ಪಿ.ಜೆ.ಅಬ್ದುಲ್ ಕಲಾಂಲಾರ್ಡ್ ಕಾರ್ನ್‍ವಾಲಿಸ್ಭಾರತೀಯ ಸಂಸ್ಕೃತಿಸಮಾಜಶ್ರೀಕೃಷ್ಣದೇವರಾಯಭಾರತೀಯ ನದಿಗಳ ಪಟ್ಟಿಸಂಗೊಳ್ಳಿ ರಾಯಣ್ಣಡಿ.ವಿ.ಗುಂಡಪ್ಪಚರ್ಚೆಭಾರತದ ಸ್ವಾತಂತ್ರ್ಯ ದಿನಾಚರಣೆಕಯ್ಯಾರ ಕಿಞ್ಞಣ್ಣ ರೈಮಡಿವಾಳ ಮಾಚಿದೇವವಿಷ್ಣುತಾಪಮಾನಮಂಗಳೂರುದ್ವಿರುಕ್ತಿಬೆಂಗಳೂರು ಕೋಟೆರಾಶಿಕರ್ನಾಟಕ ಐತಿಹಾಸಿಕ ಸ್ಥಳಗಳುದಾವಣಗೆರೆಕನ್ನಡ ರಾಜ್ಯೋತ್ಸವನಗರೀಕರಣಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗದ್ಯರಕ್ತಪಿಶಾಚಿಕರ್ನಾಟಕ ವಿಧಾನ ಸಭೆ🡆 More