ಮಾಲವಿಕಾಗ್ನಿ ಮಿತ್ರಮ್

ಮಾಲವಿಕಾಗ್ನಿಮಿತ್ರಮ್ (ಇದು ಸಂಸ್ಕೃತದಲ್ಲಿರುವ ಹೆಸರು.

‘ಮಾಳವಿಕಾಗ್ನಿಮಿತ್ರ’ ಎಂಬ ಪ್ರಯೋಗ ಕನ್ನಡದಲ್ಲಿ ಹೆಚ್ಚಾಗಿದೆ.) ಕಾಳಿದಾಸನು ಸಂಸ್ಕೃತ ಭಾಷೆಯಲ್ಲಿ ರಚಿಸಿದ ಮೂರು ನಾಟಕಗಳಲ್ಲಿ ಮೊಟ್ಟಮೊದಲನೆಯದು ಎಂದು ಪರಿಗಣಿಸಲಾಗಿದೆ. ವಿದಿಶ ರಾಜ್ಯದ ಶುಂಗ ವಂಶದ ರಾಜ ಅಗ್ನಿಮಿತ್ರ ಮತ್ತು ಅವನ ಪಟ್ಟದ ರಾಣಿಯ ಸೇವಕಿ ಮಾಲವಿಕೆಯ ಪ್ರೇಮವು ಈ ನಾಟಕದ ವಸ್ತು.


ಈ ನಾಟಕದಲ್ಲಿ ಅಗ್ನಿಮಿತ್ರನ ತಂದೆ ಪುಷ್ಯಮಿತ್ರನು ಯವನರೊಡನೆ ಮಾಡಿದ ಯುದ್ಧ ಹಾಗೂ ರಾಜಸೂಯ ಯಾಗದ ವರ್ಣನೆಯಿದೆ. ಅಲ್ಲದೆ ಸಂಗೀತ ಮತ್ತು ನಾಟ್ಯದ ಕುರಿತು ವಿಸ್ತೃತವಾದ ವಿವರಣೆಯಿದೆ.


ಮಾಳವಿಕೆ ಮತ್ತು ಅಗ್ನಿಮಿತ್ರರ ಪ್ರೇಮಸಂಚಿನ ಕತೆಯು ಕೊನೆಯವರೆಗೂ ಓದುಗರ ಮನಸ್ಸನ್ನು ಸೆರೆಹಿಡಿದಿಡುವಂತೆ ರಚಿಸಲಾಗಿದೆ. ಮುಖ್ಯ ಕತೆಗೆ ಪೂರಕವಾಗಿ ಬರುವ ಅನೇಕ ಘಟನೆಗಳು ನಾಟಕವನ್ನು ಕುತೂಹಲಭರಿತವಾಗಿ ಮಾಡಿವೆ. ಸಂಗೀತ ಮತ್ತು ನಾಟ್ಯದಲ್ಲಿ ಪರಿಣಿತಳಾಗಿದ್ದರೂ ಅರಮನೆಯಲ್ಲಿ ಸಾಮಾನ್ಯ ಸೇವಕಿಯ ಮತ್ತು ರಾಜನ ನಡುವೆ ಪ್ರೇಮಾಂಕುರಿಸಿ ಬೆಳೆಯಲುಂಟಾಗುವ ಗೊಂದಲ ಮತ್ತು ಹಾಸ್ಯಮಯ ಸನ್ನಿವೇಶಗಳು ಮನಮೋಹಕವಾಗಿವೆ. ಅಗ್ನಿಮಿತ್ರನ ಬಾಲ್ಯ ಸ್ನೇಹಿತ ಹಾಗೂ ಅಸ್ಥಾನ ವಿದೂಷಕನಾದ ಗೌತಮನ ಪಾತ್ರವು ಕಥಾವಸ್ತುವಿನ ಸೂತ್ರಧಾರಿಯಾಗಿರುವ ನಾಟಕದ ತಂತ್ರ ಗಮನೀಯವಾಗಿದೆ.


ಐದು ಅಂಕಗಳ ಈ ಕೃತಿ ಕಾಳಿದಾಸನ ಮೊದಲ ನಾಟಕವಾಗಿರುವದರಿಂದ ಇರಬಹುದೇನೋ, ಮೊದಲಿಗೇ ಸೂತ್ರಧಾರನಿಂದ ಹೇಳಿಸುತ್ತಾನೆ:


ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |

ಸಂತಃ ಪರೀಕ್ಷ್ಯಾನ್ಯತರದ್ಭಜನ್ತೇ ಮೂಢಃ ಪರಪ್ರತ್ಯಯನೇಯಬುದ್ಧಿಃ ||


ಅಂದರೆ, ಹಳೆಯದೆಂದ ಮಾತ್ರಕ್ಕೆ ಎಲ್ಲ ಕಾವ್ಯವೂ ಚೆನ್ನೆಂದು ಹೇಳಲಾಗದು; ಹೊಸತೆಲ್ಲವೂ ಕೆಟ್ಟವಾಗವು. ವಿವೇಕಿಗಳು ತಮ್ಮ ಬುದ್ಧಿಯಿಂದ ಪರೀಕ್ಷಿಸಿ, ಉತ್ತಮ ಕೃತಿಯನ್ನು ಪುರಸ್ಕರಿಸುತ್ತಾರೆ. ಮೂಢರು ಇನ್ನೊಬ್ಬರ ಹೇಳಿಕೆಯನ್ನು ಅನುಸರಿಸಿ ಅದರಂತೆ ನಡೆಯುತ್ತಾರೆ.


ಹೆಚ್ಚಿನ ಅಭ್ಯಾಸಕ್ಕಾಗಿ

  • ಮಾಲವಿಕಾಗ್ನಿಮಿತ್ರ ನಾಟಕ ವಿಮರ್ಶೆ - ಡಾ ಎಸ್ ವಿ ರಂಗಣ್ಣ. ಶಾರದಾ ಮಂದಿರ, ರಾಮಯ್ಯರ್ ರಸ್ತೆ, ಮೈಸೂರು.


ಉಲ್ಲೇಖ

Tags:

ಕನ್ನಡಕಾಳಿದಾಸನಾಟಕಸಂಸ್ಕೃತ

🔥 Trending searches on Wiki ಕನ್ನಡ:

ವೀರಗಾಸೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರಾಜಾ ರವಿ ವರ್ಮಕನ್ನಡ ಬರಹಗಾರ್ತಿಯರುಮೂಢನಂಬಿಕೆಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಉಗ್ರಾಣಸಬಿಹಾ ಭೂಮಿಗೌಡಬೆಂಗಳೂರು ಗ್ರಾಮಾಂತರ ಜಿಲ್ಲೆಬಾಬರ್ಆತ್ಮಚರಿತ್ರೆರವೀಂದ್ರನಾಥ ಠಾಗೋರ್ಭಾರತದ ಸರ್ವೋಚ್ಛ ನ್ಯಾಯಾಲಯಹರಿಹರ (ಕವಿ)ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕರ್ನಾಟಕದ ಜಾನಪದ ಕಲೆಗಳುಈರುಳ್ಳಿಸುರಪುರದ ವೆಂಕಟಪ್ಪನಾಯಕಪುನೀತ್ ರಾಜ್‍ಕುಮಾರ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸುಮಲತಾಗಾಂಧಿ ಜಯಂತಿನೈಸರ್ಗಿಕ ಸಂಪನ್ಮೂಲಕರ್ನಾಟಕ ಲೋಕಸೇವಾ ಆಯೋಗಹನುಮಾನ್ ಚಾಲೀಸತತ್ಪುರುಷ ಸಮಾಸನಾಗರೀಕತೆ೧೬೦೮ನಾಲಿಗೆಕೇಂದ್ರಾಡಳಿತ ಪ್ರದೇಶಗಳುಕನ್ನಡ ರಾಜ್ಯೋತ್ಸವಪರಿಸರ ರಕ್ಷಣೆಮಳೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮೊದಲನೆಯ ಕೆಂಪೇಗೌಡವಿಮರ್ಶೆಕಪ್ಪೆ ಅರಭಟ್ಟಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜನಮೇಜಯದುಂಡು ಮೇಜಿನ ಸಭೆ(ಭಾರತ)ಕರ್ನಾಟಕ ಸಂಗೀತಹಾವುಸಮಾಜ ವಿಜ್ಞಾನಭಾರತೀಯ ಶಾಸ್ತ್ರೀಯ ನೃತ್ಯಶಾಸನಗಳುಮದುವೆಹಸ್ತ ಮೈಥುನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುವರ್ಗೀಯ ವ್ಯಂಜನವೈದೇಹಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕರ್ನಾಟಕ ವಿಧಾನ ಸಭೆಕನ್ನಡ ವ್ಯಾಕರಣಹಿಂದೂ ಧರ್ಮಮಲೇರಿಯಾರತ್ನತ್ರಯರುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಬಿಜು ಜನತಾ ದಳಮೆಕ್ಕೆ ಜೋಳಕರ್ನಾಟಕ ವಿಶ್ವವಿದ್ಯಾಲಯಹಾಲುಭಾರತೀಯ ಧರ್ಮಗಳುಚಂದ್ರಯಾನ-೩ಕವಿರಾಜಮಾರ್ಗಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತೀಯ ರಿಸರ್ವ್ ಬ್ಯಾಂಕ್ಹೆಳವನಕಟ್ಟೆ ಗಿರಿಯಮ್ಮಮಹಾವೀರಪಠ್ಯಪುಸ್ತಕಭಾರತದ ರಾಷ್ಟ್ರಪತಿಗಳ ಪಟ್ಟಿಜೋಳಆಸ್ಟ್ರೇಲಿಯಮಾರುತಿ ಸುಜುಕಿಕನಕದಾಸರುಅಮೃತಧಾರೆ (ಕನ್ನಡ ಧಾರಾವಾಹಿ)🡆 More