ಮಾರ್ಟಿನ್ ಲೂಥರ್

ಮಾರ್ಟಿನ್, ಲೂಥರ್ 1483-1546.

ಜರ್ಮನಿಯ ಧರ್ಮಪ್ರವರ್ತಕ ಹಾಗೂ ಧರ್ಮ ಸಂಸ್ಕರಣ ಪಿತಾಮಹ.

ಮಾರ್ಟಿನ್ ಲೂಥರ್


ಬದುಕು

ಹುಟ್ಟಿದ್ದು ಐಸೆಲ್‍ಬೆನ್‍ನಲ್ಲಿ. ಸಾಕ್ವನಿ ಪ್ರಾಂತ್ಯದ ಮಾನ್ಸ್‍ಫೀಲ್ಸ್ ಗಣಿಗಳಲ್ಲಿ ಈತನ ತಂದೆ ಕೆಲಸಮಾಡುತ್ತಿದ್ದ. ಮ್ಯಾಗ್ಡಬರ್ಗ್ ಐಸನಾಕ್ ಮತ್ತು ಏರ್‍ಫರ್ಟ್‍ಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಸುಮಾರು 8 ವರ್ಷದವನಾದಾಗ ಏರಫಟ್‍ನಲ್ಲಿದ್ದ ಅಗಸ್ಟಿನ್ನರ ಸಂನ್ಯಾಸಿ ಮಠ ಸೇರಿದ. ಈತ 1507ರಲ್ಲಿ ಆಚಾರ್ಯವರ್ಗಕ್ಕೆ ಅಭಿಷೇಕ ಹೊಂದಿ ಮೂರನೆಯ ವರ್ಷವೇ ವಿಟನ್‍ಬರ್ಗ್ ಪಟ್ಟಣದ ಕಲಾಶಾಲೆಯ ಅಧ್ಯಾಪಕನಾಗಿ ನೇಮಕಗೊಂಡ. 1511ರಲ್ಲಿ ಅಗಸ್ಟಿನರ ಹನ್ನೊಂದು ಸಂನ್ಯಾಸಿ ಮಠಗಳ ಮೇಲಧಿಕಾರಿಯಾದ. 1525ರಲ್ಲಿ ಕ್ಯಾಥರೀನ ವೋನ್‍ಬೇರಾ ಎಂಬಾಕೆಯನ್ನು ವಿವಾಹವಾದ.

ಬೋಧನೆ ಮತ್ತು ಕಾರ್ಯ

ಲೂಥರ್ ಬೋಧನೆ ಕೆಥೋಲಿಕರ ಬೋಧನೆಯಂಥಲ್ಲದೆ ಬೇರೆ ರೀತಿಯದ್ದಾಗಿತ್ತು. ಜನರ ಅಮಿತ ಭಕ್ತಿ ಹಾಗೂ ತನ್ನ ಆತ್ಮರಕ್ಷಣೆ ಬಗ್ಗೆ ಚಿಂತನೆ ಮೂಡಿ ದಿನನಿತ್ಯ ನೆರವೇರಿಸಬೇಕಾದ ದಿವ್ಯ ಕರ್ಮಗಳ ಆಚರಣೆಯಲ್ಲಿ ನಿರುತ್ಸಾಹ ಕೋರಿದ. ಕೆಲವು ಕಾಲದ ಅನಂತರ ಅವನ್ನು ಪೂರ್ಣವಾಗಿ ಬಿಟ್ಟುಬಿಟ್ಟ. ವ್ಯಕ್ತಿ ತನ್ನ ಪ್ರೀತಿ ವಿಶ್ವಾಸಗಳಿಂದಲೇ ನೀತಿವಂತನೆಂದು ನಿರ್ಣಯಿಸಲ್ಪಡುವನೇ ವಿನಾ ತನ್ನ ಕಾರ್ಯಗಳಿಂದಲ್ಲ ಎಂಬ ಸಿದ್ಧಾಂತವನ್ನು ಬೋಧಿಸತೊಡಗಿದ. ಇದೇ ಸುವಾರ್ತೆಯ ತಿರುಳು ಎಂದು ಭಾವಿಸಿದ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗಸ್ಟಿನ್ನರ ಬೋಧನೆಗಳಲ್ಲಿ ಅನೇಕ ನಿದರ್ಶನಗಳು ಕಂಡುಬಂದು ಅವನ್ನೇ ಹಿಡಿದು ಸಾಧಿಸಿ ತನ್ನ ಬೋದನೆಯ ಮೂಲಸಿದ್ಧಾಂತವಾಗಿ ಸ್ಥಾಪಿಸಿದ. ದೇವರಿಗೂ ಮನುಷ್ಯರಿಗೂ ಸಭೆ ಮತ್ತು ಅರ್ಚಕರು ಮಧ್ಯವರ್ತಿಗಳಾಗಿರುತ್ತಾರೆಂಬ ನಂಬಿಕೆಯನ್ನು ಅಲ್ಲಗಳೆದ. ಇದೇವೇಳೆಗೆ ಟಿಡ್‍ಸಲ್ ಎಂಬ ಸಂನ್ಯಾಸಿ ಹತ್ತನೆಯ ಲಿಯೋ ಎಂಬ ಪೋಪನಿಂದ ಇನ್‍ಡಲ್‍ಜನ್ಸ್‍ಸ್ ಎಂಬ ಅಧಿಕಾರ ಪತ್ರಿಕೆಗಳನ್ನು ಮಾರಿ ರೋಮ್ ನಗರದ ಸೇಂಟ್ ಪೀಟರ್ಸ್ ದೇವಸ್ಥಾನದ ದುರಸ್ತಿಗಾಗಿ ಹಣವಸೂಲು ಮಾಡುತ್ತಿರುವುದನ್ನು ಕಂಡು ಅದನ್ನು ಪ್ರತಿಭಟಿಸುವ 95 ನಿಬಂಧಗಳನ್ನು ಬರೆದು ವಿಟನ್‍ಬರ್ಗನ ಮುಖ್ಯ ದೇವಸ್ಥಾನದ ಕದಗಳಿಗೆ ಹಚ್ಚಿಸಿದ. ಈ ಕಾರ್ಯದಿಂದಾಗಿ ಜನರ ಆದರಣೆಗೆ ಪಾತ್ರನಾದ. ಆದರೆ ಇದರಿಂದ ಪಾಷಂಡ ಬೋಧನೆ ಹರಡಿಸುವ ಅಪರಾಧಕ್ಕೆ ರೋಮ್ ಸಭೆಯಲ್ಲಿ ವಿಚಾರಣೆಗೆ ಗುರಿಯಾಗಬೇಕಾಯಿತು. ಪೋಪನ ಅಗ್ರಹದಿಂದ ಸ್ಯಾಕ್ಸ್‍ನಿಯ ಅಧಿಕಾರಿಯಾದ ಮೂರನೆಯ ಫ್ರೆಡರಿಕ್ಕನ ಆಶ್ರಯ ಸೇರಿದ. 1520ರಲ್ಲಿ ಲೂಥರ್ ತನ್ನ ಮೂಲಸಭೆಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟ. ಅನಂತರ ಅನೇಕ ಗ್ರಂಥಗಳ ಮೂಲಕ ತನ್ನ ಅನುಯಾಯಿಗಳ ನಂಬಿಕೆಗಳನ್ನು ಬಲಪಡಿಸಿ ಪ್ರತ್ಯೇಕವಾದ ಸಭೆಯನ್ನೇ ಸ್ಥಾಪನೆ ಮಾಡಿದ. ಬೈಬಲಿನ ಹೊಸ ಒಡಂಬಡಿಕೆಯನ್ನು ಗ್ರೀಕ್‍ನಿಂದ ಜರ್ಮನಿಗೆ ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದುದೇ ಅಲ್ಲದೆ ಅದಕ್ಕೆ ಅನೇಕ ವ್ಯಾಖ್ಯಾನಗಳನ್ನೂ ಬರೆದ.

ಮಾರ್ಟಿನ್ ಲೂಥರ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಎಚ್. ಎಸ್. ರಾಘವೇಂದ್ರ ರಾವ್ಲಕ್ಷ್ಮೀಶಅಡಿಕೆಸ್ವಚ್ಛ ಭಾರತ ಅಭಿಯಾನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಇಸ್ಲಾಂ ಧರ್ಮರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜಯಚಾಮರಾಜ ಒಡೆಯರ್ರಾಷ್ಟ್ರಕವಿಕನ್ನಡ ಚಂಪು ಸಾಹಿತ್ಯತತ್ಪುರುಷ ಸಮಾಸಭಾರತದ ಸ್ವಾತಂತ್ರ್ಯ ಚಳುವಳಿಈರುಳ್ಳಿರಾಷ್ಟ್ರೀಯ ಸ್ವಯಂಸೇವಕ ಸಂಘಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಶಾಸ್ತ್ರೀಯ ನೃತ್ಯರಾಜಕೀಯ ವಿಜ್ಞಾನಬಿ. ಎಂ. ಶ್ರೀಕಂಠಯ್ಯಬೃಂದಾವನ (ಕನ್ನಡ ಧಾರಾವಾಹಿ)ಧರಮ್ ಸಿಂಗ್ಎಚ್.ಎಸ್.ಶಿವಪ್ರಕಾಶ್ಪ್ರಭುಶಂಕರಕರ್ನಾಟಕ ಜನಪದ ನೃತ್ಯರಾಶಿತಾಜ್ ಮಹಲ್ಜೇನು ಹುಳುಜೀವವೈವಿಧ್ಯಯು.ಆರ್.ಅನಂತಮೂರ್ತಿಹದಿಬದೆಯ ಧರ್ಮಅಮ್ಮಮಾಹಿತಿ ತಂತ್ರಜ್ಞಾನಕ್ರೀಡೆಗಳುನಂಜನಗೂಡುನಿರುದ್ಯೋಗಡಿ.ಎಸ್.ಕರ್ಕಿಕೇಂದ್ರ ಸಾಹಿತ್ಯ ಅಕಾಡೆಮಿಕರ್ಣಾಟ ಭಾರತ ಕಥಾಮಂಜರಿಲಕ್ಷ್ಮಣಭಾರತ ರತ್ನರಾಮ ಮಂದಿರ, ಅಯೋಧ್ಯೆಮಲ್ಟಿಮೀಡಿಯಾಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಪಂಪಸೇವುಣಭಾರತೀಯ ಭಾಷೆಗಳುಸಾಮಾಜಿಕ ಸಮಸ್ಯೆಗಳುಮಹಾತ್ಮ ಗಾಂಧಿಶಿವರಾಮ ಕಾರಂತರೇಷ್ಮೆತತ್ಸಮ-ತದ್ಭವಸಂಖ್ಯೆಕಾದಂಬರಿಆಲೂರು ವೆಂಕಟರಾಯರುಸೈಮನ್ ಆಯೋಗಸುಮಲತಾಭಗತ್ ಸಿಂಗ್ವಿನಾಯಕ ದಾಮೋದರ ಸಾವರ್ಕರ್ಕೆ.ಗೋವಿಂದರಾಜುಇಸ್ರೇಲ್ಕಬೀರ್ಶಿವರಾಜ್‍ಕುಮಾರ್ (ನಟ)ಭಾರತದ ನದಿಗಳುರಚಿತಾ ರಾಮ್ಅಂತರರಾಷ್ಟ್ರೀಯ ಸಂಘಟನೆಗಳುವ್ಯಂಜನಕನ್ನಡ ಸಾಹಿತ್ಯ ಪರಿಷತ್ತುಓಂ ಶಾಂತಿ ಓಂಅತ್ತಿಮಬ್ಬೆರಾಷ್ಟ್ರೀಯ ಸೇವಾ ಯೋಜನೆಸವರ್ಣದೀರ್ಘ ಸಂಧಿಪುತ್ತೂರುಭಾರತೀಯ ರಿಸರ್ವ್ ಬ್ಯಾಂಕ್ಫ.ಗು.ಹಳಕಟ್ಟಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕಮದಕರಿ ನಾಯಕಬಾದಾಮಿ ಗುಹಾಲಯಗಳುಕಾಳಿದಾಸ🡆 More